ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಪ್ರಾರ್ಥಿಸಲೊಂದು ಬೇರೆಯದೇ ಬಗೆ :)
ಅಯ್ಯೋ ಗಣೇಶ! ಯಾಕೋ ನೀನಳುವೆ? ನನ್ನ ಕಿವಿಗಳನ್ನೆಳೀತಿದಾನೆ ನೋಡಮ್ಮ!
ಯಾಕೋ ಸ್ಕಂದ? ಯಾಕೀ ಚೇಷ್ಟೆ? ಅವನು ಯಾಕೆ ಮುಂಚೆ ನನ್ನ ಕಣ್ಣೆಣಿಸಿದ್ದು?
ಆನೇ ಮೊಗದವನೇ! ಇದು ಸರಿಯೇನೋ? ನನ್ನ ಮೂಗನ್ನಳೆದಿದ್ದವನೇ ತಾನೇ?
ಇದಕೇಳುತಲೇನೂ ತೋಚದೆ ಹುಸಿಕೋಪವತೋರಿದ ಗೌರಿಯೆ ಕಾಯಲೆಮ್ಮೆಲ್ಲರನ್ನು!
ಸಂಸ್ಕೃತ ಮೂಲ ಹೀಗಿದೆ:
ಹೇ ಹೇರಂಬ ಮದಂಬ ರೋದಿಷಿ ಕಥಂ ಕರ್ಣೌ ಲುಠತ್ಯಗ್ನಿಭೂಃ
ಕಿಂ ತೇ ಸ್ಕಂದ ವಿಚೇಷ್ಟಿತಂ ಮಮ ಪುರಾ ಸಂಖ್ಯಾ ಕೃತಾ ಚಕ್ಷುಷಾಂ
ನೈತತ್ತೇಹ್ಯುಚಿತಂ ಗಜಾಸ್ಯ ಚರಿತಂ ನಾಸಾ ಪ್ರಮೀತಾ ಚ ಮೇ
ತಾವೇವಂ ಸಹಸಾ ವಿಲೋಕ್ಯ ಹಸಿತವ್ಯಗ್ರಾ ಶಿವಾ ಪಾತು ವಃ
ಕೊ.ಕೊ: ಈ ಶ್ಲೋಕವನ್ನು ಮೊದಲು ನನಗೆ ಹೇಳಿದ ಸಂಪದಿಗರಾದ ತುರಂಗ ಅವರಿಗೆ ನಾನು ಆಭಾರಿ
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 267 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಪ್ರಾರ್ಥಿಸಲೊಂದು ಬೇರೆಯದೇ ಬಗೆ :)
ಹಂಸಾನಂದಿಯವರೆ,
ಅನುವಾದ ಚೆನ್ನಾಗಿದೆ. ಶ್ರೀ. ಜಿ.ಪಿ.ರಾಜರತ್ನಂ ಅವರೂ ಈ ಪದ್ಯವನ್ನು ಅನುವಾದಿಸಿದ್ದಂತೆ ನೆನಪು? ಅವರು ಶಿವನ ಸಂಸಾರ ಕುರಿತು ಬರೆದಿರುವ ಪದ್ಯಗಳು ಬಹಳ ಚೆನ್ನಾಗಿವೆ.
ಶಾಮಲ
ಉ: ಪ್ರಾರ್ಥಿಸಲೊಂದು ಬೇರೆಯದೇ ಬಗೆ :)
ಹಂಸಾನಂದಿಯವರೇ,
ಚೆನ್ನಾಗಿದೆ ಪ್ರಾರ್ಥಿಸುವ ಬಗೆ
-ಸವಿತ
ಉ: ಪ್ರಾರ್ಥಿಸಲೊಂದು ಬೇರೆಯದೇ ಬಗೆ :)
ಬಹಳ ಚೆನ್ನಾಗಿದೆ, ಅನುವಾದ ಮತ್ತು ಮೂಲ ಬರಹ. ಮೂಲ ಬರಹ ಎಲ್ಲಿಯದು?
--
PaLa
ಉ: ಪ್ರಾರ್ಥಿಸಲೊಂದು ಬೇರೆಯದೇ ಬಗೆ :)
ಮೂಲ ಯಾರದ್ದು ಎಂದು ನನಗೆ ತಿಳಿದಿಲ್ಲ - ಬಹುಪಾಲು ಸೂಕ್ತಿಗಳಂತೆ ಇದನ್ನು ಬರೆದವರು ಯಾರು ಎಂದು ತಿಳಿದಿದೆಯೋ ಇಲ್ಲವೋ ಎನ್ನುವುದೂ ಕೂಡ ನನಗೆ ಗೊತ್ತಿಲ್ಲ..
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಪ್ರಾರ್ಥಿಸಲೊಂದು ಬೇರೆಯದೇ ಬಗೆ :)
ತಕತ್ತಾಗಿದೆ, ಕಲ್ಪನೆ. ನನ್ನಿ, ಹಂಸಾನಂದಿಗಳೇ.
ಉ: ಪ್ರಾರ್ಥಿಸಲೊಂದು ಬೇರೆಯದೇ ಬಗೆ :)
ಅಮ್ಮ, ಅಮ್ಮ, ನೋಡಮ್ಮ ಇವಳು ನನ್ನ ಕೋತಿ ಅಂತಾಳೆ,
ಅಮ್ಮ, ಅಮ್ಮ, ನೋಡಮ್ಮ ಇವನು ನನ್ನ ಗೂಬೆ ಅಂತಾನೆ,
ಪುಟ್ಟ, ಯಾಕೋ ಅವಳನ್ನು ಗೂಬೆ ಅಂದೆ,
ಅವಳು, ನಂಗೆ ಆಟ ಆಡೋಕ್ಕೆ ಬಿಡಲ್ಲ,
ಪುಟ್ಟಿ, ಯಾಕೆ ಅವನಿಗೆ ಆಟ ಆಡೋಕ್ಕೆ ಬಿಡಲಿಲ್ಲ,
ಅಮ್ಮ, ಅಮ್ಮ, ಅವನು ಊಟ ಮಾಡಲಿ ಅಂತ,
ಈ ತಾಯಿ, ಮಕ್ಕಳ ಮಾತು ಕೇಳಿ ನಗುತ್ತಿರುವ ಅನ್ನಪೂರ್ಣೇಶ್ವರಿಯೇ ಎಲ್ಲರ ಹಸಿವನ್ನು ಹೋಗಲಾಡಿಸು.