ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಧರ್ಮವೆ ಜಯವೆಂಬ ದಿವ್ಯ ಮಂತ್ರ
ಧರ್ಮವೆ ಜಯವೆಂಬ ದಿವ್ಯ ಮಂತ್ರ
ಮರ್ಮವನರಿತು ಮಾಡಲುಬೇಕು ತಂತ್ರ
ವಿಷವಿಕ್ಕಿದವನಿಗೆ ಷಡ್ರಸವನುಣಿಸಬೇಕು
ದ್ವೇಷ ಮಾಡಿದವನ ಪೋಷಿಸಲು ಬೇಕು
ಪುಸಿಯಾಡಿ ಕೆಡಿಸುವನ ಹಾಡಿ ಹೊಗಳಲು ಬೇಕು
ಮೋಸ ಮಾಡುವವನ ಹೆಸರ ಮಗನಿಗಿಡಬೇಕು !
ಎಂತಹ ಸಾಲುಗಳು ಅಲ್ಲವೇ? ಧರ್ಮದ ಹೆಸರಲ್ಲಿ ಕಚ್ಚಾಡುವವರಿಗೆ, ಕರುಣೆ , ಕ್ಷಮೆ ಅನ್ನುವುದನನ್ನು ನಾವು ಎಂದೂ ಮರೆಯಬಾರದೆಂದು ಎತ್ತಿ ಹೇಳುವ ಸಾಲುಗಳಿವು. ಜೊತೆಗೆ ಇಂತಹ ಯೋಚನಗಳು ನಮ್ಮಲ್ಲಿ ಎಂದಿಗೂ ಇದ್ದವು, ಇಂದೂ ಇರಬೇಕು ಎಂದು ಕನ್ನಡಿ ಇಟ್ಟು ತೋರುವ ಸಾಲುಗಳಿವು.
ಆದರೆ ನಿಜವಾಗಿ ನಾನು ಹೇಳಹೊರಟದ್ದೇ ಬೇರೆ ವಿಷಯ - ವಿಷಯಾಂತರ ಸಾಕು. ಕಳೆದ ವಾರ ಇಲ್ಲಿ ಒಂದು ಒಳ್ಳೇ ಸಂಗೀತ ಕಚೇರಿ ಕೇಳಿದೆ. ಅದು ನಡೆದದ್ದು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ನಡೆಸಿದ ಕನ್ನಡೋತ್ಸವ-೨೦೦೮ ರಲ್ಲಿ.
ಹಾಡುಗಾರರು ರಾಘವನ್ ಮಣಿಯನ್. ಡಾ|ಬಾಲಮುರಳಿಕೃಷ್ಣ ಅವರ ಶಿಷ್ಯ. ಅವರು ಕನ್ನಡಿಗರಲ್ಲದಿದ್ದರೂ, ಕನ್ನಡಕೂಟದಲ್ಲಿ ನಡೆಯುವ ಕಚೇರಿಯೆಂದು, ಪೂರ್ತಿ ಕಾರ್ಯಕ್ರಮವನ್ನು ಕನ್ನಡದಲ್ಲಿರುವ ರಚನೆಗಳಿಂದಲೇ ಕಳೆಕಟ್ಟಿಸಿದರು. ಅವರು ಹಾಡಿದ ಹಾಡುಗಳಲ್ಲಿ ಮೇಲೆ ಹೇಳಿದ ಧರ್ಮವೆ ಜಯವೆಂಬ ದಿವ್ಯ ಮಂತ್ರ ಕೂಡ ಒಂದಾಗಿತ್ತು.
ಇದರ ಜೊತೆಗೆ, ಈ ಕಚೇರಿ ಇನ್ನೊಂದು ನಿಟ್ಟಿನಿಂದ ನನ್ನ ಮಟ್ಟಿಗೆ ವಿಶೇಷವಾಗಿತ್ತು. ಸಾಧಾರಣವಾಗಿ, ಕರ್ನಾಟಕ ಸಂಗೀತ ಕಚೇರಿಯೆಂದರೆ ತ್ಯಾಗರಾಜರ ರಚನೆಗಳು ಒಂದೆರಡಾದರೂ ಇರುವುದು ರೂಢಿ. ಆದರೆ ತ್ಯಾಗರಾಜರು ಕನ್ನಡದಲ್ಲಿ ರಚಿಸಿಲ್ಲವಲ್ಲ! ಹಾಗಾಗಿ ರಾಘವನ್ ಕನ್ನಡಕ್ಕೆ ಅನುವಾದಿಸಿದ ತ್ಯಾಗರಾಜರ ಕೃತಿಯೊಂದನ್ನು ಹಾಡಿದರು. ತ್ಯಾಗರಾಜರ ಮಾಯಾಮಾಳವಗೌಳ ರಾಗದ ’ಮೇರು ಸಮಾನ ಧೀರ’ ಅನ್ನುವ ರಚನೆಯನ್ನು ಕನ್ನಡಕ್ಕೆ ತಂದಿದ್ದು ನಾನೇ ಎನ್ನುವುದು ನನಗೆ ಒಂದು ಹೆಮ್ಮೆ
ಮತ್ತೆ, ಒಬ್ಬ ಹಾಡುಗಾರರು, ಅದನ್ನು ಕಚೇರಿಯಲ್ಲಿ ನೂರಾರು ಜನರ ಮುಂದೆ ಹಾಡಿ ಅದಕ್ಕೆ ಜೀವ ಕೊಟ್ಟರು ಅನ್ನುವುದಂತೂ ಬಹಳ ಸಂತೋಷ ತಂದಿತು.
ಈ ಕಚೇರಿಯ ಬಗ್ಗೆ ಇನ್ನೂ ವಿವರವಾಗಿ ಕೆಳಗಿನ ಕೊಂಡಿಯಲ್ಲಿ ಬರೆದಿದ್ದೇನೆ. ಹೋಗಿ ಓದಿ. ಅಲ್ಲೇ ಕಚೇರಿಯ ಕೆಲವು ತುಣುಕುಗಳನ್ನು ಕೇಳಲೂ ಬಹುದು.
ಕಡೆಗೆ ಒಂದು ತಿಲ್ಲಾನವನ್ನು ಕನ್ನಡದಲ್ಲೇ ರಾಘವನ್ ಅವರು ರಚಿಸಿದ್ದು ಕೂಡ ಬಹಳ ಮೆಚ್ಚುವಂತಹ ಸಂಗತಿ.
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 268 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಧರ್ಮವೆ ಜಯವೆಂಬ ದಿವ್ಯ ಮಂತ್ರ
ಪ್ರಿಯ ಹಂಸಾನಂದಿಯವರೆ,
ಈದಿನ ಬೆಳೆಗ್ಗೆ ರೈಧುನ್ ಬಿಟ್ಟು ರಾಘವನ್ ಅವರ ಸಂಗೀತ ಕಛೇರಿ ನಮ್ಮ ಮನೆಯಲ್ಲಿ. ಜೊತೆಗೆ ನಿಮ್ಮ ನೀಲಾಂಜನದ ದರ್ಶನ. ಧನ್ಯವಾದಗಳು.
ಶೈಲಾಸ್ವಾಮಿ
ಉ: ಧರ್ಮವೆ ಜಯವೆಂಬ ದಿವ್ಯ ಮಂತ್ರ
"ಮರ್ಮವನರಿತು ಮಾಡಲುಬೇಕು ತಂತ್ರ "
ಇದರಲ್ಲಿ ಯಾವ-ಎಂತಹ-ಯಾರ "ಮರ್ಮ"ವನ್ನು ಅರಿಯಬೇಕು ಎಂದು ತಿಳಿಸುವಿರಾ?
ಉ: ಧರ್ಮವೆ ಜಯವೆಂಬ ದಿವ್ಯ ಮಂತ್ರ
ಮೋಸ ಮಾಡುವವನ ಹೆಸರ ಮಗನಿಗಿಡಬೇಕು. ಚೆನ್ನಾಗಿದೆ ಆಮೇಲೆ ನನ್ಮಗ ಕೈಕೊಟ್ಟ ಅನ್ನಬಹುದು.
ಉ: ಧರ್ಮವೆ ಜಯವೆಂಬ ದಿವ್ಯ ಮಂತ್ರ
ಶೈಲಾಸ್ವಾಮಿ
ಉ: ಧರ್ಮವೆ ಜಯವೆಂಬ ದಿವ್ಯ ಮಂತ್ರ
ಹಂಗಲ್ವ?
ಆಮೇಲೆ ನಮ್ಮೆಲೇನೂ ಕಡಿವಾಣ "....ಮಗ ಕೈಕೊಟ್ಟ" ಅನ್ನಂಗಿಲ್ಲ
ಉ: ಧರ್ಮವೆ ಜಯವೆಂಬ ದಿವ್ಯ ಮಂತ್ರ
ನಿಮ್ಮ ಅನುವಾದ ಬಹಳ ಚೆನ್ನಾಗಿದೆ.
ಶಾಮಲ