ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಓದಿ ಸಂತೋಷಪಡಬಹುದು
ನವಂಬರ್ ತಿಂಗಳ ’ವಿನೋದ’ ಮಾಸ ಪತ್ರಿಕೆ ಓದಲು ಒಳ್ಳೆಯ ಸಂಚಿಕೆ , ಅದರಲ್ಲಿ ಕು.ಗೊ. ಅವರು ಬರೆಯುತ್ತಾರೆ , ’ ಈಗ ಟೀವಿ.ಗೆ ರಿಮೋಟ್ ಇದೆ, ಕಾರಿಗೆ ಬಾಗಿಲು ತೆರೆಯಲು ,ಮುಚ್ಚಲು ಸಹ ರಿಮೋಟ್ ಬಂದಿದೆ.ಬಾಂಬ್ ಉಡಾಯಿಸಲು,ರಾಕೆಟ್ ಹಾರಿಸಲು,ಎಲ್ಲದಕ್ಕೂ ರಿಮೋಟ್ .
ಆದರೆ ತೆಂಗಿನ ಮರದ ಮೇಲಿರುವ ಹನ್ನೆರಡೂ ಗೊನೆಗಳಲ್ಲಿ , ಯಾವ ಗೊನೆಯಲ್ಲಿ ಯಾವ ಕಾಯಿ ಬಲಿತಿದೆ ಎಂದು ತಿಳಿಸಿ , ರಿಮೋಟ್ ಒತ್ತಿದ ಕೂಡಲೇ ಅದೇ ಗೊನೆಯ ಅದೇ ಕಾಯಿ ಪಟ್ಟನೆ ಕೆಳಗೆ ಬೀಳಬೇಕಂತೆ ! ಅಂತಹದೊಂದು ರಿಮೋಟ್ ಎಲ್ಲಿ ಸಿಗಬಹುದು ?
ಅದೇ ಸಂಚಿಕೆಯಲ್ಲಿ ’ಶಾಂತರಾಜ ಐತಾಳ”ರ ’ ಸುಲಭದ ಪಿ.ಎಚ್.ಡಿ.ಗೆ ಏಕೀ ಪರದಾಟ’ ಲೇಖನದ ಮೇಲೊಮ್ಮೆ ಕಣ್ಣಾಡಿಸಿದರೆ ಒಂದಿಷ್ಟು ನಗಬಹುದು
ಇನ್ನು ಸಾಹಿತ್ಯ ಪತ್ರಿಕೆಯಾದ ’ಸಂಕಲನ”ದ ಕಳೆದ ಸಲದ ಸಂಚಿಕೆಯಲ್ಲಿ ಷ.ಶೆಟ್ಟರ್ ಅವರ ’ಕವಿರಾಜ ಮಾರ್ಗ ಮಂಥನ’ದ ಹದಿಮೂರು ಲೇಖನಗಳನ್ನು ಓದಿ ಎಚ್.ಎಸ್ ಶಿವಪ್ರಕಾಶರು ಬರೆದಿರುವ ಪ್ರಬುದ್ದ ಪ್ರತಿಕ್ರಿಯೆ ಚನ್ನಾಗಿ ಬಂದಿದೆ, ಓದಿ ಸಂತೋಷಪಡಬಹುದು.

- csomsekraiah ರವರ ಬ್ಲಾಗ್
- Login or register to post comments
- 394 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS: