ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಉಳ್ಳವರು ಶಿವಾಲಯವ ಮಾಡುವರು
ಇಂದು ಬಸವ ಜಯಂತಿ. ಕರ್ನಾಟಕದ ಧಾರ್ಮಿಕ ಮತ್ತು ಸಾಮಾಜಿಕ ಪರಂಪರೆಯಲ್ಲಿ ಬಲು ಮುಖ್ಯರಾದ ಮೂವರ ಜಯಂತಿಗಳು ಸುಮಾರು ಒಂದೇ ಸಮಯಕ್ಕೆ ಬರುವುದು ( ಬಸವಣ್ಣ, ಶಂಕರಾಚಾರ್ಯ ಮತ್ತು ರಾಮಾನುಜಾಚಾರ್ಯ) ಕಾಕತಾಳೀಯವಾದರೂ, ಗಮನಿಸಬೇಕಾದ ಸಂಗತಿ.
ಇಲ್ಲಿ ಕ್ಲಿಕ್ಕಿಸಿ: ಬಸವ ಜಯಂತಿಯಂದು ನೆನಪಾದ, ನನಗೆ ಇಷ್ಟವಾದ, ಕೆಲವು ವಚನಗಳು ಆಡಿಯೋ ವಿಡಿಯೋ ಸಮೇತ ....
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 381 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಉಳ್ಳವರು ಶಿವಾಲಯವ ಮಾಡುವರು
ಹಂಸಾ ನಂದಿಗಳೇ ...
ಒಮ್ಮೆ ಸಮಯ ಮಾಡಿಕೊಂಡು 'ಸಂಗೀತ-ವಚನ' ಗಳ ಬಗ್ಗೆ ಒಂದು ಬ್ಲಾಗು ಬರೀರಿ.
ದಾಸರ ಕೃತಿಗಳಷ್ಟು ಸಂಗೀತಕ್ಕೆ ವಚನಗಳು ಒಗ್ಗಲ್ಲ ಅಂತ ಒಂದು ವಾದ ಇದೆ. ಒಮ್ಮೆ ಯಾವಾಗಲೋ ಸಂಗೀತಕ್ಕೆ ಸಂಬಂಧ ಪಟ್ಟಂತೆ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯವನ್ನು ತಾಳೆ ನೋಡಿ ಬರೆದ ಅಂಕಣವನ್ನು ಓದಿದ ನೆನಪು.
ವಂದನೆಗಳು!
ಸವಿತೃ
ಉ: ಉಳ್ಳವರು ಶಿವಾಲಯವ ಮಾಡುವರು
ಕೇವಲ ಉತ್ತರಕರ್ನಾಟಕದ ಜನಸಾಮಾನ್ಯರು ಈ ವಚನ ಸಾಹಿತ್ಯವನ್ನು ಹಾಡುವದು ಮತ್ತು ಕೇಳುವದು ಮಾಡುತ್ತಾರೆ, ಇದು ಕಹಿಯಾದರೂ ನಿಜ. ಹಾಗಾದರೆ ದಾಸ ಸಾಹಿತ್ಯದಂತೆ ವಚನ ಸಾಹಿತ್ಯ ಎಲ್ಲರನ್ನೂ ತಲುಪಲು ವಿಫಲವಾಗಿರುವದೇಕೆ ?
ಇದರೆ ಬಗ್ಗೆ ಹಂಸಾನಂದಿಯವರೆ ಒಂದು ಸಮಗ್ರ ಲೇಖನ ಏಕೆ ಬರೆಯಬಾರದು ?
ತುಂಬಾ ಉಪಕಾರವಾಗುತ್ತದೆ.
ಉ: ಉಳ್ಳವರು ಶಿವಾಲಯವ ಮಾಡುವರು
ಒಂದು ಕಾರಣ ಎಂದರೆ, ವಚನಗಳನ್ನು ದಾಸಸಾಹಿತ್ಯದಷ್ಟು ಸುಲಭವಾಗಿ ಸಂಗೀತಕ್ಕೆ ಒಳಪಡಿಸುವುದು ಕಷ್ಟ; ಹೆಚ್ಚಿನ ದಾಸರ ರಚನೆಗಗಳು ಪ್ರಾಸ-ಛಂದಸ್ಸುಗಳನ್ನು ಹೊಂದಿರುತ್ತವಾದ್ದರಿಂದ, ಹಾಡಿಸ್ನಲ್ಲೇ ಒಂದುರೀತಿ ನಿಯತಲಯ ಉಂಟಾಗುತ್ತೆ. ಅದನ್ನು, ಯಾವುದೇ ಮಟ್ಟಿಗೆ ( ಮಟ್ಟು=ಹಾಡುವ ಧಾಟಿ) ಹೊಂದಿಸಲು ಬಹಳ ಕಷ್ಟಪಡಬೇಕಿಲ್ಲ.
ಆದರೆ, ವಚನಗಳಲ್ಲಿ ಈ ನಿಯತ ಲಯ ಕಡಿಮೆ. ಹಾಗಂತ ಇಲ್ಲವೇ ಇಲ್ಲವೆಂದಲ್ಲ. ಆದರೆ, ಆ ರೀತಿಯ ರಚನೆಗಳಿಗೆ ಸಂಗೀತ ಅಳವಡಿಸುವುದಕ್ಕೆ ಸ್ವಲ್ಪ ಹೆಚ್ಚಿನ ಸಂಗೀತದ ತಿಳುವಳಿಕೆ ಬೇಕು. ಇದೇ ಕಾರಣಕ್ಕೆ, ಮನೆಮನೆಯಲ್ಲಿ ದಾಸರ ರಚನೆಗಳು ಹಾಡಿನ ರೂಪದಲ್ಲಿಯೇ ನಿಂತ ರೀತಿಯಲ್ಲಿ, ವಚನಗಳು ಹಾಡಾಗಿ ಉಳಿಯಲಿಲ್ಲವೇನೋ ಎನ್ನಿಸುತ್ತೆ.
-ಹಂಸಾನಂದಿ