ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ತದಿಗೆ

October 1, 2008 - 11:31pm — hamsanandi

ಹಬ್ಬದ ಸಂಭ್ರಮವಿರಬೇಕಾದ ಸಮಯದಲ್ಲಿ ಏಕೋ ಎಲ್ಲೆಲ್ಲೂ ಅಶಾಂತಿಯ ವಾತಾವರಣ. ನೂಕು-ನುಗ್ಗಲಿನಲ್ಲಿ ನೂರಾರು ಮಂದಿಯ ಮರಣ. ಬೀಳುತ್ತಿರುವ ಶೇರು ಮಾರುಕಟ್ಟೆ. ಮತ್ತೆ ಅದರಿಂದ ತೊಂದರೆಗೊಳಗಾಗುತ್ತಿರುವ ಸಾಮಾನ್ಯ ಜನತೆ. ಕೆಲವು ತಡೆಯಲಾರದ ದುರಂತಗಳಾದರೆ, ಕೆಲವು ಸ್ವಯಂಕೃತಾಪರಾಧಗಳು. ಈಗ ಗಾಂಧೀಜಿಯವರು ಹೇಳುವಂತೆ ’ಸಬ್ ಕೋ ಸನ್ಮತಿ ದೇ ಭಗವಾನ್’ ಎಂದು ಹೇಳಿಕೊಳ್ಳುತ್ತ ಮುನ್ನಡೆವುದೊಂದೇ ದಾರಿಯೋ ಏನೋ ಎನ್ನಿಸುತ್ತೆ. ಕಾಲದ ಪ್ರವಾಹದಲ್ಲಿ ತಡೆದು ನಿಲ್ಲಬಲ್ಲವರಾರು?

ಅದೇ ರೀತಿ, ಸಂಗೀತ ಅನ್ನುವುದೂ ನಿಂತ ನೀರಲ್ಲ. ಅದರಲ್ಲಿಯೂ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಸಂಗೀತ ಹೇಗೆ ಒಂದು ಕಲಾಪ್ರಕಾರವೋ, ಅದೇ ರೀತಿ ಒಂದು ಗಣಿತದ ಬುನಾದಿಯಮೇಲೂ ನಿಂತಿದೆ. ಹೇಗೆ ಹೊಸ ಹೊಸ ರಸಾಯನಗಳನ್ನು ಪ್ರಯೋಗಶಾಲೆಯಲ್ಲಿ ತಯಾರಾಗುತ್ತಿರುತ್ತವೋ, ಅದೇ ರೀತಿ ಹೊಸ ಹೊಸರಾಗಗಳೂ ಸಂಗೀತ ಪ್ರಪಂಚಕ್ಕೆ ಸೇರುತ್ತಲೇ ಹೋಗುತ್ತವೆ. ಅದರಲ್ಲಿ ಜಳ್ಳು ಯಾವುದು, ಒಳ್ಳೆಯದು ಯಾವುದು ಎನ್ನುವುದನ್ನು ಕಾಲವೇ ಹೇಳುತ್ತೆ.

ಪೀರಿಯಾಡಿಕ್ ಟೇಬಲ್ ವಿಷಯ ಎಲ್ಲರಿಗೂ ಗೊತ್ತೇ ಇದೆ. ಅಣು ಪರಮಾಣುಗಳನ್ನು ಒಂದು ಕ್ರಮದಲ್ಲಿ ಇಡುತ್ತಾ ಹೋದಾಗ, ಅದರಲ್ಲಿ ಹೋಲಿಕೆ ಇರುವಂತಹ ಮೂಲವಸ್ತುಗಳೆಲ್ಲ ಒಂದು ಪಟ್ಟಿಯಲ್ಲಿ ಇರುವಂತೆ ಮಾಡುವ ಸಲಕರಣೆ ಇದು. ಒಂದು ನೇರಸಾಲಿನಲ್ಲಿರುವ ಮೂಲವಸ್ತುಗಳು ಸ್ವಭಾವಗಳಲ್ಲಿ ಹೋಲಿಕೆ ಇರುತ್ತೆ ಎನ್ನುತ್ತೆ ರಸಾಯನ ಶಾಸ್ತ್ರ. ಈ ವಿಂಗಡಣೆ ಮಾಡಿಟ್ಟಾಗ, ಕೆಲವು ಖಾಲಿ ಜಾಗಗಳಲ್ಲಿ ಯಾವುದೇ ಮೂಲಧಾತು ಇಲ್ಲದೇ ಹೋಗಿದ್ದರಿಂದಲೇ ಅಲ್ಲವೇ ೧೭-೧೮-೧೯ನೇ ಶತಮಾನಗಳಲ್ಲಿ ಆಲ್ಲಿ ಇರಬೇಕಾದ ಧಾತುಗಳಿಗೆ ವಿಜ್ಞಾನಿಗಳು ಹುಡುಕಿ ಯಶಸ್ವಿಯಾಗಿದ್ದು?

ಕರ್ನಾಟಕ ಸಂಗೀತದಲ್ಲೂ ಇದೇ ರೀತಿಯ ಒಂದು ಪ್ರಯೋಗ ಮಾಡುವ ಮನೋಭಾವ ಬೆಳೆದದ್ದನ್ನು ೧೬-೧೯ನೇ ಶತಮಾನದಲ್ಲಿ ನಾವು ಕಾಣುತ್ತೇವೆ. ರಾಗಗಳನ್ನು ಗುಂಪುಗುಂಪಾಗಿ ವಿಂಗಡಿಸಲು ಮೇಳಗಳನ್ನು ಹೇಳಲಾಗಿದ್ದು ಇದರ ಮೊದಲ ಹೆಜ್ಜೆ. ವಿದ್ಯಾರಣ್ಯರ ಕಾಲಕ್ಕೆ (ಸುಮಾರು ಕ್ರಿ.ಶ.೧೩೫೦) ರೂಢಿಗೆ ಬಂದ ಈ ಪದ್ಧತಿ ೨೦೦-೩೦೦ ವರ್ಷ ಕಳೆಯುವಷ್ಟರಲ್ಲಿ ಗಣಿತ-ತರ್ಕಗಳ ಉಪಯೋಗದಿಂದ ವೆಂಕಟಮಖಿಯ  ೭೨ ಮೇಳಗಳ ಪದ್ಧತಿಯ ಚೌಕಟ್ಟನ್ನು ಹಾಕಿಕೊಟ್ಟಿತು. ಇದರಿಂದ ನಂತರ ಬಂದ ಪ್ರಾಯೋಗಿಕ ಮನೋಭಾವವುಳ್ಳ ಸಂಗೀತಗಾರರಿಗೂ, ವಾಗ್ಗೇಯಕಾರರಿಗೂ ತಮ್ಮ ಕಲ್ಪನೆಯನ್ನು ಹರಿಬಿಡಲು ಅನುವು ಮಾಡಿಕೊಟ್ಟಿತು.ವೆಂಕಟಮಖಿಯ ಕಾಲಕ್ಕೆ (~ಕ್ರಿ.ಶ ೧೬೫೦)ಪ್ರಸಿದ್ಧವಾದದ್ದು ಕೇವಲ ೧೯ ಮೇಳಗಳು. ಅವನು ಅವುಗಳ ಬಗ್ಗೆ ವಿವರಿಸಿ, ತಾನೇ ಸ್ವಂತ ಸಿಂಹರವ ಎಂಬ ಹೊಸ ರಾಗವನ್ನು ತನ್ನ ಪದ್ಧತಿಗೆ ಅನುಗುಣವಾಗಿ ರಚಿಸಿದ್ದೇನೆ ಎಂದು ಹೇಳಿ, ಮುಂದಿನ ಪೀಳಿಗೆಗಳು ಇನ್ನುಳಿದ ೫೨ ಮೇಳರಾಗಗಳನ್ನು ಕಲ್ಪಿಸಬಹುದು ಎಂದು ಅವನ ಚತುರ್ದಂಡಿ ಪ್ರಕಾಶಿಕೆಯಲ್ಲಿ ಹೇಳಿದ್ದಾನೆ.

ಅಂತಹ ಒಬ್ಬ ದೊಡ್ಡ ಪ್ರಯೋಗಪಟು ಮುತ್ತುಸ್ವಾಮಿ ದೀಕ್ಷಿತರು (ಕ್ರಿ.ಶ 1775 - ಕ್ರಿ.ಶ. 1835 )ವೆಂಕಟಮಖಿ ಹಾಕಿಕೊಟ್ಟ ಚೌಕಟ್ಟಿನಲ್ಲಿ ಹೊಸ ಹೊಸ ಮೇಳರಾಗಗಳನ್ನು ಪ್ರಾಯೋಗಿಕವಾಗಿ ಕಲ್ಪಿಸಿ, ಮತ್ತು ಆ ಎಲ್ಲ ೭೨ ಮೇಳರಾಗಳಲ್ಲೂ ರಚನೆ ಮಾಡಿದವರಲ್ಲಿ ಅವರೇ ಮೊದಲಿಗರು.

ಇವತ್ತು ನಾನು ನಿಮಗೆ ಕೇಳಿಸುವ ರಚನೆ ಮುತ್ತುಸ್ವಾಮಿ ದೀಕ್ಷಿತರ ಒಂದು ದೇವಿಯ ಕುರಿತಾದ ರಚನೆ. ಅದು ಇರುವುದು ಈ ಮೊದಲೇ ವೆಂಕಟಮಖಿಯೇ ಕಲ್ಪಿಸಿದ್ದ ಸಿಂಹರವ ಎಂಬ ರಾಗದಲ್ಲಿ. ಇದನ್ನು ಮೇಳಸಂಖ್ಯೆ ಕಂಡುಹಿಡಿಯುವ ಸೌಕರ್ಯಕ್ಕಾಗಿ ಮಾಡಿದ ಕಟಪಯಾದಿ ಸೂತ್ರದ ಪ್ರತ್ಯಯ ಸೇರಿಸಿ ’ದೇಶಿ ಸಿಂಹರವ’ ಅನ್ನುವುದು, ಅಥವಾ ಅದಕ್ಕೆ ಇನ್ನೊಂದು ಪದ್ಧತಿಯಲ್ಲಿ ಹೆಸರಾದ ಹೇಮವತಿ, ಅಥವಾ ಹೈಮವತಿ ಎಂಬ ಹೆಸರಿನಲ್ಲಿ ಕರೆಯುವುದು ರೂಢಿಯಾಗಿದೆ.

ತಮಿಳುನಾಡಿನ ತಿರುನೆಲ್ವೇಲಿಯ ನೆಲ್ಲೈಯಪ್ಪರ್ ಗುಡಿಯಲ್ಲಿರುವ ದೇವಿಯ ಬಗ್ಗೆ ಇರುವ ರಚನೆ. ಇಲ್ಲಿ ಶಿವ-ಪಾರ್ವತಿಯರನ್ನು ನೆಲ್ಲೈಯಪ್ಪರ್ ಮತ್ತು ಕಾಂತಿಮತಿ ಎಂಬ ಹೆಸರುಗಳಿಂದ ಪೂಜಿಸಲಾಗುತ್ತೆ. ಕೃತಿ ಸಂಸ್ಕೃತದಲ್ಲಿದ್ದು ಪೂರ್ಣ ಸಾಹಿತ್ಯ ಹೀಗಿದೆ:

ಶ್ರೀ ಕಾಂತಿಮತಿಂ ಶಂಕರ ಯುವತಿಂ ಶ್ರೀ ಗುರುಗುಹ ಜನನೀಂ ವಂದೇಹಂ || ಪಲ್ಲವಿ||

ಹ್ರೀಂಕಾರ ಬೀಜಾಕಾರಸದನಾಂ ಹಿರಣ್ಯ ಮಣಿಮಯ ಶೋಭಾಸದನಾಂ
ಪಾಕಶಾಸನಾದಿ ವಿನುತಾಂ ಪರಶುರಾಮ ನತ ಹಿಮಶೈಲಸುತಾಂ
ಶುಕ ಶೌನಕಾದಿ ಸದಾರಾಧಿತಾಂ ಶುದ್ಧ ತಾಮ್ರಪರ್ಣೀ ತಟಸ್ಥಿತಾಂ
ಶಂಖಾದ್ಯಷ್ಟೋತ್ತರಸಹಸ್ರಕಲಶಾಭಿಷೇಕಾಂ ಮೋದಾಮ್ ಸುರಹಿತಾಂ || ಚರಣ||

ಇದನ್ನು ನೀವಿಲ್ಲಿ ವಿದುಷಿ ನಾಗವಲ್ಲಿ ನಾಗರಾಜ್ ಮತ್ತು ರಂಜನಿ ನಾಗರಾಜ್ ಅವರ ಕೊರಲಲ್ಲಿ ಕೇಳಬಹುದು.

-ಹಂಸಾನಂದಿ

  • ಕಾಂತಿಮತಿ
  • ದೇವಿ
  • ನವರಾತ್ರಿ
  • ನಾಗವಲ್ಲಿ
  • ಪಾರ್ವತಿ
  • ಮುತ್ತುಸ್ವಾಮಿ ದೀಕ್ಷಿತ
  • ಮೈಸೂರು
  • ವೆಂಕಟಮಖಿ
  • ಹಬ್ಬ
  • ಹೇಮಾವತಿ
  • ಹೈಮವತಿ
~.~
  • hamsanandi ರವರ ಬ್ಲಾಗ್
  • Login or register to post comments
  • 276 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 2, 2008 - 9:02am — shylaswamy

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ತದಿಗೆ

shylaswamy's picture

ಪ್ರಿಯ ಹಂಸಾನಂದಿಯವರೆ.
ನವರಾತ್ರಿಯ ಹಬ್ಬ ನಿಮ್ಮ ಲೇಖನಗಳು, ನೀವು ಕೇಳಿಸುವ ಕೃತಿಗಳು ಇವುಗಳಿಂದ ಸಂತೋಷದಿಂದ ಕಳೆಯುತ್ತಿದೆ. ಇವತ್ತಿನ ಸಂಗೀತ ಕೇಳಿ ಮುಗಿಸಿದಕೂಡಲೇ ನಾಳೆ ಯಾವ ರಾಗ ಕೇಳಿಸುವಿರೋ ಎಂಬ ಕುತೂಹಲದೊಂದಿಗೆ ಪ್ರತಿದಿನದ ಮನೆ ಕಲಸ ಪ್ರಾರಂಭವಾಗುತ್ತದೆ. ಬೇರೆ ಬೇರೆ ಕಡೆ ಸಂಗೀತ ಕೇಳುತ್ತಿದ್ದರೂ ನೀವು ಈ ದಿನ ಯಾವ ಕೃತಿ ಕೇಳಿಸುತ್ತೀರಿ ಎಂಬ ಕುತೂಹಲವಂತೂ ಇದ್ದೇ ಇರುತ್ತದೆ. ಅದನ್ನು ಮೊದಲು ಹಾಕಿ ಆಮೇಲೆ ರೈಧುನ್ ಅಥವಾ ಉದ್ಭವ.ಕಾಂ ಯಾವುದಾದರೂ ಹಾಕುವುದು. ನೆನ್ನೆಯ ತೋಡಿ ರಾಗ ಕೇಳಿದೆ. ಆದರೆ ಪ್ರತಿಕ್ರಿಯಿಸಲು ಸಮಯವಿಲ್ಲದಂತಾಯಿತು. ನಿಮ್ಮ ನವರಾತ್ರಿಯ ದಿನಗಳು ಪುಟಗಳನ್ನೂ ಓದಿ ಅಲ್ಲಿ ಲಿಂಕ್ ಮಾಡಿದ್ದ ಕೃತಿಗಳನ್ನೂ ಕೇಳಿದ್ದಾಯ್ತು. ನಿಮ್ಮ ಸಂಗೀತ ಪ್ರೀತಿ ನಮಗೆಲ್ಲಾ ಸಂತೋಷ ನೀಡುತ್ತಿದೆ. ಧನ್ಯವಾದಗಳು.
ಶೈಲಾಸ್ವಾಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 1:58am — hamsanandi

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ತದಿಗೆ

hamsanandi's picture

ನಿಮಗೆ ಬರಹ ಮತ್ತು ಸಂಗೀತ ಹಿತ ತಂದದ್ದು ಕೇಳಿ ಬಹಳ ಸಂತೋಷವಾಯಿತು Smiling

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭೀಮಸೇನ ಜೋಶಿ - ಈಗ ಭಾರತ ರತ್ನ!
  • ಪುರಂದರದಾಸರ ಎರಡು ಪದಗಳು
  • ಏನೀ ಮಹಾನಂದವೇ? ಓ ಭಾಮಿನಿ!
  • ಸಂಗೀತ ನವರಾತ್ರಿ - ಆಶ್ಬಯುಜ ಶುದ್ಧ ಪಂಚಮಿ
  • ಒಂದು ಏರ್ಟೆಲ್ ಕಾಲರ್ ಟ್ಯೂನ್ ಬೇಕಾಗಿದೆ ?
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೆಸರಲ್ಲೇನಿದೇ ರೀ? ನೀಲಾಂಜನ .. ರಾಮಕ್ರಿಯ .... ಹಂಸಾನಂದಿ ಯಾವ್ದೋ ಒಂದು!
ಒಬ್ಬ ಸಂಪದಿಗ - ಇನ್ನೂ ಹೆಚ್ಚಿಗೆ ಹೇಳ್ಬೇಕಾದ್ರೆ ಒಬ್ಬ ಕನ್ನಡಿಗ ಅಂದ್ರೆ ಸಾಕು. ಅಲ್ವಾ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 356 ಅತಿಥಿಗಳು ಆನ್ಲೈನ್ ಇರುವರು.


ಕಲ್ಪನೆ ಮತ್ತು ಕನಸುಗಳು ಬರಿಯ ತಿಳುವಳಿಕೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator