ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › Chamaraj ರವರ ಬ್ಲಾಗ್

ಚಾಮರಾಜ ಸವಡಿ

ಸತ್ಯದ ಹಸಿ ದರ್ಶನ

ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌

August 8, 2008 - 8:44pm — Chamaraj
Beijing Olympic-2.jpg

ಅಲ್ಲಿ ಮೈದಳೆದಿತ್ತು ಐದು ಸಾವಿರ ವರ್ಷಗಳ ಪರಂಪರೆ. ಜಗತ್ತಿಗೆ ಹಲವಾರು ಪ್ರಥಮ ಶೋಧಗಳನ್ನು ನೀಡಿದ ಸ್ಮರಣೆ. ಕಳೆದೊಂದು ದಶಕದಿಂದ ತಾನು ಮೈಗೂಡಿಸಿಕೊಂಡಿರುವ ಆರ್ಥಿಕ ತಾಕತ್ತು, ವಿಜೃಂಭಿಸುತ್ತಿರುವ ಕ್ರೀಡಾ ಸಾಮರ್ಥ್ಯ- ಇವೆಲ್ಲವನ್ನೂ ಚಿತ್ರ-ಚಿತ್ತಾರದ ಮೂಲಕ ಅನಾವರಣಗೊಳಿಸಿತು ಬೀಜಿಂಗ್ ಒಲಂಪಿಕ್ಸ್. ಸಂಜೆಯಾಗುತ್ತಿದ್ದಂತೆ, ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಹಕ್ಕಿ ಗೂಡೊಂದು ಬೆಳಕಿನ ಕಣ್ತೆರೆಯಿತು. ೨೯ನೇ ಒಲಂಪಿಕ್ ಉದ್ಘಾಟನೆಗೊಂಡಿತು.

ಇಡೀ ಜಗತ್ತೇ ಅಲ್ಲಿ ನೆರೆದಿತ್ತು. ಜಗದ ಎಲ್ಲ ಸೊಗಸನ್ನೂ ತನ್ನೊಳಗೆ ಹೊಂದಿದ ಸಂಭ್ರಮದೊಂದಿಗೆ ಬೀಜಿಂಗ್‌ನ ’ಹಕ್ಕಿ ಗೂಡು’ ಹೆಸರಿನ ರಾಷ್ಟ್ರೀಯ ಕ್ರೀಡಾಂಗಣ ಕಂಗೊಳಿಸಿತು. ಬಾನಂಗಳದಲ್ಲಿ ಥೇಟ್ ಹಕ್ಕಿ ಗೂಡು ಮಾದರಿಯ ಬಾಣಬಿರುಸುಗಳು ಬೆಳಗುತ್ತಿದ್ದಂತೆ, ಚೀನೀ ಪ್ರಧಾನಿ ಹೂ ಜಿಂಟಾವೊ ೨೯ನೇ ಒಲಂಪಿಕ್ ಉದ್ಘಾಟನೆ ಘೋಷಿಸಿದರು.

ಮುಂದೆ ಮೊಳಗಿದ್ದು ಬಾಣ ಬಿರುಸು, ಕೇಳಿದ್ದು ಹರ್ಷೋದ್ಗಾರ, ಬೆಳಗಿದ್ದು ಚೀನಾದ ೫೦೦೦ ವರ್ಷಗಳ ಅದ್ಭುತ ಪರಂಪರೆ. ಮನುಷ್ಯ ಈ ಪರಿಯ ಪರಿಪೂರ್ಣತೆಯನ್ನು ಮೈಗೂಡಿಸಿಕೊಳ್ಳಬಲ್ಲನೆ? ಎಂಬ ಅಚ್ಚರಿ ಹುಟ್ಟಿಸುವಂತೆ ಮೂರೂವರೆ ಸಾವಿರ ಕಲಾವಿದರು ಅದ್ಭುತ ಕಲಾ ನೈಪುಣ್ಯತೆ ಮೆರೆದರು. ಒಂದಕ್ಕಿಂತ ಒಂದು ಅಚ್ಚರಿ. ಒಂದಕ್ಕಿಂತ ಒಂದು ಅಪೂರ್ವ. ನೆರಳು, ಬಣ್ಣ, ಬೆಳಕಿನಾಟದಲ್ಲಿ ಬೆಳಗಿದ ಕ್ರೀಡಾಂಗಣದಲ್ಲಿ ನಡೆದ ಚಮತ್ಕಾರಿ ಪ್ರದರ್ಶನವನ್ನು ಜಗತ್ತು ಎವೆಯಿಕ್ಕದೇ ವೀಕ್ಷಿಸಿತು. ಚಕಿತಗೊಂಡಿತು. ಮುದಗೊಂಡಿತು. ಮೆಚ್ಚಿ ಹರ್ಷೋದ್ಗಾರ ಮಾಡಿತು.

ಜಗತ್ತಿನ ನೂರು ದೇಶಗಳ ಪ್ರಧಾನಿ, ಅಧ್ಯಕ್ಷರುಗಳು ಅಲ್ಲಿ ನೆರೆದಿದ್ದರು. ರಾಜಕೀಯ ಮರೆತು, ಸಣ್ಣತನವನ್ನು ತಾತ್ಕಾಲಿಕವಾಗಿ ತೊರೆದು, ಥೇಟ್ ಬೆರಗುಗಣ್ಣಿನ ಪ್ರೇಕ್ಷಕರಂತೆ ಉದ್ಘಾಟನಾ ಸಮಾರಂಭ ವೀಕ್ಷಿಸಿದರು. ಮೈಮರೆತರು. ಮೆಚ್ಚಿ ಚಪ್ಪಾಳೆ ತಟ್ಟಿದರು. ಸುಮಾರು ೨೦೫ ರಾಷ್ಟ್ರಗಳ ೧೦,೭೦೮ ಕ್ರೀಡಾಪಟುಗಳು ಸೇರಿದಂತೆ ಸುಮಾರು ೯೦ ಸಾವಿರ ಜನರು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ನೇರ ಸಾಕ್ಷಿಯಾದರು. ಇನ್ನು ಟಿವಿ ಮೂಲಕ ಭೂಮಂಡಲದ ಈ ಅದ್ಭುತ ಕಾರ್ಯಕ್ರಮವನ್ನು ವೀಕ್ಷಿಸಿದವರು ಅದೆಷ್ಟು ನೂರು ಕೋಟಿಯೋ.

ಸುಮಾರು ಮೂರೂವರೆ ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮ ಹಳೆ ಮತ್ತು ಚೀನಾವನ್ನು ಜಗದೆದುರು ತೆರೆದಿಟ್ಟಿತು. ಮಹಿಳೆಯರು, ಮಕ್ಕಳೂ ಸೇರಿದಂತೆ ೧೫ ಸಾವಿರ ಕಲಾವಿದರು ಕರಾರುವಾಕ್ಕಾಗಿ, ಚ್ಯುತಿ ತಪ್ಪದಂತೆ ತಮ್ಮ ಕೌಶಲ್ಯ ಪ್ರದರ್ಶಿಸಿದರು. ಒಲಂಪಿಕ್ ಅರ್ಥ ಸಾರುವ ವರ್ತುಲಗಳಿಗೆ ವಿದ್ಯುತ್ ದೀಪಗಳು ಜೀವ ತುಂಬಿದವು. ಆಗಸಕ್ಕೆ ಚಿಮ್ಮಿದ ಬಾಣ ಬಿರುಸುಗಳು ರಾತ್ರಿಯನ್ನು ಹಗಲು ಮಾಡಿದವು.

ಇನ್ನು ಹದಿನಾರು ದಿನಗಳ ಕಾಲ ಇಡೀ ಜಗತ್ತು ತನ್ನ ಜಂಜಡವನ್ನು ಮರೆಯುವುದು. ಕ್ರೀಡಾಭಿಮಾನ ಮೆರೆಯುವುದು. ಹೆಸರೇ ಕೇಳಿರದ ದೇಶಗಳ ಕ್ರೀಡಾಪಟುಗಳ ಸಾಧನೆ ಕಂಡು ನಿಬ್ಬೆರಗಾಗುವುದು. ಕುಣಿದು ಕುಪ್ಪಳಿಸುವುದು. ಮನುಕುಲದ ಶ್ರೇಷ್ಠ ಸಾಧನೆಯನ್ನು ಮೆರೆದು ಹೊರ ಭರವಸೆ, ವಿಶ್ವಾಸ ಹಾಗೂ ಸೋದರತ್ವ ಮೆರೆಯುವುದು.

ಬೀಜಿಂಗ್ ಒಲಂಪಿಕ್ಸ್ ಉದ್ಘಾಟನಾ ಸಮಾರಂಭ ಈ ಎಲ್ಲ ಆಶಯಗಳಿಗೆ ಬರೆದ ಮುನ್ನುಡಿ.

- ಚಾಮರಾಜ ಸವಡಿ

  • ಒಲಿಂಪಿಕ್ಸ್‌
  • ಕ್ರೀಡೆ
  • ಚೀನಾ
~.~
  • Chamaraj ರವರ ಬ್ಲಾಗ್
  • Login or register to post comments
  • 157 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 10, 2008 - 10:58am — mowna

ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌

mowna's picture

ಚೀನಾದ ಹಕ್ಕಿಗೂಡಿನಲ್ಲಿ ಗರಿ ಬಿಚ್ಚಿ ನಿಂತ ಸಾಂಸ್ಕ್ರತಿಕ ಕಾರ್ಯಕ್ರಮ ಕಣ್ಮನ ತಣಿಸಿತು. ಅದ್ಭುತವಾದ ಕಲ್ಪನಾವಲಯದ ಚಿತ್ರಣ..
ಈ ಬಾರಿ ಭಾರತದ ಹಾಕಿ ತಂಡ ಇಲ್ಲದಿರುವುದು ಬೇಸರದ ಸಂಗತಿಯಾದರು, ಈಗ್ ಹೋಗಿರುವ ಕ್ರೀಡ ಪಟುಗಳಾದರು ಈ ಬಾರಿ ಭಾರತಕ್ಕೆ ಚಿನ್ನದ ಪದಕ ತರಬಲ್ಲರೆ?! ಕಾದು ನೋಡಬೇಕು.
ನೀವು ಬರೆಯುವ ಶ್ಯಲಿ ಬಹಳ ಸರಳವಾಗಿರುತ್ತದೆ ಚಾಮರಾಜ ಅವರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 10, 2008 - 6:09pm — Chamaraj

ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌

Chamaraj's picture

ಒಲಿಂಪಿಕ್ಸ್‌ ಹತ್ತಿರ ಬಂದಾಗ ಮಾತ್ರ ಕ್ರೀಡಾಸಕ್ತಿ ತೋರುವುದರಿಂದ ಪದಕಗಳು ಬಂದಾವೆ? ಈ ಆಸಕ್ತಿ ನಿರಂತರವಾಗಿರಬೇಕು. ಅಂತಹ ವಾತಾವರಣ ನಮ್ಮ ದೇಶದಲ್ಲಿಲ್ಲ. ಹೀಗಾಗಿ, ಪ್ರಮುಖ ಅಂತರ್‌ರಾಷ್ಟ್ರೀಯ ಕ್ರೀಡೆಗಳಲ್ಲಿ ನಮ್ಮ ಸಾಧನೆ ಕಳಪೆ.

ಹೀಗಿರುವಾಗ, ಭಾರತ ತಂಡದಿಂದ ಮಹತ್ವದ ಸಾಧನೆ ನಿರೀಕ್ಷಿಸುವುದು ಹೇಗೆ? ಅಂಥ ಪವಾಡವೇನಾದರೂ ಸಂಭವಿಸಿದರೆ, ಅದು ಅವರ ವೈಯಕ್ತಿಕ ಸಾಧನೆಯಾಗುತ್ತದೆಯೇ ಹೊರತು, ಅದರಲ್ಲಿ ಸರ್ಕಾರದ ಪಾಲು ಇರದು.

ಬೇರುಮಟ್ಟದಲ್ಲಿ ಕಾಣದ ಕ್ರೀಡಾ ಪ್ರೋತ್ಸಾಹ ಹಾಗೂ ಕ್ರೀಡಾ ಚಟುವಟಿಕೆ ಉನ್ನತ ಮಟ್ಟದಲ್ಲಿ ಕಾಣ್ಕೆ ನೀಡದು. ನಮ್ಮ ಬೇರು ಕ್ರಿಕೆಟ್‌ನಲ್ಲಿರುವಾಗ, ಇತರ ಕ್ರೀಡೆಗಳಿಂದ ಮಹತ್ತರ ಸಾಧನೆ ಸುಲಭಸಾಧ್ಯವಲ್ಲ. ಹೀಗಾಗಿ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಹೆಚ್ಚಿನ ಸಾಧನೆ ನಿರೀಕ್ಷಿಸುವುದು ಕಷ್ಟ.

- ಚಾಮರಾಜ ಸವಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 12:27pm — mowna

ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌

mowna's picture

ನೀವು ಹೇಳಿದು ಸತ್ಯ. ಇಂದಿನ ಮಕ್ಕಳಿಗೆ ರಾಷ್ಟೀಯ ಕ್ರೀಡೆ ಯಾವುದು ಎಂದರೆ ? "ಕ್ರಿಕೆಟ್ " ಎನ್ನುತ್ತಾರೆ ವಿನಃ "ಹಾಕಿ" ಎನ್ನುವುದು ಖಂಡಿತ ತಿಳಿದಿಲ್ಲ. ಇದಕ್ಕೆ ಕಾರಣ ಶಾಲೆಯ ಉಪಾಧ್ಯಾಯರು, ಪೋಷಕರು. ಮಕ್ಕಳು ಇಂದು ಹೆಚ್ಚಾಗಿ ಟಿ.ವಿ. ಕಾರ್ಟುನ್, ಗೇಮ್ಸ್ ನಲ್ಲಿ ತೋರಿಸುತ್ತಿರುವ ಆಸಕ್ತಿ ಬೇರೆ ವಿಷಯಗಳಲ್ಲಿ ಇಲ್ಲ.

ನೆನ್ನೆ ಅಭಿನವ ಬಿಂದ್ರ್ ೨೮ ವರುಷಗಳ ನಂತರ ಚಿನ್ನದ ಪದಕ ಒಲಂಪಿಕ್ಸನಲ್ಲಿ ಗೆದ್ದದು ಸಂತಸದ ವಿಷಯ ಅವರನ್ನು ಖಂಡಿತವಾಗಿಯೂ ಅಭಿನಂದಿಸಬೇಕು. ಆದರೆ ಇಂದಿನ ವಾರ್ತ ಪತ್ರಿಕೆಗಳನ್ನು ನೋಡಿ ಎಲ್ಲ ರಾಜ್ಯಗಳು ಹಣದ ಹೊಳೆಯನ್ನೆ ಹರಿಸುತ್ತಿವೆ. ಇದು ಎಷ್ಟರ ಮಟ್ಟಿಗೆ ಸರಿ? ಎಷ್ಟೋ ಕ್ರೀಡಾಪಟುಗಳಿಗೆ ಕಲಿಯುವ ಅಸಕ್ತಿಯಿದ್ದರು, ಹಣವಿಲ್ಲ!. ಸರಿಯಾದ ಸ್ಠಳಗಳಿಲ್ಲ. ಇದು ಅತಿ ಎನಿಸುವುದಿಲ್ಲವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌
  • ಐತಿಹಾಸಿಕ ಬೀಜಿಂಗ್ ಮಹಾಕ್ರೀಡಾಕೂಟ, ನಡೆಸಿಕೊಟ್ಟ, ’ ಬೀಜಿಂಗ್ ಒಲಂಪಿಕ್ಸ್”, ವಿಧ್ಯುಕ್ತವಾಗಿ ಚಾಲನೆಯಾಯಿತು !
  • ನಾವೆಲ್ಲಾ ಅತಿಕಾತುರದಿಂದ ಕಾಯುತ್ತಿದ್ದ " ಬೀಜಿಂಗ್ ಒಲಂಪಿಕ್ಸ್ " ಇನ್ನೇನು ಶುರುವಾಗುವ ಸಮಯ ಹತ್ತಿರ ಬಂದಿದೆ !
  • ಚೀನಾದಿಂದ ಕಲಿಯಬೇಕಾದ ಪಾಠ
  • ಡಿಜಿಟಲ್ ಲೈಬ್ರರಿ ಯಲ್ಲಿ ಕನ್ನಡದ ಹದಿನಾರು ಸಾವಿರ ಪುಸ್ತಕ!- ಪುಸ್ತಕನಿಧಿ ಹೊಸ ಸರಣಿ!
Syndicate content

ಲೇಖಕರು

Chamaraj's picture

ಪೂರ್ಣ ಹೆಸರು
ಚಾಮರಾಜ ಸವಡಿ

ಪರಿಚಯ

ವೃತ್ತಿಯಿಂದ ಪತ್ರಕರ್ತ. ಸದ್ಯ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ಕೆಲಸ. ಓದುವುದು ಮತ್ತು ಬರೆಯುವುದು ಅಂದ್ರೆ ಇಷ್ಟ.

ನನ್ನ ಬ್ಲಾಗ್‌: http://chamarajsavadi.blogspot.com

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • Attitude
  • ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
  • ವಾಪಾಸ್ ಬಂದುಬಿಟ್ಟೆ...!
  • ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....
  • ಕನಸು ಕದ್ದ ಹುಡುಗಿ...
  • ಚೌರದವನ ಕಷ್ಟ ಸುಖ
  • ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
  • ಗುರುದತ್ ಎಂಬ ದುರಂತ ನಾಯಕ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 5:36pm
  • hndivya
    ಉ: ಗೆಳತಿ, ತವರಿಗೆ ಹೋದಾಗ....
    October 12, 2008 - 5:20pm
  • ಸಂಗನಗೌಡ
    ಉ: ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
    October 12, 2008 - 5:17pm
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 4:09pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:59pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 12:35pm
  • vasant.shetty
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 11:01am
  • makrumanju
    ಉ: ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
    October 12, 2008 - 10:57am
  • makrumanju
    ಉ: ಮರಳಿ ಬರಲಿ ಬಾಲ್ಯ
    October 12, 2008 - 10:42am
  • ಪ್ರವೀಣ್
    ಉ: ಕನ್ನಡದ ಯುವ ಗಾನ ಕೋಗಿಲೆ, ಭಾರತದ ಭರವಸೆಯ ಗಾಯಕಿ 'ರಿತೀಶಾ'
    October 12, 2008 - 9:54am
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 126 ಅತಿಥಿಗಳು ಆನ್ಲೈನ್ ಇರುವರು.


ನನ್ನ ಜನಕ ಆಮ್ಲಜನಕ

— ಟಿ.ಪಿ.ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator