ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › chandana ರವರ ಬ್ಲಾಗ್

ಆಡಳಿತ ಭಾಷೆ vs ರಾಷ್ಟ್ರಭಾಷೆ

January 28, 2008 - 4:50pm — chandana

ಗಣರಾಜ್ಯೋತ್ಸವದ ದಿನ ದೂರದರ್ಶನ ನೋಡುತ್ತಿರುವಾಗ ಯಾವುದೋ ಹಾಡಿನಲ್ಲಿ "ಹಿಂದಿ" ಅನ್ನೋ ಪದದ ಬಳಕೆಯಾಯಿತು. ನಾನು ಆ ಪದದ ಬಳಕೆ, ಆ ಹಾಡಿನಲ್ಲಿ, ತಪ್ಪು ಅಂತ ಆಕ್ಷೇಪಿಸಿದೆ. ನನ್ನ ಮತ್ತು ನನ್ನ ಸಂಬಂಧಿಯ ನಡುವೆ ನಡೆದ ವಾದ ಇಂತಿದೆ :
ಸಂಬಂಧಿ: " ಸರಿಯಾಗಿದೆ ಇಲ್ಲಿ ಹಿಂದಿನೇ ಬರಬೇಕು "
ನಾನು: " ಇಲ್ಲ ಈ ಹಾಡಿನಲ್ಲಿ ಹಿಂದಿ ಶಬ್ಧದ ಬಳಕೆ ತಪ್ಪು "
ಸಂಬಂಧಿ: " ಹಿಂದಿ ನಮ್ಮ ರಾಷ್ಟ್ರಭಾಷೆ ಹಾಗಾಗಿ ಸರಿಯಿದೆ"
ನಾನು: " ಅಯ್ಯೋ ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ . ಭಾರತ ಸಂವಿಧಾನದಲ್ಲಿ ಆಡಳಿತ ಭಾಷೆಯನ್ನು ಕೇಂದ್ರ ಮತ್ತು ರಾಜ್ಯಗಳಲ್ಲಿ ವಿಂಗಡಿಸಿದ್ದಾರೆ. ಹಿಂದಿ ಬರೀ ನಮ್ಮ ಯೂನಿಯನ್ನಿನ ಆಡಳಿತ ಭಾಷೆ"
ಸಂಬಂಧಿ: " ನೀವು ಸೌತ್ ಇಂಡಿಯನ್ಸ್ ಗೆ ಹಿಂದಿ ಅಂದ್ರೆ ಇಷ್ಟ ಇಲ್ಲ ಅದಿಕ್ಕೆ ಇಲ್ಲದೆ ಇರೋ ತಕರಾರು ತೆಗಿತ್ತೀರ. ಹಿಂದಿ ಹೆಚ್ಚು ಜನಕ್ಕೆ ಮಾತಾಡೋದಿಕ್ಕೆ ಬರತ್ತೆ ಹಾಗೇನೇ ಅರ್ಥಾನು ಆಗತ್ತೆ." (ಇವರು ೨೦-೩೦ ವರ್ಷದಿಂದ ಉತ್ತರ ಭಾರತದಲ್ಲೇ ಇದ್ದರು)
ನನಗೂ ರೆಗೋಗಿತ್ತು.....
ನಾನು: " ಅದ್ಯಾಕೆ ಹಾಗಂತ್ತೀರಾ, ನೀವೇ ಭಾರತಾನಾ ಈ ರೀತಿ ವಿಭಜನೆ ಮಾಡ್ತ್ತಿದ್ದಿರ. ದಕ್ಷಿಣದವರಿಗೆ ಹಿಂದಿ ಅರ್ಥಾನು ಆಗತ್ತೆ ಮಾತಾಡೊದಿಕ್ಕೂ ಬರತ್ತೆ ಅದೊಂದೇ ಅಲ್ಲ ಇನ್ನಿತ್ತರ ಭಾಷೆಗಳನ್ನು ಸ್ಪಷ್ಟವಾಗಿ ಮತಾಡುತ್ತೇವೆ. ಎಷ್ಟು ಜನ ಉತ್ತರ ಭಾರತದವರು ದಕ್ಷಿಣ ಭಾರತದ ಭಾಷೆಗಳನ್ನು ಮಾತಾಡಬಲ್ಲರು? (ಇದಕ್ಕೆ ಅಪವಾದವೆಂಬಂತೆ ನನ್ನ ಮ್ಯಾನೇಜರ್ ಉತ್ತರ ಭಾರತದವರು. ಅವರು ಕನ್ನಡ ಕಲಿಯುತ್ತಿದ್ದಾರೆ Smiling . ) ಹಲವರಿಗೆ ದಕ್ಷಿಣ ಭಾರತದವರು ಅಂದ್ರೆ ಮದ್ರಾಸಿ ಅಷ್ಟೇನೆ. ಹೆಚ್ಚು ಜನಕ್ಕೆ ಅರ್ಥಾ ಆಗೊ ಭಾಷೆ ಅಂದ್ರಲ್ಲಾ ಹಾಗಾದ್ರೆ ಆಂಗ್ಲ ಭಾಷೆ ಇನ್ನೂ ಹೆಚ್ಚು ಜನಕ್ಕೆ ಅರ್ಥಾ ಆಗತ್ತೆ, ಹಾಗಂದ ಮಾತ್ರಕ್ಕೆ ಆಂಗ್ಲ ಭಾಷೇನ ರಾಷ್ಟ್ರ ಭಾಷೆ ಮಾಡುವುದಕ್ಕೆ ಸಾಧ್ಯಾನಾ?ಈ ಕಾರಣಕ್ಕೆ ಹಿಂದಿ ರಾಷ್ಟ್ರ ಭಾಷೆ ಹೇಗಾಗತ್ತೆ? "
ಸಂಬಂಧಿ: " ನೀನು ಏನೇ ಹೇಳು ನಂಗೆ ಗೊತ್ತು ನೀವು ಹೀಗೇನೆ. ಹಿಂದಿನೇ ರಾಷ್ಟ್ರ ಭಾಷೆ"
ಅವರು ತಮ್ಮ ಮಿತ್ರವ್ರುಂದಕ್ಕೆ ಕರೆ ಮಾಡಿ ಅವರೂ ಹಾಗೆ ಹೇಳ್ತಿದ್ದಾರೆ ಅಂದ್ರು. ಅವರಿಗೆ ನಮ್ಮ ಅಂತರ್ಜಾಲದಿಂದ ಕೆಲವೊಂದು ತಾಣಗಳನ್ನೂ ತೋರಿಸಿ ಅರ್ಥ ಮಾಡಿಸಿದೆ. ಹಾಗೇನೇ ನಿಮ್ಮ ಮಿತ್ರರಿಗೂ ತಿಳಿಸಿ ಅಂದೆ. ಅವರು ತಮ್ಮ ತಪ್ಪನ್ನು ತಿದ್ದಿಕೊಂಡರು.ನಮ್ಮ ಭಾಷೆಯ ಬಗ್ಗೆ ನಮ್ಮವರಿಗೆ ಸಾಕ್ಷಿ ತೋರಿಸಬೇಕಾಗಿರುವುದು ಎಂಥಹ ದುರ್ದೈವದ ಸಂಗತಿ ಅಲ್ವ Sad
ಹೀಗೆ ನಮಲ್ಲಿ ಇಂತಹ ಬೇಕಾದಷ್ಟು ಜನರಿದ್ದಾರೆ. ಅದ್ಯಾಕೋ ನಮ್ಮ ಮಾತೃಭಾಷೆ ಬಿಟ್ಟು ಅವರಿಗೆ ಹಿಂದಿ ಮೇಲೇ ಒಲವು ಜಾಸ್ತಿ. ನಾವು ಯಾವ ಭಾಷೆ ದೊಡ್ಡದು ಅಥವಾ ಸಣ್ಣದು ಅಂತ ವಾದ ಮಾಡ್ತಿಲ್ಲ ಹಾಗೇನೇ ನಮ್ಮ ಭಾಷೆ ಬಗ್ಗೆ ಕೀಳರಿಮೇನೂ ಬೇಡ.
ಒಂದು ಚರ್ಚಾ ಸ್ಪರ್ಧೆಯಲ್ಲಿ ಒಬ್ಬ ಸ್ಪರ್ಧಿ ಹೇಳಿದ್ದು ನನಗಿನ್ನು ಜ್ಞಾಪಕವಿದೆ " ನಮ್ಮ ಮಾತೃಭಾಷೆಗೆ ಸಲ್ಲಬೇಕಾದ ಸಕಲ ಗೌರವ ಸಲ್ಲಲಿ. ಅವಳಿಗೆ ಅಗ್ರ ಸ್ಥಾನ ಸಿಗಲಿ.ಹಾಗೇನೇ ಇನ್ನಿತರ ಭಾಷೆಗಳು ಅವಳ ದಾಸಿಯಾಗದೆ ಸಖಿಯರಂತೆ ಜೊತೆಗಿರಲಿ"

~.~
  • chandana ರವರ ಬ್ಲಾಗ್
  • Login or register to post comments
  • 386 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 28, 2008 - 5:47pm — Sunil Jayaprakash

ಉ: ಆಡಳಿತ ಭಾಷೆ vs ರಾಷ್ಟ್ರಭಾಷೆ

Sunil Jayaprakash's picture

ಚಂದನ, ಅವರೆ ಒಳ್ಳೆಯ ಕೆಲಸ ಮಾಡಿದಿರಿ. ಇಲ್ಲೇ ಸಂಪದದಲ್ಲಿಯೇ ಕೆಲವೊಂದು ದಿನಗಳ ಹಿಂದೆ, ಹಿಂದಿಯ ಬಗ್ಗೆ ವೀರಾವೇಷದಿಂದ ಕೂಡಿದ ಮಾತುಕತೆಗಳಾಗಿದ್ದವು. ಒಂದು ಕೆಲಸ ಮಾಡಿ, ನೀವು ನಿಮ್ಮ ಸಂಬಂಧಿಕರಿಗೆ ತೋರಿಸಿದ ಆ ಕೊಂಡಿಗಳನ್ನು ಸಂಪದಿಗರೊಡನೆ ಹಂಚಿಕೊಳ್ಳಿ. ನಿಜ ಎಲ್ಲರಿಗೂ ತಿಳಿಸಿದಂತಾಗುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 28, 2008 - 6:26pm — madhava_hs

ಉ: ಆಡಳಿತ ಭಾಷೆ vs ರಾಷ್ಟ್ರಭಾಷೆ

madhava_hs's picture

ಹಿಂದಿ ಪ್ರೇಮ ರಾಷ್ಟ್ರ ಪ್ರೇಮವಲ್ಲ.

ರಾಷ್ಟ್ರ ಪ್ರೇಮವೆಂದರೆ ನನ್ನ ಭಾಷೆ, ಸಂಸ್ಕೃತಿ ಯನ್ನು ಹೊಸಕಿ ಹಾಕುವುದಲ್ಲ. ನನ್ನ ಭಾಷೆ, ನನ್ನ ಮಣ್ಣಿನ ಸಂಸ್ಕೃತಿ ನನ್ನಲ್ಲಿದ್ದಷ್ಟೂ ನಾನು ಗಟ್ಟಿಗ. ಅದು ಬಿಟ್ಟರೆ ನಾನು ಟೊಳ್ಳು. ನಾನು ಗಟ್ಟಿಗನಾಗುವುದರ ಮೂಲಕ ರಾಷ್ಟ್ರವನ್ನು ಗಟ್ಟಿ ಮಾಡುತ್ತೇನೆ. ಅದೇ ನನ್ನ ರಾಷ್ಟ್ರ ಪ್ರೇಮ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 28, 2008 - 8:32pm — cmariejoseph

ಉ: ಆಡಳಿತ ಭಾಷೆ vs ರಾಷ್ಟ್ರಭಾಷೆ

cmariejoseph's picture

ಚಂದನ ಅವರೇ, "ಅವರಿಗೆ ನಮ್ಮ ಅಂತರ್ಜಾಲದಿಂದ ಕೆಲವೊಂದು ತಾಣಗಳನ್ನೂ ತೋರಿಸಿ ಅರ್ಥ ಮಾಡಿಸಿದೆ."

ಇದರ ಬಗ್ಗೆ ಸ್ವಲ್ಪ ವಿವರವಾಗಿ ತಿಳಿಸುವಿರಾ?

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 28, 2008 - 11:00pm — Ennares

ಉ: ಆಡಳಿತ ಭಾಷೆ vs ರಾಷ್ಟ್ರಭಾಷೆ

Ennares's picture

ಪ್ರಿಯ ಸಂಪದ ಸಮುದಾಯದ ಮಿತ್ರರೇ,

ಸುಮಾರು ಹನ್ನೆರಡು ವರ್ಷಗಳ ಹಿಂದೆ ತನ್ನ ಡಾಕ್ಟರೇಟ್ ಪದವಿಗಾಗಿ "ಭಾರತದಲ್ಲಿ ರಾಷ್ಟ್ರಭಾಷೆಯ ಬೇಕು ಬೇಡ" ಗಳ ಬಗ್ಗೆ ಅಧ್ಯಯನ ಮಾಡಿದ ಅಮೇರಿಕದ ೨೨ ವರ್ಷ(ಆಗ) ವಯಸ್ಸಿನ ಜೇಸನ್ ಬಾಲ್ಡ್‍ರಿಡ್ಜ್ ಎಂಬುವರ ಲೇಖನ ಓದಿದ್ದು ನೆನೆಪಿಗೆ ಬಂತು. ಟೊಲೆಡೋ ವಿಶ್ವವಿದ್ಯಾಲಯದ ಈ ವಿದ್ಯಾರ್ಥಿ ಬರೆದ ಲೇಖನ ಓದುವುದರಿಂದ ನಮಗೆ ನಮ್ಮ ರಾಷ್ಟ್ರದ ಭಾಷಾ ಸಮಸ್ಯೆಯ ಬಗ್ಗೆ ಅಪೂರ್ವ ಮಾಹಿತಿ ಸಿಗುತ್ತೆ. ಅಮೇರಿಕದ ಹುಡುಗ ನಮಗೇನು ತಾನೆ ಹೇಳಿಕೊಡಬಲ್ಲ ಅಂತ ತಾತ್ಸಾರ ಮಾಡಬೇಡಿ. ಓದಿ ನೋಡಿ. ಆತ ಬಹಳ ಶ್ರಮ ವಹಿಸಿ ತಯಾರಿಸಿದ ಲೇಖನ ಇಂಗ್ಲೀಷ್‍ನಲ್ಲಿದೆ. ಇಷ್ಟವಾದರೆ ಸಂತೋಷ.

ಕೊಂಡಿ ಈ ಕೆಳಗಿದೆ.

http://www.ling.upenn.edu/~jason2/papers/natlang.htm

ನಮಸ್ಕಾರ,

ನವರತ್ನ ಸುಧೀರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 29, 2008 - 10:01am — chandana

ಉ: ಆಡಳಿತ ಭಾಷೆ vs ರಾಷ್ಟ್ರಭಾಷೆ

chandana's picture

Ennares ರವರು ಹೇಳಿದ ಆ ಕೊಂಡಿಯಿಂದಲೂ ನಾನು ಮಾಹಿತಿ ಸಂಗ್ರಹಿಸಿದೆ. ಇನ್ನೂ ಕೆಲವು ಕೊಂಡಿಗಳು:
http://en.wikipedia.org/wiki/Languages_of_India
http://en.wikipedia.org/wiki/Official_languages_of_India

http://india.gov.in/knowindia/india_at_a_glance.php

ಮೇಲಿನ ಕೊಂಡಿಯಲ್ಲಿ ಹೀಗಿದೆ:
Languages: 22 National Languages have been recognized by the Constitution of India, of which Hindi is the Official Union Language. Besides these, there are 844 different dialects that are practiced in various parts of the Country.

ಈ ಕೆಳಗಿನ ಕೊಂಡಿ ನಮ್ಮ ಸಂವಿಧಾನದಲ್ಲಿರುವ ಆಡಳಿತ ಭಾಷೆಗಳ ಮಾಹಿತಿ ನೀಡುತ್ತದೆ.
http://www.constitution.org/cons/india/p17.html

ಇಷ್ಟೇಲ್ಲಾ ಮಾಹಿತಿ ನೀಡಿದರೂ ಸಹ ಏಷ್ಟೋ ಜನ ನನಗೊಡ್ಡಿದ ಪ್ರಶ್ನೆ " ಇಲ್ಲೇಲ್ಲಾ ಕೊಟ್ಟಿರೋ ಮಾಹಿತಿ ನಿಜ ಅಂತ ಹೇಗೆ ನಂಬೋದು?" Sad ಕರ್ಮ ಕರ್ಮ

ಚಂದನ

ಕೆಲವಂ ಬಲ್ಲವರಿಂದ ಕಲ್ತು
ಕೆಲವಂ ಮಾಲ್ಪವರಿಂದ ಕಂದು ಮತ್ತೆ
ಹಲವಂ ತಾನೆ ಸ್ವತಹಃಮಾಡಿ ತಿಳಿ ಎಂದ ಸರ್ವಜ್ಞ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 29, 2008 - 10:54am — mahesha

ಉ: ಆಡಳಿತ ಭಾಷೆ vs ರಾಷ್ಟ್ರಭಾಷೆ

mahesha's picture

ಚಂದನರೇ..

ಒಳ್ಳೇ ಕೆಲಸಗೈದಿರಿ..

ನನ್ನಿ!! ಹಿಂದಿ ಒಂದು ಪ್ರಾಂತೀಯ ನುಡಿ ಅಶ್ಟೆ.. ಮಳಯಾಳಂ ತೆರ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
  • ನಮ್ಮ ಅಣ್ಣನ ಮಗನ ಕ್ಲಾಸ್ ಅಲ್ಲಿ ಹೀಗೊಂದು ಪ್ರಸಂಗ
  • ಇದು ಕರ್ನಾಟಕವಲ್ಲ ಕಾಣಿರೋ
  • ಬಿಗ್ ಟಿವಿ - ಕನ್ನಡ ಮತ್ತು ರಾಷ್ಟ್ರ ಭಾಷೆ !!
  • ನಮನ-೦೪: ಕನ್ನಡಿಗರ ಉದಾರತೆ - ಬಗ್ಗೋ? ಫೀಚರ್ರೋ?
Syndicate content

ಲೇಖಕರು

chandana's picture

ಪೂರ್ಣ ಹೆಸರು
chandana

ಪರಿಚಯ

software engineer,saMgeeta prEmi, naaTakada huchchu irO hasanmukhi Smiling

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 10:19am
  • kannadakanda
    ಉ: ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ
    December 2, 2008 - 10:08am
  • sathvik N V
    ಉ: ನನ್ನ ತಪ್ಪೇ ಅಥವಾ ಸಿನಿಕತನವೇ?
    December 2, 2008 - 10:04am
  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 197 ಅತಿಥಿಗಳು ಆನ್ಲೈನ್ ಇರುವರು.


"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator