ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಗೆಳೆಯ

August 27, 2008 - 10:27pm — hamsanandi

ಕೆಡುಕುಗಳ ಕಳೆದು ಒಳಿತ ಕೂಡಿಸುವ
ಗುಟ್ಟುಗಳ ಮುಚ್ಚಿಟ್ಟು ಗುಣಬಯಲಿಗೆಳೆವ
ಆಪತ್ತಿನಲಿ ಕೈ ಹಿಡಿದು ಬೇಕಾದ್ದ ಕೊಡುವ
ಇಂಥವನು ಇದ್ದರವ ನಿಜವಾದ ಗೆಳೆಯ


ಸಂಸ್ಕೃತ ಮೂಲ:

ಪಾಪಾನ್ನಿವಾರಯತಿ ಯೋಜಯತೇ ಹಿತಾಯ
ಗುಹ್ಯಂ ನಿಗೂಹತಿ ಗುಣಾನ್ ಪ್ರಕಟೀಕರೋತಿ|
ಆಪದ್ಗತಂ ಚ ನ ಜಹಾತಿ ದದಾತಿ ಕಾಲೇ
ಸನ್ಮಿತ್ರಲಕ್ಷಣಮಿದಂ ಪ್ರವದಂತಿ ಸಂತಃ||

-ಹಂಸಾನಂದಿ

  • ಅನುವಾದ
  • ಗೆಳೆತನ
  • ಸುಭಾಷಿತ
~.~
  • hamsanandi ರವರ ಬ್ಲಾಗ್
  • Login or register to post comments
  • 210 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 27, 2008 - 11:30pm — ಗಣೇಶ

ಉ: ಗೆಳೆಯ

ಗಣೇಶ's picture

ಚನ್ನಾಗಿದೆ.

...ನನಗೂ ಒಬ್ಬ ಗೆಳೆಯ ಬೇಕೂ..
ಕೆಡುಕುಗಳ ಕಳೆದು ಒಳಿತ ಕೂಡಿಸುವ..
ಗುಟ್ಟುಗಳ ಮುಚ್ಚಿಟ್ಟು
ಗುಣ ಬಯಲಿಗೆಳೆವ..
...
...

-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 9:36am — Sunil Jayaprakash

ಉ: ಗೆಳೆಯ

Sunil Jayaprakash's picture

ಸುಕು - ಗಣೇಶರೇ, "ಮೊಗ್ಗನ ಮನಸ್ಸು", ಎಫೆಕ್ಟಾ Laughing out loud

ಮೊಗ್ಗಿನ ಮನಸ್ಸಿನ, "ನನಗೂ ಒಬ್ಬ ಗೆಳೆಯ ಬೇಕು" ಹಾಡಿನಲ್ಲಿ ಏನೇನೆಲ್ಲ ಸಾಲುಗಳು ಬರತ್ತೆ ಗೊತ್ತಾ.

ಯಾರಿಗೆ ಏನೇನೋ ನೀಡುವ ದೇವನೆ,
ನನ್ನಯ ಮನವಿ ಸಲ್ಲಿಸಲೇನು.
ಬೆಚ್ಚನ ಭವ ಕೂಡಿಸುತಿರುವ ಮನಸಿನ ಆಸೆ ಹೇಳುವೆಯೇನು
ನಾನು ಈಗ ಪ್ರೀತಿಯಲ್ಲಿ ಬೀಳಬೇಕು. ನನಗೂ ಒಬ್ಬ ಗೆಳೆಯ ಬೇಕು.
ಇದ್ದಲ್ಲಿ ಇದ್ದಹಾಗೆ, ಸದ್ದೇನೇ ಆಗದಂತೆ, ಹೃದಯ ಕದ್ದು ಹೋಗಬೇಕು.
ನಾನು ಈಗ ಪ್ರೀತಿಯಲ್ಲಿ ಬೀಳಬೇಕು. ನನಗೂ ಒಬ್ಬ ಗೆಳೆಯ ಬೇಕು.

ಇನ್ನೂ ಏನೇನು ಬರತ್ತೆ ಗೊತ್ತಾ!!!!!!

ಮುನಿಸು ಬಂದಾಗ, ಅವನೆ ಕ್ಷಮಿಸು ಎನ್ನಬೇಕು.
ಎಲ್ಲರು ಜಾತ್ರೆಯಲ್ಲಿ ತೇರನ್ನು ನೋಡುವಾಗ, ಅವನು ನನ್ನನ್ನೇ ನೋಡಬೇಕು.
ಕಾಡುವಂತ ಗೆಳೆಯಬೇಕು, ನನ್ನ ಹಿಂದೆ ಮುಂದೆ ಸುಳಿಯಬೇಕು.
ಯಾಕೋ ಬೇಜಾರಾದಾಗ, ಸುಮ್ಮನಿರಬೇಕು
ಎಲ್ಲೋ ಮರೆತ ಹಾಡನ್ನು ಹೆಕ್ಕಿ ತರಬೇಕು
ಗುಟ್ಟಾಗಿ ಹೃದಯದಲ್ಲಿ ಪ್ರೀತೀಯ ಖಾತೆಯೊಂದ ಜಂಟಿಯಾಗಿ ತೆರೆಯಬೇಕು

ಅದೆಲ್ಲಕ್ಕಿಂತ, ಕೊನೆಯದಾಗಿ "ದೇವರಂತ ಗೆಳೆಯಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 29, 2008 - 12:26am — ಗಣೇಶ

ಉ: ಗೆಳೆಯ

ಗಣೇಶ's picture

ನನ್ನಿ ಸುನಿಲ್,
ಮೊಗ್ಗನ ಮನಸ್ಸು Smiling Smiling

ಮೊಗ್ಗಣೇಶನ ಮನಸ್ಸು- ಹಂಸಾನಂದಿಯವರು ಹೇಳಿದ ಗೆಳೆಯ ಬೇಕು ಎಂದಿದ್ದು.

-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 9:26am — Sunil Jayaprakash

ಉ: ಗೆಳೆಯ

Sunil Jayaprakash's picture

ಮಾತಾಮಿತ್ರಂಪಿತಾಚೇತ್ ಸ್ವಭಾವತಃ ತ್ರಿತಯಂಹಿತಂ
ಕಾರ್ಯಕಾರಣತಃ ಚ ಅನ್ಯೇ ಭವಂತಿ ಹಿತಬುದ್ಧಯಃ ---- ತಪ್ಪುಗಳಿದ್ದರೆ ತಿದ್ದಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 10:11am — pallavi.dharwad

ಉ: ಗೆಳೆಯ

pallavi.dharwad's picture

ನಿಜ ಹಂಸಾನಂದಿಯವರೇ

ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ
ತಣ್ಣೆಳಲ ತಂಪಿನಲಿ ತಂಗಿರುವೆನು
ಜೀವನದನಂತ ದುರ್ಭರ ನೋವುಗಳ ಕಾವುಗಳ
ಮೌನದಲಿ ಮನದೊಳಗೆ ನುಂಗಿರುವೆನು

ಗೆಳೆತನವೇ ಇಹಲೋಕ ಜೀವಾಮೃತ
ಅದನುಳಿದರೇನಿಹುದು ಜೀವನ್ಮೃತ

ಚೆನ್ನವೀರ ಕಣವಿ ಅವರ ’ಗೆಳೆತನ’ದ ಕವಿತೆಯ ಒಂದು ನುಡಿ (ಒಂಚೂರು ತಪ್ಪಿರಬಹುದು, ನೆನಪಾಗಿದ್ದೇ ಇಷ್ಟು) ಹೀಗೆ ಹೇಳುತ್ತದೆ. ಕವನವೂ ಚೆನ್ನಾಗಿದೆ, ನೋಡಿ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಳ್ಳೆಯ ಸಂಸ್ಕೃತ ಸುಭಾಷಿತಗಳು ೧೬-೧೮
  • ಭರ್ತೃಹರಿಯ ಸುಭಾಷಿತತ್ರಿಶತಿ - ಒಂದು ಅವಲೋಕನ
  • ಓ ಗೆಳೆಯ ಮರೆಯಾಯಿತಲ್ಲ ಗೆಳೆತನ
  • ಮುತ್ತುಗಕ್ಕೆ ಮೂರೇ ಎಲೆ!
  • ಹುರುಪುಳ್ಳವರಿಗೆ ಮಾಡಲಾಗದ್ದೇನು?
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೆಸರಲ್ಲೇನಿದೇ ರೀ? ನೀಲಾಂಜನ .. ರಾಮಕ್ರಿಯ .... ಹಂಸಾನಂದಿ ಯಾವ್ದೋ ಒಂದು!
ಒಬ್ಬ ಸಂಪದಿಗ - ಇನ್ನೂ ಹೆಚ್ಚಿಗೆ ಹೇಳ್ಬೇಕಾದ್ರೆ ಒಬ್ಬ ಕನ್ನಡಿಗ ಅಂದ್ರೆ ಸಾಕು. ಅಲ್ವಾ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 10:19am
  • kannadakanda
    ಉ: ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ
    December 2, 2008 - 10:08am
  • sathvik N V
    ಉ: ನನ್ನ ತಪ್ಪೇ ಅಥವಾ ಸಿನಿಕತನವೇ?
    December 2, 2008 - 10:04am
  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
ಇನ್ನಷ್ಟು
ಈಗಿನಂತೆ 14 ಸದಸ್ಯರು ಮತ್ತು 117 ಅತಿಥಿಗಳು ಆನ್ಲೈನ್ ಇರುವರು.


ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator