ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ನವರಾತ್ರಿಯ ದಿನಗಳು

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ನವರಾತ್ರಿಯ ಏಳನೇ ದಿನ

October 18, 2007 - 10:48pm — hamsanandi

ಇವತ್ತು ನವರಾತ್ರಿಯ ಏಳನೇ ದಿನ. ಈ ದಿನ ತಲಕಾವೇರಿಯಲ್ಲಿ ತೀರ್ಥೋದ್ಭವವಾಗುವ ತುಲಾ ಸಂಕ್ರಮಣವೂ ಹೌದು. ನೃಪತುಂಗನ ಕಾಲದಿಂದಲೂ, ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಎಂಬ ಹೇಳಿಕೆ ಇದೆ. ಕಾವೇರಿ ಕನ್ನಡಿಗರಿಗೆ, ಅದರಲ್ಲೂ ದಕ್ಷಿಣ ಕರ್ನಾಟಕದ ಭಾಗದವರಿಗೆ ಜೀವನದಿ ಎಂಬುದರಲ್ಲಿ ಎರಡುಮಾತಿಲ್ಲ. ಕಾವೇರಿ ಮತ್ತೆ ಅದಕ್ಕೆ ಸೇರಿಕೊಳ್ಳುವ ನದಿಗಳಾದ ಹೇಮಾವತಿ, ಲಕ್ಷ್ಮಣತೀರ್ಥ, ಶಿಂಷಾ, ಅರ್ಕಾವತಿ, ಕಣ್ವಾ, ಹಾರಂಗಿ ಮೊದಲಾದುವು ಮೈಸೂರು,ಹಾಸನ,ಕೊಡಗು, ಮಂಡ್ಯ, ತುಮಕೂರು, ಚಿಕ್ಕಮಗಳೂರು,ಬೆಂಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳ ಬಹುಪಾಲು ಭೂಮಿಗೆ ನೀರುಣಿಸುತ್ತವೆ. ಇಂತಹ ಮಹಾತಾಯಿ ಕಾವೇರಿಗೆ ಇಂದು ಮೊದಲು ನಮಿಸೋಣ.

ಇವತ್ತು ಈ ಮೊದಲ ಆರು ದಿನಕ್ಕಿಂತ ಸ್ವಲ್ಪ ಬೇರೆ. ಬೇರೆ ಸಂಗೀತಗಾರರು ಹಾಡಿದ, ದೇವಿಯ ಬಗ್ಗೆಯ ರಚನೆಯ ಕೊಂಡಿಗಳನ್ನು ಕೊಡುವ ಬದಲು ಇವತ್ತು ಒಂದು ಬದಲಾವಣೆ ಮಾಡಿದ್ದೇನೆ. ಕನ್ನಡದ ಮೂರು ಕವಿಗಳು ಸರಸ್ವತಿಯ ಬಗ್ಗೆ ಮಾಡಿರುವ ಸ್ತುತಿಯನ್ನು, ಹವ್ಯಾಸಿ ಸಂಗೀತಾಭ್ಯಾಸಿಯೊಬ್ಬರ ಕಂಠದಲ್ಲಿ ಕೇಳಿಸುವೆ. ಇದಕ್ಕೆ ಕಾರಣ, ಕನ್ನಡಕ್ಕೂ-ಕಾವೇರಿಗೂ ಇರುವ ಬಿಡಿಸದ ನಂಟು. ಹಾಗಾಗಿ, ಕಾವೇರಿ ಸಂಕ್ರಮಣದ ದಿನ ಒಂದಲ್ಲ, ಮೂರು ಕನ್ನಡ ರಚನೆಗಳು ಇವತ್ತು ಇಲ್ಲಿ ಕೇಳಿ ಬರುತ್ತಿವೆ. ಇವಕ್ಕೆ ಹಿನ್ನಲೆ ವಾದ್ಯಗಳ ಅಲಂಕಾರವಿಲ್ಲ. ಆದರೂ ಪರವಾಗಿಲ್ಲ, ಎನ್ನುವ ಭಾವನೆ ನನ್ನದು.

ಮೊದಲಿಗೆ ಕನ್ನಡದ ಮೊದಲ ಕಾವ್ಯ ಕವಿರಾಜ ಮಾರ್ಗದಿಂದ ಆಯ್ದ ಸರಸ್ವತೀ ಸ್ತುತಿಯಾದ ಒಂದು ಕಂದಪದ್ಯ:

ಶ್ರೀ ವಿಶದವರ್ಣೆ ಮಧುರಾ

ರಾವೋಚಿತೆ ಚತುರ ರುಚಿರ ಪದರಚನೆ ಚಿರಂ

ದೇವಿ ಸರಸ್ವತಿ ಹಂಸೀ

ಭಾವದಿ ಕೂರ್ತು ನೆಲೆಗೊಳ್ಗೆ ಮನ್ಮಾನಸದೊಳ್

ಇದನ್ನು ಹಾಡಿರುವುದನ್ನು ಇಲ್ಲಿ ಕೇಳಬಹುದು.

http://boomp3.com/m/841f5e96fb86

ಶ್ರೀ ವಿಶದವರ್ಣೆ - ರಾಗ ವಲಜಿ

ಅಂದ ಹಾಗೆ, ಈ ವಲಜಿ ರಾಗವೂ, ಕರ್ನಾಟಕ ಸಂಗೀತಕ್ಕೆ, ಮುತ್ತಯ್ಯ ಭಾಗವತರ ಕೊಡುಗೆಯೇ. ಅವರ ಬಗ್ಗೆ ಕೆಲವು ದಿನಗಳ ಹಿಂದೆ ಬರೆದಿದ್ದೆ.

ಈಗ, ಎರಡನೆಯದಾಗಿ, ಒಂದು ಷಟ್ಪದಿ. ಕುಮಾರವ್ಯಾಸ ಭಾರತದ ಪೀಠಿಕಾ ಸಂಧಿಯಿಂದ ಸರಸ್ವತಿಯ ಪ್ರಾರ್ಥನೆ:

ವಾರಿಜಾಸನೆ ಸಕಲಶಾಸ್ತ್ರ ವಿ

ಚಾರದುದ್ಭವೆ ವಚನ ರಚನೋ

ದ್ಧಾರೆ ಶ್ರುತಿ ಪೌರಾಣದಾಗಮ ಸಿದ್ಧಿದಾಯಕಿಯೇ

ಶೌರಿ ಸುರಪತಿ ಸಕಲ ಮುನಿವರ

ಸೂರಿಗಳಿಗನುಪಮದ ಯುಕುತಿಯೆ

ಶಾರದೆಯೆ ನರ್ತಿಸುಗೆ ನಲಿದೊಲಿದೆಮ್ಮ ಜಿಹ್ವೆಯಲಿ

ಇದನ್ನು, ಕರ್ನಾಟಕದ ಸಾಂಪ್ರದಾಯಿಕ ಗಮಕ ಕಲಾಶೈಲಿಯಲ್ಲಿ ಕೇಳಿ:

ವಾರಿಜಾಸನೆ - ರಾಗ ಸರಸ್ವತಿ

ಮೂರನೆಯದಾಗಿ, ಕನಕದಾಸರು ಮಾಡಿರುವ, ಮಾತಿನ ದೇವತೆ ಶಾರದೆಯ ಮೇಲಿನ ಒಂದು ದೇವರನಾಮ:

ವರವ ಕೊಡು ಎನಗೆ ವಾಗ್ದೇವಿ ನಿನ್ನ

ಚರಣ ಕಮಲಂಗಳ ದಯಮಾಡು ದೇವೀ || ಪಲ್ಲವಿ||

ಶಶಿಮುಖದ ನಸುನಗೆಯ ಬಾಲೇ!

ಎಸೆವ ಕರ್ಣದ ಮುತ್ತಿನ ಓಲೇ

ನಸುವ ಸುಪಲ್ಲ ಗುಣಶೀಲೇ ದೇವೀ

ಬಿಸಜಾಕ್ಷಿ ಎನ್ನ ಹೃದಯದಲಿ ನಿಂದು  ||ಚರಣ ೧||

ರವಿ ಕೋಟಿ ತೇಜ ಪ್ರಕಾಶೇ ಸದಾ

ಕವಿ ಜನ ಹೃತ್ಕಮಲ ವಾಸೇ

ಅವಿರಳಪುರಿ ಕಾಗಿನೆಲೆಯಾದಿ ಕೇ-

ಶವನ ಸುತನಿಗೆ ಸನ್ನುತ ರಾಣಿವಾಸೇ || ಚರಣ ೨||

ಇದನ್ನು ನೀವು ಇಲ್ಲಿ ಕೇಳಬಹುದು:

ವರವ ಕೊಡು - ಕನಕದಾಸರ ರಚನೆ - ರಾಗ: ರಂಜನಿ

ಇಷ್ಟು ದಿವಸದ ಸಂಪ್ರದಾಯವನ್ನು ಮುರಿಯದೆ, ಇವತ್ತಿನ ಸ್ವಾತಿ ತಿರುನಾಳ್ ಮಹಾರಾಜರ ನವರಾತ್ರಿ ಕೃತಿ ಯಾವುದು ಎನ್ನುವುದನ್ನೂ ಹೇಳಿಬಿಡುತ್ತೇನೆ. ಅದು ಶುದ್ಧಸಾವೇರಿ ರಾಗದಲ್ಲಿರುವ ಜನನಿ ಪಾಹಿ ಸದಾ ಎಂಬ ರಚನೆ. ಅದನ್ನು ನೀವು ಇಲ್ಲಿ ಕ್ಲಿಕ್ಕಿಸಿ ಕೇಳಬಹುದು.

-ಹಂಸಾನಂದಿ

‹ ನವರಾತ್ರಿಯ ಆರನೇ ದಿನಮೇಲಿನ ಪುಟಕ್ಕೆನವರಾತ್ರಿಯ ಎಂಟನೇ ದಿನ ›
  • ಕನ್ನಡ
  • ಕಾವೇರಿ
  • ಜ್ಞಾನವಾಹಿನಿ
  • ದಸರ
  • ಮೈಸೂರು
  • ಸಂಗೀತ
~.~
  • hamsanandi ರವರ ಬ್ಲಾಗ್
  • Printer-friendly version
  • Login or register to post comments
  • 817 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 19, 2007 - 10:37am — Sunil Jayaprakash

ಉ: ನವರಾತ್ರಿಯ ಏಳನೇ ದಿನ

Sunil Jayaprakash's picture

ಹಂಸಾನಂದಿಗಳೇ, ಇಂದೂ ಕೂಡ ನಿಮ್ಮ ಬರಹವನ್ನು ಎದುರು ನೋಡುತ್ತಲೇ ಆಫೀಸಿಗೆ ಬಂದೆ. ಈ ದಿನ ಒಂದು ಒಳ್ಳೆಯ ಆರಂಭ ಸಿಕ್ಕಿತೆನಗೆ. ನನ್ನಿ. ಹಾಗೆಯೇ,

ಹವ್ಯಾಸಿ ಸಂಗೀತಾಭ್ಯಾಸಿಯೊಬ್ಬರ ಕಂಠದಲ್ಲಿ

ಇವರು ಯಾರೇ ಆಗಿರಲಿ(ನೀವೇ ಅಂತ ನನ್ನ ಅನುಮಾನ) ಅವರಿಗೂ ನನ್ನ ನನ್ನಿಗಳನ್ನು ತಿಳಿಸಿ.

ಹಾಡಲ್ಲದೆ, ಈ ಎಳೆಯ ಮತ್ತೆರೆಡು ಅಂಶಗಳನ್ನು ನನ್ನನ್ನು ಆಕರ್ಷಿಸಿದವು.
೧. ಕನಕದಾಸರು, ಸರಸ್ವತಿಯನ್ನು "ಶಶಿಮುಖದ ನಸುನಗೆಯ ಬಾಲೇ" ಎಂದಿರುವುದು. ಇತ್ತೀಚೆಗೆ ನೀವೇ ಅಲ್ಲವೇ ಸರ್ವಶುಕ್ಲಾ ಸರಸ್ವತೀ! ಎಳೆಯಲ್ಲಿ ವಿಜ್ಜಿಕೆಯ ಬಗ್ಗೆ ತಿಳಿಸುತ್ತಾ, ಸರಸ್ವತಿಯ ಬಣ್ಣದ ಬಗ್ಗೆ ಪ್ರಸ್ತಾಪ ಮಾಡಿದ್ದು.
೨. ಕವಿರಾಜ ಮಾರ್ಗದಿಂದ "ಶ್ರೀ ವಿಶದವರ್ಣೆ ಮಧುರಾರಾವೋಚಿತೆ ಚತುರರುಚಿರ ಪದರಚನೆ ಚಿರಂದೇವಿ ಸರಸ್ವತಿ ಹಂಸೀ ಭಾವದಿ ಕೂರ್ತು ನೆಲೆಗೊಳ್ಗೆ ಮನ್ಮಾನಸದೊಳ್" ಎಂಬಲ್ಲಿ ಕೂರ್ತು ಪದ ಗಮನಿಸಿ. ನಾನು ಕೂರ್ ಬೇಕೇ ಕೂರ್ ಎಂಬ ಎಳೆಯಲ್ಲಿ "ಕೂರ್ತು" ಪದದ ಪ್ರಸ್ತಾಪ ಮಾಡಿದ್ದೆ. ಕೂರ್ತು ಎಂದರೆ ಬರೀ ಕಾಲು ಮಡಿಸಿ ಕುಳಿತುಕೊಳ್ಳುವ ಕ್ರಿಯೆಯಲ್ಲ. ಕೂರ್ ಎಂದರೆ ಪ್ರೀತಿ, ಮಮತೆ ಎಂಬ ಅರ್ಥಗಳೂ ಇವೆ. ಈ ಪದ್ಯದಲ್ಲಿ ಕೂರ್ತು -> ಪ್ರೀತಿಯಿಂದ ಎಂಬ ವಿವರಣೆ ಕರಾರುವಾಕ್ಕಾಗಿ ಸೇಱುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 19, 2007 - 10:52pm — hamsanandi

ಉ: ನವರಾತ್ರಿಯ ಏಳನೇ ದಿನ

hamsanandi's picture

Smiling

ಹೌದು ಸುನಿಲರೆ, ನೀವು ಹೇಳುವ ಹಾಗೆ ಕೂರ್ತು ಎನ್ನುವ ಪದದ ಅರ್ಥಗಳು ಇಲ್ಲಿ ಸೊಗಸಾಗಿ ವ್ಯಕ್ತವಾಗಿವೆ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 19, 2007 - 11:32am — srinivasps

ಉ: ನವರಾತ್ರಿಯ ಏಳನೇ ದಿನ

srinivasps's picture

"ಮೂರನೆಯದಾಗಿ, ಕನಕದಾಸರು ಮಾಡಿರುವ, ಮಾತಿನ ದೇವತೆ ಶಾರದೆಯ ಮೇಲಿನ ಒಂದು ದೇವರನಾಮ:"

ಕನಕದಾಸರ ಕೃತಿ ಎಂದಾಗ, ನಾಮಾಂಕಿತ ಬಳಕೆ ಹೇಗಿದೆ ಎಂದು ಕುತೂಹಲ ದಿಂದ ನೋಡಿದೆ...
" ಕಾಗಿನೆಲೆಯಾದಿ ಕೇ-
ಶವನ ಸುತನಿಗೆ ಸನ್ನುತ ರಾಣಿವಾಸೇ"
ಇದನ್ನು ಓದಿದಾಗ ಪುರಂದರ ದಾಸರ ಕೃತಿ - 'ಶರಣೆಂಬೆ ವಾಣಿ, ಪೊರೆಯೆ ಕಲ್ಯಾಣಿ' ನೆನಪಿಗೆ ಬಂತು...
ಈ ಕೃತಿಯಲ್ಲಿ
ಪುರಂದರ ದಾಸರು ತಮ್ಮ ನಾಮಾಂಕಿತವನ್ನು ಬಳಸಲು ಸರಸ್ವತಿಯನ್ನು 'ಪುರಂದರ ವಿಠ್ಠಲನ ಸೋದರ ಸೊಸೆ' ಎಂದು ಕರೆದಿದ್ದರೆ...

--ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 19, 2007 - 10:57pm — hamsanandi

ಉ: ನವರಾತ್ರಿಯ ಏಳನೇ ದಿನ

hamsanandi's picture

ಹೌದು - ಆದರೆ ಸೋದರ ಸೊಸೆ ಹೇಗೆ ಸರಿಹೋಗುತ್ತೋ ತಿಳಿಯುತ್ತಿಲ್ಲ. ಸೊಸೆ ಎನ್ನುವುದೇ ಸರಿಹೋಗುತ್ತಲ್ಲವೇ?

ಮುತ್ತುಸ್ವಾಮಿ ದೀಕ್ಷಿತರು, ತಮ್ಮ ಕಲಾವತಿ ರಾಗದ ಕಲಾವತಿ ಕಮಲಾಸನ ಯುವತಿ ಎಂಬ ರಚನೆಯಲ್ಲಿ, ಸರಸ್ವತಿಯನ್ನು ’ಮುರಾರಿ ಸ್ನುಶಾ’ - ವಿಷ್ಣುವಿನ ಸೊಸೆ ಎಂದು ಕರೆದದ್ದು ನೆನಪಿಗೆ ಬಂತು.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನವರಾತ್ರಿಯ ಎಂಟನೇ ದಿನ
  • ನವರಾತ್ರಿಯ ಒಂಬತ್ತನೆಯ ದಿನ
  • ನವರಾತ್ರಿಯ ಹತ್ತನೇ ದಿನ
  • ನವರಾತ್ರಿಯ ಐದನೆಯ ದಿನ
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
  • ದೊಡ್ಡವರ ದೊಡ್ಡತನ
  • ಕೈ ಕೊಟ್ಟ ಜೆಟ್ ಏರ್
  • ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
  • ಈ ರೀತಿ ನಿಮ್ಮ ಮನೇಲಿ ಆದರೆ ನೀವು ಏನು ಮಾಡ್ತೀರಿ?
  • ನೂರು ಕನ್ನಡಿಗಳ ದೇಗುಲ
  • ಇವತ್ತು ಕೈ ತೊಳೆಯುವ ದಿನವಂತೇ...!!!
  • ನಿಮ್ಮ ಬ್ರೌಸರ್‌ನಲ್ಲಿಯೇ ಬಿಸಿ ಬಿಸಿ ಸುದ್ದಿ
  • ನಾನು ಯಾವ ಕಾಲದಲ್ಲಿ ಇದ್ದೇನೆ...!?
  • ಓದಿದ್ದು ಕೇಳಿದ್ದು ನೋಡಿದ್ದು-50 ವಿಮರ್ಶೆಯ ಬಗ್ಗೆ ವಿಮರ್ಶೆ:"ಪ್ರಕರಣ"ಕ್ಕೆ ತೆರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:06am
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • ಹಿರಣ್ಯಾಕ್ಷ
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • srinivasps
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 15, 2008 - 11:48pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:47pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:42pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:29pm
  • pradeep_adiga
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 15, 2008 - 11:15pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:12pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 500 ಅತಿಥಿಗಳು ಆನ್ಲೈನ್ ಇರುವರು.


ಕೆಂಡದ ಗಿರಿಯ ಮೇಲೊಂದು
ಅರಗಿನ ಕಂಭವಿದ್ದಿತ್ತು ನೋಡಾ ಅಯ್ಯಾ!
ಅರಗಿನ ಕಂಭದ ಮೇಲೊಂದು ಹಂಸೆಯಿದ್ದಿತ್ತು
ಕಂಭ ಬೆಂದು ಹಂಸೆ ಹಾರಿತ್ತು ಗುಹೇಶ್ವರಾ!

- ಅಲ್ಲಮಪ್ರಭು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator