ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಭಾಮೆಯ ನೋಡಲು ತಾ ಬಂದ

September 12, 2008 - 11:04pm — hamsanandi

ಎಷ್ಟೋ ದಿನಗಳಿಂದ ಯಾವುದಾದರೂ ರಾಗದ ವಿಷಯ ಬರೆಯಬೇಕೆಂದುಕೊಳ್ಳುತ್ತಲೇ ಇದ್ದೆ. ಆದರೆ ಯಾಕೋ ಮುಂದೆ ಹೋಗುತ್ತಲೇ ಹೋಗುತ್ತಿತ್ತು. ಇವತ್ತು ಗೆಳೆಯರೊಬ್ಬರ ಜೊತೆ ಮಾತಾಡುತ್ತ ಇದ್ದಕ್ಕಿದ್ದ ಹಾಗೆ ಸ್ಕೂಲ್ ಮಾಸ್ಟರ್ ಚಿತ್ರದ ಭಾಮೆಯ ನೋಡಲು ತಾ ಬಂದ ಅನ್ನುವ ಹಾಡು ನೆನಪಿಗೆ ಬಂತು.

ಈ ಚಿತ್ರವನ್ನು ನಾನು ನೋಡಿರಲಿಲ್ಲ. ಆದರೆ ಬರೀ ಹಾಡುಗಳನ್ನ ಕೇಳಿದ್ದೆ. ಆ ಕಾಲಕ್ಕೆ ತಕ್ಕ ಹಾಗೆ ಒಳ್ಳೇ ಶಾಸ್ತ್ರೀಯ ಧಾಟಿಯ ಹಾಡುಗಳಿವೆ ಅಂತ ಗೊತ್ತಿತ್ತು. ಆದರೆ ಈಗ ಬೇಕಾದ್ದು ತೋರಿಸಲು ಸಪ್ತಾಕ್ಷರೀ ಮಂತ್ರವಿದೆಯಲ್ಲ Eye-wink (youtube), ಅದನ್ನೇ ಜಪಿಸಿಸಿದೆ. ಸಿಕ್ಕೇಬಿಡ್ತು ಬೇಕಾದ್ದ ಹಾಡು. ಮೊದಲಿಗೆ ಹಾಡು ಕೇಳಿ, ಮತ್ತೆ ಈ ಹಾಡನ್ನು ಏಕೆ ತೆಗೆದುಕೊಂಡೆ ಅಂತ ಹೇಳುವೆ.


ಸೂಲಮಂಗಲಂ ರಾಜಲಕ್ಷ್ಮಿ ಅವರು ಹಾಡಿರೋ ಈ ಹಾಡು ಹಿಂದೋಳ ರಾಗದಲ್ಲಿದೆ. ಈ ಹಿಂದೆ ಕಲ್ಯಾಣಿ, ಮೋಹನ, ಸಿಂಧೂಬೈರವಿ ಮೊದಲಾದ ರಾಗಗಳ ಬಗ್ಗೆ ಬರೆದಿದ್ದೆ. ಹೀಗಾಗಿ, ಇನ್ನೊಂದು ಒಳ್ಳೇ ರಾಗದ ಬಗ್ಗೆ ಬರೀಬೇಕು ಅನ್ನಿಸಿದಾಗ ಹಿಂದೋಳ ರಾಗ ಸಹಜವಾದ ಒಂದು ಆಯ್ಕೆ.

ಕರ್ನಾಟಕ ಸಂಗೀತದಲ್ಲಿ ಹಿಂದೋಳ ಎನ್ನುವ ಹೆಸರಲ್ಲಿ ಮತ್ತೆ ಹಿಂದೂಸ್ತಾನಿಯಲ್ಲಿ ಮಾಲ್‍ಕೌಂಸ್ ಅನ್ನುವ ಹೆಸರಲ್ಲಿ ಬಹಳವೇ ಪ್ರಖ್ಯಾತವಾದ ರಾಗ. ಇದು ಒಂದು ಔಡುವ ರಾಗ - ಅಂದರೆ ಇದರಲ್ಲಿ ಐದು ಸ್ವರಗಳು ಮಾತ್ರ ಬರುತ್ತವೆ.

ಸ ಗ ಮ ದ ನಿ ಸ - ಸ ನಿ ದ ಮ ಗ ಸ ಎನ್ನುವ ಆರೋಹಣ ಅವರೋಹಣಗಳನ್ನು ಈ ರಾಗಕ್ಕೆ ಬರುತ್ತವೆ.  ಸಾಧಾರಣ ಗಾಂಧಾರ, ಶುದ್ಧ ಮಧ್ಯಮ ಶುದ್ಧ ಧೈವತಗಳು ಬರುವ ಈ ರಾಗ ಭಕ್ತಿ, ಶಾಂತ, ಕರುಣಾ ಮೊದಲಾದ ರಸಗಳನ್ನು ಚೆನ್ನಾಗಿ ವ್ಯಕ್ತಪಡಿಸಬಹುದು.ಇನ್ನೂ ಹೆಚ್ಚಿನ  ವಿವರಗಳನ್ನ ಈ ಬರಹದ ಮುಂದಿನ ಭಾಗಗಳಲ್ಲಿ ಕೊಡುವೆ.

ಅಂದ ಹಾಗೆ, ಈ ರಾಗ ಚಲನಚಿತ್ರಗಳಲ್ಲೂ ಬೇಕಾದಷ್ಟು ಕಾಣಿಸಿಕೊಂಡಿವೆ. ಕೆಲವು ಉದಾಹರಣೆಗಳನ್ನು ಇಲ್ಲಿ ಕೇಳೋಣ:

ಮೊದಲಿಗೆ ಭಕ್ತ ಕುಂಬಾರ ಚಿತ್ರದ ಮಾನವ ದೇಹವು ಮೂಳೆ ಮಾಂಸದ ತಡಿಕೆ - ಇದೇ ರಾಗದಲ್ಲಿ ಯೋಜಿಸಿರುವ ಈ ಹಾಡನ್ನು ಕೇಳಿ - ಪಿಬಿಶ್ರೀನಿವಾಸ್ ಅವರ ದನಿಯಲ್ಲಿ.


ಈಗ ಇದೇ ರಾಗದಲ್ಲಿ ಒಂದು ಒಳ್ಳೇ ಯುಗಳ ಗೀತೆ - ನಮ್ಮಲ್ಲಿ ಇಬ್ಬರು ಗಾಯಕಿಯರು ಒಟ್ಟಿಗೆ ಹಾಡಿರುವ ಹಾಡುಗಳು ಕಡಿಮೆಯೇ. ಅಂತಹ ಗೀತೆಗಳಲ್ಲೊಂದು ಸುಂದರ ಗೀತೆ ಇದು - ಹಿಂದೋಳ ರಾಗದ ಚಿತ್ರಗೀತೆಗಳಲ್ಲಿ ನನಗಿದು ಅಚ್ಚುಮೆಚ್ಚು.

ನೋಡಿ - ನಾಂದಿ ಚಿತ್ರದಿಂದ - ಚಂದ್ರಮುಖಿ ಪ್ರಾಣಸಖಿ - ಹಾಡಿರುವವರು ಎಸ್.ಜಾನಕಿ ಮತ್ತು ಬೆಂಗಳೂರು ಲತಾ


ಹಿಂದೋಳ ರಾಗ ಶ್ಲೋಕಗಳನ್ನು ಹಾಡುವುದಕ್ಕ್ಕೆ ಹೇಳಿಸಿದ ರಾಗವೇ. ಇದಕ್ಕೊಂದು ಒಳ್ಳೇ ಉದಾಹರಣೆಯನ್ನು ಕೊಡಲು ಕವಿರತ್ನ ಕಾಳಿದಾಸ ಚಿತ್ರಕ್ಕಿಂತ ದೂರ ಹೋಗಬೇಕಿಲ್ಲ. ಕೆಳಗಿರುವ ಗೀತೆಯಲ್ಲಿನ ಮಾಣಿಕ್ಯವೀಣಾಮುಪಲಾಲಯಂತೀಂ ಎನ್ನುವ ಶ್ಲೋಕ ರಾಗಮಾಲಿಕೆಯಲ್ಲಿದ್ದು, ಅದರಲ್ಲಿ ಮಾತಾ ಮರಕತಶ್ಯಾಮಾ ಎಂಬ ಸಾಲು ಹಿಂದೋಳರಾಗದಲ್ಲಿದೆ. ನಂತರ ಅದು ಕಲ್ಯಾಣಿ ರಾಗಕ್ಕೆ ತಿರುಗುತ್ತದೆ.


ಈ ಸುಂದರ ಶ್ಲೋಕದಿಂದ ಇವತ್ತು ಮುಗಿಸುವೆ - ಮುಂದಿನ ಭಾಗದಲ್ಲಿ ಹಿಂದೋಳದ ಇನ್ನಷ್ಟು ಚರಿತ್ರೆ, ಉದಾಹರಣೆಗಳೊಂದಿಗೆ ಹಾಜರಾಗುವೆ Smiling

-ಹಂಸಾನಂದಿ

 

 

 

  • ಕರ್ನಾಟಕ ಸಂಗೀತ
  • ಕವಿರತ್ಬ ಕಾಳಿದಾಸ
  • ರಾಗ
  • ಸಂಗೀತ
~.~
  • hamsanandi ರವರ ಬ್ಲಾಗ್
  • Login or register to post comments
  • 298 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 13, 2008 - 8:27am — shylaswamy

ಉ: ಭಾಮೆಯ ನೋಡಲು ತಾ ಬಂದ

shylaswamy's picture

ಪ್ರಿಯ ಹಂಸಾನಂದಿಯವರೆ,
ಹೀಗೆ ಪ್ರತಿ ರಾಗವನ್ನೂ ಚಿತ್ರಗೀತೆಗಳ ಮೂಲಕ ಪರಿಚಯ ಮಾಡಿಸುವುದು ತುಂಬಾ ಚೆನ್ನಾಗಿದೆ. ಹಳೆಯ ಒಳ್ಳೆಯ ಹಾಡುಗಳನ್ನು ಕೇಳಿಸುವ ಮೂಲಕ ಶಾಸ್ತ್ರೀಯ ಸಂಗೀತ ತಿಳಿಯದವರೂ ಕೂಡ ಸಂಗೀತದ ಕಡೆ ಮನ ತಿರುಗಿಸುವಂತೆ ಮಾಡುತ್ತಿರುವ ಈ ನಿಮ್ಮ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ಶೈಲಾಸ್ವಾಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 13, 2008 - 9:35am — kalpana

ಉ: ಭಾಮೆಯ ನೋಡಲು ತಾ ಬಂದ

kalpana's picture

ಹೌದು, ಶಾಸ್ತ್ರೀಯ-ಚಲನಚಿತ್ರ, ಇವೆರಡಕ್ಕೂ ಸೇತುವೆ ಬೆಸೆಯುವ ಹಾಗಿರುವ ಹಂಸಾನಂದಿಯವರ ಬರಹಗಳು ಓದುವುದಕ್ಕೆ ನಿಜಕ್ಕೂ interesting!
~ಕಲ್ಪನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 13, 2008 - 10:27am — hpn

ಉ: ಭಾಮೆಯ ನೋಡಲು ತಾ ಬಂದ

hpn's picture

ಸಿನಿಮಾ ಹಾಡು- ಶಾಸ್ತ್ರೀಯ ಸಂಗೀತ ಎರಡೂ ಒಟ್ಟಾದರೆ ಸಿಕ್ಕಾಪಟ್ಟೆ attractive ಕೂಡ, ಅಲ್ವ? Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 15, 2008 - 10:20pm — hamsanandi

ಉ: ಭಾಮೆಯ ನೋಡಲು ತಾ ಬಂದ

hamsanandi's picture

ಶೈಲಾಸ್ವಾಮಿ/ಕಲ್ಪನಾ/ಹರಿ ಅವರೆ,

ಒಳ್ಳೆಯ ಮಾತುಗಳಿಗೆ ಧನ್ಯವಾದಗಳು Smiling

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭೀಮಸೇನ ಜೋಶಿ - ಈಗ ಭಾರತ ರತ್ನ!
  • ಪುರಂದರದಾಸರ ಎರಡು ಪದಗಳು
  • ತೋಡ ಪ್ಯಾರ್‍ ತೋಡ ಮ್ಯಾಜಿಕ್ ಎಂಬ ಮಕ್ಕಳ ಹಿಂದಿ ಸಿನಿಮದಲ್ಲಿ ಈ ಹಾಡು..
  • ಜಪಾನಿಗ ಸಂತೋಶಕ್ಕೆ ಹಾಡಿದ ಕನ್ನಡದ ಹಾಡು
  • ಒಂದು ಏರ್ಟೆಲ್ ಕಾಲರ್ ಟ್ಯೂನ್ ಬೇಕಾಗಿದೆ ?
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೆಸರಲ್ಲೇನಿದೇ ರೀ? ನೀಲಾಂಜನ .. ರಾಮಕ್ರಿಯ .... ಹಂಸಾನಂದಿ ಯಾವ್ದೋ ಒಂದು!
ಒಬ್ಬ ಸಂಪದಿಗ - ಇನ್ನೂ ಹೆಚ್ಚಿಗೆ ಹೇಳ್ಬೇಕಾದ್ರೆ ಒಬ್ಬ ಕನ್ನಡಿಗ ಅಂದ್ರೆ ಸಾಕು. ಅಲ್ವಾ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ
    December 2, 2008 - 10:08am
  • sathvik N V
    ಉ: ನನ್ನ ತಪ್ಪೇ ಅಥವಾ ಸಿನಿಕತನವೇ?
    December 2, 2008 - 10:04am
  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 232 ಅತಿಥಿಗಳು ಆನ್ಲೈನ್ ಇರುವರು.


ಮಾನವರು ಯುಧ್ಧಕ್ಕೆ ಅಂತ್ಯವನ್ನು ತರಬೇಕು, ಇಲ್ಲದಿದ್ದರೆ ಯುಧ್ಧ ಎಲ್ಲರಿಗೂ ಅಂತ್ಯವನ್ನು ತರುತ್ತದೆ.

— ಜಾನ್ ಕೆನಡಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator