ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ

October 6, 2008 - 10:34am — hamsanandi

ಇವತ್ತು ನವರಾತ್ರಿಯ ಏಳನೇ ದಿನ. ಮತ್ತೆ ಇವತ್ತೇ ಹೆಚ್ಚು ಜನರ ಮನೆಯಲ್ಲಿ ಸರಸ್ವತೀ ಪೂಜೆ ಕೂಡ. ಕೆಲವರು ಮಹಾನವಮಿಯ ಆಯುಧಪೂಜೆಯ ದಿನ ಸರಸ್ವತೀ ಪೂಜೆ ಮಾಡುವುದೂ ಉಂಟು.ಸರಸ್ವತಿ ಎಂದರೆ ನನಗೆ ನೆನಪಾಗುವುದು ಶೃಂಗೇರಿಯ ಶಾರದೆ. ಅದೆಂತಹ ಪ್ರಶಾಂತ ಸ್ಥಳ? ಅಲ್ಲಿ ದಸರೆಯ ಸಮಯದಲ್ಲಿ ನಡೆಯುವುವ ಪೂಜೆಗಳೂ ಹೆಚ್ಚಾಯದ್ದೇ. ಮಳಗಾಲ ಮುಗಿಯುತ್ತ ಬಂದಿರುವುದರಿಂದ ತಿಳಿಯಾಗಿ ಹರಿಯುವ ತುಂಗೆ. ಅದಕ್ಕೇ ಇರಬೇಕು ಶೃಂಗೇರಿಯ ಶಾರದೆಯ ಮೇಲಿರುವ ಸಂಗೀತ ರಚನೆಗಳಿಗೂ ಕೊರತೆ ಇಲ್ಲ.

ಕೆಲವು ಪ್ರಸಿದ್ಧ ಸರಸ್ವತೀ ಸ್ತುತಿಗಳನ್ನು ಕನ್ನಡಕ್ಕೆ(ಭಾವಾನುವಾದದಲ್ಲಿ) ತಂದಿರುವೆ. ಓದಿ, ನಂತರ ಹಾಡು ಕೇಳಬಹುದು. ಅಲ್ಲವೇ?

ಸರಸತಿಯೆ ತಲೆಬಾಗುವೆನು ಮನದಾಸೆಗಳನೀವಳೆ
ಅರಿವಿನಾಸೆಯೆನಗಿರಲು ಹರಸು ಕೈಗೂಡುತಿರಲೆಂದು

(ಮೂಲ:
ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣೀ
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ )

ಶಾರದೆಯೆ ನಮಿಸುವೆನು ಕಾಶ್ಮೀರದಲಿ ನೆಲೆಸಿಹಳೆ
ಕೋರುವೆನು ಅನುದಿನವು ಅರಿವು ತಿಳಿವನು ನೀಡು

(ಮೂಲ:
ನಮಸ್ತೇ ಶಾರದಾ ದೇವೀ ಕಾಶ್ಮೀರ ಪುರವಾಸಿನೀ
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾ ಬುದ್ಧಿಂ ಚ ದೇಹಿಮೇ)

ಮೈಯ ಬಣ್ಣವೋ ಬೆಳ್ಪು ಮಂಜುಮಲ್ಲಿಗೆತಿಂಗಳನಿತು; ಬಿಳಿಯುಟ್ಟು
ಕೈಯಲಿ ಪೊಳೆವ ವರವೀಣೆ ಪಿಡಿದು ನಿಂದಿರುವೆ ಬೆಳ್ದಾವರೆಯಲಿ
ತಾಯೆ! ಆ ಬೊಮ್ಮಹರಿಶಿವರಿಂದಲೂ ಸಲ್ಲುವುದು ಪೂಜೆ ನಿನಗೆ!
ಕಾಯೆ ಸರಸತಿಯೆ ಇಂದೆನ್ನ ಕೈಬಿಡದೆ ಉಳಿಸದೇ ಅಲಸಿಕೆಯನು

(ಮೂಲ:
ಯಾ ಕುಂದೇಂದು ತುಷಾರಹಾರ ಧವಳಾ ಯಾ ಶುಭ್ರ ವಸ್ತ್ರಾವೃತಾ
ಯಾ ವೀಣಾವರದಂಡಮಂಡಿತ ಕರಾ ಯಾ ಶ್ವೇತಪದ್ಮಾಸನಾ
ಯಾಬ್ರಹ್ಮಾಚ್ಯುತ ಶಂಕರಪ್ರಭೃತಿಭಿಃ ದೇವೈಃ ಸದಾ ಪೂಜಿತಾ
ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷ ಜಾಡ್ಯಾಪಹಾ )
(ಮಹೇಶರೇ, ಅನುವಾದದಲ್ಲಾದ ಬದಲಾವಣೆಯನ್ನು ಗಮನಿಸಿ Smiling )

ಪದ್ಮಚರಣ್ ಆಕಾಶವಾಣಿ ಬೆಂಗಳೂರು ಕೇಂದ್ರವನ್ನು ೮೦ರ ದಶಕದಲ್ಲಿ ಕೇಳುತ್ತಿದ್ದವರಿಗೆ ಸುಪರಿಚಿತ ಹೆಸರು. ಪಿಟೀಲು ವಿದ್ವಾಂಸರಾಗಿದ್ದ ಕೃಷ್ಣಮಾಚಾರ್ ಅವರು ಪ್ರಸಿದ್ಧಿ ಗಳಿಸಿದ್ದು ಅವರ ಪದ್ಮಚರಣ್ ಎಂಬ ಹೆಸರಿನಿಂದಲೇ. ಆಕಾಶವಾಣಿ ಕಲಾವಿದರಾಗಿದ್ದ ಅವರು, ಶಾಸ್ತ್ರೀಯ ಸಂಗೀತದಲ್ಲೂ, ಜೊತೆಗೆ ಭಾವಗೀತೆಗಳಿಗೆ ರಾಗ ಸಂಯೋಜನೆ ಮಾಡು ವುದರಲ್ಲೂ ಪ್ರಸಿದ್ಧಿ ಹೊಂದಿದ್ದರು. ಕಲ್ಯಾಣಿ ರಾಗ ಇವರಿಗೆ ಬಹಳ ಇಷ್ಟವಾಗಿದ್ದರಿಂದ, ಆ ರಾಗದ ಛಾಯೆಯಲ್ಲಿರುವ ಹಲವು ಸುಗಮ ಸಂಗೀತ ಸಂಯೋಜನೆ ಮಾಡಿದ್ದರಿಂದ ಇವರಿಗೆ ಕಲ್ಯಾಣಿ ಪದ್ಮಚರಣ್ ಎಂದೇ ಕರೆಯುತ್ತಿದ್ದರೆಂದು ತಿಳಿದವರೊಬ್ಬರು ಒಮ್ಮೆ ನನಗೆ ಹೇಳಿದ್ದರು.

ಅದಕ್ಕೇ
ಇವತ್ತು ನಾನು ಪದ್ಮಚರಣ್ ಅವರು ಶೃಂಗೇರಿ ಶಾರದೆಯ ಮೇಲೆ ರಚಿಸಿರುವ ಒಂದು ಕೃತಿಯನ್ನು
ನಿಮಗೆ ಕೇಳಿಸಬಯಸುವೆ. ವಿದ್ವಾನ್ ಬೆಂಗಳೂರು.ಎಸ್.ಶಂಕರ್ ಅವರ ದನಿಯಲ್ಲಿ.


ಶೃಂಗಪುರಾಧೀಶ್ವರೀ ಶಾರದೇ - ರಾಗ ಕಲ್ಯಾಣಿ

ಹಾಡಿನಲ್ಲಿ ಬಂದ ರಾಗಮುದ್ರೆ (ಕಲ್ಯಾಣಿ) ಮತ್ತು ವಾಗ್ಗೇಯಕಾರ ಮುದ್ರೆಯನ್ನು ಗಮನಿಸಿದಿರಾ?

-ಹಂಸಾನಂದಿ

  • ಅನುವಾದ
  • ಎಸ್ ಶಂಕರ್
  • ಕಲ್ಯಾಣಿ
  • ದಸರಾ
  • ನವರಾತ್ರಿ
  • ಪದ್ಮಚರಣ್
  • ಯಾಕುಂದೇಂದು
  • ಸರಸ್ವತಿ
~.~
  • hamsanandi ರವರ ಬ್ಲಾಗ್
  • Login or register to post comments
  • 281 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 6, 2008 - 11:20am — shylaswamy

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ

shylaswamy's picture

ಪ್ರಿಯ ಹಂಸಾನಂದಿಯವರೆ,
ಈದಿನ ಶೃಂಗೇರಿ ಶಾರದೆಯ ಮೇಲಿನ ರಚನೆ ಇರಬಹುದೆಂದು (ನನಗೆ ಹಾಗನ್ನಿಸಿತ್ತು) ನಿನ್ನೆಯಿಂದಲೇ ಕೇಳಲು ತಯಾರಾಗಿದ್ದೆ. ಆದರೆ ಈದಿನ ಬೆಳಿಗ್ಗೆ ಹಾಕಿದರೆ ನಿಮ್ಮ ಬ್ಲಾಗ್ ಅಲ್ಲಿ ಇಲ್ಲವೇ ಇಲ್ಲ ಅಶ್ಚರ್ಯದೊಂದಿಗೆ ನಿರಾಶೆಯಾಯಿತು. ಉಂಡು ಸಂಭ್ರಮಿಸುತ್ತಿದ್ದ ನಮಗೆ ಇಂದು ಉಪವಾಸವೇನೋ ಎಂದು ಅನ್ನಿಸಿತ್ತು. ಇದೇಕೆ ಹೀಗೆ ಎಂದು ಸ್ವಲ್ಪ ಚಿಂತೆಯೂ ಆಯಿತು. ದಿನ ಸವಿ ಸವಿ ಹಬ್ಬದ ಅಡಿಗೆ ಮಾಡಿ ಉಣಬಡಿಸುತ್ತಿದ್ದ ಅಡುಗೆ ಬಟ್ಟರ ಆರೋಗ್ಯಕ್ಕೆ ಏನಾದರೂ ತೊಂದರೆ ಆಯಿತೆ ಎಂದು. ಸಧ್ಯ ಸ್ವಲ್ಪ ತಡವಾದರೂ ನಳಪಾಕ ಬಂತಲ್ಲ. ತುಂಬಾ ಸಂತೋಷವಾಗಿದೆ. ಉಣಬಡಿಸುವವರಿಗೆ ಏನೂ ತೊಂದರೆ ಆಗಿಲ್ಲ ಎಂಬ ಸಮಾಧಾನವೂ ಆಯಿತು. ಧನ್ಯವಾದಗಳು.
ಶೈಲಾಸ್ವಾಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 7, 2008 - 12:45am — hamsanandi

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ

hamsanandi's picture

ಅಡುಗೆ ಭಟ್ಟರ ಮನೆಗೆ ಬಂದ ಅತಿಥಿಗಳ ಸತ್ಕಾರದಲ್ಲಿ, ಅಡುಗೆ ಮಾಡುವುದು ತಡವಾಯಿತು ಎಂದುಕೊಳ್ಳಿ Smiling

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 12:30pm — csomsekraiah

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ

csomsekraiah's picture

ಹಂಸಾನಂದಿಯವರೆ
’ಶೃಂಗಪುರಾಧೀಶ್ವರೀ ಶಾರದೇ’ ಕೇಳಿಸಿದ್ದಕ್ಕಾಗಿ ಧನ್ಯವಾದಗಳು .

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 2:31pm — Nagaraj.G

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ

Nagaraj.G's picture

ನಾಗರಾಜ್. ಜಿ
ಹಂಸಾನಂದಿಯವರೇ ತಮಗೆ ಸಂಪದಬಳಗದವರೆಲ್ಲಾ ಸೇರಿ ಬಿರುದನ್ನು ನೀಡಬೇಕರಿ!!!!!
ನಮ್ಮ ಸಂಪದ ಬಳಗದವರು ಎನಂತಿರೀ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 7, 2008 - 7:57am — Sunil Jayaprakash

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ

Sunil Jayaprakash's picture

ಈ ದಿನದ ನೆಗೆತ ಈ ಬ್ಲಾಗಿನಲ್ಲಿರುವ ಹಾಡಿನ ಕೊಂಡಿಯಿಂದ ಮೊದಲುಗೊಂಡಿತು. ಮನಸ್ಸಿಗೆ ತುಂಬಾ ನಲಿವಾಯಿತು. ನನ್ನಿ ಹಂಸಾನಂದಿ.

ಗೆಳೆಯರೇ, ಸರಸ್ವತಿ ಸ್ತೋತ್ರದ ಪ್ರಸ್ತಾಪ ಬಂದಾಗ, ಕನ್ನಡದೊಳು ಈವರೆಗಿನ ಹಳೆಯ ಕೃತಿಯಾದ, "ಕವಿರಾಜಮಾರ್ಗ"ದಲ್ಲಿಯ ಶ್ಲೋಕವೊಂದನ್ನು ಹಂಸಾನಂದಿಗಳು ಹಾಡಿದ್ದಾರೆ. ಹಂಸಾನಂದಿಗಳೇ, ಇದರ ಕೊಂಡಿಯನ್ನೂ ಎಲ್ಲರಿಗೂ ದಯವಿಟ್ಟು ನೀಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 7, 2008 - 8:01am — Sunil Jayaprakash

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ

Sunil Jayaprakash's picture

ಇಲ್ಲಿ, ಹಂಸಾನಂದಿವಯರದೇ ಆದ ಹಿಂದಿನ ಒಂದು ಬ್ಲಾಗಿನ ಕೊಂಡಿ ನೀಡುವುದು ಚೆನ್ನಾಗಿರತ್ತದೆಂದೆಣಿಸಿ -- ಸರ್ವಶುಕ್ಲಾ ಸರಸ್ವತೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 7, 2008 - 8:45am — mahesha

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ

mahesha's picture

ಚೆನ್ನಾಗಿದೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಯಾ ಕುಂದೇಂದು ತುಷಾರಹಾರ ಧವಳಾ ...
  • ನವರಾತ್ರಿಯ ಒಂಬತ್ತನೆಯ ದಿನ
  • ಸಂಗೀತ ನವರಾತ್ರಿ - ಆಶ್ಬಯುಜ ಶುದ್ಧ ಪಂಚಮಿ
  • ಹತ್ತು ಮುತ್ತುಗಳು: ರಾಗ ಕಲ್ಯಾಣಿ - ಭಾಗ ೨
  • ನವರಾತ್ರಿಯ ಆರನೇ ದಿನ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೆಸರಲ್ಲೇನಿದೇ ರೀ? ನೀಲಾಂಜನ .. ರಾಮಕ್ರಿಯ .... ಹಂಸಾನಂದಿ ಯಾವ್ದೋ ಒಂದು!
ಒಬ್ಬ ಸಂಪದಿಗ - ಇನ್ನೂ ಹೆಚ್ಚಿಗೆ ಹೇಳ್ಬೇಕಾದ್ರೆ ಒಬ್ಬ ಕನ್ನಡಿಗ ಅಂದ್ರೆ ಸಾಕು. ಅಲ್ವಾ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 387 ಅತಿಥಿಗಳು ಆನ್ಲೈನ್ ಇರುವರು.


ಹಣವು ಗೊಬ್ಬರದಂತೆ; ನೀವು ಅದನ್ನು ಚೆನ್ನಾಗಿ ಹರಡಬೇಕು, ಇಲ್ಲದಿದ್ದರೆ ಅದು ಎಲ್ಲೆಡೆ ವಾಸನೆಯಾಗುತ್ತದೆ.

— ಜೆ. ಪಾಲ್ ಗೆಟ್ಟಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator