ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.
ಇದನ್ನು ರವಿಕೆರೆಡ್ಡಿಯವರ ಬ್ಲಾಗ್ ಬರಹಕ್ಕೆ ಟಿಪ್ಪಣಿಯಾಗಿ ಸೇರಿಸಿದ್ದೆ. ಇನ್ನೂ ಹೆಚ್ಚ್ಜಿನ ಕಣ್ಣುಗಳು ಇದರ ಮೇಲೆ ಬೀಳಬಹುದೆಂಬ ಆಶಯದಲ್ಲಿ ಇಲ್ಲಿ ಮತ್ತೆ ಬರೆಯುತ್ತಿದ್ದೇನೆ:
ಸಂಪದಿಗರೆ,
ಕನ್ನಡ ಸಂಸ್ಕೃತಿ ಇಲಾಖೆಯ ಕನ್ನುಡಿ.ಆರ್ಗ್, ದಾಸಸಾಹಿತ್ಯ.ಆರ್ಗ್ ಮೊದಲಾದುವು ಮಾಯವಾದದ್ದರಬಗ್ಗೆ ಬಹಳ ಖೇದವಿದೆ ನನಗೆ. ಇಷ್ಟು ಬೇಜವಾಬ್ದಾರಿಯಿಂದ ಹೇಗೆ ತಾನೇ ನಡೆದುಕೊಳ್ಳುತ್ತಾರೋ?
ಅದಕ್ಕೆಂದೇ, ಪುರಂದರದಾಸರ ಪದಗಳನ್ನು ರಸಿಕ ಫೋರಮ್ ನ ( http://www.rasikas.org/ ) ವಿಕಿಯಲ್ಲಿ (http://www.rasikas.org/wiki/purandara-compositions) ಹಾಕುವ ಕೆಲಸವನ್ನು ಕೈಗೊಳ್ಳಲಾಗಿದೆ. ಈ ಜಾಲತಾಣ ಸಂಗೀತಾಸಕ್ತರ ತಾಣ. ಹಲವು ಭಾಷೆಗಳನ್ನಾಡುವ ಜನರಿಗೆ ಉಪಯೋಗವಾಗಲೆಂದು, ಹಾಡುಗಳನ್ನು ಇಂಗ್ಲಿಷ್, ಕನ್ನಡ, ದೇವನಾಗರಿ ಮತ್ತು ಇತರ ದಕ್ಷಿಣ ಭಾರತದ ಲಿಪಿಗಳಲ್ಲಿ ಕೊಡುವ ಮತ್ತು ಅರ್ಥವನ್ನೂ ಇಂಗ್ಲಿಷಿನಲ್ಲಿ ಕೊಡುವ ಉದ್ದೇಶವಿದೆ (ಉದಾಹರಣೆಗೆ ಈ ಪುಟ ನೋಡಿ: http://www.rasikas.org/wiki/mullu-koneya .) ಸದ್ಯಕ್ಕೆ ಈಗ ಕೆಲವೇ ಹಾಡುಗಳು ಮಾತ್ರ ಇಲ್ಲಿ ಲಭ್ಯವಿದೆ. ರಸಿಕರೊಬ್ಬರು ತಯಾರಿಸಿರುವ ಸಲಕರಣೆ ಒಂದರ ಸಹಾಯದಿಂದ ಒಂದೇ ಸಲಕ್ಕೆ ಒಂದು ಲಿಪಿಯಿಂದ (ಉದಾಹರಣೆಗೆ ಕನ್ನಡ, ಇಂಗ್ಲಿಷ್) ಉಳಿದೆಲ್ಲ ಲಿಪಿಗಳಿಗೆ ( ಉದಾ: ತಮಿಳು, ದೇವನಾಗರಿ, ತೆಲುಗು, ಮಲೆಯಾಳಂ) ಪರಿವರ್ತಿಸುವ ಸೌಲಭ್ಯವಿದೆ.
ನಿಮ್ಮಲ್ಲಿ ಯಾರಿಗಾದರೂ ಈ ಕೆಲಸದಲ್ಲಿ ಪಾಲ್ಗೊಳ್ಳಲು ಆಸಕ್ತಿ (ಇದು ಬಹಳ ಮುಖ್ಯ) , ಸಮಯ (ಇದು ಎಷ್ಟೇ ಕಡಿಮೆ ಇದ್ದರೂ, ಪರವಾಗಿಲ್ಲ! ಹನಿ-ಹನಿಗೂಡಿದರೆ ಹಳ್ಳ ಎಂಬ ಮಾತು ಕೇಳಿಲ್ಲವೇ?) ಇರುವವರು ದಯವಿಟ್ಟು ನನ್ನನ್ನು ಎ-ಮೆಯ್ಲ್ ಮೂಲಕ ಸಂಪರ್ಕಿಸಿ (hamsanandi_ಎಟ್_ಜಿಮೆಯ್ಲ್.com) . ನನ್ನ ಬಳಿ ಹಾಡುಗಳ ಸಾಹಿತ್ಯ ಇಂಗ್ಲಿಷ್ ನಲ್ಲಿ ಟೈಪ್ ಮಾಡಿರುವುದು ಇದೆ. ಇದರಲ್ಲಿ ಹಲವು ಕಡೆ ತಿದ್ದುಪಡಿ ಆಗಬೇಕಿದೆ. ಹಾಡುಗಳನ್ನು ಓದಿ, ತಿದ್ದಿ, ಬೇರೆ ಲಿಪಿಗಳಿಗೆ (ಸಾಫ್ಟ್ವೇರ್ ಸಹಾಯದಿಂದ) ಪರಿವರ್ತಿಸಿ, ಅದನ್ನು ವಿಕಿಗೆ ಎತ್ತೇರಿಸಬೇಕಾದ್ದು ನಮ್ಮ ಮುಂದಿರುವ ಕೆಲಸ. ಇದನ್ನು ಕನ್ನಡ ಅರ್ಥವಾಗುವವರು ಮಾತ್ರ ಮಾಡಲು ಸಾಧ್ಯ.
ಸಾಧಾರಣವಾದ ಕನ್ನಡ ತಿಳಿವು ಇದ್ದವರು ಯಾರು ಬೇಕಾದರೂ ಇದರಲ್ಲಿ ಕೈಹಾಕಬಹುದು. ಸಂಗೀತ ಸಂಬಂಧಿ ವಿಷಯಗಳಿಗೆ, ಮತ್ತು ಹೆಚ್ಚುವರಿ ತಿದ್ದುಪಡಿಗಳಿಗೆ ನನ್ನ ಸಹಾಯ ಇದ್ದೇ ಇರುತ್ತೆ
ಇದು ಕನ್ನಡಕ್ಕೆ, ಕರ್ನಾಟಕ ಸಂಗೀತಕ್ಕೆ ನಾವು ಮಾಡಬಹುದಾದ ಅಳಿಲುಸೇವಗಳಲ್ಲಿ ಒಂದು!
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 578 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.
ಒಂಚೂರು ಸೇವೆ
ಇವತ್ತು ನಾನು ಮಾಡಿಹೆನು .
ನೋಡಿ
http://www.rasikas.org/wiki/amma-nimma-manegalalli
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.
ಇವತ್ತು ಶುಕ್ರವಾರ ; ಲಕ್ಷ್ಮಿಯ ದಿನ ;
ಅದಕ್ಕೆ
http://www.rasikas.org/wiki/bhagyada-lakshmi-baramma
ನೋಡಿ
ಪರಭಾಷಿಕರಿಗೆ ತೋರಿಸಿ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.
ಮಿಶ್ರಿಕೋಟಿ, ನನಗೆ ಗೊತ್ತಿತ್ತು. ನೀವು ಇದಕ್ಕೆ ಕೈಜೋಡಿಸುತ್ತೀರಿ ಅಂತ. ಅಂದಹಾಗೆ, ಮಿಶ್ರಿಕೋಟಿ ಒಂದು ಕಿವಿಮಾತು. ದೇವನಾಗರಿ ಲಿಪಿಯಲ್ಲಿ ಬರೆದ क ವನ್ನು ಕ್ ಎಂದೇ ತುಂಬಾ ಜನರು ಓದುತ್ತಾರಾದ್ದರಿಂದ, ಕೃಷ್ಣಪ್ಪ ಎನ್ನುವುದನ್ನು कृष्णप्पा ಎಂದು ಬರೆಯಬಹುದಲ್ಲವೇ ?
ಹಂಸಾನಂದಿ, ಈ ವಿಚಾರವಾಗಿ ಏನಾದರೂ ಕಟ್ಟುಪಾಡ ಮಾಡಿಕೊಂಡಿದ್ದಾರೆಯೇ ರಸಿಕ.ಆರ್ಗಿನವರು.
ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.
http://www.rasikas.org/wiki/purandara-compositions ತಾಣದಲ್ಲಿನ ಒಂದು ಪದ್ಯವನ್ನು ಸರಿಪಡಿಸಿ ಬೇರೆ ಲಿಪಿಗಳಿಗೆ ರೂಪಾಂತರಿಸಿ ಮತ್ತೆ ಮರಳಿ ಅಲ್ಲಿ ಏರಿಸುವದನ್ನು ಐದು (ಹೆಚ್ಚೆಂದರೆ ೧೦) ನಿಮಿಷದಲ್ಲಿ ಮಾಡಬಹುದು .
ಈ ಕೆಳಕಂಡ ಹೆಜ್ಜೆಗಳನ್ನು ಅನುಸರಿಸಿ .
ಒಂದು ಸಲ ಮಾಡಬೇಕಾದ್ದು ( ನಿಮ್ಮಲ್ಲಿ ವಿಂಡೋಸ್ , ಮತ್ತು ಬರಹ ೭.೦ ಇದೆ ಅಂತ ನನ್ನ ನಂಬಿಕೆ)
೧. ಒಂದು ಕಡತಕೋಶ (ಫೋಲ್ಡರ್ರು , ಡೈರೆಕ್ಟರಿ ) ಮಾಡಿಕೊಳ್ಳಿ ." >>r2.brh
೨. ಅಲ್ಲಿ Start/Run/cmd ( ಅಥವಾ command ) ಮಾರ್ಗವಾಗಿ command mode ಗೆ ಹೋಗಿ ಆ ಸ್ಥಳಕ್ಕೆ CD ಆದೇಶ ಬಳಸಿ ಹೋಗಿ.
೩. Edit tl.bat ಆದೇಶ ಕೊದಿ
ಆಗ ತೆರೆಯುವ ಕಿಟಕಿಯಲ್ಲಿ ಈ ಕೆಳಕಂಡದ್ದನ್ನು ಟೈಪಿಸಿ ಅಥವಾ ಕತ್ತರಿಸಿ ಅಂಟಿಸಿ .
echo -- >r2.brh
echo "
type r1.brh>>r2.brh
rem echo "<-lan>" >>r2.brh
echo "" >>r2.brh
type r1.brh>>r2.brh
rem echo "<-lan>" >>r2.brh
echo "" >>r2.brh
type r1.brh>>r2.brh
rem echo "<-lan>" >>r2.brh
echo "" >>r2.brh
type r1.brh>>r2.brh
rem echo "<-lan>" >>r2.brh
echo "" >>r2.brh
type r1.brh>>r2.brh
rem echo "<-lan>" >>r2.brh
File /Save ಮೂಲಕ ಅದನ್ನು ಉಳಿಸಿ .
ಪ್ರತಿ ಪದ್ಯಕ್ಕೆ ನೀವು ಮಾಡಬೇಕಾದ್ದು
೧. http://www.rasikas.org/wiki/purandara-compositions ಗೆ ಹೋಗಿ
೨. ತಿದ್ದಿ ಮರಳಿ ಏರಿಸಬೇಕಾದ ಒಂದು ಪದ್ಯ ಆಯ್ದುಕೊಳ್ಳಿ
೩. Edit the page ಕ್ಲಿಕ್ಕಿಸಿ
೪. ಅಲ್ಲಿರುವ ಪಠ್ಯದಲ್ಲಿ ಸೂಕ್ತ ಪಠ್ಯವನ್ನು ಕಾಪಿ ಮಾಡಿ .
೫. ಬರಹ ಕ್ಕೆ ಹೋಗಿ ಆಲ್ಲಿ ಕೆಳ ಕಿಟಕಿಯಲ್ಲಿ ಕ್ಲಿಕ್ಕಿಸಿ ಪೇಸ್ಟ್ ಮಾಡಿ , ಅದನ್ನು ಸೂಕ್ತವಾಗಿ ಸರಿಪಡಿಸಿ
೬. ನಂತರ ಅದನ್ನು ಮೇಲೆ ಹೇಳಿದ ಡೈರೆಕ್ಟರಿಯಲ್ಲಿ r1 ಎಂದು ಉಳಿಸಿ .
೭ command mode ಗೆ ಹೋಗಿ tl ಬರೆದು ಎಂಟರ್ ಒತ್ತಿ
೮. ಬರಹಕ್ಕೆ ಬಂದು r2 ತೆರೆದು ಮೇಲಿನ ಕಿಟಕಿಯಲ್ಲಿ ರೈಟ್ ಕ್ಲಿಕ್ ಮಾಡಿ copy special ಆಯ್ದು text unicode ಆಯ್ದು OK ಕ್ಲಿಕ್ಕಿಸಿ
೯. ನಂತರ ನಿಮ್ಮ ಬ್ರೌಸರ್ರಿಗೆ ಹೋಗಿ ಅಲ್ಲಿನ edit the page ಕಿಟಕಿಯಲ್ಲಿ ಇಂಗ್ಲೀಷಿನ ನಂತರ ಪೇಸ್ಟ್ ಮಾಡಿ save ಮಾಡಿ .
ನಿಮ್ಮ ಅಳಿಲು ಸೇವೆ ಸಂದಿದೆ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.
ಇನ್ನು ಹಲಂತ ಮತ್ತು ವಿಟ್ಠಲ ಯಾಕೆ ಇತ್ಯಾದಿ ಪ್ರಶ್ನೆಗೆ ಉತ್ತರ
೧. ನನಗೆ ಅದೆಲ್ಲ ಗೊತ್ತಿಲ್ಲ
ಪರತತ್ವವನು ಬಲ್ಲ ಪಂಡಿತನು ನಾನಲ್ಲ
:(
ಕನ್ನಡ ಕೂಡ ನನಗಷ್ಟೇನೂ ತಿಳಿದಿಲ್ಲ
. ಬಲ್ಲವರು , ಆ ತಾಣದವರು ಅದನ್ನು ನೋಡಿಕೊಳ್ಳಲಿ
೨. ಕನ್ನಡದಲ್ಲಿ ನಡೆಯುವದು ಹೀಗೆ - ಎಂದು ಡೀವೀಜಿಯವರ ಪುಸ್ತಕದಲ್ಲಿದೆ .
ಒಂದ್ಸಲ ಯಾರೋ ತೀರ್ಕೊಂಡ್ರು . ಅದಕ್ಕೆ ಒಂದು ಸಂತಾಪ ಸೂಚಕ ಸಭೆ , ಅಂಗೀಕರಿಸಬೇಕಾದ ಒಂದು ನಿರ್ಣಯ ಕುರಿತು ಏನೆಲ್ಲ ಚರ್ಚೆ , ಅದರ ವಾಕ್ಯ ಕುರಿತು ಏನೆಲ್ಲ ಆಕ್ಷೇಪ ...
ಪೂರ್ತಿ ನನಗೆ ನೆನಪಿಲ್ಲ . ನೆನಪಿದ್ದಷ್ಟು ಹೇಳುವೆ .
ಶ್ರೀ ...... ಅವರು ಸ್ವರ್ಗಸ್ಥರಾದುದದಕ್ಕೆ ನಮ್ಮ ಸಂತಾಪಗಳು ...
೧. ಅವರು ಸ್ವರ್ಗಕ್ಕೇ ಹೋದರೆಂದು ನಿಮಗೆ ಹೇಗೆ ಗೊತ್ತು ?
೨. ಅವರು ಸ್ವರ್ಗಕ್ಕೆ ಹೋದರೆ ನಿಮಗೆ ದು:ಖ ? ಅವರು ನರಕಕ್ಕೆ ಹೋಗ್ಬೇಕಿತ್ತೇ ? ... ಇತ್ಯಾದಿ
ಕೊನೆಗೆ ಡೀವೀಜಿ ಕೇಳ್ತಾರೆ - ಕನ್ನಡದಲ್ಲಿ ಏನೊಂದೂ ಕೆಲಸ ಏಕೆ ಆಗೋದಿಲ್ಲ ? ಅನ್ನೋದು ನಿಮಗೆ ಗೊತ್ತಾಯ್ತಲ್ಲ ? ಅಂತ !
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.
ನಿಮ್ಮ ಬಗ್ಗೆ ಆಕ್ಷೇಪಿಸಿದ್ದಲ್ಲ. ಸಹಜವಾಗಿ ಮೂಡಿದ ಅನುಮಾನವನ್ನು ಕೇಳಿದ್ದು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.
ನಾನು ಸಾಫ್ಟ್‍ವೇರ್ ಇ೦ಜಿನೀಯರಲ್ಲ. ಹೀಗಾಗಿ ಈ ಸ೦ಕೇತಗಳನ್ನು ಅರ್ಥೈಸಿಕೊಳ್ಳಲು ಹೆಣಗಬೇಕಾಗಿದೆ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.
೧. ಚಿಂತಿಸಬೇಡಿ,ನಾನೂನು ಸಾಫ್ಟ್‍ವೇರ್ ಇ೦ಜಿನೀಯರಲ್ಲ.
೨. ಇದನ್ನೆಲ್ಲ ಅರ್ಥೈಸಿಕೊಳ್ಳಲು ಹೆಣಗಬೇಡಿ.
ನೀವು ಮಾಡಬೇಕಾದ್ದನ್ನು ಸರಳವಾಗಿ ಹೇಳಿದ್ದೇನೆ ಅಂತ ತಿಳಕೊಂಡಿದ್ದೇನೆ. ಸಂಪದ ಬಳಸ್ತೀರಂದ್ರೆ ನಾನು ಹೇಳಿದ್ದನ್ನು ನೀವು ಮಾಡಿಕೊಂಡು ಹೋಗಬಹುದು. ಪ್ರಯತ್ನಿಸಿ ನೋಡಿ. ಬೇಕಿದ್ದರೆ ಯಾರದಾದರೂ ಸಹಾಯ ಪಡೆಯಿರಿ. ನಾನೂ ಬೇಕಾದರೆ ಸಹಾಯ ಮಾಡ್ತೇನೆ . ಆಯ್ತಾ?
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.
ಶ್ರೀಕಾಂತ್, ಕೃಷ್ಣಪ್ರಕಾಶ್,
ಈ ಕೆಲವು ಅನುಮಾನಗಳನ್ನು ನಾವು ಇ-ಮೈಲ್ ಮೂಲಕ ಪರಿಹರಿಸಿಕೊಳ್ಳೋಣ. ನಾನು ಒಂದು ಇ-ಮೈಲ್ ಕಳಿಸುತ್ತೇನೆ ಲಿಸ್ಟ್ ಗೆ.
-ಹಂಸಾನಂದಿ
ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.
ಶ್ರೀಕಾಂತ್, ಕೃಷ್ಣಪ್ರಕಾಶ್,
ಈ ಕೆಲವು ಅನುಮಾನಗಳನ್ನು ನಾವು ಇ-ಮೈಲ್ ಮೂಲಕ ಪರಿಹರಿಸಿಕೊಳ್ಳೋಣ. ನಾನು ಒಂದು ಇ-ಮೈಲ್ ಕಳಿಸುತ್ತೇನೆ ಲಿಸ್ಟ್ ಗೆ.
-ಹಂಸಾನಂದಿ
ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.
ಮೇಲೆ
echo "" >>r2.brh
ಎಂದು
ಮೊದಲ ಬಾರಿ ಇರುವಲ್ಲಿ
ಈ ಕೆಳಗಿನಂತೆ ತಿದ್ದಿ
" ಮತ್ತು " ಗಳ ನಡುವೆ ಮೊದಲು ಒಂದು "<" ನಂತರ ಕೂಡಲೇ ( ಹೊಸ ಸಾಲಿನಲ್ಲಲ್ಲ )
lang=hin
ನಂತರ ಕೂಡಲೇ ">"
ಇದೇ ತರಹ echo "" >>r2.brh ಇರುವಲ್ಲೆಲ್ಲ ಬದಲಿಸಬೇಕು - ಆದರೆ ಒಂದು ಬದಲಾವಣೆ ಯೊಂದಿಗೆ hin ಬದಲಾಗಿ ಕ್ರಮವಾಗಿ
kan , tel , tam , mal
ಬರೆಯಬೇಕು .
ನಾನು ಇಡೀ ಸಾಲನ್ನು ಹಾಕಿದ್ದೆನಾದರೂ - ಸಂಪದ ದಲ್ಲಿ ಅದು ತಾಂತ್ರಿಕ ಕಾರಣಕ್ಕಾಗಿ ಮೂಡಿ ಬರುತ್ತಿಲ್ಲ ;
tl ಬರೆದು Enter ಒತ್ತುವ ಬದಲು ವಿಂಡೋಸ್ ಬ್ರೌಸರ್ ನಲ್ಲೇ ಆ ಡಿರೆಕ್ಟರಿಯಲ್ಲಿನ tl ಕಡತ ಕ್ಲಿಕ್ಕಿಸಲೂ ಬಹುದು .
ನಾನು ಕಾಮೆಂಟ್ ಮುನ್ನೋಟ ನೋಡಬೇಕಿತ್ತು ; ಬೊಳಂಬು ಅವರ ಪ್ರತಿಕ್ರಿಯೆಗೆ ಪ್ರತಿಕ್ರಿಯಿಸುವ ಮೊದಲಾದರೂ ನನ್ನ ಟಿಪ್ಪಣಿ ಹೇಗೆ ಮೂಡಿ ಬಂದಿದೆ ಅಂತ ನೋಡಬೇಕಿತ್ತು . ತಪ್ಪಾಯಿತು . ಕ್ಷಮೆ ಇರಲಿ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.
ಬಂದದ್ದೆಲ್ಲಾ ಬರಲಿ !
http://www.rasikas.org/wiki/bandaddella-barali
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.
ಶ್ರೀಕಾಂತರೆ,
”ಆಡದೆ ಮಾಡುವನು ರೂಢಿಯೊಳಗುತ್ತಮನು" ಎನ್ನುವ ಸರ್ವಜ್ಞ್ಯನ ನುಡಿಯನ್ನು ನೀವು ತೋರಿಸಿದ್ದೀರ
ಧನ್ಯವಾದಗಳು.
ದೇವನಾಗರಿಯಲ್ಲಿ ಇದ್ದರೂ, ಅದನ್ನು ಸಂಸ್ಕೃತವೆಂದು ಓದಿದರೆ, ಹಲಂತವನ್ನು (ಅಂದರೆ ಅರ್ಧಾಕ್ಷರದ ಗುರುತು) ತೋರಿದರೆ ಮಾತ್ರ ಅರ್ಧಾಕ್ಷರದ ಉಚ್ಚಾರಣೆ ಎಂದುಕೊಳ್ಳಬಹುದು. ಆಗ, ಕೃಷ್ಣಪ್ಪಾ ಎಂದು ಬರೆಯುವ ಅಗತ್ಯವಿಲ್ಲವೆಂದು ನನ್ನ ಭಾವನೆ. ಕೆಲವುಕಡೆ (ಮುಖ್ಯವಾಗಿ ಕನ್ನಡದಲ್ಲಿ ಓದುವಾಗಲೇ ಇದು ಸ್ವಲ್ಪ ಅಸಹಜವಾಗಿ ಕಾಣುತ್ತೆ). (ಉದಾಹರಣೆಗೆ: ತನು ನಿನ್ನದು ಜೀವನಾ ನಿನ್ನದು?)
ನಾನು ಒಂದು ಕೆಲಸ ಮಾಡುತ್ತೇನೆ. ನನ್ನ ಬಳಿ ಇರುವ ಇಂಗ್ಲಿಷ್-transliterated ಸಾಹಿತ್ಯವನ್ನು ಒಂದೊಂದಾಗಿ ವಿಕಿಯಲ್ಲಿ ಏರಿಸುತ್ತೇನೆ. (ಈಗ ಕೇವಲ ಕೆಲವೇ ಹಾಡುಗಳು ಅಪ್ಲೋಡ್ ಆಗಿವೆ). ಆಗ, ಹೊಸದಾಗಿ ಪೂರ್ತಿ ಅಚ್ಚಿಸುವ ಅಗತ್ಯ ಬಾರದು. ಅದರಲ್ಲಿರುವ ತಪ್ಪುಗಳನ್ನು ತಿದ್ದುಪಡಿ ಮಾಡುವ ಕೆಲಸ ನಾವು ಸಂಪದಿಗರು ಕೈಗೊಳ್ಳಬಹುದು. ಸಾಮಾನ್ಯ ಕನ್ನಡದ ತಿಳಿವು, ಮತ್ತೆ ನಿಮ್ಮ ಬಳಿ ಇರಬಹುದಾದ ಪುಸ್ತಕಗಳು ಇವೆರಡರ ಸಹಾಯವನ್ನೂ ನಾವು ಪಡೆದುಕೊಳ್ಳಬಹುದು.
೨೦೦೮ ರಲ್ಲಿ ಕನ್ನಡ ಅಂತರ್ಜಾಲ ಪ್ರಪಂಚಕ್ಕೆ ಇದೊಂದು ಕೊಡುಗೆಯಾಗಲಿ! ನನಗೆ ಇ-ಮೈಲ್ ಕಳಿಸಿರುವವರಿಗೆ ನಾನು ಇ-ಮೈಲ್ ನಲ್ಲಿ ಪ್ರತ್ಯೇಕವಾಗಿ ಉತ್ತರಿಸುತ್ತೇನೆ.
-ಹಂಸಾನಂದಿ
ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.
ನಾನು ನಿಮಗೆ ಮಿನ್ನಿಸಿದ್ದೇನೆ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.
'ವಿಠಲ' ಸಾಲದೇ 'ವಿಟ್ಠಲ' ಯಾಕೆ?
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು