September 6, 2008 - 3:50am - ಹರಿ ಪ್ರಸಾದ್ ನಾಡಿಗ್
ಮಕ್ಕಳು ಮೊದಲ ಬಾರಿ ಚಿತ್ರ ಬಿಡಿಸಿದಾಗ, ಮೊದಲ ಬಾರಿ ಪೆನ್ನು ಹಿಡಿದು ಗೀಚಿದಾಗ ಅದನ್ನು ಜೋಪಾನ ತೆಗೆದಿಡುತ್ತೇವೆ, ಅಲ್ವ? ಇದೋ, ನನ್ನ ಮೊದಲ ಚಿತ್ರ - ಮಕ್ಕಳು ಪೆನ್ನು ಹಿಡಿದು ಬರೆಯುವುದ ಕಲೆತಂತೆ ಇವತ್ತು ಈ ಡಿಜಿಟಲ್ ಪೆನ್ನು ಹಿಡಿದು ಕಲೆಯುವಾಗ ಗೀಚಿದ ಮೊದಲ ಚಿತ್ರ! ಬಹಳ ದಿನಗಳ ನಂತರ ಗೊತ್ತು ಗುರಿಯಿಲ್ಲದೆ ಪರಿಚಯವಿಲ್ಲದ ಕಂಪ್ಯೂಟರ್ ಸಾಧನವೊಂದನ್ನು ಪ್ರಯತ್ನಿಸಿ ಕಲೆತದ್ದು ಖುಷಿಕೊಟ್ಟಿತು. ಇದನ್ನು ಸಂಪದದಲ್ಲಿ ತೆಗೆದಿಡುತ್ತಿದ್ದೇನೆ.
ಈ device ನಿನ್ನೆಯೇ ತಲುಪಿದರೂ ನೋಡಲಾಗಿರಲಿಲ್ಲ. ಈಗಷ್ಟೇ ಸ್ವಲ್ಪ ಹೊತ್ತಿನ ಮುಂಚೆ install ಮಾಡಿದೆ.
ಈ ಪೆರಿಫೆರಲ್ ಗ್ನು/ಲಿನಕ್ಸ್ ನಲ್ಲಿ ಬಹಳ ಚೆನ್ನಾಗಿ ಕೆಲಸ ಮಾಡುತ್ತಿದೆ. install ಮಾಡುವಲ್ಲಿ ಹೆಚ್ಚು ಕಷ್ಟವಾಗಲಿಲ್ಲ. ಮೇಲಿನ ಚಿತ್ರ ಕೂಡ ಇಂಕ್ ಸ್ಕೇಪಿನಲ್ಲಿ ಕೆಲವೇ ನಿಮಿಷಗಳೊಳಗೆ ಗೀಚಿದ್ದು.
ಈ ಪೆರಿಫೆರಲ್ ಗ್ನು/ಲಿನಕ್ಸ್ ನಲ್ಲಿ ಬಹಳ ಚೆನ್ನಾಗಿ ಕೆಲಸ ಮಾಡುತ್ತಿದೆ. install ಮಾಡುವಲ್ಲಿ ಹೆಚ್ಚು ಕಷ್ಟವಾಗಲಿಲ್ಲ. ಮೇಲಿನ ಚಿತ್ರ ಕೂಡ ಇಂಕ್ ಸ್ಕೇಪಿನಲ್ಲಿ ಕೆಲವೇ ನಿಮಿಷಗಳೊಳಗೆ ಗೀಚಿದ್ದು.
ಈ device ನನಗೆ ತಲುಪಿಸುವಲ್ಲಿ ಸಹಾಯ ಮಾಡಿದ ಹಂಸಾನಂದಿಯವರಿಗೆ ವಂದನೆ. ಜೊತೆಗೆ ಇದರ ಕುರಿತು ಹಾಗು ಗ್ನು/ಲಿನಕ್ಸ್ ಸುತ್ತ ಹಲವು ಚರ್ಚೆಗಳಿಗೆಳೆಯುತ್ತ ಆಗಾಗ ತಲೆ ತಿಂದರೂ ಬೇಸರ ಮಾಡಿಕೊಳ್ಳದ ತಂತ್ರಜ್ಞ ಶಿವುಗೆ ಕೂಡ!
0

- hpn ರವರ ಬ್ಲಾಗ್
- Login or register to post comments
- 795 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್
ಪರಿಚಯ
ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ಅದನ್ನು ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.
ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಇತ್ತೀಚಿನ ಪ್ರತಿಕ್ರಿಯೆಗಳು
ಈಗಿನಂತೆ ಆನ್ಲೈನ್ ಇರುವವರು...
ಈಗಿನಂತೆ 4 ಸದಸ್ಯರು ಮತ್ತು 103 ಅತಿಥಿಗಳು ಆನ್ಲೈನ್ ಇರುವರು.




RSS:
ಉ: ಮೊದಲ ಚಿತ್ರ
ಚೆನ್ನಾಗಿದೆ. ಎಲ್ಲಿ ಸಿಗುತ್ತೆ ಈ ಗುಳಿಗೆ(ಟ್ಯಾಬ್ಲೆಟ್) ? ಎಷ್ಟು ಖರ್ಚಾಗುತ್ತೆ?
~ಕಲ್ಪನ
ಉ: ಮೊದಲ ಚಿತ್ರ
wacom ಇದರಲ್ಲಿ ಒಳ್ಳೆ ಬ್ರ್ಯಾಂಡ್ (ಅಥವ ತುಂಬಾ ಪರಿಚಿತ ಬ್ರಾಂಡ್) . ಖರ್ಚು ನೀವು ಎಷ್ಟು ಖರ್ಚು ಮಾಡೊದಿಕ್ಕೆ ತಯಾರಿದೀರೋ ಅಷ್ಟು
. ಅಂದ್ರೆ ತುಂಬಾ ತರಹದ ಮಾಡೆಲ್‍ಗಳಿವೆ, ನಾನು ಒಂದು ತಗೊಬೇಕು ಅಂತ ತುಂಬಾ ದಿನದಿಂದ ತಗೊಬೇಕು ಅಂತ ಪ್ಲಾನ್ ಮಾಡ್ತಾನೇ ಇದೀನಿ, ಭಾರತಕ್ಕೆ ವಾಪಸ್ ಹೋಗೋ ಮುಂಚೆ ತಗೊಳೊದ್ಯ್ ಅಂತ ಸಮ್ನೆ ಇದಿನಿ. Amazon ನಲ್ಲಿ ಹುಡುಕಿ ಒಂದು idea ಬರಬಹುದು.
ಉ: ಮೊದಲ ಚಿತ್ರ
ನಿಜ. ನನ್ನ ಹತ್ತಿರ ಇರುವುದು ಎಂಟ್ರಿ ಲೆವೆಲ್ ಮಾಡೆಲ್. ಸುಮಾರು $88. Wacom ಬಂಬು, ಅಲ್ಲಲ್ಲ Wacom bamboo.
ಲಕ್ಷಗಟ್ಟಲೆ ಬೆಲೆ ಇರುವ ಮಾಡೆಲ್ ಗಳೂ ಇವೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಮೊದಲ ಚಿತ್ರ
ಹರಿ, ಕಾರ್ಟೂನ್ ಸೂಪರ್. ನಾನು ಒಂದು ತೊಗೊಳೊ ಮುಂಚೆ ನಿಮ್ಮ ತಲೆ ತಿಂತೀನಿ
ಉ: ಮೊದಲ ಚಿತ್ರ
sure ಸಾರ್.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಮೊದಲ ಚಿತ್ರ
ಬೊಂಬಾಟ್ !
ನಂಗೂ ಒಂದು ಮಾತ್ರೆ ಬೇಕಲ್ಲ...
ಹಂಸಾನಂದಿಯವರೆ/ನಾಡಿಗರೆ ,
ಸ್ವಲ್ಪ ಮಾಹಿತಿ ಕೊಡಿ...
ಉ: ಮೊದಲ ಚಿತ್ರ
ಸರ್, ಮಾತ್ರೆ ಅಂತೆಲ್ಲ ಅನ್ಬ್ಯಾಡ್ರೀ... ಅದನ್ನ ದಿನಾ ಮುಂದಿಟ್ಟುಕೊಂಡು ಕೆಲ್ಸಾ ಮಾಡ್ಬೇಕು!
ನಾ ಇದನ್ನ ತಗೊಂಡಿದ್ದರ ಉದ್ದೇಶ ಕಾರ್ಟೂನ್ ಬರೆಯೋದಲ್ಲ ಬೇರೆ ಒಂದು ಬಹುಮುಖ್ಯ ಕಾರಣ ಇದೆ
ಆ ಕೆಲಸ ಮುಗಿದ ಮೇಲೆ ನಿಮ್ಮೆಲ್ಲರಿಗೂ ತಿಳಿಸುವೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಮೊದಲ ಚಿತ್ರ
ಏನ್ರೀ ಹೀಗೆ suspense ಇಡ್ತೀರ...ಅದೇನು ಅಂಥ ಬೇಗ ಹೇಳಿ...
ಜನಕ್ಕೆ ಉಪಯೋಗ ಆಗೋ ಅಂಥದ್ದೇ ಅಂಥ ಗೊತ್ತು
--ಶ್ರೀ
ಉ: ಮೊದಲ ಚಿತ್ರ
hpnರು ತಮ್ಮ ಕನಸಿನ ಕನ್ಯೆಯ ಚಿತ್ರ ಬಿಡಿಸಬೇಕಂತ "ಗುಳಿಗೆ" ತೊಗೊಂಡಿದ್ದಾರಂತೆ. ಇದರಿಂದ ಅವರ ಅಮ್ಮನಿಗೆ ಸೊಸೆ ಹುಡುಕುವಲ್ಲಿ ಸಹಾಯವಾಗಲೀಂತ ಅಂತೆ.
~ಕಲ್ಪನ
ಉ: ಮೊದಲ ಚಿತ್ರ
typography ಮೇಲೆ ಏನೋ ಮಾಡ್ತಾ ಇರ್ತಿರ
ಉ: ಮೊದಲ ಚಿತ್ರ
ಮಸ್ತ್ ಇದೆ ಈ ವ್ಯಂಗ್ಯ ಚಿತ್ರ ಹೆಚ್.ಪಿ.ಎನ್ನರೆ...!!
-ಯುವಪ್ರೇಮಿ
ಉ: ಮೊದಲ ಚಿತ್ರ
ತುಂಬ ಚೆನ್ನಾಗಿದೆ ಚಿತ್ತಾರ.
ಮತ್ಯಾಕ್ ತಡ HPN, ಶುರು ಹಚ್ಚಿಕೊಳ್ಳಿ, ಹೊಸದೊಂದು, ಕಾರ್ಟೂನ್ ಸೈಟ್... :-)
ನಂಗೆ ಕಾರ್ಟೂನ್ ಓದೋದು ತುಂಬ ಇಸ್ಟ..
ಉ: ಮೊದಲ ಚಿತ್ರ
ಬೆಲೆಪಟ್ಟಿ ಇಲ್ಲಿ ಸಿಗ್ತು ...
http://www.wacom.co.in/price/price.php
ಯೂಎಸ್ಸಾಫೆ ನಲ್ಲಿ ಇನ್ನು ಕಡ್ಮೆ ರೇಟಿಗೆ ಗಿಟ್ಟ್ಬೋದೆನೋಪ್ಪಾ
--_ರಾಘವ_
http://raghavan.vinay.googlepages.com
ಉ: ಮೊದಲ ಚಿತ್ರ
ಕಾರ್ಟೂನು ತುಂಬಾ ಚೆನ್ನಾಗಿದೆ...
ಅಂದ ಹಾಗೆ, ಹೊಸ ಕಾರ್ಟೂನು ವೆಬ್ ಸೈಟ್ ಶುರು ಮಾಡೋ ಪ್ಲಾನ್ ಇದೆಯಾ?
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.