ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › Chetan.Jeeral ರವರ ಬ್ಲಾಗ್

ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?

August 12, 2008 - 11:24am — Chetan.Jeeral

ನಮಸ್ಕಾರ,
actually ಕನ್ನಡಕ್ಕೆ ಸಿಗಬೇಕಾದ ಶಾಸ್ತ್ರಿಯ ಸ್ಥಾನಮಾನದ ಕುರಿತು ನಿಮ್ಮೊಂದಿಗೆ ಕೆಲವು ಮಾತುಗಳನ್ನ ಹಂಚಿಕೊಳ್ಳಬೇಕು ಅಂತ ಇದೀನಿ.
ಇವತ್ತಿನ ದಿನ ನಮ್ಮ ಭಾರತವನ್ನ ಒಂದು ಒಕ್ಕೂಟದ ವ್ಯವಸ್ಥೆ ಇರುವ ಒಂದು ದೇಶ ಹೌದಾ ಅನ್ನೋ ಅನುಮಾನ ಬರಲು ಶುರುವಾಗಿದೆ. ಪ್ರತಿಸಾರಿ ಇನ್ನೇನು ನಮ್ಮ ಕನ್ನಡಕ್ಕೆ ಶಾಸ್ತ್ರಿಯ ಭಾಷೆ ಸ್ಥಾನ ಸಿಕ್ತು ಅನೂ ಹೊತ್ತಿಗೆ ನಮ್ಮ ಪಕ್ಕದ ತಮಿಳುನಾಡು ಏನಾದ್ರೂ ಕ್ಯಾತೆ ತಗೆಯುತ್ತೆ, ಅರೆ ಕನ್ನಡಕ್ಕೆ ಸುಮಾರು ೨೫೦೦ ವರುಷಗಳ ಲಿಪಿಯ ಇತಿಹಾಸವಿದೆ, ಅದಕ್ಕೆ ಬೇಕಾದ ಎಲ್ಲ ಪುರಾವೆಗಳನ್ನು ಕೊಟ್ಟು ಇನ್ನೇನು ನಮಗೆ ಸ್ಥಾನ ಸಿಕ್ತು ಅನ್ನೋ ಹೊತ್ತಿಗೆ ನಮ್ಮ ನೆರೆ ರಾಜ್ಯದವರ ಹೊಸ ತಗಾದೆ ಏನು ಅಂದ್ರೆ ಶಾಸ್ತ್ರಿಯ ಭಾಷೆಯನ್ನ ನಿರ್ಧರಿಸುವ ಸಮಿತಿ ಸರಿಯಾಗಿಲ್ಲ ಅದನ್ನ ರದ್ದುಪಡಿಸಿ ಹೊಸ ಸಮಿತಿಯನ್ನ ರಚಿಸಿ ಅನ್ನೋ ಕಾರಣ. ಅರೆ ನಿಮಗೆ ಒಂದು ಮಾತು ಹೇಳ್ತೀನಿ ಇದೆ ತಮಿಳಿಗೆ ಶಾಸ್ತ್ರಿಯ ಭಾಷೆ ಸ್ಥಾನ ನೀಡುವಾಗ ಯಾವುದೇ ನಿಯಮಗಳಿರಲಿಲ್ಲ.ಡಿ.ಎಂ.ಕೆ ಪಕ್ಷ ಕೇಂದ್ರದ ಯು.ಪಿ.ಏ ಪಕ್ಷಕ್ಕೆ ಬೆಂಬಲ ನೀಡುವಾಗ ಅದು ಹಾಕಿದ ಕೆಲವು ಷರತ್ತುಗಳಲ್ಲಿ ತಮಿಳಿಗೆ ಶಾಸ್ತ್ರಿಯ ಭಾಷೆ ಪಟ್ಟ ಕೊಡಬೇಕು ಅನ್ನುವುದು ಆಗಿತ್ತು, ಅದು ಅವರ ರಾಜಕೀಯ ಹಿತಾಸಕ್ತಿ ಇಂದ ಆಗಿದ್ದು ಅಂದುಕೊಂಡು ಸುಮ್ಮನಾಗೆಬು ಅಸ್ಟೆ. ಆದ್ರೆ ಯಾವಾಗ ಕರ್ನಾಟಕ ಮತ್ತು ಆಂಧ್ರ ಪ್ರದೇಶದವರು ನಮಗೂ ಶಾಸ್ತ್ರಿಯ ಭಾಷೆ ಸ್ಥಾನ ನೀಡಿ ಅನ್ನೋದಕ್ಕೆ ಶುರು ಮಾಡಿದರೋ ಅವಾಗ್ಲೇ ತಮಿಳುನಾಡು ಕೇಂದ್ರದ ಮೇಲೆ ತನ್ನ ಒತ್ತಡ ಹಾಕಿ ಶಾಸ್ತ್ರಿಯ ಭಾಷೆಗೆ ಒಂದು ಸಮಿತಿಯನ್ನ ಮಾಡೋಕೆ ಹೇಳಿತು, ಕೋಲೆ ಬಸವನ ಹಾಗೆ ತಲೆ ಆಡಿಸಿದ ಕೇಂದ್ರ, ಸಮಿತಿಯನ್ನು ಮಾಡಿತು, ಮೊದಲಿಗೆ ೧೦೦೦ ವರ್ಷ ಅನ್ನೋ ಮಿತಿ ಇದ್ದದನ್ನು ೧೫೦೦ ವರ್ಷಕ್ಕೆ ಏರಿಸಿದರು, ಯಾವಾಗ ಎಲ್ಲ ಷರತ್ತುಗಳನ್ನು ನಮ್ಮ ಕನ್ನಡ ಭಾಷೆ ಪೂರಸಿತೋ ಆವಾಗಿನಿಂದ ಏನಾದ್ರೂ ಒಂದು ಕುಂಟು ನೆಪ ಹೇಳಿ ಕನ್ನಡಕ್ಕೆ ಶಾಸ್ತ್ರಿಯ ಭಾಷೆ ಪಟ್ಟ ಸಿಗಬಾರದು ಅಂತ ಹೊದೆದಾಡ್ತಾ ಇದೆ.
ಅದೆಲ್ಲ ಸರಿ ಕನ್ನಡಕ್ಕೆ ಶಾಸ್ತ್ರಿಯ ಭಾಷೆ ಅನ್ನೋ ಪಟ್ಟ ಏನಕ್ಕೆ ಬೇಕು ಅನ್ನೋ ಪ್ರಶ್ನೆ ನಿಮ್ಮದಾಗಿದ್ರೆ ಕೆಳಗೆ ಓದಿ,
೧)ಪ್ರತಿ ವರುಷ ಕೇಂದ್ರದಿಂದ ೧೦೦ ಕೋಟಿ ರೂ ಅನುದಾನ ಸಿಗುತ್ತದೆ. ಇದನ್ನ ಕನ್ನಡದ ಕೆಲಸಗಳಿಗೆ ಬಳಸಬಹುದು
೨)ಎಲ್ಲ ರಾಜ್ಯಗಳಲ್ಲೂ ಕನ್ನಡ ಅಧ್ಯಾಯನ ಪೀಠ ಸ್ಥಾಪನೆ ಆಗುತ್ತದೆ,ಇದರಿಂದ ಕನ್ನಡದ ಬಗ್ಗೆ ಸಂಶೋಧನೆ ಹಾಗು ಅಭಿವೃದ್ದಿಯ ಕಾರ್ಯಗಳು ಚುರುಕು ಗೊಳ್ಳುತ್ತವೆ
೩)ಶಾಸ್ತ್ರಿಯ ಭಾಷೆ ಅನ್ನೋ ಪಟ್ಟ ಭಾರತ ಸರಕಾರದ ಒಂದು ಮೊಹರು ಇದರಿಂದ ವಿದೇಶದಲ್ಲೂ ಕೂಡ ಕನ್ನಡ ಅಧ್ಯಾಯನ ಪೀಠ ಸ್ಥಾಪನೆ ಮಾಡಬಹುದು.
ಹೀಗೆ ಇನ್ನು ಹಲವು ಒಳ್ಳೆಯ ಕಾರ್ಯಕ್ರಮಗಳು ನಮಗೆ ಸಿಗುತ್ತವೆ,
ಈಗ ಯೋಚನೆ ಮಾಡಿ ಇವೆಲ್ಲ ಕೇವಲ ಒಂದು ಭಾಷೆಯ ಸ್ವತ್ತು ಆಗೋದು ಯಾವ ನ್ಯಾಯ, ನಮ್ಮ ಕನ್ನಡಕ್ಕೆ ತಿಮಿಳಿಗಿಂತ ಹಳೆಯದಾದ ಪ್ರಾಚೀನತೆ ಇದೆ, ಹಳೆಯ ಭಾಷ ಸಾಹಿತ್ಯವಿದೆ, ತಮಿಳಿನ ಮೊದಲ ಭಾಷ ಗ್ರಂಥದಲ್ಲಿ ಕನ್ನಡ ಪದಗಳನ್ನ ಬಳಕೆ ಮಾಡಲಾಗಿದೆ. ಇದೆಲ್ಲ ಗೊತ್ತಿದ್ರು ತಮಿಳು ನಾಡು ತನ್ನ ಧೂರ್ತತೆಯನ್ನ ಬಿಡುತ್ತಿಲ್ಲ.

ಇನ್ನು ನಮ್ಮ ಶಾಸಕ, ಸಂಸದರ ಬಗ್ಗೆ ಇಲ್ಲಿ ಮಾತನಾಡದೇ ಇರುವುದು ಒಳಿತು, ಅವರಿಂದ ಏನು ಆಗೋದಿಲ್ಲ ಅನ್ನೋದು ಈಗಾಗಲೇ ಸ್ಪಷ್ಟ. ಇನ್ನು ಕರ್ನಾಟಕ ರಕ್ಷಣಾ ವೇದಿಕೆ, ಕೆಲವು ಕನ್ನಡ ಪರಸಂಘಟನೆಗಳು ದನಿ ಎತ್ತುತ್ತಿವೆ, ಆದ್ರೆ ಅದನ್ನ ಕೇಂದ್ರಕ್ಕೆ ತಲುಪಿಸುವ ಕೆಲಸ ಆಗುತ್ತಿಲ್ಲ. ಅದ್ರು ಇನ್ನು ನಮ್ಮ ಜನತೆ ನಮಗೂ ಆ ಸ್ಥಾನ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿ ಕಾಯುತ್ತ ಕುಳಿತಿದ್ದಾರೆ.
ಎಲ್ಲದರಲ್ಲೂ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ ಅನ್ನುವುದು ಗೊತ್ತಿರುವ ವಿಚಾರವೇ ಆದ್ರೆ ಎಷ್ಟು ಅಂತ ಸಹಿಸಿಕೊಳ್ಳುತ್ತ ಕೂತ್ಕೊಬೇಕು. "Every thing has its own thresh hold" ಅನ್ನೋ ತರ ಕನ್ನಡಿಗರಿಗೂ ಅದು ಇರತ್ತೆ ಅನ್ನೋದನ್ನ ಕೇಂದ್ರ ಅರ್ಥಮಾಡ್ಕೋ ಬೇಕು.

  • kannada
  • kannadiga
  • karnataka
  • tamil nadu
~.~
  • Chetan.Jeeral ರವರ ಬ್ಲಾಗ್
  • Login or register to post comments
  • 278 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 12, 2008 - 12:31pm — mahesha

ಉ: ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?

mahesha's picture

ನೋಡ್ರಪ್ಪ..

ಕ್ಲಾಸಿಕಲ್ ಲ್ಯಾಂಗ್ವೇಜ್ ಸ್ಟೇಟಸ್ ಅನ್ನೋದು ತಮಿಳರ ಅಯ್ಡಿಯ. ಅದನ್ನು ಅವರು ಪೇಟೆಂಟ್ ಮಾಡಿಲ್ಲ ಅಶ್ಟೆ....

ನಮ್ಮ ದೇಸದಾಗೆ ಕ್ಲಾಸಿಕಲ್ ಲ್ಯಾಂಗ್ವೇಜ್ ಅಂದ್ರೇನು ಅನ್ನೋ ಡೆಪೆನಿಶನ್ನಿಂದ ಹಿಡಿದು, ಅದಕ್ಕೆ ಏನೇ ಸವಲತ್ತು ಕೊಡಬೇಕು ಅನ್ನೋದನ್ನೂ ಡಿ.ಎಂ.ಕೆ ಪಕ್ಷ ಫ್ರೇಮ್ ಮಾಡಿದೆ.

ಸಮತಿಯೇ ಲಾಯಕ್ಕಿಲ್ಲ ಅಂತ ತೋರಿಸಿಬಿಟ್ರೇ, ಇನ್ನೊಂದು ವಸ ಸಮಿತಿ ಮಾಡಬೇಕಾಗ್ತದೆ. ಅಶ್ಟೊತ್ತಿಗೆ ದೊಡ್ಡ ಎಲೆಕ್ಶನ್ನು. ...

ಆಮೇಲೆ ಅದು ಯಾವಾಗ ಮತ್ತೆ ಸಮಿತಿ ಮಾಡೋದು, ಮುಂತಾದವು..

ತಮಿಳರ ಗುರ ಇದ್ದುದ್ದೇ "ತಮ್ಮೊದೊಂದೇ ನುಡಿ ಎಲ್ಲದರಕ್ಕಿಂತ ಮೇಲು" ಅಂತ ತೋರಿಸಿಕೊಳ್ಳಕ್ಕೆ, ಏನೋ ಕಡಮೆ ಮಂದಿಗೆ ಬೇಕಾದ ಸಂಸ್ಕ್ರತಕ್ಕೆ ಆಮ್ಯಾಕೆ ಬಿಟ್-ಕೊಟ್ಟವ್ರೆ.. ಆದ್ರೆ ಕನ್ನಡ-ತೆಲುಗು ಅಂತ ಹೆಚ್ಚೆಚ್ ಮಂದಿ ಮಾತಾಡೋ ದೊಡ್ಡದೊಡ್ಡ ನುಡಿಗಳನ್ನು ತಮ್ಮ ನುಡಿಗೆ ಸಮ ಅನ್ನೋಕೆ ಬಿಟ್ರೆ, ಅವರು ಗುರಿಯಲ್ಲಿ ಸೋತಂತಲ್ವ?

ವಸಿ ಅವರ ಗುರಿಗಳನ್ನ ಅರಿತುಕೋಬೇಕು ನಾವು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 12:32pm — mahesha

ಉ: ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?

mahesha's picture

ತಮಿಳರ ಗುರ ಅಲ್ಲ ಗುರಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 1:02pm — Chetan.Jeeral

ಉ: ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?

Chetan.Jeeral's picture

ನಿಜ ಭಾಷೆ, ನೆಲ, ಜಲ ಸಂರಕ್ಷಣೆಯಲ್ಲಿ ಅವರಿಂದ ಕಲಿಯುವುದು ಬಹಳಷ್ಟಿದೆ. ಅತಿ ಆದ್ರೆ ಅಮೃತಾನು ವಿಷ ಅನ್ನೋ ಹಾಗೆ ಆಗಬಾರದು ಅಸ್ಟೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 1:14pm — mahesha

ಉ: ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?

mahesha's picture

Smiling ಕೆಲಸ ಮಾಡಕ್ಕೆ ಮುಂಜೇನೇ ’ಅತಿ’ ಅನ್ನೋ ಪರಿಮಿತಿ.. Smiling

ಇದೂ ಒಂದು ಪುಕ್ಕಲುತನ.. ಬಿಡಿ..

"ನಾನು ಕನ್ನಡಿಗ ನಾನು ಪುಕ್ಕಲ" ಅದಕ್ಕೇ ನನ್ ಕಯ್ಯಲ್ಲಿ ಏನೂ ಆಗಲ್ಲ.!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 1:22pm — Chetan.Jeeral

ಉ: ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?

Chetan.Jeeral's picture

ಕನ್ನಡಿಗರು ಪುಕ್ಕಲು ಅನ್ನೋದು ಒಂದು ತರಹದ ಸನ್ನಿ. ಎಲ್ಲರು ಅದನ್ನ ತಾಮಗೆ ತಾವೇ ಆರೋಪಿಸಿಕೊಳ್ಳುತ್ತಾರೆ, ಅದನ್ನ ನಾವುಗಳೇ ಮನಸಿನಿಂದ ಕಿತ್ತು ಹಾಕಬೇಕು ಮಹೇಶ್. ಅತಿ ಅನ್ನೋದು ಪರಿಮಿತಿ ಅಂತ ಪರಿಗಣಿಸಿದರೆ ಅದು ಪುಕ್ಕಲುತನ ಆಗೋಲ್ಲ, ಇತರರ ಬಗ್ಗೆ ಕಾಳಜಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 1:52pm — mahesha

ಉ: ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?

mahesha's picture

ರೀ ನಮಗ್ಯಾಕೆ ಬೇರೆಯೋರ್‍ ಕಾಳಜಿ.. ಬೇರೆಯೋರು ನಮ್ ಕಾಳಜಿ ಮಾಡ್ತಾರ..

ನಮ್ ಕಾಳಜಿಯೇ ಪಜೀತಿ.. Smiling

ಸರಿ.. ನಿಮ್ಮ ಬರಹ ಚನ್ನಾಗಿದೆ .. ನನ್ನಿ!

ಮುಗಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?
  • ಕರುನಾಡು ಉಗಮವಾಗಿ ೫೦ ವರ್ಷ ಸಂದ ಹಾಗೂ ಕರುನಾಡಿನ , ನಮ್ಮ ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನ ಬಂದ ಈ ಸಂದರ್ಬದಲ್ಲಿ ಅಣ್ಣಾವ್ರು ಇದ್ದಿದ್ದರೆ?
  • ಶಾಸ್ತ್ರೀಯ ಭಾಷೆಯಿಂದ ಏನ್ ಮಣ್ಣು ಪ್ರಯೋಜನಾನೂ ಆಗಲ್ವಾ?
  • ಕನ್ನಡದ ಸೇವೆ ಅಂದ್ರೆ ನಿಮ್ಮ ಪ್ರಕಾರ ಏನು?
  • ಒಂದು ಕನ್ನಡ ಕೆಲಸ ಆಗಬೇಕು ಅಂದ್ರೆ ಹೋರಾಟ ಮಾಡ್ಲೆಬೇಕಾ?
Syndicate content

ಲೇಖಕರು

Chetan.Jeeral's picture

ಪೂರ್ಣ ಹೆಸರು
ಚೇತನ್ ಜೀರಾಳ

ಪರಿಚಯ

ಹಾಯ್
ನಾನು ವೃತ್ತಿಯಿಂದ ಒಬ್ಬ ಇಂಜಿನಿಯರ್ . ಪ್ರವೃತ್ತಿಯಿಂದ ಲೇಖಕ, ಆದ್ರೆ ಕನ್ನಡ ನನ್ನ ಪ್ರಾಣ. ನನ್ನ ಬಗ್ಗೆ ಉಳಿದೆಲ್ಲ ವಿವರ ಆನ್ ಇಂಟ್ರೆಸ್ಟಿಂಗ್.
ನನ್ನ ಇನ್ನೊಂದು ಬ್ಲಾಗ್
http://aatadabayalu.blogspot.com/

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
  • ಕಂನುಡಿಯ ಹುಟ್ಟು - ಶಂ.ಬಾ.ಜೋಶಿಯವರ ಪುಸ್ತಕ
  • ವಿಪರ್ಯಾಸ
  • ಎಂದಿನಂತೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:21pm
  • omshivaprakash
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:18pm
  • anil.ramesh
    ಉ: ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
    December 1, 2008 - 9:17pm
  • omshivaprakash
    ಉ: ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
    December 1, 2008 - 9:17pm
  • omshivaprakash
    ಉ: ಶುಕ್ರ ಮತ್ತು ಗುರುವಿನ ಇಂಟರ್ವ್ಯೂ - ನೀವ್ ನೋಡಿದ್ರಾ?
    December 1, 2008 - 9:15pm
  • kannadakanda
    ಉ: ಅಳಿಯ, ಅನಿಷ್ಟ ಮತ್ತು ಗ್ರಹಚಾರ!
    December 1, 2008 - 9:12pm
  • palachandra
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:06pm
  • palachandra
    ಉ: Aperture ಮತ್ತು Depth of Field
    December 1, 2008 - 9:01pm
  • gopinatha
    ಉ: ಚಂದ್ರ-ಗುರು-ಶುಕ್ರ...
    December 1, 2008 - 8:59pm
  • venkatb83
    ಉ: ಬನ್ನಿ ನಾವೆಲ್ಲ ಒಟ್ಟಾಗಿ ಉಗ್ರವದವನ್ನ/ಉಗ್ರವಾದಿಗಳನ್ನ ಮೆಟ್ಟಿ ನಿಲ್ಲೋಣ. ಒಗ್ಗಟ್ಟಿನಲ್ಲಿ ಬಲವಿದೆ .ಭಾರತ ನಿಜವಾಗಿ ಪ್ರಕಾಶಿಸುವ ಕಾಲ ಈಗ ಬಂದಿದೆ.
    December 1, 2008 - 8:58pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 103 ಅತಿಥಿಗಳು ಆನ್ಲೈನ್ ಇರುವರು.


ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator