ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › ನವರಾತ್ರಿಯ ದಿನಗಳು

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ನವರಾತ್ರಿಯ ಐದನೆಯ ದಿನ

October 17, 2007 - 2:41am — hamsanandi

ಇವತ್ತು ನವರಾತ್ರಿಯ ಐದನೆಯ ದಿನ. ಇಂದು ಸಂಜೆ ತಿರುವನಂತಪುರದ ಪದ್ಮನಾಭಸ್ವಾಮಿ ದೇವಾಲಯದ ಪಕ್ಕದಲ್ಲಿರುವ ನವರಾತ್ರಿ ಮಂಡಪದಲ್ಲಿ ಪ್ರಮುಖವಾಗಿ ವಿಸ್ತರಿಸುವುದು ಭೈರವಿ ರಾಗ. ಮತ್ತೆ ಅದರಲ್ಲಿ, ಸ್ವಾತಿ ತಿರುನಾಳ್ ಮಹಾರಾಜರ ಜನನೀ ಮಾಮವ ಮೇಯೆ ಎಂಬ ಕೃತಿಯನ್ನು ಹಾಡಲಾಗುತ್ತೆ. ಈ ರಚನೆಯನ್ನು ನೀವು ಮ್ಯೂಸಿಕ್ ಇಂಡಿಯಾ ತಾಣದಲ್ಲಿ, ಬಾಂಬೇ ಸಹೋದರಿಯರ ಧ್ವನಿಯಲ್ಲಿ, ಇಲ್ಲಿ ಕ್ಲಿಕ್ಕಿಸಿ ಕೇಳಬಹುದು.

ಭೈರವಿ ರಾಗ ಕರ್ನಾಟಕ ಸಂಗೀತಕ್ಕೆ ಸೀಮಿತವಾದ ರಾಗ - ಇದಕ್ಕೆ ಹತ್ತಿರವಾದ ರಾಗ, ಹಿಂದೂಸ್ಗಾನಿ ಸಂಗೀತದಲ್ಲಾಗಲಿ, ಅಥವಾ ಪ್ರಪಂಚದ ಬೇರೆ ಯಾವುದೇ ಸಂಗೀತದಲ್ಲೂ ಇದನ್ನು ಹೋಲುವ ರಾಗವಿಲ್ಲ. ನೀವು ತರಾಸು ಅವರ ಹಂಸಗೀತೆಯನ್ನು ಓದಿದ್ದರೆ, ಅದರ ಮೇಲೆ ಆಧಾರಿತವಾದ ಚಲನಚಿತ್ರವನ್ನು ನೋಡಿದ್ದರೆ, ಅದರಲ್ಲಿ ಬರುವ ಭೈರವಿ ವೆಂಕಟಸುಬ್ಬಯ್ಯನ ಪಾತ್ರ ನಿಮಗೆ ತಿಳಿದೇ ಇರುತ್ತೆ. ಇಲ್ಲಿ ಒಂದು ವಿಷಯವನ್ನು ಹೇಳಿಬಿಡುತ್ತೇನೆ. ಈ ಭೈರವಿ ವೆಂಕಟಸುಬ್ಬಯ್ಯ ತರಾಸು ಅವರ್ ಕಲ್ಪನೆಯ ಪಾತ್ರವೇ ಹೊರತು ಚಾರಿತ್ರಿಕ ವ್ಯಕ್ತಿಯಲ್ಲ.

ಇವತ್ತು ನಾನು ಆಯ್ಕೆ ಮಾಡಿಕೊಂಡು ಹೇಳಲಿರುವ ರಚನೆ ಮುತ್ತುಸ್ಬಾಮಿ ದೀಕ್ಷಿತರದ್ದು. ಸಂಗೀತ ತ್ರಿಮೂರ್ತಿಗಳಲ್ಲಿ ಇವರು ಎಲ್ಲರಿಗಿಂತ ಕಡಿಮೆ ಕಾಲ ಬದುಕಿದ್ದರೂ (ಕ್ರಿ.ಶ.೧೭೭೫-೧೮೩೫) , ಸಂಗೀತ ಸಾಧನೆಯಲ್ಲಿ ಇನ್ನಿಬ್ಬರಿಗೆ ಸಾಟಿಯಾದವರು ಇವರು. ವೈಣಿಕ ಮತ್ತು ಹಾಡುಗಾರರಾಗಿದ್ದ ಇವರಿಗೆ ಹಿಂದೂಸ್ತಾನಿ ಸಂಗೀತದ ಪರಿಚಯವೂ ಇತ್ತು. ಇವರು ದಕ್ಷಿಣಭಾರತದ ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿ, ಅಲ್ಲಿನ ದೇವ ದೇವತೆಗಳಬಗ್ಗೆ ತಮ್ಮ ರಚನೆಗಳನ್ನು ಹಾಡಿದ್ದಾರೆ. ಇವರು ಸುಮಾರು ನಾನೂರು ರಚನೆಗಳು ನಮಗೆ ದೊರೆತಿವೆ.
ವಿಶೇಷವೆಂದರೆ, ಇವರು ತಾವು ಮದ್ರಾಸ್ ನ ಸೈಂಟ್ ಜಾರ್ಜ್ ಕೋಟೆಯಲ್ಲಿ ಕೇಳಿದ ಇಂಗ್ಲಿಷ್ ಬ್ಯಾಂಡ್ ಗಳ ಹಾಡುಗಳ ಮಟ್ಟಿನಲ್ಲೇ, ಅದಕ್ಕೆ ತಮ್ಮದೇ ಸಾಹಿತ್ಯ ಬರೆದಿರುವುದು. ಈಗಲೂ ಇದನ್ನು ಸಂಗೀತ ಅಭ್ಹ್ಯಾಸದ ಮೊದಲ ದಿನಗಳಲ್ಲಿ ಹೇಳಿಕೊಡುವುದಿದೆ. ಇಂಥ ಸರಳ ರಚನೆಗಳಿಂದ ಹಿಡಿದು ಅತಿ ಕ್ಲಿಷ್ಟವಾದ ರಚನೆಗಳನ್ನೂ ಮಾಡಿರುವುದು ಇವರ ಸಂಗೀತದ ಹರಹನ್ನು ತೋರಿಸುತ್ತೆ.
ಇವತ್ತಿನ ದೇವೀ ಪರವಾದ ಕೃತಿ ಪೂರ್ವಿ ಕಲ್ಯಾಣಿ ರಾಗದಲ್ಲಿರುವ ಮೀನಾಕ್ಷೀ ಮೇಮುದಂ ದೇಹಿ ಎಂಬ ರಚನೆ. ಮುತ್ತುಸ್ವಾಮಿ ದೀಕ್ಷಿತರ ಸಂಪ್ರದಾಯದಲ್ಲಿ ಈ ರಾಗಕ್ಕೆ ಗಮಕಕ್ರಿಯ ಎಂದು ಕರೆಯುತ್ತಾರೆ. ಈ ರಚನೆಯು ಮದುರೆಯ ಮೀನಾಕ್ಷಿ ದೇವಿಯ ಮೇಲೆ ಬರೆದಿರುವುದಾಗಿದೆ.
೧೮೩೫ನೇ ವರ್ಷ, ನರಕ ಚತುರ್ದಶಿಯಂದು ಇವರು ತಮ್ಮ ಅಂತ್ಯ ಕಾಲ ಬಂತೆಂದು ಅರಿತು, ತಮ್ಮ ಶಿಷ್ಯರಿಗೆ, ಈ ಕೃತಿಯನ್ನು ಹಾಡಲು ಹೇಳಿದರಂತೆ. ಅನುಪಲ್ಲವಿಯಲ್ಲಿನ "ಮೀನ ಲೋಚನಿ, ಪಾಶ ಮೋಚನಿ" ಎಂಬ ಸಾಲುಗಳನ್ನು ಮತ್ತೆ ಮತ್ತೆ ಹಾಡುವಂತೆ ಹೇಳಿ, ಅದೇ ಸಮಯದಲ್ಲಿ ಅವರ ದೇಹಾಂತ್ಯವಾಯಿತೆಂದು ಹೇಳಲಾಗುತ್ತೆ.
ಈ ಕೃತಿಯಲ್ಲಿ, ದೇವಿಯನ್ನು ಅವರು ಮೀನಾಕ್ಷಿ ದೇವಿಯನ್ನು ವೀಣಾ ಗಾನ ದಶ ಗಮಕಕ್ರಿಯೇ - ವೀಣೆ, ಮತ್ತು ಹಾಡುಗಾರಿಕೆಯಲ್ಲಿ ಬಳಸುವ ಹತ್ತು ಬಗೆಯ ಗಮಕಗಳನ್ನು ಹೊರಡಿಸುವವಳೇ" ಎಂದು ಸಂಗೀತರೂಪಿಯಾಗಿ ವರ್ಣಿಸಿ, ಅದರಲ್ಲೇ ರಾಗಮುದ್ರೆಯನ್ನೂ ಇಟ್ಟಿದ್ದಾರೆ.
ಈ ಕೃತಿಯನ್ನು ನೀವು ಸಂಗೀತಪ್ರಿಯ.ಆರ್ಗ್ ನಲ್ಲಿ ವಿದುಷಿ ಎಸ್.ಸೌಮ್ಯ ಅವರ ಕಂಠದಲ್ಲಿ, ಇಲ್ಲಿ ಕ್ಲಿಕ್ಕಿಸಿ ಕೇಳಬಹುದು. ಇದನ್ನು ಇಲ್ಲಿ ವಿಸ್ತ್ತಾರವಾದ ರಾಗಾಲಾಪನೆಯೊಂದಿಗೆ ಹಾಡಲಾಗಿದೆ. ಹಾಡು, ಸುಮಾರು ಹದಿನೈದು ನಿಮಿಷಗಳ ಆಲಾಪನೆಯ ನಂತರ ಆರಂಭವಾಗುತ್ತದೆ.
ಹಳೆಯ ಕನ್ನಡ ಚಲನಚಿತ್ರಗಳ ಅಭಿಮಾನಿಗಳು ಅನಕೃ ಅವರ ಸಂಧ್ಯಾರಾಗ ಚಿತ್ರವನ್ನು ಎಂದಿಗೂ ಮರೆಯಲಾರರು. ಅದರಲ್ಲಿ ಬರುವ ನಂಬಿದೆ ನಿನ್ನ ನಾದ ದೇವತೆಯೆ, ಎಂಬಹಾಡು ಕೂಡ ಇದೇ ಪೂರ್ವಿಕಲ್ಯಾಣಿ ರಾಗದಲ್ಲೇ ಸಂಯೋಜಿತವಾಗಿದೆ. ಈ ಹಾಡನ್ನು ನೀವು
ಇಲ್ಲಿ ಕ್ಲಿಕ್ಕಿಸಿ ನೋಡಬಹುದು.
ನಂಬಿದೆ ನಿನ್ನ ನಾದದೇವತೆಯೆ
http://www.youtube.com/watch?v=o48PGVCNs9M
ದಸರೆಯಲ್ಲಿ ಹಾಡಲು, ನಾದದೇವತೆಯನ್ನು ಹೊಗಳುವ ಈ ಹಾಡೂ ಕೂಡ ಎಷ್ಟು ಸೊಗಸು ಅಲ್ಲವೆ?

-ಹಂಸಾನಂದಿ

‹ ನವರಾತ್ರಿಯ ನಾಲ್ಕನೇ ದಿನ ಮೇಲಿನ ಪುಟಕ್ಕೆನವರಾತ್ರಿಯ ಆರನೇ ದಿನ ›
  • ಜ್ಞಾನವಾಗಿನಿ
  • ದಸರ
  • ದೀಕ್ಷಿತರು
  • ಸಂಗೀತ
  • ಸಂಧ್ಯಾರಾಗ
~.~
  • hamsanandi ರವರ ಬ್ಲಾಗ್
  • Printer-friendly version
  • Login or register to post comments
  • 811 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 17, 2007 - 9:59am — Sunil Jayaprakash

ಉ: ನವರಾತ್ರಿಯ ಐದನೆಯ ದಿನ

Sunil Jayaprakash's picture

ಹಂಸಾನಂದಿಗಳೇ, ಹಂಸಗೀತೆ ಸಿನಿಮಾದ ನಾಟಕ ರೂಪವೂ ಒಂದಿದೆ. ಇಲ್ಲಿ ನೋಡಿ. ವೇದಿಕೆ ತಂಡದವರು ಇದರ ಪ್ರಯೋಗ ಮಾಡಿದ್ದರು. ಎಲ್ಲ ನೆಂಟರೂ ಒಟ್ಟಿಗೆ ಸೇರಿ ಹಳೆಯದನ್ನು ಮೆಲುಕು ಹಾಕುತ್ತಾ ಕಾಲ ಕಳೆಯಲು,"ಹಂಸಗೀತೆ" ಮತ್ತು "ಸಂಧ್ಯಾರಾಗ" ಒಳ್ಳೆಯ ಪರಿಕರಗಳು.
ನವರಾತ್ರಿಯ "ಸರಸ್ವತಿ ಪೂಜೆಯ" ಹೊತ್ತಿನಲ್ಲಿ "ನಂಬಿದೆ ನಿನ್ನ ನಾದದೇವತೆಯೇ" ಹಾಡಿನ ಪಾಯಿಂಟರ್ ಅರ್ಥಪೂರ್ಣವಾಗಿತ್ತು. ಸರಸ್ವತಿಯನ್ನು ಕುರಿತಾಗಿ ಇರುವ ಮತ್ತೊಂದಷ್ಟು ಹಾಡುಗಳ ಎಳೆ ಸಿಕ್ಕರೆ ಕಲೆಹಾಕಿ ಕೊಡಿ. ನಿಮ್ಮ ಪಾಲಿಗೆ ಮತ್ತಷ್ಟು ಪುಣ್ಯ ಸೇರಿಕೊಳ್ಳುವುದು ಅಳವೋ ಅಳ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನವರಾತ್ರಿಯ ಎಂಟನೇ ದಿನ
  • ನವರಾತ್ರಿಯ ನಾಲ್ಕನೇ ದಿನ
  • ನವರಾತ್ರಿಯ ಮೂರನೆಯ ದಿನ
  • ನವರಾತ್ರಿಯ ಆರನೇ ದಿನ
  • ನವರಾತ್ರಿಯ ಮೊದಲ ದಿನ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೆಸರಲ್ಲೇನಿದೇ ರೀ? ನೀಲಾಂಜನ .. ರಾಮಕ್ರಿಯ .... ಹಂಸಾನಂದಿ ಯಾವ್ದೋ ಒಂದು!
ಒಬ್ಬ ಸಂಪದಿಗ - ಇನ್ನೂ ಹೆಚ್ಚಿಗೆ ಹೇಳ್ಬೇಕಾದ್ರೆ ಒಬ್ಬ ಕನ್ನಡಿಗ ಅಂದ್ರೆ ಸಾಕು. ಅಲ್ವಾ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 10:19am
  • kannadakanda
    ಉ: ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ
    December 2, 2008 - 10:08am
  • sathvik N V
    ಉ: ನನ್ನ ತಪ್ಪೇ ಅಥವಾ ಸಿನಿಕತನವೇ?
    December 2, 2008 - 10:04am
  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 133 ಅತಿಥಿಗಳು ಆನ್ಲೈನ್ ಇರುವರು.


ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.

— ಹಿತೋಪದೇಶ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator