ಹಂಸ ನಾದ
ಹಂಸ ನುಡಿದರೆ, ಹಂಸನಾದ!
ನವರಾತ್ರಿಯ ಎರಡನೇ ದಿನ
ನೆನ್ನೆ ನವರಾತ್ರಿ ಹಬ್ಬದ ಮೊದಲ ದಿನ ದ ಬಗ್ಗೆ ಬರೆದಿದ್ದೆ. ಇವತ್ತು ಇನ್ನು ದಸರೆಯ ಎರಡನೆಯ ದಿವಸ.ನಮಗೆಲ್ಲ ತಿಳಿದ ಹಾಗೆ ನವರಾತ್ರಿ ಕನ್ನಡಿಗರಿಗೆ ದೊಡ್ಡ ಹಬ್ಬ. ವಿಜಯ ನಗರದ ಅರಸರ ಕಾಲದಲ್ಲಿ ದಸರೆಯ ಸಂಭ್ರಮ ನಡೆಯುತ್ತಿದ್ದದ್ದರ ವಿಷಯವಾಗಿ, ಆ ಕಾಲದಲ್ಲಿ ಬಂದಿದ್ದ ಪರ್ಶಿಯನ್ ಹಾಗೂ ಫ್ರೆಂಚ್ ಯಾತ್ರಿಕರ ಬರಹಗಳಿಂದ ತಿಳಿದುಬರುತ್ತದೆ. ಆ ವೈಭವಕ್ಕೆ, ಈಗಲೂ ಹಂಪೆಯಲ್ಲಿರುವ ಮಹಾನವಮಿ ದಿಬ್ಬವೂ ಸಾಕ್ಷಿಯಾಗಿದೆ. ನಂತರ, ಈ ಸಂಪ್ರದಾಯ ಮೈಸೂರಿನ ಅರಸರಲ್ಲೂ ಮುಂದುವರೆದದ್ದು ಆಶ್ಚರ್ಯವೇನಿಲ್ಲ.
ರಾಜರು ತಮ್ಮ ಇಷ್ಟದೇವಿ ಮೈಸೂರಿನ ನಗರ ದೇವತೆ, ಚಾಮುಂಡಿಯ ಮೇಲೆ ೧೦೮ ಕೃತಿಗಳನ್ನು ರಚಿಸಲು ಕೇಳಿದರಂತೆ, ಅಂತೆಯೇ ಮುತ್ತಯ್ಯ ಭಾಗವತರು ೧೦೮ ಕೃತಿಗಳನ್ನು ರಚಿಸಿದರು - ಕನ್ನಡದಲ್ಲಿರುವ ಈ ಕೃತಿಗಳ ಸಾಹಿತ್ಯವನ್ನು ದೇವೋತ್ತಮ ಜೋಯಿಸರೆಂಬುವರು ಬರೆದುಕೊಟ್ಟರಂತೆ.
ಇವತ್ತು ನಾನು ಕೇಳಿಸುವ ರಚನೆ - ಭುವನೇಶ್ವರಿಯ ನೆನೆ ಮಾನಸವೆ; ಮೋಹನ ಕಲ್ಯಾಣಿ ರಾಗ, ಆದಿತಾಳದಲ್ಲಿದೆ. ಈ ರಾಗದಲ್ಲಿ ಸಂಗೀತರಚನೆ ಮಾಡಿದವರಲ್ಲಿ ಮುತ್ತಯ್ಯಭಾಗವತರೇ ಮೊದಲಿಗರು. ಅತಿ ಪ್ರಸಿದ್ಧ ವಾದ ಮೋಹನ, ಹಾಗೂ ಕಲ್ಯಾಣಿ ಈ ಎರಡು ರಾಗಗಳನ್ನು ಮೇಳೈಸುವುದರಿಂದ ಈ ರಾಗ ಉಂಟಾಗಿದೆ. ಕೃತಿಯ ಸಾಹಿತ್ಯ, ಸ್ವಲ್ಪ ಸಂಸ್ಕೃತ ಹೆಚ್ಚಾಗೇ ಇರುವಂತಹ ಕನ್ನಡಭಾಷೆಯಲ್ಲಿದೆ.
ಈಗ ಇದನ್ನು ಎಸ್.ರಾಜಮ್ (ವೀಣಾ ಬಾಲಚಂದರ್ ಅವರ ಅಣ್ಣ) ಅವರ ದ್ವನಿಯಲ್ಲಿ ನೀವು ಸಂಗೀತಪ್ರಿಯ.ಅರ್ಗ್ ನಲ್ಲಿ ಈ ಕೆಳಗಿನ ಕೊಂಡಿಯಲ್ಲಿ ಕೇಳಬಹುದು:
ರಾಜ್ಂ ಅವರ ಧ್ವನಿಯಲ್ಲಿ - ಭುವನೇಶ್ವರಿಯ ನೆನೆ ಮಾನಸವೇ
ಮರೆಯದ ಹಾಡು ಎಂಬ ಕನ್ನಡ ಚಲನಚಿತ್ರದಲ್ಲಿ ಈ ರಚನೆಯನ್ನು ಎಸ್.ಜಾನಕಿ ಅವರು ಸೊಗಸಾಗಿ ಹಾಡಿರುವುದನ್ನೂ ನೀವು ಕೇಳಿರಬಹುದು.
ಅಂದಹಾಗೆ, ತಿರುವನಂತಪುರದ ನವರಾತ್ರಿ ಮಂಡಪಂ ನಲ್ಲಿ, ಇಂದು ಹಾಡುವ ಸ್ವಾತಿ ತಿರುನಾಳ್ ಅವರ ನವರಾತ್ರಿ ಕತಿ, ಕಲ್ಯಾಣಿ ರಾಗದಲ್ಲಿ, ಆದಿತಾಳದಲ್ಲಿರುವ ಪಾಹಿಮಾಂ ಶ್ರೀ ವಾಗೀಶ್ವರೀ ಎಂಬುದು.
ನಾಳೆ, ದಸರೆಯ ಮತ್ತೊಂದು ವಿಶೇಷ ರಚನೆಯೊಂದಿಗೆ ಸಿಗೋಣ.
-ಹಂಸಾನಂದಿ

- hamsanandi ರವರ ಬ್ಲಾಗ್
- Printer-friendly version
- Login or register to post comments
- 755 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ನವರಾತ್ರಿಯ ಎರಡನೇ ದಿನ
ಹಂಸಾನಂದಿಗಳೇ, ನಾಡಹಬ್ಬ ದಸರೆಯ ಈ ಸಂದರ್ಭದಲ್ಲಿ ಒಂದು ಅರ್ಥಪೂರ್ಣ ಮಾಲಿಕೆಯನ್ನು ನಮಗೆಲ್ಲ ನೀಡುತ್ತಾ, ದಿನವೂ ನಿಮ್ಮ ಬರಹಗಳಿಗಾಗಿ ಕಾತರದಿಂದ ನಿರೀಕ್ಷಿಸುವಂತೆ ಮಾಡಿಬಿಟ್ಟಿರಿ.!!!!
ಸವಿಗೆ ಮಿಕ್ಕೂ ಸವಿಯೊದಗು.
ನವರಾತ್ರಿ ದಿಬ್ಬದ ಬಗ್ಗೆ ಪ್ರಕಾಶ ಹೂಗಾರರ ಒಂದು ಬರಹ ಪ್ರಜಾವಾಣಿಯಲ್ಲಿ ಬಂದಿದೆ. ನವರಾತ್ರಿ ದಿಬ್ಬಕ್ಕೂ, ಪರ್ಶಿಯನ್ ಕಲಾವಿದರಿಗೂ ಇರುವ ನಂಟು ಇದರಲ್ಲಿ ಪ್ರಸ್ತಾಪವಾಗಿದೆ. ಓದುಗರಿಗೆ ನೆರವಾಗಲೆಂದು ಆ ಬರಹದ ಕೊಂಡಿ ನೀಡುತ್ತಿದ್ದೇನೆ. ನೆನೆ ನೆನೆ ಮಹಾನವಮಿ ದಿಬ್ಬವ
ಉ: ನವರಾತ್ರಿಯ ಎರಡನೇ ದಿನ
ತೊಂಇರುಳು ಹಬ್ಬದ ಬಗ್ಗೆ ಹೀಗೆ ಬರೇರಿ..
ನಮಗೆಲ್ಲ ಹಲವು ಗೊತ್ತಿಲ್ಲ, ಇನ್ನು ಕೆಲವು ಮರೆತು ಹೋಗವೆ.
ಉ: ನವರಾತ್ರಿಯ ಎರಡನೇ ದಿನ
ಬುವನೇಶ್ವರಿಯ ನೆನೆ ಮಾನಸವೇ....ನನ್ನ ಮೆಚ್ಚಿನ ಹಾಡು.
ನೆನಪಿಸಿದಕ್ಕೆ ನನ್ನಿ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ನವರಾತ್ರಿಯ ಎರಡನೇ ದಿನ
ಮುತ್ತಯ್ಯ ಭಾಗವತರ ಮತ್ತಷ್ಟು ಹಾಡುಗಳನ್ನು ನಿತ್ಯಶ್ರೀ ಎಂಬುವರ ದನಿಯಲ್ಲಿ ಉದ್ಭವ.ಕಾಂನಿಂದ ಇಲ್ಲಿ ಕೇಳಬಹುದು.
Muthaiah Bhagavatar Kritis by S.Nityashree