ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಸಿಹಿ ಕಹಿ
ನಮ್ಮ ರಾಜ್ಯ , ಸಂಸ್ಕೃತಿ ಇವೆರಡನ್ನು ನೋಡಿದರೂ ತುಂಬಾ ಖುಷಿಯಾಗುತ್ತೆ , ನಾವು ಕನ್ನಡಿಗರು ಅಂತ ಹೇಳಿಕೊಳ್ಳಕ್ಕೆ ಹೆಮ್ಮೇನೂ ಆಗುತ್ತೆ. ಆದರೆ ಇದನ್ನ ಇನ್ನೊಂದು ರೀತಿಯಿಂದ ನೋಡಿದರೆ ಸ್ವಲ್ಪ
ಬೇಜಾರೂ ಆಗೋದು ಅಷ್ಟೇ ನಿಜ. ಹೇಳುವುದಕ್ಕೆ ಬಹಳಷ್ಟಿದೆ ಆದರೆ ಸದ್ಯಕ್ಕೆ ಮನಸ್ಸಿಗೆ ಹೊಳೆದಿದ್ದನ್ನ ಬರೆಯುತ್ತಾ ಇದ್ದೀನಿ -
೧. ನಮ್ಮ ಹೊಂದಾಣಿಕೆ:
ನಾವು ತುಂಬಾ ಉದಾರಿಗಳು - ಯಾರೇ ಯಾವುದೇ ದೇಶ/ರಾಜ್ಯ ದಿಂದ ಬಂದರೂ ಅವರ ಜೊತೆ ಸಲೀಸಾಗಿ ಹೊಂದಿಕೊಳ್ತೀವಿ. ಅವರು ನಮ್ಮ ಮನೆಯವರೇನೋ ಅನ್ನೋ ಅಷ್ಟರ ಮಟ್ಟಿಗೆ ಬೆರೆತು
ಹೊಗುತ್ತೀವಿ.
ಆದರೆ ಇದು ಅಲ್ಲೀಗೇ ನಿಲ್ಲೊದಿಲ್ಲ , ಅವರಿಗೆ ನಮ್ಮ ಭಾಷೆ ಸಂಸ್ಕೃತಿಯನ್ನು ಪರಿಚಯ ಮಾಡಿಸೋದು ಬಿಟ್ಟು ಅವರ ಭಾಷೆಯನ್ನ ನಾವು ಕಲೀತಿವಿ!! ಈ ವಿಚಿತ್ರ ನಾನು ನೋಡಿರೋದು ಇಲ್ಲಿ ಮಾತ್ರ. ಅದಕ್ಕೆ
೭೫% ಬೆಂಗಳೂರಿಗರಿಗೆ ತಮಿಳು, ತೆಲುಗು ಬರೋದು!!!!
ನಾವು ಯಾರಾದ್ರೂ ಉತ್ತರ ಭಾರತೀಯ ಸ್ನೆೇಹಿತರನ್ನ ನೋಡಿದ್ರೆ ನಮ್ಮ ಬಾಯಲ್ಲಿ "ಏನಪ್ಪಾ ಹೆಂಗಿದ್ದೀಯಾ?" ಅಂತಾ ಬರೊಲ್ಲ. ನಮ್ಮ ಬಾಯಲ್ಲಿ ಬರೋದು "ಕೈಸೇ ಹೋ ಭಾಯಿ?"
೨. ನಮ್ಮ ವೈಚಾರಿಕತೆ :
ತಮಿಳು ನಾಡು, ಆಂಧ್ರ ಕ್ಕೆ ಹೋಲಿಸಿದರೆ ನಮ್ಮ ಜನ ಸುಲಭವಾಗಿ ಮರುಳು ಆಗೋದಿಲ್ಲ!!. ಇದಕ್ಕೆ ಸಾಕ್ಷಿ ನಮ್ಮ ರಾಜಕೀಯದಲ್ಲಿ ಇನ್ನೂ ಯಾವ ಸಿನಿಮಾ ನಟನೂ ಮುಖ್ಯಮಂತ್ರಿ ಆಗಿಲ್ಲ!!!
ಸಿನಿಮಾ ಡೈಲಾಗ್ ಹೊಡೆದು ಜನರನ್ನ ಗೂಬೆ ಮಾಡಕ್ಕೆ ನಾವು ಬಿಡೋದಿಲ್ಲ.
ಆದರೆ ಅದೇ ನಮಗೆ ಶಾಪ ಸಹ - ನಮ್ಮಲ್ಲಿ ಯಾವುದೇ ಒಬ್ಬ ನಾಯಕ ಇಲ್ಲ. ಅದಕ್ಕೇ ನಮ್ಮದೇ ಆದ ಪ್ರಾದೇಶಿಕ ರಾಜಕೀಯ ಪಕ್ಷ ಇಲ್ಲ. ನಮ್ಮ ಎಲ್ಲಾ ಮುಖ್ಯಮಂತ್ರಿಗಳು ಕೇಳೋದು ಹೈ-ಕಮ್ಯಾಂಡ್
ಮಾತನ್ನೇ ಹೊರೆತು ನಮ್ಮ ಮಾತನ್ನಲ್ಲ. ಸೆಂಟ್ರಲ್ ಗವರ್ನಮೆಂಟನ್ನ ಅಲ್ಲಾಡಿಸಿ ಕೆಲಸ ತೊಗೊಳ್ಳೋ ಶಕ್ತಿ ನಮ್ಮ ರಾಜ್ಯಕ್ಕಿಲ್ಲ.
ತಮಿಳಿನಷ್ತೇ ಯಾಕೆ ಅದಕ್ಕಿಂತಲೂ ಪ್ರಾಚೀನ, ಸಮೃಧ್ಧವಾದ ಕನ್ನಡಕ್ಕೆ ಶಾಸ್ತ್ರೀಯ ಸ್ಠಾನ ಇನ್ನೂ ಸಿಗದೇ ಇರೋದು!!!.
ಇನ್ನೂ ಇದೆ..ಮುಂದೆ ಬರೆಯುತ್ತೇನೆ ...
ಮುಗಿಸುವುದಕ್ಕೆ ಮುನ್ನ -
ಏಳು ಜ್ಣಾನಪೀಠ ಪ್ರಶಸ್ತಿ ಪಡೆದ ಕನ್ನಡದ ಸಾಹಿತ್ಯ ಎಲ್ಲಿ ನಿಂತ ನೀರಾಯಿತೋ, ಐ.ಟಿ , ಬಿ.ಟಿ, ಜಾಗತೀಕರಣ ಎಲ್ಲಿ ನಮ್ಮ ಸಾಹಿತ್ಯವನ್ನೂ , ಸಂಸ್ಕೃತಿಯನ್ನೂ ನುಂಗಿ ಹಾಕುತ್ತೋ ಅನ್ನೋ ಭಯದಲ್ಲಿದ್ದಾಗ ಸಂಪದವನ್ನು ನೋಡಿ ತುಂಬಾ ಸಂತೋಷ ಆಯಿತು. ಇಲ್ಲಿ ಇರುವ ಲೇಖನ , ಚರ್ಚೆ, ಕವನ ನೋಡಿದಾಗ ಅನ್ನಿಸುತ್ತೆ , ಇದೇ ಐ.ಟಿ ನಮ್ಮ ಸಾಹಿತ್ಯವನ್ನ ಪುನರ್ಚೇತನಗೊಳಿಸೋ ಶಕ್ತಿ ಅಂತ!!. ಕೇವಲ ಪ್ರಜಾವಾಣಿ, ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ "ಒದುಗರ ಕಾಲಂ"ನ ಎರಡು ಮೂರು ಪ್ಯಾರಾ ಬಿಟ್ಟರೆ ಬಹಳಷ್ತು ಜನ ಏನು ಹೇಳ್ತಾರೆ , ಏನು ಯೊಚಿಸ್ತಾರೆ, ಅವರ ಅಭಿರುಚಿ ಏನು ಅನ್ನೋದು ತಿಳಿದೇ ಇರಲಿಲ್ಲ. ನಾನು ಕನ್ನಡದಲ್ಲಿ ಕೊನೆಯದಾಗಿ ಬರೆದಿದ್ದು ನನ್ನ ೧೦ನೇ ಕ್ಲಾಸಿನ ಕನ್ನಡ ಪರೀಕ್ಷೆಯನ್ನ!!! . ಅದಾದ ಮೇಲೆ ಇಂಜಿನಿಯರಿಂಗ್ - ಅಲ್ಲಿ ಕನ್ನಡವೇ ಇಲ್ಲ.
ನಾನು ಪತ್ರಿಕೆಗೆ ಬರೆದು ಅದು ಪ್ರಕಟ ಆಗೋದು ದೂರದ ಮಾತು...ಕೆಲಸದ ಸಲುವಾಗಿ ಪರದೇಶಕ್ಕೆ ಬಂದ ಮೇಲೆ ಮತ್ತೆ ಕನ್ನಡದಲ್ಲಿ ಬರೆಯೋದಕ್ಕೆ, ಓದುವುದಕ್ಕೆ ಸಾಧ್ಯವಾದದ್ದು ಸಂಪದದಂಥಾ ವೇದಿಕೆಯಿಂದ.
ಕನ್ನಡದಲ್ಲಿ ಓದಿ,ಬರೆದು ವಿಚಾರ ಮಾಡಿ ನಮ್ಮ ಸಾಹಿತ್ಯವನ್ನೂ ಸಂಸ್ಕೃತಿಯನ್ನೂ ಎಲ್ಲೆಡೆ ಹರಡುತ್ತಿರುವ ನನ್ನ ಎಲ್ಲಾ ಕನ್ನಡ ಮಿತ್ರರಿಗೂ ನನ್ನ ಪ್ರೀತಿಯ ವಂದನೆಗಳು.....

- hk ರವರ ಬ್ಲಾಗ್
- Login or register to post comments
- 133 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಸಿಹಿ ಕಹಿ
ಸರಿಯಾಗಿ ಗ್ರಹಿಸಿದ್ದೀರಿ ಎಚ್.ಕೆ. ಅವರೇ.
ಕನ್ನಡಿಗರ ಬಗ್ಗೆ ಏನೇ ಹೇಳಿದರೂ, ಕನ್ನಡ ಉಪೇಕ್ಷೆಗೆ ಒಳಗಾಗುತ್ತದೆ ಎಂದು ಯಾರು ಎಷ್ಟೇ ಗಾಬರಿಯಾದರೂ ಈ ಭಾಷೆ ಉಳಿಯುತ್ತದೆ, ಬೆಳೆಯುತ್ತದೆ, ಕಾಲನ ಸವಾಲುಗಳನ್ನು ಗೆದ್ದು ನಿಲ್ಲುತ್ತದೆ ಕಣ್ರಿ. ಏಕೆಂದರೆ, ಕನ್ನಡ ಒಂದು ಜೀವಂತ ಭಾಷೆ. ಹೀಗಾಗಿ ಅದು ಚಲನಶೀಲ. ನಾವು ಕನ್ನಡಿಗರ ಲೋಪದೋಷಗಳ ಪಟ್ಟಿ ಮಾಡಬಹುದು. ಆದರೆ, ಅವರ ನಡುವೆಯೇ ಕ್ರಿಯಾಶೀಲರು ಕಾಲಕಾಲಕ್ಕೆ ಎದ್ದು ನಿಂತಿದ್ದಾರೆ. ಭಾಷೆಯ ಸತ್ವಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಮೊದಲು ಸಂಸ್ಕೃತ ಕನ್ನಡವನ್ನು ನುಂಗಿನೊಣೆಯುವ ಭೀತಿ ಒಡ್ಡಿತ್ತು. ಆದರೆ, ಸಂಸ್ಕೃತವನ್ನು ಕನ್ನಡ ಚೆನ್ನಾಗಿ ಜೀರ್ಣಿಸಿಕೊಂಡು ಸಮೃದ್ಧವಾಯಿತು. ಇವತ್ತು ಸಂಸ್ಕೃತ ಗುಪ್ತವಾಗಿದೆ. ಕನ್ನಡ ಮೆರೆಯುತ್ತಿದೆ.
ನಂತರ ಬಂದಿದ್ದು ಉರ್ದು. ನೂರಾರು ವರ್ಷಗಳ ಕಾಲ ಮುಸ್ಲಿಂ ಅರಸರು ಈ ನೆಲವನ್ನು ಆಳಿದರೂ ಉಳಿದಿದ್ದು ಕನ್ನಡವೇ. ಉರ್ದು ಮುಸ್ಲಿಂರ ಮನೆಭಾಷೆಯಾಗಿ ಮಾತ್ರ ಉಳಿದುಬಿಟ್ಟಿತು.
ಈಗ ಇಂಗ್ಲಿಷ್ ಬಂದಿದೆ. ತಂತ್ರಜ್ಞಾನದ ಭಾಷೆಯಾಗಿ ಅದ್ಭುತವಾಗಿ ಬೆಳೆದಿದೆ. ಆದರೆ, ಕನ್ನಡ ಅದನ್ನೂ ಜೀರ್ಣಿಸಿಕೊಂಡು ತನ್ನತನ ಉಳಿಸಿಕೊಳ್ಳುತ್ತದೆ. ಸಂಪದ ಹಾಗೂ ಇತರ ಕನ್ನಡ ತಾಣಗಳೇ ಇದಕ್ಕೆ ಸಾಕ್ಷಿ. ಎಲ್ಲಿಯವರೆಗೆ ನಮ್ಮ ಮನದಾಳದಲ್ಲಿ ಒಂದಿಷ್ಟು ಕನ್ನಡ ಉಳಿದಿರುತ್ತದೋ, ಅಲ್ಲಿಯವರೆಗೆ ಬೀಜದಂತೆ ಅದು ಪದೆ ಪದೆ ಮೊಳಕೆಯೊಡೆಯುತ್ತದೆ. ಕವಿ ಹೇಳುವಂತೆ ’ಚೆಲ್ಲವರಿದು ಹಬ್ಬುತ್ತದೆ’.
ಗಾಬರಿ ಬಿಡಿ. ಬರೆಯಲು ಶುರು ಮಾಡಿ. ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಾಗ, ನೋಡನೋಡುತ್ತಿದ್ದಂತೆ ಮೈಮನದಲ್ಲಿ ಕನ್ನಡ ಅರಳಿ ನಿಲ್ಲುತ್ತದೆ.
- ಚಾಮರಾಜ ಸವಡಿ
http://chamarajsavadi@blogspot.com
ಉ: ಸಿಹಿ ಕಹಿ
>>ನಾನು ಕನ್ನಡದಲ್ಲಿ ಕೊನೆಯದಾಗಿ ಬರೆದಿದ್ದು ನನ್ನ ೧೦ನೇ ಕ್ಲಾಸಿನ ಕನ್ನಡ ಪರೀಕ್ಷೆಯನ್ನ!!! . ಅದಾದ ಮೇಲೆ ಇಂಜಿನಿಯರಿಂಗ್ - ಅಲ್ಲಿ ಕನ್ನಡವೇ ಇಲ್ಲ.
ಈಗದನ್ನು ಬಡ್ದಿ ಸಮೇತ ತೀರಿಸುವಂತೆ ಬರೆಯಿರಿ !
*ಅಶೋಕ್