ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ರಕ್ಷಾ ಬಂಧನವೋ...ಭಿಕ್ಷಾಬಂಧನವೋ?
ಅರೆ! ಇವತ್ತು ರಕ್ಷಾ ಬಂಧನವಲ್ಲವೇ?. ಮರೆತೇ ಹೋಗಿತ್ತು. ಆದರೆ ಮೊದಲೆಲ್ಲ ಅಂದರೆ ನಾನು ಸಣ್ಣವನಿರುವಾಗ ನನ್ನ ದೊಡ್ಡಪ್ಪ ಆರ್.ಎಸ್.ಎಸ್.ನಲ್ಲಿ ಇದ್ದವರು ರಕ್ಷಾಬಂಧನಕ್ಕೆ ಒಂದು ವಾರ ಮೊದಲೇ ರೇಷ್ಮೆ ದಾರ ತಂದು (ಕೇಸರಿ ಬಣ್ಣದ) ಮನೆಯಲ್ಲಿಯೇ ರಕ್ಷೆಯನ್ನು ತಯಾರಿಸುತ್ತಿದ್ದರು. ಅದರ ಕೇಸರಿ ಬಣ್ಣದ ಮಹತ್ವವನ್ನು ಅವರು ಹೇಳುತ್ತಿದ್ದರು. "ನೋಡಪ್ಪಾ ಇದು ತ್ಯಾಗದ ಹಾಗೂ ಪೌರುಷದ ಸಂಕೇತ, ಇದನ್ನು ಕಟ್ಟಿಕೊಂಡಲ್ಲಿ ನಮ್ಮಲ್ಲಿ ಏನೋ ಹೊಸ ಚೈತನ್ಯ ಹುಟ್ಟುತ್ತದೆ...." ಹಾಗೆ ಹೀಗೆ.....ಆಗ ನಮಗೆ ಅದರ ಮಹತ್ವ ಅಷ್ಟಾಗಿ ಗೊತ್ತಿರಲಿಲ್ಲ. ಎಲ್ಲರೂ ಕಟ್ಟುತ್ತಾರಲ್ಲಾ ಹಾಗೆ...ಒಂದು ಕೈಗೆ ಎರಡು ಮೂರು ಕಟ್ಟಿಕೊಂಡು ಸಂಭ್ರಮ ಪಡುತ್ತಿದ್ದೆವು. ಶಾಲೆಯಲ್ಲಿ ಎಲ್ಲರಿಗೂ ತೋರಿಸುತ್ತಾ ಹೆಮ್ಮೆ ಪಡುತ್ತಿದ್ದೆವು. ಅಧು ಜಾರಿದಾಗ ಮತ್ತೆ ಬಿಚ್ಚಿ....ಮತ್ತೆ ಕಟ್ಟಿಕೊಳ್ಳುತ್ತಿದ್ದೆವು. ಆಗ ಅದಕ್ಕೆ ಹಣ ಕೊಡುವುದು ಎಲ್ಲ ಇರುತ್ತಿರಲಿಲ್ಲ. ಅದು ಉಚಿತವಾಗಿಯೇ ಸಿಗುತ್ತಿತ್ತು.
ಆದರೆ ಇಂದು ರಕ್ಷಾ ಬಂಧನವೆನ್ನುವುದು ಹೇಸಿಗೆ ಉಂಟುಮಾಡುತ್ತಿದೆ. ಅದು commercial ಆಗಿಬಿಟ್ಟಿದೆ. ಅಂದರೆ ರಕ್ಷಾಬಂಧನ ಕಟ್ಟಿಸಿಕೊಂಡವನು ಕಡ್ಡಾಯವಾಗಿ ಏನಾದರೂ (ಪ್ರೀತಿ ಇಲ್ಲದಿದ್ದರೂ) ಕೊಡಲೇಬೇಕು. ಕನಿಷ್ಠ ಜೇಬಲ್ಲಿರುವ ಹತ್ತು, ಇಪ್ಪಾತ್ತಾದರೂ ಸರಿ ಅಡ್ಡಿ ಇಲ್ಲ. ಇಲ್ಲವೇ ಜೋಬಿಗೇ ಕೈ ಹಾಕಿ ಕಿತ್ತುಕೊಳ್ಳುವಂತಹ ಸಂಪ್ರದಾಯ. ಈಗ ಬರುತ್ತಿರುವ ಹೊಸ ತರಹದ, ನವ ನವೀನ ಶೈಲಿಯ ರಕ್ಷಾಬಂಧನಗಳು ಒಂದೇ ದಿನಕ್ಕೆ, ಒಂದೇ ಘಳಿಗೆಗೆ ಕಿತ್ತು ಹೋಗುವಂತಹವು.
ಅಲ್ಲದೆ ಅವುಗಳಿಗೆ ಹೆಚ್ಚು ಮಹತ್ವವೇ ಇಲ್ಲ, ಇದೆಲ್ಲ ಒಂದು ಗೊಡ್ಡು ಸಂಸ್ಕೃತಿಯಾಗಿ ಬಿಟ್ಟಿದೆ. ಇದು ಈಗಿನ ಜನರ style ಆಗಿಬಿಟ್ಟಿದೆ. ಇವತ್ತು ರಕ್ಷಾಬಂಧನ ಕಟ್ಟಿಕೊಳ್ಳುತ್ತಾರೆ ನಾಳೆ ಪ್ರೇಮಿಗಳ ಪಾರ್ಕ್‌ನಲ್ಲಿ ಸುತ್ತುತ್ತಿರುತ್ತಾರೆ. ಅಂದರೆ ರಕ್ಷಾಬಂಧನ ಇಂದು ತನ್ನ ನಿಜವಾದ ಅರ್ಥವನ್ನು ಕಳೆದುಕೊಂಡಿದೆ. ಏನಿದ್ದರೂ ಭಿಕ್ಷೆ ಬೇಡುವ ಇನ್ನೊಂದು ವಿಧಾನವಾಗಿದೆ. ನಮ್ಮ ಜನಕ್ಕೆ ನಿಜವಾದ ಸಂಸ್ಕೃತಿ ಬೇಡ, ಈಗಿನ ಪ್ರೇಮಿಗಳ ದಿನ, ಗೆಳೆಯರ ದಿನ, ತಂದೆಗಳ ದಿನ, ತಾಯಂದಿರ ದಿನ...ಇವೆಲ್ಲಾಕ್ಕೂ ಪ್ರತ್ಯೇಕವಾದ ದಿನ ಬೇಕಾಗಿದೆ. ಅಂದರೆ ಅವರಿಗೆ ವರ್ಷಪೂರ್ತಿ ಬೇರೆ ಸಂಸ್ಕೃತಿರಹಿತ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಅಸಂಸ್ಕೃತರಾಗಿ...ಸುಸಂಸ್ಕೃತರಾಗುವುದಕ್ಕೆ ಇದೊಂದು ನೆಪ ಮಾತ್ರ. ಆದರೆ ಇದನ್ನು ಮನಃಪೂರ್ವಕವಾಗಿ ಅವರು ಮಾಡುತ್ತಿಲ್ಲ. ಕೇವಲ ಶೈಲಿಗಾಗಿ....Styleಗಾಗಿ......

- gurumlr ರವರ ಬ್ಲಾಗ್
- Login or register to post comments
- 262 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ರಕ್ಷಾ ಬಂಧನವೋ...ಭಿಕ್ಷಾಬಂಧನವೋ?
ಕಳೆದವರ್ಷ ಈ ಹಬ್ಬವನ್ನು ವ್ಯಾಪಾರಿಗಳು ಬಹಳವಾಗಿ ಬಳಸಿಕೊಂಡರು. ’ರಾಖೀ ಪ್ಯಾಕೇಜ್’ ಬರೀ ಸಾವಿರರೂಮಾತ್ರ, ೧೫೦೦ ರೂ ಮಾತ್ರ ಇತ್ಯಾದಿಯಾಗಿ ನೀವುಕೊಡುವ ಗಿಫ್ಟಿನ ಬೆಲೆಯಮೇಲೆ ನಿಮ್ಮ ಅಕ್ಕತಂಗಿಯ ಮೇಲಿನ ಪ್ರೀತಿಯನ್ನು ನಿರ್ಧರಿಸುತ್ತಿದ್ದರು.
ಉ: ರಕ್ಷಾ ಬಂಧನವೋ...ಭಿಕ್ಷಾಬಂಧನವೋ?
Dear Sir,
I think you are trying to be more practical and commercial.
Rakshabandhana can never become Bhikshabandhana. How can you compare your sisters with the beggers?
Well she i asking money to you (her brother) not to any person who is passing on road.
I think you never knew the value of it. When you cant even bear your sister TAKING 10 RUPEES FROM YOUR POCKET THEN HOW CAN YOU TAKE HER RESPONSIBILITY FOR THE LIFE TIME. I think you may be a teacher by profession, but please don't teach your students and subordinates the same.(Sorry to say this) Please dont spoil our culture.
Best Regards
Shashi Birge
ಉ: ರಕ್ಷಾ ಬಂಧನವೋ...ಭಿಕ್ಷಾಬಂಧನವೋ?
ಶಶಿಕಾಂತ್,
ದಯವಿಟ್ಟು ಕನ್ನಡದಲ್ಲಿ ಟೈಪಿಸಿ...
ಬರಹ ಸಾಫ್ಟ್ ವೇರ್ Install ಮಾಡಿ, Unicode ಬಳಸಿ, ಕನ್ನಡದಲ್ಲಿ ಟೈಪಿಸಿ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ:
ಸರಿಯಾಗಿ ಹೇಳಿದಿರಿ ಶ್ರಿಕಾಂತ.
ಅಕ್ಕ ತಂಗಿ ಬೇಕಾದರೆ ಕಟ್ಟಸಿಕೊಳ್ಳಲಿ ಇಲ್ಲಾ..ಹಾಳಾಗಿ ಹೋಗಲಿ..ಅಷ್ಟೆ...
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!
ಉ: ರಕ್ಷಾ ಬಂಧನವೋ...ಭಿಕ್ಷಾಬಂಧನವೋ?
ಅಲ್ಲಾ ಕಣ್ರೀ ಶಶಿಕಾಂತು,
ಪ್ರಾಕ್ಟಿಕಲ್ಲು, ಕಮರ್ಷಿಯಲ್ಲು ಅಂದ್ರೆ ಏನ್ರೀ ಅರ್ಥ ?
First of All, ನಮ್ಮ ದಕ್ಷಿಣ ಭಾರತದಲ್ಲಿ ಈ ರಾಖಿ / ರಕ್ಷಬಂಧನವೆಂಬ ಪದ್ಧತಿ ಇಲ್ಲವೇ ಇರ್ಲಿಲ್ಲ.
ನಾವು ಮುಂಚಿನಿಂದ ಆಚರಿಸಿಕೊಂಡು ಬಂದಿರುವ ಅಣ್ಣ - ತಂಗಿ, ಅಕ್ಕ - ತಮ್ಮ ಹಬ್ಬವೆಂದರೆ ನಾಗರ ಪಂಚಮಿ, ಭೀಮನ ಅಮಾವಾಸ್ಯೆ.
ನಾಗರ ಪಂಚಮಿಯಲ್ಲಿ ಅಣ್ಣ ತಂಗಿ, ಅಕ್ಕ ತಮ್ಮ... ಇವರಿಬ್ಬರು ತಮ್ಮ ಒಡಹುಟ್ಟಿದವರ ಬೆಕ್ಕಿಗೆ ಹಾಗು ಹೊಟ್ಟೆಗೆ ಹಾಲನ್ನು ಹೂವಿನಿಂದ ಮುಟ್ಟಿಸಿ
"ನನ್ನ ಅಕ್ಕನ/ತಂಗಿಯ/ಅಣ್ಣನ/ತಮ್ಮನ ಹೊಟ್ಟೆ ಎಂದೆಂದಿಗೂ ತಂಪಾಗಿರಲಿ" ಎಂದು ಹಾರೈಸುತ್ತಾ ತನಿ ಎರೆಯುತ್ತಾರೆ.
ಭೀಮನ ಅಮಾವಾಸ್ಯೆ ಬರೀ ಮದುವೆಯಾದ ಹೆಣ್ಣುಮಕ್ಕಳು ಗಂಡನನ್ನು ಪೂಜೆ ಮಾಡುವ ಹಬ್ಬ ಅಲ್ಲ. ಈ ದಿವಸ ಕೂಡ ಅಕ್ಕಂದಿರು / ತಂಗಿಯರು ತಮ್ಮ ಒಡಹುಟ್ಟಿದ ಗಂಡು ಮಕ್ಕಳ ಕೈಗೆ ಕಂಕಣ ಕಟ್ಟಿ, ಕುಂಕುಮ ಇಟ್ಟು, ಮನೆಯ ಹೊಸ್ತಿಲ ಮೇಲೆ ಕಡುಬನ್ನು ಇಟ್ಟು ಅದನ್ನು ಅವರ ಮೊಣಕೈನಿಂದ ಮುರಿಸುತ್ತಾರೆ. ಇದನ್ನು "ಭಂಡಾರ ಹೊಡೆಯುವುದು" ಎನ್ನುತ್ತಾರೆ.
ಈ ರೀತಿಯಾದ ಪ್ರೀತಿ, ಸಂಬಂಧಗಳನ್ನು ತೋರುವ, ಉಳಿಸಿಕೊಂಡು ಹೋಗುವ ಸಂಪ್ರದಾಯ, ಪದ್ಧತಿಗಳನ್ನು ಮರೆತು ಬರೀ Exhibitionism ನಂತಹ ಆಚರಣೆಗಳನ್ನು ರೂಢಿಸಿಕೊಂಡು ಹೋಗ್ತಾ ಇದೀವಲ್ಲಾ? ಇದು ಸರಿಯೇ ? ಗುರು ಅವರು ಬರೆದಿರುವುದಕ್ಕೆ ನನ್ನ 100% ಸಮ್ಮತಿ ಇದೆ.
ಇಂತಿ,
ಶಂಕರ ಪ್ರಸಾದ
ನಮ್ಮ ಸೋಮಾರಿ ಕಟ್ಟೆಗೆ ಒಮ್ಮೆ ಭೇಟಿ ಕೊಡಿ : http://somari-katte.blogspot.com
ಉ: ರಕ್ಷಾ ಬಂಧನವೋ...ಭಿಕ್ಷಾಬಂಧನವೋ?
ರಾಖಿ ಪದ್ಧತಿ ಇದೆ ಸರ್ ...ಅದಕ್ಕೆ ನೂಲು ಹುಣ್ಣಿಮೆ ಅಂತ ಹೆಸರು...
ಆದರೆ ಈಗ ರಾಖಿ ಹಬ್ಬ ಅಂತ ಕರೆಯಲ್ಪಡುತ್ತೆ ಅಶ್ಟೆ..
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!
ಉ: ರಕ್ಷಾ ಬಂಧನವೋ...ಭಿಕ್ಷಾಬಂಧನವೋ?
ಹೆ ಹೆ
ನೂಲು ಹುಣ್ಣಿಮೆ ಅಂದ್ರೆ ಬ್ರಾಮ್ರ ಉಪಾಕರ್ಮ.. ರಾಕಿ ಹಬ್ಬ ಅಲ್ಲ..
ನಮ್ಮಲ್ಲಿ ರಾಕಿ ಗೀಕಿ ಎಲ್ಲ ಈ ಆರ್.ಎಸ್.ಎಸ್ ಮಂದಿ ತಂದುದು..!
ಉ: ರಕ್ಷಾ ಬಂಧನವೋ...ಭಿಕ್ಷಾಬಂಧನವೋ?
ಆರ್. ಎಸ್. ಎಸ್. ಒಬ್ಬರನ್ನೇ ಯಾಕೆ ಎಳೆಯುತ್ತೀರಿ? ಉತ್ತರದಿಂದ ಬಂದವರು ಹಲವಾರು ಜನರಿಂದ ಅನ್ನಿ ಸಾಕು...
--ಶ್ರೀ