ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › Devanampriya ರವರ ಬ್ಲಾಗ್

ಯಾರ ಹತ್ರನಾದ್ರು ಟೈಂ ಮೆಷಿನ್ ಇದೀಯಾ ???

March 1, 2008 - 2:48pm — Devanampriya

ಯಾಕಪ್ಪ ಏನಾಯ್ತು ಅಂತ ತಲೆ ಕೆಡ್ಸ್ಕೋತೀದೀರಾ ??? ಟೈಂ ಮೇಷಿನ ಇದ್ದಿದ್ರೆ ನಾನು ಸ್ವಲ್ಪ ನನ್ನ ಬಾಲ್ಯದ ದಿನ ಗಳಿಗೆ ಹೋಗಿ ಬರ್ತಾ ಇದ್ದೆ.ನಿಮಗೆ ಯಾವತ್ತಾದ್ರು ಅನ್ಸಿಲ್ವಾ ? ವಾಪಾಸ ನಿಮ್ಮ ಬಾಲ್ಯದ ದಿನಗಳಿಗೆ ಹೋಗ್ಬೇಕು ಅಂತ ? ಒಂದು ಸಲ ನಿಮ್ಮ ಸುತ್ತಮುತ್ತಾ ಇರೋ ಮಕ್ಕಳನ್ನು ನೋಡಿ ಏನು ಅರಾಮಾಗಿ ಆಟ ಆಡಿಕೊಂಡು ಇರ್ತಾವೆ,ತಮ್ಮದೆ ಪ್ರಪಂಚ ದಲ್ಲಿ ಮುಳುಗಿ ಹೋಗಿರ್ತಾವೆ. ನಿಮಗೆ ಯಾವತ್ತಾದ್ರು ಅನ್ಸಿಲ್ವಾ ಒಂದು ಸಲ ನಾವುಗಳು ಮಕ್ಕಳ ತರ ಆಗ್ಬೇಕು,ಈ ತರಲೆ ತಾಪತ್ರಯ ಎಲ್ಲಾ ಮರೆತು ಹಾಯಾಗಿ ಆಟ ಆಡ್ಕೋಂಡು ಇರ್ಬೇಕು ಅಂತ ?

ನಾನಂತು ದಿನಾ ಇದನ್ನೇ ಯೋಚನೆ ಮಾಡ್ತಾ ಇರ್ತೇನೆ, ಯಾವಾಗ್ಲಾದ್ರು ಚಾನ್ಸ್ ಸಿಕ್ಕಿದ್ರೆ ಒಂದೇ ಒಂದು ಸಲ ನನ್ನ ಬಾಲ್ಯದ ದಿನಗಳಿಗೆ ಹೋಗ್ಬೇಕು ಅಂತ.ಆದ್ರೆ ನಮ್ಮ ಜಗತ್ತು ಏಲ್ಲಾ ರೀತಿ ಯಲ್ಲಿ ಮುಂದುವರೆದಿದ್ರು,ನಮ್ಮ ಹತ್ತಿರೆ ಎಷ್ಟೇ ದುಡ್ಡು ಇದ್ರು ಒಂದು ದಿನದ ಬಾಲ್ಯವನ್ನು ತಗೋಳಕ್ಕೆ ಆಗಲ್ಲ.

ನಿನ್ನೆ ನನ್ನ ಗೆಳೆಯನ ಜೊತೆಗೆ ಚಾಟ್ ಮಾಡ್ತಾ ಇದ್ದೆ.ಅವನು ನನ್ನ ಬಾಲ್ಯ ಸ್ನೇಹಿತ,ಸುಮಾರಾಗಿ ೧ ನೇ ಕ್ಲಾಸಿಂದ ನನ್ನ ಜೊತೆಯೇ ಓದಿದವನು, ನನ್ನ ಜೊತೆಯೇ ಆಟ ಆಡಿದವನು. ಅವನಿಗೆ ನಾನು ಹೇಳ್ತಾ ಇದ್ದೆ ಒಂದು ದಿನ ನಾನು ಓದಿದ ಶಾಲೆ ನೋಡ್ಬೇಕು ಅಂತ ,ಅಲ್ಲಿಗೆ ಹೋಗಿ ನಾನು ಆಟ ಆಡುತ್ತಿದ್ದ ಜಾಗ,ಹರಟೆ ಹೊಡಿಯುತ್ತಿದ್ದ ಜಾಗ ಎಲ್ಲ ನೋಡ್ಬೇಕು ಅಂತ ,ಒಂದು ದಿನ ಪ್ಲಾನ್ ಮಾಡಿಕೊಂಡು ಬರ್ತೇನೆ ಅಂತ. ಅವನು ಹೇಳಿದ ಒಂದು ಮಾತು ಯಾಕೋ ನನ್ನ ಹೃದಯ ಮುಟ್ಟಿತು ,"ನೋಡು ಮೊನ್ನೆ ನಾನು ಮತ್ತೆ ನನ್ನ ಮಾವನ ಮಗ ಇಬ್ರು ಸುಮ್ನೆ ಇದ್ದಕ್ಕಿದ್ದ ಹಾಗೆ ಆಗುಂಬೆಗೆ ಹೋಗೋಣ ಅಂತ ಹೊರೆಟೆವು,ಅಲ್ಲಿಂದ ಹಾಗೇ ಸೀತಾನದಿಗೆ ಹೋಗಿ ನೀರು ದೋಸೆ ತಿಂದ್ವಿ.ಅಲ್ಲಿಂದ ಕಾರ್ಕಳ, ಅಲ್ಲಿಂದ ಉಡುಪಿ,ಅಲ್ಲಿಂದ ಮಂಗಳೊರು,ಅಲ್ಲಿಂದ ಕಾಸರಗೋಡು..ಹಂಗೇ ದಾರಿ ಯಲ್ಲಿ ಸಿಕ್ಕ ಎಲ್ಲ ನೆಂಟರ ಮನಗೆ ಹೋಗಿ ಬಂದ್ವಿ. ನಾವು ಏನಾದ್ರು ಪ್ಲಾನ್ ಮಾಡಿಕೊಂಡು ಏನಾದ್ರು ಹೊರಟಿದ್ರೆ ಹತ್ತಿರದ ಹರಿಹರಪುರಕ್ಕು ಹೋಗಿ ಬರ್ತಾ ಇರ್ಲಿಲ್ಲ ಅನ್ಸುತ್ತೆ". ಇದರಲ್ಲಿ ಬಹಳ ಅರ್ಥ ಇದೆ ,ನಾವುಗಳು ಏಲ್ಲದಕ್ಕು ಪ್ಲಾನ ಮಾಡಿಕೊಂಡು ಸೂಕ್ತವಾದ ಸಮಯಕ್ಕೆ ಕಾಯ್ತಾ ಇರ್ತೇವೆ,ಸಮಯ ಸರಿ ಆಗಿ ಬಂದ್ರೆ ಸರಿ ಇಲ್ಲಾಂದ್ರೇ ಸುಮ್ನೆ ಟೈಂ ಇಲ್ಲ ಅಂದುಕೊಂಡು ಜಾರಿಕೊಂಡು ಬಿಡ್ತೇವೆ.

ಇಲ್ಲಿ ಪಾಯಿಂಟ್ ಏನಪ್ಪ ಅಂದ್ರೆ ,ಸುಮ್ಮನೆ ತಲೆ ಕೆಡಿಸಿಕೊಂಡು ಅಲ್ಲಿಗೆ ಇಲ್ಲಿಗೆ ಹೋಗ್ಬೇಕು ಅಂತ ಪ್ಲಾನ ಮಾಡೋದು ಬಿಟ್ಟು ಯಾವಾಗ ಎಲ್ಲಿಗೆ ಹೋಗಬೇಕು ಅನ್ಸುತ್ತೋ ಸುಮ್ಮನೆ ಹೊರಡಬೇಕು.

ಈಗ ಸುಮ್ಮನೆ ಹಂಗೇ ಆಲೋಚನೆ ಮಾಡಿ ,ನಿಮ್ಮ ಬಾಲ್ಯ ದ ದಿನಗಳಲ್ಲಿ ಬೆಳಿಗ್ಗೆ ಬೆಳಿಗ್ಗೆ ಎದ್ದು ಏನಾರ ಆಟ ಆಡಕ್ಕೆ ಓಡಿ ಹೋಗಿರ್ತಾ ಇದ್ವಿ ಈಗ ಆತರ ಆಗುತ್ತ ? ಮತ್ತೆ ಯಾವುದೊ ಸಮಯದಲ್ಲಿ ಬಂದು ಅಮ್ಮ ನ ಹತ್ತಿರ ಬೈಸಿಕೊಂಡು ತಿಂಡಿ ನ ಗಬಗಬ ಅಂತ ತಿಂದುಕೊಂಡು ಅಮ್ಮಂಗೆ ಗೊತ್ತಾಗದೇ ಹಾಗೇ ಹಿತ್ತಿಲಿನ ಬಾಗಿಲಿನಿಂದ ಓಡಿ ಹೋಗೋದು, ಮಧ್ಯಾನ ದ ಉರಿ ಬಿಸಿಲನ್ನೂ ಲೆಕ್ಕಿಸದೇ ಆಟ ಆಡೋದು,ಸೈಕಲ್ ಕಲಿಯಕ್ಕೆ ಅಪ್ಪನ ಹತ್ತಿರ ಒಂದು ರುಪಾಯಿ ಸಿಕ್ಕಿದ್ದೇ ತಡ ಮತ್ತೆ ಸೈಕಲ ಶಾಪ್ಗೆ ಓಡೋದು. ಎಲ್ಲಾ ಎಷ್ಟು ಮಜಾ ಇತ್ತಲ್ರೀ.... ಈಗ ನೋಡಿ ಈಗ್ಲೊ ಒಂತರಾ ಓಡ್ತೀವಿ ಬೆಳಿಗ್ಗೆ ಬೆಳಿಗ್ಗ ಆದ್ರೆ ಅದರಲ್ಲಿ ಮಜಾ ಇರಲ್ಲ,ಈಗ್ಲೊ ಗಬಗಬ ಅಂತ ತಿಂತೀವಿ ಅದರಲ್ಲೊ ಮಜಾ ಇರಲ್ಲ. ಕೊನೆಗೆ ಈಗ್ಲೊ ಒಂದು ರುಪಾಯಿ ಏನು ಒಂದು ಲಕ್ಶ ದುಡೀತೀವಿ ಆದ್ರು ಆಗ ಸಿಕ್ತಾ ಇದ್ದ ಮಜಾ ಈಗ ಸಿಗುತ್ತೇನ್ರಿ ?

ನಿಮ್ಮ ಹತ್ತಿರ ಏನಾದ್ರು ಟೈಂ ಮೆಷಿನ್ ಇದ್ದಿದ್ರೆ ಏನು ಮಾಡ್ತಾ ಇದ್ರಿ ? ಬಾಲ್ಯದ ಯಾವ ದಿನಗಳಿಗೆ ಹೋಗ್ತಾ ಇದ್ರಿ ? ನನಗೆ ಬರೆದು ತಿಳಿಸಿ....

  • timepass
~.~
  • Devanampriya ರವರ ಬ್ಲಾಗ್
  • Login or register to post comments
  • 285 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 1, 2008 - 5:20pm — Sunil Jayaprakash

ಉ: ಯಾರ ಹತ್ರನಾದ್ರು ಟೈಂ ಮೆಷಿನ್ ಇದೀಯಾ ???

Sunil Jayaprakash's picture

ನನ್ನ ಹತ್ರ ಇತ್ತು. ಮೊನ್ನೆ ಯಾರೋ ಬಂದು ಕೇಳಿದರು. ಕರ್ಣನು ತನ್ನ ಕುಂಡಲಗಳನ್ನು ದಾನಮಾಡಿದನಲ್ಲ, ಹಾಗೆ ದಾನ ಮಾಡಿಬಿಟ್ಟೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 1, 2008 - 5:49pm — hpn

ಉ: ಯಾರ ಹತ್ರನಾದ್ರು ಟೈಂ ಮೆಷಿನ್ ಇದೀಯಾ ???

hpn's picture

ಓಹ್ ನನ್ನ ಹತ್ರ ಒಂದಿತ್ತು. ಭವಿಷ್ಯಕ್ಕೆ ಎಳೆದುಕೊಂಡು ಹೋಗು ಮಾರಾಯ ಅಂದರೆ ಅದ್ಯಾಕೋ ಇದೇ ಕಾಲದಲ್ಲಿ ಮತ್ತೆ ಹಳೆಯದನ್ನು ಹಾಕಿ ಮಠ ಹತ್ತಿತು! ಇವತ್ತಿಗೆ ಸರಿಯಾಗಿ ನಾಲ್ಕು ದಿನ ಸರಿಯಾದ ಇಂಟರ್ನೆಟ್ ಇಲ್ಲ, ಫೋನು ಸರಿಯಿಲ್ಲ ಮತ್ತು ಏನೆಲ್ಲ - ಹೋದ ದಶಕದಂತೆ. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 1, 2008 - 7:04pm — savithru

ಉ: ಯಾರ ಹತ್ರನಾದ್ರು ಟೈಂ ಮೆಷಿನ್ ಇದೀಯಾ ???

savithru's picture

ನನ್ನತ್ರ ಇದೆ... ಆದ್ರೆ ಓಡ್ತಾ ಇಲ್ಲ ! :-S

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 1, 2008 - 11:01pm — mayakar

ಉ: ಯಾರ ಹತ್ರನಾದ್ರು ಟೈಂ ಮೆಷಿನ್ ಇದೀಯಾ ???

mayakar's picture

ನನ್ನ ಹತ್ರ ಇದೆ, ಆದ್ರೆ built-in ತಲೆನಲ್ಲಿ. ನಿಮ್ ಹತ್ರನೂ ಇದೆ, ಅದನ್ನ ಹೋರಗೆ ತೆಗಿಬೇಕು ಅಷ್ಟೇ! ಕನಸುಗಳು! ಅವುಗಳ ಮೂಲಕ ಎಷ್ಟು ಬೇಕಷ್ಟು time travel ಮಾಡಬಹುದು!
----------------------------------------------------------------------
ಮನಸಿನ ಮಾಯಾಜಾಲದ ಮಾಯೆಯ ಮರ್ಮವನರಿಸಲು ಮೂಡಿದ ಮಾಯಾಕರ!
www.mayajaala.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 2, 2008 - 6:31pm — savithru

ಉ: ಯಾರ ಹತ್ರನಾದ್ರು ಟೈಂ ಮೆಷಿನ್ ಇದೀಯಾ ???

savithru's picture

ಮಾಯ್ಕಾರ ಮಹಾದೇವಗೆ ಶರಣು!
(ಹೀಂಗೆ "ಚೆಲ್ಲಿದರೂ ಮಲ್ಲೆಗೆಯಾ" ಹಾಡು ನೆಮ್ಪಾತು. ಅದಕ್ಕೆ ಹಾಗೆ ಬರೆದೆ!!)

ಕನಸುಗಳು ನಮ್ಮ ಮನಸ್ಸನ್ನು ಭವಿಷ್ಯಕ್ಕೆ ಕೊಂಡೊಯ್ಯುವ ಟೈಮ್ ಮಷಿನ್.
ಚಿಂತೆಗಳು ನಮ್ಮ ಮನಸ್ಸನ್ನು ಭೂತಕ್ಕೆ ಕೊಂಡೊಯ್ಯುವ ಟೈಮ್ ಮಷಿನ್!

ಈ ಕನಸುಗಳು , ಚಿಂತೆಗಳು ಕೇವಲ ಮನಸ್ಸನ್ನು ಅಷ್ಟೆ ಕೊಂಡೊಯ್ಯಬಲ್ಲವು.

ಮನಸ್ಸಿನ ಜೊತೆ ಜೊತೆ ದೇಹವನ್ನೂ ( ಈ ದೇಹದ ಸ್ಪೇರ್ ಪಾರ್ಟ್ಸ್ ಗಳನ್ನೂ) ಕೊಂಡೊಯ್ಯುವ ಟೈಮ್ ಮಷಿನ್ ಇದ್ರೆ ಹೇಳಿ!!

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 1, 2008 - 11:11pm — ಗಣೇಶ

ಉ: ಯಾರ ಹತ್ರನಾದ್ರು ಟೈಂ ಮೆಷಿನ್ ಇದೀಯಾ ???

ಗಣೇಶ's picture

ದೇವನಾಂಪ್ರಿಯರೆ,
ಟೈಮ್ ಮೆಷಿನ್ ನಲ್ಲಿ ನನಗೂ ಹೋಗಲು ಆಸೆ ಇದೆ. ಬಾಲ್ಯಕ್ಕಲ್ಲ..
ಇನ್ನೂ ಹಿಂದಕ್ಕೆ-ರಾಮಾಯಣ ಕಾಲಕ್ಕೆ ಹೋಗಿ,
ರಾಮ ಅಯೋಧ್ಯೆಯಲ್ಲಿ ಹುಟ್ಟಿದ್ದನೋ ಇಲ್ಲವೋ ನೋಡಿ,
ದಕ್ಷಿಣಕ್ಕೆ ಬಂದು ರಾಮಸೇತುವೆ ನಿರ್ಮಾಣ ಮಾಡಿದ್ದು,
ಯಾರು ಇಂಜಿನಿಯರ್ ಇತ್ಯಾದಿ ನೋಡಿ,
ಹಿಂದೆ ಬರುತ್ತಾ ಗಾಂಧಿಗೆ ಅಡ್ಡಬಿದ್ದು ಬರಬೇಕೆಂದಿದ್ದೇನೆ.
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಗೆಹನಿಗಳು
  • ಒಂದು ಕಹಿ ಅನುಭವ
  • ತಾರೆ ಜಮೀನ್ ಪರ್........
  • ದಿನಚರಿಯ ಒಂದು ದಿನ...
  • ಮನಸಲ್ಲಿ ಬರುತ್ತೆ ಯೋಚನೆ
Syndicate content

ಲೇಖಕರು

Devanampriya's picture

ಪರಿಚಯ

Naanu Kannadiga, Kannadakkagi bahala sanghatane galalli iddene,
vruttiyalli Software Engineer

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srivathsajoshi
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 7, 2008 - 8:09pm
  • agilenag
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 7, 2008 - 7:51pm
  • ಸಂಗನಗೌಡ
    ಉ: ಮೊದಲ ಚಿತ್ರ
    September 7, 2008 - 5:34pm
  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 80 ಅತಿಥಿಗಳು ಆನ್ಲೈನ್ ಇರುವರು.


ನನಗೆ ಯಾರೂ ಶತ್ರುಗಳಿಲ್ಲ. ಅವರೆಲ್ಲರೂ ಈಗಾಗಲೇ ಸತ್ತಿದ್ದಾರೆ

— ವಿನ್ ಸ್ಟನ್ ಚರ್ಚಿಲ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator