ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ಸುವರ್ಣ ಕರ್ನಾಟಕ ಅಂತರ್ಜಾಲ ವಾಹಿನಿ?

June 6, 2008 - 5:10pm — hpn


ಮೇಲೊಂದು ಹಿಡಿದೆಳೆದು ಬಗ್ಗಿಸಿದ ಚಿತ್ರ. ಚಿತ್ರದೊಳಗೆ ಅಗಲ ಹಿಡಿದೆಳೆದ ಲೋಗೊ. ಪಕ್ಕದಲ್ಲಿ ಎಲ್ಲಿಂದಲೋ ಎತ್ತಿ ಹಾಕಿಕೊಂಡ ಕ್ಲಿಪ್ ಆರ್ಟ್.

ಅದರಡಿ ಎಡಕ್ಕೆ ವಿಧಾನಸೌಧದ ಚಿತ್ರ, ಬಲಗಡೆ ಐ ಟಿ ಪಿ ಎಲ್ - ಇವೆರಡೂ ಗ್ರಂಥಾಲಯವೆಂದ ತಕ್ಷಣ ನೆನಪಿಗೆ ಬರುವ ಕಟ್ಟಡಗಳಲ್ಲಿ ಕೊನೆಯವು!
ಮಧ್ಯದಲ್ಲಿ ಮೇಲಿಂದ ಕೆಳಗೆ, ಎಡದಿಂದ ಬಲಕ್ಕೆ, ವಾರೆವಾರೆಯಾಗಿ, ಕ್ಯಾಸಿನೋ ಮೆಶೀನನ್ನೂ ನಾಚಿಸುವ "ಹೊಸತು" (New) ಎನ್ನುವ ಕ್ಲಿಪ್ ಆರ್ಟುಗಳು.

ಇದು ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಆರಂಭಿಸಿರುವ 'ಸುವರ್ಣ ಕರ್ನಾಟಕ ಅಂತರ್ಜಾಲ ವಾಹಿನಿ' ಪೋರ್ಟಲ್ಲು.

Children's virutal Library ಎನ್ನುವೆಡೆ ಡೈಯಪರ್ ಹಾಕಿಕೊಂಡ ಮಗು ಯಾಕೆ ಲಾಗ ಹೊಡೆಯುತ್ತಿದೆ ಎಂಬುದು ಮೇಲಿನದ್ದು ನೋಡಿದ ನಮಗೆ ಆಶ್ಚರ್ಯ ಹುಟ್ಟಿಸಲಾರದು.

ಇಂದು ವಿಜಯ ಕರ್ನಾಟಕದಲ್ಲಿ ಈ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವೆಬ್ಸೈಟು ಕುರಿತು ಬಂದಿದ್ದ ಒಂದು ಲೇಖನವನ್ನೋದುತ್ತ ವೆಬ್ಸೈಟು ತೆರೆದು ನೋಡಿದೆ. ಗಾಬರಿಯಾಯಿತು.
"ಹೊಸ ಮಾದರಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸಿದ್ಧಪಡಿಸಿದ್ದೀವಿ" ಎಂದಿತ್ತು ಲೇಖನ.

ವಿ.ಕ. ದ ಅದೇ ಲೇಖನದಲ್ಲಿ "ಇಲಾಖೆ ಕೋಟ್ಯಂತರ ರೂ. ಹೂಡಿಕೆ ಮಾಡಿ ಈ ವೆಬ್ಸೈಟ್ ಆರಂಭಿಸಿದೆ" ಎಂಬ ಕೊನೆಯ ವಾಕ್ಯ ಓದಿ ಮತ್ತಷ್ಟು ಗಾಬರಿಯಾಯಿತು.

ಆಸಕ್ತರಿಗಾಗಿ ವೆಬ್ಸೈಟಿನ URL:
http://www.karnatakapubliclibrary.gov.in/
(http://164.100.80.120/karpublib/ ಗೆ ರಿಡೈರೆಕ್ಟ್ ಆಗುತ್ತದೆ).

  • ಅಂತರ್ಜಾಲ
  • ಕರ್ನಾಟಕ ಸರ್ಕಾರ
  • ಗ್ರಂಥಾಲಯ ಇಲಾಖೆ
  • ವಿಜಯ ಕರ್ನಾಟಕ
~.~
  • hpn ರವರ ಬ್ಲಾಗ್
  • Login or register to post comments
  • 654 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 6, 2008 - 6:20pm — Aravinda

ಉ: ಸುವರ್ಣ ಕರ್ನಾಟಕ ಅಂತರ್ಜಾಲ ವಾಹಿನಿ?

Aravinda's picture

ನಿಜವಾಗಲೂ ಯಾರೋ ಟೋಪಿ ಹಾಕಿ ದುಡ್ಡು ನುಂಗಿದ್ದಾರೆ. Smiling

ನಿಮ್ಮವನೇ,
ಅರವಿಂದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 6:36pm — uniquesupri

ಉ: ಸುವರ್ಣ ಕರ್ನಾಟಕ ಅಂತರ್ಜಾಲ ವಾಹಿನಿ?

uniquesupri's picture

ಕೋಟ್ಯಂತರ ರೂಪಾಯಿಯಾ? Smiling
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 7:34pm — hamsanandi

ಉ: ಸುವರ್ಣ ಕರ್ನಾಟಕ ಅಂತರ್ಜಾಲ ವಾಹಿನಿ?

hamsanandi's picture

ವಾರೆವ್ಬಾ Sad ಧನ್ಯ ಕರ್ನಾಟಕ ಮಾತೆ ! ಧನ್ಯ ಕರ್ನಾಟಕ ಸರ್ಕಾರ Sad :(

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 10:44pm — createam

ಉ: ಸುವರ್ಣ ಕರ್ನಾಟಕ ಅಂತರ್ಜಾಲ ವಾಹಿನಿ?

createam's picture

ಟೋಪಿ ಹಾಕ್ಸ್ಕೊಂಡಿರೋದು ನಾವು. ಕೋಟ್ಯಾಂತರ ರೂಪಾಯಿ ಗ್ಯಾರಂಟಿ ಖರ್ಚು ಮಾಡಿರ್ತಾರೆ. ಯಾರ್ಗೊ ಒಂದು ೧೦,೦೦೦ ರೂಪಾಯಿಗೆ ಕಾಂಟ್ರಾಕ್ಟ್ ಕೊಟ್ಟು ಕೋಟ್ಯಾಂತರ ರೂಪಾಯಿಗಳಿಗೆ ಬಿಲ್ ಮಾಡಿರ್ತಾರೆ. ತೆರಿಗೆ ಕಟ್ಟೋ ನಮ್ಮಂತವರ ದುಡ್ಡಿನಿಂದ ಕಿತ್ಕೊಂಡು ಜೇಬು ತುಂಬ್ಸ್ಕೊತಾರೆ. ಯಾರು ಯಾರಿಗೂ ಟೊಪಿ ಹಾಕಿರೋದಲ್ಲ, ಎಲ್ಲಾ ಸೇರ್ಸಿ ನಮಗೆ ತಲೆ ತಲಾಂತರಗಳಿಂದ ಹಾಕ್ಕೊಂಡು ಬಂದಿರೊ ಟೋಪಿ ಇದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 10:44pm — createam

ಉ: ಸುವರ್ಣ ಕರ್ನಾಟಕ ಅಂತರ್ಜಾಲ ವಾಹಿನಿ?

createam's picture

ಇದು ಅರವಿಂದ್ ಅವರಿಗೆ ಪ್ರತಿಕ್ರಿಯೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 11:10pm — Aravinda

ಉ: ಸುವರ್ಣ ಕರ್ನಾಟಕ ಅಂತರ್ಜಾಲ ವಾಹಿನಿ?

Aravinda's picture

ಈಗ ಆ ವೆಬ್ ಸೈಟ್ ನೋಡ್ತಾ ಇದ್ದೆ... ಅದನ್ನ ಮಾಡೋಕೆ ಯಾವುದೇ ಸರ್ವರ್ ಸೈಡ್ ಭಾಷೆಗಳನ್ನ ಉಪಯೋಗಿಸಿಲ್ಲ(PHP, Java, DotNet etc ) , ಹಾಗಾಗಿ ಈ ವೆಬ್ ಸೈಟ್ ಡೈನಾಮಿಕ್ ಅಲ್ಲ. ಮತ್ತೆ ಏನಾರು ಬದಲಾಯಿಸಬೇಕೆಂದರೆ ಕೋಡ್ ಲೆವೆಲ್ ಎಡಿಟ್ ಮಾಡಬೇಕಾಗುತ್ತೆ Smiling ಮತ್ತೆ ಅದನ್ನ ಮಾಡಿ ಕೊಟ್ಟವನ ಕಾಲು ಹಿಡೀತಾರೆನೋ Smiling
ಮತ್ತೆ ಅದೆಷ್ಟು ಕೋಟಿ ಖರ್ಚು ಮಾಡ್ತಾರೋ Smiling

ನಿಮ್ಮವನೇ,
ಅರವಿಂದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 7, 2008 - 9:10am — kalpana

ಉ: ಸುವರ್ಣ ಕರ್ನಾಟಕ ಅಂತರ್ಜಾಲ ವಾಹಿನಿ?

kalpana's picture

ಈ ಮಹಾನುಭಾವರೆ ವೆಬ್ಸೈಟು ಕಟ್ಟಿ ಕೊಟ್ಟಿದ್ದಾರೆ - http://www.bahugunatechnologies.com/Contact%20Us.htm . ಬೆಂಗಳೂರ್ನವರೆ, ಸ್ವಲ್ಪ ನೋಡ್ಕೊಳಿ ಹೇಳ್ತ್ನಿನಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಪದದಲ್ಲಿ ಚಿತ್ರ ಸೇರಿಸುವುದು ಹೇಗೆ?
  • ಫಾರಿನ್ ಪಾಲಿಸಿ: ಎಲ್ರೂ ಫಾರಿನ್...
  • ಮಾಂಧಾತನರಿತ ಸತ್ಯ
  • ಗ್ರಂಥಾಲಯ ಇಲಾಖೆಯ ವೆಬ್ಸೈಟು
  • ತೊಗರಿ ನುಚ್ಚಿನುಂಡೆ
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 154 ಅತಿಥಿಗಳು ಆನ್ಲೈನ್ ಇರುವರು.


ಜಾನಪದ ಶಿಷ್ಟಿಯಲಿ, ಸಂಪತ್ಸಮಷ್ಟಿಯಲಿ |
ಜ್ಞಾನಸಂಧಾನದಲಿ, ಮೌಲ್ಯ ಗಣನೆಯಲಿ ||
ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ |
ಆನಂದ ಧರೆಗಂದು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator