ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ದ್ವಿಭಾಷಾ ಅಕ್ಷರರೂಪ? ಕನ್ನಡಿಗರು ಈಗ ಹತ್ತು ಹೆಜ್ಜೆ ಹಿಂದಕ್ಕೆ!

June 5, 2008 - 12:36am — hpn

"ಇವತ್ತು ಸರಕಾರ ನೋಟಿಫಿಕೇಶನ್ ಹೊರಡಿಸಿದೇರಿ. ಬೈ-ಲಿಂಗ್ಯುಯಲ್ ಫಾಂಟ್ಸ್ ಅಂತೆ"
ಪತ್ರಕರ್ತ ಸ್ನೇಹಿತರೊಬ್ಬರು ಫೋನಿನಲ್ಲಿ ತಿಳಿಸಿದರು.

"ಹಾಂ?"
ನಿದ್ರೆಯಲ್ಲಿದ್ದೀನಾ ಅನ್ನಿಸಿತು.

ಒಂದೆರಡು ಕ್ಷಣಗಳ ನಂತರವೇ ಕ್ಲಿಯರ್ ಆಗಿದ್ದು: ಎಚ್ಚರವಾಗಿಯೇ ಇದ್ದೀನಿ, ಫೋನಿನಲ್ಲಿ ಆ ಕಡೆಯಿಂದ ಬಂದ ಮಾಹಿತಿಯೂ ನಿಜವೇ ಎಂಬುದು!

ನನಗೆ ತಲೆಯಲ್ಲಿ,
"ಏನಿದು? ಇದ್ಯಾಕೆ ಈಗ ಇಂತದ್ದನ್ನು ಹೊರತರುತ್ತಿದ್ದಾರೆ?

ಹೋಗಲಿ, ಇದೇನು ಬೈಲಿಂಗ್ಯುಯಲ್ ಫಾಂಟ್? ಈಗಾಗಲೇ ಪ್ರಪಂಚದಾದ್ಯಂತ ಎಲ್ಲರಿಂದಲೂ ಬಳಕೆಯರೋ, ವಿಶ್ವವಿಡೀ ಮಾನ್ಯತೆ ಪಡೆದಿರೋ ಯೂನಿಕೋಡ್ ಹಾಗೂ ಅದರಲ್ಲಿನ ಮಲ್ಟಿಲಿಂಗ್ಯುಯಲ್ ಫಾಂಟುಗಳೇ ಇರುವಾಗ!

ಅದೂ ಹಳೆಯ ಎನ್ಕೋಡಿಂಗ್! ಇದನ್ನು ಪ್ರಪಂಚದ ಇನ್ನೆಲ್ಲೂ ಸಪೋರ್ಟ್ ಮಾಡೋದಿಲ್ಲ, ಯಾವ ತಂತ್ರಾಂಶದಲ್ಲೂ ನೇಟಿವ್ ಆಗಿ ಸಪೋರ್ಟ್ ಮಾಡೋದಿಲ್ಲ. ಅತ್ತ ತಮಿಳು, ತೆಲುಗು, ಮಲಯಾಳ, ಹಿಂದಿ ಕಂಪ್ಯೂಟರಿನಲ್ಲಿ ವಿಜೃಂಭಿಸುತ್ತಿರುವಾಗ ಮೊದಲೇ ಹಿಂದಿರುವ ಕನ್ನಡ ಇನ್ನೂ ಹಿಂದುಳಿಯೋದಿಲ್ಲವೆ?"
ಎಂದೆಲ್ಲಾ ಆಲೋಚನೆಗಳು ಹರಿದಾಡಿದವು.

ಗೂಗಲ್ ಯೂನಿಕೋಡ್ ಬಳಸುತ್ತದೆ. ಯಾಹೂ ಯೂನಿಕೋಡ್ ಬಳಸುತ್ತದೆ. ಪ್ರಪಂಚದ ಎಲ್ಲ ಮಾನ್ಯತೆ ಪಡೆದಿರುವ ತಂತ್ರಾಂಶಗಳು ಯೂನಿಕೋಡ್ ಬೆಂಬಲದೊಂದಿಗೆ ಹೊರಬರುತ್ತಿವೆ. ನೀವೀಗ ಇಲ್ಲಿ ಓದುತ್ತಿರುವ ಕನ್ನಡವೂ ಯೂನಿಕೋಡ್ ಮೂಲಕ! (ನಾಳೆ ಗೂಗಲ್ಲಿನಲ್ಲಿ "ದ್ವಿಭಾಷಾ ಅಕ್ಷರರೂಪ" ಎಂದು ಸರ್ಚ್ ಮಾಡಿದರೆ ಯೂನಿಕೋಡ್ ನಲ್ಲಿರುವ ಈ ಪುಟ ಸಿಗತ್ತೆ!)

ಭಾಷೆಗಳನ್ನು ಕಂಪ್ಯೂಟರ್ ಜಗತ್ತಿನಲ್ಲಿ ಇಂಗ್ಲೀಷಿಗೆ ಸಮವಾಗಿ ತರಲು ಇರುವ ಹೆದ್ದಾರಿ ಯೂನಿಕೋಡ್ ಎನ್ನಬಹುದು. ಇಷ್ಟೆಲ್ಲದರ ನಡುವೆಯೂ ಕರ್ನಾಟಕದ ಸರಕಾರ ಹತ್ತು ಹೆಜ್ಜೆ ಹಿಂದಕ್ಕೆ ಇಡುತ್ತಿರುವುದು ನೋಡಿದರೆ ಸುಮಾರು ಪ್ರಶ್ನೆಗಳೇ ಕಾಡುತ್ತವೆ.

  • ಕನ್ನಡ
  • ಕರ್ನಾಟಕ ಸರಕಾರ
  • ದ್ವಿಭಾಷಾ ಅಕ್ಷರರೂಪ?
  • ನುಡಿ
  • ಫಾಂಟ್ಸ್
  • ಶಿಷ್ಟತೆ
~.~
  • hpn ರವರ ಬ್ಲಾಗ್
  • Login or register to post comments
  • 633 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 5, 2008 - 2:05am — ಕೇವೆಂ

ಉ: ದ್ವಿಭಾಷಾ ಅಕ್ಷರರೂಪ? ಕನ್ನಡಿಗರು ಈಗ ಹತ್ತು ಹೆಜ್ಜೆ ಹಿಂದಕ್ಕೆ!

ಕೇವೆಂ's picture

ಇನ್ನೂ ಗೆಜೆಟ್ಟೆಗೆ ಸೇರಿಸಿಲ್ಲ. ೨೧ರ ತನಕ ಕಾಲ ಇದೆ. ನೀವೆ ಒಂದು ಪತ್ರದ ಕರಡು ತಯಾರು ಮಾಡಿ . ನಾವೆಲ್ಲಾ ಸಹಿ ಹಾಕಿ ಎಲ್ಲಾರಿಗು ಒಂದು ಕಾಪಿ ಕೊಟ್ಟು ಬರೋಣ. ಮುಮಂ( ಸಿ ಎಂ) ಗೂ ಕಳಿಸಿದರಾಯ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2008 - 12:30pm — girish.rajanal

ಉ: ದ್ವಿಭಾಷಾ ಅಕ್ಷರರೂಪ? ಕನ್ನಡಿಗರು ಈಗ ಹತ್ತು ಹೆಜ್ಜೆ ಹಿಂದಕ್ಕೆ!

girish.rajanal's picture

ಹೌದು ಸರ್‍ ಈ ರೀತಿಲಾದರೂ ಉನಿಕೋಡ್ ಬಳಸೋ ಹಾಗೆ ಮತ್ತು ಅದರ ಬಗ್ಗೆ ಅರಿವು ಮೂಡಿದಬಹುದು.

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2008 - 12:12pm — sprasad

ಉ: ದ್ವಿಭಾಷಾ ಅಕ್ಷರರೂಪ? ಕನ್ನಡಿಗರು ಈಗ ಹತ್ತು ಹೆಜ್ಜೆ ಹಿಂದಕ್ಕೆ!

sprasad's picture

ನಿಜಕ್ಕೂ ಇದೊಂದು ಖೇದದ ವಿಷಯವೆ ಸರಿ!! ಎಲ್ಲೆಲೋ ಯೂನಿಕೋಡ್ ರಾರಾಜಿಸುತ್ತಿರುವಾಗ. ASCII ಬಳಸುತ್ತಿದ್ದ ಎಲ್ಲಾ ತಾಣಗಳು ಯೂನಿಕೋಡ್‍ಗೆ ಬದಲಾಗುತ್ತಿದ್ದರೆ, ಈ ನಮ್ಮ ರಾಜ್ಯ ಸರ್ಕಾರ ಅದೆ ಹಳೆ ಗಂಡನ ಪಾದಕ್ಕೆ ಮೊರೆ ಹೋಗುತ್ತಿದೆ!! ಐಟಿಯ ರಾಜಧಾನಿ ಎನಿಸಿಕೊಂಡ ಬೆಂಗಳೂರು ಪಟ್ಟಭದ್ರ ಹಿತಾಸಕ್ತಿಗಳ ದೆಸೆಯಿಂದ ಈ ಮಟ್ಟದಲ್ಲಿ 'ಹಿಂದುವರೆಯುವುತ್ತಿರುವುದಕ್ಕೆ" ಏನನ್ನಬೇಕೋ ಗೊತ್ತಾಗುತ್ತಿಲ್ಲಾ!!
ಹರಿ, ಇದನ್ನು ತಡೆಯಲು ಏನಾದರೂ ಉಪಾಯವಿದೆಯೆ!!?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2008 - 4:24pm — pavanaja

ಉ: ದ್ವಿಭಾಷಾ ಅಕ್ಷರರೂಪ? ಕನ್ನಡಿಗರು ಈಗ ಹತ್ತು ಹೆಜ್ಜೆ ಹಿಂದಕ್ಕೆ!

pavanaja's picture

ಖಂಡಿತ ಇದೆ. ಪ್ರತಿಯೊಬ್ಬರೂ ಸರಕಾರವು ನೀಡಿದ ವಿಳಾಸಕ್ಕೆ ಪತ್ರ ಬರೆಯಬೇಕು. ಪತ್ರ ತರ್ಕಬದ್ಧವಾಗಿರಲಿ. ಹಾಗೆಯೇ ನನ್ನ ಲೇಖನ ಓದಿ - http://sampada.net/blog/pavanaja/04/06/2008/9119

-ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 14, 2008 - 5:31pm — pavanaja

ಉ: ದ್ವಿಭಾಷಾ ಅಕ್ಷರರೂಪ? ಕನ್ನಡಿಗರು ಈಗ ಹತ್ತು ಹೆಜ್ಜೆ ಹಿಂದಕ್ಕೆ!

pavanaja's picture

ನನ್ನ ಪತ್ರ ಇಲ್ಲಿದೆ. ನೀವೂ ಪ್ರತಿಭಟಿಸಿ.

-ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 7, 2008 - 4:58am — hpn

ಉ: ದ್ವಿಭಾಷಾ ಅಕ್ಷರರೂಪ? ಕನ್ನಡಿಗರು ಈಗ ಹತ್ತು ಹೆಜ್ಜೆ ಹಿಂದಕ್ಕೆ!

hpn's picture

ಕೆಲವು ಟಿ ವಿ ಚ್ಯಾನಲ್ಲುಗಳು ಈ ಬಗ್ಗೆ ಸುದ್ದಿಯಲ್ಲಿ ಪ್ರಸಾರ ಮಾಡುವ ಸಂಭವ ಇದೆ. ಟಿ ವಿ ಚ್ಯಾನಲ್ಲುಗಳಲ್ಲಿರುವ ಸಂಪದಿಗರೇ ಕೆಲವರು ಈ ಬಗ್ಗೆ ಸ್ವತಃ ಆಸಕ್ತಿವಹಿಸಿ ನನಗೆ ಮೆಸೇಜ್ ಮಾಡಿದ್ದರು.

ಅಲ್ಲದೆ ನಾವುಗಳು ಕೆಲವರು ಸೇರಿ ಒಂದು ಪೆಟಿಶನ್ ಹಾಗೂ ಡಾಕ್ಯುಮೆಂಟ್ ರೆಡಿ ಮಾಡುತ್ತಿದ್ದೇವೆ. ಆಸಕ್ತರು ಇದರಲ್ಲಿ ಕೈ ಜೋಡಿಸಬಹುದು. ಹೆಚ್ಚಿನ ಮಾಹಿತಿಗೆ ನನಗೆ ಮೇಯ್ಲ್ ಮಾಡಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2008 - 1:04pm — mahesha

ಉ: ದ್ವಿಭಾಷಾ ಅಕ್ಷರರೂಪ? ಕನ್ನಡಿಗರು ಈಗ ಹತ್ತು ಹೆಜ್ಜೆ ಹಿಂದಕ್ಕೆ!

mahesha's picture

ಕರ್ನಾಟಕ ನೋಡಿದರೆ ಅಯಿಟಿ ಮಂದಿಯ ದೊಡ್ಡೂರು..

ನಾಳೆ ಕರ್ನಾಟಕ ಸರಕಾರ ಹಿಂದಿಯಲ್ಲಿ ಏನಾರ ಬರೇಬೇಕಾದರೆ trilingual ಪಾಂಟ್ ಮಾಡಿಕೋತಾರ? Smiling

ಅಯ್ಯೋ ಜಗತ್ತೆಲ್ಲ ಒಂದು ಕಡೆ ಹೋದರೆ ಇವರಿಗೆ ಏನು ದಡ್ಡತನ..

ಈ ಪಾಂಟನ್ನು ನಾವು ಹೊರದೇಶಕ್ಕೆ ಹೋದಾಗ ಓದೋದು ಹೇಗೆ? ಮೊದಲೇ firefoxಅಲ್ಲಿ ಪಾಂಟ್ ಕಿರೀಕು!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2008 - 4:00pm — ishwar.shastri

ಉ: ದ್ವಿಭಾಷಾ ಅಕ್ಷರರೂಪ? ಕನ್ನಡಿಗರು ಈಗ ಹತ್ತು ಹೆಜ್ಜೆ ಹಿಂದಕ್ಕೆ!

ishwar.shastri's picture

ಕುತ್ತಿಗೆ ಮೇಲೆ ತಲೆ ಇರುವವರು ಯಾರೂ ಸರಕಾರಿ ಕೆಲಸದಲ್ಲಿ ಇರುವುದಿಲ್ಲ. ಯಾರೂ ಬಳಸದ/ ಇಷ್ಟಬಟ್ಟು ಬಳಸಲಸಾಧ್ಯವಾದ ನುಡಿ ತಂತ್ರಾಶದ ಬದಲಿಗೆ ಯೂಸರ್ ಪ್ರೆಂಡ್ಲಿಯಾದ ಬರಹ ತಂತ್ರಾಶವನ್ನು ಆಳವಡಿಸಿಕೊಳ್ಳುವಂತೆ ನಾನು ಸರಕಾರಿ ಸೇವೆಯಲ್ಲಿರುವಾಗ ಬರೆದುಕೊಂಡಿದ್ದೆ. ಮುಂದಿನ ದಿನಗಳಲ್ಲಿ ಕನ್ನಡವು, ತನ್ಮೂಲಕ ಕನ್ನಡಿಗರು ಬದುಕಿ ಇರಬೇಕಾದಲ್ಲಿ ಈ ಕೃಮ ಅವಶ್ಯಕ ಎಂದು ಭಾವಿಸಿದ್ದೆ.
ಈಗ ಯಾವುದೋ ಹೊಸರೋಗ ಸರಕಾರದ ತಲೆಗೆ ಹತ್ತಿದೆ ಎಂದೆನಿಸುತ್ತಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಯೂನಿಕೋಡ್
  • ದಟ್ಸ್ ಕನ್ನಡ ಮತ್ತು ಕನ್ನಡ ಪ್ರಭ ಸೈಟುಗಳನ್ನು ನೀವೀಗ ಯೂನಿಕೋಡ್ ನಲ್ಲಿ ಓದಬಹುದು...
  • ಕನ್ನಡಪ್ರಭ ಬದಲಾಗಿದೆ, ನೋಡಿದಿರಾ?
  • ಬರಲಿದೆ, ಮಗದೊಂದು ಕನ್ನಡ ತಂತ್ರಾಂಶ...
  • ನಮಸ್ಕಾರ
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮಾ(ನವ) ಜೀ(ವನ)ದ ಕಥೆ:
  • ಕನಸಿನ ಮಾತುಗಳು
  • ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
  • ಜಾತ್ಯತೀತರೆಂಬ ಕೋಮುವಾದಿಗಳು (ಭಾಗ-೨)
  • ಹಣೆಯಲ್ಲಿ ಬರೆದದ್ದು
  • ಬೆಚ್ಚಗೆ ನಿನ್ನ ನೆನಪು
  • ಲಿಂಬಿಹಣ್ಣು -೨
  • ಲಿಂಬಿಹಣ್ಣು
  • ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
  • ನನ್ನ ಲೌಕಿಕ ಕರ್ಮಠ ಧರ್ಮ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:16pm
  • harshab
    ಉ: ಓದಬೇಕು & ಓದಿಕೊಳ್ಳಬೇಕು
    August 20, 2008 - 1:13pm
  • ASHOKKUMAR
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:12pm
  • harshab
    ಉ: ಓದಬೇಕು & ಓದಿಕೊಳ್ಳಬೇಕು
    August 20, 2008 - 1:12pm
  • ASHOKKUMAR
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:11pm
  • harshab
    ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
    August 20, 2008 - 1:11pm
  • mahesha
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:07pm
  • mahesha
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:06pm
  • uniquesupri
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:01pm
  • mahesha
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:01pm
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 40 ಅತಿಥಿಗಳು ಆನ್ಲೈನ್ ಇರುವರು.


ಕುಲಗೆಟ್ಟವರ ಚಿಂತೆ | ಒಳಗಿರ್ಪರಂತಲ್ಲ |
ಕುಲಗೆಟ್ಟು ಶಿವನ ಮರೆಹೊಕ್ಕು ಋಷಿಗಳು |
ಕುಲವಾದರಯ್ಯ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator