ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಕಾಯಲೆಮ್ಮೆಲ್ಲರನು ಮೂರುಲೋಕದ ಅರಸು

September 23, 2008 - 10:05pm — hamsanandi

(ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ಕೇಳಿ, ಒಂದು ಸಾವಿರ ವರ್ಷಗಳ ಹಿಂದೆ, ಈ ಪದ್ಯವನ್ನು ಕಲ್ಲಿನಲಿ ಕೆತ್ತಿಸಿದ ನಮ್ಮೂರ ಅರಸರನ್ನು ನೆನೆಯದೇ ಇರಲಾಗಲಿಲ್ಲ - ಹಂಸಾನಂದಿ)

ಆವನನು ಶೈವರು ಶಿವನೆಂದು ಹೊಗಳುವರೊ,
ವೇದಾಂತಿಗಳಿಗಾವನು ಪರಬೊಮ್ಮರೂಪಿಯೋ,
ಬೌದ್ಧರು ಬುದ್ಧನಿವನೆಂದಾಣೆ ಇಡುವರೋ,
ನೈಯಾಯಿಕರು ಆವನಿಗೆ ಕರ್ತನಿವನೆಂಬರೋ,
ಜಿನನ ಹಾದಿಯ ಹಿಡಿದವರಿಗಾರು ಅರಿಹಂತನೋ,
ಕಾರಣವ ಹುಡುಕುವರಿಗಿದು ಮಾಡಿದಾ ಕೆಲಸವೋ
ಅವನೆ ಕಾಯಲೆಮ್ಮೆಲ್ಲರನುದಿನವು ಕೇಳಿದುದ ಕೊಟ್ಟು
ಮೂರು ಲೋಕದ ಅರಸು ಬೇಲೂರ ಚೆನ್ನಿಗನು**

ಸಂಸ್ಕೃತ ಮೂಲ:  ಬೇಲೂರು ಚೆನ್ನಕೇಶವ ದೇವಾಲಯದ ಗೋಡೆಯಲ್ಲಿರುವ ಶಾಸನ

ಯಂ ಶೈವಾಸ್ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನಃ
ಬೌದ್ಧಾಃ ಬುದ್ಧ ಇತಿ ಪ್ರಮಾಣಪಟವಃ ಕರ್ತೇತಿ ನೈಯಾಯಿಕಾ:
ಅರ್ಹನ್ನಿತ್ಯಥ ಜೈನಶಾಸನರತಾ: ಕರ್ಮೇತಿ ಮೀಮಾಂಸಕಾ:
ಸೋಯಂ ವೋ ವಿದಧಾತು ವಾಂಚಿತಫಲಂ ತ್ರೈಲೋಕ್ಯನಾಥೋ ವಿಭು: **

(*: ಕಡೆಯ ಸಾಲಿಗೆ, "ಸೋಯಂ ವೋ ವಿದಧಾತು ವಾಂಚಿತಫಲಂ ಶ್ರೀಕೇಶವೇಶಸ್ಸದಾ" ಅನ್ನುವ
ಪಾಠವನ್ನೂ ಓದಿದ್ದೇನೆ; ಅದಕ್ಕೇ ಅನುವಾದದಲ್ಲಿ ಎರಡೂ ಅರ್ಥಗಳು ಬರುವಂತೆ ಸೇರಿಸಿರುವೆ)

ಕೊಸರು: ಬೇಲೂರಿನ ಶಾಸನದಲ್ಲಿರುವ ಈ ಪದ್ಯದಲ್ಲಿ "ಶ್ರೀಕೇಶವೇಶಸ್ಸದಾ" ಎಂದೇ ಇದೆ. ಈ ಶಾಸನವು ಕ್ರಿ.ಶ.೧೩೯೭ರದ್ದು ಎಂದು ತಿಳಿದುಬಂದಿದೆ ( ಆಧಾರ: ಡಿವಿಜಿ ಆವರ ಅಂತಃಪುರಗೀತೆಗಳು ಪುಸ್ತಕ)

ಕೊನೆಯ ಕೊಸರು: ಈ ಮೇಲಿನ ಸಾಲನ್ನು ಅಕ್ಟೋಬರ್ ೨೧, ೨೦೦೮ ರಂದು ಸೇರಿಸಿದ್ದೇನೆ

-ಹಂಸಾನಂದಿ

 

  • ಅನುವಾದ
  • ಕರ್ನಾಟಕ
  • ಧರ್ಮ
  • ಭಾವಾನುವಾದ
  • ಮತ
  • ಮತಾಂತರ
  • ಸಂಸ್ಕೃತ
  • ಹೊಯ್ಸಳ
~.~
  • hamsanandi ರವರ ಬ್ಲಾಗ್
  • Login or register to post comments
  • 261 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 23, 2008 - 10:37pm — Sunil Jayaprakash

ಉ: ಕಾಯಲೆಮ್ಮೆಲ್ಲರನು ಮೂರುಲೋಕದ ಅರಸು

Sunil Jayaprakash's picture

ಶ್ರೀಪತಿಗೆ ಸೊಬಗನುಡುಪತಿಗೆ ಶಾಂತಿಯನುವಾ
ಣೀಪತಿಗೆ ಚಾತುರ್ಯಮಂ ದಿವಸ್ಪತಿಗೆ ಪ್ರ
ತಾಪಮಂ ಸುರಪತಿಗೆ ಭೋಗಮಂ ರತಿಪತಿಗೆ ಮೂಲೋಕವಾವರಿಸುವ |
ರೂಪಂ ಸರಿತ್ಪತಿಗೆ ಗಂಭೀರತೆಯನು ಸ್ವಾ
ಹಾಪತಿಗೆ ತೇಜಮಂ ಕೊಟ್ಟ ಗುರುಮೂರ್ತಿ ಪಂ
ಪಾಪತಿ ವಿರೂಪಾಕ್ಷನೆಮಗಿಷ್ಟಸಿದ್ಧಿಯಂ ಮಾಳ್ಕೆ ಸಂತೋಷದಿಂದ ||

ಇಂತಹ ಆದರ್ಶಗಳನ್ನು ಇಟ್ಟುಕೊಂಡ ನಾಡಿನಲ್ಲಿ ಇಂದು ಕೀಳುಮಟ್ಟದ ಚರ್ಚೆಗಳು, ಹೊಲಸು ಧಾರ್ಮಿಕ ಸಂಘರ್ಷಗಳು ನಡೆಯುತ್ತಿವೆ Sad ತೀರಾ, "ಸೂಳೆಗೆ ಹುಟ್ಟಿದವರು" ಎನ್ನುವಂತಹ ಸುದ್ಧಿಗಳು, ಪತ್ರಿಕೆಗಳಲ್ಲಿ ಬರುತ್ತವೆಯೆಂದರೆ ನೀವುಗಳೇ ಊಹಿಸಿಕೊಳ್ಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 23, 2008 - 11:38pm — srinivasps

ಉ: ಕಾಯಲೆಮ್ಮೆಲ್ಲರನು ಮೂರುಲೋಕದ ಅರಸು

srinivasps's picture

ಚಿಕ್ಕವನಿದ್ದಾಗ ಈ ಸಂಸ್ಕೃತ ಶ್ಲೋಕ ಹೇಳಿಕೊಟ್ಟಿದ್ದು ಜ್ಞಾಪಕಕ್ಕೆ ಬಂತು...

ಈ ಪಾಠ : "ವಾಂಚಿತಫಲಂ ತ್ರೈಲೋಕ್ಯನಾಥೋ ವಿಭು:"

ನೋಡಿ...ಆ ಕಾಲದಲ್ಲೇ ಈ ಪದ್ಯ ಕೆತ್ತಿಸಿದ ರಾಜ, ಎಲ್ಲ ಧರ್ಮಗಳನ್ನು ಸಮನಾಗಿ ನೋಡಿದ್ದ ಅಂತ...
ಚೆನ್ನಿಗನ ದೇವಾಲಯದಲ್ಲಿ ಬೇರೆ ಧರ್ಮಗಳ ಬಗ್ಗೆ ಒಳ್ಳೆ ಮಾತುಗಳು...ವಾವ್!

--ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 24, 2008 - 10:05am — harshab

ಉ: ಕಾಯಲೆಮ್ಮೆಲ್ಲರನು ಮೂರುಲೋಕದ ಅರಸು

harshab's picture

"ನೈಯಾಯಿಕರು ಆವನಿಗೆ ಕರ್ತನಿವನೆಂಬರೋ,"

ಇದರಲ್ಲಿ "ನ್ನೈಯಾಯಿಕರು" ಅಂದರ್ಯಾರು ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 24, 2008 - 11:19am — mahesha

ಉ: ಕಾಯಲೆಮ್ಮೆಲ್ಲರನು ಮೂರುಲೋಕದ ಅರಸು

mahesha's picture

ನ್ಯಾಯ ದರ್ಶನದ ಅನುಯಾಯಿಗಳು..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 24, 2008 - 11:32am — mahesha

ಉ: ಕಾಯಲೆಮ್ಮೆಲ್ಲರನು ಮೂರುಲೋಕದ ಅರಸು

mahesha's picture

ಇದೇ ತೆರದ ಒಂದು ಶ್ಲೋಕವಿದೆ..

ಯಂ ವೈದಿಕಾಮಂತ್ರದೃಷಃ ಪುರಾಣಾಃ
ಇಂದ್ರಂ ಯಮಂ ಮಾತರಿಶ್ವಾನಮಾಹುಃ
ವೇದಾಂತಿನೋ ನಿರ್ವಚನೀಯಮೇಕಂ
ಯಂ ಬ್ರಹ್ಮಶಬ್ದೇನ ವಿನಿರ್ದಿಶಂತಿ

ಶೈವಾ ಯಮೀಶಂ ಶಿವ ಇತ್ಯವೋಚನ್
ಯಂ ವೈಷ್ಣವಾ ವಿಷ್ಣುರಿತಿ ಸ್ತುವಂತಿ
ಬುದ್ಧಸ್ತಥಾರ್ಹನ್ ಇತಿ ಬೌದ್ಧಜೈನಾಃ
ಸತ್ ಶ್ರೀ ಅಕಾಲೇತಿ ಸಿಖ ಸಂತ

ಶಾಸ್ತೇತಿ ಕೇಚಿತ್ ಕತಿಚಿತ್ ಕುಮಾರಃ
ಸ್ವಾಮೀತಿ ಮಾತೇತಿ ಪಿತೇತಿ ಭಕ್ತ್ಯಾ
ಯಂ ಪ್ರಾರ್ಥಯಂತೇ ಜಗದೀಶಿತಾರಂ
ಸ ಏಕ ಏವ ಪ್ರಭರದ್ವಿತೀಯಂ

ವೇದಪುರಾಣಗಳು ಇಂದ್ರ ಯಮ ಅಗ್ನಿ ವಾಯು ಎಂದು ಯಾವುದನ್ನು ಕರೆದವೋ
ವೇದಾಂತಿಗಳು ಅರುಹಲಾಗದ ಬ್ರಹ್ಮನೆಂದು ಯಾವುದನ್ನು ಕರೆದರೋ
ಶೈವರು ಶಿವನೆಂದು ವೈಷ್ಣವರು ವಿಷ್ಣುವೆಂದು ಬೌದ್ಧರು ಬುದ್ಧನೆಂದು
ಅರ್ಹನ್ ಎಂದು ಜೈನರು, ಸತ್ ಶ್ರೀ ಅಕಾಲ ಎಂದು ಸಿಖರು,
ಶಾಸ್ತಾ ಎಂದು ಶಾಕ್ತೇಯರು?, ಕುಮಾರ(ಮುರುಗ) ಎಂದು ಕೌಮಾರ್ಯರು,
ಸ್ವಾಮಿ ಎಂದು, ತಾಯಿತಂದೆ ಎಂದು ಕರೆದು ಪ್ರಾರ್ಥನೆ ಮಾಡುವರೋ ಅವನೊಂಬೇ ಜಗದೀಶ ಪ್ರಭುವು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 24, 2008 - 11:32am — mahesha

ಉ: ಕಾಯಲೆಮ್ಮೆಲ್ಲರನು ಮೂರುಲೋಕದ ಅರಸು

mahesha's picture

http://www.geocities.com/Athens/Delphi/2745/ekata.htm

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಖ ನೋಡಿ ಮಣೆ ಹಾಕುವುದು ಸರಿಯೇ?
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
  • ಝೆನ ಕಥೆ ೩೬: ಛತ್ರ
  • ಮುಕ್ತಾಯ
  • ಹಲ್ಲು ಕಿತ್ತ ಹಾವು
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೆಸರಲ್ಲೇನಿದೇ ರೀ? ನೀಲಾಂಜನ .. ರಾಮಕ್ರಿಯ .... ಹಂಸಾನಂದಿ ಯಾವ್ದೋ ಒಂದು!
ಒಬ್ಬ ಸಂಪದಿಗ - ಇನ್ನೂ ಹೆಚ್ಚಿಗೆ ಹೇಳ್ಬೇಕಾದ್ರೆ ಒಬ್ಬ ಕನ್ನಡಿಗ ಅಂದ್ರೆ ಸಾಕು. ಅಲ್ವಾ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 10:19am
  • kannadakanda
    ಉ: ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ
    December 2, 2008 - 10:08am
  • sathvik N V
    ಉ: ನನ್ನ ತಪ್ಪೇ ಅಥವಾ ಸಿನಿಕತನವೇ?
    December 2, 2008 - 10:04am
  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
ಇನ್ನಷ್ಟು
ಈಗಿನಂತೆ 15 ಸದಸ್ಯರು ಮತ್ತು 121 ಅತಿಥಿಗಳು ಆನ್ಲೈನ್ ಇರುವರು.


ಸಾಕೋದನ್ ಅರಿತಾತ - ಸಾವಿರ ಜನಕ್ ತ್ರಾತ

— ಟಿ ಪಿ ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator