ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಹಂಸ ನಾದ
ಹಂಸ ನುಡಿದರೆ, ಹಂಸನಾದ!
ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ದಟ್ಸ ಕನ್ನಡದಲ್ಲಿ ಇವತ್ತು ಪ್ರಕಟವಾಗಿರುವ ವರದಿ ಒಂದರ ಕೊಂಡಿ ಕೆಳಗಿದೆ.
ಕುಂಭ ರಾಶಿ ಮೇಲೆ ಕೆಟ್ಟ ಪರಿಣಾಮ ಬೀರಲಿರುವ ಗ್ರಹಣ
ಎಸ್.ಕೆ. ಜೈನ್ ಅವರು ಏನಾದರೂ ಹೇಳಲಿ, ಅದು ಅವರ ಹಕ್ಕು, ಮತ್ತು ನಂಬಿಕೆ.ಆದರೆ,ವರದಿಗಾರರು ವಾರ್ತೆಯೊಂದನ್ನು ಪ್ರಕಟಿಸುವ ಮೊದಲು ಸ್ವಲ್ಪವಾದರೂ, ಅದು ಸರಿಯೇ ತಪ್ಪೇ ಅನ್ನುವುದನ್ನು ನೋಡಿ ತಿದ್ದಿ ಬರೆಯಬೇಡವೇ?
ಈ ಕೆಳಗಿನ ರೀತಿಯ ತಪ್ಪು ತಪ್ಪಾದ ಸಾಲುಗಳ ಬಗ್ಗೆ ನನಗೆ ಬಹಳ ಸಿಟ್ಟು ಬರುತ್ತೆ.
ಸೂರ್ಯಗ್ರಹಣ ಹಾಗೂ ಚಂದ್ರಗ್ರಣ ಕೇವಲ 15 ದಿನಗಳ ಅಂತರದಲ್ಲಿ ಸಂಭವಿಸುವುದು ಬಹಳ ಅಪರೂಪದ ಘಟನೆ.
ಇದೆಷ್ಟು ಸರಿ ಎಂದು ತಿಳಿಯಲು, ಕಳೆದ ೫ ವರ್ಷಗಳಲ್ಲಿ ನಡೆದಿರೋ ಗ್ರಹಣಗಳ ಪಟ್ಟಿ ನೋಡೋಣವೇ?
೨೦೦೪:
ಏಪ್ರಿಲ್ ೧೯: ಸೂರ್ಯಗ್ರಹಣ; ಮೇ ೪: ಚಂದ್ರಗ್ರಹಣ
ಅಕ್ಟೋಬರ್ ೧೪: ಸೂರ್ಯಗ್ರಹಣ; ಅಕ್ಟೋಬರ್ ೨೮: ಚಂದ್ರಗ್ರಹಣ
೨೦೦೫
ಏಪ್ರಿಲ್ ೦೮: ಸೂರ್ಯಗ್ರಹಣ; ಏಪ್ರಿಲ್ ೨೪: ಚಂದ್ರ ಗ್ರಹಣ
ಅಕ್ಟೋಬರ್ ೩: ಸೂರ್ಯಗ್ರಹಣ ;ಅಕ್ಟೋಬರ್ ೧೭: ಚಂದ್ರಗ್ರಹಣ
೨೦೦೬:
ಮಾರ್ಚ್ ೧೪: ಚಂದ್ರಗ್ರಹಣ;ಮಾರ್ಚ್ ೨೯: ಸೂರ್ಯಗ್ರಹಣ
ಸೆಪ್ಟೆಂಬರ್ ೭: ಚಂದ್ರಗ್ರಹಣ; ಸೆಪ್ಟೆಂಬರ್ ೨೨: ಸೂರ್ಯಗ್ರಹಣ
೨೦೦೭:
ಮಾರ್ಚ್ ೩: ಚಂದ್ರಗ್ರಹಣ; ಮಾರ್ಚ್ ೧೯:ಸೂರ್ಯಗ್ರಹಣ
ಆಗಸ್ಟ್ ೨೮: ಚಂದ್ರಗ್ರಹಣ;ಸೆಪ್ಟೆಂಬರ್ ೧೧: ಸೂರ್ಯಗ್ರಹಣ
೨೦೦೮:
ಫೆಬ್ರವರಿ ೭: ಸೂರ್ಯಗ್ರಹಣ; ಫೆಬ್ರವರಿ ೨೧: ಚಂದ್ರಗ್ರಹಣ
ಆಗಸ್ಟ್ ೧: ಸೂರ್ಯಗ್ರಹಣ; ಅಗಸ್ಟ್ ೧೬: ಚಂದ್ರಗ್ರಹಣ
ಈ ಪಟ್ಟಿಯನ್ನು ನೋಡಿದರೆ ಏನು ಅರ್ಥವಾಗುತ್ತೆ?
೧. ಪ್ರತಿ ಗ್ರಹಣವೂ ಇನ್ನೊಂದು ಗ್ರಹಣವಾದ ಹದಿನಾಕು/ಹದಿನೈದು ದಿನಗಳಿಗೇ ಆಗುತ್ತೆ
೨. ೧೦ ಗ್ರಹಣ ಜೋಡಿಗಳಲ್ಲಿ, ಆರು ಸಲ ಸೂರ್ಯಗ್ರಹಣವಾಗಿ ಹದಿನೈದು ದಿನದ ನಂತರ ಚಂದ್ರಗ್ರಹಣ ಬಂದಿದೆ. ಇನ್ನು ನಾಕು ಸಲ ಮೊದಲು ಚಂದ್ರಗ್ರಹಣವಾಗಿ, ಮತ್ತೆ ಒಂದು ಪಕ್ಷವಾದ ನಂತರ ಸೂರ್ಯ ಗ್ರಹಣ ಬಂದಿದೆ.
ಹಾಗಾದರೆ, ಈ ಬಾರಿಯ ಗ್ರಹಣ ಅದು ಯಾವ ಮೂಲೆಯಿಂದ "ಅಪರೂಪದ ಘಟನೆ"?
ಇದು ನಿಜವಾದರೆ, ಹತ್ತು ದಿನಗಳಲ್ಲಿ ಆರು ದಿನ ನಮ್ಮ ಮನೆಗೆ ಬರುವರಿಗೆ ನಾವು ಇನ್ನು ಮೇಲೆ "ಅಪರೂಪದ ಅತಿಥಿಗಳು" ಅನ್ನಬೇಕು ಅನ್ನಿಸುತ್ತೆ!!
-ಹಂಸಾನಂದಿ
ಸೂ: ಸಂಪದದಲ್ಲಿ ಬರೆಯುವ/ಓದುವ ಬಳಗದಲ್ಲಿ ಹಲವಾರು ಪತ್ರಕರ್ತರು - ವರದಿಗಾರರು ಇದ್ದಾರೆ ಅಂತ ನನ್ನೆಣಿಕೆ. ಈ ಬರಹ ಮೊನಚಾಗಿದೆ ಎಂದೆನಿಸಿದರೂ ನನಗೇನೂ ಬೇಸರವಿಲ್ಲ. ದಯವಿಟ್ಟು ನಾನು ಏಕೆ ಹೀಗೆ ಹೇಳುತ್ತಿದ್ದೀನೆಂಬುದರ ಬಗ್ಗೆ ಗಮನ ಕೊಡಿ. ದಟ್ಸ್ ಕನ್ನಡದಲ್ಲೇ ನನ್ನ ಅಭಿಪ್ರಾಯ ಪ್ರಕಟಿಸಲು ನೋಡಿದೆ. ಆದರೆ, ಅದೇನೋ ಅಲ್ಲಿ ಹಾಕಲು ಆಗುತ್ತಿಲ್ಲ! ಅದಕ್ಕೆಂದು ಇಲ್ಲಿ ಬರೆದೆ.ಅಂದಹಾಗೆ, ದಟ್ಸ್ ಕನ್ನಡದಲ್ಲಿ ಈ ರೀತಿ ವರದಿಗಳು ಪ್ರಕಟವಾಗುತ್ತಿರುವುದೇನೂ ಮೊದಲ ಸರತಿ ಅಲ್ಲ!

- hamsanandi ರವರ ಬ್ಲಾಗ್
- Login or register to post comments
- 515 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
> ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ಸದ್ಯಕ್ಕಂತೂ ಕಾಣೆ...!
ಈಗೇನಿದ್ದರೂ...
ಸತ್ಯಕ್ಕಿಂತಾ ಮಸಾಲ ಸುದ್ದಿ ಮುಖ್ಯ --> ಮಸಾಲ ಹೆಚ್ಚು ಇದ್ದಷ್ಟು ಜನ ಹೆಚ್ಚು ನೋಡುತ್ತಾರೆ-->
ಹೆಚ್ಚು ನೋಡಿದರೆ ಹೆಚ್ಚು ಜಾಹಿರಾತು --> ಹೆಚ್ಚು ಜಾಹಿರಾತಿನಿಂದ ಹೆಚ್ಚು ಹಣ...!
ಯಾರೋ ಪತ್ರಿಕೆ/ನ್ಯೂಸ್ ಚಾನಲ್ ಹುಟ್ಟು ಹಾಕಿದವರು ಚೆನ್ನಾಗಿ ಹಣ ಮಾಡುತ್ತಾರೆ...
ಹಣವನ್ನು ತರದ ಕಾರ್ಯಕ್ರಮಗಳು ಹಿಂದೆ ಸರಿಯುತ್ತಿವೆ... ಸುಳ್ಳು ಹೆಚ್ಚು ನಲಿಯುತ್ತಿದೆ...
ಎಲ್ಲ 'ರಿಯಾಲಿಟಿ ಷೋ' ಗಳ ಕಥೆ ಇಷ್ಟೇ ಅಲ್ಲವೇ?
ಜನರ ಮುಂದೆ ಬಯ್ದಾಡುವ ಜಡ್ಜ್ ಗಳ ದೃಶ್ಯ ಎಲ್ಲೆಡೆ ರಾರಾಜಿಸುತ್ತದೆ...
ಜಡ್ಜ್ ಸ್ಥಾನಕ್ಕೆ ಅಪಮಾನ ಮಾಡಿದಂತೆ...ಅಲ್ಲವೇ?
ಇದೆಲ್ಲ ಮಕ್ಕಳಿಗೆ ಹೇಗೆ ಪ್ರಭಾವ ಬೀರುವುದೋ !
ಮಾಧ್ಯಮಕ್ಕೆ/ಪತ್ರಿಕೆಗಳಿಗೆ ಫ್ರಾನ್ಸ್ ನ ಪ್ರಧಾನಿಯ ಹೆಂಡತಿಯ ಚಿತ್ರಗಳು ಮುಖ್ಯವೇ ಹೊರತು ನಮ್ಮಲ್ಲಿರುವ ರೈತರ ಸಮಸ್ಯೆಗಳಲ್ಲ...
ಇಂಡಿಯಾ ಟೈಮ್ಸ್.ಕಾಂ ಒಮ್ಮೆ ತೆಗೆದು ನೋಡಿ - ಇಂಡಿಯ ಸುದ್ದಿ ಮಸೂರದಿಂದ ಹುಡುಕಬೇಕಷ್ಟೆ ಇತ್ತೀಚೆಗೆ! ಹೆಸರಿಗೆ ಮಾತ್ರ ಇಂಡಿಯ ಟೈಮ್ಸ್!
ನೀವು ಹೇಳಿದ ಗ್ರಹಣದ ವಿಚಾರವಾದರೂ ಪರವಾಗಿಲ್ಲ...
ಆರುಷಿ ಪ್ರಕರಣದಲ್ಲಂತೂ ತಂದೆ-ಮಗಳ ಸಂಬಂಧವನ್ನೇ ಹಿಂದೆ ಮುಂದೆ ನೋಡದೆ ಕೆಡಿಸಿದರು!
ಹಲವಾರು ದಿನಗಳು ಇದರ ಬಗ್ಗೆ ಚರ್ಚೆ ಬೇರೆ!
ಇಡೀ ಪತ್ರಿಕಾ ಮಾಧ್ಯಮವೇ ಕುಲಗೆಟ್ಟಿದೆ...
ಬೆನ್ನಟ್ ಮತ್ತು ಕೋಲ್ಮನ್ ಕಂ. ಬೆನ್ನಿಗೆ ಕೋಲಿನಿಂದ ಬಾರಿಸಬೇಕು, ನನಗಿಸುವಂತೆ ಇವರೇ ಇತ್ತೀಚಿನ ಕಳಪೆ ಸ್ಥಿತಿಗೆ ಒಂದು ಮುಖ್ಯ ಕಾರಣ...ಕೊಚ್ಚೆ ಗುಂಡಿಗೆ ದಾರಿದೀಪವಾಗಿ ನಿಂತಿದ್ದಾರೆ...
ಇದೆ ಜಾಡು ಹಿಡಿದಿದೆ ಕನ್ನಡ ಪತ್ರಿಕೆಗಳು...
ಇದರ ಬಗ್ಗೆ ಎಷ್ಟು ಚರ್ಚಿಸಿದರೂ ಸಾಲದು
--ಶ್ರೀ
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ಚುನಾವಣೆಗೆ ಮುಂಚೆ..ನರೇಂದ್ರ ನಾಯಕ್ ಅನ್ನುವವರು ಜ್ಯೋತಿಷಿಗಳಿಗೆ ಪಂಥಾಹ್ವಾನ ಮಾಡಿದ್ದರು..ಯಾರಾದರು ಸರಿಯಾಗಿ ಭವಿಷ್ಯ ಹೇಳಿದರೆ ಬಹುಮಾನ ಕೊಡುವುದಾಗಿ..ಇದನ್ನು ದಟ್ಸ್ ಕನ್ನಡ ಕೂಡ ದೊಡ್ಡದಾಗಿ ಹಾಕಿತ್ತು. ಆದ್ರೆ ಆಮೇಲೆ ಯೇನಾಯಿತು..ಯಾರಾದರು ಬಹುಮಾನ ಪಡೆದ್ರ ಇಲ್ವ ಅಂತ ಸುದ್ದಿನೇ ಇಲ್ಲ. ಇವರಿಗೆ ಪರಿಸ್ತಿಯ ಲಾಭ ಬಾಚೊದಸ್ಟೆ ಮುಖ್ಯ...ನಮ್ಮ ದೇಶದ ಹಲವು ಹಗರಣಗಳ ಹಾಗೆ.
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
Well researched ಹಾಗೂ ತಾರ್ಕಿಕ ಬರೆಹ. ಶ್ರೀಯರು ಹೇಳಿದಂತೆ ಸತ್ಯಕ್ಕಿಂತ ’ಸುದ್ದಿ ಮಾಡುವುದು’ ಮುಖ್ಯ ಈಗ ಮಾಧ್ಯಮಗಳಿಗೆ. ಮೊದಲು ಸುದ್ದಿ ಎಬ್ಬಿಸಿಬಿಡೋಣ, ಬಹಳಷ್ಟು ಜನ ನಂಬಿದರೆ ಆ ಸುದ್ದಿಯೇ ಸತ್ಯವಾಗುತ್ತದೆ ಎನ್ನುವು ಧೋರಣೆಯೇನೋ! ಅಥವಾ ಬರೆ ನಿರ್ಲಕ್ಷ್ಯವೋ.
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ಹಂಸಾನಂದಿಯವರೇ ನೀವು ಪಟ್ಟಿ ನೀಡಲು ತೆಗೆದುಕೊಂಡ ಶ್ರಮಕ್ಕಾಗಿ ಮತ್ತು ಮೊನಚು ಬರಹಕ್ಕೂ ಧನ್ಯವಾದಗಳು. ನನ್ನ ಕೆಲಮಿತ್ರರಿಗೆ ಇದನ್ನು ಮಿಂಚಂಚೆ ಮೂಲಕ ಕಳುಹಿಸುತ್ತೇನೆ.
*ಅಶೋಕ್
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ನಲ್ವರೇ,
ಆ ಬರಹಕ್ಕೆ ನಿಮ್ಮ ಕಮೆಂಟನ್ನು ನೋಡಿದೆ..
ಜಯ್ನರ ಜೋತಿಸಿಯವಂತೆ
ಈ ಕುರುಡು ಕಣಿಯಿಂದ ನಮ್ ಮಂದಿ ಯಾವಾಗ ಎಚ್ಚೆತ್‌ಕೊಳ್ತಾರೋ!!
ಪ್ರತೀ ಹುಣ್ಣಿಮೆಗೂ ಚಂದ್ರಗ್ರಾಣ, ಅಮಾಸೆಗೆ ಸೂರ್ಯಗ್ರಾಣ ಆಗಬೋದು.
ಮೊನ್ನೆ ಯಾರೋ ಯೇಳಿದ್ದು. ಇವೊತ್ತು ಚಂದ್ರಗ್ರಾಣ, ಅದೂ ಅಲ್ದೇ ವುಣ್ಣಿಮೆ.. ಕೆಟ್ಟದಿಸ ಅಂತ..
ಅಲ್ಲ.. ಚಂದ್ರಗ್ರಾಣ ವುಣ್ಣಿಮೆದಿಸ ಆಗ್ದೆ, ಅಮಾಸೆಯಾಗೆ ಆಯ್ತದ?
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ಚಂದ್ರಗ್ರಾಣ ವುಣ್ಣಿಮೆದಿಸ ಆಗ್ದೆ, ಅಮಾಸೆಯಾಗೆ ಆಯ್ತದ?
ಆದರೆ ಹೆಚ್ಚಿನವರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಜ್ಯೋತಿಷಿಗಳ ಮಾತಿನ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ!
*ಅಶೋಕ್
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ಎಸ್.ಕೆ.ಜೈನರು ಯಾಕೆ ಹೀಗೆ ಹೇಳಿದರೋ ಗೊತ್ತಿಲ್ಲ. ಆದರೆ ಅವರು ಜ್ಯೋತಿಷ್ಯವನ್ನು ಬಹಳ ವೈಜ್ಞಾನಿಕ ರೀತಿಯಲ್ಲೇ ನಿರೂಪಿಸುತ್ತಾರೆ. ಬಹಳಷ್ಟು ನಿದರ್ಶನಗಳನ್ನೂ ನೀಡುತ್ತಾರೆ.
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ಜ್ಯೋತಿಷ್ಯವನ್ನು ಬಹಳ ವೈಜ್ಞಾನಿಕ ರೀತಿಯಲ್ಲೇ ನಿರೂಪಿಸುತ್ತಾರೆ
(ಜೈನ್ ಬಗ್ಗೆ ನಾನು ಹೇಳ್ತಿಲ್ಲ.) ಆದರೆ ಹೆಚ್ಚಿನ ಕಡೆ ವೈಜ್ಞಾನಿಕ ರೀತಿಯಲ್ಲಿ ಹೇಳುತ್ತಿರುವ ಭ್ರಮೆ ಹುಟ್ಟಿಸುವುದೇ ಹೆಚ್ಚು.
*ಅಶೋಕ್
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ಜೋತಿಷ್ಯ ಅದು ಹೇಗೆ ವೈಜ್ಞಾನಿಕ ಎಂಬುದನ್ನು ಮೊದಲು ಹೇಳಬೇಕು ಅಲ್ಲವೇ? ವಿಜ್ಞಾನ ಅಂದರೆ ಏನು ಎಂದು ಗೊತ್ತಿಲ್ಲದ ಮಂದಿಯೆಲ್ಲಾ ಜೋತಿಷ್ಯ ವೈಜ್ಞಾನಿಕ ಎಂದು ಹೇಳುವುದನ್ನು ಕೇಳಿದರೆ ನಗುಬರುತ್ತದೆ.
ಸೂರ್ಯ ಗ್ರಹಣದ ಸಮಯದಲ್ಲಿ ಹೊರಗೆ ಹೋಗಬಾರದು ಎನ್ನುತ್ತಾನೆ ಜೋತಿಷಿ. ಇದಕ್ಕೆ ವೈಜ್ಞಾನಿಕ ಕಾರಣವೆನ್ನುವಂತೆ ಸೂರ್ಯನಿಂದ ಆ ಸಮಯದಲ್ಲಿ ವಿಕಿರಣಗಳು ಬರುತ್ತವೆ ಎನ್ನುತ್ತಾನೆ. ಜನರು ಇದನ್ನು ವೈಜ್ಞಾನಿಕ ಎಂದು ನಂಬುತ್ತಾರೆ.
ಗ್ರಹಣ ಸಮಯದಲ್ಲಿ ಊಟ ಮಾಡಬಾರದು. ಅದು ಜೀರ್ಣವಾಗುವುದಿಲ್ಲ. ಆ ಸಮಯದಲ್ಲಿ ಬ್ಯಾಕ್ಟೀರಿಯಲ್ ಆಕ್ಟೀವಿಟಿ ಹೆಚ್ಚಾಗಿರುತ್ತದೆ ಎನ್ನುತ್ತಾನೆ ಜೋತಿಷಿ. ಇದನ್ನೂ ವೈಜ್ಞಾನಿಕ ವಿವರಣೆ ಎನ್ನುತ್ತಾರೆ.
ಹೀಗೆ ಬಸುರಿಯರು ಹೊರಬರಬಾರದು, ಚಂದ್ರ, ಗ್ರಹಗಳ ಗುರುತ್ವ ಶಕ್ತಿ ಮನುಷ್ಯನ ಮೇಲೆ ಪ್ರಭಾವವಾಗುತ್ತದೆ ಎಂಬೆಲ್ಲಾ ಮಾಹಿತಿ ವಿಜ್ಞಾನದಿಂದ ಕಡ ಪಡೆದ ಅರೆಬೆಂದ, ಅರ್ಧ ಸತ್ಯವಾದ ಸಂಗತಿಗಳು.
ಹೋಮ ಹವನಗಳು ಒಂದು ರೀತಿಯ ಮೋಡ ಬಿತ್ತನೆ ಎನ್ನುವ ಮೂಲಕ ತಮ್ಮ ಆಚರಣೆಗೆ ವಿಜ್ಞಾನದ ಮೊಹರು ಹಾಕಿಸಿಕೊಳ್ಳುವ ತವಕ. ಹರ್ಬಲ್ ಎಂದ ಕೂಡಲೆ ಎಂಥಾ ಪ್ರಾಡಕ್ಟಾದರೂ ಬಿಕರಿಯಾಗುತ್ತದೆ ಎಂದ ಹಾಗೆ.
______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
"ಜೋತಿಷ್ಯ ಅದು ಹೇಗೆ ವೈಜ್ಞಾನಿಕ ಎಂಬುದನ್ನು ಮೊದಲು ಹೇಳಬೇಕು ಅಲ್ಲವೇ? ವಿಜ್ಞಾನ ಅಂದರೆ ಏನು ಎಂದು ಗೊತ್ತಿಲ್ಲದ ಮಂದಿಯೆಲ್ಲಾ ಜೋತಿಷ್ಯ ವೈಜ್ಞಾನಿಕ ಎಂದು ಹೇಳುವುದನ್ನು ಕೇಳಿದರೆ ನಗುಬರುತ್ತದೆ."
ತಮ್ಮಂತಹ ಮಹಾ ವಿಜ್ಞಾನಿಗಳು ಅದೆಷ್ಟು ನೋಬೆಲ್ ಪಾರಿತೋಷಕಗಳನ್ನು ಪಡೆದಿರುವಿರೆಂದು ಇಲ್ಲಿ ನೆರೆದಿರುವ ಮಹಾಜನಗಳಿಗೆ ದಯಮಾಡಿ ಹೇಳಬೇಕು.
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ಮಾನ್ಯ ಮಾಧವರೆ,
ವಿಜ್ಞಾನದ ಬಗ್ಗೆ ಮಾತನಾಡುವವರೆಲ್ಲರೂ ವಿಜ್ಞಾನಿಗಳಾಗಿರಬೇಕೆಂಬ ತಮ್ಮ ಅಭಿಪ್ರಾಯವನ್ನು ನಾನು ಸಂಪೂರ್ಣವಾಗಿ ಅನುಮೋದಿಸುತ್ತೇನೆ. ಆದ್ದರಿಂದಲೇ ನಾನು ಪ್ರತಿ ಬಾರಿ ಕೂದಲು ಕತ್ತರಿಸಿಕೊಳ್ಳಲು ಹೋಗುವಾಗಲೂ ನನ್ನ ’ಹಜಾಮತಿ’ಯ ಕೌಶಲ್ಯವನ್ನು ಒಮ್ಮೆ ವೃಧ್ಧಿಸಿಕೊಂಡೇ ಹೋಗುವುದು.
ಇನ್ನು ನೀವು uniquesupri ಅವರ ಮೇಲೆ ಮಾಡಿರುವ Ad hominem ವಾದ ಕೂಡ ಬಹಳ ಸೂಕ್ತವಾದದ್ದು. ನಮ್ಮಲ್ಲಿ ಯಾವುದೇ ವಾದವನ್ನು ವೈಚಾರಿಕವಾಗಿ ಎದುರಿಸುವ ಶಕ್ತಿ ಇಲ್ಲದಿದ್ದಾಗ ನಾವು ಎದುರಿನ ವ್ಯಕ್ತಿಯನ್ನು ಹೀಗಳೆದೋ, ಹೊಡೆದೋ, ಬಡಿದೋ ಒಟ್ಟಿನಲ್ಲಿ ವಾದವನ್ನು ಗೆಲ್ಲುವುದು ಮುಖ್ಯವಲ್ಲವೇ? ಇಲ್ಲದಿದ್ದರೆ ನಮ್ಮ ಹೆಂಡಿರು ಮಕ್ಕಳಿಗೆ, ನಮ್ಮ ಉನ್ಮತ್ತ ಅಹಂಕಾರಕ್ಕೆ, ಮುಖ ತೋರಿಸುವುದೇ ದುಸ್ತರವಾಗುವುದಲ್ಲ!!
ಇನ್ನು ಈ ವಿಜ್ಞಾನಿಗಳಂತೂ ಬಿಡಿ, ಸಮಾಜದ ಪರಿಸ್ಥಿತಿ ಹಾಳು ಮಾಡಲು ಅವರಷ್ಟು ಕಾರಣೇಭೂತರು ಯಾರೂ ಇಲ್ಲ. ಎಸ್ ಕೆ ಜೈನ್ ರಂತಹ ಮಹಾನ್ ಮೇಧಾವಿಯನ್ನು ಸರಿಯಾಗಿ ಗುರುತಿಸುವ ಯೋಗ್ಯತೆ ವಿಜ್ಞಾನಿಗಳಿಗೆ ಇಲ್ಲ. ನೀವು ಬೇರೆ ಎಲ್ಲೋ ಹೇಳಿದ ಹಾಗೆ ನಮ್ಮ ಪುರಾಣ ಗಳಲ್ಲಿ ಟಿವಿ, ಇಂಟರ್ನೆಟ್ ಇವೆಲ್ಲವನ್ನೂ ಮೀರಿದ ಕೋಟ್ಯಂತರ ವಿಸ್ಮಯಗಳ ಬಗ್ಗೆ ಹೇಳಿದ್ದಾರೆ. ಈ ವಿಜ್ಞಾನಿಗಳು ಟಿವಿ ಯನ್ನು ಕಂಡು ಹಿಡಿಯದಿದ್ದರೆ ಎಸ್ ಕೆ ಜೈನ್ ರವರು ಪ್ರತಿ ಭಾನುವಾರ ಬೆಳಗ್ಗೆ ತಮ್ಮ ಮನೋ ಶಕ್ತಿಯ ಮೂಲಕವೇ ತಮ್ಮ ಭಕ್ತರಿಗೆ ವಾರ ಜೋತಿಶ್ಯವನ್ನು ಪರಕಾಯ ಪ್ರವೇಶದ ಮೂಲಕವೋ, ಅಶರೀರ ವಾಣಿಯ ಮೂಲಕವೋ ಅರುಹುತ್ತಿದ್ದರು. ಇದು ಸತ್ಯ. ಯಾಕಂದರೆ ನಮ್ಮ ಪುರಾಣದಲ್ಲಿ ಹಾಗೇ ಬರೆದಿದೆ.
ಶಂಕರಾಚಾರ್ಯರು ಕೂಡ ಪರಕಾಯ ಪ್ರವೇಶ ಮಾಡಿದ್ದರೆಂದು ಬರೆದಿದೆ. ಅವರಿಗೆ ಏನು ನೋಬೆಲ್ ಪ್ರಶಸ್ತಿ ಬಂತೇ? ಇಲ್ಲವಲ್ಲ? ಹಾಗಾಗಿ ವಿಜ್ಞಾನಕ್ಕೆ ಇವೆಲ್ಲಾ ನಿಲುಕದು ಎಂದು ಸಾಬೀತು ಆಗುತ್ತದೆ.
uniquesuriಯವರೆ, ಇನ್ನು ಮುಂದೆ ನೀವು ನೋಬೆಲ್ ಪದಕ ಗೆಲ್ಲುವ ವರೆಗೆ (ಬಂಗಾರ, ಬೆಳ್ಳಿ, ಕಂಚು, ಯಾವುದಾದರೂ ಆದೀತು) ವೈಜ್ಞಾನಿಕ ವಿಶಯಗಳ ಬಗ್ಗೆ ಮಾತನಾಡಬಾರದೆಂದು ಕೋರಿಕೊಳ್ಳುತ್ತೇನೆ.
ಇಂತೀ ನಿಮ್ಮವ,
- Summer Glau
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ಸಮ್ಮರುಗಳೇ,
ಯುನಿಕ್ಸುಪ್ರಿಯವರೇ ಒಂದೆಡೆ ಹೇಳಿಕೊಂಡಿರುವಂತೆ ಅವರೂ ಪಿ.ಯು.ಸಿ ವರೆಗೆ ಮಾತ್ರ ವಿಜ್ಞಾನದವರೆಗೆ ಓದಿದ್ದು. ನಾನೂ ಸಹ ಅದೇರೀತಿ ಪಿ.ಯು.ಸಿ ವರೆಗೆ ವಿಜ್ಞಾನ ವಿಷಯ ಓದಿದ್ದು. ಅದೇನದು ೧೨ನೇ ಕ್ಲಾಸಿನವರೆಗೆ ಓದಿದ ಮಾತ್ರಕ್ಕೆ ಇನ್ನೊಬ್ಬರಿಗೆ "ವಿಜ್ಞಾನವೇ ತಿಳಿಯದವರು" ಎಂದು ಮಾತನಾಡುವುದು? ನಿಮ್ಮ ಆಡ್ ಹೋಮಿನೆಮ್ ವಾದ ಅವರಿಗೆ ಹೆಚ್ಚು ಅನ್ವಯಿಸುತ್ತದೆ! ಅಥವಾ ಅವರೇನಾದರೂ ವಿಜ್ಞಾನದ ವಿಷಯವಾಗಿ ಹೆಚ್ಚು ಸಂಶೋಧನೆಗಳನ್ನು ಮಾಡಿದ್ದರೆ ಅವರ ಸಾಧನೆಗಳನ್ನು ಹೇಳಿಕೊಳ್ಳಲಿ. ಅಥವಾ ವಿಜ್ಞಾನದಲ್ಲಿ ಇಂತಹ ವಿಷಯಗಳು ಹೀಗಲ್ಲ/ಹೀಗೆ ಎಂದು ವಿವರಿಸಲಿ. ಅದು ಬಿಟ್ಟು ನಾನೊಬ್ಬನೇ ವಿಜ್ಞಾನ ಬಲ್ಲವ ಅಂತ ಪುಂಗಿಬಿಟ್ಟುಕೊಂಡು ತಿರುಗಿದರೆ ಅದನ್ನೆಲ್ಲಾ ಕೇಳಲು ಇಲ್ಲಿ ಯಾರೂ ದಡ್ಡರಲ್ಲ ! ಖಾಲಿ ಡಬ್ಬಗಳೇ ಸದ್ದು ಮಾಡುವುದು ಜಾಸ್ತಿ.
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ಹೋಗಲಿ ಬಿಡಿ. ಯಾರಿಗೆ ವಿಜ್ಞಾನದ ಬಗ್ಗೆ ಮಾತನಾಡುವ ಅರ್ಹತೆ ಇದೆ ಎನ್ನುವುದರ ಬಗ್ಗೆ ಜಗಳ ಬೇಡ. ಒಂದು ಕೆಲಸ ಮಾಡೋಣವೇ? ಎಸ್ ಕೆ ಜೈನ್ ರವರ ಜ್ಯೋತಿಶ್ಯ ವೈಜ್ಞಾನಿಕ ವಾದದ್ದೇ ಅಲ್ಲವೇ ಎಂದು ಚರ್ಚಿಸಲು (ನಿಮಗೆ ಇಷ್ಟವಿದ್ದರೆ) ಒಂದು ಹೊಸ ಎಳೆ ತೆಗೆಯಿರಿ. ಅಲ್ಲಿ ನನ್ನ ಕೆಲವು ನಿಯಮಗಳಿಗನುಗುಣವಾಗಿ (ವೈಯುಕ್ತಿಕ ದೂಷಣೆ, ಆಧಾರವಿಲ್ಲದ ವಿಷಯ ಪ್ರತಿಪಾದನೆ ಇವೆಲ್ಲ ನಿಷಿಧ್ಧ) ಚರ್ಚಿಸಲು ನಾನು ಸಿಧ್ಧ.
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ಸಮ್ಮರ್ ಗ್ಲೌ,
ನಿಮ್ಮ ಹೆಸರೇನು ತಿಳಿದಿಲ್ಲ. ಆದರೆ ನಿಮಗೆ ಧನ್ಯವಾದಗಳು.
ಉತ್ತಮ ಚರ್ಚೆ ಹಾಗೂ ಮಾರ್ಗದರ್ಶನ ನಿಮ್ಮಿಂದ ಆಗಲಿ ಎಂದು ಹಾರೈಸುವೆ.
ಅಂದಹಾಗೆ ಜೋತಿಷ್ಯದ ಬಗ್ಗೆ ಮಾತನಾಡಲು ಯಾವ *ಪ್ರದೇಶ*ದಿಂದ ನೊಬೆಲ್ ಪದಕ ಗಿಟ್ಟಿಸಿಕೊಂಡು ಬರಬೇಕು ತಿಳೀಲಿಲ್ಲ. ಜೋತಿಷ್ಯದಲ್ಲಿ ಖಾಲಿ ಡಬ್ಬಗಳು ಯಾವುವೂ ಇಲ್ಲ, ಎಲ್ಲವೂ ತುಂಬಿದ ಕೊಡಗಳೇ ಅನ್ನಿಸುತ್ತದೆ. ಎಲ್ಲಾ ಕಡೆ ಬರೀ ತುಳುಕುತ್ತಲೇ ಇರುತ್ತವೆ
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ವರದಿಗಾರರ ಬಗ್ಗೆ ನೀವು ಬರೆದಿದ್ದರಲ್ಲಿ ತಪ್ಪಿಲ್ಲ ಹಂಸನಂದಿಯವರೇ. ತುಂಬ ಜನ ಹಾಗೇ ಇದ್ದಾರೆ. ಕಾಗುಣಿತ ದೋಷಗಳಷ್ಟೇ ಅಲ್ಲ, ಬರವಣಿಗೆಯ ಹದ, ಸತ್ಯಾಸತ್ಯತೆ ಕೂಡ ಕೆಟ್ಟಿರುತ್ತದೆ. ಆದರೆ, ಜಂಭಕ್ಕೆ ಮಾತ್ರ ಕೊರತೆಯಿಲ್ಲ.
ದಟ್ಸ್ ಕನ್ನಡ ಒಂದೇ ಅಲ್ಲ, ಬಹಳಷ್ಟು ಅಂತರ್ಜಾಲ ತಾಣಗಳು ಬುರ್ಖಾತಾಣಗಳಾಗಿವೆ. ಅಲ್ಲಿ ನೇರವಾಗಿ ನಿಮ್ಮ ಪ್ರತಿಕ್ರಿಯೆ ಹಾಕಲು ಬಿಡುವುದಿಲ್ಲ. ಉಗಿಯುತ್ತಾರೆ ಎಂಬ ಭಯ. ಹಿಂದೆ ನಾನು ಕೂಡ ಹಲವಾರು ತಾಣಗಳಿಗೆ ಪ್ರತಿಕ್ರಿಯೆ ಬರೆದಿದ್ದೆ. ಆದರೆ, ಪ್ರಕಟವಾಗಲಿಲ್ಲ. ಕಾರಣ ತಿಳಿದ ನಂತರ, ಪ್ರತಿಕ್ರಿಯೆ ಹಾಕುವುದನ್ನೇ ಬಿಟ್ಟೆ. ಪ್ರತಿಕ್ರಿಯೆಗಳನ್ನು ಇಷ್ಟೊಂದು ಶೋಧಿಸುವವ ಬುದ್ಧಿ ಇರುವವರು, ಪ್ರಕಟವಾಗುವ ಮುನ್ನ ಕೆಟ್ಟ ಬರಹಗಳು ಹಾಗೂ ವರದಿಗಳನ್ನು ಏಕೆ ಶೋಧಿಸುವುದಿಲ್ಲವೋ.
- ಚಾಮರಾಜ ಸವಡಿ
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ಇವಕ್ಕೆ ಪೂರಕವಾಗಿ ಕೆಲ ದಿನಗಳ ಹಿಂದೆ ನಾನು ಬರೆದ ಬರಹ...
ಮಾಧ್ಯಮಗಳು ನಿದ್ದೆ ಮಾಡುವುದೇಕೆ?
http://www.sampada.net/blog/srinivasps/19/05/2008/8833
ಮಾಧ್ಯಮಗಳು ಇತ್ತೀಚೆಗೆ ಸಕಾರಾತ್ಮಕ ಕೆಲಸ ಮಾಡುತ್ತಿಲ್ಲ ಎಂದು ನನ್ನ ಅನಿಸಿಕೆ ...
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ಇಲ್ಲ ರೀ - ಕಾಮೆಂಟ್ ಏನೂ ಮಾಸ್ಕ್ ಮಾಡಿರ್ಲಿಲ್ಲ. - ಅದೇನೋ ತೊಂದರೆ ಇತ್ತು ಅನ್ಸತ್ತೆ. ಆಮೇಲೆ ಅಲ್ಲೇ ಕಮೆಂಟ್ ಹಾಕೋದಕ್ಕೆ ಆಯ್ತು..
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ಬ್ಲಾಗರ್ ನಲ್ಲಿ ನನ್ನ ಬರಹವನ್ನು ಓದಿದ ಹರೀಶರು ಹೀಗಂದರು:
ತಾರ್ಕಿಕವಾಗಿ, ಪ್ರತಿ ಹುಣ್ಣಿಮೆಗೂ ಚಂದ್ರಗ್ರಹಣ ಹಾಗೂ ಪ್ರತಿ ಅಮಾವಾಸ್ಯೆಗೂ ಸೂರ್ಯಗ್ರಹಣ ಆಗಬೇಕಾಗಿತ್ತು. ಆದರೆ ಭೂಮಿಯ ಪಥದ ಸಮತಳದಲ್ಲಿ ಚಂದ್ರ ಇರದಿರುವುದರಿಂದ ಹಾಗಾಗುವುದಿಲ್ಲ. ಅದೂ ಅಲ್ಲದೆ ಯಾವ ಗ್ರಹಣವೂ ವಿಶ್ವದೆಲ್ಲೆಡೆ ಕಂಡುಬರುವುದಿಲ್ಲ. ಹಾಗಾಗಿ ಗ್ರಹಣಗಳು ಪದೇ ಪದೇ ಬರುತ್ತವಾದರೂ ಅವು ಯಾವುದೇ ಒಂದು ಪ್ರದೇಶದಲ್ಲಿ ಯಾವಾಗಲೂ ಕಂಡು ಬರುವುದಿಲ್ಲ.
ಮೊನ್ನೆ ಆದ ಎರಡೂ ಗ್ರಹಣಗಳು ಕೆಲವು ಸ್ಥಳಗಳಿಂದ ಕಂಡವು (ಮೋಡ ಮುಸುಕಿದ್ದು ಬೇರೆ ವಿಷಯ). ಇಂಥ ಘಟನೆ ನನಗೆ ತಿಳಿದಂತೆ ಅಪರೂಪವೇ. ಅದನ್ನೇ ಆ ಪತ್ರಕರ್ತ ಹೇಳಲು ಹೋಗಿ ಅಪಾರ್ಥವಗಿರಬಹುದು ಎಂಬುದು ನನ್ನ ಅನಿಸಿಕೆ.
ಅಲ್ಲಿ ಈ ವಿಷಯಕ್ಕೆ ಟಿಪ್ಪಣಿ ಹಾಕಿದ ಮೇಲೆ, ಇಲ್ಲಿಯೂ ಅದನ್ನೇ ಹಾಕಿದರೆ ಒಳ್ಳೇದು ಎನ್ನಿಸಿತು.
ನಾನು ನನ್ನ ಬರಹದಲ್ಲಿ ಹೇಳಿದ್ದು ಒಟ್ಟಿನಲ್ಲಿ ಭೂಮಿಯ ಮೇಲೆ ಕಂಡ ಗ್ರಹಣಗಳು. ಒಂದೇ ಕಡೆ ಕಂಡವು ಅಲ್ಲ. ಆದರೂ, ಒಂದೇ ಕಡೆಯಲ್ಲಿ ಕಾಣುವ ಗ್ರಹಣಗಳಲ್ಲಿಯೂ ಹದಿನೈದು ದಿನದ ಅಂತರದಲ್ಲಿ ಕಾಣುವ ಗ್ರಹಣಗಳು ಅಂತಹ ಅಪರೂಪದ್ದೇನಲ್ಲ.
ಈಗ ಕೆಳಗೆ ಭಾರತದಿಂದ ಕಂಡ ಗ್ರಹಣಗಳನ್ನು ಮಾತ್ರ ಪಟ್ಟಿ ಮಾಡುವೆ:
೨೦೦೪:
ಮೇ ೪: ಚಂದ್ರಗ್ರಹಣ
ಅಕ್ಟೋಬರ್ ೨೮: ಚಂದ್ರಗ್ರಹಣ
೨೦೦೫:
ಅಕ್ಟೋಬರ್ ೩: ಸೂರ್ಯಗ್ರಹಣ ;ಅಕ್ಟೋಬರ್ ೧೭: ಚಂದ್ರಗ್ರಹಣ
೨೦೦೬:
ಮಾರ್ಚ್ ೧೪: ಚಂದ್ರಗ್ರಹಣ;ಮಾರ್ಚ್ ೨೯: ಸೂರ್ಯಗ್ರಹಣ
ಸೆಪ್ಟೆಂಬರ್ ೭: ಚಂದ್ರಗ್ರಹಣ;
** ೨೦೦೬ ರ ಎರಡೂ ಗ್ರಹಣಗಳು ಪೆನಮ್ಬ್ರಲ್ - ಅಂದರೆ ಚಂದ್ರನ ಬಹುಪಾಲು ಕಡುವಾದ ನೆರಳಲ್ಲಿ ಹೋಗಿಲ್ಲ
೨೦೦೭:
ಮಾರ್ಚ್ ೩: ಚಂದ್ರಗ್ರಹಣ; ಮಾರ್ಚ್ ೧೯:ಸೂರ್ಯಗ್ರಹಣ
ಆಗಸ್ಟ್ ೨೮: ಚಂದ್ರಗ್ರಹಣ;
೨೦೦೮:
ಫೆಬ್ರವರಿ ೨೧: ಚಂದ್ರಗ್ರಹಣ
ಆಗಸ್ಟ್ ೧: ಸೂರ್ಯಗ್ರಹಣ; ಅಗಸ್ಟ್ ೧೬: ಚಂದ್ರಗ್ರಹಣ
ಈಗ ಈ ಹೆಚ್ಚುವರಿ ಮಾಹಿತಿಯ ಜೊತೆಗೆ ನೋಡಿದರೂ ೨೦೦೪ ರಿಂದ ೨೦೦೮ರ ವರೆಗೆ ಐದು ವರ್ಷಗಳಲ್ಲಿ ನಡೆದ ೨೦ ಗ್ರಹಣಗಳಲ್ಲಿ, ಭಾರತದಿಂದ ೧೩ ಗ್ರಹಣಗಳು ಕಂಡಿವೆ. ಇವುಗಳಲ್ಲಿ ೮ ಗ್ರಹಣಗಳು ೪ ಜೋಡಿಗ್ರಹಣಗಳಾಗಿಯೇ ಬಂದಿವೆ. ಅಂದರೆ ಸುಮಾರು ಶೇಕಡಾ ೬೦% ರಷ್ಟು ಗ್ರಹಣಗಳು ಜೋಡಿಗ್ರಹಣಗಳಲ್ಲಿ ಒಂದಾಗಿ ಕಾಣಿಸಿಕೊಂಡಿವೆ. ಅಂದರೆ, ೫ ವರ್ಷಗಳ ಅವಧಿಯಲ್ಲ, ೪ ವರ್ಷಗಳಲ್ಲಿ ಪ್ರತೀ ವರ್ಷ ೧೫ ದಿನದ ಅಂತರವಿರುವ ಜೋಡಿ ಗ್ರಹಣಗಳು ಭಾರತದಿಂದ ಕಂಡಿವೆ!
ಈಗ ನೋಡಿದರೂ ಇವು ಅಪರೂಪ ಅಲ್ಲ. ಅಲ್ಲವೇ?
ವರದಿಗಾರರು ಅಪರೂಪ ಅಂತ ಎಸ್.ಕೆ.ಜೈನರು ಹೇಳಿದ್ದು ಕೇಳಿದರೆ, ಯಾಕೆ ಏನು ಅಂತ ವಿಚಾರಿಸಿ ಬರೆಯಬಹುದಿತ್ತಲ್ಲ ಅದು ಯಾವ ವಿಚಾರದಲ್ಲಿ ಹೆಚ್ಚುಗಾರಿಕೆ ಅಂತ ಅದು ಬಿಟ್ಟು ಹದಿನೈದು ದಿನಗಳಲ್ಲಿ ಎರಡು ಗ್ರಹಣಗಳು ಕಾಣುವುದೇ ಅಪರೂಪ ಅನ್ನುವುದು ಯಾಕೆ?
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ಮತ್ತೆ ದಟ್ಸ್ ಕನ್ನಡ ಲೇಖನವನ್ನು ಓದುವಾಗ ಅಲ್ಲಿದ್ದ ಇನ್ನೆರಡು ಮಾತುಗಳು ಗಮನಸೆಳೆದವು
ಆಮೇಲೆ, ಇವುಗಳು ಎಷ್ಟು ಸರಿ ಎಂದು ಒಮ್ಮೆ ನೋಡಿದೆ
೨೦೦೪ ರ ಸುನಾಮಿ ಬಂದದ್ದು - ಡಿಸೆಂಬರ್ ೨೬, ೨೦೦೪ ರಂದು ; ಆ ವರ್ಷ ದ ಕಡೆಯ ಚಂದ್ರಗ್ರಹಣ ಆದದ್ದು ಅಕ್ಟೋಬರ್ ಇಪ್ಪತ್ತೆಂಟಕ್ಕೆ! ಅಂದರೆ ಸುಮಾರು ೨ ತಿಂಗಳ ನಂತರ
ಡಯಾನ ಸತ್ತದ್ದು ಆಗಸ್ಟ್ ೩೧, ೧೯೯೭ರಂದು. ಆ ವರ್ಷ ಸೆಪ್ಟೆಂಬರ್ ೨ ಕ್ಕೆ ಸೂರ್ಯ ಗ್ರಹಣವೂ, ಸೆಪ್ಟೆಂಬರ್ ೧೬ಕ್ಕೆ ಚಂದ್ರಗ್ರಹಣವೂ ಆಗಿವೆ. ಅಂದರೆ, ಮುಂದೆ ಹದಿನೈದು ದಿನ ನಂತರ ನಡೆಯಲಿರುವ ಗ್ರಹಣದಿಂದ ಡಯಾನಾ ಸತ್ತಿದ್ದು! ಅಬ್ಬ!
ಈ ಎರಡು ಘಟನೆಗಳೂ ಅದಕ್ಕೆ ಮುಂಚೆ ನಡೆದಿರುವ ಯಾವುದಾದರೂ ಚಂದ್ರಗ್ರಹಣದ ನಂತರ ನಡೆದ ಘಟನೆಗಳು ಅಂತ ಧಾರಾಳವಾಗಿ ಹೇಳಬಹುದಷ್ಟೇ!!!!
-ಹಂಸಾನಂದಿ
ಹರಿದಾಸ ಸಂಪದ:- http://haridasa.in/