ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › hemashree ರವರ ಬ್ಲಾಗ್

ಪತ ಪತ ಗುಡ್ಡೆ ಮತ್ತು ಅದರ ಜತೆಗೆ ನೆನಪಾದದ್ದು.

September 12, 2008 - 1:43am — hemashree

ಹೆಸರು ಕೇಳ್ದಾಗ್ಲೇ ನಂಗೆ ನಗು ಬರುತ್ತೆ. ಯಾಕಂದ್ರೆ ಅದ್ರ ಹಿಂದಿರೋ ಕತೆ ನಂಗೆ ಗೊತ್ತಲ್ವಾ. ನಿಮ್ಗೂ ಹೇಳ್ತೀನಿ.

ನಾನು ಒಂದು-ಎರಡು ವರ್ಷದ ಚಿಕ್ಕ - ಪುಟ್ಟ - ತುಂಟ ಹುಡುಗಿಯಾಗಿದ್ದಾಗಿನ ಕತೆ. ನಂಗೆ ಇದು ನಿಜಾನಾ ಅಂತ ನೆನಪಿಲ್ಲ. ಆದ್ರೆ ಅಮ್ಮ ಕೆಲವೊಮ್ಮೆ ನೆನಪಿಸ್ತಾರೆ.

1979-80ರ ಹೊತ್ತಿಗೆ ನಾವಿದ್ದದ್ದು ಮಂಗಳೂರಿನ ಕೊಟ್ಟಾರ ಕ್ರಾಸ್ ಬಳಿ. ಅದು ನನ್ನ ದೊಡ್ಡಮ್ಮನ ಮನೆಗೂ ಹತ್ರ. ದೊಡ್ಡಮ್ಮ ಅಂದ್ರೆ ನನ್ನ ಅಜ್ಜಿ. ಯಾಕೆ ಅಜ್ಜಿಯನ್ನು ದೊಡ್ಡಮ್ಮ ಅಂತ ಕರೀತಿದ್ನೋ ಗೊತ್ತಿಲ್ಲ. ಬಹುಶಃ, ಆಕೆ ಆಗ ಅಜ್ಜಿ ತರಹ ಕಾಣಿಸ್ತಾ ಇರ್ಲಿಲ್ವೇನೋ. ದೊಡ್ಡಮ್ಮನ ಮನೆ ಕತೆಗಳೂ ಚೆನ್ನಾಗಿವೆ. ಇನ್ನೊಂದ್ಸಲ ಹೇಳ್ತೀನಿ. ಈಗ ಪತ ಪತ ಗುಡ್ಡೆ ಹತ್ತೋಣ.

ನಮ್ಮ ಹಳೇ ಮನೆ ಇದ್ದ ಜಾಗದಿಂದ ಸ್ವಲ್ಪವೇ ದೂರದಲ್ಲಿ ಈ ಪತ ಪತ ಗುಡ್ಡೆ ಇದ್ದದ್ದು. ಗುಡ್ಡ ಅಂದ್ರೆ ಅಂಥ ದೊಡ್ಡ ಗುಡ್ಡೆ ಏನಲ್ಲ. ಈಗ ಏನಾದ್ರೂ ಈ ಗುಡ್ಡೆ ನೋಡಿದ್ರೆ.... ಇದಾ.... ಗುಡ್ಡೆ ಅಂತ ಅನ್ನಿಸುತ್ತೆ. 25-30 ವರ್ಷಗಳ ಹಿಂದೆ ಅಲ್ಲಿ ಮನೇನೂ ಇರ್ಲಿಲ್ಲ. ರಸ್ತೆ ಕೂಡಾ ಇರ್ಲಿಲ್ಲ. ಖಾಲಿ ಜಾಗ ಇತ್ತು. ಈಗ ರಾಷ್ಟ್ರೀಯ ಹೆದ್ದಾರಿ 17 ಪಕ್ಕದಲ್ಲೇ ಇದೆ.

ಈ ಪತ ಪತ ಗುಡ್ಡೆಗೆ ಆ ಹೆಸರಿಟ್ಟದ್ದು ನಾನೇ. ಆ ಗುಡ್ಡೆ ಮೇಲೆ ಕೂತ್ಕೊಂಡ್ರೆ ದೂರದಲ್ಲಿ MCF (Mangalore Chemicals and Fertilizers )ನ ಕೊಳವೆಗಳು ಕಾಣ್ತಿದ್ವು. ಸಂಜೆ ಹೊತ್ತು ಕಾಣಿಸ್ತಾ ಇದ್ದ MCFನ ಲೈಟ್ಸ್ ಗಳು ಪತ ಪತ ಅಂತ ಅಲುಗಾಡ್ತಾ ಇದ್ವು. ಅದಕ್ಕೇ ಆ ಗುಡ್ಡೆಗೆ ನಾನು ಹೆಸರಿಟ್ಟದ್ದು ... ಪತ ಪತ ಗುಡ್ಡೆ ಅಂತ.

ಕೊಟ್ಟಾರ ಕ್ರಾಸ್ ಮನೇನಲ್ಲಿ ನಾವಿದ್ದದ್ದು ಎರಡು-ಮೂರು ವರ್ಷ. ಆಮೇಲೆ, ಸುರತ್ಕಲ್ ಹತ್ರದ ಕೃಷ್ಣಾಪುರಕ್ಕೆ ಬಂದ್ವಿ. ನಾನು ಮಂಗಳೂರಿನ ಸೈಂಟ್ ಆನ್ಸ್ ಶಾಲೆಗೆ ಸೇರಿದ ಮೇಲೆ, ದಿನಾ ರಾಷ್ಟ್ರೀಯ ಹೆದ್ದಾರಿ 17ರ ಮೂಲಕ ಮಂಗಳೂರಿಗೆ ಹೋಗುವಾಗ , MCFನ ದೊಡ್ಡ ಕೊಳವೆಗಳನ್ನು ನೋಡೋದೇ ಒಂದು ಖುಷಿ. ಅಲ್ಲೇ ಹತ್ರ KIOCL (Kudremukha Iron Ore Company Ltd.) ಕೂಡಾ ಇತ್ತು. ಅದೀಗ ಮುಚ್ಚಿ ಹೋಗಿದೆ ಅನ್ಸುತ್ತೆ. ಅದೇ ದಾರಿಯಲ್ಲಿ ಪಣಂಬೂರಿನ ಬಂದರಿನ ದೊಡ್ಡ ಗೋಡೆ. ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಒಂದು ಲೈಟ್ ಹೌಸ್ ಇದೆ. ಅದ್ರ ತುದಿಯಲ್ಲಿ, ಹೊರಗಿನ ಬದಿ ಒಂದು ದೊಡ್ಡ ಜೇನುಗೂಡು ತೂಗ್ತಾ ಇರ್ತಿತ್ತು.

ಸುಮಾರು 1994-95ರ ಹೊತ್ತಿಗೆ ಮಂಗಳೂರಿನಲ್ಲಿ MRPL ( Mangalore Refinery and Petrochemicals Ltd.)ನ ಕೆಲಸ ಶುರುವಾಯ್ತು. ಅದೇನು ದೊಡ್ಡ ದೊಡ್ಡ ಪೀಪಾಯಿಗಳು, ಕೊಳವೆಗಳು, ಪೈಪುಗಳು, ಇನ್ನೂ ಏನೇನೋ ... MRPL ಜಾಗಕ್ಕೆ ಇವನ್ನೆಲ್ಲಾ ಸಾಗಿಸ್ತಾ ಇದ್ರು. ಅವುಗಳ ಭಾರಕ್ಕೆ ಸುರತ್ಕಲ್ ನಲ್ಲಿದ್ದ ಒಂದು ಸಣ್ಣ ಸೇತುವೆ ಬೀಳೋಕೆ ರೆಡಿ ಆದಾಗ ಇನ್ನೊಂದು ಹೊಸ ಸೇತುವೆ ಕಟ್ಟಿಸಿದ್ರು. ಈಗ ಅದರಡಿಯಲ್ಲಿ ಕೊಂಕಣ ರೈಲಿನ ಟ್ರಾಕ್ಸ್ ಇವೆ.

ಇತ್ತೀಚೆಗೆ ಆರು ತಿಂಗಳ ಹಿಂದೆ ಆ ದಾರಿಯಲ್ಲಿ ನಾನು ಪ್ರಯಾಣ ಮಾಡ್ತಾ ಆಚೆ ಈಚೆ ಕಣ್ಣು ಹಾಯಿಸಿದೆ. ಎಷ್ಟೊಂದು ಬದಲಾಗಿದೆ ಅಂದ್ರೆ ನಾನು ಈ ದಾರಿಯಲ್ಲಿ ಇಲ್ಲಿವರೆಗೂ ಬರ್ಲೇ ಇಲ್ವೇನೋ ಅನ್ನಿಸ್ತು. ಇನ್ನೊಂದು ವರ್ಷ ಬಿಟ್ಟು ಬಂದ್ರೆ ಈಗಿರೋ ನಮ್ಮ ಮನೆ ಏರಿಯಾ ಕೂಡಾ ಬದಲಾಗುತ್ತೆ. ಮನೆ ಎದುರೇ ಚತುಷ್ಪಥ ರಸ್ತೆ ಆಗ್ತಾ ಇದೆ. ಒಂದು ಫ್ಲೈ ಓವರ್ ಕೂಡಾ ಬರುತ್ತೆ.

ಈಗ ಪತ ಪತ ಗುಡ್ಡೆಯ ಹತ್ರ ಅದೆಷ್ಟು ಮನೆಗಳು. ರಸ್ತೆ . ಗುಡ್ಡೆಯ ಸ್ವರೂಪವೇ ಬದಲಾಗಿದೆ. ನನ್ನ ಕಣ್ಣ ಮುಂದೆಯೇ ನನ್ನ ಬಾಲ್ಯದ ನೆನಪುಗಳನ್ನು ಕಟ್ಟಿಕೊಡುವ ಹಲವು ಜಾಗಗಳು ತಮ್ಮ ಮುಖಗಳನ್ನು ಸಿಂಗರಿಸಿಕೊಳ್ಳುತ್ತಿವೆ. ಕೆಲವೊಂದು ವಿಕಾರಗೊಳ್ಳುತ್ತಿವೆ. ಮಂಗಳೂರು ಬೆಳೀತಾ ಇರೋದು ನಿಜ. ಇದು ಅಗತ್ಯವೇ … ಇದು ಅಭಿವೃದ್ಧಿ ಸಂಕೇತವೇ … ಅಂತ ಕೆಲವೊಮ್ಮೆ ಯೋಚನೆ ಮಾಡಿದ್ರೂ ಉತ್ತರ ಸಿಗೋದು ಕಷ್ಟ. ಅಥವಾ ನಮ್ಮ ನಮ್ಮ ಪಾಲಿನ ಉತ್ತರಗಳನ್ನೇ ನಾವು ಸತ್ಯ ಅಂದುಕೊಂಡು ಈ ಬದಲಾವಣೆಯ ಒಂದು ಪಾತ್ರವಾಗಿಬಿಡುತ್ತೇವೆ. ಅಲ್ವೇ !

  • ಅನುಭವ ಕಥನ
  • ಬಾಲ್ಯ
~.~
  • hemashree ರವರ ಬ್ಲಾಗ್
  • Login or register to post comments
  • 230 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 12, 2008 - 9:39am — Sunil Jayaprakash

ಉ: ಪತ ಪತ ಗುಡ್ಡೆ ಮತ್ತು ಅದರ ಜತೆಗೆ ನೆನಪಾದದ್ದು.

Sunil Jayaprakash's picture

ಪತ ಪತ ಗುಡ್ಡೆಯಲ್ಲಿದ್ದ ಮರಗಳು 'ತಪ ತಪ' ಅಂತ ಬಿದ್ದು ಹೋಗಿರಬೇಕು. ಇದನ್ನು ನೋಡಿ ನಮ್ಮ ಮನಸ್ಸು 'ಕೊತ ಕೊತ' ಕುದಿತಾ ಇರಬೇಕು. ಇದಕ್ಕೆಲ್ಲ ಕಾರಣವಾದ ಜನರ ಆಸೆಬುರುಕತನಕ್ಕೆ 'ರಪ ರಪ(ಱಪ ಱಪ)' ಅಂತ ಬಡೀಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 12, 2008 - 10:06am — savithasr

ಉ: ಪತ ಪತ ಗುಡ್ಡೆ ಮತ್ತು ಅದರ ಜತೆಗೆ ನೆನಪಾದದ್ದು.

savithasr's picture

ಸೂಪರ್ ಸುನಿಲರೆ..
ನಿಮ್ಮ ಟಕ ಟಕ ಪ್ರತಿಕ್ರಿಯೆಯಿಂದ ನಮಗೆ ಲಕ ಲಕ ನಗು Laughing out loud Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 12, 2008 - 12:19pm — palachandra

ಉ: ಪತ ಪತ ಗುಡ್ಡೆ ಮತ್ತು ಅದರ ಜತೆಗೆ ನೆನಪಾದದ್ದು.

palachandra's picture

ಸುನಿಲ್, ಸವಿತ ತುಂಬ ಚೆನ್ನಾಗಿ ಪ್ರತಿಕ್ರಯಿಸಿದ್ದೀರ.. ಹೇಮಶ್ರೀ ನಾವೂ ಕೂಡ ನಮ್ಮ ಅಜ್ಜಿಯನ್ನು ದೊಡ್ಡಮ್ಮ ಅಂತ ಕರೀತ ಇದ್ವಿ.. ಅಜ್ಜಿ ಅಂತ ಕರೆಯೋದು ವಿಧವೆಯರಿಗೆ ಮಾತ್ರ ಅಂತ ಅವರ ಭಾವನೆ.. ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 12, 2008 - 2:24pm — ಸಂಗನಗೌಡ

ಉ: ಪತ ಪತ ಗುಡ್ಡೆ ಮತ್ತು ಅದರ ಜತೆಗೆ ನೆನಪಾದದ್ದು.

ಸಂಗನಗೌಡ's picture

ಪತ ಪತ ಗುಡ್ಡೆ ಅಂದರೆ?? :D ಗುಡ್ಡ, ಗುಡ್ಡೆ ಒಂದೇನಾ? Shocked

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸರ್ ಕಾಫೀ/ಟೀ???
  • ಚಿಂಟು: ನಂಗೇನಿಷ್ಟ ಅಂದ್ರೆ...
  • ನೆನಪುಗಳ ಸುರುಳಿ ಬಿಚ್ಚಿ . . .
  • ಹೆಲ್ಮೆಟ್ ಇದ್ರೆ ಸಾಕಾ.. ???
  • ಮರೆಗುಳಿ ಪ್ರೊಫೆಸರ್ ನ ಡ್ರೈವಿಂಗ್ ಕಲಿಕೆ
Syndicate content

ಲೇಖಕರು

hemashree's picture

ಪೂರ್ಣ ಹೆಸರು
ಹೇಮಶ್ರೀ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
  • ಕಂನುಡಿಯ ಹುಟ್ಟು - ಶಂ.ಬಾ.ಜೋಶಿಯವರ ಪುಸ್ತಕ
  • ವಿಪರ್ಯಾಸ
  • ಎಂದಿನಂತೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:21pm
  • omshivaprakash
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:18pm
  • anil.ramesh
    ಉ: ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
    December 1, 2008 - 9:17pm
  • omshivaprakash
    ಉ: ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
    December 1, 2008 - 9:17pm
  • omshivaprakash
    ಉ: ಶುಕ್ರ ಮತ್ತು ಗುರುವಿನ ಇಂಟರ್ವ್ಯೂ - ನೀವ್ ನೋಡಿದ್ರಾ?
    December 1, 2008 - 9:15pm
  • kannadakanda
    ಉ: ಅಳಿಯ, ಅನಿಷ್ಟ ಮತ್ತು ಗ್ರಹಚಾರ!
    December 1, 2008 - 9:12pm
  • palachandra
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:06pm
  • palachandra
    ಉ: Aperture ಮತ್ತು Depth of Field
    December 1, 2008 - 9:01pm
  • gopinatha
    ಉ: ಚಂದ್ರ-ಗುರು-ಶುಕ್ರ...
    December 1, 2008 - 8:59pm
  • venkatb83
    ಉ: ಬನ್ನಿ ನಾವೆಲ್ಲ ಒಟ್ಟಾಗಿ ಉಗ್ರವದವನ್ನ/ಉಗ್ರವಾದಿಗಳನ್ನ ಮೆಟ್ಟಿ ನಿಲ್ಲೋಣ. ಒಗ್ಗಟ್ಟಿನಲ್ಲಿ ಬಲವಿದೆ .ಭಾರತ ನಿಜವಾಗಿ ಪ್ರಕಾಶಿಸುವ ಕಾಲ ಈಗ ಬಂದಿದೆ.
    December 1, 2008 - 8:58pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 103 ಅತಿಥಿಗಳು ಆನ್ಲೈನ್ ಇರುವರು.


ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator