ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ದೇಶ್ ರಾಗ್

August 15, 2008 - 6:42am — hamsanandi



ಅಶೋಕರು ಮಿಲೇ ಸುರ್ ಮೇರಾ ತುಮ್ಹಾರಾ ಕೇಳಿಸುತ್ತಿದ್ದಂತೆ, ದೂರದರ್ಶನದ ಮತ್ತಷ್ಟು ಹಳೆ ನೆನಪುಗಳು.

ದೇಶ್ (ಅಥವಾ ದೇಸ್) ಅನ್ನುವ ಹಿಂದೂಸ್ತಾನಿ ರಾಗ ಈಗ ಕರ್ನಾಟಕ ಸಂಗೀತದಲ್ಲೂ ಪ್ರಚಲಿತವಾಗಿದೆ. ಇವೆರಡಕ್ಕೂ ಹಿಂದೆ ೧೪-೧೫ನೇ ಶತಮಾನದಲ್ಲಿದ್ದ ದೇಶವಾಲ ಗೌಡವೆಂಬ ರಾಗವೇ ತಾಯಿ. ಸಂಗೀತ ಎರಡು ಕವಲೊಡೆದಾಗ, ಉತ್ತರದಲ್ಲಿ ಅದು ದೇಶ್ ಆದರೆ, ದಕ್ಷಿಣದಲ್ಲಿ ಕೇದಾರಗೌಳ ವೆಂಬ ರಾಗವಾಗಿ ಬೆಳೆಯಿತು. ಕೆಲವು ಕಾಲ ಬೇರೆಬೇರೆ ದಾರಿಗಳಲ್ಲಿ ಹೊಮ್ಮಿದ ಈ ಎರಡು ರಾಗಗಳು ಹತ್ತೊಂಬತ್ತನೆ ಶತಮಾನದ ಕೊನೆಗೆ ಎರಡು ಬೇರೆ ಚಹರೆ ಹೊಂದಿದ ರಾಗಗಳಾಗಿ ಬದಲಾದವು.

ಇಪ್ಪತ್ತನೆ ಶತಮಾನದಲ್ಲಿ, ಉತ್ತರಾದಿಯ ದೇಶ್ ರಾಗವನ್ನೂ ಕರ್ನಾಟಕ ಸಂಗೀತದಲ್ಲೂ ದೇಶ್ ಅನ್ನುವ ಹೆಸರಿನಲ್ಲೇ ಮತ್ತೆ ಹಾಡುವ ಬಳಕೆಯೂ ಆರಂಭವಾಯಿತು. ಈಗ ಈ ರಾಗದಲ್ಲಿ ಕರ್ನಾಟಕ ಸಂಗೀತ ಶೈಲಿಯಲ್ಲಿ ಶ್ಲೋಕ, ರಾಗಮಾಲಿಕೆ, ದೇವರನಾಮ, ಭಜನೆ ಮೊದಲಾದ ಪ್ರಕಾರಗಳನ್ನು ಹಾಡಲಾಗುತ್ತೆ. 

ಇನ್ನು ಈ ರಾಗದ ಒಂದು ಒಳ್ಳೇ ಉದಾಹರಣೆಯನ್ನು ಕೇಳಿ- ನೋಡಿ ಆನಂದಿಸಲು ಈ ಕೆಳಗಿನ ಕೊಂಡಿಯನ್ನು ಚಿಟಕಿಸಿ:

ದೇಶ್ ರಾಗ್

-ಹಂಸಾನಂದಿ

 

  • ಕರ್ನಾಟಕ
  • ದೇಶ
  • ಭಾರತ ದರ್ಶನ
  • ರಾಗ
  • ಸಂಗೀತ
  • ಹಿಂದೂಸ್ತಾನಿ
~.~
  • hamsanandi ರವರ ಬ್ಲಾಗ್
  • Login or register to post comments
  • 393 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 15, 2008 - 8:31am — ASHOKKUMAR

ಉ: ದೇಶ್ ರಾಗ್

ASHOKKUMAR's picture

ಸುಶ್ರಾವ್ಯ ಹಾಡು. ಕೊನೆಯಲ್ಲಿ ಬರುವ ವೀಣಾವಾದಕ ಯಾರು?
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 15, 2008 - 9:04am — ASHOKKUMAR

ಉ: ದೇಶ್ ರಾಗ್

ASHOKKUMAR's picture

ಈ ಕೊಂಡಿಯನ್ನೂ ಓದಿ:
http://www.kendasampige.com/article.php?id=1053
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 15, 2008 - 9:12am — Ennares

ಉ: ದೇಶ್ ರಾಗ್

Ennares's picture

ಖ್ಯಾತ ವೀಣಾ ವಿದ್ವಾನ್ ದಿವಂಗತ. ಶ್ರೀ ಎಸ್. ಬಾಲಚಂದರ್ ( (18th Jan 1927 - 13 Apr 1990).

ಹಂಸಾನಂದಿಯವರಿಗೆ ಧನ್ಯವಾದಗಳು.

- ನವರತ್ನ ಸುಧೀರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 15, 2008 - 9:08am — shylaswamy

ಉ: ದೇಶ್ ರಾಗ್

shylaswamy's picture

s.ಬಾಲಚಂದರ್ ಕೊನೆಯಲ್ಲಿ ಬರುವ ವೀಣಾ ವಾದಕ. ಇದನ್ನು ಸದಾ Tvಯಲ್ಲಿ telicast ಮಾಡುತ್ತಿದ್ದರು. ಒಂದು ಅದ್ಭುತವಾದ ಗೀತ ನೃತ್ಯದ ಸಂಗಮ. ಕಿವಿಗೆ ಹಿತವಾದ ದೇಶ್ ರಾಗ. ಧನ್ಯವಾದಗಳು ಹಂಸಾನಂದಿಯವರೆ.
ಶೈಲಾಸ್ವಾಮಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 15, 2008 - 10:11am — anil.ramesh

ಉ: ದೇಶ್ ರಾಗ್

anil.ramesh's picture

ಸಕ್ಕತಾಗಿದೆ... ಕಿವಿಗೆ ಇಂಪನ್ನು ಕೊಡುವ ದೇಶ್ ರಾಗ್...

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 15, 2008 - 11:44am — mowna

ಉ: ದೇಶ್ ರಾಗ್

mowna's picture

ಹಂಸಾನಂದಿ ಅವರೆ ಹೆಸರಿಗೆ ತಕ್ಕಂತೆ ನೀವು ಸಂಗೀತಗಾರರೆ? ನಿಮ್ಮ ಸಂಗೀತಮಯ ಲೇಖನಗಳು ಓದಲು ಆನಂದ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 15, 2008 - 9:35pm — kalpana

ಉ: ದೇಶ್ ರಾಗ್

kalpana's picture

ಸಕ್ಕತ್ ಹಂಸಾನಂದಿಗಳೇ, ಒಂದಕ್ಕಿಂತ ಒಂದು ಒಳ್ಳೆಯ ಲೇಖನಗಳು, ಹಾಡುಗಳು Smiling

~ಕಲ್ಪನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 16, 2008 - 11:00am — kpbolumbu

ಉ: ದೇಶ್ ರಾಗ್

kpbolumbu's picture

ವಂದೇ ಮಾತರಂ ದೇಶರಾಗದಲ್ಲಿದೆಯೇ?
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 16, 2008 - 12:31pm — shreedevikalasad

ಉ: ದೇಶ್ ರಾಗ್

shreedevikalasad's picture

ಹೌದು. ವಂದೇ ಮಾತರಂ ದೇಶ್ ರಾಗದಲ್ಲಿಯೇ ಕಾಂಪೋಸ್ ಮಾಡಿದ್ದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 16, 2008 - 8:22pm — ASHOKKUMAR

ಉ: ದೇಶ್ ರಾಗ್

ASHOKKUMAR's picture

compose (ಕ್ರಿ) 1) ರಚಿಸು, ಜೋಡಿಸು
ನೀವು ಈ ಅರ್ಥದಲ್ಲಿ ಬಳಸಿದ್ದರೆ ನನಗೊಂದು ಕುತೂಹಲ:
ಪದ್ಯ ರಚಿಸುವಾಗಲೇ ರಾಗದ ಬಗ್ಗೆ ಯೋಚಿಸುತಾರೆಯೇ? ಅದೂ ವಂದೇ ಮಾತರಂ --ಸಿನೆಮಾಕ್ಕಾದರೆ ಆ ರೀತಿ ಹಾಡು ಹೊಸೆಯುವುದಿದೆ.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 16, 2008 - 9:39pm — shreedevikalasad

ಉ: ದೇಶ್ ರಾಗ್

shreedevikalasad's picture

ಇಲ್ಲ. ಅದು ಟ್ಯೂನ್ ಮಾಡುವುದು ಆಗಬೇಕಿತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 17, 2008 - 12:45am — hamsanandi

ಉ: ದೇಶ್ ರಾಗ್

hamsanandi's picture

ವಂದೇ ಮಾತರಂ ವಿಷಯ ಗೊತ್ತಿಲ್ಲ - ಆದರೆ ಸಂಗೀತ ಪ್ರಪಂಚಕ್ಕೆ ಬಂದರೆ, ವಾಗ್ಗೇಯಕಾರರು ಸಾಹಿತ್ಯವನ್ನೂ ಸಂಗೀತವನ್ನೂ ಜೊತೆಜೊತೆಗೇ ರಚಿಸುವುದು ರೂಢಿ. ಹಿಂದಿನ ತಲೆಮಾರುಗಳಷ್ಟೇ ಅಲ್ಲ, ಇಂದಿನ ವಾಗ್ಗೇಯಕಾರರು ಕೂಡ ಈ ಮಾತನ್ನು ಹೇಳಿದ್ದಾರೆ.

ಬೇರೊಬ್ಬರು ಬರೆದ ಹಾಡಿಗೆ ಮಟ್ಟು ಹಾಕುವವರಿಗೆ ವಾಗ್ಗೇಯಕಾರರು ಅನ್ನುವುದಿಲ್ಲ. ಭಾರತೀಯ ಸಂಗೀತದಲ್ಲಿ ವಾಗ್ಗೇಯಕಾರ ಅನ್ನುವ ಪದವನ್ನು composer ಅನ್ನುವ ಅರ್ಥದಲ್ಲಿ ಬಳಸುತ್ತೇವೆ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 17, 2008 - 12:06pm — Ennares

ಉ: ದೇಶ್ ರಾಗ್

Ennares's picture

ಬಂಕಿಮ್ ಚಂದ್ರರು "ವಂದೇ ಮಾತರಂ" ( ಬಂದೇ ಮಾತರಂ) ಅನ್ನು ಮೊದಲಿಗೆ ಪ್ರಾರ್ಥನಾರೂಪವಾಗಿ ಬರೆದದ್ದು. ಅದರಲ್ಲಿರುವ ಕ್ಲಿಷ್ಟವಾದ ಸಂಸ್ಕೃತ ಮತ್ತು ಬಂಗಾಲಿ ಪದಗಳನ್ನು ಉಚ್ಚರಿಸುವುದು ಕಷ್ಟ ಎಂದು ಅಸಮಾಧಾನ ವ್ಯಕ್ತ ಪಡಿಸಿದ ಅನೇಕ ಬಂಧು ಮಿತ್ರರಲ್ಲಿ ಅವರ ಮಗಳೂ ಸೇರಿದ್ದಳಂತೆ. ಆದರೆ ಬಂಕಿಮ್ ಮಾತ್ರ ಈ ಪದ್ಯ ಪ್ರತಿ ಭಾರತೀಯನೂ ಒಂದು ದಿನ ವೇದಮಂತ್ರದ ಹಾಗೆ ಪಠಿಸುತ್ತಾನೆ ಎಂದು ಭವಿಷ್ಯ ನುಡಿದಿದ್ದರಂತೆ.

ಇದನ್ನು ಸುಶ್ರಾವ್ಯವಾಗಿ ಹಾಡಲು ಅನೇಕರು ಅನೇಕ ರಾಗಗಳಲ್ಲಿ ಸಂಯೋಜಿಸಿ ಹಾಡಿದ್ದುಂಟು. ಸ್ವಾತಂತ್ರ್ಯಪೂರ್ವ ಕಾಂಗ್ರೆಸ್ಸ್ ಅಧಿವೇಶನಗಳಲ್ಲಿ ಪಂಡಿತ್ ವಿಷ್ಣು ದಿಗಂಬರ್ ಪಾಲುಸ್ಕರ್ ಅವರು ವಂದೇಮಾತರಂ ಅನ್ನು "ಕಾಫೀ" ರಾಗದಲ್ಲಿ ಹಾಡುತ್ತಿದ್ದರಂತೆ. ೧೯೩೧ ರಲ್ಲಿ ಅವರ ನಿಧನಾನಂತರ ಪಂಡಿತ್ ಓಂಕಾರ ನಾಥ್ ಠಾಕೂರರು "ನೀಲಾಂಬರಿ" ರಾಗವನ್ನು ಹೋಲುವ ’ಬಂಗೀಯ ಕಾಫೀ" ರಾಗದಲ್ಲಿ ಕೇವಲ ತಂಬೂರಿಯ ಶೃತಿಯೊಡನೆ ಹಾಡುತ್ತಿದ್ದರಂತೆ.

ಆದರೆ ಅತ್ಯಂತ ಜನಪ್ರಿಯವಾದ ಆವೃತ್ತಿ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ "ದೇಶ್" ರಾಗದಲ್ಲಿ ಪಂಡಿತ್ ರವಿಶಂಕರ್ ಸಂಯೋಜಿಸಿದ ಆವೃತ್ತಿ. ಮೊದಲ ಪದಃಪುಂಜವನ್ನು ಮಾತ್ರ ೫೮ ಸೆಕಂಡುಗಳಲ್ಲಿ ಹಾಡುವುದು ವಾಡಿಕೆ. ಮಿಕ್ಕ ನಾಲ್ಕಿಉ ಪದಃಪುಂಜಗಳ ಸಾಹಿತ್ಯದ ಬಗ್ಗೆ ಅನೇಕರಿಗೆ ಅರಿವಿಲ್ಲ.

"ದೇಶ್" ರಾಗದ ಹೆಚ್ಚಿನ ಮಾಹಿತಿ ಹಾಗೂ ಆಡಿಯೋ ಕ್ಲಿಪ್‍ಗಾಗಿ ಕೆಳಗೆ ಕ್ಲಿಕ್ಕಿಸಿ.

http://www.kksongs.org/raga/list/des.html

ವಂದೇ ಮಾತರಂ ಮತ್ತು ಅದನ್ನು ಇತರ ರಾಗಗಳಲ್ಲಿ ಸಂಯೋಜಿಸಿ ಹಾಡಿದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಕೊಂಡಿ ಕ್ಲಿಕ್ಕಿಸಿ ಓದಿ. ಬಹಳ
ಸ್ವಾರಸ್ಯಮಯ ಚರಿತ್ರೆ!.

http://www.mustrad.org.uk/articles/mataram.htm

-ನವರತ್ನ ಸುಧೀರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭೀಮಸೇನ ಜೋಶಿ - ಈಗ ಭಾರತ ರತ್ನ!
  • ಮಿಲೇ ಸುರ್ ಮೇರಾ ತುಮ್ಹಾರಾ
  • ಪುರಂದರದಾಸರ ಎರಡು ಪದಗಳು
  • ಅನೇಕತಾ ಮೆ ಏಕತಾ
  • ತೋಡ ಪ್ಯಾರ್‍ ತೋಡ ಮ್ಯಾಜಿಕ್ ಎಂಬ ಮಕ್ಕಳ ಹಿಂದಿ ಸಿನಿಮದಲ್ಲಿ ಈ ಹಾಡು..
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೆಸರಲ್ಲೇನಿದೇ ರೀ? ನೀಲಾಂಜನ .. ರಾಮಕ್ರಿಯ .... ಹಂಸಾನಂದಿ ಯಾವ್ದೋ ಒಂದು!
ಒಬ್ಬ ಸಂಪದಿಗ - ಇನ್ನೂ ಹೆಚ್ಚಿಗೆ ಹೇಳ್ಬೇಕಾದ್ರೆ ಒಬ್ಬ ಕನ್ನಡಿಗ ಅಂದ್ರೆ ಸಾಕು. ಅಲ್ವಾ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 411 ಅತಿಥಿಗಳು ಆನ್ಲೈನ್ ಇರುವರು.


ನಾವು ಬುಧ್ಧಿವಂತಿಕೆಯನ್ನು ನಮ್ಮ ದೇವರಾಗಿಸಿಕೊಳ್ಳಬಾರದು; ಬುಧ್ಧಿವಂತಿಕೆಗೆ ಶಕ್ತಿಶಾಲಿ ಸ್ನಾಯುಗಳಿರ ಬಹುದು, ಆದರೆ ಯಾವುದೇ ವ್ಯಕ್ತಿತ್ವವಿಲ್ಲ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator