ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಬಂಗಾರಿ ಲಕುಮಿಯ ಸದಾ ನೆನೆವೆ

August 15, 2008 - 12:48am — hamsanandi
ಲಕ್ಷ್ಮೀ ನೆಲೆನಿಲ್ಲುವ ಕಮಲ - ಕೃಪೆ: ಎಂ ಎನ್ ಆರ್ ಪ್ರಸಾದ್

ಅಗಸ್ಟ್ ೧೫-೨೦೦೮

ಇವತ್ತು ಸ್ವಾತಂತ್ರೋತ್ಸವ, ಮತ್ತೆ ಕಮಲದಲಿ ನಿಂದಿಹ, ಕಮಲವ ಕೈಯಲ್ಲಿ ಹಿಡಿದ, ಕಮಲಮುಖಿಯಾದ ವರಲಕ್ಷ್ಮಿಯ ಪೂಜೆಯ ದಿನ.

ಇವತ್ತು ಸರಸ್ವತಿ ಮತ್ತೆ ಲಕ್ಷ್ಮಿ ಇಬ್ಬರನ್ನೂ ನೆನೆಯಬಹುದಾದ ದಿನ ಅನ್ನಬಹುದು. ಯಾಕಂದ್ರೆ, ನಮ್ಮ ತಾಯಿ ಭಾರತಿ. ಭಾರತಿ ಅಂದರೆ ಸರಸ್ವತಿ ಅನ್ನೋದು ನಮಗೆಲ್ಲ ಗೊತ್ತೇ ಇದೆ. ಇನ್ನು ಶ್ರಾವಣ ಪೂರ್ಣಿಮೆಯ ಮುಂಚಿನ ಶುಕ್ರವಾರದಲ್ಲಿ ಮಾಡುವ ವರಮಹಾಲಕ್ಷ್ಮೀ ಹಬ್ಬದ ಆಚರಣೆ ಸುಮಾರು ದಕ್ಷಿಣಭಾರತದಲ್ಲೆಲ್ಲ ಇದೆ.

ಸಂಗೀತ ತ್ರಿಮೂರ್ತಿಗಳಲ್ಲ್ಲಿ ಒಬ್ಬರು ಮುತ್ತುಸ್ವಾಮಿ ದೀಕ್ಷಿತರು. ಅವರ ಶ್ರೀವರಲಕ್ಷ್ಮೀ ನಮಸ್ತುಭ್ಯಂ ಅನ್ನುವ ರಚನೆ ಪ್ರಖ್ಯಾತವಾಗಿದೆ. ಅದರಲ್ಲಿ ಲಕ್ಷ್ಮಿಯನ್ನು ಭಕ್ತರಿಗೆ ಸುಲಭವಾಗಿ ದೊರೆಯುವ ವರಲಕ್ಷ್ಮಿಯನ್ನು ಸ್ಮರಿಸುತ್ತಾರೆ.

ಸಂಗೀತ ಸರಸ್ವತಿಯ ಉಪಾಸಕರಾದ ಮುತ್ತುಸ್ವಾಮಿ ದೀಕ್ಷಿತರು ಲಕ್ಷ್ಮಿಯನ್ನು (ಅಂದರೆ ಸಂಸಾರ ನಡೆಸಲು ಬೇಕಾದ ಹಣವನ್ನು) ಕಡೆಗಣಿಸಿದ್ದರೆಂದು ಅವರ ಹೆಂಡತಿಗೆ ಸ್ವಲ್ಪ ಅಸಮಾಧಾನವಿತ್ತಂತೆ. ಅದನ್ನು ಅವರು ಗಂಡನೆದುರು ತೋರಿಸಿಯೂಬಿಟ್ಟರಂತೆ. ಯಾರಾದರೂ ರಾಜರದೋ, ಜಮೀನ್ದಾರರದೋ ಆಶ್ರಯ ಹಿಡಿದು ಹಣಗಳಿಸಬಾರದೇ ಅಂದರಂತೆ. ಆಕೆಯದೇನು ತಪ್ಪಿಲ್ಲ ಬಿಡಿ - ಮನೆಯ ಬಗ್ಗೆ ಹರಿಸಬೇಕಾದಷ್ಟು ಗಮನ ಹರಿಸದ ಗಂಡನಾದರೆ, ಯಾವ ಹೆಂಡತಿಯೂ ಅದನ್ನೇ ಅಂದಾಳು!ಅಲ್ಲವೇ?

ಆ ಸಂದರ್ಭದಲ್ಲೇ ದೀಕ್ಷಿತರು ಅದಕ್ಕೆ ಉತ್ತರವೋ ಎನ್ನುವಂತೆ, ಹಿರಣ್ಮಯೀಂ ಲಕ್ಷ್ಮೀಂ ಸದಾ ಭಜಾಮಿ, ಹೀನ ಮಾನವಾಶ್ರಯಂ ತ್ಯಜಾಮಿ ಎಂಬ ರಚನೆಯನ್ನು ರಚಿಸಿ ಹಾಡಿದರಂತೆ. ಅಂದೇ ಅವರ ಹೆಂಡತಿಯ ಕನಸಿನಲ್ಲಿ ಲಕ್ಷ್ಮಿ ಬಂದು ಚಿನ್ನದ ಮಳೆಸುರಿಸಿ ಸಾಕೇ, ಇನ್ನೂ ಬೇಕೇ ಎಂದಂತಾಯಿತಂತೆ. ಎಚ್ಚೆತ್ತ ಆಕೆ, ತನ್ನ ಗಂಡನ ಸಂಗೀತಕ್ಕೆ ಸಮವಾದ ಐಶ್ವರ್ಯವೇ ಇಲ್ಲ ಎಂದುಕೊಂಡರಂತೆ.

ಇದು ಎಷ್ಟು ಮಟ್ಟಿಗೆ ನಿಜ, ಎಷ್ಟು ಮಟ್ಟಿಗೆ ಅಂತೆ-ಕಂತೆ ಅನ್ನುವುದನ್ನು ಒಂದು ಬದಿಗಿಟ್ಟು ಆ ಹಾಡನ್ನು ಷಣ್ಮುಖಪ್ರಿಯ - ಹರಿಪ್ರಿಯ ಸಹೋದರಿಯರ ಕಂಠದಲ್ಲಿ ನೀವು ಇಲ್ಲಿ ಕೇಳಬಹುದು.

ಸುಂದರವಾದ ಲಲಿತಾ ರಾಗದಲ್ಲಿರುವ ಈ ರಚನೆ ಸಂಸ್ಕೃತದಲ್ಲಿದೆ. ಹಾಡಿನ ಕೊನೆಯಲ್ಲಿ ಬರುವ ರಾಗಮುದ್ರೆಯನ್ನೂ ಗಮನಿಸಿ.

ಇದರ ಭಾವಾರ್ಥವನ್ನು ಇಲ್ಲಿ ಕನ್ನಡಿಸಿರುವೆ - ಛಂದಸ್ಸು ವ್ಯಾಕರಣ ಮಾತ್ರ ಕೇಳಬೇಡಿ Smiling

ಬಂಗಾರಿ ಲಕುಮಿಯ ಸದಾ ನೆನೆವೆ
ಹೀನ ಮನುಜರಾಸರೆಯ ತೊರೆವೆ || ಪಲ್ಲವಿ||

ಸಿರಿಯನುಗಾಲ ತರುವ ಪಾಲುಗಡಲ ಮಗಳ
ಹರಿಯೆದೆಯಲಿ ನೆಲೆಸಿಹ ಚಿಗರೆಯ ಚಿಗುರು ನಡಿಗೆಯವಳ
ಕರದಲಿ ತಾವರೆ ಪಿಡಿದ ಹೊಳೆವ ಪಚ್ಚೆ ಬಳೆಯವಳ || ಅನುಪಲ್ಲವಿ ||

ಬಿಳಿಕಮಲದಿ ನಿಂದಿಹಳ ಸಮನಾರಿರದ ಕಮಲಾಂಬಿಕೆಯ
ಜೀವರಾಶಿಗಳಿಂ ಪೂಜೆಗೊಂಬಳ ಹೂಹಾರ ಮಾಣಿಕದೊಡವೆಯವಳ
ಸಂಗೀತಕೇಲಿಯಲಿ ನಲಿಯುವಳ ಗಿರಿಜೆಯ ಗೆಳತಿ ಈ ಇಂದಿರೆಯ
ಚಂದಿರನ ಕಾಂತಿಯ ಮೊಗದವಳ ಬಯಸಿದನೀವ ಚಿಂತಾಮಣಿಯ
ಹಳದಿಯುಡುಗೆಯುಟ್ಟಿಹ ಗುರುಗುಹ*ನ ಮಾವನ ಮಡದಿಯ! ಲಲಿತೆಯ! || ಚರಣ ||

* ಮುತ್ತುಸ್ವಾಮಿ ದೀಕ್ಷಿತರ ಮುದ್ರೆ  ಗುರುಗುಹ - ಅದು ಷಣ್ಮುಖನದ್ದೇ ಮತ್ತೊಂದು ಹೆಸರು. ಲಕ್ಷ್ಮಿಯನ್ನು ಷಣ್ಮುಖನ ಮಾವನ ಮಡದಿ ಎಂದು ಚಮತ್ಕಾರಿಕವಾಗಿ ಕರೆದಿದ್ದಾರೆ.

-ಹಂಸಾನಂದಿ

ಚಿತ್ರ ಕೃಪೆ: ಎಂ ಎನ್ ಆರ್ ಪ್ರಸಾದ್

  • ಅನುವಾದ
  • ಕಳಸಾಪುರ
  • ಮುತ್ತುಸ್ವಾಮಿ ದೀಕ್ಷಿತರು
  • ಹಬ್ಬಗಳು
~.~
  • hamsanandi ರವರ ಬ್ಲಾಗ್
  • Login or register to post comments
  • 303 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 15, 2008 - 8:45am — shylaswamy

ಉ: ಬಂಗಾರಿ ಲಕುಮಿಯ ಸದಾ ನೆನೆವೆ

shylaswamy's picture

ಪ್ರಿಯ ಹಂಸಾನಂದಿಯವರೆ. ಈದಿನ ಬೆಳಗಾಗುತ್ತಲೇ ಮುತ್ತುಸ್ವಾಮಿ ದೀಕ್ಷಿತರ ನೆನೆದು ಕೆಲಸ ಪ್ರಾರಂಭಿಸುವಂತೆ ಮಾಡಿದ್ದೀರಿ. ಹಾಗೆಯೇ ಪ್ರಿಯ ಸೋದರಿಯರು ಹಾಡಿದ ಕೃತಿ ಕೇಳುತ್ತಾ ನನ್ನ ಇಂದಿನ ಕೆಲಸಗಳು ಪ್ರಾರಂಭವಾಗಿದ್ದು ಮನಸ್ಸಿಗೆ ಉಲ್ಲಾಸದಾಯಕವಾಗಿದೆ. ನಿಮ್ಮ ಕನ್ನಡ ಅನುವಾದ ನಿಜಕ್ಕೂ ತುಂಬಾ ಚೆನ್ನಾಗಿದೆ ಅದನ್ನೂ ಸಹಾ ಲಲಿತ ರಾಗದಲ್ಲಿ ಹಾಡಬಹುದೇನೊ. ತಮ್ಮ ಈ ಕೊಡುಗೆಗೆ ಧನ್ಯವಾದಗಳು.
ಶೈಲಾಸ್ವಾಮಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 15, 2008 - 8:52am — ASHOKKUMAR

ಉ: ಬಂಗಾರಿ ಲಕುಮಿಯ ಸದಾ ನೆನೆವೆ

ASHOKKUMAR's picture

ಹಂಸಾನಂದಿಯವರೇ,
ರೇಡಿಯೋ ಪ್ರಸಾರವನ್ನು ಕಂಪ್ಯೂಟರಿನಲ್ಲಿ ಉಳಿಸಲು ನೆರವಾಗುವ ತಂತ್ರಾಂಶದ ಬಗ್ಗೆ ಗೊತ್ತೇ?
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 15, 2008 - 11:36am — mowna

ಉ: ಬಂಗಾರಿ ಲಕುಮಿಯ ಸದಾ ನೆನೆವೆ

mowna's picture

ಹಂಸಾನಂದಿ ಅವರೆ,
ಸ್ವಾತಂತ್ರ್ಯ ದಿನಾಚರಣೆ ಹಾಗೂ ವರಮಹಾಲಕ್ಷ್ಮಿ ಹಬ್ಬಕ್ಕೆ ಒಂದು ಉತ್ತಮ ಹೂರಣ ದೀಕ್ಷಿತರ ಹಾಡಿನ ಅನುವಾದ. ಭಾರತಿ-ಲಕ್ಷಿಯರು ಒಟ್ಟಾಗಿ ಬಂದಿದ್ದಾರೆ ನಮ್ಮ ಮನೆ-ಮನ- ನಾಡಿಗೆ ಸಂಭ್ರಮದಿಂದ ಸ್ವಾಗತಿಸೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೌಮಾರೀ ಗೌರೀ ವೇಳಾವಳಿ
  • ನವರಾತ್ರಿಯ ಐದನೆಯ ದಿನ
  • ವಾತಾಪಿ ಗಣಪತಿಂ ಭಜೇಹಂ
  • ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೩
  • ಶೃಂಗಾರ ರಸಮಂಜರಿ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೆಸರಲ್ಲೇನಿದೇ ರೀ? ನೀಲಾಂಜನ .. ರಾಮಕ್ರಿಯ .... ಹಂಸಾನಂದಿ ಯಾವ್ದೋ ಒಂದು!
ಒಬ್ಬ ಸಂಪದಿಗ - ಇನ್ನೂ ಹೆಚ್ಚಿಗೆ ಹೇಳ್ಬೇಕಾದ್ರೆ ಒಬ್ಬ ಕನ್ನಡಿಗ ಅಂದ್ರೆ ಸಾಕು. ಅಲ್ವಾ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
ಇನ್ನಷ್ಟು
ಈಗಿನಂತೆ 18 ಸದಸ್ಯರು ಮತ್ತು 469 ಅತಿಥಿಗಳು ಆನ್ಲೈನ್ ಇರುವರು.


ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator