ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಬೆನ್ನು ತಟ್ಟಿದವರು :-)
ಯಾರಾದರೂ ಬೆನ್ನು ತಟ್ಟಿದರೆ ಯಾರಿಗೆ ತಾನೇ ಸಂತೋಷವಾಗುವುದಿಲ್ಲ?
ಅದೂ, ಅಪರಿಚಿತರು ಒಂದು ಒಳ್ಳೆ ಮಾತು ಹೇಳಿದರೂ ಮನಸ್ಸಿಗೆ ಹಿತವಾಗುವುದು ಸಹಜ. ಇದೇ ಕಾರಣಕ್ಕೆ, ಭಾರೀ ಸಂಗೀತಗಾರರೂ ಕೂಡ, ಕಾರ್ಯಕ್ರಮದ ನಂತರ ಒಬ್ಬ ಕೇಳುಗ ಅವರ ಬಳಿ ಹೋಗಿ ಇಂದಿನ ಕಾರ್ಯಕ್ರಮ ಚೆನ್ನಾಗಿತ್ತು, ಈ ರಾಗ ಈ ಕೃತಿ ಹಿಡಿಸಿತು ಎಂಬುದನ್ನು ಹೇಳಿದರೆ ಆನಂದಪಡುತ್ತಾರೆ. ಇದನ್ನು ಪ್ರಖ್ಯಾತ ಕಲಾವಿದೆಯರಾದ ಮೈಸೂರು ನಾಗಮಣಿ ಶ್ರೀನಾಥ್, ಸುಧಾ ರಘುನಾಥನ್ ಮೊದಲಾದವರು ಸ್ವತಃ ಹೇಳಿದ್ದನ್ನು ಕೇಳಿರುವೆ.
ಇಷ್ಟೆಲ್ಲ ಮಾತಿಗೆ ಕಾರಣವೇನು ಎಂದಿರಾ? ಇವತ್ತು ಕೆಂಡಸಂಪಿಗೆ ಪೋರ್ಟಲ್ ದಿನಪತ್ರಿಕೆಯ ದಿನದ ಬ್ಲಾಗ್ ಆಗಿ ಹಂಸ ನಾದ
ಕಾಣಿಸಿಕೊಂಡಿದೆ.
-ಹಂಸಾನಂದಿ
(ನನ್ನ (mostly) ಇಂಗ್ಲಿಷ್ ಬ್ಲಾಗ್ ಅಲ್ಲಿದೆ ನಮ್ಮ ಮನೆ:- http://neelanjana.wordpress.com/ )

- hamsanandi ರವರ ಬ್ಲಾಗ್
- Login or register to post comments
- 415 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಬೆನ್ನು ತಟ್ಟಿದವರು :-)
ಹಂಸಾನಂದಿಗಳೇ, ನನಗೆ ಈ ದಿನವಷ್ಟೇ ತಿಳಿಯಿತು. ಕೆಂಡಸಂಪಿಗೆಯವರು ನನ್ನ ಬ್ಲಾಗಿನ ಬಗ್ಗೆಯೂ ಬರೆದಿದ್ದಾರೆ. ಅದೂ ಮಾರ್ಚ್ ೧೨ರಷ್ಟು ಹಿಂದೆಯೇ. ಅಂದರೆ ಒಂದು ತಿಂಗಳ ಹಿಂದೆ.
ನಾನು ಈ ದಿನವಷ್ಟೇ ನೋಡಿದೆ. ನನಗೂ ತುಂಬಾ ಸಂತೋಷವಾಯಿತು.