ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಚಾಮರಾಜ ಸವಡಿ
ಸತ್ಯದ ಹಸಿ ದರ್ಶನ
ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ಕೆಲಸದ ರಗಳೆ ಮುಗಿಸಿ, ಒಂದಿಷ್ಟು ನೆಮ್ಮದಿಯಿಂದ ಕೂಡೋಣ ಎಂದು ಟಿವಿ ಹಾಕುತ್ತೀರಿ. ಥಟ್ ಎಂದು ಬರುತ್ತವೆ ಜಾಹೀರಾತುಗಳು.
ಸಿನಿಮಾ ನಟಿಯಂತಿರುವ, ಹಾಗೇ ಮೇಕಪ್ ಕೂಡಾ ಹಾಕಿರುವ ಸಂಚಾರಿ ಪೇದೆಯೊಬ್ಬಳು ಕಾರೊಂದನ್ನು ನಿಲ್ಲಿಸಿ, ಚಾಲಕ ಕುಡಿದಿದ್ದಾನೋ ಎಂದು ಪರೀಕ್ಷಿಸುವ ಯಂತ್ರವನ್ನು ಅವನ ಬಾಯಿಗಿಟ್ಟು ಉಸಿರು ಬಿಡಲು ಹೇಳುತ್ತಾಳೆ. ದನಿಯಲ್ಲಿ ದರ್ಪ. ಚಾಲಕನಿಗೆ ದಿಗಿಲು. ಹೇಳಿಕೇಳಿ ಅದು ಹಾಡಹಗಲು. ಆಗ ಕುಡಿಯುವಂಥದ್ದು ಏನಾದರೂ ಇದ್ದರೆ ಅದು ವಾತಾವರಣ ತುಂಬಿಕೊಂಡಿರುವ ಕೆಟ್ಟ ಗಾಳಿಯನ್ನು ಮಾತ್ರ. ಅದು ಒತ್ತಟ್ಟಿಗಿರಲಿ, ಉಸಿರು ಬಿಡಲು ಕೇಳುತ್ತಿರುವುದು ಹೆಣ್ಣು. ಹೆಣ್ಣಿನ ಸಮ್ಮುಖದಲ್ಲಿ ಉಸಿರಾಡುವ ಅವಕಾಶ ಎಲ್ಲರಿಗೂ ಸಿಕ್ಕೀತೆ? ಆತನಿಗೆ ನಂಬಲೇ ಕಷ್ಟ. ಆದರೂ ಪಾಪ, ಗಲಿಬಿಯಿಂದಲೇ ಆತ ಉಸಿರು ಬಿಡುತ್ತಾನೆ.
ಏನಾಶ್ಚರ್ಯ? ಪುಳಕಗೊಳಿಸುವಂಥ ಪರಿಮಳ ಆತನ ಬಾಯಿಂದ ಬಂದು, ಯಂತ್ರದ ಶೋಧಕ ಹಾಯ್ದು, ಕೆರಳಿದಾಗ ಮಾತ್ರ ಅರಳುವ ಆ ಹೆಣ್ಣಿನ ನಾಸಿಕದ ಮೂಲಕ ಮೆದುಳಿನ ಅದ್ಯಾವುದೋ ವಾಸನೆ ಪತ್ತೆ ಹಚ್ಚುವ ಭಾಗ ಪ್ರವೇಶಿಸಿ ಆಕೆಯನ್ನು ಪುಳಕಗೊಳಿಸಿಬಿಡುತ್ತದೆ. ಮುನಿದ ಹೆಣ್ಣಿನಿಂದ ಬಚಾವಾಗಬಹುದು, ಆದರೆ, ಪುಳಕಗೊಂಡವಳಿಂದ ಪಾರಾಗುವುದು ಕರ ಕಷ್ಟ. ಚಾಲಕನ ಬಾಯಿಂದ ಅದೆಂಥ ಪರಿಮಳ ಬಂತೋ, ಅದ್ಹೇಗೆ ಆಕೆಗೆ ರೋಮಾಂಚನವಾಯಿತೋ ಗೊತ್ತಾಗುವುದಿಲ್ಲ. ಮೊದಲು ದರ್ಪದಿಂದ ಆಜ್ಞೆ ಮಾಡಿದ್ದ ಆಕೆ, ಈಗ ಇದ್ದಕ್ಕಿದ್ದಂತೆ ಬದಲಾಗುತ್ತಾಳೆ. ಇನ್ನೊಮ್ಮೆ ಉಸಿರಾಡುವಂತೆ ಮಾದಕವಾಗಿ ವಿನಂತಿಸುತ್ತಾಳೆ.
ಚಾಲಕನ ಗಲಿಬಿಲಿ ಈಗ ಕೊಂಚ ಕಡಿಮೆಯಾಗಿದೆ. ಆದರೆ ಪೂರ್ತಿ ಹೋಗಿಲ್ಲ. ಹೀಗಾಗಿ, ಅಳುಕುತ್ತಲೇ ಇನ್ನೊಮ್ಮೆ ಉಸಿರು ಬಿಡುತ್ತಾನೆ. ತಗೊಳಪ್ಪಾ, ಮಹಿಳಾ ಪೇದೆಗೆ ಮತ್ತೆ ಪುಳಕ! ಕಾರಿನ ಕಿಟಕಿ ಪಕ್ಕ ನಿಂತವಳ ಭಾವ, ಮಧುಚಂದ್ರದ ಮಂಚದ ಮೇಲೆ ಕೂತ ವಧುವಂತೆ ಬದಲಾಗುತ್ತದೆ. ’ಇನ್ನೂ ಒಮ್ಮೆ ಉಸಿರು ಬಿಡು’ ಎಂದು ಸೋತವಳಂತೆ ವಿನಂತಿಸಿಕೊಳ್ಳುತ್ತಾಳೆ.
ಈಗ ಚಾಲಕನ ಗೊಂದಲ ಮಾಯ. ಉಲ್ಲಸಿತನಾಗಿ ಉಸಿರಾಡುತ್ತಾನೆ. ಆಕೆ ಬೇಹೋಷ್! ಬೈಕಿಂದ ಇಳಿದವಳೇ, ಹೆಲ್ಮೆಟ್ ಇಳಿಸಿ, ನೀಳಗೂದಲನ್ನೊಮ್ಮೆ ಕೊಡವಿ (ಸರಿಯಾಗಿ ಹೇಳಬೇಕೆಂದರೆ ಆಕೆ ತಲೆ ಕೊಡವುತ್ತಾಳೆ), ನೋಟ್‌ಪ್ಯಾಡ್ ತೆರೆದು ಸರಸರ ಗೀಚುತ್ತಾಳೆ. ಈಗ ಚಾಲಕನಿಗೆ ಮತ್ತೆ ಗಲಿಬಿಲಿ. ಇದೇನಿದು? ಮೂರು ಸಾರಿ ಉಸಿರಾಡಲು ಹೇಳಿ, ಪುಳಕಗೊಂಡಳೆಂದು ಖುಷಿಯಾಗುವಷ್ಟರಲ್ಲಿ ದಂಡ ಹಾಕುತ್ತಿದ್ದಾಳಲ್ಲ ಎಂದು ಗಾಬರಿಯಾಗುತ್ತಾನೆ.
ಆದರೆ, ಆಕೆ ಗೀಚಿದ್ದು ತನ್ನ ಫೋನ್ ನಂಬರನ್ನು. ’ಕಾಲ್ ಮಿ’ ಎಂದವಳೇ ಬೈಕ್ ಹತ್ತಿ ಹೋಗುತ್ತಾಳೆ. ಚಾಲಕ ಫುಲ್ ಖುಷ್.
ಜಾಹೀರಾತಿನ ನೀತಿ ಏನಪ್ಪಾ ಅಂದ್ರೆ: ಈ ಪೇಸ್ಟ್‌ನಿಂದ ಹಲ್ಲುಜ್ಜಿದರೆ ಹುಡುಗಿಯರು ಮರುಳಾಗುತ್ತಾರೆ.
*****
ಕೋಲ್ಗೇಟ್‌ನಿಂದ ಹಲ್ಲುಜ್ಜಿದರೆ ಹಲ್ಲುಜ್ಜಿದರೆ ಹುಡುಗಿ ಒಲಿಯುತ್ತಾಳೆ. ಶಾಂಪೂ ಹಾಕಿಕೊಂಡರೆ ಹುಡುಗ ಬೇಹೋಷ್. ರೆಕ್ಸೋನಾ, ಅಲ್ಲಲ್ಲ ಹಮಾಮ್ ಸಾಬೂನು ಬಳಸಿದರೆ ದಾಂಪತ್ಯ ಸುಖಮಯ. ಬೂಸ್ಟ್ ಕುಡಿದರೆ ಮೊದಲು ಅತೀಂದ್ರಿಯ ಶಕ್ತಿಗಳು ಒಲಿಯುತ್ತಿದ್ದವು. ಈಗ ಸಚಿನ್ ತೆಂಡೂಲ್ಕರ್ ಮತ್ತು ಧೋನಿ ಮನೆಗೆ ಬಂದು ಬೂಸ್ಟ್ ಮಾಡಿ ಕುಡಿಸುತ್ತಾರೆ. ಅದೆಂಥದೋ ಬ್ರಾಂಡ್‌ನ ಕ್ಯಾಂಡಿ ತಿಂದರೆ ಸೂಪರ್‍ಮನ್ ನಿಮ್ಮ ಮನೆಕೆಲಸದವನಾಗುತ್ತಾನೆ. ಫೋನ್ ರಿಂಗ್ ಟೋನ್ ಕಾಂಡೊಮ್ ಕಾಂಡೊಮ್ ಎಂದು ಉಲಿಯುತ್ತದೆ. ಮಾತನಾಡುತ್ತ ಆಡುತ್ತ ನೀವು ಮಹಾಶೂರರಾಗಬಹುದು. ಬರೀ ತಿಳಿದುಕೊಂಡರೂ ಸಾಕು, ಮಹಾಶೂರರಾಗುವ ಖಾತರಿ ಇದೆ. ವಡಾಫೋನ್ ಹಾಕಿಸಿದರೆ ನಾಯಿ ಮರಿ ನಿಮ್ಮ ಕೆಲಸ ಮಾಡಿಕೊಡುತ್ತದೆ. ’ಆಕ್ಸ್’ ಸೆಂಟ್ ಹಾಕಿಕೊಂಡರೆ ದೇವಸ್ಥಾನಕ್ಕೆ ಹೊರಟ ಸುಂದರಿ ನಿಮ್ಮೊಂದಿಗೆ ಸರಸವಾಡುವ ಕನಸು ಕಾಣುತ್ತಾಳೆ. ಜಿಲೆಟ್ ಬ್ಲೇಡ್‌ನಿಂದ ಮುಖಕ್ಷೌರ ಮಾಡಿಕೊಂಡರೆ ಸುಂದರಿಯರು ಮುತ್ತಿಕೊಳ್ಳುತ್ತಾರೆ. ಮುತ್ತು ಕೂಡ ಕೊಡುತ್ತಾರೆ. ಅದೆಂಥದೋ ಶೇವಿಂಗ್ ಕ್ರೀಮ್ ಬಳಸಿದರೆ, ಮದುಮಗನ ಬದಲು, ಜೊತೆಗೆ ಹೋದ ನಿಮ್ಮನ್ನೇ ವರ ಅಂದುಕೊಳ್ಳುತ್ತಾರೆ. ಕೆಪಿಜೆ ಆಭರಣ ಹಾಕಿಕೊಂಡರೆ ನೌಕರಿ ಮನೆ ಬಾಗಿಲಿಗೆ ಬರುತ್ತದೆ. ದಾರಿಯಲ್ಲಿ ಹೋಗುವಾಗ ಡಿಕ್ಕಿ ಹೊಡೆದ ಹುಡುಗಿ ಮನೆಯವಳಾಗುತ್ತಾಳೆ. ದೇವಸ್ಥಾನದಲ್ಲಿ ಪ್ರದಕ್ಷಿಣೆ ಮಾಡುತ್ತಿರುವ ಹುಡುಗಿಗೆ ಮನೆಗೇ ಗಂಡು ಬಂದು ನಿಲ್ಲುತ್ತಾನೆ. ಮನೆಯ ಕಷ್ಟಗಳು ದೂರವಾಗುತ್ತವೆ. ಅಂದುಕೊಂಡಿದ್ದೆಲ್ಲ ಆಗುತ್ತದೆ.
*****
ನಸುಕಿನಲ್ಲಿ ಎದ್ದಾಗ ಇಂಟರ್‍ನೆಟ್ ಎಂದಿನಂತೆ ಕೈಕೊಟ್ಟಿತ್ತು. ಬೇಸರಗೊಂಡು ಕೂತಾಗ ಕರೆಂಟ್ ಕೂಡ ಹೋಯಿತು. ಕತ್ತಲಲ್ಲಿ ಕೂತು ಸುಮ್ಮನೇ ಯೋಚಿಸಿದಾಗ ಹೊಳೆದ ಸಂಗತಿಯಿದು.
ವಾಸ್ತವ ಕಟುವಾದಾಗ, ಅವಾಸ್ತವಿಕತೆ ಆಪ್ತವಾಗುತ್ತದಂತೆ, ಥೇಟ್ ಜಾಹೀರಾತುಗಳ ಲೋಕದಂತೆ!
- ಚಾಮರಾಜ ಸವಡಿ

- Chamaraj ರವರ ಬ್ಲಾಗ್
- Login or register to post comments
- 515 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ನಾನಂತು ಈ ಜಾಹಿರಾತುಗಳನ್ನು Serious ಆಗಿ ತೆಗೆದುಕೊಳ್ಳೋದೇ ಇಲ್ಲಾ, ಆವೆಲ್ಲಾ ಈಗ ಏನಿದ್ರೂ Part Of an Entertainment ಅಷ್ಟೆ. ನೋಡಿ ನಕ್ಕು ಸುಮ್ಮನಾಗಬೇಕು.
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ಹಲ್ಲುಜ್ಜಿದರೆ ಹುಡುಗಿ ಸಿಗ್ತಾಳೋ ಇಲ್ವೋ..

ಉಜ್ಜದಿದ್ದರೆ ಖಂಡಿತಾ ಸಿಗೋಲ್ಲ
*ಅಶೋಕ್
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ಇನ್ನೊಂದು ರೀತಿಯಲ್ಲೂ ಹೇಳಬಹುದು-
"ಹಲ್ಲುಜ್ಜಿದರೆ ಹುಡುಗಿ ಸಿಗ್ತಾಳೊ ಇಲ್ವೊ...
"ಹುಡುಗಿಯನ್ನುಜ್ಜಿದರೆ ಹಲ್ಲು ಸಿಗಬಹುದು"!
(ಅಂದ್ರೆ ಕಂಡ್‌ಕಂಡ ಹುಡುಗೀರ್ನ್ ಉಜ್ಲಿಕ್ ಹೋದ್ರೆ ಆಕೆ ಉದುರಿಸಬಹುದಾದ್ ನಿಮ್ ಹಲ್ಲು ಸಿಗ್ಬೋದು... ಅಂತರ್ಥ)
-------------
ಸಂಭವನೀಯ ಪ್ರಶ್ಬೆ: "ಇದು ನಿಮ್ಮ ಸ್ವಂತ ಅನುಭವವೇ?"
ಉತ್ತರ: "ಅಲ್ಲಾ".
ಮತ್ತೆ? ಜಸ್ಟ್ ಫಾರ್ ಪ(ಫ)ನ್
-------------
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ಇದು ಯಾವಾಗಲು ಸರಿ ಅಲ್ಲ.. ಹೀಗಿದ್ದರೆ ಮಂಗಳೊರಿನ ಬಸ್ಸ್ ಕಂಡಕ್ಟರುಗಳಿಗೆ ಹಲ್ಲೆ ಇರೊದಿಲ್ಲ..
ಇದೂ ಜುಸ್ಟ್ ಪಾರ್ ಪನ್:)
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ಹೌದು. ಆದರೆ ಅವರು ಈಗಾಗಲೇ ಉಜ್ಜಿರುವ ಹುಡುಗಿಯರ ಸಂಖ್ಯೆ 32ಕ್ಕಿಂತ ಎಷ್ಟೋ ಹೆಚ್ಚಿದೆಯಲ್ಲ! ಹಾಗೆ.

ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ಹಾಗಾದರೆ ಮಂಗಳೂರಿನ ಬಸ್ ಕಂಡಕ್ಟರ್‌ಗಳು ಹಲ್ಲುಜ್ಜುವುದಿಲ್ಲ, ಬದಲಾಗಿ ಹುಡುಗಿಯರನ್ನೇ ಉಜ್ಜಲು ಹೋಗುತ್ತಾರೆ ಅಂದಾಗುತ್ತದಲ್ರೀ. ಹುಷಾರು, ಮೊದಲೇ ವಾತಾವರಣ ತ್ವೇಷಮಯವಾಗಿದೆ.
- ಚಾಮರಾಜ ಸವಡಿ
http://chamarajsavadi@blogspot.com
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ಎಲ್ಲಾ ಸಾಧ್ಯತೆಗಳನ್ನು ಮುಂಚೆಯೇ ಪರಿಶೀಲಿಸಿ ಬರೆದಿದ್ದೀರಿ ಶ್ರೀವತ್ಸ. ಹುಡುಗಿ ಉಜ್ಜಿದರೆ ಹಲ್ಲೂ ಸಿಗಬಹುದು, ನಿಮ್ಮ ಅದೃಷ್ಟ ಚೆನ್ನಾಗಿದ್ದರೆ (ಅಥವಾ ಕೆಟ್ಟಿದ್ದರೆ) ಆಕೆಯೇ ಸಿಕ್ಕುಬಿಡಬಹುದು.
- ಚಾಮರಾಜ ಸವಡಿ
http://chamarajsavadi@blogspot.com
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ಖಂಡಿತ !
- ಚಾಮರಾಜ ಸವಡಿ
http://chamarajsavadi@blogspot.com
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ನಾವೇನೋ ತಮಾಶೆ ಅಂತ ನಕ್ಕು ಸುಮ್ಮನಾದರೂ ಇವು ನಮಗೇ ಗೊತ್ತಿಲ್ಲದಂತೆ ಮನಸ್ಸಿನ ಮೂಲೆಯೊಂದರಲ್ಲಿ ಪ್ರಭಾವ ಬೀರಿಬಿಡುತ್ತವಾ ಅಂತ!
ಮುಖ್ಯವಾಗಿ ಮಕ್ಕಳು ಇದನ್ನು ಗಂಭೀರವಾಗಿ ನೋಡುವುದಿ ಜಾಸ್ತಿ. ಅವರಿಗೆ ಅದರ ಪರಿಣಾಮ ಹೆಚ್ಚು ಅಲ್ವಾ>?
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ಇನ್ನೊಂದು ಜಾಹೀರಾತಿನಲ್ಲಿ ಅಜ್ಜಿ, ಮಕ್ಕಳು, ಮೊಮ್ಮೊಕ್ಕಳು ಕುಳಿತು ಪಿಜ್ಜಾ ತಿನ್ನುವುದನ್ನು ಅದು ಸಂಪ್ರದಾಯವೇನೋ ಎಂಬಂತೆ ತೋರಿಸುತ್ತಾರೆ. ಇದನ್ನು ನೋಡಿದ ಮಕ್ಕಳು ಮುಂದೊಂದು ದಿನ ಮನೆಯಲ್ಲಿ ಚಪಾತಿ, ರೊಟ್ಟಿಗಳು ಬೇಡ ಪಿಜ್ಜಾ ಬೇಕು ಎಂದರೆ ಏನು ಮಾಡುವುದು. ಪಿಜ್ಜಾದಲ್ಲೋ ಚೀಜ್ ಹಾಕಿರುತ್ತಾರೆ. ಇದೆಲ್ಲಾ ಹೆಚ್ಚು ತಿಂದು ದೇಹದಲ್ಲಿ ಕೊಬ್ಬಿನಂಶ ಹೆಚ್ಚಿ ಆರೋಗ್ಯ ಕೆಡಿಸಿಕೊಂಡರೆ ಏನು ಗತಿ? ಹಾಂ..ಅದಕ್ಕೂ ಪರಿಹಾರವಿದೆಯಲ್ಲವೇ? ಕೇವಲ ೫ ದಿನದಲ್ಲಿ ೫ ಕೆ.ಜಿ. ಇಳಿಸಿ..ಇಂದೇ ಭೇಟಿಕೊಡಿ..xyz ಕ್ಲಿನಿಕ್..
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ಜಾಹೀರಾತುಗಳು ನಮ್ಮ ರಾಜಕಾರಣಿಗಳಿಂದ ಪ್ರೇರೇಪಣೆ ಪಡೆದಂತಿದೆ. ಮೊದಲು ಸಮಸ್ಯೆ ಸೃಷ್ಟಿಸುವುದು, ನಂತರ ಅದನ್ನು ಪರಿಹರಿಸುವ ಭರವಸೆಗಳನ್ನು ಕೊಡುವ ಮೂಲಕ ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳುವುದು.
- ಚಾಮರಾಜ ಸವಡಿ
http://chamarajsavadi@blogspot.com
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ಹೌದು ವಿಕಾಸ, ನಿಮ್ಮ ಮಾತು ಸರಿ, ಮಕ್ಕಳು ಜಾಹಿರಾತುಗಳನ್ನು ಗಂಭೀರವಾಗಿ ನೊಡ್ತಾರೆ ಮತ್ತು ಅನುಕರಣೆ ಮಾಡ್ತಾರೆ.
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ಮಕ್ಕಳ ಮೇಲೆ ಪ್ರತಿಯೊಂದೂ ಪ್ರಭಾವ ಬೀರ್ತದೆ. ಜಾಹೀರಾತಾಗಿರಬಹುದು ಅಥವಾ ಜನರಾಗಿರಬಹುದು. ಆದರೆ, ಈ ಪ್ರಭಾವ ಮಕ್ಕಳಾಗಿರುವವರೆಗೆ ಮಾತ್ರ. ನಂತರ ಅವರ ಬುದ್ಧಿ ಹೇಳಿದಂತೆ ನಡವಳಿಕೆ.
- ಚಾಮರಾಜ ಸವಡಿ
http://chamarajsavadi@blogspot.com
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ಬಾಲ್ಯದಿಂದ ನೋಡುತ್ತಲೇ ಬಂದ ಜಾಹೀರಾತುಗಳು ನನ್ನ ಮೇಲಂತೂ ಯಾವುದೇ ಪ್ರಭಾವ ಬೀರಿಲ್ಲ ವಿಕಾಸ್. ಬಹುಶಃ ಇದು ಎಲ್ಲರ ಅನುಭವವೂ ಆಗಿರಬಹುದು. ಜಾಹೀರಾತುಗಳಿಂದ ಪ್ರೇರೇಪಣೆ ಪಡೆದು ಉತ್ಪನ್ನಗಳನ್ನು ಖರೀದಿಸಬಹುದು. ಆದರೆ ಅವನ್ನೇ ನಿರಂತರವಾಗಿ ಬಳಸಬೇಕೆಂದರೆ ಗುಣಮಟ್ಟ ಇರಲೇಬೇಕಾಗುತ್ತದೆ, ಅಲ್ವೆ?
- ಚಾಮರಾಜ ಸವಡಿ
http://chamarajsavadi@blogspot.com
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ಜನ ಮಾಡ್ತಿರೋದೂ ಅದನ್ನೇ. ನಕ್ಕು ಸುಮ್ಮನಾಗುವುದು. ಸೀರಿಯಸ್ ಆಗಿ ತಗೊಂಡವರು ಬಳಸಿ ಬಳಸಿ ಸುಸ್ತಾದ ನಂತರ ತಾವೇ ಸುಮ್ಮನಾಗುತ್ತಾರೆ.
- ಚಾಮರಾಜ ಸವಡಿ
http://chamarajsavadi@blogspot.com
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ಹಲ್ಲುಜ್ಜಿದರೆ, ಹುಡುಗಿ ಸಿಕ್ತಾಳೋ ಇಲ್ವೋ ಗೊತ್ತಿಲ್ಲ, ಆದರೆ, ಹಲ್ಲುಜ್ಜುವ ಅಭ್ಯಾಸ ಇಲ್ಲದವರು ಇದರಿಂದ ಸ್ಫೂರ್ತಿ ಪಡೆದರೆ ಒಳ್ಳೆಯದು.
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ಹಲ್ಲುಜ್ಜದವರೂ ಇದ್ದಾರಾ ಪ್ರೀತಮ್? ಡೆಂಟಲ್ ಕ್ರೀಮ್‌ಗಳ ಈ ಪರಿ ಆವರಿಸಿಕೊಂಡಿರುವಾಗಲೂ ಹಲ್ಲುಜ್ಜುತ್ತಿಲ್ಲ ಎಂದರೆ, ಅವರು ನಿಜಕ್ಕೂ ಗ್ರೇಟ್ ಬಿಡಿ.
- ಚಾಮರಾಜ ಸವಡಿ
http://chamarajsavadi@blogspot.com
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ನಮ್ಮ ಟಿ.ವಿ. ಜಾಹೀರಾತುಗಳೇ ವಿಚಿತ್ರ, ತಾವು ಮಾಡುವ ಉದ್ದೇಶಕ್ಕೂ, ತೋರಿಸುವ ಜಾಹೀರಾತಿಗೂ ಸಂಬಂಧವೇ ಇರುವುದಿಲ್ಲ. ಇವು ಬರೀ ಜನರನ್ನು ಮರಳು ಮಾಡಲು ಮಾತ್ರ. ಯಾವುದೇ ರೀತಿಯ ಸಂಬಂದವಿಲ್ಲದಿದ್ದರೂ ಫಿಲ್ಮ್ ಸ್ಟಾರ್ ಗಳ ತೋರಿಕೆ, ವಿಚಿತ್ರ ಬಣ್ಣನೆಯ ಮುಖಾಂತರ ಜನರ ಆಕರ್ಷಿಸುವ ತಂತ್ರ ಅಷ್ತೆ. ಇತ್ತೀಚಿನ ಬಿಗ್ ಟಿ. ವಿ ಜಾಹೀರಾತು ನೋಡಿದರೆ ದಢೂತಿ ಮನುಷ್ಯ, ದೊಡ್ಡ ಸೀನು ಇವೆಲ್ಲ ಅವಶ್ಯವೇ ಎಂಬ ಪ್ರಶ್ನೆ ಎದುರಾಗುತ್ತೆ. ಇವಕ್ಕೆಲ್ಲಾ ಕಡಿವಾಣದ ಅವಶ್ಯಕತೆಯಿದೆ.
ಮಾ.ಕೃ.ಮಂಜು
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ಅಯ್ಯೋ ಮಂಜು, ಜಾಹೀರಾತುಗಳಿಗೆ ಕಡಿವಾಣ ಹಾಕಿದರೆ ನಮ್ಮ ಮಾಧ್ಯಮಗಳು ಬದುಕುವುದಾದರೂ ಹೇಗೆ? ಈ ಉದ್ಯಮವನ್ನೇ ನೆಚ್ಚಿಕೊಂಡಿರುವ ನಮ್ಮ ಬಗ್ಗೆಯೂ ಸ್ವಲ್ಪ ಕರುಣೆ ಇರಲಿ.
- ಚಾಮರಾಜ ಸವಡಿ
http://chamarajsavadi@blogspot.com
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ದೊಡ್ಡ ದೊಡ್ಡ ಸಿನಿಮಾ, ಕ್ರಿಕೆಟ್ ಸ್ಟಾರ್‍ಗಳೆನಿಸಿಕೊಂಡವರು, ಈ ಜಾಹಿರಾತುಗಳಲ್ಲಿ ಎಸ್ಟೊಂದು ದೊಡ್ಡ ದೊಡ್ಡ ಸುಳ್ಳುಗಳನ್ನ ಹೇಳುತ್ತಾರಲ್ಲ, ನೋಡಿದರೆ ನಗು ಬರುತ್ತೆ. ನನಗೆ ಸಿನಿಮಾ ಮಾಡೋವಾಗ ತಲೆನೋವು ಬಂದರೆ, ನವರತ್ನ ತೈಲ ಬಳಸ್ತಿದ್ದೆ, ಅಂತ ಅಮಿತಾಬ್ ಹೇಳಿದರೆ, ನನಗೆ ವಿದ್ಯಾಬ್ಯಾಸದಲ್ಲಿ ಮುಂದೆ ಬರಲಾಗದ್ದಕ್ಕೆ, ಕ್ರಿಕೆಟ್-ಗೆ ಬಂದೆ ಅಂತ ಒಂದು ಜಾಹಿರಾತಿನಲ್ಲಿ ಹೇಳಿದರೆ, ಇನ್ನೊಂದರಲ್ಲಿ, ಟೆನಿಸ್‍ನಲ್ಲಿ ಇಂಟರೆಸ್ಟ್ ಇತ್ತು, ಆದರೆ ಜೋರಾಗಿ ಹೊಡೆಯುತ್ತಿದ್ದರಿಂದ ಔಟ್ ಆಗ್ತಿತ್ತು, ಆಗ ಸೆವೆನ್ ಅಪ್ ಕುಡಿದ ಮೇಲೆ, ಟೆನಿಸ್ ಬ್ಯಾಟ್ ಬದಲು ಕ್ರಿಕೆಟ್ ಬ್ಯಾಟ್ ಹಿಡಿದೆ ಅಂತ ದೋನಿ ಹೇಳುತ್ತಾನೆ. ಎಂತ ಹಸಿ ಹಸಿ ಸುಳ್ಳುಗಳು, ಅಲ್ವ?
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ಹಸಿ ಹಸಿ ಸುಳ್ಳುಗಳೇ ಬಿಸಿ ಬಿಸಿ ಜಾಹೀರಾತುಗಳ ಸರಕು.
- ಚಾಮರಾಜ ಸವಡಿ
http://chamarajsavadi@blogspot.com
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
NAKKU NAKKU SAAKAYTHU, NIJA, JAHEERATUGALU ENELLA BHARAVASEGALANNA SRISAMANYANA BADUKINALLI HUTTISATVE
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ಜಾಹೀರಾತುಗಳೂ ಒಂಥರಾ ಜಾನಪದ ಕತೆಗಳಂತೆ. ಈಗಿನ ಮಾದರಿಗಳನ್ನು ನೋಡುವುದಾದರೆ ಹ್ಯಾರಿ ಪಾಟರೋ ಅಥವಾ ಅಂತಹ ಹಲವಾರು ಕಾರ್ಟೂನ್ ಕತೆಗಳಂತೆ. ಒಂದಕ್ಕೊಂದು ಸಂಬಂಧವಿರದ ವಿಚಾರಗಳ ಮೇಲೆ ಕತೆ ಹೆಣೆಯುತ್ತ ಹೋಗುತ್ತಾರೆ. ಓದುತ್ತ ಓದುತ್ತ ಕಳೆದೇ ಹೋಗಬೇಕು.
- ಚಾಮರಾಜ ಸವಡಿ
http://chamarajsavadi@blogspot.com
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
- ಪ್ರಶಾಂತ್. ಎಂ.ಸಿ
ಹ್ಹ..ಹ್ಹ...ಹ್ಹ...ನಿಜ ಸರ್. ಇವೆಲ್ಲಾ ಕಟು ವಾಸ್ತವದ ನಗ್ನ ಸತ್ಯಗಳೇ...ಹಲ್ಲುಜ್ಜಿದರೆ ಹುಡುಗಿ ಸಿಗ್ತಾಳೆ ಸರ್. ಹಾಗಂತಾ ನನ್ನ ಗೆಳೆಯಾ ಒಂದೊಂದು ಟೈಮ್‌ಲ್ಲಿ ಒಂದೊಂದು ಪೇಸ್ಟ್‌ನಿಂದ ಉಜ್ತಾನೆ ಹಲ್ಲು....
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ಅಯ್ಯೋ, ಅವರ ಹಲ್ಲುಗಳು ಉಳಿದಿವೆಯಾ? ಏಕೆಂದರೆ, ಹಲ್ಲುಜ್ಜುವ ಪೇಸ್ಟ್‌ಗಳಿವೆಯೇ ಹೊರತು, ಉದುರಿಹೋದ ಹಲ್ಲುಗಳನ್ನು ಮತ್ತೆ ತರುವ (ಉದುರಿದ ಕೂದಲನ್ನು ಮತ್ತೆ ಸ್ಥಾಪಿಸುವಂಥ ಉತ್ಪಾದನೆಗಳಿರುವಂತೆ) ಯಾವ ಉತ್ಪಾದನೆಯೂ ಸದ್ಯ ಮಾರುಕಟ್ಟೆಯಲ್ಲಿಲ್ಲ.
ಎಲ್ಲ ಹಲ್ಲುಗಳು ಬಿದ್ದ ನಂತರ ಬಹುಶಃ ಯಾವ ಪೇಸ್ಟೂ ಬೇಕಾಗಲಿಕ್ಕಿಲ್ಲ. ಆಗ ಯಾವ ಹುಡುಗಿಯೂ ಹತ್ತಿರ ಬರುವುದಿಲ್ಲ ಬಿಡಿ.
- ಚಾಮರಾಜ ಸವಡಿ
http://chamarajsavadi@blogspot.com
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ನಿಜ..ಜಾಹಿರಾತುಗಳೋ.. ಅವರು ಬಳಸುವ ಬಾಷೆಯೋ.. ದೇವರಿಗೇ ಪ್ರೀತಿ..
ಅದು ಆಕ್ಸ್ ಅಲ್ಲ... ವೈಲ್ಡ್ ಸ್ಟೋನ್....
ಆಕ್ಸ್ ಹಾಕಿದ ಹುಡುಗ ಚಾಕಲೇಟ್ ಆಗ್ತಾನೆ
ಉ: ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?
ಕೊಡಲಿ (ಆಕ್ಸ್) ಅಂದುಕೊಂಡಿದ್ದೆ, ಅದು ಕಾಡುಗಲ್ಲು (ವೈಲ್ಡ್ ಸ್ಟೋನ್) ಎಂದು ತಿಳಿಸಿದ್ದಕ್ಕೆ ಥ್ಯಾಂಕ್ಸ್. ಉತ್ಪಾದನೆಗಳು ಹೆಸರುಗಳೂ ಮಜವಾಗಿರುತ್ತವೆ. ಅವನ್ನು ಕನ್ನಡಕ್ಕೆ ಅನುವಾದಿಸಿ ನೋಡಿದರೆ, ಇನ್ನೂ ಮಜಾ. ಆ ಬಗ್ಗೆಯೂ ಬರೆಯಿರಿ.
- ಚಾಮರಾಜ ಸವಡಿ
http://chamarajsavadi@blogspot.com