ಧೂಳು ಹಿಡಿದು
ಕರ್ಕಷ ದನಿಯಲಿ ಕೂಗುತ್ತ
ರೀಡ್ ಮಾಡಲು ಪ್ರಯಾಸಪಡುತ್ತಿರುವ
ಫ್ಲಾಪಿ ಡ್ರೈವು
ಫ್ಲಾಪಿ ಓದಿದಂತೆಯೇ ಆಯಿತು
ಅವಳ ಮನದಲ್ಲಿರುವುದನ್ನರಿಯಲು ಪ್ರಯತ್ನಿಸಿದ್ದು.
(ಓದುಗರ ಗಮನಕ್ಕೆ:
೧) ಇಲ್ಲಿ ಫ್ಲಾಪಿ ಎಂದು ಬಳಸಿದ್ದೇಕೆ ಎಂದು ಓದುಗರು ಕೇಳಿದಿರಿ: ಫ್ಲಾಪಿ ನನ್ನ ಮನಸ್ಸಿಗೆ ಹತ್ತಿರವಾದದ್ದು. ನಾವು ಕಂಪ್ಯೂಟರ್ ಕಲೆತ ಮೊದಲ ದಿನಗಳಲ್ಲಿ ಪುಸ್ತಕದಷ್ಟು ಅಗಲದ ಫ್ಲಾಪಿ ಹಿಡಿದು ತಿರುಗಾಡುತ್ತಿದ್ದೆವು. ಈಗಲೂ ತುಂಬ nostalgia ಅದರದ್ದು. ಇಲ್ಲಿರುವ ಹಲವು ಗೀಕ್ ಗಳಿಗೆ ಇದರ ಮೌಲ್ಯದ ಅರಿವು ಇದ್ದೇ ಇರುತ್ತದೆ.
೨) ಇನ್ನು ಕೆಳಗೆ ಬಂದಿರುವ ಪ್ರತಿಕ್ರಿಯೆಗಳು ಕೆಲವು ನಾನು ಬರೆದದ್ದನ್ನು ಬೇರೆಡೆ ಹೊತ್ತೊಯ್ದಿದೆ. ಈ ಸಾಲುಗಳು ಯಾರನ್ನೂ ನೋಯಿಸಲೆಂದು ಹಾಕಿದ್ದಲ್ಲ - ಬದಲಿಗೆ ಮೊದಮೊದಲಿಗೆ ಅರ್ಥ ಮಾಡಿಕೊಳ್ಳಲು ಆದ ಕಷ್ಟದ ಬಗ್ಗೆ ಬರೆಯೋಣವೆಂದುಕೊಂಡು ಬರೆದದ್ದು. ತಪ್ಪಾಗಿ ಅರ್ಥೈಸಿಕೊಳ್ಳದಿರಿ.)

- hpn ರವರ ಬ್ಲಾಗ್
- Login or register to post comments
- 914 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್
ಪರಿಚಯ
ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ಅದನ್ನು ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.
ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.



RSS:
ಉ: ಆ ಹುಡುಗಿಯ ಮನಸ್ಸು
ಚೆನ್ನಾಗಿದೆ ಹರಿ.
ಫ್ಲಾಪಿ ಓದುವ ಪ್ರಯತ್ನ ಫಲಿಸಿತೆ?
-ಸವಿತ
ಉ: ಆ ಹುಡುಗಿಯ ಮನಸ್ಸು
ಸದ್ಯಕ್ಕೆ "Read Error".
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ಆ ಹುಡುಗಿಯ ಮನಸ್ಸು
ನಿಮ್ಮವನೇ,
ಅರವಿಂದ
http://aravindavk.in
ಉ: ಆ ಹುಡುಗಿಯ ಮನಸ್ಸು
ಸರಿಯಾಗಿ ಓದಕ್ಕೆ ಹೇಳ್ರೀ...
- ಚಾಮರಾಜ ಸವಡಿ
http://chamarajsavadi.blogspot.com
ಉ: ಆ ಹುಡುಗಿಯ ಮನಸ್ಸು
>>ನಾವು ಕಂಪ್ಯೂಟರ್ ಕಲಿತ ಮೊದಲ ದಿನಗಳಲ್ಲಿ ಪುಸ್ತಕದಷ್ಟು ಅಗಲದ ಫ್ಲಾಪಿ ಹಿಡಿದು ತಿರುಗಾಡುತ್ತಿದ್ದೆವು.
ನಾವು ಕಂಪ್ಯೂಟರ್ ಕಲಿವಾಗ ಉಪಯೋಗಿಸಿದ ಒಂದು ದೊಡ್ಡ ಫ್ಲಾಪಿ ಮತ್ತು ಕೆಲವು ಚಿಕ್ಕ ಫ್ಲಾಪಿಗಳು ನಮ್ಮನೇಲೂ ಇವೆ ಹರಿ, ನನ್ನ ತಮ್ಮ ಬಹಳ ಜೋಪಾನವಾಗಿಟ್ಟುಕೊಂಡಿದ್ದಾನೆ ನೆನಪಿಗಾಗಿ...
-ಸವಿತ
ಉ: ಆ ಹುಡುಗಿಯ ಮನಸ್ಸು
ಬಹಳ ಚೆನ್ನಾಗಿದೆ
ಹುಡುಗಿಯ ಮನಸ್ಸನ್ನಾದರೂ ಓದಬಹುದು.. ಹಾಳಾಗಿರೋ ಫ್ಲಾಪಿಯನ್ನು ಓದೋದು ಕಷ್ಟ
-ವರುಣ್ ಭಟ್
http://varunbhat.name
ಉ: ಆ ಹುಡುಗಿಯ ಮನಸ್ಸು
ವರುಣ್ ಭಟ್ಟರಿಗೆ ಕಂಪ್ಯೂಟರ್ ಅನುಭವದಷ್ಟು ಜೀವನಾನುಭವ ಸಾಲದೇನೋ
ಅಂತ ನನ್ನ ಅನುಮಾನ..
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಆ ಹುಡುಗಿಯ ಮನಸ್ಸು
ಹಳೇ ಫ್ಲಾಪಿ ಡ್ರೈವಿನ ಜೊತೆ ಕೂತ್ರೆ ಹೀಗೇ ಆಗೋದು. ಬೇಗ ಸಿಡಿ ಡ್ರೈವಿಗೆ ಅಪ್ಡೇಟ್ ಮಾಡ್ಕೊಳ್ಳಿ
~ಕಲ್ಪನ
ಉ: ಆ ಹುಡುಗಿಯ ಮನಸ್ಸು
ಕಲ್ಪನ ಸಿಡಿ ಡ್ರ್ಯೆವ್ ಈಗ ಹಳೆಯದಾಯಿತು, ನಮ್ಮ ಹರಿ, ಯು ಎಸ್ ಬಿ ಪೆನ್ ಡ್ರ್ಯೆವ್ ತರಹ ಯೋಚನೆ ಮಾಡಿದ್ರೆ, ಬೇಕಾದಾಗ ನೆನಪು ತೆಗಿಬಹುದು, ಬೇಡದಾಗ ಡಿಲಿಟ್ ಮಾಡಬಹುದು ಅಲ್ವಾ.
ಕನ್ನಡವೇ ತಾಯ್ನಾಡಿಯು, ಕರುನಾಡು ತಾಯ್ನಾಡು, ಕನ್ನಡಿಗನು ನೀನೆಂಬ ಅಭಿಮಾನವಿರಲಿ.
ಅರವಿಂದ್ ಎಚ್
ಉ: ಆ ಹುಡುಗಿಯ ಮನಸ್ಸು
ಹರಿ,
ಸೂಪರ್!
ಕಲ್ಪನ ಮೇಡಂ,
ಸಿ.ಡಿ.ಡ್ರೈವ್/ಯು.ಎಸ್.ಬಿ.ಡ್ರೈವ್/ ಡಿ.ವಿ.ಡಿ ಓದೋ ತರಹದ ಹುಡುಗೀರು ಇದ್ರೆ ತಿಳಿಸಿ, ಬಹಳ ಉಪಯೋಗ ಆಗತ್ತೆ!
--ಶ್ರೀ
ಉ: ಆ ಹುಡುಗಿಯ ಮನಸ್ಸು
ಆ ತರಳೆಯ ಅಂತರಂಗವನ್ನು ಹೊಕ್ಕು ಹೊರತೆಗೆವ ಪ್ರಯತ್ನ, ಅಬ್ಬಬ್ಬಾ ಅದೆಷ್ಟು ..... ವೋ.... ಹೆಂಗಸರ ಮನಸ್ಸಿನಲ್ಲಿರುವುದನ್ನು ಆ ದೇವರೂ ಅರಿಯಲಿಲ್ಲವಲ್ಲ ! ಕೆಲವೊಮ್ಮೆ ಕವಿಗಳು ಹೇಳುವಂತೆ, ಎಲ್ಲವೂ ತದ್ವಿರುದ್ಧ ! ಬಾ ಅಂದರೆ ಹೋಗು. ನಿಲ್ಲು ಎಂದರೆ ಕುಳಿತುಕೊ. ಬೇಡವೆಂದು ತುಟಿಗಳು ಹೇಳಿದರೂ ಕಣ್ಣುಗಳು ಹೇಳುವುದೇನೋ !!!!
ಹರಿಯವರಿಗೆ ಈಗ ಒಳ್ಳೆಯ ಸಮಯ. ಎಲ್ಲವೂ ಸರಿಯಾಗಿದೆ. ಕಷ್ಟಪಟ್ಟು ಎಲ್ಲರ ಮನಸ್ಸನ್ನು ಒಲಿಸಿ, ಒಂದು ಕನ್ನಡದ ಅತ್ಯುತ್ತಮ ಸೈಟ್ ಮಾಡಿದ್ದೀರಿ. ಇನ್ನೂ ಏನೇನೋ ಮಾಡುವ ಆಲೋಚನೆಗಳು ನಿಧಾನವಾಗಿ ಸಾಗಲಿ. ಒಬ್ಬ ಬಾಳಸಂಗಾತಿಯನ್ನು ಆರಿಸಿಕೊಳ್ಳಿ. ನಿಜವಾಗಿಯೂ ನಾನು ಹೇಳುತ್ತಿರುವುದು. ತ್ವರೆಮಾಡಿ !
ಕನ್ನಡ ನನ್ನ ತಾಯ್ನುಡಿ; ನನ್ನುಸಿರು.
ಉ: ಆ ಹುಡುಗಿಯ ಮನಸ್ಸು
ಹರಿ,
ಫ್ಲಾಪಿ ಡ್ರೈವ್ ಜತೆ ಮಾತಾಡುವಾಗ, ಪ್ರೋಟೋಕಾಲ್, ಕನೆಕ್ಟಿಂಗ್ ಕೇಬಲ್ ಎಲ್ಲವನ್ನೂ ಎಚ್ಚರಿಕೆಯಿಂದ ಗಮನಿಸಬೇಕು!
ಉ: ಆ ಹುಡುಗಿಯ ಮನಸ್ಸು
ಫ್ಲಾಪಿ ಡಿಸ್ಕನ್ನ ಆಗಾಗ "ಸೀಕ್' ಮಾಡದಿದ್ದರೆ ಅದು ಧೂಳು ಹಿಡಿದು ಉಪಯೋಗಕ್ಕೆ ಲಾಯಕ್ಕಿಲ್ಲದಂತಾಗುತ್ತಂತೆ. [೧]
ನೋಡಿ, ನೀವು ಹಾಗೆನೆ ಆಗಾಗ 'ಸೀಕ್' ಮಾಡಿ/ಮಾಡಿಸಿಕೊಂಡರೆ ಯಾವುದೇ ಫ್ಲಾಪಿಯನ್ನು ಓದಬಹುದೇನೋ
ಮಜಾ ಮಾಡಿ!
[೧] http://man.root.cz/1/diskseekd/
ಉ: ಆ ಹುಡುಗಿಯ ಮನಸ್ಸು
ಹರಿ, ಹುಡುಗಿಯ ಮನಸ್ಸು ಅರಿಯುವುದು ಅಷ್ಟು ಸುಲಭವಲ್ಲ. ಆ ತಂತ್ರಜ್ಞಾನವೇ ಬೇರೆ. ಅದು ಕಲಿಕೆಯಿಂದಲ್ಲ, ಅನುಭವದಿಂದ ಬರುತ್ತದೆ. ಎಷ್ಟೇ ಗೊತ್ತಿದೆ ಎಂದರೂ ಸರಿಯಾದ ಸಮಯಕ್ಕೆ ಕೈಕೊಡುವುದು ಅದರ ವಿಶೇಷ. ಅಲ್ಲಿ ನಮ್ರತೆ ಬಹಳ ಮುಖ್ಯ. ತಪ್ಪೊಪ್ಪಿಗೊಳ್ಳುವ ಗುಣವಿದ್ದರಂತೂ ಭೇಷ್.
ಕ್ರಮೇಣ ನಿಮಗೇ ಗೊತ್ತಾಗುತ್ತದೆ ಬಿಡಿ.
- ಚಾಮರಾಜ ಸವಡಿ
http://chamarajsavadi.blogspot.com
ಉ: ಆ ಹುಡುಗಿಯ ಮನಸ್ಸು
ಹೌದು ತುಂಬಾ ಕಷ್ಟ, ನಾನೂ ಇನ್ನು ಪ್ರಯತ್ನಿಸುತ್ತಲೇ ಇದ್ದಿನಿ.. all the best
--
PaLa
ಉ: ಆ ಹುಡುಗಿಯ ಮನಸ್ಸು
ಪ್ಲಾಪಿಗೆ ದೂಳು ಹಿಡಿಸಿದ್ದು ಯಾರು
ಉ: ಆ ಹುಡುಗಿಯ ಮನಸ್ಸು
ಹರಿ ಚೆನ್ನಾಗಿದೆ
@ "ಹುಡುಗಿಯ ಮನಸ್ಸನ್ನಾದರೂ ಓದಬಹುದು.. ಹಾಳಾಗಿರೋ ಫ್ಲಾಪಿಯನ್ನು ಓದೋದು ಕಷ್ಟ"
ಇದನ್ನು ಓದಿ, ನನಗೆ ನಾನೇ ಹೇಳಿಕೊಳ್ಳುತಿದ್ದ ಒಂದು ಮಾತು ನೆನಪಿಗೆ ಬಂತು
"ಹುಡುಗೀಯ ಮನಸ್ಸು , income tax ಇವೆರಡನ್ನೂ ಅರ್ಥ ಮಾಡಿಕೊಳ್ಳೋದು ಕಷ್ಟ"
ರಾಕೇಶ್ ಶೆಟ್ಟಿ
ಉ: ಆ ಹುಡುಗಿಯ ಮನಸ್ಸು
’ದೂರತಃ ವನಿತಾಃ ರಮ್ಯಾಃ’
ಮಹಿಳೆಯರು ದೂರದಿಂದಲೇ ಸುಂದರಿಯರು. ಹತ್ತಿರ ಹೋದರೆ ಆಪತ್ತಿಗೆ ಆಹ್ವಾನ ಕೊಟ್ಟಂತೆ. ಬಱಿಯ ನಯನಸುಖದಲ್ಲಿ ಕಾಲ ಕಳೆಯುವುದು ಸೂಕ್ತ ಎಂದು ಅನುಭವಿಗಳಾದ ನಮ್ಮ ನುಡಿ ಕೇಳುವುದು ಕೇಳಿ.