ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › harsha.st ರವರ ಬ್ಲಾಗ್

ಮನೆಲಿ ಮಾತೃ ಬಾಷೆಲಿ ಮಾತಾಡೊಕೆ ಎನ್ ರೋಗ ?

August 25, 2008 - 11:14am — harsha.st

ಶ್ರೀಕಾಂತರವರು "ನಮ್ಮಮೂಗಿನ ನೇರಕ್ಕೆ" ಎಂಬ ತಲೆಬರಹದ http://sampada.net/blog/shreekantmishrikoti/22/08/2008/11064 ಈ ಲೇಖನ ಓದಿದ ಮೇಲೆ ತುಂಬ ದಿನಗಳಿಂದ ನಾನು ತಲೆ ಕೆಡುಸ್ಕೊಂತ ಇದ್ದ ಒಂದು ವಿಷಯದ ಬಗ್ಗೆ ಬರೆಯೂಣ ಅನಿಸುತ್ತಿದೆ....
ನನಗೆ ನಿಮ್ಮಷ್ಟು ಚನ್ನಾಗಿ ಬರೆಯೊಕೆ ಬರಲ್ಲ ಅಂತ ಇಷ್ಟು ದಿನ ಸುಮ್ನೆ ಇದ್ದೆ. ಆದ್ರೆ ಇವತ್ತು ಯಾಕೊ ಬರೆಯೊ ದೈರ್ಯ ಮಾಡ್ತ ಇದಿನಿ... ನಾನು ಮೊದಲ ಸಲ ಬರೀತಾ ಇರೋದ್ರಿಂದ ವ್ಯಾಕರಣ ಅಥವಾ ವಾಕ್ಯ ರಚನೆ ತಪ್ಪು ಅಗೋ ಸಾದ್ಯತೆಗಳಿರೊದ್ರಿಂದ ನಿಮ್ಮಲ್ಲಿ ಕ್ಷಮೆ ಕೆಳ್ತೀನಿ. ತಪ್ಪಿದ್ರೆ ಕ್ಷಮಿಸಿ. ಮನೆಲಿ ಮಕ್ಕಳ ಜೊತೆ ಮಾತೃ ಬಾಷೆಯಲ್ಲಿ ಮತಾಡದೆ ಇರೊ ತಂದೆ ತಾಯಿಗಳು ನಾನು ಬರೀತಿರೊ ವಿಷಯದ subject ಗಳು.

ಈಗಿನ ತಂದೆ ತಾಯಿಗಳಿಗೆ ( ಈ ಹಿಂದೆ ಕೂಡ) ಮಕ್ಕಳು ಇಂಗ್ಲೀಶಲ್ಲಿ ಚನ್ನಾಗೆ ಮತಾಡಬೇಕು, ಇಂಗ್ಲೀಶ್ ಪಂಡಿತರಾಗಬೇಕು ಅನ್ನೊ ಚಪಲ, ಅದರ ಜೊತೆಗೆ ಇಂಗ್ಲೀಶಲ್ಲಿ ಮಾತಡದ್ರೆ ಅದೆನೊ ಒಳ್ಳೆ ಲೆವೆಲ್ಲು ಅನ್ನೊ ನಂಬಿಕೆ. ಅದಕ್ಕೆ ಎನ್ ಮಡ್ತಾರೆ ಅಂದ್ರೆ ಮಗು ಶಾಲೆಲಿ ಇಂಗ್ಲೀಶ್ ಕಲ್ತಿದ್ದು ಸಾಲದು ಅಂತ ಮನೆಗೆ ಬಂದ ಮೆಲೂ ಮಗು ಜೊತೆ ಇಂಗ್ಲೀಶಲ್ಲಿ ಕಿರ್ಚಾಟ ಶುರು ಮಾಡ್ತರೆ. ಇದ್ರಲ್ಲಿ ನನಿಗೆ ಅರ್ಥ ಅಗದೇ ಇರೊ ಕೆಲವು ವಿಷಯ ಅಂದ್ರೆ ಮನೆಲಿ 24 ಗಂಟೆನು ಇಂಗ್ಲೀಶಲ್ಲಿ ಹೆಂಗ್ ಮತಾಡ್ತರೆ ? ನೀವು ತಮಾಶೆ ಅನ್ಕೊಂಡ್ರು ನನ್ಗೆ ಸಿರೀಯಸ್ ಅಗಿ ತಲೆ ತಿನ್ನೊ ಪ್ರಶ್ನೆಗಳು ಇವು. ನಾನು ಕೆಳಗೆ ಟಿಪ್ಪಣಿ ಮಡ್ತಿರೊ ಮಾತುಗಳನ್ನ ಇಂಗ್ಲೀಶ್ ಅಲ್ಲಿ ಹೆಂಗ್ ಮತಾಡ್ತರೆ ..

1) ಮಗುಗೆ ಇಂಗ್ಲೀಶಲ್ಲಿ 'ಜಡೆ' ಹಾಕ್ತಿನಿ ಬಾ ಅಂತ ಹೆಂಗ್ ಹೆಳ್ತಾರೆ ? 'ಜಡೆ' ಗೆ ಎನೊ ಒಂದು ಹೆಳುದ್ರು ಅನ್ಕೊಳನ. 'ಜುಟ್ಟು' ಕಟ್ಕೊ ಅಥವಾ 'ಬ್ಯೆತಲೆ' ತಗಿತಿನಿ ಬಾ ಅಂತ ಹೆಂಗ್ ಹೆಳ್ತಾರೆ ? ಎಲ್ಲದುಕ್ಕು ಒಂದೆ ಇಂಗ್ಲೀಶ್ ಪದ ಬಳಸುದ್ರೆ ಮಕ್ಕಳಿಗೆ ವ್ಯತ್ಯಾಸ ಹೆಂಗ್ ತಿಳಿಯತ್ತೆ ?

2) ಇಂಗ್ಲೀಶಲ್ಲಿ ದೇವರಿಗೆ 'ಮಂಗಳಾರತಿ' ಮಾಡು, 'ಎಡೆ' ಇಡು ಅಥವಾ 'ಗಂದಧ ಕಡ್ಡಿ ಬೆಳಗು' ಅಂತ ಹೆಂಗ್ ಹೆಳ್ತಾರೆ ?

3) ಇನ್ನು 'ಚಕ್ಕಂಬಕ್ಕಳ' ಹಾಕ್ಕೊಂಡು ಕೂರು,'ಈಳಗೆಮಣೆ ತೊಂಗೊಂಡ್ ಬಾ', ಪೂಜೆ ಮುಗಿತು 'ಅಕ್ಷತೆ ಕಾಳು' ಹಾಕು ಈ ಎಲ್ಲ ಮಾತನ್ನು ಇಂಗ್ಲೀಶಲ್ಲಿ ಹೆಂಗ್ ಹೆಳ್ತಾರೆ ?

4) ಇನ್ನು ಊಟದ ವಿಷಯಕ್ಕೆ ಬಂದ್ರೆ 'ತಿಳಿಸಾರು','ಸಾಂಬಾರು','ಪಲ್ಲ್ಯ', 'ಚಟ್ನಿ' ಈ ಎಲ್ಲ ಪದಗಳಿಗು ಇಂಗ್ಲೀಶಲ್ಲೂ ಬೇರೆ ಬೇರೆ ಪದಗಳು ಇದವಾ ? ಅಥವಾ ಎಲ್ಲದುಕ್ಕು ಒಂದೆ ಪದ ಬಳಸುತ್ತರಾ ?

5) ಇಂಗ್ಲೀಶಲ್ಲಿ 'ಹೊಳಿಗೆ', 'ಒಬ್ಬಟ್ಟು','ಪಾಯಸ' ಇವಕ್ಕೆಲ್ಲ ಎನಂತಾರೆ ? 'ಮುದ್ದೆಗೆ' ಅದೆನೊ 'ರಾಗಿ ಬಾಲ್ಸ್' ಅಂತ ಅನ್ನೊದು ಕೆಳದ್ರೆ ಮೈಯಲ್ಲ ಉರಿಯತ್ತೆ.

ಸಾಮನ್ಯವಾಗಿ ಸಂಸ್ಕೃತಿಯನ್ನು ಉಳಿಸಿಕೊಂಡು ಬರೊದು ಬಾಷೆ. ಅಂದ್ರೆ ಸಂಸ್ಕೃತಿಯನ್ನು ಮುಂದಿನ ತಲೆಮಾರುಗಿ ಉಳಿಸಿಕೊಂಡು ಹೊಗೊ ಜವಬ್ದಾರಿ ಬಾಷೆ ಮೆಲೆ ಇರುತ್ತೆ (ನಾವು ಬಾಷೆ ಬಳಿಸಿದರೆ).

ಇನ್ನೊಂದು ನಾವು ಗಮನಿಸಬೇಕಾದ ಅಂಶ ಅಂದ್ರೆ ಮೇಲೆ ನಾನು ಇಂಗ್ಲೀಶಲ್ಲಿ ಹೆಳೋಕೆ ಬರದೆ ಇರೊ ಅಂತ ಅಥವಾ ಕಷ್ಟ ಅನ್ನಿಸೊ ಅಂತ ಕೆಲವು ಕನ್ನಡ ಪದಗಳ ಉದಾಹರಣೆ ಕೊಟ್ಟಿದಿನಿ. ಅದೆ ರೀತಿ ಕನ್ನಡದಲ್ಲು ಹೆಳೋಕೆ ಬರದೆ ಇರೊ ಅಂತ ಅಥವಾ ಕಷ್ಟ ಅನ್ನಿಸೊ ಅಂತ ಇಂಗ್ಲೀಶ್ ಪದಗಳು ಇದವೆ. ಉದಾಹರಣೆಗೆ ಪಿಜ್ಜಾ, ಬರ್ಗರ್,ಕೋಟು,ಪ್ಯಾಂಟು,ಬೂಟ್ಸ್.. ಇತ್ಯಾದಿ. ಕಾರಣ ಇಷ್ಟೆ "ಯಾವುದು ಸಂಸ್ಕೃತಿಯಲ್ಲಿ ಇರೊಲ್ವೊ ಅದು ಬಾಷೆಯಲ್ಲು ಇರಲ್ಲ".ಅದಕ್ಕೆ ನಾವು ನಮ್ಮ ಬಾಷೆಯಲ್ಲಿ ಮಾತಡಲಿಲ್ಲ ಅಂದ್ರೆ ನಿಧಾನಕ್ಕೆ ನಮ್ಮ ಸಂಸ್ಕೃತಿನೂ ನಶಿಸಿ ಹೊಗತ್ತೆ ಅಥವಾ ಮಹತ್ವ ಕಳೆದುಕೊಳ್ಳುತ್ತೆ.

  • ಬಾಷೆ
  • ಸಂಸ್ಕೃತಿ.
~.~
  • harsha.st ರವರ ಬ್ಲಾಗ್
  • Login or register to post comments
  • 492 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 25, 2008 - 11:36am — ASHOKKUMAR

ಉ: ಮನೆಲಿ ಮಾತೃ ಬಾಷೆಲಿ ಮಾತಾಡೊಕೆ ಎನ್ ರೋಗ ?

ASHOKKUMAR's picture

ನೀನು ನಿನ್ನಪ್ಪನ ಎಷ್ಟನೆಯ ಮಗ ಅನ್ನೋದನ್ನೂ ಇಂಗ್ಲೀಷಿನಲ್ಲಿ ಸರಿಯಾಗಿ ಕೇಳಲಾಗುವುದಿಲ್ಲ ಎನ್ನುವುದೂ ಎಲ್ಲರಿಗೂ ತಿಳಿದದ್ದೇ ಅಲ್ಲವೇ?
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2008 - 1:37pm — mahesha

ಉ: ಮನೆಲಿ ಮಾತೃ ಬಾಷೆಲಿ ಮಾತಾಡೊಕೆ ಎನ್ ರೋಗ ?

mahesha's picture

ಅಶೋಕರೇ..

Smiling ಕನ್ನಡದಲ್ಲೂ ಕೆಲವನ್ನು ಹೇಳಕ್ಕೆ ಆಗಲ್ಲ.. ಆದ್ರೆ ಅದಲ್ಲ ನಾವ್ ಯಾಕೆ ನಮ್ ತಾಯ್ನುಡಿಯಾಗೆ ಮಾತಾಡ್‌ಬೇಕು ಅನ್ನೋದಕ್ಕೆ ಓಸುಗರ.....

ನಾವ್ ಕನ್ನಡ ಮಾತಾಡ್ಬೇಕು, ಏಕೆಂದ್ರೆ ನಾವ್ ಕನ್ನಡಿಗ್ರು ಅಶ್ಟೇ...

ಇದು ಹೇಗೆ ಅಂದ್ರೆ, ಹಸು ಯಾಕೆ ಹುಲ್ಲು ತಿನ್ನತ್ತೆ? ಅದು ಹುಲ್ಲು ಯಾಕೆ ತಿನ್ನತ್ತೆ ಅಂದ್ರೆ ಅದು ಹಸು.! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2008 - 1:52pm — ASHOKKUMAR

ಉ: ಮನೆಲಿ ಮಾತೃ ಬಾಷೆಲಿ ಮಾತಾಡೊಕೆ ಎನ್ ರೋಗ ?

ASHOKKUMAR's picture

ಹಸುಗಳು ಮಾಂಸವನ್ನು ತಿನ್ನೋದಿಲ್ಲ ಅಂತಿಲ್ಲ... ಇಂಗ್ಲೇಂಡಿನಲ್ಲಿ ಅಂತ ಹಸುಗಳಿಗೇನೋ ರೋಗ ಬಂದಿತ್ತು..... Smiling ವಿಷಯ ತಿರುಗಿಸುವುದು ಬೇಡ...
ಮನೆ ಮಾತಿನ ಬಗ್ಗೆ ಬರೆಯೋಣ.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2008 - 1:57pm — ಮನಹ್ಪಠಲ

ಉ: ಮನೆಲಿ ಮಾತೃ ಬಾಷೆಲಿ ಮಾತಾಡೊಕೆ ಎನ್ ರೋಗ ?

ಮನಹ್ಪಠಲ's picture

Quote:
ಇದು ಹೇಗೆ ಅಂದ್ರೆ, ಹಸು ಯಾಕೆ ಹುಲ್ಲು ತಿನ್ನತ್ತೆ? ಅದು ಹುಲ್ಲು ಯಾಕೆ ತಿನ್ನತ್ತೆ ಅಂದ್ರೆ ಅದು ಹಸು.! Smiling

ಹ೦ಗಾರೆ ಇ೦ಗಲಿಸಿನಲ್ಲಿ ಮಾತಾಡುದ್ರೆ ಇ೦ಗಲಿಸಿನವರಾಯ್ತಾರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2008 - 3:35pm — mahesha

ಉ: ಮನೆಲಿ ಮಾತೃ ಬಾಷೆಲಿ ಮಾತಾಡೊಕೆ ಎನ್ ರೋಗ ?

mahesha's picture

ಅಲ್ಲ..

ಇಂಗ್ಲೀಸ್ ಮಂದಿ ಆದ್ರೆ ಇಂಗ್ಲಿಶ್ ಮಾತಾಡಬೇಕು.

ಅಯ್ಯೋ ನಿಮಗೆ ತಿಳೀಲಿಲ್ಲ ಬುಡು..

ಹಸು ಹುಲ್ಲು ತಿನ್ನೋದು ಎಶ್ಟು ನ್ಯಾಚುರಲ್ಲೋ, ಅಶ್ಟೇ ನ್ಯಾಚುರಲ್ಲಾಗಿ ಕನ್ನಡಿಗರು ಕನ್ನಡ ಮಾತಾಡೋದು. ಈಗೀಗ ಕನ್ನಡ ಮಾತಾಡೋದೇ ದೊಡ್ಡ ವಿಶಯ ಆಗಿ ಹೋಗಿದ್ಯ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2008 - 2:06pm — shreekant.mishrikoti

ಉ: ಮನೆಲಿ ಮಾತೃ ಬಾಷೆಲಿ ಮಾತಾಡೊಕೆ ಎನ್ ರೋಗ ?

shreekant.mishrikoti's picture

ನೀವು ಹೇಳೋದು ಸರಿ , ನಮ್ಮ ಇತಿಹಾಸ , ಪರಂಪರೆ , ಸಂಸ್ಕೃತಿಯನ್ನ ಕಳ್ಕೋತೀವಿ , ಶಬ್ದಕೋಶ ಸಣ್ಣದಾಗುತ್ತದೆ , ವಿಚಾರಶಕ್ತಿಯೂ ಕುಂಠಿತವಾಗುತ್ತದೆ .

ಒಂದು ಶಬ್ದವನ್ನು ಕಳಕೊಂಡ್ರೆ ಆ ಶಬ್ದ ಅಷ್ಟೇ ಅಲ್ಲ ಅದರ ಹಿಂದೆ ಏನೇನಿರುತ್ತದೆ ಅದೆಲ್ಲವನ್ನೂ ಕಳ್ಕೋತೀವಿ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2008 - 2:14pm — harsha.st

ಉ: ಮನೆಲಿ ಮಾತೃ ಬಾಷೆಲಿ ಮಾತಾಡೊಕೆ ಎನ್ ರೋಗ ?

harsha.st's picture

ಶ್ರೀಕಾಂತ್ ರವರೆ ನಾನು ಹೆಳೋಕೆ ಪ್ರಯತ್ನ ಪಟ್ಟಿದನ್ನ ಒಂದೆ ಸಾಲಲ್ಲಿ ಸ್ಪಷ್ಟವಾಗಿ ಹೆಳೀದಿರ. ದನ್ಯಾವದಗಳು.
ನಿಜವಾಗ್ಲು ನಾವು ಒಂದು ಶಬ್ದವನ್ನು ಕಳಕೊಂಡ್ರೆ ಆ ಶಬ್ದ ಅಷ್ಟೇ ಅಲ್ಲ ಅದರ ಹಿಂದೆ ಏನೇನಿರುತ್ತದೆ ಅದೆಲ್ಲವನ್ನೂ ಕಳ್ಕೋತೀವಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2008 - 2:15pm — harsha.st

ಉ: ಮನೆಲಿ ಮಾತೃ ಬಾಷೆಲಿ ಮಾತಾಡೊಕೆ ಎನ್ ರೋಗ ?

harsha.st's picture

*ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2008 - 3:01pm — Sunil Jayaprakash

ಉ: ಮನೆಲಿ ಮಾತೃ ಬಾಷೆಲಿ ಮಾತಾಡೊಕೆ ಎನ್ ರೋಗ ?

Sunil Jayaprakash's picture

ಇದಕ್ಕೆ ನಾನು ಒಂದು ಸರಳ ಉತ್ರ ಕಂಡ್ಕೊಂಡಿದ್ದೀನಿ. ಈಗ "ಒಬ್ಬಟ್ಟು, ಪಾಯಸ, ಖೀರು, ಕೋಸಂಬರಿ....." ಈ ರೀತಿಯ ಪದಗಳನ್ನು ಇಂಗ್ಲೀಷಿನಲ್ಲಿ ಬಳಸಬೇಕಾಗಿ ಬಂದಾಗ, ಹಾಗೆಯೇ ಕನ್ನಡಪದವನ್ನೇ ಬಳಸ್ತೀನಿ, ಆದರೆ ಇಂಗ್ಲೀಷಿನ ಧಾಟಿಯಲ್ಲಿ.
ಈಗ ನಾವು ಎಷ್ಟೋ ಸಂಸ್ಕೃತ, ಇಂಗ್ಲೀಶ್ ಪದಗಳನ್ನು ಯಾವುದೇ ತಪ್ಪಿತಸ್ಥ ಭಾವನೆಯಿಲ್ಲದೆ (ಗಿಲ್ಟಿ ಫೀಲಿಂಗ್ ಇಲ್ಲದೆ) ಕನ್ನಡದಲ್ಲಿ ಬಳಸೋಲ್ಲವೇ ಹಾಗೆಯೇ ಕನ್ನಡದ ಧಾತುಗಳನ್ನು ಇಂಗ್ಲೀಶ್ ಮಾತನಾಡುವಾಗ ಬಳಸೋದಕ್ಕೆ ಹಿಂಜರಿಕೆ ಇರಬಾರದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2008 - 3:09pm — keerthi2kiran

ಉ: ಮನೆಲಿ ಮಾತೃ ಬಾಷೆಲಿ ಮಾತಾಡೊಕೆ ಎನ್ ರೋಗ ?

keerthi2kiran's picture

ಬೇಜಾರೇನಂದ್ರೆ ನೀವು ಮೇಲೆ ಹೇಳಿರೋ ಯಾವುದನ್ನೂ ಈಗ ಬಳಸಲ್ಲ.
ಮಕ್ಕಳಿಗೆ ಮಂಗಳಾರತಿ ಮಾಡು, ಎಡೆ ಇಡು, ಅಕ್ಷತೆ ಕಾಳು ಹಾಕು ಅಂತ ಯಾರೂ ಹೇಳಲ್ಲ. ಹೇಳೋರು ಇನ್ನೂ ಸ್ವಲ್ಪ ಕನ್ನಡಾನೂ ಉಳುಸ್ಕೊಂಡಿರ್ತಾರೆ ಅಂದ್ಕೊಂಡಿದೀನಿ.
ಚಕ್ಕಂಬಕ್ಕಳ -> ಈಗ ಎಲ್ಲ dining table ಬಳಸ್ತಾರೆ.
ಈಳಿಗೆಮಣೆ - ವೆಜಿಟೇಬಲ್ ಕಟ್ಟರ್ ಆಗಿದೆ. ರೋಟಿ ಬ್ರೆಡ್ ಆಗಿದೆ. ಪಲ್ಯ ಕರ್ರಿ ಆಗಿದೆ. ಒಬ್ಬಟ್ಟಿಗೆ ಏನಂತಾರೋ ನಂಗೊತ್ತಿಲ್ಲ.
ನನ್ನ ಅಕ್ಕನ ಮಗನಿಗೆ (೪ನೇ ಕ್ಲಾಸು ಈಗ) ಕನ್ನಡ ಓದಕ್ಕೇ ಬರಲ್ಲ. ನಾನು ಅವನ ಹುಟ್ಟುಹಬ್ಬಕ್ಕೆ ಕೊಟ್ಟ ದಿನಕ್ಕೊಂದು ಕಥೆ, ಇನ್ನೂ ಹಲವು ಕನ್ನಡ ಪುಸ್ತಕಗಳು ಧೂಳು ಹೊಡೀತಾ ಬಿದ್ದಿವೆ. ಅವರಪ್ಪ ಅಮ್ಮ ಕೂಡ ಓದು ಅಂತ ಹೇಳಲ್ಲ. ಕನ್ನಡ ಕಲಿಸಿ ಅಂದ್ರೆ ಅವರಪ್ಪ ಅಮ್ಮ ನಕ್ಕುಬಿಡ್ತಾರೆ. ಏನು ಮಾಡೋದು?
ಕೀರ್ತಿ ಕಿರಣ್ ಎಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2008 - 3:41pm — harsha.st

ಉ: ಮನೆಲಿ ಮಾತೃ ಬಾಷೆಲಿ ಮಾತಾಡೊಕೆ ಎನ್ ರೋಗ ?

harsha.st's picture

ಕೀರ್ತಿಯವರೆ, ನಾನು ಮೇಲೆ ಹೆಳೀರೊದು ಉದಾಹರಣೆಗಳು ಮಾತ್ರ.ನಮ್ಮ ಜೀವನ ಶ್ಯೆಲಿ ಮತ್ತು ಅಧುನಿಕತೆಯಿಂದ ಕೆಲವು ಪದಗಳು ಈಗ ನಾವು ಬಳುಸುತಿಲ್ಲ.ಉದಾಹರಣೆಗೆ - ಈಳಿಗೆ ಮಣೆ.. ಇತ್ಯಾದಿ

ಆದ್ರೆ ನಮ್ಮ ಮನೆಗಳಲ್ಲಿ ಇನ್ನು ಬಳಕೆಯಲ್ಲಿ ಇರೊ ಅಂತ ಎಷ್ಟೊ ಪದಗಳಿಗೆ ಇಂಗ್ಲೀಶಲ್ಲಿ ಪದಗಳಿಲ್ಲ. ಉದಾಹರಣೆಗೆ - ಲಟ್ಟಣಿಗೆ.. ಇತ್ಯಾದಿ.

ಅದಕ್ಕೆ ಲಕ್ಷಣವಾಗಿ ಕನ್ನಡ ಮಾತಾಡ್ ಬೇಕು ತಾನೆ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2008 - 5:46pm — ಸಂಗನಗೌಡ

ಉ:

ಸಂಗನಗೌಡ's picture

ಹರ್ಷ ಅವರೇ, ಬರೀ ಮಾತಿನಲ್ಲಸ್ಟೇ ಅಲ್ಲ, ನಡಾವಳಿ(ಸಂಸ್ಕ್ರುತಿ)ಯಲ್ಲೂ ನೀವು ಹೇಳಿರುವ "ಇಂತ" ಮಂದಿ ಇಂಗಳೀಸನ್ನು ಹಿಂಬಾಲಿಸುತ್ತಿದ್ದಾರೆ, ಅವರ ಮಕ್ಕಳನ್ನು ಕೇಳಿ ನೋಡಿ, ತಿನ್ನೋದರಲ್ಲಿ ಏನಿಸ್ಟ ಅಂದರೆ, ಪಿಜ್ಜಾ ಅನ್ನುತ್ತೆ, ಕುಡಿಯೋದರಲ್ಲಿ ’ಕೋಕ ಕೋಲ’,.. ದೇವರಿಗೆ ಆರತಿ-ಗೀರತಿ ಅವರ ಮನೆಗಳಲ್ಲಿ ಇರಲ್ಲ, ಏನಿದ್ದರೂ ’ಪ್ರೇಯರ್’ ಅಸ್ಟೇ.. ಜಡೆ ಹಾಕುದರ ಬಗ್ಗೆ, ಬೈತಾಲೆ ತೆಗೆಯುವದರ ಬಗ್ಗೆ ಮಾತೇ ಬರೋದಿಲ್ಲ, ಒಬ್ಬಟ್ಟು, ಪಾಯ್ಸ, ಮುದ್ದೆ ಮಾಡಲ್ಲ ಅವರು,.. ರೋಟಿ, ಚಪಾತಿ, ಕರ್ರಿ, ಇಂತವೇ,.. ಮಾಡಿದ್ರು ಅದು ಬರೀ ’ಸ್ವೀಟ್’ ಅಂತಸ್ಟೇ ಕರೆಸಿಕೊಳ್ಳುತ್ತದೆ...
ಮಂದಿ,.. ಬರೀ ನುಡಿ ಅಲ್ಲ, ನಡಾವಳಿಯನ್ನೇ ಹಿಂಬಾಲಿಸುತ್ತಿರುವದರಿಂದ,.. ನುಡಿಯೂ ಅವರಿಗೆ ಬೇಕಿಲ್ಲವಾಗುವರಲ್ಲಿ ಬೆರಗಿಲ್ಲ...

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 26, 2008 - 12:02am — Deeparavishankar

ಉ: ಮನೆಲಿ ಮಾತೃ ಬಾಷೆಲಿ ಮಾತಾಡೊಕೆ ಎನ್ ರೋಗ ?

Deeparavishankar's picture

ಹೋಟೆಲಲ್ಲಿ ಇಡ್ಲಿ ವಡೆ ಅನ್ನೋದು ಅವಮಾನ..ಇಡ್ಲಿ ವಡಾ ಅನ್ನಬೇಕು. ಅನ್ನ ಹುಳಿ ಅಲ್ಲ..ಸಾ೦ಬಾರ್, ಒಬ್ಬಟ್ಟು ಅ೦ತಾರೇನ್ರೀ ಥೂ..ಒಬ್ಬಚ್ಚು ಅನ್ನಬೇಕು.ಆಗ ಒಬ್ಬಟ್ಟಿಗೆ ಇ೦ಗ್ಲಿಷ್ ಟಚ್ ಬರತ್ತೆ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 26, 2008 - 5:34pm — shreekant.mishrikoti

ಉ: ಮನೆಲಿ ಮಾತೃ ಬಾಷೆಲಿ ಮಾತಾಡೊಕೆ ಎನ್ ರೋಗ ?

shreekant.mishrikoti's picture

ಕನ್ನಡಿಗರೇ ಮೊಸರ್ ವಡೆ ಅನ್ನೋ ಒಳ್ಳೇ ಹೆಸರಿಟ್ಕೊಂಡು ಥೈರ್ ಒಡೆ ಅಂತಾರಲ್ರೀ ?
ನಾನು ಒಬ್ರಿಗೆ ಈ ವಿಷಯ ( ವಡೆ ಅಲ್ಲ Smiling ) ಎತ್ತಿ ತೋರಿದಾಗ ಅರೆ ಹೌದಲ್ಲ ? ಅಂತ ಅಚ್ಚರಿಪಟ್ರು.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 26, 2008 - 5:55pm — kpbolumbu

ಉ: ಮನೆಲಿ ಮಾತೃ ಬಾಷೆಲಿ ಮಾತಾಡೊಕೆ ಎನ್ ರೋಗ ?

kpbolumbu's picture

ಮನೇ ವಳೀಕ್ಕೆ ಮೊಸರೊಡೆ, ಹೊರಗೇನಿದ್ದರೂ ತೈರೊಡೆ, ಕರ್ಡ್ ವಡಾ.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 26, 2008 - 9:43pm — smurthygr

ಉ: ಮನೆಲಿ ಮಾತೃ ಬಾಷೆಲಿ ಮಾತಾಡೊಕೆ ಎನ್ ರೋಗ ?

smurthygr's picture

ಮನೆಯಲ್ಲಾದರೂ ಕನ್ನಡದಲ್ಲಿ ವಡೆ ಅಂದರೆ ಪುಣ್ಯ! ಅಲ್ಲೂ "ವಡಾ"ವೇ ಹೆಚ್ಚು ಪ್ರಚಲಿತ (ಬೆಂಗಳೂರಿನಲ್ಲಿ) ಅಂತ ಅನ್ಸುತ್ತೆ! ವಡೆಗೆ (ವಡಾಕ್ಕೆ?) ಇಂಗ್ಲಿಷ್‌ನಲ್ಲಿ ಏನಂತಾರೋ ಈ ಬೃಹಸ್ಪತಿಗಳಿಗೆ ಗೊತ್ತಾಗಿಲ್ವೇನೋ? ಇಂಗ್ಲಿಷ್ ನಲ್ಲಿ ಹೆಸರಿಲ್ಲ ಅಂತ ವಡೆ ತಿನ್ನೋದು ಬಿಡಲ್ಲ ತಾನೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 26, 2008 - 9:44pm — smurthygr

ಉ: ಮನೆಲಿ ಮಾತೃ ಬಾಷೆಲಿ ಮಾತಾಡೊಕೆ ಎನ್ ರೋಗ ?

smurthygr's picture

ಅದೇ ರೀತಿ ಅನ್ನ ಅಂತ ಮುದ್ದಾಗಿ ಅನ್ನೋ ಬದಲು ವೈಟ್ ರೈಸ್ ಅಂತಾರಲ್ಲ! ಹೊಟ್ಟೆ ಆದರೂ ಹೇಗೆ ತುಂಬುತ್ತೋ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 26, 2008 - 10:02pm — hamsanandi

ಉ: ಮನೆಲಿ ಮಾತೃ ಬಾಷೆಲಿ ಮಾತಾಡೊಕೆ ಎನ್ ರೋಗ ?

hamsanandi's picture

ಇನ್ನಷ್ಟು ಊಟದ ಹೆಸರುಗಳು - ಇವೆಲ್ಲ ಬೆಂಗಳೂರಿನಲ್ಲಿ ನೋಡಿರುವುದೇ/ಕೇಳಿರುವುದೇ

ರೈಸ್ ಬಾತ್ (!!)
ಯೆಲ್ಲೋ ರೈಸ್
ಕರ್ಡ್ ರೈಸ್
ರಸಂ - ಕೆಲವರಿಗೆ ಸಾರು ಅನ್ನೋದು ಇಂಗ್ಲಿಷ್ ನಲ್ಲಿ ರಸಂ ಆಗತ್ತೆ ಅಂದ್ಕೊಂಡ್ಬಿಟ್ಟಿರ್ತಾರೆ

ಇನ್ನು ದೋಸಾ, ವಡಾ, ಉಪ್ಮಾ ಗಳಿಗಂತೂ ಲೆಕ್ಕವೇ ಇಲ್ಲ!

(ವಡೆ ದೋಸೆ ಉಪ್ಪಿಟ್ಟುಗಳೆಲ್ಲ ಎಲ್ಲಿ ಹೋದವೋ ಗೊತ್ತಿಲ್ಲ Sad )

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 26, 2008 - 10:08pm — kalpana

ಉ: ಮನೆಲಿ ಮಾತೃ ಬಾಷೆಲಿ ಮಾತಾಡೊಕೆ ಎನ್ ರೋಗ ?

kalpana's picture

ನನ್ನ ಅಮೇರಿಕನ್ ಮಕ್ಕಳು "ಡ" ಹೇಳಲಾರದೆ "ವದೆ ಬೇಕು" ಅಂತ ಹೇಳಿಕೊಂಡು ತಿರುಗುತ್ತಿರುತ್ತವೆ Smiling
~ಕಲ್ಪನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 27, 2008 - 12:29am — createam

ಉ: ಮನೆಲಿ ಮಾತೃ ಬಾಷೆಲಿ ಮಾತಾಡೊಕೆ ಎನ್ ರೋಗ ?

createam's picture

ಇಲ್ಲಿ ಕನ್ನಡ ಸಂಘದ ಒಂದು ಕಾರ್ಯಕ್ರಮದಲ್ಲಿ "ಹಾರುತಿಹುದು ನಮ್ಮ ಬಾವುಟ" ಅನ್ನೋದನ್ನ ಇಡೀ ಮಕ್ಕಳ ಗುಂಪೇ "ಬಾವುಚಾ" ಅಂತ ಹಾಡು ಪೂರ್ತಿ ಹಾಡಿದ್ದು ನೆನಪಾಯ್ತು Sticking out tongue
ಇಲ್ಲಿವರ್ಗು ನೋಡಿರೊವ್ರಲ್ಲು ಅತೀ confused ಅಂದ್ರೆ ಮೊದಲನೆ ತಲೆಮಾರಿನ ಭಾರತೀಯ-ಅಮೆರಿಕನ್ ಜನ (ಸುಮಾರು ಸಹ ಕೆಲಸಗಾರರಿದ್ದಾರೆ). ವಲಎ ಹೋದವ್ರು ಹೆಚ್ಚಾಗಿ ಭಾರತೀಯರಾಗೆ ಇರ್ತಾರೆ, ೨-೩ ನೇ ತಲೆಮಾರಿನವರು ಅಮೆರಿಕನ್ನರಾಗಿಬಿಡ್ತಾರೆ, ಆದ್ರೆ ಮೊದಲನೆ ತಲೆಮಾರಿನವರು ಮಾತ್ರ totally confused

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಯಾಕೆ ಅಂದ್ರೆ ಕನ್ನಡ ಭಾಷೆ ಸ್ಪಷ್ಟ, ಸುಂದರ ಮತ್ತು ನಿಖರ
  • ಕನ್ನಡದಲ್ಲಿ ಮಾತಾಡಿ ಪ್ಲೀಸ್
  • ಕನ್ನಡತನ
  • ಬಿಳಿಯ Vs ಬಿಳಿಯದು
  • ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?
Syndicate content

ಲೇಖಕರು

harsha.st's picture

ಪೂರ್ಣ ಹೆಸರು
ಹರ್ಷ

ಪರಿಚಯ

ನನ್ನ ಹೆಸರು ಹರ್ಷ. ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡ್ತಾ ಇದೀನಿ.. ಬೆಂಗಳೂರು ವಿಜಯನಗರದಲ್ಲಿ ವಾಸ.
ಹುಟ್ಟಿದ್ದು, ಬೆಳದದ್ದು - ಶಿವಮೂಗ್ಗ ಜಿಲ್ಲೆಯ ಬೇರೆ ಬೇರೆ ಊರುಗಳು;
ಆಸಕ್ತಿ - ರಾಜಕೀಯ,ಸಾಹಿತ್ಯ,ಸಂಗೀತ,ಚಲನಚಿತ್ರ.... ;
ಆದರ್ಶ - ಸರ್.ಎ೦.ವಿ. , ಸುಬಾಷ್ ಚಂದ್ರ ಬೋಸ್ , ಕುವೆಂಪು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 344 ಅತಿಥಿಗಳು ಆನ್ಲೈನ್ ಇರುವರು.


ಕರ್ಮ ಮಾರ್ಗ ಪ್ರಕೃತಿ ಪರಾಯಣ, ಜ್ಞಾನಮಾರ್ಗ ಆತ್ಮ ಪರಾಯಣ ಮತ್ತು ಭಕ್ತಿಮಾರ್ಗ ಪ್ರಭು ಪರಾಯಣವಾಗಿರುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator