ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಮರದಂತಹ ಮನಸ್ಸು
ನೆರೆನಂಬಿದವರಿಗೆ ನೆರಳನ್ನೀಯುತ
ಬಿಸಿಲಲಿ ತಾವೇ ನವೆಯುತಲಿ
ತನಿವಣ್ಣುಗಳನೆಲ್ಲ ಇತರರಿಗೀಯುವ
ಮರಗಳಂತಲ್ಲವೆ ಅಗ್ಗಳರು?
ಸಂಸ್ಕೃತ ಮೂಲ:
ಛಾಯಾಮನ್ಯಸ್ಯ ಕುರ್ವಂತೇ ತಿಷ್ಠಂತಿ ಸ್ವಯಮಾತಪೇ|
ಫಲಾನ್ಯಾಪಿ ಪರಾರ್ಥಾಯ ವೃಕ್ಷಾಃ ಸತ್ಪುರುಷಾಃ ಇವ||
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 345 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಮರದಂತಹ ಮನಸ್ಸು
ಇಲ್ಲಿ "ನೆರೆ"ಯನ್ನು ಯಾವ ಅರ್ಥದಲ್ಲಿ ಬಳಸಿದೀರಿ ಹಂಸಾನಂದಿಯವರೇ?
*ಅಶೋಕ್
ಉ: ಮರದಂತಹ ಮನಸ್ಸು
ಅಶೋಕರೆ,
ನೆರೆನಂಬಿದವರಿಗೆ - ಎನ್ನಲು ತಪ್ಪಿ ನೆರೆಬಂದವರಿಗೆ ಎಂದು ಬರೆದಿದ್ದೆ; ಪೂರ್ತಿ ನಂಬಿದವರಿಗೆ ಎಂದರ್ಥ.
ಆದರೆ, ಮೂಲಕ್ಕೆ ಸ್ವಲ್ಪ ತಪ್ಪಾಯ್ತೇನೋ ಎನಿಸುತ್ತಿದೆ. ಏಕೆಂದರೆ, ಮರವು ಅಡಿಯಲ್ಲಿ ಬಂದು ನಿಂತವರು ನಂಬಿದರೋ ಇಲ್ಲವೋ ಯೋಚಿಸದಲ್ಲ!
ನೆರೆ-ನೆರಳು ಪದಗಳ ಒಟ್ಟಿಗೆ ಬಳಕೆ ಚೆನ್ನಾಗಿ ಕೇಳಿಸಿತಾಗಿ, ಹಾಗೆ ಬರೆದುಬಿಟ್ಟೆ. ಅಷ್ಟೇ.
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಮರದಂತಹ ಮನಸ್ಸು
ನೆರಳು ಬಯಸಿಬಂದವರಿಗೆ ಅಂತ ಉಲ್ಲೇಖಿಸಬೇಕೇನೋ? ಶ್ಲೋಕದಲ್ಲಿ ಛಾಯೆ ಅಂತ ಇದೆಯಲ್ಲ?
*ಅಶೋಕ್
ಉ: ಮರದಂತಹ ಮನಸ್ಸು
ಮಾನಿಸನೊ ಮರವಾನಿಸನೊ ಎಂದು ಪಂಪ ತನ್ನ ಮಕ್ಕಳನ್ನು ಕಳೆದುಕೊಂಡಾಗ ಸಗರ ದುಃಖದಿಂದ ಏನನ್ನೂ ಪ್ರತಿಕ್ರಿಯಿಸದಿದ್ದಾಗ ಜನ ಇವನೇನು ಮನುಷ್ಯನೋ ಅಥವಾ ಮರದಿಂದ ಮಾಡಿದ ಮನುಷ್ಯ ಬೊಂಬೆಯೋ ಎಂಬರ್ಥದಲ್ಲಿ ಬೞಸಿದ್ದಾನೆ. ಇಲ್ಲಿ ಆ ಅರ್ಥ ಬರುವುದಿಲ್ಲವಷ್ಟೇ:)
ಉ: ಮರದಂತಹ ಮನಸ್ಸು
ಮರಗಳಂತೆ ಹಿರಿಮನದವರ ಬಗ್ಗೆ
ಈ ಪದ್ಯ!
-ಹಂಸಾನಂದಿ
ಹರಿದಾಸ ಸಂಪದ:- http://haridasa.in/