ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಸಂಗೀತ ನವರಾತ್ರಿ - ಆಶ್ಬಯುಜ ಶುದ್ಧ ಪಂಚಮಿ

October 3, 2008 - 9:42pm — hamsanandi

ರಾಗಮಾಲಿಕೆಗಳ ಬಗ್ಗೆ ನಾನು ಹಿಂದೇ ಒಂದು ಬಾರಿ ಬರೆದಿದ್ದೆ. ಹೇಗೆ ಬಗೆಬಗೆ ಹೂವುಗಳನ್ನು ಸೇರಿಸಿ ಕಟ್ಟಿದ ಮಾಲೆ ಕಣ್ಣಿಗೆ ಸುಂದರವೋ, ಹಾಗೇ ಬೇರೆ ಬೇರೆ ರಾಗಗಳನ್ನು ಸೇರಿಸಿ ಹೊಸೆದ ರಾಗಮಾಲಿಕೆಗಳೂ ಕಿವಿಗೆ ಕೇಳಲು ಚೆನ್ನ. ಅದರಲ್ಲೂ ದೇವೀ ಸ್ತುತಿಯ ಬಗ್ಗೆ ಹೇಳುವಾಗ ಇನ್ನೊಂದು ಅನುಕೂಲವಿದೆ. ಸ್ತ್ರೀ ಸಮಾನತೆ ಅದು ಇದು ಅಂತ ಯಾರು ಏನಾದರೂ ಹೇಳಿಕೊಂಡರೂ, ಸಂಗೀತವು ಸ್ವಲ್ಪ ಸ್ತ್ರೀ ಪಕ್ಷಪಾತಿ ಅನ್ನುವುದರಲ್ಲೆರಡು ಮಾತಿಲ್ಲ. ಎಲ್ಲ ಕಲೆಗಳಿಗೆ ಆಕರವೆಂದು ನಾವು ನಂಬಿರುವ ಸರಸ್ವತಿ ಹೆಣ್ಣಾಗಿರುವುದೇ ಇದಕ್ಕೆ ಕಾರಣವಿರ್ಬೇಕು. ಅದಿರಲಿ, ನಾನು ಏನು ಹೇಳೋದಕ್ಕೆ ಹೊರಟೆ ಅಂದರೆ ರಾಗಗಳ ಹೆಸರುಗಳಲ್ಲಿ ಹೆಣ್ಣಿನ ಹೆಸರು (ಅಥವಾ ವಿಶೇಷಣಗಳೇ) ಹೆಚ್ಚಿಗೆ ಇವೆ. ಆದ್ದರಿಂದ  ದೇವಿಯ ಬಗ್ಗೆ ರಾಗಮಾಲಿಕೆ ಮಾಡಿ, ಅದರಲ್ಲಿ ರಾಗಗಳ ಹೆಸರುಗಳನ್ನು ಸೇರಿಸುವುದಕ್ಕೊಂದು ಒಳ್ಳೇ ಅವಕಾಶವಿದೆ.

ಈ ರೀತಿಯ ರಾಗಮಾಲಿಕೆಗಳಲ್ಲೊಂದಾದ ರಂಜನಿಮಾಲಾ ಬಗ್ಗೆ ಕಳೆದ ನವರಾತ್ರಿಯಲ್ಲಿ ಬರೆದಿದ್ದೆ. ಇದೇ ಅಲ್ಲದೆ ತರಂಗಂಬಾಡಿ ಪಂಚನದ ಅಯ್ಯರ್ ಅವರ ’ಆರಭಿ ರಾಗಪ್ರಿಯೇ ಶಂಕರಿ’ ಎಂಬ ಹದಿನಾರು ರಾಗಗಳ, ಪ್ರತಿಸಾಲಿನಲ್ಲೂ ರಾಗಮುದ್ರೆ ಇರುವ,  ತಮಿಳು ಭಾಷೆಯಲ್ಲಿರುವ ರಾಗಮಾಲಿಕೆ ಜನಪ್ರಿಯವಾಗಿದ್ದು, ಇದರ ಕನ್ನಡ ಅನುವಾದವೂ ಕೆಲವು ಬದಲಾವಣೆಗಳೊಂದಿಗೆ ಪ್ರಚಲಿತದಲ್ಲಿದೆ. ಮುತ್ತುಸ್ವಾಮಿ ದೀಕ್ಷಿತರ 'ಪೂರ್ಣಚಂದ್ರಬಿಂಬ ವಿಜಯವದನೇ’ ಎಂಬ ಆರು ರಾಗಗಳ ರಾಗಮಾಲಿಕೆಯೂ ಸೊಗಸಾಗಿದ್ದು, ಅದರಲ್ಲಿ ಪೂರ್ಣಚಂದ್ರಿಕಾ, ನಾರಾಯಣಿ, ಸರಸ್ವತೀ ಮನೋಹರಿ, ಶುದ್ಧವಸಂತ, ಹಂಸಧ್ವನಿ ಮತ್ತು ನಾಗಧ್ವನಿ ರಾಗಗಳಲ್ಲಿ ರಚಿತವಾಗಿದೆ.

ಆದರೆ ಇವತ್ತು ನಾನು ನಿಮಗೆ ಕೇಳಿಸುವ ರಾಗಮಾಲಿಕೆ ಇದ್ಯಾವುದೂ ಅಲ್ಲ! ಇವತ್ತು ಪಂಚಮಿ ಅಲ್ಲವೇ? ಅದಕ್ಕೇ ಐದು ರಾಗಗಳ ಪಂಚಕಲ್ಯಾಣಿ ರಾಗಮಾಲಿಕೆಯನ್ನು ಕೇಳೋಣ. ಸಂಗೀತದ ಅಧಿದೇವಿಯಾದ ವಾಣಿಯನ್ನು ನೆನೆಯುವ ಈ ರಾಗಮಾಲಿಕೆಯ ಸಾಹಿತ್ಯ ಶತಾವಧಾನಿ ಡಾ.ಗಣೇಶ್ ಅವರದ್ದಾಗಿದ್ದರೆ, ಇದಕ್ಕೆ ಸಂಗೀತ ಒದಗಿಸಿ ಹಾಡಿರುವುದು ಡಾ.ನಾಗವಲ್ಲಿ ನಾಗರಾಜ್.

 


ಕಲ್ಯಾಣಿ, ಮೋಹನ ಕಲ್ಯಾಣಿ, ಹಮೀರ್ ಕಲ್ಯಾಣಿ, ಪೂರ್ವಿಕಲ್ಯಾಣಿ ಮತ್ತು ಯಮುನಾಕಲ್ಯಾಣಿ ರಾಗಗಳಲ್ಲಿರುವ ಈ ರಾಗಮಾಲಿಕೆಯನ್ನು ಕೇಳಿ ಆನಂದಿಸಿ. ಪ್ರತಿ ಚರಣದಲ್ಲೂ ಆಯಾ ರಾಗ ಮುದ್ರೆ ಬಂದಿರುದನ್ನು ಗಮನಿಸಿದಿರಾ?

-ಹಂಸಾನಂದಿ.

  • ಕಲ್ಯಾಣಿ
  • ಗಣೇಶ್
  • ದಸರಾ
  • ನವರಾತ್ರಿ
  • ನಾಗವಲ್ಲಿ
  • ರಾಗ
  • ರಾಗಮಾಲಿಕೆ
  • ಶತಾಧಾನಿ
  • ಸಂಗೀತ
  • ಹಬ್ಬ
~.~
  • hamsanandi ರವರ ಬ್ಲಾಗ್
  • Login or register to post comments
  • 206 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 4, 2008 - 10:11am — shylaswamy

ಉ: ಸಂಗೀತ ನವರಾತ್ರಿ - ಆಶ್ಬಯುಜ ಶುದ್ಧ ಪಂಚಮಿ

shylaswamy's picture

ಮನ ಸೂರೆಗೊಂಡಿತು ಪಂಚಕಲ್ಯಾಣಿ ರಾಗಮಾಲಿಕೆ. ಶೈಲಾಸ್ವಾಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 4, 2008 - 10:58am — shaamala

ಉ: ಸಂಗೀತ ನವರಾತ್ರಿ - ಆಶ್ಬಯುಜ ಶುದ್ಧ ಪಂಚಮಿ

shaamala's picture

ಹಂಸಾನಂದಿಯವರೆ,

ಪಂಚಕಲ್ಯಾಣಿ ರಾಗಮಾಲಿಕೆ ಡಾ. ನಾಗವಲ್ಲಿಯವರ ವಿದ್ವತ್ಪೂರ್ಣ ಗಾಯನದಲ್ಲಿ ಸೊಗಸಾಗಿ ಬಂದಿದೆ. ನನಗೆ ನಿನ್ನೆಯಲ್ಲ ಏನೂ ಕೇಳಲೂ ಮನಸ್ಸೂ ಇರಲಿಲ್ಲ, ಸಮಯವೂ ಇರಲಿಲ್ಲ. ಹೀಗಾಗಿ ನೀವು ಹಾಕಿರುವ ಚತುರ್ಥಿಯ ದಿನದ ಹಾಡನ್ನೂ ಇವತ್ತು ಕೇಳಲು ನೋಡಿದೆ. ವೀಡಿಯೊ/ಆಡಿಯೋ ಅಷ್ಟು ಸರಿಯಾಗಿ ಬರಲಿಲ್ಲ. ನಾನು firefox, IE 7 ಎರಡರಲ್ಲೂ ಪ್ರಯತ್ನ ಮಾಡಿದೆ.

ಡಾ. ನಾಗವಲ್ಲಿಯವರು ನಮ್ಮಲ್ಲಿಗೆ ಬಂದಿದ್ದಾಗ ಹಾಡಿದ ಹಾಡುಗಳು ಇನ್ನೂ ಗುನುಗುನಿಸುತ್ತಿವೆ. ಅವರ ಕಂಠ ಮಾಧುರ್ಯ, ವ್ಯಾಪ್ತಿ ಅಸೀಮ.

ಎಂದಿನಂತೆಯೇ, ನವರಾತ್ರಿಯ ಸಲುವಾಗಿ ಸೊಗಸಾದ ಔತಣ ಬಡಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು.

ಶೈಲಾ ಮೇಡಂ,

ನಿಮಗೆ ವೀಡಿಯೊ ತೊಂದರೆ ಕೊಡಲಿಲ್ಲವೇ?

ಶಾಮಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 4, 2008 - 11:22am — shylaswamy

ಉ: ಸಂಗೀತ ನವರಾತ್ರಿ - ಆಶ್ಬಯುಜ ಶುದ್ಧ ಪಂಚಮಿ

shylaswamy's picture

ಇಲ್ಲವಲ್ಲ ನನಗೆ ಏನೂ ತೊಂದರೆ ಆಗಲಿಲ್ಲ.ನಾನು ಎರಡು ಮೂರು ಸಲ ಹಾಕಿ ಕೇಳಿದೆ. ತುಂಬಾ ಚೆನ್ನಾಗಿಯೇ ಬಂದಿದೆ. ನಿಮಗೆ ಏಕೆ ತೊಂದರೆ ಕೊಟ್ಟಿತೋ ತಿಳಿಯುತ್ತಿಲ್ಲ. ಈಗ ನೀವು ಕೇಳಿದಿರೆಂದು ಮತ್ತೊಂದು ಸಲ ಹಾಕಿದೆ. ಚೆನ್ನಾಗಿಯೇ ಬರುತ್ತಿದೆ. ಶೈಲಾಸ್ವಾಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 4, 2008 - 8:23pm — mowna

ಉ: ಸಂಗೀತ ನವರಾತ್ರಿ - ಆಶ್ಬಯುಜ ಶುದ್ಧ ಪಂಚಮಿ

mowna's picture

ಹಂಸನಂದಿ ಅವರೆ,
ರಾಗಮಾಲಿಕೆಗಳ ಬಗ್ಗೆ ತಮ್ಮ ಲೇಖನ ಮಾಹಿತಿಯೊಂದಿಗೆ ಸಂಗೀತದ ರಸದೌತಣ ನೀಡಿದೆ. ನಿಮಗೆ ಧನ್ಯವಾದಗಳು.
ನನಗೆ "ಶ್ರೀ ಚಕ್ರರಾಜ ಸಿಂಹಾಸನೇಶ್ವರಿ ಶ್ರೀಲಲಿತಾಂಬಿಕೈಯೆಃ" ಎಂಬ ಹಾಡಿನ ಬಗ್ಗೆ ವಿವರ ಮತ್ತು " ನವರತ್ನ ಮಾಲಿಕ ಸ್ತೋತ್ರಮ್" ಇವೆರಡು ಕೇಳುವಾಸೆ ತಮ್ಮ ಬಳಿ ಇದ್ದರೆ ದಯವಿಟ್ಟು ತಿಳಿಸಿ. ಹಾಗೆ ಕೇಳುವ ಭಾಗ್ಯ ನೀಡುವಿರಿ ಎಂಬ ಮಹದಾಸೆಯಿಂದ ತಮ್ಮಲ್ಲ್ಲಿ ಕೋರಿಕೆ ಇಟ್ಟಿರುವೆ.

ಮೌನ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭೀಮಸೇನ ಜೋಶಿ - ಈಗ ಭಾರತ ರತ್ನ!
  • ಪುರಂದರದಾಸರ ಎರಡು ಪದಗಳು
  • ಭಾಮೆಯ ನೋಡಲು ತಾ ಬಂದ
  • ಅವಮಾನ್ ಅಂದರೆ ಯಾರು ? He man :-)
  • ಅನೇಕತಾ ಮೆ ಏಕತಾ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೆಸರಲ್ಲೇನಿದೇ ರೀ? ನೀಲಾಂಜನ .. ರಾಮಕ್ರಿಯ .... ಹಂಸಾನಂದಿ ಯಾವ್ದೋ ಒಂದು!
ಒಬ್ಬ ಸಂಪದಿಗ - ಇನ್ನೂ ಹೆಚ್ಚಿಗೆ ಹೇಳ್ಬೇಕಾದ್ರೆ ಒಬ್ಬ ಕನ್ನಡಿಗ ಅಂದ್ರೆ ಸಾಕು. ಅಲ್ವಾ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
ಇನ್ನಷ್ಟು
ಈಗಿನಂತೆ 15 ಸದಸ್ಯರು ಮತ್ತು 446 ಅತಿಥಿಗಳು ಆನ್ಲೈನ್ ಇರುವರು.


ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator