ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
ದೆಹಲಿಯ ಉಗ್ರರ ವಿರುದ್ದದ ಕಾರ್ಯಾಚರಣೆಯಲ್ಲಿ ಪ್ರಾಣ ತೆತ್ತ ಪೋಲೀಸ್ ಅಧಿಕಾರಿ ಮೋಹನ್ ಚಂದ್ರ ಶರ್ಮ ಅವರ ಸಾವು ಸಂಭವಿಸಿದ್ದು ಗುಂಡೇಟಿನಿಂದ ಅಲ್ಲ ! ಎರಡು ಗುಂಡುಗಳು ಅವರ ದೇಹವನ್ನು ಹೊಕ್ಕ ನಂತರ ಸಂಭವಿಸಿದ ಹೃದಯಾಘಾತದಿಂದ . ಅದೊಂದು ಕೇವಲ ವೈದ್ಯರ ತಾಂತ್ರಿಕ ವರದಿ ಎನ್ನುತ್ತೀರಾ ? ಜನ ಸಾಮಾನ್ಯರು ಮಂಗಾ ಆಗುತ್ತಿರುವುದು ಇಲ್ಲೇ ! ಉಗ್ರರ ವಿರುದ್ದದ ಕೇಸ್ ವೀಕ್ ಆಗಲು ತಾಂತ್ರಿಕ ನೆರವಿಗೆ ಇಷ್ಟು ಕಾರಣ ಸಾಕು . ಉಗ್ರರು ಕೇವಲ ಗುಂಡು ಹಾರಿಸಿದರು ಅಷ್ಟೇ, ಅಷ್ಟಕ್ಕೆ ಮೋಹನ್ ಚಂದ್ ಶರ್ಮರ ಹೃದಯ ಕೆಲಸ ಮಾಡುವುದನ್ನೇ ನಿಲ್ಲಿಸಿದರೆ ಉಗ್ರರದೇನು ತಪ್ಪು ?
ಸಮಾಜವಾದಿ ನಾಯಕ ಅಮರ್ ಸಿಂಗ್ ರ ಹೇಳಿಕೆಗಳನ್ನು ಸರಿಯಾಗಿ ಗಮನಿಸಿ, ವೈದ್ಯರು ನೀಡಿರುವ ವರದಿಗೂ ಕೇಂದ್ರ ಸರ್ಕಾರಕ್ಕೆ ಅವರ ಪಕ್ಷ ನೀಡಿರುವ ಬೆಂಬಲಕ್ಕೂ ಇರುವ ಅಗೋಚರ ತಂತು ಕಂಡು ಬರುತ್ತದೆ .
ರಸಾತಳ ಮುಟ್ಟಿರುವ ನಮ್ಮ ಓಟ್ ಬ್ಯಾಂಕ್ ರಾಜಕಾರಣದ ಪರಿಣಾಮಗಳು ಈ ದೇಶದ ಅತ್ಮಹತ್ಯೆಗೆ ಅಗತ್ಯವಾದ ಎಲ್ಲವನ್ನೂ ಮಾಡುತ್ತಿವೆ . ಇನ್ನು ಮುಂದೆ ಬಾಂಬ್ ದಾಳಿಗಳಿಂದ ಈ ದೇಶದಲ್ಲಿ ಸಾವುಗಳೇ ಸಂಭವಿಸುತ್ತಿಲ್ಲ ಅದೆಲ್ಲ ವಿರೋಧಪಕ್ಷಗಳ ಪಿತೂರಿ ಎಂಬ ಹೇಳಿಕೆಗಳು ರಾಜಕಾರಣಿಗಳಿಂದ ಬಂದರೆ ಏನೂ ಆಶ್ಚರ್ಯಪಡಬೇಕಾಗಿಲ್ಲ! ಏಕೆಂದರೆ ಉಗ್ರರಿಗೆ ಯಾರನ್ನೂ ಕೊಲ್ಲುವ ಉದ್ದೇಶ ಇರುವುದೇ ಇಲ್ಲ, ಅವರು ಕೇವಲ ಬಾಂಬುಗಳನ್ನು ಇಡುತ್ತಾರಷ್ಟೆ , ಆ ಸಮಯಕ್ಕೆ ಸತ್ತವರು ಅಲ್ಲಿಗೆ ಹೋದದ್ದೇ ಅವರು ಮಾಡಿದ ತಪ್ಪು ! ನೋಡಿ ಮನೆಗಳಲ್ಲಿದ್ದವರು ಯಾರಾದರೂ ಸತ್ತಿದ್ದಾರೆಯೇ ? ಪಾಪ ಉಗ್ರಗಾಮಿಗಳನ್ನೇಕೆ ನಿಂದಿಸಬೇಕು ? ಈ ಧಾಟಿಗೆ ಹತ್ತಿರದಲ್ಲೇ ಇದೆ ಅಮರ್ ಸಿಂಗರ ವಾದ ಸರಣಿ . ಮೇರಾ ಭಾರತ್ ಮಹಾನ್

- csomsekraiah ರವರ ಬ್ಲಾಗ್
- Login or register to post comments
- 262 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
" ಉಗ್ರರ ವಿರುದ್ದದ ಕೇಸ್ ವೀಕ್ ಆಗಲು ತಾಂತ್ರಿಕ ನೆರವಿಗೆ ಇಷ್ಟು ಕಾರಣ ಸಾಕು ."
ಅಶ್ಟಕ್ಕೂ ಎಲ್ಲಾ ಆದ ಮೇಲೆ, ಕೇಸ್ ನಡೆಸಿ ಏನೂ ಆಗುವುದಿಲ್ಲಾ.., ಅಂತಾ ನನ್ನ ಅನಿಸಿಕೆ.
"ರಸಾತಳ ಮುಟ್ಟಿರುವ ನಮ್ಮ ಓಟ್ ಬ್ಯಾಂಕ್ ರಾಜಕಾರಣದ ಪರಿಣಾಮಗಳು ಈ ದೇಶದ ಅತ್ಮಹತ್ಯೆಗೆ ಅಗತ್ಯವಾದ ಎಲ್ಲವನ್ನೂ ಮಾಡುತ್ತಿವೆ "
ನಿಜ, ಸೋಮಶೇಖರ್ ಅವರೆ.., ನೀವು ನೋಡಿಲ್ಲವಾದರೆ, ಒಂದ್ಸಲ "Wednesday" ಅನ್ನೂ ಹಿಂದಿ ಸಿನಿಮಾ ನೋಡಿ. ಭಯೋತ್ಪಾದನೆಯಿಂದ ರೇಜಿಗೆ ಬಂದು ಸಾಮಾನ್ಯ ಮನುಶ್ಯ ಏನು ಮಾಡಬಹುದು ಎಂದು ಚೆನ್ನಾಗಿ ತೋರಿಸಿದ್ದಾರೆ.
ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
ದೆಹಲಿ ಪೊಲೀಸರ ಬಗ್ಗೆ ಒಂದು ಹಳೆಯ ಜೋಕು.
ವಿಶ್ವದ ಎಲ್ಲ ಪೋಲೀಸ್ ಪಡೆಗಳ ನಡುವೆ ಒಂದು ಸ್ಪರ್ಧೆ ಆಯೋಜಿಸಲಾಗಿತ್ತಂತೆ. ಪಂಥ ಏನು ಅಂತಂತಂದ್ರೆ ಕಾಡಿಗೆ ಹೋಗಿ ಹುಲಿ ಹಿಡ್ಕೊಂಡು ಬರಬೇಕು ಅಂತ.
ಸರಿ, ಸ್ಪರ್ಧೆ ಸುರು ಆಯ್ತು. ಎಲ್ಲ ಪಡೆಗಳು ಕಾಡಿಗೆ ಹೋದವು. ಕೆಲವರಿಗೆ ಹುಲಿ ಸಿಕ್ಕಿದವು ಕೆಲವರಿಗೆ ಸಿಗಲಿಲ್ಲ. ಎಲ್ಲರೂ ಬಂದರೂ ಡೆಲ್ಲಿ ಪೋಲಿಸ್ ಪಡೆ ಇನ್ನೂ ಹೊರಗೆ ಬರ್ಲಿಲ್ಲಂತೆ. ಅವಧಿ ಮುಗೀತ ಇದೆ ಅಂತಾಗುವಾಗ ನೋಡಪ್ಪ ಎಲ್ಲಿದಾರೆ ಅಂತ ನೋಡ್ಕೊಂಡು ಬಾ ಅಂತ ಸಾಹೇಬ್ರು ಒಬ್ಬನನ್ನ ಒಳಗೆ ಕಳುಹಿಸಿದರಂತೆ. ಅಲ್ಲಿ ಒಂದ್ಕಡೆ ಈ ಪೊಲೀಸರು ಒಂದು ಬೆಕ್ಕನ್ನ ಮರಕ್ಕೆ ಕಟ್ಟಿ ಹಾಕಿ "ಬೊ.. ಮಗನೆ, ಬೊಗಳು ನಾನೇ ಹುಲಿ ಅಂತ.." ಅಂತ ಅದಕ್ಕೆ ಏರೋಪ್ಲೇನ್ ಹತ್ತಿಸ್ತ ಇದ್ರಂತೆ.
ದೆಹಲಿ ಪೊಲೀಸರಿಗೆ ಈ ಬಾಂಬು ವಾದಿಗಳನ್ನ ಹಿಡಿಯಲು ಬೇಕಾದ ಚಾಣಾಕ್ಷತನ ಇದೆಯೋ ಇಲ್ಲವೊ ಗೊತ್ತಿಲ್ಲ ಆದರೆ ಒಂದಂತು ನಿಜ. ಒಮ್ಮೆ ಒಳ ಹೋದ್ರೆ ಅರ್ಧಗಂಟೆಯಲ್ಲಿ ಯಾರಿಂದ ಬೇಕಾದರೂ ತಾನೆ ಮಾಡಿದ್ದು ಅಂತ ಹೇಳಿಸಿಬಿಡ್ತಾರೆ.
ಈಗ್ಯೆ ಕೆಲವು ದಿನಗಳ ಹಿಂದೆ ಒಬ್ಬ ಎನ್ಕೌಂಟರ್ ಸ್ಪೆಶಲಿಸ್ತು ಡೆಲ್ಲಿ ಪೋಲಿಸ್ ಅಧಿಕಾರಿ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬನಿಂದ ಹತನಾದ. ಅವನು ಯಾವ ರೀತಿಯಲ್ಲಿ ಜನರನ್ನು ಸುಲಿಗೆ ಮಾಡುತ್ತಿದ್ದ ಎನ್ನುವುದು ಇದೀಗ ಜನಜನಿತ. ಈ ಪೋಲಿಸ್ ಮತ್ತು ಮೀಡಿಯ ಸೇರಿ ಆರುಷಿ ಮರ್ಡರ್ ಕೇಸ್ ಅನ್ನು ಯಕ್ಕುಟ್ಟು ಎಸೆದಿದ್ದು ಇನ್ನೂ ಜನ ಮರೆತಿಲ್ಲ.
ಆದ ಕಾರಣ ಶರ್ಮ ಸತ್ತರೂ ಅವನ ಸಾವನ್ನು "ಶಹೀದ್" ಎಂದು ವಿಜ್ರಂಭಿಸಲು ಮನಸೊಪ್ಪುತ್ತಿಲ್ಲ.
ಸತ್ತವರು ನಿಜಕ್ಕೂ ಉಗ್ರಗಾಮಿಗಳೇ ಇರಬಹುದು ಆದರೆ ಡೆಲ್ಲಿ ಪೋಲಿಸ್ ಅದನ್ನು ನಿಭಾಯಿಸಿದ ರೀತಿ ಇನ್ನಷ್ಟು ಪ್ರೊಫೆಶನಲ್ ಆಗಿದ್ದಲ್ಲಿ ಚೆನ್ನಾಗಿರುತ್ತಿತ್ತು.
ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
ಅದನ್ನು ನಕಲಿ ಎಂದು ಹೇಳಿ ಎನ್ಕೌಂಟರನ್ನು ನ್ಯಾಯಾಂಗ ತನಿಖೆಗೆ ವಹಿಸಿರುವುದು ನಿಜಕ್ಕು ದೊಡ್ದ ದುರಂತ. ಇದು ನಮ್ಮ ನಾಯಕರು ಒಬ್ಬ ಪ್ರಮಾಣಿಕ ಪೋಲಿಸ್ಗೆ ನೀಡುವ ಗೌರವ
. ಶರ್ಮಾರವರ ಮನೆಗೆ ಕೊಟ್ಟಿದ್ದ ಪರಿಹಾರ ಹಣವನ್ನು ಹಿಂತಿರುಗಿಸಿದ್ದಾರೆ ಅಂದ್ರೆ ಅವರ ಮನೆಯವರಿಗೆಲ್ಲಾ ಎಷ್ಟು ಮನ ನೊಂದಿರಬಹುದು? ಹಿಂದೆ ಲಾಲು ಪ್ರಸಾದ್ರವರು ಹೇಳಿದ್ದರು , ಅಹಮದಾಬಾದ್ನಲ್ಲಿ ಬಂಧಿಸಲ್ಪಟ್ಟವರೆಲ್ಲಾ ಅಮಾಯಿಕರು ಎಂದು.ಪಾಕಿಸ್ತಾನದ ಬಾವುಟವನ್ನು ಭಾರತದಲ್ಲಿ ಹಾರಿಸಿದರೂ ಯಾರೊಬ್ಬರು ಖಂಡಿಸಲ್ಲಿಲ್ಲ. ವೋಟ್ ಗೋಸ್ಕರ ಅಮರ್ಸಿಂಗರ ಹೇಳಿಕೆ ಬೇಸರ ತರುವಂತಹುದ್ದು. ಬಾಂಬ್ ಬ್ಲಾಸ್ಟ್ಗಳಲ್ಲಿ ಸೆರೆ ಸಿಕ್ಕ ಉಗ್ರರು ಎಲ್ಲರೂ ಸಿಮಿ , ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ್ದರೂ ಸಹ ಅದನ್ನು ನಿಷೇಧಿಸಲು ಹೇಳಲ್ಲಿಲ್ಲ ಅದರಲ್ಲಿ ಹಲವಾರು ಜನರು ಅಸು ನೀಗಿದರು. ಚರ್ಚ್ಗಳ ಮೇಲೆ ಧಾಳಿ ನೆಡೆದರೆ ಕೇಂದ್ರದಿಂದ ಒಂದು ತನಿಖಾ ತಂಡವನ್ನು ಕಳುಹಿಸುತ್ತದೆ ಅದ್ರ ಜೊತೆ ಗೃಹ ಮಂತ್ರಿಗಳು ಬಂದು ವಿಚಾರಿಸುತ್ತಾರೆ (ಈ ದುರ್ಘಟನೆ ನೆಡೆಯಬಾರದಿತ್ತು , ಆದ್ರೆ ಬಾಂಬ್ ಹಾಕಿ ಜನರು ಅಸು ನೀಗಿದ್ರು ಬರದೇ ಇರುವವರು ಈಗ ಬರುವ ಅವಶ್ಯಕತೆ ಇತ್ತಾ?). ಎಷ್ಟು ಕೀಳು ಮಟ್ಟಕ್ಕಿದೆ ಇವರ ರಾಜಕೀಯ ತಂತ್ರ
.
ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
ಪ್ರೀತಿಯ ಗುರುಬಾಳಿಗ ಅವರೇ
ತಾವು ಎತ್ತಿರುವ ಪ್ರಶ್ನೆಗಳು ಡೆಮಾಕ್ರಸಿಯಲ್ಲಿ ಪ್ರಸ್ತುತವಾದವು ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ . ಮತ್ತು ದೆಹಲಿ ಪೋಲೀಸರ ನಡವಳಿಕೆಗಳ ಬಗೆಗಿನ ನಿಮ್ಮ ಸಂದೇಹ ಸಹ ಒಬ್ಬ ನಾಗರಿಕನಾಗಿ ಸರಿಯಾದುದೇ . ಆದರೆ ಇದು ದೆಹಲಿ ಪೋಲೀಸರ ವಿಷಯ ಮಾತ್ರವಲ್ಲ ; ನಮ್ಮ ಊರ ಪೋಲಿಸರ ಬಗ್ಗೆ ಸಹ , ಇಡೀ ಭಾರತೀಯ ಪೋಲೀಸು ವ್ಯವಸ್ಥೆಯ ವಿಷಯದಲ್ಲೂ ಅಷ್ಟೇ ನಿಜವಲ್ಲವೇ ? ಹಾಗಾದರೆ ಏಕೆ ಪೋಲೀಸು ವ್ಯವಸ್ಥೆ ಹೀಗೆ ಭಷ್ಟಗೊಂಡಿದೆ ಎಂಬ ಪ್ರಶ್ನೆ ಸಹ ಯೋಗ್ಯವಾದುದೇ ಆಗುತ್ತದೆ .
ಪೋಲೀಸರೂ ಸಹ ನಮ್ಮ ನಡುವಣ ಮನುಷ್ಯರೇ ತಾನೆ , ಅಲ್ಲಿಯೂ ನಾಗರಿಕ ಪ್ರಪಂಚದಲ್ಲಿದ್ದಂತೆ , ಕ್ರೂರರಿಂದ ಉದಾರರ ವರೆಗೆ , ಭ್ರಷ್ಟರಿಂದ ಪ್ರಾಮಾಣಿಕರ ವರೆಗೆ ಎಲ್ಲ ವಿಧದ ಮನಃಸ್ಥಿತಿಯ ಜನ ಇದ್ದೇ ಇರುತ್ತಾರೆ . ಇವತ್ತಿನ ಸಮಾಜದ ಪ್ರತಿ ಬಿಂಬವೇ ಪೋಲೀಸರೂ ಸೇರಿದಂತೆ ಎಲ್ಲ ಇಲಾಖೆಗಳ ಜನ ಸಹ .
ಆದರೆ ಈ ಪೋಲೀಸರು ಅತಿ ಹೆಚ್ಚು ರಾಜಕೀಯ ಒತ್ತಡದಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಇರುವವರು . ಇವತ್ತಿನ ಸಂದರ್ಭದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಪೋಲೀಸು ಇಲಾಖೆಯನ್ನು ದುರುಪಯೋಗ ಮಾಡಿಕೊಳ್ಳದೆ ಇರುವುದಿಲ್ಲ . ರಾಜಕೀಯದಲ್ಲಿರುವ ಮೂರ್ಖರ ತಾಳಕ್ಕೆ ಪೋಲೀಸರು ಕುಣಿಯುವ ಪ್ರಸಂಗ ಬಂದೇ ಬರುತ್ತದೆ . ಪ್ರತಿದಿನ ಒತ್ತಡ ಅಪಾಯಗಳಿಗೆ ಮುಖ ಕೊಟ್ಟು ಕೆಲಸ ಮಾಡಬೇಕಾದ ಪರಿಸ್ಥಿತಿಯಲ್ಲಿ ಸಹಜವಾಗಿಯೇ ಪೋಲೀಸರು ಕಠಿಣಮನಸ್ಕರಾಗುತ್ತಾರೆ .
ಇವತ್ತು ಸಿ.ಬಿ.ಐ ನಿಂದ ಹಿಡಿದು ಎಲ್ಲ ತನಿಖಾಸಂಸ್ಥೆಗಳ ವೈಖರಿಯಲ್ಲಿ ರಾಜಕೀಯ ಪ್ರಭಾವವೇ ಎದ್ದು ಕಾಣುತ್ತದೆ . ಈಗ ದೆಹಲಿಯ ಘಟನೆಗೆ ಬಂದರೆ ಪೋಲೀಸರ ಹೆಣವೇ ಉರುಳಿದಾಗಲೂ ಅದನ್ನೂ ನಾಟಕ ಎಂದು ಕರೆಯಲು ನಾವು ಹಿಂಜರಿಯುವುದಿಲ್ಲ ಎಂದರೆ ನಮ್ಮ ಚಿಂತನಾಕ್ರಮದ ಬಗ್ಗೆಯೂ ನಾವು ತನಿಖೆ ಮಾಡಿಕೊಳ್ಳಲೇಬೇಕಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ .
ಇಂತಹದೊಂದು ಜ್ವಲಂತ ಸಮಸ್ಯೆಯ ಬಗೆಗೆ ತಕ್ಷಣ ಸ್ಪಂದಿಸಿದ ಹರ್ಷಬ್ ಮತ್ತು ರಾಜೇಶ್ವರಿಯವರಿಗೆ ಆತ್ಮೀಯ ಅಭಿನಂದನೆಗಳು .
ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
ದೆಹಲಿಯ ಪೊಲೀಸರು ದೇಶದ ಎಲ್ಲ ಪೊಲೀಸರಿಗಿಂತ ದುಪ್ಪಟ್ಟು ಒತ್ತಡದಲ್ಲಿರುವವರು. ಅವರು ಸಂತೈಸಬೇಕಾದ ರಾಜಕೀಯ ವರ್ತುಲಗಳ ಕೇಂದ್ರಗಳೆಲ್ಲ ಇಲ್ಲೇ ಇರುವುದರಿಂದ ಗುಲಾಮಗಿರಿಯಲ್ಲೇ ಅವರ ದಿನಗಳು ಸವೆಯುತ್ತವೆ. ಆದುದರಿಂದ ಲಾ ಅಂಡ್ ಆರ್ಡರ್ ಪ್ರಶ್ನೆ ಬಂದಾಗ ಒಂದು ಕೇಸನ್ನು ಸಾವಧಾನದಿಂದ ನಿಭಾಯಿಸುವುದು ದೆಹಲಿ ಪೋಲಿಸರಿಂದ ಕಷ್ಟ ಸಾಧ್ಯ.
ನಾವು ಅವರ ಪರ ವಹಿಸಿ ವಾದ ಮಾಡುವಷ್ಟು ಸಾಚಾತನ ದೆಹಲಿ ಪೊಲೀಸರಲ್ಲಿ ಉಳಿದಿಲ್ಲ.
ಈಗ ಯಾವುದಕ್ಕೂ ತನಿಖೆ ನಡೆಯುತ್ತಿದೆ. ಭಾರತವಿಡಿ ಅದರಲ್ಲೂ ದೆಹಲಿಯ ಜನತೆ ಅದನ್ನು ಸಾವಧಾನದಿಂದ ಕಾಯುತ್ತಿದೆ. ನಾನೂ ಇದು ನಿಜವಾದ ಏನ್ ಕೌಂಟರ್ ಆಗಿರಲಿ ಎಂದು ಪ್ರಾರ್ಥಿಸುತ್ತೇನೆ.
ಒಂದು ವೇಳೆ ಇದು ನಿಜಕ್ಕೂ ಫೇಕ್ ಆದರೆ ಸಮಗ್ರ ಪೋಲಿಸ್ ವ್ಯವಸ್ಥೆಯ ಬಗ್ಗೆ ಜನರಲ್ಲಿ ಸ್ವಲ್ಪವಷ್ಟೇ ಉಳಿದಿರಬಹುದಾದ ಭರವಸೆಯು ಕುಸಿದು ಬೀಳಲಿದೆ ಎಂದು ಉಹಿಸಿದಲ್ಲಿ ಗಾಬರಿಯಾಗುತ್ತದೆ.
ಟೆರರಿಸಂ ಅನ್ನು ನಿಭಾಯಿಸಲು ಹೆಚ್ಚಿನ ಅಧಿಕಾರವುಳ್ಳ ಕೇಂದ್ರೀಯ ಏಜೆನ್ಸಿ ಒಂದರ ಅಗತ್ಯವಿದೆ.