ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ಬರೆ code ಬರಿ (ಬರೀತಾ ಇರು)

June 24, 2008 - 6:28am — hpn

ಅವನೊಬ್ಬ ಹೊಸ ಕ್ಲೈಂಟು
ಉತ್ತಮ code ಏನೆಂಬುದು ಅವನಿಗೆ ಗೊತ್ತಿಲ್ಲ, ಗೊತ್ತಾಗಬೇಕಿಲ್ಲ.
ಬರೆಯುವವನು ಉತ್ತಮ code ಬರೆಯುತ್ತಿದ್ದಾನೋ ಇಲ್ಲವೋ ಎಂಬುದೂ ಬೇಕಿಲ್ಲ,
ಅವನಿಗೆ ಕೆಲಸವಾಗಬೇಕಷ್ಟೆ.

ತನ್ನಲ್ಲಿರುವುದು ಕಸವಿರಬಹುದು
ಆದರೆ ಕೆಲಸಮಾಡುತ್ತಿದೆಯಲ್ಲ!
ನಂಬುವುದು ಹೇಗೆ ಇದು ಸರಿಯಿಲ್ಲವೆಂದು?
ಈ ದಿನದ ಗೋಳು ಮುಗಿದರಾಯ್ತು; ಒಂದಿಷ್ಟು code ಹೆಚ್ಚು ಬರೆಸಿದರಾಯ್ತು!

ಮುಂದೊಂದು ದಿನ ಸೂರು ಮುರಿದು ಬಿದ್ದರೆ patch ಹಾಕಿಸಿದರಾಯ್ತು, ಗೋಡೆ ಒಡೆಸಿದರಾಯ್ತು; ಮತ್ತಷ್ಟು, ಮಗದಷ್ಟು code ಬರೆಸಿದರಾಯ್ತು!

  • ಹಾಗೇ ಸುಮ್ಮನೆ
  • ಹಿಂಗೊಂದು exshperimentu
~.~
  • hpn ರವರ ಬ್ಲಾಗ್
  • Login or register to post comments
  • 830 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 24, 2008 - 12:36pm — hamsanandi

ಉ: ಬರೆ code ಬರಿ (ಬರೀತಾ ಇರು)

hamsanandi's picture

ಹ್ಹ ಹ್ಹ! ನನ್ನ ಒಬ್ಬ ಮ್ಯಾನೇಜರ್ ಹಿಂದೆ "ನನಗೆ ಬೆಕ್ಕು ಕಪ್ಪಗಿದೆಯೋ, ಬೆಳ್ಳಗಿದೆಯೋ ಬೇಡ - ಇಲಿ ಹಿಡಿದರೆ ಸಾಕು Eye-wink ಮೈಕೊಳೆಯಾಗಿದೆಯೋ ಅಥವ ಬಣ್ಣವೇ ಕಂದು ಬಣ್ಣವೋ ಅಂತ, ಬೆಕ್ಕನ್ನೇನೂ ತೊಳೆದು ನೋಡಬೇಕಿಲ್ಲ" ಅಂತ ಹೇಳಿದ್ದು ನೆನಪಾಯಿತು!

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 24, 2008 - 5:44pm — ಸಂಗನಗೌಡ

ಉ: ಬರೆ code ಬರಿ (ಬರೀತಾ ಇರು)

ಸಂಗನಗೌಡ's picture

ಹೆ ಹೆ!! ಮಸ್ತ್ ಮನಗಂಡ ಮಾರಾಯ!!

ಗೂಗಲ್ ಇದೆ, ಫೋರಮ್‍ಗಳಿವೆ,
ಬೇಕಂದರೆ ಸ್ಯಾಂಪಲ್ ಕೋಡ್ ಇವೆ,
ಯಾಕಳುವೆ ಎಲೆ ಕೋಡರ್‍ನೇ,
ಬರೀ ಕೋಡ್ ಬರಿ, ಹಾಂ, ಬರೆ ಕೋಡ್ ಬರಿ.

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 25, 2008 - 10:24pm — cmariejoseph

ಉ: ಬರೆ code ಬರಿ (ಬರೀತಾ ಇರು)

cmariejoseph's picture

ಈ ಕೋಡುಗಳು ಆಗಾಗ್ಗೆ ಕಾಡುತ್ತವೆ. ಒಮ್ಮೆ ನಮ್ಮ ಕಂಪೆನಿಯ ಗೆಸ್ಡ್ ಹೌಸಿನಲ್ಲಿ ಊಟಕ್ಕೆ ಕುಳಿತಿದ್ದಾಗ ಒಬ್ಬ ಜಪಾನಿನವನು ಚಡ್ಡಿ ಟೀಷರಟಿನ ಉಡುಗೆಯೊಂದಿಗೆ ಊಟಕ್ಕೆ ಬಂದ. ನಮ್ಮಲ್ಲಿದ್ದ ಒಬ್ಬರು "ಪೀಪಲ್ ಶುಡ್ ಪ್ರ್‍ಯಾಕ್ಟೀಸ್ ಸಮ್ ಎಲಿಮೆಂಟರಿ ಕೋಡ್ ಆಫ್ ಕಾಂಡಕ್ಟ್" ಎನ್ನುತ್ತಾ ಪ್ರತಿಕ್ರಿಯಿಸಿದರು.

ಅಂತೆಯೇ ಪೀನಲ್ ಕೋಡುಗಳು, ಕ್ರಿಮಿನಲ್ ಪ್ರೊಸೀಜರ್‍ ಕೋಡುಗಳು, ಲಾ ಕೋಡುಗಳು, ಧಾರ್ಮಿಕ ಕೋಡುಗಳು, ಕಾಮನ್ ಸಿವಿಲ್ ಕೋಡುಗಳು ಕೂಡಾ ಕಾಡುತ್ತವೆ.

ಕೋಡು ಎಂದರೆ ಗೆರೆ/ಗೀಟು ಎಂಬರ್ಥವಿದೆಯಲ್ಲ. ಈಚೀಚೆಗೆ ಯೂನಿಕೋಡು ಯದ್ವಾತದ್ವಾ ಬಳಕೆಗೆ ಬಂದು ಆಟೋಕ್ಯಾಡ್ ನಲ್ಲಿ ಯೂನಿಕೋಡ್ ಮೂಲಕ ಕೋಡು ಹಾಕಲು ಸಾಧ್ಯವೇ ಎಂಬ ಮೀಮಾಂಸೆ ನಡೆಸಿದ್ದೇನೆ. ಹಾಗೆಯೇ ಯಾರಾದರೂ ಕುರುಗೋಡು ಎಂಬುದು ಯಾವ ಸಂಧಿ ಎಂಬುದರ ಕುರಿತೂ ಚಿಂತನೆ ನಡೆಸಿದ್ದೇನೆ.

ಅದೇನೋ ಹೇಳ್ತಾರಲ್ಲ ಕುರುಡನಿಗೇನು ಚಿಂತೆ ಅಂದ್ರೆ ಅದೇನೋ ಕೆರೆದು ಹುಣ್ಣು ಮಾಡ್ಕೊಳ್ಳೋ ಚಿಂತೆ ಅಂತ ಅಂದ್ಕೋಬೇಡಿ, ನಮಗೇ ಇಷ್ಟು ಚಿಂತೆ ಇದ್ದರೆ ಕೋಡ್ ಬರೆಯುವವರಿಗೆ ಇನ್ನೆಷ್ಟು ಚಿಂತೆ ಇರಬಹುದಲ್ಲವೇ? ಬ್ಲಾಗಿನ ಶೀರ್ಷಿಕೆ ನೋಡಿದರೇ ಅದು ವೇದ್ಯವಾಗುತ್ತದೆ.

ಅಂದ ಹಾಗೇ ಕೋಡ್ ಬರೆಯುವವರನ್ನು ಕೋಡಗ ಎನ್ನಬಹುದೇ? ಸಂಪದದ ವೈಯಾಕರಣಿಗಳು ಚರ್ಚಿಸಲಿ.

ಇನ್ನೊಂದ್ ವಿಸ್ಯ "ಕೋಡಗನ ಕೋಳಿ ನುಂಗಿತ್ತಾ ನೋಡವ್ವಾ ತ್ಯಂಗಿ . ."

ಉಸಾರು!!

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 25, 2008 - 10:54pm — hpn

ಉ: ಬರೆ code ಬರಿ (ಬರೀತಾ ಇರು)

hpn's picture

ಮರಿಜೋಸೆಫರೆ, ಪ್ರತಿಕ್ರಿಯೆ ಹಾಕಲು ನೀವು ಪಟ್ಟಿರುವ ಕಷ್ಟ ನೋಡಿ ನಿಮಗೆ ಅರ್ಥವಾಗಿರಲಿಕ್ಕಿಲ್ಲ ಎಂದು ಊಹಿಸಿದೆ.

ಕೋಡ್ ಬರೆಯುವವರ ಬಗ್ಗೆ ಅಷ್ಟು ಹಗುರವಾಗಿ ಬರೀಬೇಡಿ. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2008 - 5:13am — pallavi.dharwad

ಉ: ಬರೆ code ಬರಿ (ಬರೀತಾ ಇರು)

pallavi.dharwad's picture

ಮಸ್ತ್‌ ಪ್ರತಿಕ್ರಿಯೆ. ಓದಿದರೆ ಹರಿ ಅವರಿಗೂ ಕೋಡುಗಳು (ಹೆಮ್ಮೆಯಿಂದ) ಮೂಡಬಹುದು.

ಕೋಡ್‌ ಬರೆಯುವವರನ್ನು ಕೋಡಗ ಎಂದು ಕರೆಯುವುದನ್ನು ಅವರು ಒಪ್ಪಿದರೆ ಇನ್ಮೇಲೆ ಹಾಗೇ ಬಳಸೋಣ. ಆದರೆ, ಅವರು ತಪ್ಪಾಗಿ ಅರ್ಥೈಸಿಕೊಂಡು, ಕೆಕ್ಕರಿಸಿ ನೋಡಿ, ಹೂಂಕರಿಸಿ ಕೋಡು ಮುಂದೆ ಮಾಡಿಕೊಂಡು ಇರಿಯಲು ಬರಬಾರದು, ಅಷ್ಟೇ.

ಒಂದಿಷ್ಟು ಕಂಗ್ಲೀಷ್‌ ಗಾದೆಗಳು ಮನಸ್ಸಿನಲ್ಲಿ ಮೂಡುತ್ತಿವೆ:

೧. ಕೋಡು ಇದ್ದವರದೇ ರೋಡು
೨. ಮೂಡು ಇದ್ದಂಗೆ ಕೋಡು (code)
೩. ಟೀಮ್ ಲೀಡರ್‌ ಹೇಳಬಹುದು: ನೀ code (ಕೊಡೆ), ನಾ ಬಿಡೆ
೪. ಕೋಡ್ ಬರೆಯುವ ಹುಡುಗಿಗೆ ’ಕೋಡುಬಳೆ’ ಅನ್ನಬಹುದೆ?
೫. ಹೊಸ ಗಾದೆ: ಕಂಪ್ಯೂಟರ್‌ ಮುಂದೆ ಕೂತರೆ ಸಾಕು, ಅವರಿಗೆ ಕೋಡುಗಳು ಮೂಡುತ್ತವೆ

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2008 - 6:05am — hpn

ಉ: ಬರೆ code ಬರಿ (ಬರೀತಾ ಇರು)

hpn's picture

ಇರಲಿ. ಸಾಫ್ಟ್ವೇರ್ ಕೆಲಸದಲ್ಲಿರುವವರ ಕುರಿತು ಉಳಿದ ಜಗತ್ತಿಗಿರುವ ಅಸಮಾಧಾನ ಹಾಗೂ ಇನ್ನೇನೇನೋ ಇಲ್ಲಿ ಈ ಪುಟದಲ್ಲಿ ಬರುವುದು ಬೇಡ. ನಾನು ಬರೆದದ್ದನ್ನು ಮರಿಜೋಸೆಫರು ಮತ್ತು ನೀವು ಹೈಜಾಕ್ ಮಾಡಿದ್ದಾಗಿದೆ. ಇನ್ನು ಈ ಚರ್ಚೆ ಇಲ್ಲಿಗೇ ನಿಲ್ಲಲಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2008 - 6:30am — cmariejoseph

ಉ: ಬರೆ code ಬರಿ (ಬರೀತಾ ಇರು)

cmariejoseph's picture

ನಾಡಿಗರೇ, ಸ್ವೊಲ್ಪ ಲೈಟಾಗಿ ತೊಗೊಳ್ಳಿ. ನನಗೆ ಈ ಕೋಡ್ ಬರೆಯುವ ಕೆಲಸ ಅಷ್ಟಕ್ಕಷ್ಟೆ. ಯಾಕೆಂದರೆ ಕೋಡು ಬರೆಯುವವರು ತಲೆಯ ಮೇಲೆ ಕೋಡು ಬಂದವರ ಹಾಗೆ ಆಡುತ್ತಿರುವುದನ್ನು ಕಂಡಿದ್ದೇನೆ. ಇದು ನನ್ನ ಅನುಭವ. ನಾನು ಇನ್ನೂ ಪಿ.ಸಿ.ಗಳು ಆಗಷ್ಟೇ ಹುಟ್ಟಿದಾಗ ಕೆಲಸಕ್ಕೆ ಕೈ ಹಾಕಿದವನು. ಆಗೆಲ್ಲಾ ಪಿ.ಸಿ. ಬೂಟ್ ಮಾಡಲು ಮೂರು ನಾಲ್ಕು ಫ್ಲಾಪಿಗಳನ್ನು ತುರುಕಬೇಕಿತ್ತು. ಸಂಪದದ ಈಗಿನ ಎಷ್ಟೋ ಮಂದಿ ಆಗ ಹುಟ್ಟೇ ಇರಲಿಲ್ಲ ಅನ್ನಕೋತೀನಿ. ಆಗ ಬೇಸಿಕ್ ನಲ್ಲಿ ಕೋಡ್ ಬರೀತಿದ್ದೋರ ಕಾಲು ನೆಲದ ಮೇಲೇ ಇರುತ್ತಿರಲಿಲ್ಲ. ನಮ್ಮಂಥೋರಿಗೆ ಕಂಪ್ಯೂಟರ್‍ ಹತ್ತಿರ ಬರೋಕೂ ಬಿಡ್ತಿರಲಿಲ್ಲ. ಹಾಗಾಗಿ ಅದು ನಮಗೆ ಆಗಿ ಬರಲೇ ಇಲ್ಲ. ಆದರೆ ಪೇಜುಗಟ್ಲೆ ಇರೋ ಹೆಕ್ಸಾ ಡೆಸಿಮಲ್ ನಿಂದ ಡೆಸಿಮಲ್ಗೆ ಬದಲಾಯಿಸಲು ಎಕ್ಸೆಲ್ ಉಪಯೋಗಿಸ್ತೀನಿ, ಅದಕ್ಕೆ ನನ್ನನ್ನು ಬಳಸಿಕೊಳ್ತಾರೆ.
ವಿಷಯ ಏನಪಾ ಅಂದ್ರೆ ಒಂದು ವಿದ್ಯೆಯಲ್ಲಿ ಪ್ರವೀಣರಾದವರು ಮತ್ತೊಬ್ಬರನ್ನು ಹಗುರಾಗಿ ಕಾಣುತ್ತಾರೆ. ಅಥವಾ ಅರ್ಥ ಮಾಡಿಕೊಂಡವರು ಅರ್ಥವಾಗದವರನ್ನು ಹಗುರಾಗಿ ಕಾಣುತ್ತಾರೆ. ಇದು ಪ್ರೈಮರಿ ಸ್ಕೂಲ್ ಹ್ಯಾಬಿಟ್ಟು. ಅದನ್ನು ಬಿಟ್ಟು ಪ್ರೌಢಶಾಲಾ ಹ್ಯಾಬಿಟ್ಟು ಬೆಳೆಸಿಕೊಂಡರೇ ಚೆನ್ನು. ಆಗ ಸಂಪದ ಒಂದು ಒಳ್ಳೇ ಕುಟುಂಬವಾಗುತ್ತೆ.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2008 - 7:04am — hpn

ಉ: ಬರೆ code ಬರಿ (ಬರೀತಾ ಇರು)

hpn's picture

ಯಾರದೋ ಮೇಲಿದ್ದ ಹಗೆ ಯಾರ ಮೇಲೋ ತೀರಿಸಿಕೊಂಡು ಕೆಲವರನ್ನು ಪ್ರೈಮೆರಿ ಸ್ಕೂಲಿಗೆ ದಬ್ಬಿಬಿಟ್ಟಿರಿ ಮರಿಜೋಸೆಫರೆ. ಸಾಫ್ಟ್ವೇರ್ ಕೆಲಸ ಅಂದಾಕ್ಷಣ ಇಷ್ಟೊಂದು ತಿರುಗಿಬೀಳುವುದನ್ನು ಮೊದಲ ಬಾರಿ ನೋಡಿದ್ದಲ್ಲ.

ಹಾಗೆಂದು ಕೋಡ್ ಮಾಡುವ ಕೆಲಸ ಕೋಡು ಬರೆಸುವಂತಾದ್ದೇನಲ್ಲ. ಯಾರೋ ಕೋಡ್ ಮಾಡಲೂ ಬರದಿರುವವರಿಗೆ ಒಂದೆರಡು ಕೋಡುಗಳಿರುತ್ತವೆ. ಅದೆಲ್ಲ ಇಲ್ಲಿ ಬೇಡ.

ಎತ್ತಲೋ ಎಳಕೊಂಡು ಹೋಗಿ ಒಟ್ಟಾರೆ ಆಶಯವನ್ನೇ ಹೈಜಾಕ್ ಮಾಡಿದಿರಿ. ನೀವೊಮ್ಮೆ ಬರೆದಾಗ ನಾವೂ ಹಗುರವಾಗೋಣವಂತೆ!
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2008 - 9:59am — Sunil Jayaprakash

ಉ: ಬರೆ code ಬರಿ (ಬರೀತಾ ಇರು)

Sunil Jayaprakash's picture

ಕೋಡ್ ಬರೆಯುವ ಹುಡುಗಿಗೆ ’ಕೋಡುಬಳೆ’ ಅನ್ನಬಹುದೆ?

ಇದನ್ನು ಓದಿ, ನನಗೆ ರುಚಿ ರುಚಿಯಾಗಿರುವ ಕೋಡುಬಳೆ ತಿಂದಷ್ಟೇ ಸಂತೋಷವಾಯಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2008 - 9:01am — kpbolumbu

ಉ: ಬರೆ code ಬರಿ (ಬರೀತಾ ಇರು)

kpbolumbu's picture

ಕೋಡ್ ಬರೆಯುವಾತ ಕೋಡಿಗ(ಕೋಡಗನಲ್ಲ)
ಕೋಡ್ ಬರೆಯುವಾಕೆ ಕೋಡಿಗೆ
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2008 - 5:08pm — kpbolumbu

ಉ: ಬರೆ code ಬರಿ (ಬರೀತಾ ಇರು)

kpbolumbu's picture

ಹರಿ,
ಚರ್ಚೆ ನಿಲ್ಲಿಸೋಣ, ಆದರೆ ಹೇಳದೇ ಇರುವಂತಿಲ್ಲ. ಇಲ್ಲಿ ಬರೆದವರೆಲ್ಲರೂ ಹಗುರವಾದ ಧಾಟಿಯಲ್ಲೇ ಬರೆದಿದ್ದಾರೆ. ಹೈಜಾಕ್ ನೈಪುಣ್ಯ ಮಹೇಶ್‍ಗಿರುವಷ್ಟು ನನಗಿಲ್ಲ. 'ಕೋಡಗ' ಎನ್ದದ್ದು ನಾನಲ್ಲ. ಹಾಗೆನ್ನಬಾರದೆನ್ನುವುದೇ ನನ್ನ ಮಾತಿನ ಉದ್ದೇಶ. 'ಬೊೞುಂಬು' ಹಾಗೆನ್ದರೇನು? ಹಿಂದೊಮ್ಮೆ 'ಕೊಸರಗೋಡು' ಎನ್ದಿದ್ದರು. ಅದು ತಪ್ಪೆನ್ದು ತೋರಿಸಿದ ಮೇಲೂ ತಿದ್ದಿಕೊಳ್ಳುವ ದೊಡ್ಡ ಗುಣವಿರಲಿಲ್ಲ. ಒಂದು ಉದಾಹರಣೆ ಕೊಟ್ಟೆನಷ್ಟೇ. ಹಲವಾರು ಸಲ ಗಮನಿಸಿದ್ದೇನೆ, ಇತರ ಸದಸ್ಯರ ಗಮನಕ್ಕೂ ಬಂದಿರಬಹುದು. ನಿಮ್ಮ ಕೆಲಸದ ಒತ್ತಡಗಳ ನಡುವೆ ನೀವು ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ. ಅದು ಹೈಜಾಕ್ ಮಾಡುವ ಉದ್ದೇಶದಿಂದಲೇ ಬರೆದ ಪ್ರತಿಕ್ರಿಯೆ.

__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2008 - 5:17pm — mahesha

ಉ: ಬರೆ code ಬರಿ (ಬರೀತಾ ಇರು)

mahesha's picture

ಖಂಡಿತ ಬೊೞುಂಬುಗಳಿಗೆ ಅವರಿಗೆ ತಿಳಿಯದ ಹೈಜಾಕ್ ಪ್ರಾವೀಣ್ಯವಿದೆ...

ಮಹದುದಾಹರಣೆ ಮೇಲಿನ ಕಮೆಂಟು.. "ಹೇಳದೇ ಇರುವಂತಿಲ್ಲ"ವಂತೆ.. ಒಟ್ಟಿನಲ್ಲಿ ಇವರು ಏನಾದರೂ ಹೇಳಬೇಕು.. ಬದ್ಧಾಬದ್ಧವು ಪ್ರಶ್ನಾತೀತವಾದುದು!

ಈ ಕಾರಣದಿಂದೇ ಹರಿಯವರ ಸಹಾಯಕ್ಕೆ ಧಾವಿಸಿದ್ದು..

ಱ/ರ ಚರ್ಚೆ ಧಾರಾಳವಾಗಿ ಕಂಡಿತ ಖಂಡಿತವಾಯ್ತು..

ನಾನು ಜೊಸೆಪರಿಗೆ ಹೇಳಿದ್ದನ್ನು ತಮಗೇ ಅನ್ವಿಯಿಸಿಸಿಕೊಂಡು ಕಮೆಂಟ ಎಸಗಿರುವುದರಿವಿನ್ನೂ ಆಗಿಲ್ಲ!

ಇನ್ನೂ ’ಹೇಳದೇ ಇರುವಂತಿಲ್ಲ’ದಂತದ್ದು ಇದ್ದೇ ಇದೆ ಇವರ ಸನಿಹ.!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2008 - 5:49pm — kpbolumbu

ಉ: ಬರೆ code ಬರಿ (ಬರೀತಾ ಇರು)

kpbolumbu's picture

ಮಹದುದಾಹರಣೆ, ಬದ್ಧಾಬದ್ಧ, ಪ್ರಶ್ನಾತೀತ, ಕೂಷ್ಮಾಂಡ ತಸ್ಕರ ಮುಂತಾದ ಪದಗಳ ಮೂಲಕ ಏನನ್ನು ತೋರಿಸಿಕೊಡುತ್ತಿದ್ದೀರಿ...?
ಇಲ್ಲಿದೆ ಕೊಂಡಿ- http://sampada.net/blog/mahesha/29/04/2008/8599
'ಈ ಕಮೆಂಟೋದಿದೊಡನೆ' ಎಂದು ನನ್ನ ಕಮೆಂಟಿನ ಕೆಳಗಡೆಯೇ ಬರೆದಿದ್ದಿರಿ. ಇನ್ನು ಱ/ರ ಚರ್ಚೆ ಇಲ್ಲಿ ಯಾಕೆ ಬೇಕಿತ್ತು?

ಹೇಳದಿರುವಂಥದ್ದು ಇನ್ನೂ ಇರಬಹುದು, ಎಲ್ಲವನ್ನೂ ಇಲ್ಲಿ ಹೇಳಬಯಸುವುದಿಲ್ಲ.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 11:34am — mahesha

ಉ: ಬರೆ code ಬರಿ (ಬರೀತಾ ಇರು)

mahesha's picture

ಖಂಡಿತವಾಗಿಯೂ ನಿಮಗೆ ಮಹದುದಾಹರಣೆ, ಬದ್ಧಾಬದ್ಧ, ಪ್ರಶ್ನಾತೀತ, ಕೂಷ್ಮಾಂಡತಸ್ಕರ ಈ ಪದಶ್ರೇಣಿಗಳು ಅನುಮಾನರಾಹಿತ್ಯದಲ್ಲಿ ಗ್ರಹಿತವಾಗಿದೆ.

ಱ/ರ ಚರ್ಚೆ ಇಲ್ಲಿ ಯಾಕೆ ಬೇಕು ಅಂದರೆ ಅಲ್ಲಿ ನೀವು ಖಂಡಿತ/ಕಂಡಿತ ಚರ್ಚೆ ತೆಗೆದಿರಿ, ಇಲ್ಲಿ ಕೋಡಗ ಚರ್ಚೆ ಸಾಧಿಸಿದಿರಿ ಅದಕ್ಕೆ....

ನನ್ನ ಬ್ಲಾಗಲೇಖನ ಉಲ್ಲೇಖವಲ್ಲಿ ಬಾಲಿಶಾತ್ಯತಿಶಯವು. ಇದನ್ನೇ ನಮ್ಮ ಸಂಪದೇಶ ಶ್ರೀಮಾನ ಹರಿರಾಯರು ಹೈಜಾಕ್ ಎಂದುದು.. ನಿಮಗೆ ನಿಮ್ಮ ಕೃತ್ಯದಿಂದಲೇ ಹೈಜಾಕನ್ನು ಗ್ರಹಿಸಿಸುವ ಸುಪ್ರಯತ್ನಾಂಶ.

ಭಗವತ್ಕೃಪೆಯಿಂದ ಗ್ರಹಿತವಾಗಿದ್ದರೆ ಉತ್ತಮ..

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 12:49pm — kpbolumbu

ಉ: ಬರೆ code ಬರಿ (ಬರೀತಾ ಇರು)

kpbolumbu's picture

ಇಲ್ಲಿ ನಾನು ಖಂಡಿತ/ಕಂಡಿತ ಚರ್ಚೆ ತೆಗೆದಿಲ್ಲ. ಇನ್ನೊಂದು ಕಡೆ ಅದರ ಬಗ್ಗೆ ಬರೆದಿದ್ದರೆ ಆ ಮಾತು ಚರ್ಚೆಗೆ ಬಂದುದೇ ಕಾರಣ. ಅದನ್ನು ಬರೆದಾತನಿಗೆ ಹಾಗೆ ಅನ್ನಿಸದಿರುವಾಗ ನೀವೇಕೆ ವೃಥಾ ಅದರ ಕುರಿತು ಕಮೆಂಟಿಸುತ್ತಿದ್ದೀರಿ? ನೀವು ವ್ಯಂಗ್ಯವಾಗಿ 'ಬೊೞುಂಬು' ಎಂದದ್ದರಿಂದಲೇ ಬ್ಲಾಗ್ ಕೊಂಡಿ ಕೊಟ್ಟದ್ದು. ಕೋಡಗ ಚರ್ಚೆ ನಾನೆಲ್ಲಿ ಸಾಧಿಸಿದೆ? ಮೇಲೆ ಇರುವ ಯಾವ ಕಮೆಂಟುಗಳನ್ನೂ ಓದಿದಾಗ ಗ್ರಹಿತವಾಗದ್ದು ನನ್ನ ಕಮೆಂಟನ್ನೋದಿದೊಡನೆಯೇ ಏಕೆ ಗ್ರಹಿತವಾಯಿತು? ಕೂಷ್ಮಾಂಡ ತಸ್ಕರತನವನ್ನು ತಾವೇ ಪ್ರದರ್ಶಿಸುತ್ತಿದ್ದೀರಿ.

Quote:
ಱ/ರ ಚರ್ಚೆ ಇಲ್ಲಿ ಯಾಕೆ ಬೇಕು ಅಂದರೆ......

ಇಂತಹ ಸುಪ್ರಯತ್ನಗಳನ್ನು ತಾವೇ ಮುಂದುವರಿಸಿಕೊಂಡು ಹೋಗುತ್ತಿರುವಾಗ ಇತರರ ಬಗ್ಗೆ ವೈಯಕ್ತಿಕವಾಗಿ ಹೆಸರು ತೆಗೆದು ಮಾತನಾಡದಿರಿ. ಇನ್ನು ಮುಂದಾದರು ಹೇಳಬೇಕಾದುದನ್ನು ನೇರವಾಗಿ ಹೇಳಿ. ತಾವು ಹೇಳಿದ್ದು ನನ್ನ ಬಗ್ಗೆ ಅಲ್ಲವೆಂದಿರಿ, ಆದರೆ ನನ್ನ ಕಮೆಂಟಿನ ಕೆಳಗಡೆಯೇ ಬರೆದದ್ದರ ಮರ್ಮವೇನು? ತಮ್ಮ ಹಲವು ಕಮೆಂಟುಗಳನ್ನು ಈಗಾಗಲೇ ಅಳಿಸಲಾಗಿದೆ ಎಂಬುದನ್ನು ಸ್ಮರಿಸಿಕೊಳ್ಳಿ.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 1:07pm — mahesha

ಉ: ಬರೆ code ಬರಿ (ಬರೀತಾ ಇರು)

mahesha's picture

ನನಗೆ ಇನ್ನೂ ಬೊಳುಂಬುತನ ಬೇಡ.. ವಿಷಯಪಲ್ಲಟ ಸಾಕು....!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 1:14pm — kpbolumbu

ಉ: ಬರೆ code ಬರಿ (ಬರೀತಾ ಇರು)

kpbolumbu's picture

ಸಾಕಷ್ಟು ಕಡೆ ತಮ್ಮ ವಿಷಯ ಪಲ್ಲಟ ನಡೆದಿದೆ, ನಡೆಯುತ್ತಿರಲಿ..(ಒಪ್ಪಿಕೊಳ್ಳಲಾರೆನೆಂಬ ಪಟ್ಟಿರುವಾಗ ಇನ್ನೇನು ಹಾರೈಸೋಣ?)
ಗೆಲುವಾಗಲಿ!
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2008 - 1:56pm — mahesha

ಉ: ಬರೆ code ಬರಿ (ಬರೀತಾ ಇರು)

mahesha's picture

ಅತ್ಯಧಿಕಪ್ರಸಂಗ... ಅಂತ ನನಗೆ ಅನ್ನಿಸಿದ್ದು ನನಗೆ ದಿಟ ಮೊದಲ ಸರತಿ ಈ ಕಮೆಂಟೋದಿದೊಡನೆ...!
ಆದರೆ ತಮಾಶೆ ಎಂದು ಸುಮ್ನಾದೆ.

ಆದರೆ ಇದು ಮೂಲ ಚರ್ಚೆಯ ಹರಿವನ್ನೇ ಬದಲಿಸ್ತಾ ಇದೆ ಎಂದು ನಮ್ಮ ಸಂಪದಪ್ಪ ಹರಿ ಹೇಳೋ ಮಾತಿಗೆ ಹು ಅನ್ನಬೇಕಲ್ಲ...!

ಅವನು ಬರೆದ ’ಕೋಡ್’ನ ಬಗ್ಗೆ ಮಾತುಹೊರಳಲಿ ಎಂಬ ಪದಪು!

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2008 - 2:59pm — kpbolumbu

ಉ: ಬರೆ code ಬರಿ (ಬರೀತಾ ಇರು)

kpbolumbu's picture

ಅತ್ಯಧಿಕಪ್ರಸಂಗ ಅಥವಾ ಚರ್ಚೆಯ ಹರಿವನ್ನು ಬದಲಿಸುತ್ತಿದೆ ಅಂತ ಏನಾದರೂ ಹರಿಗೆ ಅನ್ನಿಸಿದ್ದರೆ ಅಳಿಸಿ ಹಾಕಿಯಾರು.

ಮರಿಜೋಸೆಫ್ wrote:
ಅಂದ ಹಾಗೇ ಕೋಡ್ ಬರೆಯುವವರನ್ನು ಕೋಡಗ ಎನ್ನಬಹುದೇ?

ಇದಕ್ಕೆ ಉತ್ತರ

Quote:
ಕೋಡ್ ಬರೆಯುವಾತ ಕೋಡಿಗ(ಕೋಡಗನಲ್ಲ)
ಕೋಡ್ ಬರೆಯುವಾಕೆ ಕೋಡಿಗೆ

ಹಾಗಂತ ಹರಿ ಹೇಳಿದರೇ? Puzzled
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2008 - 4:13pm — mahesha

ಉ: ಬರೆ code ಬರಿ (ಬರೀತಾ ಇರು)

mahesha's picture

ಹರಿ ಹೇಳಿದ್ದು...
"ಎತ್ತಲೋ ಎಳಕೊಂಡು ಹೋಗಿ ಒಟ್ಟಾರೆ ಆಶಯವನ್ನೇ ಹೈಜಾಕ್ ಮಾಡಿದಿರಿ. ನೀವೊಮ್ಮೆ ಬರೆದಾಗ ನಾವೂ ಹಗುರವಾಗೋಣವಂತೆ!"

ಇದಕ್ಕೆ ಈ ಬೊೞುಂಬು ಕೊಡುಗೆ ಕೂಡ... Smiling ಹೈಜಾಕ್ ಕಲೆನಿಪುಣರು!

ಅಬ್ಬ ನನ್ನ ಕಮೆಂಟುಗಳನ್ನು ಚಾಚೂ ತಪ್ಪದೇ ಓದ್ತಾರೆ...

ಹರಿಯವರ ಮೂಲದ ಆಶಯ ಪೂರ ತಪ್ಪಿ ಹೋಗಿದೆ... ಅಂತ ಖಂಡಿತವಾಯ್ತು..!

ಕೋಡ್ ಕೋಡುಗರ ಪಾಲಾಯ್ತು Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2008 - 4:25pm — hpn

ಉ: ಬರೆ code ಬರಿ (ಬರೀತಾ ಇರು)

hpn's picture

ಬೊಳುಂಬು, ನೀವು ಬಹುಶಃ ನನ್ನ ಪ್ರತಿಕ್ರಿಯೆಗಳನ್ನು ಸರಿಯಾಗಿ ಓದಿರಲಿಕ್ಕಿಲ್ಲ. ಸಾಫ್ಟ್ವೇರ್ ಬರೆಯುವವರ ಬಗ್ಗೆಯೂ "ಕೋಡಗರು" ಎಂದದ್ದು ಅಧಿಕ ಪ್ರಸಂಗವೇ. ನಾನು ಹೆಚ್ಚಾಗಿ stress ಮಾಡಲು ಹೋಗಲಿಲ್ಲವಷ್ಟೆ. ನನಗಿಷ್ಟವಾಗಲಿಲ್ಲ ಎಂದ ಮಾತ್ರಕ್ಕೆ ಪ್ರತಿಕ್ರಿಯೆ ಅಳಿಸಿಹಾಕುವುದು ಸರಿಯಿರುವುದಿಲ್ಲ.
ಆದರೆ ಉದರನಿಮಿತ್ತ ಸಾಫ್ಟ್ವೇರ್ ಕೆಲಸ ಮಾಡಿಕೊಂಡಿರುವ ಹಲವರಿಗೆ ಈ ರೀತಿಯ ಹಗುರವಾದ ಮಾತು ಅಧಿಕಪ್ರಸಂಗ ಅನ್ನಿಸಿರೋದರಲ್ಲಿ ಸಂಶಯವಿಲ್ಲ.

ದಯವಿಟ್ಟು ಈ ವಿಷಯವನ್ನು ಇನ್ನಷ್ಟು ಎಳೆದು ನಾನು ಈ ಬ್ಲಾಗ್ ಮೂಲಕ ಹೇಳ ಹೊರಟ ವಿಷಯವನ್ನು ಮತ್ತಷ್ಟು ಕಳೆಗುಂದಿಸದಿರಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2008 - 4:36pm — kpbolumbu

ಉ: ಬರೆ code ಬರಿ (ಬರೀತಾ ಇರು)

kpbolumbu's picture

"ಕೋಡಗನಲ್ಲ" ಎಂದೇ ಬರೆದಿದ್ದೇನೆ. "ಕೋಡ್ ಬರೆಯುವವರನ್ನು ಕೋಡಗ ಎನ್ನಬಹುದೇ" ಎಂದವರು ಮರಿಜೋಸೆಫ್. ಹಾಗೆನ್ನಬಾರದು ಎನ್ನುವುದೇ ನನ್ನ ಮಾತಿನ ಉದ್ದೇಶ.

Quote:
ಅತ್ಯಧಿಕಪ್ರಸಂಗ... ಅಂತ ನನಗೆ ಅನ್ನಿಸಿದ್ದು ನನಗೆ ದಿಟ ಮೊದಲ ಸರತಿ ಈ ಕಮೆಂಟೋದಿದೊಡನೆ...!
ಆದರೆ ತಮಾಶೆ ಎಂದು ಸುಮ್ನಾದೆ.

ಅತ್ಯಧಿಕ ಪ್ರಸಂಗ ಎನ್ದು ನನ್ನ ಮಾತಿನ ಬಗ್ಗೆ ಅನ್ನಿಸುವಂತಹುದೇನಿತ್ತು?
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2008 - 5:03pm — hpn

ಉ: ಬರೆ code ಬರಿ (ಬರೀತಾ ಇರು)

hpn's picture

ನಿಮ್ಮ ಮಾತಿನ ಬಗ್ಗೆ ಅಲ್ಲ ಕಣ್ರೀ. ಮರಿಜೋಸೆಫರು ಸಾಫ್ಟ್ವೇರ್ ಬರೆಯುವವರ ಕುರಿತು ಬರೆದದ್ದು ಅಧಿಕ ಪ್ರಸಂಗ ಎಂದದ್ದು. ಇದೇ ಆಗೋದು, ಚರ್ಚೆ ಬೆಳಯತ್ತೆ, ಜೊತೆಗೆ confusion ಹೊತ್ತು ತರತ್ತೆ. ಈಗ ಈ ಪುಟ ನಿಜವಾಗಲೂ "hijacked". ಮರಿಜೋಸೆಫರಿಗೆ ಖುಷಿಯಾಗಿರಬಹುದು. ನನಗೆ ಬಹಳ ಬೇಸರವಾಯ್ತು.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2008 - 5:34pm — cmariejoseph

ಉ: ಬರೆ code ಬರಿ (ಬರೀತಾ ಇರು)

cmariejoseph's picture

ನಾಡಿಗರೇ, thread cut ಆಗಿ ೨೯ ಗಂಟೆಗಳಾದ ಮೇಲೆ ನಾನು ಅದಕ್ಕೆ ಜೀವ ತುಂಬಿದ್ದೇನೆ. ಅದು ಹೈಜಾಕ್ ಹೇಗಾಗುತ್ತೆ? ಮತ್ತದಕ್ಕೆ ಅಧಿಕಪ್ರಸಂಗ ಎಂಬ ಒಗ್ಗರಣೆ ಬೇರೆ. ಚರ್ಚೆ ನಿಲ್ಲಿಸಿ ಅಂದೋರೂ ನೀವೇ, ಮತ್ತೆ ಎಳೀತಾ ಇರೋರೂ ನೀವೇ.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2008 - 4:37pm — cmariejoseph

ಉ: ಬರೆ code ಬರಿ (ಬರೀತಾ ಇರು)

cmariejoseph's picture

ನಾಡಿಗರೇ, ಒಂದ್ವಿಷಯ, ಈ ಜಾಗದಲ್ಲಿ ನಮಗೆ ಅಭಿವ್ಯಕ್ತಿಸುವ ಸ್ವಾತಂತ್ರ್‍ಯ (ಇದನ್ನು ಬರೆಯುವುದು ಹೇಗೆ?) ನೀಡಿದ್ದೀರಿ ಸಂತೋಷ.

ದೀಪ ಗಾಳಿ ಎರಡೂ ನಿಮ್ಮ ಕೈಯಲ್ಲೇ ಇದೆ. ಒಂದು ಪ್ರತಿಕ್ರಿಯೆ ಅಥವಾ ಲೇಖನ ಬೇಡವೆನಿಸಿದರೆ ಅಥವಾ ಮೂಲ ಆಶಯಕ್ಕಿಂತ ಭಿನ್ನವಾದುದಾಗಿದ್ದರೆ ಕಿತ್ತುಹಾಕುವ ಸ್ವಾತಂತ್ರ್‍ಯ (-) ನಿಮಗಿದೆಯಲ್ಲಾ? ಇಂಥಾ ಲೇಖನ ಇಂಥಾವ್ರಿಗೆ ಮಾತ್ರ ಅಂತ ತೋರಿಸಿಬಿಡಿ.

ಚರ್ಚೆಯ ಹರಿವಿನಲ್ಲಿ ದಿಕ್ಕು ತಪ್ಪಿಸುವ ಅಥವಾ ತೆಳುಗೊಳಿಸುವ ಪರಿ ಇಂದು ನಿನ್ನಿನದಲ್ಲ. ಅಲ್ಲದೆ ಒಬ್ಬರೇ ಎರಡೆರಡು ಐಡೆಂಟಿಟಿಗಳಲ್ಲಿ ಬರೀತಾ ಇಲ್ಲ ಅನ್ನೋಕೆ ಏನು ಖಾತರಿ ಇದೆ. ಇನ್ನು ಕೆಲವರಂತೂ ಕಪ್ಪೆ, ಕೋತಿ, ಹಾವು, ಏಣಿಗಳ ಮುಖವಾಡ ಹಾಕ್ಕೊಂಡೇ ಬರೀತಾರೆ. ಅವರಿಗೆ ತಮ್ಮ ಮಕ ತೋರ್ಸೋಕೆ ಏನೋ ಒಂಥರಾ ಕೀಳರಿಮೆ/ನಾಚಿಕೆ.

ನನಗನ್ನಿಸಿದ್ದನ್ನು ಹೇಳಿದ್ದೇನೆ. ಇಲ್ಲಿ ಗಂಭೀರ ವಿಷಯಗಳು ಚರ್ಚೆಗೊಳ್ಳೋದೇ ಇಲ್ಲ. ಸಿಲ್ಲಿಪಲ್ಲಿಗಳಿಗೆ ನೂರೆಂಟು ಕಮೆಂಟು. ಕೆಲವರು ಇನ್ನೂ ಕಾಲೇಜಿನಲ್ಲೇ ಇದ್ದಾರೆ. ಪ್ರೈಮರಿ ಸ್ಕೂಲ್ attitude ಹೋಗಿ ಪ್ರೌಢತೆ ಬರಲಿ ಎಂದು ಮತ್ತೊಮ್ಮೆ ಹೇಳ್ತೇನೆ.

ಮತ್ತೊಂದು ವಿಷಯ, ಸದಸ್ಯರು ನಾಲ್ಕು ಜನವಾದರೆ ಅತಿಥಿಗಳು ನಲ್ವತ್ತು ಜನ ಅನ್ನೋ ಅಂಕಿಅಂಶ ಕಾಣ್ತಾನೇ ಇರುತ್ತೆ. ಆ ನಲ್ವತ್ತು ಜನ ಬರೆಯದೇ ಓದುವವರಿರಬಹುದೇನೋ? ಇಂಗ್ಷಿಷಿನಲ್ಲೇ ಒಂದು feedback ತಗೋಬಾರದೇಕೆ?

ಕೋಡಗ ಪದಬಳಕೆಗೆ ಕ್ಷಮೆಯಿರಲಿ. code + ಇಗ = ಕೋಡಿಗ ಅನ್ನೋದನ್ನ ಇಷ್ಟವಾದರೆ ಇಟ್ಟುಕೋಬೋದು.

ಪ್ರೀತಿಯಿಂದ

ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2008 - 4:59pm — hpn

ಉ: ಬರೆ code ಬರಿ (ಬರೀತಾ ಇರು)

hpn's picture

ಸುಮಾರು ವಿಷಯಗಳು ಬರೆದಿದ್ದೀರಿ. ಪ್ರತಿಯೊಂದೂ ದಾರಿ ತಪ್ಪಿಸುವಲ್ಲಿ ಉತ್ತಮ ಪ್ರಯತ್ನ,

ವಿಷಯ ಇಷ್ಟೆ: ಹಗುರವಾಗಿ ಬರೆದವರು ಪ್ರೌಢತೆಯ ಕುರಿತು ಮಾತನಾಡಿದರೆ ಅರ್ಥವಿರುವುದಿಲ್ಲ, ಮರಿಜೋಸೆಫರೆ. ತುಂಬಾ assertive ಆಗಬಾರದೆಂದು ಈ ಹಿಂದಿನ ಪ್ರತಿಕ್ರಿಯೆಗಳಲ್ಲಿ ಈ ಬಗ್ಗೆ ನೇರ ಬರೆಯಲಿಲ್ಲ.

ಸಮುದಾಯ ಸಮುದಾಯದಲ್ಲಿರುವವರು ಎಳೆದು ನಡೆದಂತೆ. ನೀವು ಮಾತನಾಡುತ್ತಿರುವುದು ಕನ್ನಡಿ ಹಿಡಿದು. ಆ ಕನ್ನಡಿಯಲ್ಲಿ ಕಾಣುತ್ತಿರುವವರೂ ನೀವೇ. ಗಂಭೀರ ಚರ್ಚೆಯಾಗುತ್ತಿಲ್ಲವೆಂದರೆ ಗಂಭೀರ ಚರ್ಚೆ ಮಾಡಿ! ಹಗುರವಾಗಿ ಬರೆದು ಅದನ್ನು defend ಮಾಡಿಕೊಳ್ಳುತ್ತ ಹೋದಂತೆ ಅಲ್ಲಿ ಕಾಣುವುದು ನಿಮ್ಮದೇ ಚಿತ್ರಣ. ಇದು ಇಲ್ಲಿಗೆ ನಿಲ್ಲಲಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 11:44am — mahesha

ಉ:

mahesha's picture

Quote:

ನನಗನ್ನಿಸಿದ್ದನ್ನು ಹೇಳಿದ್ದೇನೆ. ಇಲ್ಲಿ ಗಂಭೀರ ವಿಷಯಗಳು ಚರ್ಚೆಗೊಳ್ಳೋದೇ ಇಲ್ಲ. ಸಿಲ್ಲಿಪಲ್ಲಿಗಳಿಗೆ ನೂರೆಂಟು ಕಮೆಂಟು. ಕೆಲವರು ಇನ್ನೂ ಕಾಲೇಜಿನಲ್ಲೇ ಇದ್ದಾರೆ. ಪ್ರೈಮರಿ ಸ್ಕೂಲ್ attitude ಹೋಗಿ ಪ್ರೌಢತೆ ಬರಲಿ ಎಂದು ಮತ್ತೊಮ್ಮೆ ಹೇಳ್ತೇನೆ.

ಇವರಿಗೆ ಹೇಗೆ ಅನ್ನಿಸುವುದೋ ಹಾಗೆ ನನಗೂ ಹರಿಗೂ ಅನ್ನಿಸುವುದು.

ಈ ಕಮೆಂಟು ನನಗೆ ಅತ್ಯಧಿಕಾಧಿಕಪ್ರಸಂಗ ಅನ್ನಿಸಿದ್ದು ಮಾತ್ರವಲ್ಲದೇ ಕಾರ್ಯರಾಹಿತ್ಯದಿಂದ ಮತ್ಯತ್ರಭಾವನಾಪ್ರೂರ್ವ ವಚನಗಳು...

ಗಂಭೀರ ಚರ್ಚೆಯಂತೆ ****! ಇವರು ಹೇಳೋ ಪಲ್ಲವಿಯವರು, ರೂಪರವರು ಸುರುಮಾಡಿದ ಹಾಡಿನ ಬಂಡಿಯ ಬಗ್ಗೆಯೋ.. ಸಂಪದದ ನಿಯಮವನ್ನೂ ಓದೇ ನಾವೆಲ್ಲ ಇಲ್ಲಿ ಇರೋದು.. ಬೇಕಾದರೆ ಮರಿಜೋಸೆಪರ-ಸಂಪದ ಎಂದು ಹೊಸ ತಾಣ ಸೃಜಿಸಿ ಗಂಭೀರಚರ್ಚಾನಿರತರಾಗಿಲಿ ನಾವು ಘ್ರಾಣಿಸುವುದೂ ಇಲ್ಲ.!

ಇದು ನಮಗೆ ಅನ್ನಿಸಿದ್ದು ಹೇಳಿದ್ದೀವಿ.!! Smiling

’ಸಿಲ್ಲಿಲಲ್ಲಿ’ ಒಂದು ಸೂಪರ್‍ ಹಿಟ್ ಸೀರಿಯಲ್.. ! Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 5:44pm — cmariejoseph

ಉ:

cmariejoseph's picture

ಹೀಗೆ ಬರೆದು ನೀವು ಹಗುರಾಗಿದ್ದೀರಿ ಎಂದು ಭಾವಿಸುವೆ.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 5:46pm — mahesha

ಉ:

mahesha's picture

Smiling ಹೆ ಹೆ...!!

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2008 - 7:25pm — Sunil Jayaprakash

ಉ: ಬರೆ code ಬರಿ (ಬರೀತಾ ಇರು)

Sunil Jayaprakash's picture

ಹ್ಮ್. ಈ ವಿಷಯದಲ್ಲಿ ನನಗೆ ಅಷ್ಟು ಆಸಕ್ತಿಯಿಲ್ಲ. ಆದರೆ ಬೇಸರವಾಗಿರುವವರು ಜೋಶಿನಿಂದ ಎದ್ದೇಳುವಂತಾಗಲಿ ಅಂತ ಈ ಕಾಮೆಂಟ್.

"ನಾವು ಸರ್ಕಾರೀ ಕೆಲಸಗಾರರನ್ನು ಸೋಮಾರಿಗಳು ಅಂತ ಆಡಿಕೊಳ್ಳಲ್ವೇ, ಆ ಡಿಪಾರ್ಟಮೆಂಟ್ ಸರಿ ಇಲ್ಲ, ಇದು ಸರಿ ಇಲ್ಲ, ಬರೀ ಲಂಚ ತಿಂತಾರೆ, ಹಾಗೆ ಹೀಗೆ ಅಂತ, ಹಾಗೆಯೇ ಕೋಡುವವರನ್ನು ಕೋಡುಗ ಅಂತ ಅಂದ್ಕೊಳ್ಲಿ ಬಿಡಿ" ---- ಆಮೇಲೆ ಕೊನೆಗೆ ಎರಡೂ ಕಡೆಯವರು, "ಕತ್ತೆಗೇನು ಗೊತ್ತು, ಕಸ್ತೂರೀ ಪರಿಮಳ" ಅಂತ ಬೇರೆಯವರ ಮೇಲೆ ಗೂಬೆ ಕೂರಿಸಿಕೊಳ್ತಾ ಇರೋಣ. ನಿಜ ಅಂದ್ಕೊಂಡ್ರಾ, ವಿಷಯ ಅದಲ್ಲ ಮುಂದೆ ನೋಡಿ Smiling

ಆಕ್ಚುಲಿ, "ಕೋಡುಗ" ಅಂತ ಅನ್ನುಸ್ಕೊಳೋದ್ರಲ್ಲಿ ಒಂದು ಪ್ಲಸ್ ಪಾಯಿಂಟ್ ಕಾಣಿಸ್ತಾ ಇದೆ ನಂಗೆ. ಏನಪ್ಪಾ ಅಂತಂದ್ರೆ, ನಾನು "ಸಾಫ್ಟವೇರ್ ಇಂಜಿನಿಯರ್" ಅಂತ ಹೇಳುದ್ರೆ, ಜನರಿಗೆ ಅದೇನಾಗುತ್ತೋ ಗೊತ್ತಿಲ್ಲ, ನೇರ ಇಂಗ್ಲೀಷಲ್ಲೇ ಮಾತಾಡಿಸೋಕ್ಕೆ ಶುರುಮಾಡ್ತಾರೆ.
"ಹಲೋ, ನೈಸ್ ಟು ಮೀಟ್ ಯು, ವೇರ್ ಡು ವು ವರ್ಕ್, ಆಕ್ಚುಲಿ ಯು ಸೀ, ಮೈ ಬ್ರದರ್ಸ್ ಸನ್-ಇನ್-ಲಾ ಈಸ್ ಆಲ್ಸೋ ಅ ಸಾಫ್ಟವೇರ್ ಇಂಜಿನಿಯರ್. ಇಟ್ ಸೀಮ್ಸ್, ಹೀ ಹ್ಯಾಡ್ ಬೀನ್ ಟು ಆನ್ಸೈಟ್ ಮೆನಿ ಮೆನಿ ಟೈಮ್ಸ್ ಫ್ರಂ ಸೋಪ್ ಲಾಬ್ಸ್ Eye-wink ಬೈದವೇ, ವಾಟ್ ಆಲ್ ಕಂಟ್ರೀಸ್ ಹ್ಯಾವ್ ಯು ಬೀನ್ ಟು" ಅಂತ ಇಂಗ್ಲೀಷಲ್ಲಿ ಕೇಳಿ ಮುಜುಗರ ಉಂಟುಮಾಡ್ತಾರೆ. ಅದೇ, ನಾನೊಬ್ಬ "ಕೋಡುಗ" ಅಂದ್ರೆ, ಯಾವ್ದೋ ಗೂಬೆ ಮುಂಡೇದು ಅಂತ "ಏನು, ಹೇಗಿದ್ದೀರಿ, ಹೇಗೆ ಬಂದ್ರಿ, ಈಗ ಯಾವ ಏರಿಯಾದಲ್ಲಿ ಇದ್ದೀರ. ಅಣ್ಣನ ಮದುವೆ ಆಯ್ತಾ, ತಮ್ಮ ಯಾವ ಕಾಲೇಜು, ತಿಂಡಿ ತಿಂದ್ರಾ, ಕಾಫಿ ಕುಡಿದ್ರಾ" ಅಂತ ಕನ್ನಡದಲ್ಲಿ ಮಾತು ಮುಂದುವರಿಸುತ್ತಾರೆ Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 2:58pm — ಮನಹ್ಪಠಲ

ಉ: ಬರೆ code ಬರಿ (ಬರೀತಾ ಇರು)

ಮನಹ್ಪಠಲ's picture

ಹಗುರವಾದ ಬರ್ದಿರೋ ಕಾಮೆ೦ಟ್ಗಳ್ಳನ್ನ ನೆಗ್ಲೆಕ್ಟ್ ಮಾಡ್ರಿ. ಚಾಪ್ಟರ್ ಮುಗಿತೂ೦ತನೇ ಲೆಕ್ಕ. ಹರಿಯವರೇ!!!

ನಿಮ್ಮವ
ಕ್ರಿಸ್ನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2008 - 8:05pm — roopablrao

ಉ: ಬರೆ code ಬರಿ (ಬರೀತಾ ಇರು)

roopablrao's picture

ಹರಿ
ಈ ನಿಮ್ಮ ಚುಟುಕು ಒಂಥರಾ ನಮ್ಮ ಪ್ರೋಗ್ರಾಮರ್ಸ್ ಸಮಸ್ಯೆಯನ್ನೂ
ಕ್ಲೈಂಟ್ಸ್‌ಗಳ ಮನೋಭಾವನೇನೂ ಚೆನ್ನಾಗಿ ಹೇಳಿದೆ

ಎರೆಡು ವರ್ಷದ ಮುಂಚೆ ಒಂದು MLM ಕಂಪೆನಿಯವರು ಅವರಿಗೆ ಒಂದು ಸಾಫ್ಟ್‌ವೇರ್ ಡೆವಲಪ್ ಮಾಡಿಕೊಡಲು ಹೇಳಿದರು.
ಸರಿ ಅವರು ಹೇಳಿದ ಡೀಟೈಲ್ಸ್ ಪ್ರಕಾರ ಮಾಡಿಕೊಟ್ಟಾಯ್ತು
ಕೊಡುವಾಗ ಪೂರ ಡೀಟೈಲ್ಸ್ ಕೊಡದೆ ಈಗಲೂ ಬಂದು ತಲೆ ತಿಂತಾರೆ

ಮೇಡಮ್ ಇದೊಂದನ್ನ ಸರಿ ಮಾಡಿಕೊಟ್ಬಿಡಿ,
ಇದೊಂದು ಆಡ್ ಮಾಡಿಬಿಡಿ
ಅಂತ ಹೀಗೆ ಒಂದಲ್ಲ್ಲ
ಅವರು ಕೊಟ್ಟ ಕಾಸು ಈಗಾಗ್ಲೆ ದಿಕ್ಕಾಪಾಲಾಗಿ ಖರ್ಚಾಗಿದೆ

ಹೆಚ್ಚು ಕೇಳೊ ಹಾಗಿಲ್ಲ
ಆಗಲ್ಲ ಅಂತ ಕೈಯಾಡಿಸೋ ಹಾಗಿಲ್ಲ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಂಪ್ಯೂಟರ್ ‍ ಪಾಠ -೨ . - ಕಂಪ್ಯೂಟರ್ ರಚನೆ
  • “ಚಾಮಯ್ಯ” ಮೇಷ್ಟ್ರಿಗೆ ಗುರುದಕ್ಷಿಣೆ ಸಲ್ಲಿಸಿದಿರಾ?
  • ಕನ್ನಡ "ಬರಹ" ಕೀ ಮ್ಯಾಪ ತಂತ್ರಾಂಶ ಲಿನಕ್ಸ ಬಳಕೆದಾರರಿಗೆ ಲಭ್ಯವಿದೆ
  • ಬೆಂಗಳೂರಿನಲ್ಲಿ ನಡೆಯಲಿರುವ ಎರಡು ಡೆವೆಲಪರ್ ಈವೆಂಟುಗಳು
  • ಅರ್ಥವಾಗದ........
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬೂದಿಕೋಟೆ
  • ಸೊಂಟದ ವಿಷಯ
  • ಕಾದಿರುವೆ ನಿನಗಾಗಿ
  • ಕುಹೂ ದನಿಯು ಕಿವಿ ತೂತ ಕೊರೆದಿತ್ತು!
  • ಕೊನೆಗೂ ಕುಮಾರಸ್ವಾಮಿ ರಾಮನಗರಕ್ಕೆ ಭೇಟಿ ನೀಡಿದರು!
  • ಓದಿದ್ದು ಕೇಳಿದ್ದು ನೋಡಿದ್ದು-2
  • ನೀನು ಯಾರೆ
  • ಚೈನಾ ೧೦೦ ನಾವು ೦
  • ಹರುಷ ತಂದ ಆರು ದಿನಗಳು (ನಮ್ಮೂರೇ ನನಗೆ ಮೇಲು| ಈ ಊರಿಗೆ ಕರೆದು ತಂದಿರುವುದು ಹಣದ ಗೀಳು|)
  • ಆರದ ದೀಪ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • roshan_netla
    ಉ: ಓದಿದ್ದು ಕೇಳಿದ್ದು ನೋಡಿದ್ದು-2
    August 29, 2008 - 12:12pm
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು-2
    August 29, 2008 - 12:07pm
  • shreekant.mishrikoti
    ಉ: ಈಗ "ನನ್ನ ವಯಸ್ಸೆಷ್ಟು?" ಹೇಳಿ
    August 29, 2008 - 11:45am
  • mowna
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 11:43am
  • sankul
    ಉ: ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ
    August 29, 2008 - 11:39am
  • roshan_netla
    ಉ: ಓದಿದ್ದು ಕೇಳಿದ್ದು ನೋಡಿದ್ದು-2
    August 29, 2008 - 11:32am
  • Dr.Harisha
    ಉ: ಅಬ್ಬ, ರಾಷ್ತ್ರಕ್ಕೇ ಅವಮಾನ!
    August 29, 2008 - 11:31am
  • mowna
    ಉ: ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ
    August 29, 2008 - 11:27am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು-2
    August 29, 2008 - 11:22am
  • ಸಂಗನಗೌಡ
    ಉ: ಓದಿದ್ದು ಕೇಳಿದ್ದು ನೋಡಿದ್ದು-2
    August 29, 2008 - 11:19am
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 56 ಅತಿಥಿಗಳು ಆನ್ಲೈನ್ ಇರುವರು.


ಮುಕ್ತ ಮನಸ್ಸು ಖಾಲಿ ಆಕಾಶದಂತೆ. ಹೊರಗಡೆ ವಿಶಾಲ ಮತ್ತು ಒಳಗಡೆ ಶೂನ್ಯ. ಅದರಲ್ಲಿ ಅಂಟುತನ ಇಲ್ಲವೇ ಇಲ್ಲ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator