ಈಗಿನಂತೆ 0 ಸದಸ್ಯರು ಮತ್ತು 22 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಅರೆ ಮಲೆನಾಡಿನ ಮಾಗಿ ಹಣ್ಣು 'ಗುಡ್ಡೇ ಗೇರು'
H G Arun kumar Huruli's picture
ಹೆಚ್.ಜಿ.ಅರುಣ ಕುಮಾರ್ ಹುರುಳಿ.
17
Jan
2012
ಬ್ಲಾಗ್ ಬರಹ

ಅರೆ ಮಲೆನಾಡಿನ ಮಾಗಿ ಹಣ್ಣು ಗುಡ್ಡೇ ಗೇರು

...

ಪ್ರತಿಕ್ರಿಯೆಗಳು: 8
ಹಿಟ್ಸ್ : 201
ಬಸ್ ಪ್ರಯಾಣದ ನೆನಪುಗಳು
addoor's picture
ಅಡ್ಡೂರು ಕೃಷ್ಣ ರಾವ್
19
Sep
2011
ಲೇಖನ
             ...
ಪ್ರತಿಕ್ರಿಯೆಗಳು: 7
ಹಿಟ್ಸ್ : 308
ಅನನ್ಯ ಅಲ್ಲಮ ೫ (೨)
csomsekraiah's picture
ಸಿ ಸೋಮಶೇಖರಯ್ಯ
26
Jun
2010
ಪುಟ

 

...
ಪ್ರತಿಕ್ರಿಯೆಗಳು: 0
ಹಿಟ್ಸ್ : 795
ವಾಕ್ಪಥ ೩ ನೇ ಹೆಜ್ಜೆ - ಒಂದು ವರದಿ ಸಂಪದ ಓದುಗರಿಗಾಗಿ ಮಾತ್ರ!
partha1059's picture
ಪಾರ್ಥಸಾರಥಿ
08
May
2011
ಲೇಖನ

ವಾಕ್ಪಥ ೩ ನೇ ಹೆಜ್ಜೆ - ಒಂದು ವರದಿ ಸಂಪದ ಓದುಗರಿಗಾಗಿ  ಮಾತ್ರ!

ಈ ಬಾನುವಾರ ಅಂದರೆ ೨೦೧೧ ರ ಮೇ ತಿಂಗಳ ೮ ರಂದು ವಾಕ್ಪಥ...

ಪ್ರತಿಕ್ರಿಯೆಗಳು: 27
ಹಿಟ್ಸ್ : 629
ಸಹವಾಸ ದೋಷ
hamsanandi's picture
ಹಂಸಾನಂದಿ
05
May
2010
ಬ್ಲಾಗ್ ಬರಹ

ಕಾದ ಕಬ್ಬಿಣದ ಮೇಲೆ ಬೀಳಲು ನೀರಹನಿ ಹೆಸರಿಲ್ಲದಂತಳಿವುದು
ಕಮಲದೆಲೆಯ ಮೇಲೆ...

ಪ್ರತಿಕ್ರಿಯೆಗಳು: 13
ಹಿಟ್ಸ್ : 1,039
ಮತದಾನ .
supreethjburji's picture
26
Jun
2006
ಬ್ಲಾಗ್ ಬರಹ

ಮೊನ್ನೆ ಮೊದಲ ಬಾರಿಗೆ ನನ್ನ ಮತದಾನದ ಗುರುತಿನ ಚೀಟಿ ಮನೆಗೆ ಬಂದಿತ್ತು ! ನನಗೀಗ ಮತದಾನದ ಹಕ್ಕು ಲಭಿಸಿದೆ ಎಂದಾಕ್ಷಣ ಏನೋ ಖುಷಿ , ಅದರ ಜೊತೆಗೆ ಕುತೂಹಲ !

ಖುಷಿ...

ಪ್ರತಿಕ್ರಿಯೆಗಳು: 1
ಹಿಟ್ಸ್ : 1,321
ಯುಗಯುಗಾದಿ ಕಳೆದರೂ ’ಯುಗಾದಿ’ ಕವಿತೆ ಮೆರೆದಿದೆ
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
15
Mar
2010
ಪುಟ

  ಯುಗಾದಿಯೆಂದರೆ ಬೇವುಬೆಲ್ಲ, ಒಬ್ಬಟ್ಟು (ಹೋಳಿಗೆ), ಪಂಚಾಂಗಶ್ರವಣ ಮತ್ತು ಬೇಂದ್ರೆ ಕವನ.
  ಯುಗಾದಿಯಂದು ಸಂಭ್ರಮ ತರುವುದು ಹೊಸ ವರುಷ. ಜೊತೆಗೆ,...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,181
ಎಲ್ಲ ಕೊಟ್ಟವನ ವಿರುದ್ಧ ದಂಗೆ ಏಳುವದು ಹರಾಮಿಕೋರತನವಾಗುತ್ತದೆ
uday_itagi's picture
ಉದಯ್ ಇಟಗಿ
15
Mar
2011
ಲೇಖನ

ಲಿಬಿಯಾದಲ್ಲಿ ಈ ಎಲ್ಲ ಗಲಾಟೆ ಶುರುವಾಗುವದಕ್ಕೆ ಎಂಟು ದಿನ ಮುನ್ನವೇ ನಾನು ಹದಿನೈದು ದಿನದ ಮಟ್ಟಿಗೆ ನನ್ನ ಮಧ್ಯಂತರ ರಜೆಯ ಮೇರೆಗೆ ಭಾರತಕ್ಕೆ ಬಂದಿಳಿದಿದ್ದೆ. ಅಸಲಿಗೆ ನಾನು...

ಪ್ರತಿಕ್ರಿಯೆಗಳು: 14
ಹಿಟ್ಸ್ : 750
ಆಧುನಿಕತೆಯ ರೋಗಗಳು
skakkilaya's picture
ಡಾ| ಶ್ರೀನಿವಾಸ ಕಕ್ಕಿಲ್ಲಾಯ
06
Nov
2006
ಬ್ಲಾಗ್ ಬರಹ

'ನಾವು ಮನುಷ್ಯರಯ್ಯ, ಪ್ರಾಣಿಗಳಲ್ಲ'. ಅದರಲ್ಲೇಕೆ ಸಂಶಯ? ನಾವು ಪ್ರಾಣಿಗಳಲ್ಲವೆಂದೋ ಅಥವಾ ಪ್ರಾಣಿಗಳಿಗಿಂತ ಮಿಗಿಲೆಂದೋ ಹೇಳಿಕೊಳ್ಳದಿದ್ದರೆ ನಮ್ಮ ಅಹಮ್ಮಿಗೆ ಸಂತೃಪ್ತಿ...

ಪ್ರತಿಕ್ರಿಯೆಗಳು: 0
ಹಿಟ್ಸ್ : 2,117
೯೦ರ ತೆನೆ: ಇನ್ನುಳಿದ ದಿನಗಳ ಸಾರ್ಥಕ ಬದುಕಿಗಾಗಿ
Shivashankar Rao's picture
Addoor Shivashankar Rao
01
Mar
2012
ಲೇಖನ

ತೊಂಬತ್ತು ವರುಷ ವಯಸ್ಸು ತುಂಬುತ್ತಿದೆ ನನಗೆ. ನಾನು ಸಾಕಷ್ಟು ದೀರ್ಘ ಕಾಲ ಬದುಕಿದ್ದೇನೆ ಅನಿಸುತ್ತದೆ. ಹಲವು ವ್ಯಕ್ತಿಗಳ ಸಾವಿನ ಸುದ್ದಿ ಓದಿದಾಗ ಅಥವಾ ಕೇಳಿದಾಗ, ನಾನು...

ಪ್ರತಿಕ್ರಿಯೆಗಳು: 9
ಹಿಟ್ಸ್ : 251

ಆಯ್ದ ಲೇಖನಗಳು

ಅಡ್ಡೂರು ಕೃಷ್ಣ ರಾವ್
(1 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
Addoor Shivashankar Rao
(1 ಪ್ರತಿಕ್ರಿಯೆ)
ಶ್ರೀಪತಿ ಮ. ಗೋಗಡಿಗೆ
(21 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)

ಅವನಿಲ್ಲ

ಅವನಿಲ್ಲ

ಅವನಿಲ್ಲದೇ ಎಂಟು ವರ್ಷ ಕಳೆದು ಹೋಯಿತು. ಎಂಟು ವರ್ಷ ಹೇಗೆ ಕಳೆಯಿತೆಂದು ತಿಳಿಯಲೇ ಇಲ್ಲ ಎಂದು ಸುಳ್ಳು ಹೇಳಲಾರೆ. ಅವನನ್ನು ಈ ಎಂಟು ವರ್ಷಗಳಲ್ಲಿ ಎಷ್ಟು ಬಾರಿ ನೆನೆದಿರಬಹುದು ಎಂಬ ಲೆಕ್ಕವನ್ನೂ ನಾನು ಇಡಲಾರೆ. ಹಾಗೇ, ನಾನು ಎಂಟು ವರ್ಷ ಹಿಂದೆ, ಇದೇ ದಿನ, ಮುಂಜಾನೆ ಬಂದ ಆ ಘೋರ ದೂರವಾಣಿ ಕರೆಯನ್ನೂ ಎಂದೆಂದಿಗೂ ಮರೆಯಲಾರೆ.

ಅವನು ಇದ್ದಿದ್ದು ಒಂದು ಚಿಕ್ಕ ಊರಿನಲ್ಲಿ. ಚಿಕ್ಕ ಊರೆಂದರೆ, ಸಣ್ಣ ಹಳ್ಳಿಯೂ ಅಲ್ಲ, ಭಾರೀ ನಗರವೂ ಅಲ್ಲ - ಆ ರೀತಿಯ ನಡುವಿನ ಮಟ್ಟದ ಒಂದು ಪಟ್ಟಣ. ಅಲ್ಲಿಗೊಂದು ಒಳ್ಳೇ ಶಾಲೆ. ಆ ಊರಿಗೆ ಬಂದಾಗ ಅವನು ಮೂರನೆಯದೋ-ನಾಕನೆಯದೋ ತರಗತಿಯರಲ್ಲಿ ಇದ್ದಿರಬೇಕು. ಶಾಲೆಯ ಎಲ್ಲ ಕಲಿಸುವವರಿಗೂ ಅಚ್ಚುಮೆಚ್ಚಾಗಲು ಅವನಿಗೆ ಹೆಚ್ಚೇನೂ ವೇಳೆ ಬೇಕಾಗಲಿಲ್ಲ. ತನ್ನ ಹೆಸರಿಗೆ ತಕ್ಕಂತೆ, ಎಲ್ಲರ ಮನಸ್ಸನ್ನೂ ಕದ್ದುಬಿಟ್ಟ ಅವನು. ಯಾವ ಪ್ರಬಂಧ ಸ್ಪರ್ಧೆಯಾಗಲಿ, ಚರ್ಚಾಕೂಟವಾಗಲಿ, ಅವನಿಗೆ ಬಹುಮಾನ ಅನ್ನುವುದು ಕಟ್ಟಿಟ್ಟ ಬುತ್ತಿಯೇ. ಪರೀಕ್ಷೆಗಳಲ್ಲಿ, ಬರೇ ಶಾಲೆಗೇಕೆ, ಜಿಲ್ಲೆಗೇ ಮೊದಲಿದ್ದವನು ಅವನು.

ಅವನು ನನಗಿಂತ ಎಂಟು ವರ್ಷ ದೊಡ್ಡವನು. ಚಿಕ್ಕ ವಯಸ್ಸಿಗೇ ಬಹಳ ವಿಷಯಗಳನ್ನು ಅರಿತಿದ್ದ ಅವನು, ಅದೇ ರೀತಿ ನಾನೂ ಆಗಬೇಕೆಂಬ ಬಯಕೆಯನ್ನು ನನಗೆ ಗೊತ್ತೊಲ್ಲದೇ ಮೂಡಿಸಿದ್ದ. ಲೈಬ್ರರಿಗೆ ತಾನು ಹೋಗುವಾಗ ನನ್ನನ್ನೂ ಕರೆದೊಯ್ದು, ನನ್ನ ಮುಂದೆ ಪುಸ್ತಕಗಳನ್ನು ಹಾಕಿ ಓದಲು ಹೇಳುತ್ತಿದ್ದ. ನನಗೆ ಓದುವ ಹುಚ್ಚು ಹತ್ತಿಸಿದ್ದೇ ಅವನು ಅನ್ನೋದು ನನ್ನ ನೆನಪು. ಅವನ ಜೊತೆ ನಾನು ಹೋಗುತ್ತಿದ್ದರೆ, ನನಗೆ ಎಲ್ಲರೂ ನನ್ನನ್ನೇ ನೋಡ್ತಾ ಇದ್ದಾರೆ, ಅನ್ನೋ ಅನಿಸಿಕೆ. ನಾನು ಆ ಶಾಲೆಯೆ ಸೇರಿದ ವರ್ಷ ಅವನು ಆ ಶಾಲೆಯಿಂದ ಹೊರಬಿದ್ದ. ಅದೂ ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯಕ್ಕೇ ಮೂರನೇ ಸ್ಥಾನ ಪಡೆದು. ಹಾಗಾಗಿ, ನಾನು, ಅವನು ಒಂದು ಶಾಲೆಯಲ್ಲಿ ಯಾವತ್ತೂ ಹೋಗಿದ್ದೇ ಇಲ್ಲ. ಹಾಗಿದ್ದ್ರೂ, ಎಷ್ಟೋ ಜನ ಕಲಿಸುವವರು ಅವನ ಬಗ್ಗೆ ನನ್ನಲ್ಲಿ ವಿಚಾರಿಸಿಕೊಳ್ಳುವವರೇ. ಶಾಲೆಯಲ್ಲಿ ನನಗೆ ಅಂತ ಒಂದು ವ್ಯಕ್ತಿತ್ವ, ಬರುವ ವೇಳೆಗೆ, ಅವನು ಮೊದಲ, ಎರಡನೆ ಪ್ರಿಯೂನಿವರ್ಸಿಟಿ ಪರೀಕ್ಷೆಗಳೆರಡರಲ್ಲೂ ರಾಜ್ಯಕ್ಕೇ ಹತ್ತರೊಳಗೇ ಬಂದು ಹೆತ್ತವರಿಗೆ ಹೆಮ್ಮೆ ತಂದ. ಎಲ್ಲ ಪತ್ರಿಕೆಗಳಲ್ಲೂ ಅವನ ಚಿತ್ರ. ಆದರೂ, ಹಮ್ಮು -ಬಿಮ್ಮಿಲ್ಲದ ಸ್ವಭಾವ ಅವನದು. ತನಗೇನು ಗೊತ್ತು ಅನ್ನುವುದನ್ನು ವಾಚ್ಯವಾಗಿ ತೋರಿಸಿಕೊಳ್ಳದೆಯೇ, ಅದರ ಅನುಭವ ಮಾತ್ರ ಮಾಡಿಸುವ ಅವನ ಗುಣ ಹಲವರಲ್ಲಿ ಕಾಣಸಿಗದು.

ನಾನು ಮಿಡಲ್ ಸ್ಕೂಲ್ ಗೆ ಬಂದಾಗಲೇ, ಅವನು ವೈದ್ಯಕೀಯ ಓದಲು, ಪರಊರಿಗೆ ತೆರಳಿ ಆಗಿತ್ತು. ಆದರೂ, ಬಂದಾಗಲೆಲ್ಲ, ತನ್ನ ತಿಂಗಳ ಖರ್ಚಿಗೆ ಅಪ್ಪ ಕಳಿಸಿದ್ದ ದುಡ್ಡಿನಲ್ಲೇ ಹಣ ಮಿಗಿಸಿ, ಅಲ್ಲಿ ಇಲ್ಲಿ - ಪುಸ್ತಕ ಪ್ರದರ್ಶನಗಳಲ್ಲಿ ಕಂಡ ಪುಸ್ತಕಗಳನ್ನು, ಮುಖ್ಯವಾಗಿ ವಿಜ್ಞಾನ ಸಂಬಂಧೀ ವಿಷಯಗಳಲ್ಲಿ ತಂದುಕೊಡುತ್ತಿದ್ದ. ನನ್ನ ಓದುವ ಆಸೆಗೆ ನೀರೆರೆಯುತ್ತಿದ್ದ. ಶಾಲೆಯಲ್ಲಿ ನನ್ನ ಪ್ರಗತಿ ಕೇಳಿ ಸಂತಸಪಡುತ್ತಿದ್ದ, ಯಾವಾಗಲೂ ಹುರಿದುಂಬಿಸುತ್ತಿದ್ದ.

ಓದು ಮುಗಿಸಿ ಊರಿಗೆ ಮರಳಿ, ಜನರ ನೆಚ್ಚಿನ ವೈದ್ಯನಾಗಿ ಹೆಸರು ಗಳಿಸಿದ. ಆದರೆ, ಅದರಲ್ಲಿ ಸಮಾಧಾನ ಸಿಗಲಿಲ್ಲವೇನೋ ಅವನಿಗೆ. ಮುಂದೆ ಓದಲು ಹೋದವನು, ಒಂದೆಡೆಯಿಂದ ಇನ್ನೊಂದೆಡೆ ಹೋಗುತ್ತಲೇ ಇದ್ದ. ಬೆಂಗಳೂರಿನ ಒಂದೆರಡು ಭಾರೀ ಆಸ್ಪತ್ರೆಗಳಲ್ಲಿ ಓದು ಮುಂದುವರೆಸಿದವನು, ಅಲ್ಲಿಂದ ಇಂಗ್ಲೆಂಡ್,ಅಮೆರಿಕಾ ಅಂತ ಹಾರಿಬಿಟ್ಟ. ಮತ್ತೆ ಅವನೊಡನೆ ಬಹಳ ಸಮಯ ಒಟ್ಟಿಗೆ ಕಲೆಯುವ ಅವಕಾಶವೇ ನನಗೆ ಸಿಗಲಿಲ್ಲ. ಅಷ್ಟರಲ್ಲಿ ಓದು ಮುಗಿಸಿ, ನಾನೂ ಊರೂರು ಸುತ್ತುತ್ತಿದ್ದೆನಲ್ಲ! ನಾನೂ ಅಮೆರಿಕೆಗೆ ಬಂದ ನಂತರ ಸುಮಾರು ಒಂದು ವರ್ಷದವರೆಗೂ ಅವನನ್ನು ಭೇಟಿ ಮಾಡಲೇ ಇಲ್ಲ. ಅವನಿಗೆ ಕೆಲಸ ಮತ್ತು ಸಂಸಾರದ ಗಡಿಬಿಡಿ. ನನಗೋ ಹೊಸ ಸ್ಥಳದಲ್ಲಿ, ಹೊಂದಿಕೊಳ್ಳುವ ತಾಪತ್ರಯ. ಒಮ್ಮೆ ಮಾತ್ರ, ನಮ್ಮ ಮನೆಗೆ ಭೇಟಿಕೊಟ್ಟ ಅವನು- ಏನೋ ಕೆಲಸದ ನಿಮಿತ್ತ ನಮ್ಮ ಊರಿಗೆ ಬಂದಾಗ. ಅಷ್ಟೇ. ಅವನನ್ನು ಮರಳಿ ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣಕ್ಕೆ ಕಳಿಸಿಬಂದದ್ದು, ಅವನಿಗೆ ಕೈ ಬೀಸಿದ್ದು ಇನ್ನೂ ಈಗ ಒಂದು ಗಳಿಗೆಯ ಹಿಂದೆಯೋ ಎನ್ನುವಷ್ಟು ನಿಚ್ಚಳವಾಗಿದೆ.

ಎಂಟು ವರ್ಷದ ಹಿಂದೆ, ಜುಲೈ ೧೯ರಂದು, ಅವನ ಕರೆ ಬಂತು. ಹೊಸ ಕೆಲಸ ಸಿಕ್ಕಿದ್ದನ್ನೂ, ಅದಕ್ಕಾಗಿ ಹೊಸ ಒ-೧ ವೀಸಾದ ಛಾಪಾವನ್ನು ಹಾಕಿಸಿಕೊಂಡು ಬರಲು ಊರಿಗೆ ಹೋಗುತ್ತಿರುವ ವಿಷಯವನ್ನೂ ಅವನು ಹೇಳಿದಾಗ, ಅವನಷ್ಟೇ ನಾನೂ ಸಂತೋಷಪಟ್ಟೆ.

ಆದರೆ ಊರಿಗೆ ಹೋದಮೇಲೆ ನಡೆದದ್ದೇ ಬೇರೆ ಕಥೆ.

ಮರಳಿ ಬರುವ ಕೆಲ ದಿನಗಳ ಮೊದಲು, ತನ್ನ ವಿಮಾನದ ಟಿಕೆಟ್ ಕನ್ಫರ್ಮ್ ಮಾಡಿಸಿಕೊಳ್ಳಲು ಕೆಂಪೇಗೌಡ ರಸ್ತೆಗೆ ಹೋಗಿದ್ದ ಅವನ ಜೀವವನ್ನು ರಾಕ್ಷಸ ಕೆಂಪು ಬಸ್ಸೊಂದು ನುಂಗಿ ಹಾಕಿತು. ಅವನನ್ನು ಸಂಚಾರ ನಿಯಂತ್ರಣ ಪೊಲಿಸ್ ನ ಅಂಕಿ-ಅಂಶದಲ್ಲಿ ಒಂದು ಅಂಕೆಯನ್ನಾಗಿ ಮಾಡಿಬಿಟ್ಟಿತು. ಅವನ ಮನೆಯವರಿಗೆ ಮುಗಿಯದ ಕೃಷ್ಣ ಪಕ್ಷವನ್ನು ತಂದುಬಿಟ್ಟಿತ್ತು

ಆಗಸ್ಟ್, ೨೮, ೧೯೯೯ ಮಧ್ಯಾಹ್ನ ೧:೩೩ ಶ್ರಾವಣ ಕೃಷ್ಣಪಕ್ಷದ ಬಿದಿಗೆ, ರಾಘವೇಂದ್ರ ಸ್ವಾಮಿಗಳ ಆರಾಧನೆಯ ದಿನ.

ಪತ್ರಿಕೆಗಳ ಮುಖಪುಟದಲ್ಲಿ , ಚಿತ್ರ-ಹೆಸರು ಪಡೆದಿದ್ದ ಅವನ ಜೀವನ, ಮತ್ತೆ ಪತ್ರಿಕೆಯ ಅಪಘಾತ ಕಾಲಮ್ ನಲ್ಲಿ ಪಾದಚಾರಿ ಮರಣ ಅನ್ನುವ ತಲೆಬರಹದಲ್ಲಿ ಕೊನೆಯಾಯಿತು.

ವಿಧಿ ಮಾಡಿಸಿದಂತೆ ಆಗುತ್ತೆ - ಆದದ್ದೆಲ್ಲ ಒಳ್ಳೆಯದಕ್ಕೆ ಎಂದುಕೊಳ್ಳಬೇಕು ಎಂದು ತತ್ವಜ್ಞಾನ ಮಾತಾಡುವವರಿದ್ದಾರೆ. ಆದರೆ ಈ ಮಾತಿನ ಮೊದಲ ಭಾಗವನ್ನು ಮಾತ್ರ ನಾನು ಒಪ್ಪಬಲ್ಲೆ. ಎರಡನೇ ಭಾಗವನ್ನು ನಾನು ಎಂದಿಗೂ ಒಪ್ಪಲಾರೆ. ನಾನೇ ಯಾಕೆ, ಹತ್ತಿರದವರನ್ನು ಅಕಾಲದಲ್ಲಿ ಕಳಕೊಂಡ ಯಾರೂ ಒಪ್ಪಲಾರರು.

ಏಕೆಂದರೆ, ಅವನು ನನ್ನ ಅಣ್ಣ.

-ಹಂಸಾನಂದಿ

No votes yet
1644 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
anivaasi's picture
29
Aug
2007
9:23

ಉ: ಅವನಿಲ್ಲಏನು ಹೇಳಿದರೂ ಕ್ಷುಲ್ಲಕ ಅನಿಸಿಬಿಡುತ್ತದೆ. ಇದನ್ನು ಓದಿ ಕಳೆದುಕೊಳ್ಳುವುದರ ಬಗ್ಗೆ ಯೋಚಿಸಿದಾಗ ಒಳಗೇನೋ ಕುಸಿದಂತೆ ಆಯಿತು. ಏನದು ಅಂತ ನೋಡಿಕೊಳ್ಳುವಂತೆ ಆಯಿತು.
mahesha's picture
29
Aug
2007
10:05
Sunil Jayaprakash's picture
29
Aug
2007
10:28

ಉ: ಅವನಿಲ್ಲ:( !!! :( ಹತ್ತಿರದವರನ್ನು ಕಳೆದುಕೊಂಡ ಸಮಯದಲ್ಲಿ ಬೇರೆಯವರು ನೀಡುವ ಸಾಂತ್ವನದ ಮಾತುಗಳು ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದನ್ನು ನಾನು ಇದುವರೆಗೂ ಊಹಿಸಿಕೊಳ್ಳಲು ಸಾಧ್ಯವಾಗಿಲ್ಲ. ನನಗೂ ಒಬ್ಬಳು ತಂಗಿ ಇದ್ದಳು. ನನಗಿದ್ದದ್ದು ಅವಳೊಬ್ಬಳೇ ತಂಗಿ. ನಾಗರಪಂಚಮಿ ಹಬ್ಬ ಮಾಡುತ್ತಿದ್ದಳು. ರಾಕಿ ಎಷ್ಟು ಉತ್ಸಾಹದಿಂದ ಕಟ್ಟುತ್ತಿದ್ದಳು. ಆದರೆ.....ಬಿಡಿ :(
Khavi's picture
29
Aug
2007
2:01

ಉ: ಅವನಿಲ್ಲಹಂಸಾನಂದಿ ಮತ್ತು ಸುನೀಲ ಅಳಲಿನಲ್ಲಿ ನಾನೂ ಸೇರುವೆ. ನಾನು ಚಿಕ್ಕವನಾಗಿದ್ದಾಗ ನನ್ನ ಪ್ರೀತಿಯ (ಆಟೆ ಯಾಕೆ ನಮ್ಮ ಸುತ್ತ ಮುತ್ತಲಿನ ಹತ್ತು ಹಳ್ಳಿಗಳಲ್ಲಿ ಎಲ್ಲರಿಗೂ ಪ್ರೀತಿಯವನಾದ) ಅಣ್ಣು ಮಾಮ ನನ್ನನ್ನ ಬಿಟ್ಟು ಅಗಲಿ ಹದಿನೈದು ವರುಷಗಳೇ ಕಳೆದುವು. ಈಗಲೂ ಅವರು ನನ್ನ ಕನಸಿನಲ್ಲಿ ಬರ್ತಾರೆ. ಶಿವರಾಮ ಕಾರಂತರ ಕಿಸಾಗೋತಮಿ ನೆನಪಿಗೆ ಬರುತಾ ಇದೆ. " ಸಾವಿಲ್ಲದೆಡೆಯಿಲ್ಲ-- ನೋವಿಲ್ಲದೆಡೆಯಿಲ್ಲ, ಸಾವು ಜೀವಕೆ ನಂಟು, ಅದನ್ನು ತಪ್ಪಿಸ ಸಲ್ಲ, ಸಾವಿನೊಳು ಮರುಗದಿರು, ಜೀವದೊಳು ಹಿಗ್ಗದಿರು, ಕನಸಿಗಾಗಳತುರುವೆ, ಇದುವೆ ಘನವೆ?..."
basavarajdengi's picture
29
Aug
2007
6:16

ಉ: ಅವನಿಲ್ಲಕೊನೆಯ ಸಾಲು "ಏಕೆಂದರೆ, ಅವನು ನನ್ನ ಅಣ್ಣ." ಓದುಗರ ನೋವನ್ನು ಇಮ್ಮಡಿಗೊಳಿಸುತ್ತದೆ.
benaka's picture
30
Aug
2007
2:55

ಉ: ಅವನಿಲ್ಲತಂಜೊಡರ ನೆತ್ತರೆಣ್ಣೆಯ ಪಸೆಯಾರಿದೊಡೇಂ! ಪೊಸೆವತ್ತಿನರದ ನುಲಿಕದಡಿ ತುಂಡಾದೊಡೇಂ! ಎಲರ ಸುಳಿಯೊಡೆದು ಬಿಕ್ಕಿ ಉಸಿರು ಸಿಕ್ಕಿದೊಡೇಂ! ಪರಿವೆಯರಿವೆ ಹರಿದರಿವನೆರೆವ ನೆನವು ಬೆಳಗುತಿರಲ್! ಖ್ಯಾತನಾಮರು ಅಲ್ಪಾಯುಗಳಂತೆ! ಹರ ಕೊಲ್ಲಲ್ ಪರ ಕಾವನೇ!? ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

mahesha's picture
30
Aug
2007
3:57

ಉ: ಅವನಿಲ್ಲಬೆನಕ.. ನಿಮ್ಮ ಪದ್ಯವನ್ನು ಬಿಡಸಲೆತ್ನವಿದು. ತಂಜೊಡರ = ತಣ್ + ಸೊಡರ = ತಣ್ಣಗೆ ಇರುವ ಸೊಡೆರು(ಹಣತೆಯ ಬತ್ತಿ. ಹಣತೆ ) ನೆತ್ತರೆಣ್ಣೆಯ = ನೆತ್ತರೆಂಬ ಎಣ್ಣೆ ಪಸೆಯಾರಿದೊಡೇಂ = ಪಸೆಯು(ಹಸೆಯು, ಎಣ್ಣೆತನ, ತೇವ, ವದ್ದೆ) + ಆರಿದೊಡೆ(ಆರಿದರೆ. ಇಂಗಿದರೆ) + ಏಂ(ಏನು) ಪೊಸೆವತ್ತಿನರದ = ಪೊಸೆ(ಹೊಸೆ)+ ಪತ್ತಿ(ಹತ್ತಿ) + ನರದ ನುಲಿಕದಡಿ = ನುಲಿಕದ(ನುಲಿಕೆ, ನುಲಿಚು, twist) ಅಡಿ ತುಂಡಾದೊಡೇಂ = ತುಂಡು(ಹರಿದು ಹೋಗುದ ಚೂರು ) + ಆದೊಡೆ( ಆದರೆ ) + ಏಂ(ಏನು) ಎಲರ = ಎಲರ(ಗಾಳಿಯ) ಸುಳಿಯೊಡೆದು = ಸುಳಿಯು + ಒಡೆದು = (ಸುಳಿಗಾಳಿ, ಸುಂಟರಗಾಳಿ ಬಂದು ) ಬಿಕ್ಕಿ = ಬಿಕ್ಕಳಿಸಿ, ಬಿಗಿದ(ಬಿಗಿದುಕೊಂಡು) ಉಸಿರು = ಪ್ರಾಣ ಸಿಕ್ಕಿದೊಡೇಂ = ಸಿಲುಕಿಕೊಂಡರೆ ಏನು ಪರಿವೆಯರಿವೆ = ಪರಿವೆಯ(ಒಲುಮೆಯ) + ಅರಿವೆ ( ಅರಿಮೆ, ಅರಿವು, ಬಟ್ಟೆ ) ಹರಿದರಿವನೆರೆವ = ಹರಿದು + ಅರಿವನು + ಎರೆವ ನೆನವು = ನೆನಪು/ನೆನಹು ಬೆಳಗುತಿರಲ್ = ಬೆಳಗುತ್ತಿದ್ದರೆ. ಚನ್ನಾಗಿದೆ ನಿಮ್ಮ ಹೋಲಿಕೆಗಳು ನಾನು ಹೀಗೆ ಅರಿತ ಮಾಡಿಕೊಂಡೆಂ ಸೊಡರು ತಣ್ಣಾಗಿ ನಂದಿಹೋಗಿ ನೆತ್ತರೆಂಬ ಎಣ್ಣೆಯ ಪಸೆ/ತೇವ ಆರಿದರೇನು? ಹೊಸೆಯುವಾಗ ನರವೆಂಬ ಹತ್ತಿಯು ನುಲಿಕೆಗೆ ದೆಸೆಯಿಂದ ತುಂಡಾಗಿ ಕಿತ್ತುಹೋದರೇನು? ಗಾಳಿಯ ಸುಳಿಯಾಗಿ(ಉರುಳಾಗಿ) ಬಿಗಿದುಕೊಂಡು ಉಸಿರು ಕಟ್ಟಿಸಿ ಸಿಲುಕಿಸಿದರೇನು? ಒಲುಮೆ, ಕೂರ್ಮೆಯ, ಮೋಹದ, ಪರಿವೆಯ ಅರಿಮೆ ಎಂಬ ಬಟ್ಟೆಯು ಹರಿದು ಅರಿವನ್ನು ಸುರಿಯುವ ನೆನಪು ಹೊಳೆಯುತ್ತಿರುವಾಗ! ನೀವು ಹೀಗೆ ಬರೆದಿದ್ದಿರೇಂ? :) ನಲ್ಗವನವು ನನ್ನಿ!
benaka's picture
31
Aug
2007
11:52

ಉ: ಅವನಿಲ್ಲಹೌದು ಮಹೇಶರೆ. ಧನ್ಯವಾದಗಳು.

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.