ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › hemashree ರವರ ಬ್ಲಾಗ್

- ಚೌಕಟ್ಟು -

August 26, 2008 - 2:04am — hemashree

ನನ್ನ ಕವಿತೆಗಳು ಅಡಿಗೆ ಮನೆಯಿಂದ ಹೊರ ಬರುವುದೇ ಇಲ್ಲ.

ಪಾತ್ರೆ ತೊಳೆಯುವಾಗ ಅಕ್ಕಿ ಬೇಯಿಸುವಾಗ
ಚಪಾತಿ ಲಟ್ಟಿಸುವಾಗ ಹಪ್ಪಳ ಕಾಯಿಸುವಾಗ
ಪದಗಳು ಜೋಡುತ್ತವೆ.

ತೊಳೆದ ಪಾತ್ರೆಯಲ್ಲಿ
ಬೇಯಿಸಿದ ಅನ್ನದಲ್ಲಿ
ಕಾಯ್ದ ಹಪ್ಪಳದಲ್ಲಿ
ನನ್ನ ಕವಿತೆಗಳು ಹುಟ್ಟಿಕೊಳ್ಳುತ್ತವೆ.
ಚಪ್ಪರಿಸಿದವರ ಬಾಯಿಗಳಲ್ಲಿ ನಲಿಯುತ್ತವೆ.

ನನ್ನ ಕತೆಗಳು ಮನೆ ಬಿಟ್ಟು ಹೊರ ಹೋಗುವುದೇ ಇಲ್ಲ.

ಕಸ ಗುಡಿಸುವಾಗ ನೆಲ ವರೆಸುವಾಗ
ಬಟ್ಟೆ ಒಗೆಯುವಾಗ ಮನೆ ಸಿಂಗರಿಸುವಾಗ
ಪಾತ್ರಗಳು ಮಾತನಾಡುತ್ತವೆ.

ಸ್ವಚ್ಛಗೊಂಡ ನೆಲದಲ್ಲಿ
ಒಣಗಿದ ಬಟ್ಟೆಗಳಲ್ಲಿ
ಸಿಂಗಾರಗೊಂಡ ಮನೆಯೊಳಗೆ
ನನ್ನ ಕತೆಗಳು ಅರ್ಥಪಡೆದುಕೊಳ್ಳುತ್ತವೆ.
ಮನೆಯೊಳಗಿನ ಮನಗಳಲ್ಲಿ ನೆಲೆ ನಿಲ್ಲುತ್ತವೆ.

ನನ್ನ ಕವಿತೆಗಳು ನನ್ನ ಕತೆಗಳು
ಮನೆಯಲ್ಲಿ ನಲಿದರೂ ...
ಮನಗಳಲ್ಲಿ ನೆಲೆ ನಿಂತರೂ ...

ಅಕ್ಷರಗಳಾಗುವುದಿಲ್ಲ.
ಹಾಳೆಗೆ ಇಳಿಯುವುದಿಲ್ಲ.

ಹೊತ್ತಗೆಯ ರೂಪವನ್ನಂತೂ ...
ಹೊರುವುದೇ ಇಲ್ಲ.

  • feminist
  • LIFE..........
  • Poetry
  • She
  • short poems
  • ಕವಿತೆ
  • ಮಹಿಳೆ
  • ಸ್ತ್ರೀ ಸಾಹಿತ್ಯ
~.~
  • hemashree ರವರ ಬ್ಲಾಗ್
  • Login or register to post comments
  • 193 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 26, 2008 - 5:20am — pallavi.dharwad

ಉ: - ಚೌಕಟ್ಟು -

pallavi.dharwad's picture

ಚೆನ್ನಾಗಿದೆ ಹೇಮಾ. ಅಕ್ಷರಗಳಾಗುವುದೇ ಕವಿತೆಯಲ್ಲ, ಬರಹವಲ್ಲ. ಭಾವನೆಗಳಾಗುವುದು ನಿಜವಾದ ಬರಹ. ಇಲ್ಲದಿದ್ದರೆ I love you ಎಂದು ಹೇಳದ ವ್ಯಕ್ತಿಗೆ ಪ್ರೀತಿಸಲು ಬರುವುದಿಲ್ಲ ಅಂದಂತೆ.

ಕವಿತೆ ಶೀರ್ಷಿಕೆ ’ಚೌಕಟ್ಟು’ ಇಷ್ಟವಾಗಲಿಲ್ಲ. ಏಕೆಂದರೆ, ನೀವು ವ್ಯಕ್ತಪಡಿಸಿದ ಭಾವನೆಗಳಿಗೆ ಚೌಕಟ್ಟಿನ ಹಂಗಿಲ್ಲ. ಅದನ್ನು ಮುರಿದುಕೊಂಡು ಈಚೆ ಬಂದ ನುಡಿಗಳವು.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 26, 2008 - 5:57am — kalpana

ಉ: - ಚೌಕಟ್ಟು -

kalpana's picture

ಬಹಳ ಚೆನ್ನಾಗಿದೆ, ಹೇಮ. ನಾನು ಈಗ ತಾನೆ ಪಲ್ಲವಿಗೆ ಬರೆದ ಪ್ರತಿಕ್ರಿಯೆಯ ಹಾಗೆ, ಕೆಲಸಗಳ ಮಧ್ಯೆ ನಮ್ಮ ಕವಿತೆ, ಕತೆಗಳು ಕಳೆದುಹೋಗುತ್ವೆ. ಹಾಳೆಗೆ ಇಳುಯುವುದೇ ಇಲ್ಲ ಅಲ್ವ?
~ಕಲ್ಪನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 26, 2008 - 11:17am — kannadakanda

ಉ: - ಚೌಕಟ್ಟು -

kannadakanda's picture

ಭಾವನೆಗಳ ಛಂದದೊಳಗೆ
ತೀವಿದೊಡದಿನ್ನೂ ಸುಂದರ.
ಆವಗಂ ಛಂದವನು ಪ್ರಾಸವನು
ಕಾವುದು ಕವನಗಳೆಲ್ಲದಱಲಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 26, 2008 - 11:28am — veeravenki

ಉ: - ಚೌಕಟ್ಟು -

veeravenki's picture

ತುಂಬ ಚೆನ್ನಾಗಿದೆ ಹೇಮಾ....ಮನೆ ಕೆಲಸದಲ್ಲೇ ಒಂದು ಕವಿತೆ ಹುಟ್ಟು ಹಾಕಿದೀರ.... ನಿಮಗೆ ನನ್ನ ಅಭಿನಂದನೆಗಳು....ಕವಿತೆಗಳನ್ನ ಹೀಗೆ ಬರಿತ ಇರಿ....ನಮ್ಮ ಮನಸ್ಸನ್ನ ರಂಜಿಸುತ್ತ ಇರಿ...

-Vರ ( Venkatesha ರಂಗಯ್ಯ )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಂತರ್ಜಾಲದಲ್ಲಿ ಕುವೆಂಪು ಕವಿತೆಗಳು?
  • ಎರಡು ಪುಟ್ಟಾತಿಪುಟ್ಟ ಕತೆಗಳು ..
  • ನಾ ಬರೆದ ಕವಿತೆಗಳು...
  • ಪುಸ್ತಕ ನಿಧಿ :- ಕೊನಷ್ಟೈ ಕತೆಗಳು ಒಳ್ಳೇಯ ಹಾಸ್ಯ ಓದಿ ಎಂಜಾಯ್ ಮಾಡಿ
  • ಪುಸ್ತಕ ನಿಧಿ - ಮಾಸ್ತಿ ವೆಂಕಟೇಶ ಅಯ್ಯಂಗಾರರ ಅದ್ಭುತ ಕತೆಗಳು
Syndicate content

ಲೇಖಕರು

hemashree's picture

ಪೂರ್ಣ ಹೆಸರು
ಹೇಮಶ್ರೀ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 10:19am
  • kannadakanda
    ಉ: ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ
    December 2, 2008 - 10:08am
  • sathvik N V
    ಉ: ನನ್ನ ತಪ್ಪೇ ಅಥವಾ ಸಿನಿಕತನವೇ?
    December 2, 2008 - 10:04am
  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 195 ಅತಿಥಿಗಳು ಆನ್ಲೈನ್ ಇರುವರು.


ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬೇಕು

— ಭಾಗವತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator