ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಪಾಡ್ಯ

September 30, 2008 - 12:17am — hamsanandi

ಮೊನ್ನೆ ಶನಿವಾರ ಒಂದು ಸೊಗಸಾದ ಸಂಗೀತ ಕಚೇರಿಗೆ ಹೋಗುವ ಅವಕಾಶ ದೊರೆತಿತ್ತು. ಒಂದು ಒಳ್ಳೇ ಉದ್ದೇಶಕ್ಕಾಗಿ ಆಯೋಜಿತವಾಗಿದ್ದ ಕಾರ್ಯಕ್ರಮ ಅದು. ಹಾಡುಗಾರ್ತಿ ಹಾಡಲು ಕರ್ನಾಟಕದ ವಾಗ್ಗೇಯಕಾರ ರಚನೆಗಳನ್ನೇ ಆಯ್ದಿದ್ದರು. ಮೈಸೂರು ಸಂಗೀತದ ಒಂದು ಪ್ರಮುಖ ಕೇಂದ್ರವಾದ್ದರಿಂದ ಮೈಸೂರಿನ ವಾಗ್ಗೇಯಕಾರರ ರಚನೆಗಳೇ ಅದರಲ್ಲಿ ಹೆಚ್ಚಾಗಿದ್ದರಲ್ಲಿ ಆಶ್ಚರ್ಯವೇನಿಲ್ಲ.

ಅವರು ಹಾಡಿದ ರಚನೆಗಳಲ್ಲಿ ಮೊದಲ ರಚನೆಯನ್ನು ನವರಾತ್ರಿಯ ಮೊದಲ ದಿನವಾದ ಇಂದು ನಿಮಗೆ ಕೇಳಿಸೋಣ ಎನ್ನಿಸಿತು. ಅದಕ್ಕೆ ಎರಡು ಮೂರು ಕಾರಣಗಳಿವೆ. ಒಂದು ದಸರ ಅಂದರೆ ಮೈಸೂರು, ಮೈಸೂರು ಅಂದರೆ ದಸರಾ ಅನ್ನಿಸುವ ಈ ನವರಾತ್ರಿ ಹಬ್ಬದಲ್ಲಿ, ಮೈಸೂರಿನಲ್ಲಿ ರಚನೆಯಾದ ಇದು ಒಳ್ಳೇ ಆರಂಭವನ್ನು ತರುತ್ತೆ ಎನ್ನುವುದು. ಎರಡನೆಯದು, ಸಂಗೀತ ಕಚೇರಿಯನ್ನು ವರ್ಣದೊಂದಿಗೆ ಆರಂಭಿಸಿದಾಗ ಅದು ಸೊಗಸುತ್ತೆಂಬ ನಂಬಿಕೆಯಂತೆ, ಈ ಹಾಡನ್ನು ಕೇಳುತ್ತ ನವರಾತ್ರಿ ಹಬ್ಬವೂ ಎಲ್ಲರಿಗೂ ಸೊಗಸಲಿ ಎನ್ನುವುದು ನನ್ನ ಆಸೆ. ಮೂರನೆಯ ವಿಷಯಕ್ಕೆ
ಮತ್ತೆ ಬರುವೆ.

ಈ ರಚನೆ ಒಂದು ದರು ವರ್ಣ. ವರ್ಣ ಎನ್ನುವುದು ಸಂಗೀತದಲ್ಲಿ ಒಂದು ಸಂಗೀತಕ್ಕೆ ಪ್ರಾಮುಖ್ಯತೆ ಕೊಡುವಂತಹ ರಚನೆ. ಅಂದರೆ ಸಾಹಿತ್ಯದ ಅಂಶ ಕಡಿಮೆ ಇದ್ದು, ರಾಗಗಳ ವಿವಿಧ ಸಂಚಾರಗಳನ್ನು ಚೆನ್ನಾಗಿ ತೋರಿಸಿಕೊಡಲು ಇರುವಂತಹ ರಚನೆ ಇದು. ಪಲ್ಲವಿ ಅನುಪಲ್ಲವಿ ಆದನಂತರ ಚಿಟ್ಟೆಸ್ವರವೂ, ಮತ್ತೆ ಚರಣವಾದ ನಂತರ ಹಲವಾರು ಎತ್ತುಗಡೆ ಸ್ವರಗಳು ಇರುವುದೂ ಇದರ ಲಕ್ಷಣ.ವರ್ಣಗಳಲ್ಲಿ ದರು ಎನ್ನುವುದು ಒಂದು ವಿಧ. ದರು ವರ್ಣದಲ್ಲಿ
ಸಾಹಿತ್ಯಕ್ಕೆ ಬೇರೆ ವರ್ಣಗಳಿಗಿದ್ದಕ್ಕಿಂತ ಸ್ವಲ್ಪ ಹೆಚ್ಚಿನ ಪ್ರಾಮುಖ್ಯತೆ ಇದ್ದು, ನೃತ್ಯಕ್ಕೆ ಅನುಕೂಲವಾಗುವಂತೆ ಜತಿಗಳೂ ಇರುತ್ತವೆ. ಚಿಟ್ಟೆಸ್ವರಕ್ಕೂ ಸಾಹಿತ್ಯ ಜತಿಗಳಿರುವುದು ನರ್ತನ ಮಾಡುವವರಿಗೆ ಅವರ ಅಭಿನಯವನ್ನೂ, ಹೆಜ್ಜೆ ಹಾಕುವ ಕುಶಲತೆಯನ್ನೂ ಎತ್ತಿಹಿಡಿಯಲು ಒಳ್ಳೇ ಅವಕಾಶ ಕೊಡುತ್ತದೆ.

ಇವತ್ತು ನಾನು ಮಾತಾಡುತ್ತಿರುವುದು ಖಮಾಚ್ ರಾಗದಲ್ಲಿರುವ ಮುತ್ತಯ್ಯ ಭಾಗವತರ "ಮಾತೇ ಮಲಯ ಧ್ವಜ ಪಾಂಡ್ಯ ಸಂಜಾತೆ" ಎಂಬ ದರುವಿನ ಬಗ್ಗೆ. ಪಾಡ್ಯ ದ ದಿನ ’ಪಾಂಡ್ಯ’ ರಾಜಕುಮಾರಿಯನ್ನು ನೆನೆಯುವ, ಹೊಗಳಿ ಆರಾಧಿಸುವ ಈ ಈ ರಚನೆಯನ್ನು ಸಂಗೀತಪ್ರಿಯ ತಾಣಕ್ಕೆ ಇಲ್ಲಿರುವ ಕೊಂಡಿಗಳಿಂದ ಕೇಳಬಹುದು:

ಎಂ.ಎಸ್. ಸುಬ್ಬುಲಕ್ಷ್ಮಿಯವರ ಕೊರಳಲ್ಲಿ ಮಾತೆ ಮಲಯಧ್ವಜ ಪಾಂಡ್ಯ ಸಂಜಾತೆ

ಟಿ.ಎನ್. ಶೇಷಗೋಪಾಲನ್ ಅವರ ದನಿಯಲ್ಲಿ ಮಾತೆ ಮಲಯಧ್ವಜ ಪಾಂಡ್ಯ ಸಂಜಾತೆ

(ಈ ಕೊಂಡಿಗಳು ನನಗೇಕೋ ಫೈರ್ ಫಾಕ್ಸ್ ನಲ್ಲಿ ತೊಂದರೆ ಕೊಟ್ಟವು - ಆದರೆ ಇಂಟರ್ನೆಟ್ ಎಕ್ಸ್‍ಪ್ಲೋರರ್ ನಲ್ಲಿ ಚೆನ್ನಾಗಿ ಕೇಳಿದವು Smiling

ಮೇಲೆ ಹೇಳಿರುವ ಅಂಶಗಳನ್ನು ಹಾಡು ಕೇಳುವಾಗ ಗಮನಿಸಿ. ಸ್ವರಾಕ್ಷರ ಪ್ರಯೋಗಗಳೇ ತುಂಬಿದ ಈ ರಚನೆ ಹಬ್ಬದ ಹುರುಪಿಗೆ ಒಂದು ಒಳ್ಳೇ ಹಾಡೆಂದು ನನ್ನೆಣಿಕೆ.

ಈ ದರುವು ಸಂಸ್ಕೃತ ಪದಗಳೇ ಹೆಚ್ಚಿರುವ ಶೈಲಿಯ ಕನ್ನಡದಲ್ಲಿದೆ:

ಪಲ್ಲವಿ:

ಮಾತೇ ಮಲಯಧ್ವಜ ಪಾಂಡ್ಯ ಸಂಜಾತೆ ಮಾತಂಗ ವದನ ಗುಹ ||

ಅನುಪಲ್ಲವಿ:
ಶಾತೋದರಿ ಶಂಕರಿ ಚಂದ್ರಕಲಾಧರಿ ತಾಯೆ ಗೌರಿ! ||

ಚಿಟ್ಟೆಸ್ವರ ಸಾಹಿತ್ಯ:

ದಾತಾ ಸಕಲಕಲಾ ನಿಪುಣ ಚತುರ ದಾತಾ ವಿವಿಧಮತ ಸಮಯ ಸಮರಸ
ದಾತಾ ಸುಲಭ ವಚನಮಧುರ ವಚನದಾತಾ ಸರಸ ರುಚಿರತರ ಸ್ವರಲಯ
ಗೀತ ಸುಖದ ನಿಜಭಾವ ರಸಿಕ ವರದಾತ ಮಹಿಶೂರನಾಥ ನಾಲ್ವಡಿ ಶ್ರೀಕೃಷ್ಣ ರಾಜೇಂದ್ರ-
ರ ತಾಯೆ ಸದಾ ಪೊರೆ ಮಹಿತೆ ಹರಿಕೇಶ ಮನೋಹರೆ ಸದಯೆ! ||

ಚರಣ:
ಶಾಮೇ ಸಕಲಭುವನ ಸಾರ್ವಭೌಮೇ! ಶಶಿ ಮಂಡಲ ಮಧ್ಯಗೆ! ||

ಮೈಸೂರರಸರಾದ ನಾಲ್ವಡಿ ಶ್ರೀಕೃಷ್ಣರ ಆಸ್ಥಾನದಲ್ಲಿದ್ದ ಮುತ್ತಯ್ಯಭಾಗವತರು ಆ ದೊರೆಯನ್ನು ಎಲ್ಲ ಬಗೆಯ ಕಲೆಗಳಿಗೆ ಪೋಷಕ, ಸಂಗೀತ ನಾಟಕಗಳಲ್ಲಿ ರಸಿಕ, ಕಲಾವಿದರಿಗೆ ಕೊಡುಗೈದೊರೆ ಎಂದೆಲ್ಲ ಹೊಗಳುತ್ತ "ವಿವಿಧ ಮತ ಸಮಯ ಸಮರಸ ದಾತಾ" - ಎಲ್ಲ ಮತಗಳಲ್ಲೂ, ಎಲ್ಲ ಅಭಿಪ್ರಾಯಗಳಲ್ಲೂ, ಎಲ್ಲ ರೀತಿಯ ಸಮಯಗಳಲ್ಲಿಯೂ ಸಮರಸವನ್ನು ಕಂಡುಕೊಳ್ಳುವಂತಹ ದೊರೆ ಎಂದು ಹೊಗಳಿರುವಾದ, ಅದೇ ಪರಂಪರೆಯಲ್ಲಿರುವ ನಮ್ಮ ರಾಜ್ಯ ಹಾಗೇ ಮುಂದುವರೆದರೆ ಸೊಗಸಲ್ಲವೇ ಎನ್ನಿಸದಿರದು.

ನವರಾತ್ರಿ ಹಬ್ಬವು ನಿಮ್ಮೆಲ್ಲರಿಗೂ ಒಳ್ಳಿತನ್ನು ತರಲಿ ಎಂಬ ಹಾರೈಕೆ ನನ್ನದು.

-ಹಂಸಾನಂದಿ

  • ಕರ್ನಾಟಕ ಸಂಗೀತ
  • ದರು
  • ದಸರ
  • ನವರಾತ್ರಿ
  • ಮುತ್ತಯ್ಯ ಭಾಗವತರು
  • ಮೈಸೂರು
  • ವರ್ಣ
  • ಹಬ್ಬ
~.~
  • hamsanandi ರವರ ಬ್ಲಾಗ್
  • Login or register to post comments
  • 404 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 30, 2008 - 6:49am — csomsekraiah

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಪಾಡ್ಯ

csomsekraiah's picture

ಗ್ವಾಡಲೂಪೆ ನದಿಯ ದಡದಲ್ಲಿ ಕುಳಿತು ಕನ್ನಡಿಗರನ್ನು ಮರೆಯದೆ ನಿರಂತರ ಸಂಪರ್ಕವಿಟ್ಟುಕೊಂಡಿರುವ ಪ್ರೀತಿಯ ಹಂಸಾನಂದಿಯವರೇ
ನಿಮ್ಮಲೇಖನಗಳು ವಿದ್ವತ್ಪೂರ್‍ಣವಾಗಿರುತ್ತವೆ . ಅದಕ್ಕಾಗಿ ನಿಧಾನಕ್ಕೆ ಕುಳಿತು ಓದಬೇಕಾದ , ಆಲಿಸಬೇಕಾದ ಅವಶ್ಯಕತೆ ಅವುಗಳಿಗಿರುತ್ತದೆ. ನಿಮಗೆ ಪ್ರತಿಕ್ರಿಯೆ ಕೊಡುವುದಕ್ಕಿಂತ ಅವುಗಳನ್ನು ಆನಂದಿಸುವುದರಲ್ಲಿಯೇ ಸಂತೋಷ ಕಾಣುತ್ತಿರುವ ನಾನು . ನಿಮಗೆ ಹೇಗೆ ವಂದನೆಗಳನ್ನು ತಿಳಿಸಲಿ .

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 30, 2008 - 7:47am — shaamala

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಪಾಡ್ಯ

shaamala's picture

ಹಂಸಾನಂದಿಯವರೇ,

ನವರಾತ್ರಿ ಹಬ್ಬದ ಶುಭಾಶಯಗಳು. ಶರನ್ನವರಾತ್ರಿಯ ಪಾಡ್ಯದ ಔತಣ ಸೊಗಸಾಗಿದೆ. ಎರಡೂ ಕೊಂಡಿಗಳಲ್ಲೂ ಶ್ರೀಮತಿ. ಸುಬ್ಬುಲಕ್ಷ್ಮಿಯವರ ಹಾಡುಗಾರಿಕೆ ಕೇಳಿಬರ್ತಾ ಇದೆ. ನಿಮಗೆ ಸಮಯ ದೊರೆತಾಗ ದಯವಿಟ್ಟು ಅದನ್ನು ಸರಿಪಡಿಸಿ.

ಧನ್ಯವಾದಗಳು
ಶಾಮಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 30, 2008 - 11:27am — hamsanandi

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಪಾಡ್ಯ

hamsanandi's picture

ಕೊಂಡಿ ತಪ್ಪಾಗಿದ್ದ್ದುದ್ದನ್ನು ತಿಳಿಸಿದ್ದು ಒಳ್ಳೆಯದಾಯಿತು! ಈಗ ಸರಿ ಮಾಡಿದ್ದೇನೆ. ನೋಡಿ - ಅಥವಾ ಕೇಳಿ Smiling

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 30, 2008 - 8:46am — shylaswamy

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಪಾಡ್ಯ

shylaswamy's picture

ಪ್ರಿಯ ಹಂಸಾನಂದಿಯವರೆ,
ತಮಗೆ ನವರಾತ್ರಿಯ ಶುಭಾಶಯಗಳು. ಶ್ಯಾಮಲರವರು ಹೇಳಿದ ಹಾಗೆ ಎರಡು ಕೊಂಡಿಗಳಲ್ಲೂ ಎಮ್.ಎಸ್. ಸುಬ್ಬುಲಕ್ಷ್ಮಿಯವರದ್ದೇ ಬರ್ತಾ ಇದೆ. ನವರಾತ್ರಿಯ ದಿನ ಸುಬ್ಬುಲಕ್ಷ್ಮಿಯವರ ಗಾನದಿಂದ ಪ್ರಾರಂಭವಾಗುವಂತೆ ಮಾಡಿದ್ದೀರಿ. ಧನ್ಯವಾದಗಳು.
ಶೈಲಾಸ್ವಾಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
  • ನವರಾತ್ರಿಯ ನಾಲ್ಕನೇ ದಿನ
  • ನವರಾತ್ರಿಯ ಎಂಟನೇ ದಿನ
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಚೌತಿ
  • ಓದಿದ್ದು ಕೇಳಿದ್ದು ನೋಡಿದ್ದು-35 ಸಿಯೋಲಿನಲ್ಲಿ ಸಸ್ಯಾಹಾರ ಸಿಗುತ್ತಾ?
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೆಸರಲ್ಲೇನಿದೇ ರೀ? ನೀಲಾಂಜನ .. ರಾಮಕ್ರಿಯ .... ಹಂಸಾನಂದಿ ಯಾವ್ದೋ ಒಂದು!
ಒಬ್ಬ ಸಂಪದಿಗ - ಇನ್ನೂ ಹೆಚ್ಚಿಗೆ ಹೇಳ್ಬೇಕಾದ್ರೆ ಒಬ್ಬ ಕನ್ನಡಿಗ ಅಂದ್ರೆ ಸಾಕು. ಅಲ್ವಾ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 400 ಅತಿಥಿಗಳು ಆನ್ಲೈನ್ ಇರುವರು.


ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator