ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಪು ತಿ ನ ಅವರ "ಶ್ರೀರಾಮ ಪಟ್ಟಾಭಿಷೇಕ"
ಪುತಿನ ಅವರು ಕನ್ನಡದಲ್ಲಿ ಹಲವು ಗೀತನಾಟಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಶ್ರೀರಾಮ ಪಟ್ಟಾಭಿಷೇಕ ಒಂದು.
ಇದರ ರಂಗ ಪ್ರಯೋಗವೊಂದರಲ್ಲಿ ಭಾಗವಹಿಸುವ ಅವಕಾಶ ನನಗೆ ದೊರೆತಿತ್ತು. ಬಹಳ ಒಳ್ಳೇ ಸಂಗೀತವಿರುವುದರಿಂದ ಕೆಲವೊಮ್ಮೆ ಹಾಡುಗಳ ಸಾಹಿತ್ಯಕ್ಕೆ ಬೇಕಾದಷ್ಟು ಗಮನ ಹರಿಸಲಿಲ್ಲವೇನೋ ಎನ್ನಿಸಿ, ನಂತರ ಒಮ್ಮೆ ಕುಳಿತು ಓದಿದೆ. ಗಾತ್ರದಲ್ಲಿ ಅಂತಹ ದೊಡ್ಡ ರಚನೆಯೇನೂ ಅಲ್ಲ -ಆದರೆ ಶೈಲಿಯಲ್ಲಿ ಸಂಸ್ಕೃತಭೂಯಿಷ್ಟವಾದ ಕನ್ನಡದಿಂದ ಹಿಡಿದು ಒಂದೇ ಒಂದೂ ಸಂಸ್ಕೃತ ಪದಗಳಿಲ್ಲದ ಪದ್ಯಗಳವರೆಗೆ ಎಲ್ಲಾ ತರಹದ ಪದ್ಯಗಳೂ ಇದರಲ್ಲಿವೆ.
ಇದರ ಸೊಗಸನ್ನು ಹಂಚಿಕೊಳ್ಳಲು ಒಂದು ಬರಹ ಬರೆದೆ. ಸಂಪದದಲ್ಲೇ ಹಾಕಬೇಕೆಂಬ ಆಸೆ ಇತ್ತಾದರೂ, ಚಿತ್ರಗಳ ಸಂಖ್ಯೆ ಹೆಚ್ಚೇ ಇದ್ದಿದ್ದರಿಂದ ಅವುಗಳನ್ನು ಸರಿಯಾದ ಜಾಗಗಳಲ್ಲಿ ಚೆನ್ನಾಗಿ ಕಾಣುವಂತೆ ಅಂಟಿಸಲು ನನಗೆ ಬರುವುದೋ ಇಲ್ವೋ ಎಂದು ವರ್ಡ್ ಪ್ರೆಸ್ ಮೊರೆಹೋದೆ.
ಆ ಬರಹವನ್ನು ಓದಲು ಕೆಳಗೆ ಚಿಟುಕಿಸಿ:
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 212 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಪು ತಿ ನ ಅವರ "ಶ್ರೀರಾಮ ಪಟ್ಟಾಭಿಷೇಕ"
ಪ್ರಿಯ ಹಂಸಾನಂದಿಯವರೆ,
ಅದ್ಭುತವಾದ ಬರವಣಿಗೆ. ರಾಮಾಯಣ ಮಹಾಭಾರತ ತಿಳಿದ ಕಥೆಗಳೇ ಆದರೂ ಅದನ್ನು ಕಾವ್ಯದಲ್ಲಿ ವಿವಿಧ ವಾಗ್ಗೇಯಕಾರರು ವ್ಯಕ್ತಪಡಿಸುವ ರೀತಿ ವಿವಿಧ ಬಗೆಯವಾಗಿರುತ್ತವೆ. ಅವುಗಳನ್ನು ರಂಗಕ್ಕೆ ತರುವ ಕಲಾವಿದರು ತಮ್ಮ ಶ್ರಮ ಹಾಕಿ ಶಾಸ್ತ್ರೀಯ ಸಂಗೀತ ನೃತ್ಯಗಳೊಂದಿಗೆ ತಿಂಗಳುಗಟ್ಟಳೆ ತಾಲೀಮು ನಡೆಸಿ ಜನರಿಗರ್ಪಿಸಿದರೆ ನೋಡಲು ಎರಡು ಕಣ್ಣುಗಳು ಸಾಲದು. ಚಿತ್ರಗಳು ಸುಂದರವಾಗಿ ಮೂಡಿವೆ. ಅದರಲ್ಲಿ ತಾವೂ ಭಾಗವಹಿಸಿದ್ದಿರೆಂದು ತಿಳಿದು ಸಂತೋಷವಾಯಿತು. ಅದರಲ್ಲಿ ತಮ್ಮ ಪಾತ್ರ ಯಾವುದು ಎಂದು ತಿಳಿದುಕೊಳ್ಳಬಹುದೆ? ಆ photosನಲ್ಲಿ ತಾವು ಎಲ್ಲಿದ್ದೀರಿ ಎಂದು ನಮಗೆ ಗುರುತಿಸಲು ಆಗುವುದಿಲ್ಲ. ಅಥವಾ ರಾಮನ ಪಾತ್ರವೇ ತಮ್ಮದೊ ತಿಳಿಸಿ. ಧನ್ಯವಾದಗಳು.
ಶೈಲಾಸ್ವಾಮಿ
ಉ: ಪು ತಿ ನ ಅವರ "ಶ್ರೀರಾಮ ಪಟ್ಟಾಭಿಷೇಕ"
ಪ್ರಿಯ ಹಂಸಾನಂದಿಯವರೆ,
ಈಗತಾನೆ thatskannada.oneindia.inನಲ್ಲಿ ನಿಮ್ಮ ನೃತ್ಯ ರೂಪಕದ ಬಗ್ಗೆ ನೋಡಿದೆ. ಅದರಿಂದ ನಿಮ್ಮ ಪಾತ್ರ ವಾಲ್ಮೀಕಿ ಮತ್ತು ಅಗ್ನಿ ಪಾತ್ರ ಎಂದು guess ಮಾಡಿದ್ದೇನೆ. ಸರಿನಾ? ಅಲ್ಲಿನ ವಿವರಣೆ ನೋಡಿದಾಗ ಅದು ಎಷ್ಟು ಚೆನ್ನಾಗಿರಬಹುದು ಎಂಬ ಕಲ್ಪನೆ ಬರುತ್ತದೆ. ಸಂತೋಷವಾಯಿತು.
ಶೈಲಾಸ್ವಾಮಿ
ಉ: ಪು ತಿ ನ ಅವರ "ಶ್ರೀರಾಮ ಪಟ್ಟಾಭಿಷೇಕ"
ಶೈಲಾಸ್ವಾಮಿ ಅವರೆ,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ದಟ್ಸಕನ್ನಡದ ವರದಿಯಲ್ಲಿರುವ ಹಾಗೆ, ನಾನು ವಹಿಸಿದ್ದು ಅಗ್ನಿ ಮತ್ತು ವಾಲ್ಮೀಕಿಯ ಕಿರುಪಾತ್ರಗಳನ್ನೇ.
-ಹಂಸಾನಂದಿ
ಹರಿದಾಸ ಸಂಪದ:- http://haridasa.in/