ಮೊನ್ನೆ ಒಂದು ಒಳ್ಳೇ ಅವಕಾಶ ಸಿಕ್ಕಿತು. ಇಲ್ಲಿ ಕಚೇರಿಯೊಂದಕ್ಕೆ ಬಂದಿದ್ದ ಒಬ್ಬ ಸಂಗೀತಗಾರರು ನಮ್ಮ ಗೆಳೆಯರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದರು. ಆ ನೆವದಲ್ಲಿ ನಾವು ಕೆಲವು ಸಂಗೀತಾಸಕ್ತ ಕುಟುಂಬಗಳು ನಮ್ಮ ಗೆಳೆಯರ ಮನೆಯಲ್ಲಿ ಒಟ್ಟು ಸೇರಿ ಅವರೊಡನೆ ಹರಟೆ ಹೊಡೆಯುತ್ತಾ - ಊಟ ಮಾಡುವ ಅವಕಾಶ ಸಿಕ್ಕಿತು.
ಊಟ ಮಾಡಿದ ಮೇಲೆ ನಾವೆಲ್ಲ ಅವರಿಗೆ ಒಂದು ಹಾಡು ಹೇಳಬೇಕೆಂದು ದುಂಬಾಲು ಬಿದ್ದೆವು. ಎರಡು ಮೂರು ದಿನ ಸಾಲಾಗಿ ಮೂರು -ನಾಕು ಗಂಟೆ ಕಚೇರಿಯಲ್ಲಿ ಹಾಡಿ ಗಂಟಲು ಒಳ್ಳೇ ಸ್ಥಿತಿಯಲ್ಲಿಲ್ಲ ಎನ್ನಬೇಕೇ ಅವರು! ನಾವೂ ಬಿಡದೇ ಮತ್ತೆ ಕಾಡುತ್ತಲೇ ಇದ್ದೆವು. ಮತ್ತೆ ಅವರು ನಮಗೆಲ್ಲ ನೀವೆಲ್ಲ ಒಂದೊಂದು ಹಾಡಿ, ಕಡೆಯಲ್ಲಿ ನಾನೂ ಒಂದು ಹಾಡುವೆ ಎಂದರು.
ಸರಿ - ಸೇರಿದವರಲ್ಲಿ ಹಾಡಲು ಬರುವವರೆಲ್ಲ - ಒಂದೈದಾರು ಜನ ಹಾಡಿದೆವು. ನನಗೆ ಬಹಳ ಆಶ್ಚರ್ಯ ಹಾಗೂ ಸಂತೋಷವಾಗಿದ್ದು ಈ ಕಲಾವಿದರು ನಾವು ಹಾಡಿದ್ದಕ್ಕೆ ಕೊಟ್ಟ ಪ್ರೋತ್ಸಾಹ.ಹಾಡುವಾಗ ಒಳ್ಳೆಯ ಸಂಗತಿಯೊಂದು ಬಂದರೆ ಭಲೆ! ಭೇಷ್!! ಎಂದು ಹುರಿದುಂಬಿಸಿ ಒಳ್ಳೇ ಮಾತಾಡಿದರು. ಅವರೋ ಹಲವು ದಶಕಗಳಿಂದ ಸಾವಿರಾರು ಕಚೇರಿ ಕೊಟ್ಟಿರುವ ಕಲಾವಿದರು. ನಮ್ಮಲ್ಲಿ ಹೆಚ್ಚಿನವರು (ಎಂದೆಂದಿಗೂ ಅದೇ ಮಟ್ಟದಲ್ಲೇ ಇರುವ
) ಸಂಗೀತ ವಿದ್ಯಾರ್ಥಿಗಳು! ಈ ರೀತಿಯ ಕಲಾವಿದರು ಕಡಿಮೆಯೇ ಎನ್ನಬಹುದು.
ಕಡೆಗೆ ನಮ್ಮೆಲ್ಲರ ಆಸೆಯಂತೆ ಅವರು - ತಾವು ಕನ್ನಡದವರಲ್ಲದಿದ್ದರೂ- ಬಂದವರಲ್ಲಿ ಹೆಚ್ಚಿಗೆ ಕನ್ನಡದವರಿದ್ದರಿಂದ ಒಂದು ಒಳ್ಳೇ ಕನ್ನಡ ಹಾಡನ್ನು ಹಾಡಿದರು.
ಒಬ್ಬರ ಬಗ್ಗೆ ಒಂದು ಒಳ್ಳೆ ಮಾತಾಡಲು ಕೂಡಾ ಹಿಂದೆಮುಂದೆ ನೋಡುವ ಈ ಕಾಲದಲ್ಲಿ, ಈ ರೀತಿಯ ಜನರು ಅಪರೂಪವೆನ್ನಿಸಿ ಹೀಗೆ ನಾಲ್ಕು ಸಾಲು ಬರೆದೆ.
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 442 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಹಂಸಾನಂದಿ
ಪರಿಚಯ
ಹುಟ್ಬೆಳ್ದಿದ್ದೆಲ್ಲ ಹಾಸ್ನ. ನಾಕಾರ್ಹೊಳೆ ನೀರ್ಕುಡ್ದು ಸದ್ಯಕ್ಕೀಗ್ ಟುಲಾಮಿ ನದೀ ನೀರ್ಕುಡೀತಿದೀನಿ. ನಂಗಿಷ್ಟ್ವಾದ್ ವಿಷಯ್ಗಳ್ಬಗ್ಗೆ ಸುಮ್ನೆ ಬರೀತೀನಷ್ಟೇ. ಮನೆ ಚಿಕ್ದಾಗಿದ್ರೂ ಪರ್ವಾಗಿಲ್ಲ, ಮನಸ್ಸು ದೊಡ್ದಾಗಿರ್ಬೇಕು ಅನ್ನೋದ್ನ ನಂಬ್ತೀನಿ. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ಸಂಕೇತಿ, ವಿಎಚ್ಡಿಎಲ್ಲ್, ವೆರಿಲಾಗ್ ಇಷ್ಟ್ಭಾಷೆ ಚೆನ್ನಾಗ್ಮಾತಾಡ್ಬಲ್ಲೆ. ಸಂಸ್ಕೃತ, ಮರಾಠಿ ಸಿಸ್ಟಮ್ವೆರಿಲಾಗ್ಮೊದ್ಲಾದ್ಮಾತ್ಗಳೆಲ್ಲ ಇಲ್ಲ ಅನ್ನದ್ಹಾಗ್ಸ್ವಲ್ಸ್ವಲ್ಪ ಬರತ್ತೆ ಬಿಡಿ! ಇಂಗ್ಲಿಷಲ್ಲೇನಾದ್ರೂ ಗೀಚ್ಬೇಕೂನ್ಸ್ದಾಗ ಇಲ್ಬರೀತೀನ್ನೋಡಿ: http://neelanjana.wordpress.com/



RSS:
ಉ: ದೊಡ್ಡವರ ದೊಡ್ಡತನ
ಪ್ರಿಯ ಹಂಸಾನಂದಿಯವರೆ,
ಆ ದೊಡ್ಡ ಕಲಾವಿದರು ಯಾರೇ ಆಗಲಿ ಅವರ ತನಗಿಂತ ಕಿರಿಯರನ್ನೂ ಮೆಚ್ಚುವ ಆ ಗುಣ ನಿಜಕ್ಕೂ ದೊಡ್ಡದೇ. ಎಲ್ಲರೂ ಆ ಗುಣವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಬಹುದು. ತುಂಬಿದ ಕೊಡಗಳು ಹಾಗೇ. ಆ ಅಪರೂಪದ ದೊಡ್ಡ ವ್ಯಕ್ತಿ ಯಾರೆಂದು ನಮಗೆ ತಿಳಿಸಬಹುದೆ? ಧನ್ಯವಾದಗಳೊಂದಿಗೆ,
ಶೈಲಾಸ್ವಾಮಿ
ಉ: ದೊಡ್ಡವರ ದೊಡ್ಡತನ
ದಯವಿಟ್ಟು ಅವರ ಹೆಸರು ತಿಳಿಸಿ. ಮುಂದೆ ಅವರನ್ನು ನೆನೆವಾಗ ಅವರ ದೊಡ್ದತನವೂ ನೆನಪಾಗಲಿ.
ಉ: ದೊಡ್ಡವರ ದೊಡ್ಡತನ
ಕಲಾವಿದರು ಸಜ್ಜನರೂ ಆದರೆ ಅದರ ಶೋಭೆಯೇ ಬೇರೆ!
ಹಂಸಾನಂದಿಯವರು ಬರೆದಿರುವ ವಿಷಯಕ್ಕೆ ನೇರವಾಗಿ ಸಂಬಂಧಪಟ್ಟಿಲ್ಲವಾದರೂ ನಿಮ್ಮೆಲ್ಲರ ಜೊತೆ ಇದನ್ನು ಹಂಚಿಕೊಳ್ಳೋಣ ಎನಿಸಿತು:
http://www.youtube.com/watch?v=lwdDm3UO5WM
[ಹಂಸಾನಂದಿಯವರ ಸಪ್ತಾಕ್ಷರೀ ಮಂತ್ರಪ್ರಭಾವ ಬೇಕಾಗತ್ತೆ]
ಶಾಮಲ
ಉ: ದೊಡ್ಡವರ ದೊಡ್ಡತನ
ಪ್ರಿಯ ಶ್ಯಾಮಲ ಅವರೆ,
ತಾವು ಕಳಿಸಿರುವ ಈ ಕೃತಿ ದೀಕ್ಷಿತರ ಕೃತಿ ಶ್ರೀ ರಾಗದಲ್ಲಿದೆ. ಕಮಲಾಂಬಾ ನವಾವರಣ ಸೀರೀಸ್‍ನಲ್ಲಿದೆ ಎಂದು ನಾನು ತಿಳಿದುಕೊಂಡಿದ್ದೇನೆ. ಸರಿನಾ? ನಮ್ಮ ದೇಶದವರಲ್ಲದಿದ್ದರೂ ಚೆನ್ನಾಗಿ ಹಾಡಿದಾರೆ. ಇದೇ ವೀಡಿಯೋ linkನ್ನು ನನ್ನ ಮಗಳು ನನಗೆ ಕಳಿಸಿದ್ದಳು. ಅದನ್ನು ನಾನು ಇಲ್ಲಿಗೆ ಕಳಿಸೋಣ ಎಂದು ಯೋಚಿಸಿದ್ದೆ. ನೀವು ಆ ಕೆಲಸ ಮಾಡಿದಿರಿ. ಎಲ್ಲರೊಂದಿಗೆ ಹಂಚಿಕೊಂಡಿದ್ದಕೆ ಸಂತೋಷವಾಯ್ತು. ಧನ್ಯವಾದಗಳು.
ಶೈಲಾಸ್ವಾಮಿ
ಉ: ದೊಡ್ಡವರ ದೊಡ್ಡತನ
ವೀಡಿಯೋ linkನ್ನು ನಮ್ಮೊಡನೆ ಹಂಚಿಕೊಂಡಿದ್ದಕ್ಕೆ ಸಂತೋಷವಾಯ್ತು.
ಧನ್ಯವಾದಗಳು.
ಕೃಷ್ಣ