ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಕನ್ನಡ ಬರ್ದೋನು ಕೋಡಂಗಿ
ಕನ್ನಡ ಬರದೇ ಇರೋರು ಸಂಪದ ಓದೋ ಹಾಗಿಲ್ಲ. ಆದ್ರೂ ಯಾರಾದ್ರೂ ದೂರು ಕೊಟ್ಟು, ನನ್ನ ಬೆನ್ನಿಗೆ ಅವರೆಲ್ಲ ಬೀಳೋ ಮೊದಲು ಪೂರ್ತಿ ಪದ್ಯ ಕೇಳಿ
ಸಂಪದದಲ್ಲೆಲ್ಲ್ರೂ ಆಡೋ ಮಾತೇನು?
ವಾಲ್ಮೀಕಿ ರಾಮಾಯಣಕ್ಕೇನಾಗ್ಬೇಕು?
ಮಂಗಂಗಿನ್ನೊಂದ್ಹೆಸರ್ ಗೊತ್ತಾ?
ಕನ್ನಡ ಬರ್ದೋನು ಕೋಡಂಗಿ
ಕಂತಿ ಹಂಪನ ಸಮಸ್ಯೆಗಳ ಬಗ್ಗೆ ಕೇಳೇ ಇರ್ತೀರ. ಒಂದು ಸಾಲು ಪದ್ಯ ಕೊಟ್ಟು ಅದರಲ್ಲಿ ತಪ್ಪು ತಪ್ಪಾಗಿ ಅರ್ಥ ಮಾಡೋ ಹಾಗಿಟ್ಟು, ಆಮೇಲೆ ಉಳಿದ ಸಾಲುಗಳನ್ನ ಬರೀಬೇಕಾದ್ದು ಇಲ್ಲಿಯ ಚಮತ್ಕಾರ.
ಇವತ್ತು ಯಾವ್ದೋ ಸಂಸ್ಕೃತ ಪದ್ಯ ಓದೋವಾಗ, ಅದನ್ನ ಅನುವಾದ ಮಾಡೋ ಬದಲು ಹೊಸದಾಗಿ ಅದೇ ತರಹ ಬರೆಯಣ ಅನ್ನಿಸ್ತು. ಅದೇ ಈ ಪ್ರಯತ್ನ. ಅಷ್ಟೇ.
ಕನ್ನಡ ಬರ್ದೋನು ಕೋಡಂಗಿ ಅನ್ನೋ ಒಂದು ಸಾಲು ಕೊಟ್ಟರೆ, ಮೊದಲಿಗೆ ಮೂರು ಪ್ರಶ್ನೆಗಳು ಬರೋ ಸಾಲು ಹಾಕಿದ್ರೆ ಹೇಗಾಗತ್ತೆ - ನೋಡಿ.
ಪ್ರಶ್ನೆ: ಸಂಪದದಲ್ಲೆಲ್ಲ್ರೂ ಆಡೋ ಮಾತೇನು? - ಉತ್ತರ: ಕನ್ನಡ
ಪ್ರಶ್ನೆ: ವಾಲ್ಮೀಕಿ ರಾಮಾಯಣಕ್ಕೇನಾಗ್ಬೇಕು? - ಉತ್ತರ: ಬರ್ದೋನು (ಬರೆದವನು :) ಬರದವನು ಅಲ್ಲ
:) ) - ನಮ್ಮೂರ್ ಕಡೆ ಆಡುಮಾತಲ್ಲಿ ಎರಡಕ್ಕೂ ಬರ್ದೋನು ಅಂತ ಹೇಳೋದೇ ರೂಢಿ!
ಪ್ರಶ್ನೆ: ಮಂಗಂಗಿನ್ನೊಂದ್ಹೆಸರ್ ಗೊತ್ತಾ? - ಉತ್ತರ: ಕೋಡಂಗಿ
ಅದಕ್ಕೇ ಕೊನೇಸಾಲು ಕನ್ನಡ ಬರ್ದೋನು ಕೋಡಂಗಿ
ಕನ್ನಡ ’ಬರ’ದೇ ಇರೋರು, ನನ್ನ ಹೊಡೀಬೇಡಿ ಸದ್ಯಕ್ಕೆ!
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 409 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಕನ್ನಡ ಬರ್ದೋನು ಕೋಡಂಗಿ
ಧನ್ಯನಾದೆ
*ಅಶೋಕ್
ಉ: ಕನ್ನಡ ಬರ್ದೋನು ಕೋಡಂಗಿ
ಹಹ.. ಚೆನ್ನಾಗಿದೆ..
-ವರುಣ್ ಭಟ್
http://varunbhat.name
ಉ: ಕನ್ನಡ ಬರ್ದೋನು ಕೋಡಂಗಿ
ಹಂಸಾನಂದಿಯವರೇ,
ನಿಮ್ಮ ಚಮತ್ಕಾರ ಬಹಳ ಚೆನ್ನಾಗಿದೆ.
ಧನ್ಯವಾದಗಳು
ಶಾಮಲ
ಉ: ಕನ್ನಡ ಬರ್ದೋನು ಕೋಡಂಗಿ
ರೀ
"ತಕ್ರಂ ಶಕ್ರಸ್ಯ ದುಲಭಂ" ರೀತಿ ಇದೆ
ಉ: ಕನ್ನಡ ಬರ್ದೋನು ಕೋಡಂಗಿ
ಹೌದು ರೀ - ಆದ್ರೆ ಇವತ್ತು ನಾನು ಓದಿದ್ದು ಅದಲ್ಲ
ಅದೊಂದೇ ಅಲ್ಲ - ಇದೇ ತರಹದ್ದು ಉಳಿದವು ಕೆಲವು ಇಲ್ಲಿವೆ.
ಧರ್ಮಸ್ಯ ತ್ವರಿತಾ ಗತಿಃ
ಕುಂತೀ ಸುತೋ ರಾವಣ ಕುಂಭಕರ್ಣ:
ಗೌರೀ ಪಚತಿ ಗೋಮಾಂಸಂ
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಕನ್ನಡ ಬರ್ದೋನು ಕೋಡಂಗಿ
ಗೌರೀ ಪಚತಿ ಗೋಮಾಂಸಂ
ಬಿಳಿಹೆಂಗಸು ಹಸುಬಾಡನ್ನು ಅಟ್ಟಳು. ಬಿಳಿಹೆಂಗಸು ಯುರೋಪಿನ ಹೆಣ್ಣು!
ಉ: ಕನ್ನಡ ಬರ್ದೋನು ಕೋಡಂಗಿ
"ಗೌರೀ ಪಚತಿ ಗೋಮಾಂಸಂ" ವರದಿ ಇಲ್ಲಿದೆ. ಅಷ್ಟಾವಧಾನ ಎರಡನೇ ಭಾಗ - ಸಮಸ್ಯೆ ಬಿಡಿಸುವುದು
ಉ: ಕನ್ನಡ ಬರ್ದೋನು ಕೋಡಂಗಿ
ಹಂಸಾನಂದಿಯವರೆ,
ಕಂತಿ ಹಂಪನ ಸಮಸ್ಯೆಗಳು - ಏನದು? ದಯವಿಟ್ಟು ವಿವರಿಸುತ್ತೀರ?
ಉ: ಕನ್ನಡ ಬರ್ದೋನು ಕೋಡಂಗಿ
ಅನಿವಾಸಿ ಅವರೆ,
ಸಮಸ್ಯಾಪೂರಣದ ಬಗ್ಗೆ, ಮತ್ತೆ ಕಂತಿ-ಹಂಪನ ಸಮಸ್ಯೆಗಳ ಬಗ್ಗೆ ಹೋದ ವರ್ಷ ಇಲ್ಲಿ ವಿವರವಾಗಿ ಬರೆದಿದ್ದೆ.
ಕೆಳಗಿನ ಕೊಂಡಿಗಳನ್ನು ಚಿಟುಕಿಸಿ:
Gowri Cooks Beef! : http://neelanjana.wordpress.com/2007/10/04/gouri-cooks-beef/
ಸತ್ತವಳೆದ್ದು ಹೋದರೇನು ವಿಚಿತ್ರ? : http://neelanjana.wordpress.com/2007/10/11/
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಕನ್ನಡ ಬರ್ದೋನು ಕೋಡಂಗಿ
ಹಂಸಾನಂದಿಯವರೆ,
ಹೆಡಿ೦ಗ್ "ಕನ್ನಡ ಬರ್ದೋನು ಕೋಡಂಗಿ" ನೋಡಿದ್ ತಕ್ಷಣ ಒ೦ದ್ಗಳಿಗೆ ಕನ್ಫ್ಯುಸೂ ಆಯ್ತು ಮತ್ತೆ ಕೋಪಾನೂ ಬ೦ದಿತ್ರಿ. ಮತ್ತೆ ಪೂರ್ತಿ ಲೇಖನ ಓದಿದ್ ಮೇಲೆ ಸ್ವಲ್ಪ ನೆಮ್ಮದಿ
ಚೆನ್ನಾಗ್ ಬರ್ದಿದ್ದೀರ. ಧನ್ಯವಾದಗಳು!!!!
ನಿಮ್ಮವ
ಕ್ರಿಸ್ನ
ಉ: ಕನ್ನಡ ಬರ್ದೋನು ಕೋಡಂಗಿ
ಹೆಡ್ಡಿಂಗ್ ನೋಡಿ ಇದು ಮಹೇಶರ ಬ್ಲಾಗ್ ಅಂದುಕೊಂಡೆ.
ಚೆನ್ನಾಗಿದೆ.
-ಗಣೇಶ.
ಉ: ಕನ್ನಡ ಬರ್ದೋನು ಕೋಡಂಗಿ
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಕನ್ನಡ ಬರ್ದೋನು ಕೋಡಂಗಿ
@ಗಣೇಶ್, ನೀವು ನಂಬ್ತೀರೋ ಬಿಡ್ತೀರೋ, ನಾನೂ ಹಾಗೇನೇ ಅಂದ್ಕೊಂಡಿದ್ದೆ.
@ಎಲ್ರೂ, ಹೌದು
ಕನ್ನಡ ಬರ್ದೋನು ಕೋಡಂಗಿ
ಕನ್ನಡ ಬರ್ದೋಳು ??? : ಮೂಲಂಗಿ : ಸೋಲಂಗಿ : ಮಾತಂಗಿ :
ಉ: ಕನ್ನಡ ಬರ್ದೋನು ಕೋಡಂಗಿ
ನಾನೂ ಹಂಗೆ ಅಂದುಕೊಂಡಿದ್ದು ದಿಟ,
ಕನ್ನಡ ಬರೆ(re)ದವಳು - ಕನ್ನಡತಿ, ಅವಳಿಗೆ ಮಂಗಳಾರತಿ.
ಕನ್ನಡ ಬರ(ra)ದವಳು - ?, ಬಿಡಿ, ನಮಗ್ ಯಾಕೆ? ಅಲ್ಲವಾ?
ಉ: ಕನ್ನಡ ಬರ್ದೋನು ಕೋಡಂಗಿ
ಹು
ಹಂಸಾನಂದಿ ನನ್ನ ಕಾಪಿ ಮಾಡ್ತವ್ರೆ!
ಉ: ಕನ್ನಡ ಬರ್ದೋನು ಕೋಡಂಗಿ
ಎಷ್ಟೇಂದ್ರೂ ಹೊಳೇನರಸೀಪುರದ ಹಿಂದೆ ಹಾಸನ ತಾನೇ
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಕನ್ನಡ ಬರ್ದೋನು ಕೋಡಂಗಿ
ಹೆ ಹೆ!