ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಹಲ್ಲು ಕಿತ್ತ ಹಾವು
ನಂಜಿರುವ ಹಾವಿನಲಿ
ತಾಳ್ಮೆ ಮನ್ನಿಪೆಂಬುದು
ಅಗ್ಗಳವು ಅದಕೆ ನೀ
ಕಟ್ಟಲಾಗದು ಬೆಲೆಯ!
ಹಲ್ಲಳಿದು ವಿಷವುಡುಗಿ
ಪಳಗಿಸಿದ ಹಾವಿಗಿಹ
ತಾಳುಮೆ ಔದಾರಿಯಕೆ
ಇಹುದೇನು ಬೆಲೆಯು?
(ಈಗ ತಾನೇ ರಾಮಧಾರಿ ದಿನಕರ್ ಸಿಂಗ್ ಅವರ ಪದ್ಯದ ಬಗ್ಗೆ ಗುರು ಬಾಳಿಗ ಅವರ ಬರಹ "ದಿನಕರ್" ನೋಡಿದೆ; ಅಲ್ಲಿ ಹೀಗೆ ಬರೆದಿದ್ದರು
ಹಿಂದಿಯ ಪ್ರಸಿದ್ಧ ಕವಿ ರಾಮಧಾರಿ ಸಿಂಗ್ "ದಿನಕರ್" ರವರ ನೂರನೇ ಹುಟ್ಟಿದ ಹಬ್ಬ ಅಂತೆ ನಿನ್ನೆ. ಅವನು ಬರೆದ ಕವನ ಒಂದು ಹಿಂಗಿದೆ.
"ಕ್ಷಮಾ ಶೋಭ್ತಿ ಉಸ್ ಭುಜಂಗ್ ಕೋ ಜಿಸ್ ಕೆ ಪಾಸ್ ಗರಲ್ ಹೋ.
ಉಸ್ ಕಾ ಕ್ಯಾ ಜೋ ದಂತ್ ಹೀನ, ವಿಶ್ ರಹಿತ್, ವಿನೀತ್, ಸರಲ್ ಹೋ
ಚೆನ್ನಾಗಿದೆ ಅಲ್ವ? )
ಹೆಚ್ಚು ಕಡಿಮೆ ಇದೇ ತಿಳಿವು ಬರುವ ಸಂಸ್ಕೃತ ಪದ್ಯವೊಂದನ್ನೂ ಓದಿದ ಅನಿಸಿಕೆ ನನಗೆ. ಆದರೆ ಸರಿಯಾಗಿ ನೆನಪಾಗುತ್ತಿಲ್ಲ.
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 258 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಹಲ್ಲು ಕಿತ್ತ ಹಾವು
ಭಲೇ ಭಲೇ
ಬಲು ಪಾವನವಾಯಿತು ನನ್ನ ಪೋಸ್ಟು ನಿಮ್ಮ ಜ್ಞಾನ ಸಾಗರದಿಂದ
ಉ: ಹಲ್ಲು ಕಿತ್ತ ಹಾವು
ಬಾಳಿಗ ಅವರೆ,
ಕಾಲೆಳೀತಿಲ್ಲ ತಾನೇ
ಅಷ್ಟೆಲ್ಲ ದೊಡ್ಡ ಮಾತು ಯಾಕೆ
ನೀವು ಹಾಕಿದ್ದ ಪದ್ಯ ಇಷ್ಟವಾಯಿತು. ಅದಕ್ಕೇ ಕನ್ನಡಿಸಿದೆ. ತಪ್ಪೇನೂ ತಿಳಿದುಕೊಂಡಿಲ್ಲ ತಾನೇ?
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಹಲ್ಲು ಕಿತ್ತ ಹಾವು
ಸಾರ್
ನಿಜಕ್ಕೂ ಖುಷಿಯಾಯ್ತು ಸಾರ್. ಅಚ್ಚ ಕನ್ನಡದಲ್ಲಿ ಬರೆದ್ರೆ ಕಾಲೆಳೆಯೋದು ಅಂತೀರಲ್ಲ ಸಾರ್.
ನಾನು ದಿನಕರ್ ಬಗ್ಗೆ ಬರೆಯುವಾಗ ಇದು ಸಂಸ್ಕೃತ ಶುಭಾಶಯ ದ ಅನುವಾದ ಆಗಿರಲೂ ಬಹುದು ಎನ್ನುವ ಅನುಮಾನ ಇತ್ತು. ಆ ಕವನದ ವಿನ್ಯಾಸ ಹಾಗಿದೆ.
ನಿಮ್ಮ ಬರಹ ಅದನ್ನು ರುಜುಮಾಡಿತು.
ಉ: ಹಲ್ಲು ಕಿತ್ತ ಹಾವು
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಹಲ್ಲು ಕಿತ್ತ ಹಾವು
ಹಂಸಾನಂದಿ ಯವರಿಗೆ, ಗುರುವರ್ಯರಿಗೆ ಧನ್ಯವಾದಗಳು ...
ಚೆನ್ನಿದೆ ಅನುವಾದ..
ಈ ಪದ್ಯಕ್ಕೆ ಹಿಂದೆ ಮುಂದೆ ಎಲ್ಲ ಇದೆ ಅಂತ ನನ್ನ ಹಿಂದಿ ತಿಳಿದ ಗೆಳತಿ ಹೇಳಿದಳು...
ಇದು ಕೃಷ್ಣ, ಪಾಂಡವರಿಗೆ ಹೇಳ್ತಾನಂತೆ ಆ ಕವಿತೆನಲ್ಲಿ...
ಯಾರಾದ್ರು ಇಲ್ಲಿ ಕೇಂದ್ರೀಯ ವಿದ್ಯಾಲಯದಲ್ಲಿ ಓದಿದ್ರೆ, ಅವರು ಪೂರ್ತಿ ಪಾಠ ಹಾಕ ಬಹುದು..
ಅವರಿಗೆ ಸ್ಕೂಲ್ನಲ್ಲಿ ಹೇಳಿಕೊಡ್ತಿದ್ರಂತೆ...
--ಶ್ರೀ
ಉ: ಹಲ್ಲು ಕಿತ್ತ ಹಾವು
ತಗಳಿ ಇಲ್ಲಿದೆ.
http://www.geeta-kavita.com/hindi_sahitya.asp?id=154
ಉ: ಹಲ್ಲು ಕಿತ್ತ ಹಾವು
ಚನ್ ಬರಹ
ಉ: ಹಲ್ಲು ಕಿತ್ತ ಹಾವು
ನಾವು ಸಂಪದ ದಿನವೂ ಓದುವದು ಈ ತರಹದ ಬರಹಗಳಿಗಾಗಿ, ಈ ರೀತಿಯ ಬರಹ/ಪ್ರತಿಕ್ರೀಯೆಗಳು ಖಂಡಿತ ನಮ್ಮಲ್ಲಿ ಸಾಹಿತ್ಯಾಸಕ್ತಿಯನ್ನು ಉಳಿಸಿ ಬೆಳೆಸುತ್ತಿದೆ, ಹಂಸಾನಂದಿಯವರ ಬಗ್ಗೆ ಬರೆಯುವದೇ ಬೇಡ, ಅವರ ಬರಹಗಳಿಗೆ ಸಿಗೊ ಪ್ರತಿಕ್ರೀಯೆಗಳೇ ಹೇಳುತ್ತವೆ.
ನನ್ನಿ.
ಉ: ಹಲ್ಲು ಕಿತ್ತ ಹಾವು
ಚೆಂಬರಹ.