ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಹಂಸ ನಾದ
ಹಂಸ ನುಡಿದರೆ, ಹಂಸನಾದ!
(ಮನೆ) ಅಳಿಯ! ಮನೆ ತೊಳಿಯ !!
ದಿನವಿಡೀ ಮುನಿಸು ಎಂದಿಗೂ ವಕ್ರ
ಬಯಸುವನು ಮರಿಯಾದೆಯನು ಸದಾ
ಕನ್ಯಾರಾಶಿಯಲಿ ನೆಲೆನಿಂತಿಹನೋ ಈ
(ಮನೆ*) ಅಳಿಯನೆಂಬ ಹತ್ತನೇ ಗ್ರಹ!
ಸಂಸ್ಕೃತ ಮೂಲ - ಕನ್ನಡ ಕಂದರ ಕೃಪೆಯಿಂದ
ಸದಾ ರುಷ್ಟಃ ಸದಾ ವಕ್ರಃ ಸದಾ ಪೂಜಾಮಪೇಕ್ಷತೇ
ಕನ್ಯಾರಾಶಿಸ್ಥಿತೋ ನಿತ್ಯಂ ಜಾಮಾತಾ ದಶಮೋ ಗ್ರಹಃ||
*: ಮೂಲದಲ್ಲಿ ಮನೆ ಅಳಿಯನೆಂದಿಲ್ಲ; ಬರೀ ಅಳಿಯನೆಂದಿದೆ
ಆದರೆ, ಸ್ವಸ್ಥಾನಕ್ಕೆ ಹೋಗದೆ, ’ಕನ್ಯಾ’ ರಾಶಿ
ಯಲ್ಲೇ ನೆಲೆನಿಂತಿದ್ದಾನೆ ಎಂದು ಕವಿ ಹೇಳುವಾಗ, ಅವನು ಕಾಡುವ ಮನೆ ಅಳಿಯನೇ ಆಗಿರಬೇಕೆಂದು ನನಗೆ ತೋರಿತು!
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 221 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: (ಮನೆ) ಅಳಿಯ! ಮನೆ ತೊಳಿಯ !!
ಅಳಿಯ ಹತ್ತನೇ ಗ್ರಹವಲ್ಲ-ಒಂಭತ್ತನೆಯದು ಎಂದು ಜೋಷಿಗಳು ಹೇಳಿದ್ದು ನೆನಪಾಯಿತು!
*ಅಶೋಕ್
ಉ: (ಮನೆ) ಅಳಿಯ! ಮನೆ ತೊಳಿಯ !!
ಅದು ಪರ್ವಾಗಿಲ್ರಿ - ಯಾಕಂದ್ರೆ ನಮ್ಮ ನವಗ್ರಹಗಳಲ್ಲಿ ಪ್ಲೂಟೋ ಇರಲಿಲ್ಲವಲ್ಲ
-ಹಂಸಾನಂದಿ
ಹರಿದಾಸ ಸಂಪದ:- http://haridasa.in/