ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › gururajkodkani ರವರ ಬ್ಲಾಗ್

ಸಣ್ಸಣ್ ಮಾತುಕತೆ

ಕತೆಗಳು,ಕವನಗಳು,ಅಭಿಪ್ರಾಗಳು, ಸಾಮಾನ್ಯ ಕನ್ನಡಿಗನೊಬ್ಬನಿ೦ದ

"ಫೂ೦ಕ್"

August 25, 2008 - 4:33pm — gururajkodkani

ಇದೇನಪ್ಪಾ ಅಪ್ಪಟ ಕನ್ನಡ ಸೈಟ್ ನಲ್ಲಿ ಹಿ೦ದಿ ಚಿತ್ರದ ಪ್ರಚಾರ ಮಾಡುತ್ತಿದ್ದೇನೆ ಎ೦ದುಕೊಳ್ಳಬೇಡಿ,ಕನ್ನಡ ಚಿತ್ರವಲ್ಲದಿದ್ದರೂ ಕನ್ನಡ ನಾಯಕನ ಚಿತ್ರ "ಫೂ೦ಕ್".ಚಿತ್ರವನು ಒಬ್ಬರೇ ಕುಳಿತು ನೋಡಿದವರಿಗೆ ೫ ಲಕ್ಷ ಬಹುಮಾನ ಘೋಷಿಸಲಾಗಿತ್ತು(ಅದನ್ನು ಆಗಲೇ ಒಬ್ಬ ಬೆ೦ಗಳೂರಿಗ ಪಡೆದುಬಿಟ್ಟಿದ್ದಾರೆ).ಅದೇನಪ್ಪಾ ಅ೦ಥಾದ್ದೇನಿದೆ ಆ ಚಿತ್ರದಲ್ಲಿ ಎ೦ದುಕೊ೦ಡು ಹೋದವನಿಗೆ ನಿರಾಶೆಯಾಗಲಿಲ್ಲ.ತೆಲುಗಿನ ಯ೦ಡಮೂರಿ ವೀರೆ೦ದ್ರನಾಥ ವಿರಚಿತ "ತುಳಸಿದಳ೦" ಕಾದ೦ಬರಿಯ ಮಾದರಿಯ ಕತೆಯನ್ನು ರಾಮ್ ಗೋಪಾಲ್ ಅಧ್ಬುತವಾಗಿ ನಿರೂಪಿಸಲು ಸಫಲರಾಗಿದ್ದಾರೆ.ಕೆಲವು ದೄಶ್ಯಗಳ೦ತೂ ನೋಡುಗರ ಎದೆಯನ್ನು ಖ೦ಡಿತ ಧಸಕ್ಕೆನಿಸುತ್ತವೆ. ೮ - ೧೦ ವರ್ಷದ ಎಹಸಾಸ್ ಚನ್ನಾ ಮಾಟಕ್ಕೆ ಒಳಗಾಗುವ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾಳೆ.ಸುದೀಪ್ ಅಭಿನಯದ ಬಗ್ಗೆ ಎರಡು ಮಾತಿಲ್ಲ.ಹೆಚ್ಚು ಮಾತನಾಡದೇ ಕಣ್ಣಲ್ಲೇ ಭಾವನೆಗಳನ್ನು ಹೊರಸೂಸುವ ಅವರ ನಟನಾಶೈಲಿ ಸೂಪರ್.ಕತೆ,ನಟನೆ ಎಲ್ಲಕಿ೦ತ ಅದ್ಭುತವಾದುದು ನಿರ್ದೇಶನ.ಏನೂ ಇಲ್ಲದಿದ್ದರೂ ,ಏನೋ ಇದೆ ಎ೦ದೆನ್ನಿಸುವ ಸನ್ನಿವೇಶಗಳು,ತಕ್ಕ ಸೌ೦ಡ ಇಫೆಕ್ಟ,ಆಗಾಗ ಬೆಚ್ಚಿಬೀಳಿಸುವ ಸನ್ನಿವೇಶಗಳು ’ ಫೂ೦ಕ್ ’ ಚಿತ್ರವನ್ನು ಒ೦ದೊಳ್ಳೆ ಕಮರ್ಶಿಯಲ್ ಚಿತ್ರವನ್ನಾಗಿಸಿವೆ.ಒಳ್ಳೆಯ ರೋಮಾ೦ಚನಕಾರಿ ಚಿತ್ರವನ್ನು ಬಯಸುವವರು "ಫೂ೦ಕ್" ನೋಡಬಹುದು.

ಕೊನೆಯ ಮಾತು: ೫ ಲಕ್ಷ ಬಹುಮಾನ ಬಯಸುವವರು ಇಡಿ ಥಿಯೇಟರ್ ಬುಕ್ ಮಾಡಿ,ಚಿತ್ರವನ್ನು ನೋಡಬಹುದು ಮತ್ತು ಖ೦ಡಿತವಾಗಿ ಒಬ್ಬರೇ ನೋಡಬಹುದು ಕೂಡಾ .....ರಾಮು ಇನ್ನೊಮ್ಮೆ ಬಹುಮಾನ ಕೊಟ್ಟರೇ...!

  • ಚಿತ್ರ ವಿಮರ್ಶೆ
~.~
  • gururajkodkani ರವರ ಬ್ಲಾಗ್
  • Login or register to post comments
  • 312 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 26, 2008 - 3:41am — avikamath77

ಉ: "ಫೂ೦ಕ್"

avikamath77's picture

ಕ್ಷಮಿಸಿ, ಕೆಲವೇ ಗಂಟೆಗಳ ಹಿಂದೆ ಫೂಂಕ್ ನೋಡಿ ಬಂದೆ. ನಿಮ್ಮ ಅಭಿಪ್ರಾಯಗಳನ್ನು ಮನಸಾರೆ ಗೌರವಿಸುತ್ತ, ನನ್ನ ಅನಿಸಿಕೆಗಳನ್ನು ಮಂಡಿಸುತ್ತಿದ್ದೇನೆ.

ಯಂಡಮೂರಿಯವರ "ತುಳಸಿದಳಂ" ನ ನೇರ ಕಾಪಿ ಇದು. ಮುನ್ನೂರೈವತ್ತು ಪುಟದ ಕಾದಂಬರಿಯನ್ನು ಎರಡು ಗಂಟೆಗಳ ಫಿಲ್ಮನ್ನಾಗಿಸಲು, ರಾಂ ಗೋಪಾಲ್ ವರ್ಮಾ, ಚಿತ್ರ ಕತೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿದ್ದರೂ, ಮಗುವಿನ ಮೇಲೆ ಬ್ಲಾಕ್ ಮ್ಯಾಜಿಕ್, ನಾಸ್ತಿಕ ತಂದೆ, ಬದಲಾಗುವ ತಾಯಿ, ಇತ್ಯಾದಿ ಇತ್ಯಾದಿಗಳು ನೇರವಾಗಿ "ತುಳಸಿದಳ"ದಿಂದಲೇ ಬಂದಿವೆ. ಅಸಡ್ಡಾಳ ಕ್ಯಾಮೆರಾ ಆಂಗಲ್ ಗಳು, ಪ್ರಾಪ್ ಗಳ ಅನಗತ್ಯ ಬಳಕೆ, ಅನವಶ್ಯಕವಾಗಿ ಪ್ರಾಪ್ ಗಳ ಮೇಲೆ
ಫೋಕಸ್ಸು, ಕೆಲ ಓವರ್-ಆಕ್ಟರ್ ಗಳು, ಯಾಕೋ ರಾಂ ಗೋಪಾಲ್ ವರ್ಮಾ ಮತ್ತೆ ಎಡವಿದ್ದಾರೆ ಅನಿಸುತ್ತಿದೆ.

ಸಿನೇಮಾವನ್ನು ಉಳಿಸುವ ನಾಲ್ಕೇ ಅಂಶಗಳು ಎಂದರೆ, ಸುದೀಪ್ ರವರ ಅಭಿನಯ, ಉತ್ತಮ ಎಡಿಟಿಂಗ್, ಶಾಕ್ ನೀಡುವ ಹಿನ್ನೆಲೆ ಸಂಗೀತ ಹಾಗೂ ಪುಟ್ಟ ಪೋರಿ ಎಹಸಾಸ್ ಚನ್ನಾಳ ಅದ್ಭುತ ನಟನೆ.

ಬೆಂಗಳೂರಿಗರೊಬ್ಬರಿಗೆ ಐದು ಲಕ್ಷದ ಬಹುಮಾನ್ ಸಿಕ್ಕಿದೆ ಎಂದಿದ್ದೀರಿ. ಈ ಬಗ್ಗೆ ಎಲ್ಲಿ ವರದಿ ಬಂದಿದೆ ಎಂದು ತಿಳಿಸಬಲ್ಲಿರಾ ಪ್ಲೀಸ್?
ರಿಡಿಫ್ ಡಾಟ್ ಕಾಂ ಆಯೋಜಿಸಿದ ಈ ಸ್ಫರ್ಧೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರೂ, ಕೊನೆಯದಾಗಿ ಅವರು ಆಯ್ದುಕೊಂಡಿದ್ದು ಐದೇ ಜನರನ್ನು. ಈ ಐದು ಜನರಲ್ಲಿ ಬಹುಮಾನ ದಕ್ಕಿದ್ದು ಯಾರಿಗೂ ಇಲ್ಲ. ಈ ಬಗ್ಗೆ ಮುಂಬಯಿಯ ಖ್ಯಾತ ದಿನಪತ್ರಿಕೆ ’ಮಿಡ್-ಡೇ’ ಇವತ್ತು ಸಚಿತ್ರ ವರದಿಯೊಂದನ್ನು ಪ್ರಕಟಿಸಿತ್ತು. ಸ್ವತಃ ರಾಂ ಗೋಪಾಲ್ ವರ್ಮಾ "ಈ ಕಾಂಟೆಸ್ಟಿಗೂ, ನನಗೂ ಯಾವುದೇ ತರಹದ ಸಂಬಂಧವಿಲ್ಲ, ಇದರ ಬಗ್ಗೆ ರಿಡಿಫ್ ಡಾಟ್ ಕಾಂ ನಲ್ಲಿ ವಿಚಾರಿಸಿ" ಎಂದು ಹೇಳಿ ಕೈ ತೊಳೆದುಕೊಂಡಿದ್ದಾರೆ.

ರಾಂ ಗೋಪಾಲ್ ವರ್ಮಾರವರ ’ರಾತ್’, ’ಭೂತ್’ ಹಾಗೂ ’ವಾಸ್ತು ಶಾಸ್ತ್ರ’ ನೋಡಿದವರಿಗೆ, ಈ ಫೂಂಕ್ ಖಂಡಿತ ನಿರಾಸೆ ಹುಟ್ಟಿಸುತ್ತದೆ ಎಂಬುದರಲ್ಲಿ ಸಂಶಯವೇ ಬೇಡ.
ಆದರೂ ಸಿನೇಮಾ ’ಹಿಟ್’ ಆಗಲಿ, ವರ್ಮಾರಂಥ ಉತ್ತಮ ನಿರ್ದೇಶಕರಿಂದ ಇನ್ನೂ ಉತ್ತಮ ಚಿತ್ರಗಳು ಬರುತ್ತಿರಲಿ ಎಂಬ ಆಶಯ ನನ್ನದು.

ಮುಂಬಯಿಯಿಂದ...ಪ್ರೀತಿಯಿಂದ..
ಅವಿನಾಶ್ ಕಾಮತ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 26, 2008 - 9:34am — gururajkodkani

ಉ: "ಫೂ೦ಕ್"

gururajkodkani's picture

ಗುಱುಱಾಜ
www.kannadaguru.blogspot.com

ಅವಿನಾಶ್ ಅವರೇ,

ತಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು. ತಾವು ೨೫ ಅಗಸ್ಟ ೨೦೦೮ರ " deccan herald "ನ ನಾಲ್ಕನೇ ಪುಟ ನೋಡಿದರೆ ತಮಗೆ ಒಬ್ಬರೇ ಫೂ೦ಕ್ ನೋಡಿದವರ ಬಗ್ಗೆ ಗೊತ್ತಾಗುತ್ತದೆ(ಪವಿನ್ ಪೂನಪ್ಪ ಎ೦ದವರ ಹೆಸರು; ದಯವಿಟ್ಟು ಕ್ಶಮಿಸಿ ಅವರು ಒಬ್ಬರೇ ನೋಡಿದ ಬಗ್ಗೆ ವಿವರವಿದೆಯೇ ಹೊರತು ಬಹುಮಾನದ ಬಗ್ಗೆ ಕೊಟ್ಟಿಲ್ಲ,ನನ್ನ silly ಊಹೆ ಅದು ಅಷ್ಟೇ).ವೈಯಕ್ತಿಕವಾಗಿ ನನಗೆ ’ರಾತ್ ’ ಮತ್ತು "ಫೂ೦ಕ್ " ಇಷ್ಟಾವಾದಷ್ಟು," ಭೂತ್ " ಮತ್ತು "ವಾಸ್ತುಶಾಸ್ತ್ರ" ಇಷ್ಟವಾಗಲಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 26, 2008 - 4:43pm — shreekant.mishrikoti

ಉ: "ಫೂ೦ಕ್"

shreekant.mishrikoti's picture

ನಮ್ಮ ಸುದೀಪ್ ಈ ಚಿತ್ರದಲ್ಲಿ ಅಭಿನಯಿಸಿದ್ದೇಕೋ ಸುದ್ದಿ ಆದ ಹಾಗೇ ಇಲ್ಲ ?
ಪೋಸ್ಟರುಗಳಲ್ಲೂ ಸುದೀಪ್ ಇಲ್ಲ .
ಮುಂಬೈನ ಪತ್ರಿಕೆಗಳು ಚಿತ್ರದ ವಿಮರ್ಶೆ ಬರೆದವಾದರೂ ಸುದೀಪ್ ಅಭಿನಯದ ಬಗ್ಗೆ ಮಾತೇ ಇಲ್ಲ .
ಈ ನಡುವೆ ಇದರ ಮುಂದಿನ ಭಾಗವನ್ನು ತರುವದಾಗಿ ರಾಮ್ ಗೋಪಾಲ್ ವರ್ಮಾ ಸಾರಿದ್ದಾರೆ . ( ಹ್ಹಿ ಹ್ಹಿ - ಘೋಶಿಸಿದ್ದಾರೆ ಅನ್ನೋ ಬದ್ಲು ಸಾರಿದ್ದಾರೆ ಅಂದಿದೀನಿ, ನೋಡಿದ್ರಾ?)
ಅದಕ್ಕೆ ಕತೆಯ ಹೊಳಹು ಕೊಡೋರಿಗೆ ಎಷ್ಟೋ ಲಕ್ಷ ಸಾರಿ ಇವತ್ತಿನ ಪತ್ರಿಕೇಲಿ ಜಾಹೀರಾತು ಬಂದಿದೆ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 26, 2008 - 4:45pm — mahesha

ಉ: "ಫೂ೦ಕ್"

mahesha's picture

ಅದ್ ಸರಿ ಪೂಂಕ್ ಅಂದ್ರೇನು

ಹೂಂಕರಿಸು ಅಂತಲೋ? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 26, 2008 - 5:13pm — shreekant.mishrikoti

ಉ: "ಫೂ೦ಕ್"

shreekant.mishrikoti's picture

ಫೂ ಅಂತ ಅಂತೆ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 26, 2008 - 5:22pm — savithru

ಉ: "ಫೂ೦ಕ್"

savithru's picture

ಫೂನ್ಕ್ ಅಂದ್ರೆ ಊದೋದು ಅಂತೆ... ನಾವು ಉಫ್ಫ್... ಅಂತೀವಿ ಅವ್ರು ಪೂನ್ಕ್ ಅಂತಾರೋ ಏನೋ? Smiling
ವಾಮಚಾರಿಗಳು ಕೈಯಲ್ಲಿ ಏನೋ ತಗೊಂಡು ಊದುತ್ತಾರಲ್ಲ ಆ ತರ ಊದೋದು!

ಜಾಡ್ ಫೂನ್ಕ್ ಅನ್ನೋ ಪದ ಅಲ್ಲಿ ಬಳಕೆಯಲ್ಲಿರೋ ಪದವಂತೆ. ಅಂದ್ರೆ ಭೂತ ಬಿಡಿಸಿ ಓಡಿಸು ಅನ್ನೋ ಅರ್ಥ ದಲ್ಲಿ!

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 26, 2008 - 11:19am — Shashikanth. Birge

ಉ: "ಫೂ೦ಕ್"

Shashikanth. Birge's picture

Dear Friends,
Just for your information.
The child artist Ehsaas channa is a boy not a girl.
But he looks good in girl outfit.

Regards

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 26, 2008 - 1:56pm — gururajkodkani

ಉ: "ಫೂ೦ಕ್"

gururajkodkani's picture

ಗುಱುಱಾಜ
www.kannadaguru.blogspot.com

ಶಶಿಕಾ೦ತರವರೇ ಎಹಸಾಸ್ ಚನ್ನಾ ಹುಡುಗಿಯೇ, ಹುಡುಗನಲ್ಲ.ಇದರ ಬಗ್ಗೆ ದೊಡ್ಡದೊ೦ದು ವಿವಾದವೇ ಎದ್ದಿತ್ತು. ಆಕೆಯ ಅಮ್ಮ ಚಿತ್ರರ೦ಗದ ದುರಾಸೆಗಾಗಿ ಅದನ್ನು ಹುಡುಗ ಎನ್ನುವ೦ತೆ "ವಾಸ್ತು ಶಾಸ್ತ್ರ"ದಲ್ಲಿ ತೋರಿಸಿದ್ದರು.ಈ ವಿಶಯವಾಗಿ ಚನ್ನಾ ತ೦ದೆ ತಮ್ಮ ಹೆ೦ಡತಿಯ ವಿರುದ್ದ ಕೋರ್ಟಿನಲ್ಲಿ ದಾವೆ ಕೂಡಾ ಹೂಡಿದ್ದರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 9:45am — mahesha

ಉ: "ಫೂ೦ಕ್"

mahesha's picture

ಸಿನಿಮ ಪರವಾಗಿಲ್ಲ..

ಹಲವೆಡೆ ಒಂದೇ ತರ ಅನ್ನಿಸಿ ಬೋರಿಂಗು..

ಸುದೀಪ್ ಅಶ್ಟಕ್ಕಶ್ಟೇ..

ಕತೆ ಅಳ್ಳಕ..

ಮ್ಯೂಸಿಕ್ ಬೊಂಬಾಟ್

ಒಂದು ಕಿತ ನೋಡಬೋದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎಲೆಯಲ್ಲಿ ಗಣೇಶ !
  • ಪುಣೆಯಲ್ಲಿ ’ಮುಂಗಾರು ಮಳೆ’ ಚಿತ್ರ ಬಿಡುಗಡೆ - 11, ಜುಲೈ, 2007ರಿಂದ ಈ-ಸ್ಕ್ವೇರ್ ನಲ್ಲಿ ರಾತ್ರಿ 8.50ಕ್ಕೆ
  • ಚಂಡ ಚಿತ್ರದ ಬಗ್ಗೆ ಒಂದೆರಡು ಮಾತುಗಳು- ರಘೋತ್ತಮ್ ಕೊಪ್ಪರ
  • ಮುಂಗಾರು ಮಳೆ v/s ಚಿಗುರಿದ ಕನಸು
  • ಸಮಸ್ಯೆ ಬಿಡಿಸಿ
Syndicate content

ಲೇಖಕರು

gururajkodkani's picture

ಪೂರ್ಣ ಹೆಸರು
ಗುರುರಾಜ ಕೊಡ್ಕಣಿ

ಪರಿಚಯ

ನಮಸ್ಕಾರ ಸ್ನೇಹಿತರೇ, ನನ್ನ ಹೆಸರು ಗುರುರಾಜ . ಪ್ರೀತಿಯಿ೦ದ ಗುರು ಅ೦ತಾರೇ. ಕತೆಗಳನ್ನ,ಕವನಗಳನ್ನ ಬರೆಯುವ ಹುಚ್ಚು ನನ್ನದು. ಕನ್ನಡದ ಅ.ನ.ಕೃ,ಎಸ್ ಎಲ್ ಭೈರಪ್ಪ, ರವಿ ಬೆಳಗೆರೆ, ತೆಲುಗಿನ ಯ೦ಡಮೂರಿ,ಆ೦ಗ್ಲ ಭಾಷೆಯ ಸಿಡ್ನಿ ಶೆಲ್ಡನ್ ,ಮಾರೀಯೋ ಫ್ಯುಜೊ ,ನನಗಿಷ್ಟ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 402 ಅತಿಥಿಗಳು ಆನ್ಲೈನ್ ಇರುವರು.


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator