ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಪುಣ್ಯದ ಫಲ
ಪುರಂದರದಾಸರು "ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ, ಇನ್ನಾದರೂ ಎನ್ನ ಸಲಹೋ" ಎಂದು ಒಂದು ದೇವರನಾಮದಲ್ಲಿ ಹಾಡಿದ್ದಾರೆ. ಹಿಂದಿನ ದುಷ್ಕರ್ಮದಿಂದ ಬಳಲುತ್ತೇವೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ತೊಂದರೆಗೊಳಗಾಗಿದ್ದಾಗ,ಎಲ್ಲಿಂದಲೋ ಬಂದ ನೆರವಿನಿಂದ ಆ ತೊಂದರೆಯಿಂದ ಪಾರಾಗುವ ಘಟನೆಗಳ ಅನುಭವ ಎಲ್ಲರಿಗೂ ಆಗಿರುವುದೇ! ಇದನ್ನೇ ಪುಣ್ಯದ ಫಲ ಎನ್ನುವುದೇ?
ಇದರ ಬಗ್ಗೆ ಒಂದು ಸಂಸ್ಕೃತ ಸುಭಾಷಿತ ಏನು ಹೇಳುತ್ತೆ ನೋಡಿ - ಅನುವಾದ ನನ್ನದು:
ಕಾಡಿನಲಿ ಕಾಳಗದಿ ವೈರಿಗಳ ನಡುವಲ್ಲಿ
ನೀರಿನಲಿ ಕಿಚ್ಚಿನಲಿ ಬೆಟ್ಟದಾ ನೆತ್ತಿಯಲಿ
ಕಡಲಿನಲಿ ನಿದ್ದೆಯಲಿ ಮತ್ತಿನಲಿ ಮತ್ತಾಯ-
ತಪ್ಪಿದಲಿ ಕಾಯ್ವವು ಪುಣ್ಯಗಳು ಮುನ್ನಮಾಡಿದವು!
ಮೂಲ:
ವನೇ ರಣೇ ಶತ್ರು ಜಲಾಗ್ನಿಮಧ್ಯೇ
ಮಹಾರ್ಣವೇ ಪರ್ವತಮಸ್ತಕೇ ವಾ |
ಸುಪ್ತಂ ಪ್ರಮತ್ತಂ ವಿಷಮಸ್ಥಿತಂ ವಾ
ರಕ್ಷಂತಿ ಪುಣ್ಯಾನಿ ಪುರಾ ಕೃತಾನಿ ||
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 492 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಪುಣ್ಯದ ಫಲ
ಪುಣ್ಯಸ್ಯ ಫಲಮಿಚ್ಛಂತಿ ಪುಣ್ಯಂ ನೇಚ್ಛಂತಿ ಮಾನವಾಃ |
ನಪಾಪ ಫಲಮಿಚ್ಛಂತಿ ಪಾಪಂ ಕುರ್ವಂತಿ ಯತ್ನತಃ ||
ಉ: ಪುಣ್ಯದ ಫಲ
ಲೋ ಸರಿಯಾಗಿ ಬರೆಯೋ...
ಪುಣ್ಯಸ್ಯ ಫಲಮಿಚ್ಛಂತಿ ಪುಣ್ಯಂ ನೇಚ್ಛಂತಿ ಮಾನವಾಃ |
ನ ಪಾಪಫಲಮಿಚ್ಛಂತಿ ಪಾಪಂ ಕುರ್ವಂತಿ ಯತ್ನತಃ ||
ಇನ್ನೂ ಸರಿಯಾಗಿ ಅಂದ್ರೆ
ಪುಣ್ಯಸ್ಯ ಫಲಮಿಚ್ಛನ್ತಿ ಪುಣ್ಯನ್ನೇಚ್ಛನ್ತಿ ಮಾನವಾಃ |
ನ ಪಾಪಫಲಮಿಚ್ಛನ್ತಿ ಪಾಪಙ್ಕುರ್ವನ್ತಿ ಯತ್ನತಃ ||
ಉ: ಪುಣ್ಯದ ಫಲ
ಇಲ್ಲಿ, "ಪರ್ವತಮಸ್ತಕೇ" ಎಂಬುದನ್ನು "ಬೆಟ್ಟದ ನೆತ್ತಿಯಲಿ" ಎಂಬುದಾಗಿ ಬಳಸಿದ್ದು ಸ್ವಲ್ಪ ಭಾರವೆನಿಸಿತು. ಏಕೆಂದರೆ "ಬೆಟ್ಟದ ನೆತ್ತಿ" ಎಂಬುದಾಗಿ ನಾವು ಬಳಸುವುದಿಲ್ಲ.
ಯೋಚಿಸಿದಾಗ, ಹಿಂದಿನ ಸಾಲಿನಲ್ಲಿ "ವೈರಿಗಳ ನಡುವಲಿ"ಎಂಬ ಪದ ಇರುವುದರಿಂದ, ಎರಡನೆಯ ಸಾಲಿಗೆ "ಗಿರಿಯ ಅಂಚಿನಲಿ" ಎಂಬ ಬಳಕೆ ಹೊಳೆಯಿತು.
ಉ: ಪುಣ್ಯದ ಫಲ
ಚನ್ನಾಗಿದೆ...
ನನ್ನ ಒಂದು ಜತುನ
ಅಟ್ಟಡವಿ-ಹೆಬ್ಬವರ-ಕಿಡುಹಗೆಗಳೊಳು
ನೀರ್-ಬೆಂಕಿ-ಬೆಟ್ಟದ ಮೊನೆಯೊಳು
ಮಯ್ಮರೆತ ಮಲಗಿದ ಕುತ್ತುಗಳೊಳು
ಕಾಯ್ವುವು ಮುಂಮಾಡಿದ ಪುಣ್ಯಗಳು
ಉ: ಪುಣ್ಯದ ಫಲ
ಮಹೇಶರೆ,
ನಿಮ್ಮ ಅನುವಾದವೂ ಚೆನ್ನಾಗಿ ಬಂದಿದೆ - ಹತ್ತರಲ್ಲಿ ಕೊನೆಯದನ್ನು ಬಿಟ್ಟು ಬಿಟ್ಟಿದ್ದೀರೆಂದೆನಿಸಿತು.
-ಹಂಸಾನಂದಿ
ಉ: ಪುಣ್ಯದ ಫಲ
ಮೊನ್ನೆ ನಮ್ಮಲ್ಲಿ ಒಂದು ಸಂವಾದ ನಡೆಯುತ್ತಿತ್ತು.
ಪರೋಪಕಾರವೇ ಪುಣ್ಯ, ಪರಪೀಡನೆಯೇ ಪಾಪ. ಹೀಗಿರಲು ಧಾನ ಧರ್ಮಗಳನ್ನಾಚರಿಸುವುದು ಪುಣ್ಯವೆಂದರೆ, ಇಂದಿನ ಕಾಲಕ್ಕೆ ಧಾನವೆಂದರೆ ಎಷ್ಟು ಪ್ರಸ್ತುತ ವೆಂದೊಬ್ಬರು ಕೇಳಿದರು.
) ಸರ್ಕಾರಕ್ಕೆ ತೆರಿಗೆ ಕಟ್ಟುತ್ತೀರಲ್ಲವೇ, ಅದೂ ಒಂದು ರೀತಿಯ ಧಾನವೇ. ಏಕೆಂದರೆ ನಮ್ಮ ಮೂಲಭೂತ ಸೌಕರ್ಯಗಳು, ಸರ್ಕಾರದ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳು ನಡೆಯುತ್ತಿರುವುದು, ಪ್ರಜೆಗಳ ತೆರಿಗೆ ಹಣದಿಂದಲೇ ಅಲ್ಲವೇ??.
ನಾನೆಂದೆ: ನೀವು ನಿಮ್ಮ ಉದ್ಯೋಗದಿಂದ ಪಡೆಯುತ್ತಿರುವ ಸಂಬಳದಲ್ಲಿ ಒಂದಂಶ (ಒಂದಂಶ ಏನು ಬಂತು ಮಣ್ಣಾಂಗಟ್ಟಿ, ೩೦% ಟ್ಯಾಕ್ಸ್ ಇರುವಾಗ
ಇನ್ನುಳಿದಂತೆ ಧರ್ಮವನ್ನು ಅನುಷ್ಟಾನಕ್ಕೆ ತರುವುದು. ಸರ್ವ ಜೀವಿಯಲ್ಲೂ ಭಗವಂತನನ್ನು ಕಾಣು. ಇದೇ ಅಲ್ಲವೇ ನಮ್ಮ ಶರಣ ಸಂಸ್ಕೃತಿಯೂ ನಮಗೆ ತಿಳಿಸಿದ್ದು?
ಉ: ಪುಣ್ಯದ ಫಲ
>>ಸರ್ವ ಜೀವಿಯಲ್ಲೂ ಭಗವಂತನನ್ನು ಕಾಣು. ಇದೇ ಅಲ್ಲವೇ ನಮ್ಮ ಶರಣ ಸಂಸ್ಕೃತಿಯೂ ನಮಗೆ ತಿಳಿಸಿದ್ದು?
ಗೊತ್ತಿಲ್ಲ!
ನನ್ನ ತಿಳುವಳಿಕೆ ಬೇರೇನೆ ಇದೆ
ಮೇಲು ಕೀಳು ಅನ್ನೋ "ಭೇಧ"ವೆಂಬ ತಮೋಗುಣವನ್ನು ತೊರೆದು ಎಲ್ಲರನ್ನೂ ಸಮಾನವಾಗಿ ಕಾಣು ಅಂತ, ಅಂತ ಅನ್ನಿಸುತ್ತದೆ.
ಎಲ್ಲರಲ್ಲೂ ಎಲ್ಲದರಲ್ಲೂ ದೇವರನ್ನು ಕಾಣಕ್ಕೆ ಆಗುತ್ತಾ?!
ಸವಿತೃ