ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ-|
ದಂತರಂಗದ ಕಡಲು ಶಾಂತಿಗೊಳಲಹುದು ||
ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |
ಸಂತಯಿಸು ಚಿತ್ತವನು -- ಮಂಕುತಿಮ್ಮ ||

— ಡಿ. ವಿ. ಜಿ.

ಕಾಸ್ಮೆಟಿಕ್ಸ್ನಮ್ಮ ಕಿಟ್ಟಿ ಸರ್ ಹೇಳುತ್ತಿದ್ದರು:

ಫೇರ್ ಎಂಡ್ ಲವ್ಲಿ ಹಚ್ಚಿಕೊಳ್ಳೋದು, ಹಚ್ಚಿಕೊಂಡು "ನಾನೇ ಫೇರ್, ನಾನೇ ಲವ್ಲಿ" ಅಂದುಕೊಳ್ಳೋದು! ಅಂತ.

ಭಾರತ "ಫೇರ್ನೆಸ್ ಕ್ರೀಮು"ಗಳ ನಾಡು. ನಮ್ಮ ದೇಶದಲ್ಲಿ ಮಾರಾಟವಾಗುವ ಫೇರ್ನೆಸ್ ಕ್ರೀಮಿನ ಅಂಕಿಗಳನ್ನು ಗಮನಿಸಿ ವಿಶ್ವದೆಲ್ಲೆಡೆ ಮಲ್ಟಿ ನ್ಯಾಶನಲ್ಲುಗಳು ಬೆರಗಾಗಿ ಬಾಯಿ ಮೇಲೆ ಕೈ ಇಟ್ಟುಕೊಂಡದ್ದುಂಟಂತೆ. "ಎಂತಹ opportunity ಹಾಳಾಗುತ್ತಿದೆ, ನಾವೂ ಫೇರ್ನೆಸ್ ಕ್ರೀಮು ಮಾಡಬೇಕು" ಎಂದು.

ತಮಾಷೆಯೆಂದರೆ ಮಾರುಕಟ್ಟೆ ಆಕ್ರಮಿಸಿಕೊಳ್ಳುವ ಕಾತುರದಲ್ಲಿ ಬರುವ ಹತ್ತಲವು ಪ್ರಾಡಕ್ಟುಗಳು ಸರಿಯಾಗಿ ಟೆಸ್ಟ್ ಆಗಿರುವುದೇ ಕಡಿಮೆ. ಬಹುಪಾಲು ರಿಲೀಸ್ ಆದ ನಂತರ ಬಳಸಿದ ಬಡಪಾಯಿ ಚರ್ಮಗಳ ಮೇಲೆ ಟೆಸ್ಟ್ ಆಗುತ್ತವೆ. ಟಿವಿಯಲ್ಲಿ ಬಂದ ಜಾಹೀರಾತು ಅದನ್ನು ಕೊಳ್ಳುವವರಿಗೆ ಪ್ರಚೋದನೆ ನೀಡಿರುತ್ತದೆ. ದುಡ್ಡು ಮಾಡಬೇಕೆಂಬ ಒಂದೇ ಉದ್ದೇಶದಿಂದ ಹುಟ್ಟುಹಾಕಿದ ಟಿ ವಿ ಚ್ಯಾನಲ್ಲು "ಮಾರುವವರು ಇವರು, ಕೊಳ್ಳುವವರು ಅವರು. ಇದರಲ್ಲಿ ನನ್ನದೇನು" ಎನ್ನುತ್ತ ಧೋರಣೆಯಲ್ಲಿ ತಾನೂ ಒಂದು ಪಕ್ಕಾ ಮಲ್ಟಿನ್ಯಾಶನಲ್ ಆಗಿರುತ್ತದೆ.

ಹೀಗಿರುವಾಗ ಹೆಚ್ಚು ಕಡಿಮೆಯಾದದ್ದರ ಹೊಣೆ ಯಾರದ್ದು ಎಂಬುದು ಗೊಂದಲಮಯವೇ. ದೇಶದ ಎಕಾನಮಿ ಬೆಳೆಯಲು ಸಹಾಯ ಮಾಡುವ ಉತ್ಪನ್ನಗಳಿಗೆ ದೇಶ ಕಡಿವಾಣ ಹಾಕಲಾರದು. ಹಾಕಿದರೂ ಜನ ಸುಮ್ಮನಿರಲಾರರು. ಅವರಿಗೂ ಚೆಂದ ಕಾಣಬೇಕಲ್ಲ! ಫೇರ್ ಆಗಿರಬೇಕಲ್ಲ! ಕೂದಲಿನ ಬಣ್ಣ ಬೆಳ್ಳಗಾದರೂ ಹೊರಗಿನವರಿಗೆ ಕಪ್ಪಗೆ ಕಾಣುವಂತೆ ಮಾಡಬೇಕಲ್ಲ.

ನಿನ್ನೆ ವಾಷಿಂಗ್ಟನ್ ಪೋಸ್ಟಿನಲ್ಲಿ ಬಂದಿರುವ ಈ ಸುದ್ದಿ ನೋಡಿ. ಸಾಧಾರಣ ಬಳಕೆಯಲ್ಲಿರುವ Moisturizing creamಉಗಳು ಇಲಿಗಳ ಮೇಲೆ ಟೆಸ್ಟ್ ಮಾಡುತ್ತಿದ್ದರಂತೆ. ನಿಧಾನವಾಗಿ ಟ್ಯೂಮರ್ ಬೆಳೆಯ ಹತ್ತಿತಂತೆ! ಅದೂ ಆಗಲೇ ಮಾರ್ಕೆಟ್ಟಿನಲ್ಲಿ ಬಳಕೆಯಲ್ಲಿರುವ ಬ್ರ್ಯಾಂಡುಗಳು.
ಟೆಸ್ಟಿಂಗ್ environmentನಲ್ಲಿ ಬಂದದ್ದು ಮನುಷ್ಯರಿಗೆ ಆಗಬೇಕು ಎಂಬುದಿಲ್ಲ, ನಿಜ. ಏಕೆಂದರೆ ಅಲ್ಲಿ ಸ್ವಲ್ಪ ಅತಿಯಾಗಿಯೇ ರೇಡಿಯೇಶನ್ ಬಳಸಿರುತ್ತಾರೆ. ಅದಲ್ಲದೆ ಪ್ರಾಣಿಗಳ ಮೇಲೆ ಟೆಸ್ಟ್ ಮಾಡಿರುತ್ತಾರೆ. ಆದರೆ ಇದು ಒಂದು ಪ್ರಶ್ನಾರ್ಥಕವನ್ನು ಮೂಡಿಸುವುದಂತೂ ನಿಜ.

ಪ್ರಶ್ನೆ: ಮನುಷ್ಯರ ಚರ್ಮ ನಿಜವಾಗಲೂ ಈಗೀಗ ಬರುತ್ತಿರುವ ಕಾಸ್ಮೆಟಿಕ್ ಉತ್ಪನ್ನಗಳನ್ನು ತಾಳಿಕೊಳ್ಳಬಲ್ಲುದೇ? ವಿಜ್ಞಾನವೆಂದು ಹೊಸಹೊಸತನ್ನು ಕಂಡುಹಿಡಿದು ಪರಿಸರದ ಮೇಲೆ ಹೇರಿ ಅದನ್ನು ನಾಶಮಾಡಿದಂತೆ ನಮ್ಮನ್ನೂ ನಾವು ನಾಶ ಮಾಡಿಕೊಳ್ಳುತ್ತಿದ್ದೇವೆಯೇ?

ಚಿತ್ರ: Brian Boulos from NYC. (License: Creative Commons Attribution 2.0)

0
~.~

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: Cosmetics ಬಳಕೆಯ ಸುತ್ತ

kalpana's picture

ಅಯ್ಯೋ ದೇವ್ರೆ, eucerin ನಾನು ನಿತ್ಯ ಬಳಸುತ್ತೇನೆ ! ಮೇಕಪ್ ಇಲ್ಲದೆ ನಾವು ಮಹಿಳೆಯರು ಬದುಕಲು ಸಾಧ್ಯವೆ, ನೀವು ಗಂಡಸರು ನಮ್ಮನ್ನು ನೋಡಲು ಸಾಧ್ಯವೆ ? Smiling

~ಕಲ್ಪನ

ಉ: Cosmetics ಬಳಕೆಯ ಸುತ್ತ

hpn's picture

ಹುಷಾರಿ ಕಣ್ರಿ. ಮಲ್ಟಿನ್ಯಾಶನಲ್ಲುಗಳು ನಿಮಗೆ ಈಗ ಚೆಂದ ಕಾಣುವಂತೆ ನೋಡಿಕೊಳ್ಳುತ್ತವೆ. ಮುಂದೆ?

--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: Cosmetics ಬಳಕೆಯ ಸುತ್ತ

kalpana's picture

ಮುಂದೆ... ಹಳೆ ಗಂಡನ ಪಾದವೇ ಗತಿ Smiling

~ಕಲ್ಪನ

ಉ: Cosmetics ಬಳಕೆಯ ಸುತ್ತ

Ennares's picture

ಅಂದರೆ ನೀವು ಮೇಕಪ್ ಮಾಡಿಕೊಳ್ಳೋದು ಹೊಸ ಗಂಡಂದಿರ ಬೇಟೆಯಾಡೋಕ್ಕೋ? ನಿಮ್ಮ ಪ್ರತಿಕ್ರಿಯೆಯ ಅರ್ಥವೇನ್ರೀ?

Eye-wink

-ನವರತ್ನ ಸುಧೀರ್

ಉ: Cosmetics ಬಳಕೆಯ ಸುತ್ತ

ಗಣೇಶ's picture

ರಾಮ ರಾಮ, ತಪ್ಪು ತಪ್ಪು.

ನವರತ್ನ ಸುಧೀರರೆ,

fairness cream, moisturizing cream(ಹೊಸಗಂಡ)ಗಳ ಸಂಗ ಬಿಟ್ಟು,
ಹಳದಿ,ಶ್ರೀಗಂಧಗಳ (ಹಳೇಗಂಡ) ಮೊರೆ ಹೋಗಬೇಕಲ್ಲಾ ಎಂಬ ಚಿಂತೆ ಹತ್ತಿರುವಾಗ,
ಇಲ್ಲೂ ತಮಾಷೆನಾ?

-ಗಣೇಶ.

ಉ: Cosmetics ಬಳಕೆಯ ಸುತ್ತ

hpn's picture

"ಹಳೇಗಂಡ" ಯಾರೆಂದು ತಿಳಿಸಿದ್ದು ಚಲೋ ಆಯ್ತು. ಜೊತೆಗೆ ಶ್ಯಾಂಪೂ ಸಂಗ ಬಿಟ್ಟು ಶಿಗೇಕಾಯಿ ಅನ್ನೋದನ್ನೂ add ಮಾಡಿಬಿಡಿ. Eye-wink
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: Cosmetics ಬಳಕೆಯ ಸುತ್ತ

kalpana's picture

ಹ ಹ್ಹ, ಹಾಗಲ್ಲ... ಆದ್ರೆ ಹೆಂಗಸರು ಯಾಕೆ ಮೇಕಪ್ ಮಾಡ್ಕೋತಾರೆ ಅನ್ನೋದು ಸ್ವಲ್ಪ complicated ವಿಷಯ, ಹೆಂಗಸಾದ ಹೊರತು ನಿಮಗೆ ತಿಳಿಯೊಲ್ಲ ಬಿಡಿ Smiling

~ಕಲ್ಪನ

ಉ: Cosmetics ಬಳಕೆಯ ಸುತ್ತ

Chamaraj's picture

ಹಾಗಾದರೆ, ಈ ಜನ್ಮದಲ್ಲಿ ತಿಳಿಯೋದು ಆಗಲ್ಲ ಅಂತಾಯ್ತು. ಛೇ !!

- ಚಾಮರಾಜ ಸವಡಿ

ಉ: Cosmetics ಬಳಕೆಯ ಸುತ್ತ

Chamaraj's picture

ಇದಪ್ಪ ಸತ್ಯ ಒಪ್ಪಿಕೊಳ್ಳುವ ಸಹಜತೆ!!

- ಚಾಮರಾಜ ಸವಡಿ

ಉ: Cosmetics ಬಳಕೆಯ ಸುತ್ತ

Chamaraj's picture

ಹರಿ ಹೇಳಿದ್ದು ತೀರಾ ಸುಂದರಿಯಾಗಿರಲು ಪ್ರಯತ್ನಿಸುವವರ ಅತಿಯಾದ ಕಾಸ್ಮೆಟಿಕ್ಸ್‌ (ಸೌಂದರ್ಯ?) ಪ್ರಜ್ಞೆಯ ಬಗ್ಗೆ. ಮೇಕಪ್‌ ಹಾಕಿಕೊಳ್ಳದಿದ್ದರೂ ಸಹಜ ಸೌಂದರ್ಯ ಇದ್ದೇ ಇರುತ್ತದೆಯಲ್ಲ? ಅದಕ್ಯಾಕೆ ಗಾಬರಿ!?

ಹೇಗಿದ್ದರೂ ಹೆಣ್ಣುಮಕ್ಕಳು ಸೌಂದರ್ಯವತಿಯರೇ ಬಿಡಿ, ಗಂಡಸರ ಪಾಲಿಗೆ!

- ಚಾಮರಾಜ ಸವಡಿ

ಉ: Cosmetics ಬಳಕೆಯ ಸುತ್ತ

Rajeshwari's picture

ಉಪಯುಕ್ತವಾದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ಕೆಲವಾರು ಹೆಂಗಸರು ಮೇಕಪ್ ಇಲ್ಲದ್ದಿದ್ರೆ ಏನೋ ಒಂತರ ವಿಚಿತ್ರವಾಗಿ ನೋಡುತ್ತಾರೆ ಅದ್ರ ಜೊತೆಗೆ ತಾತ್ಸಾರ ಮನೋಭಾವನೆ ( ನನಗಾದ ಅನುಭವ). ಇತ್ತೀಚೆಗೆ ಕೆಲವರ ಮನೆಗೆ ಹೋಗಬೇಕಾದ್ರೆ ಲ್ಯಾಕ್ಮೆ ಪೌಡರ್ ಹಚ್ಚಿಕೊಂಡು ಹೋಗೋದನ್ನು ಅಳವಡಿಸಿಕೊಳ್ಳುತ್ತಿದ್ದೇನೆ

ಉ: Cosmetics ಬಳಕೆಯ ಸುತ್ತ

hpn's picture

ಮೇಕಪ್ ಬಗ್ಗೆ ಗೊತ್ತಿಲ್ಲ. ಆದರೆ ಮೇಕಪ್ ಮಾಡಿಕೊಂಡ ಮುಖಗಳು ಮೇಕಪ್ ಇಲ್ಲದಾಗ ಕಣ್ ಹತ್ರ ಕಪ್ಪಗೆ ಉಳಿದಂತೆ ಸಪ್ಪಗೆ ಕಾಣುವುದುಂಟು.
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: Cosmetics ಬಳಕೆಯ ಸುತ್ತ

Chamaraj's picture

ಸಕತ್‌ ಕಾಮೆಂಟ್‌ !!

- ಚಾಮರಾಜ ಸವಡ

Syndicate content