ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ನಿಮಗೆ ಖ್ಯಾತ ವ್ಯಂಗ್ಯಚಿತ್ರಕಾರರಾದ ಪ್ರಕಾಶ್ ಶೆಟ್ಟಿಯವರ ಪತ್ರ
(ಪ್ರಕಾಶ್ ಶೆಟ್ಟಿಯವರು ಗೊತ್ತಲ್ಲ? ಮೂವತ್ತಮೂರು ವರ್ಷಗಳಿಂದ ವ್ಯಂಗ್ಯಚಿತ್ರಗಳದ್ದೇ ಧ್ಯಾನ
ಮಾಡುತ್ತಿದ್ದಾರೆ. ಕನ್ನಡಿಗರ ಹುಬ್ಬೇರಿಸಿದ "ಸಂತೋಷ" ಮಾಸಪತ್ರಿಕೆಯೊಂದಿಗೆ ವೃತ್ತಿ ಆರಂಭ.
ಟೈಮ್ಸ್ ಆಫ್ ಡೆಕ್ಕನ್, ಚಿತ್ರತಾರ,ಮುಂಗಾರು,ದ್ ವೀಕ್ ಪತ್ರಿಕೆಗಳಿಗೆ ತಮ್ಮ
ಚಿತ್ರಗಳಿಂದ ಮೆರುಗು ನೀಡಿದ ಪ್ರಕಾಶ್, ಈಟಿವಿಯಲ್ಲಿ "ಪಂಚ್" ಮೂಲಕ ಪ್ರಸಿದ್ಧರು.)
------------------------------------------------------------------------------
ಆತ್ಮೀಯ ಗೆಳೆಯರೇ,
ನಾನು ತರಲೆ ಹುಳುವೊಂದನ್ನು ನನ್ನ ತಲೆಯೊಳಗೆ ಹಾಕಿಬಿಟ್ಟಿದ್ದೇನೆ. ಆ ಕಾರಣ
"ವಾರೆಕೋರೆ" ಎಂಬ ಹಾಸ್ಯ ಪತ್ರಿಕೆಯನ್ನು ಹುಟ್ಟುಹಾಕುವ ಹುಚ್ಚು ಹಿಡಿದೆದೆ.
ಕಚಗುಳಿ,ಚುಚ್ಚು,ಲೇವಡಿಗಳನ್ನು ವ್ಯಂಗ್ಯಚಿತ್ರ,ನಗೆಬರಹ,ಫೋಟೊ ಮತ್ತು ಕ್ಯಾರಿಕೇಚರ್‌ಗಳ
ಮೂಲಕ ನೀಡುವ ದುರುದ್ದೇಶ ಇಟ್ಟುಕೊಂಡಿದ್ದೇನೆ. "ಕಾರ್ಟೂನ್ ಕಲಿ" ಎನ್ನುವ ಮಾಸಿಕದ
ಬೋನಸ್. ನಿಮ್ಮಂತಹ ಹಾಸ್ಯಪ್ರಜ್ಞಾವಂತರು "ವಾರೆಕೋರೆ" ಕುಟುಂಬದಲ್ಲಿ
ಭಾಗಿಯಾಗಬೇಕೆನ್ನುವುದು ನನ್ನ ಆಶಯ. ಯಾಕೆಂದರೆ ಇದು ಚಂದಾದಾರರ ಆಧಾರದ ಮೇಲೆ ಮಾಡಬೇಕಾದ
ಪತ್ರಿಕೆ.
ಚಂದಾದಾರರನ್ನು ಗಳಿಸಲು ಈ ಕೆಳಕಂಡ ಯೋಜನೆಗಳನ್ನು ಹಾಕಿಕೊಂಡಿದ್ದೇನೆ.
*ನಿಮ್ಮ ವ್ಯಂಗ್ಯಚಿತ್ರ ಪ್ರದರ್ಶನ(ನಿಮ್ಮೂರಿನ ಇತರ ವ್ಯಂಗ್ಯಚಿತ್ರಕಾರರನ್ನು ಸೇರಿಸಿ).
*ನನ್ನ ಕ್ಯಾರಿಕೇಚರ್ ಶೋ(ಒಂದು ಗಂಟೆ ಅವಧಿ).
*ವಾರೆಕೋರೆಯ ಪ್ರಾಯೋಗಿಕ ಸಂಚಿಕೆ ಮಾರಾಟಕ್ಕೆ.
*ಉಚಿತ ಕ್ಯಾರಿಕೇಚರ್ಸ್: ವಾರ್ಷಿಕ ಚಂದಾಹಣ ರೂ.200/-ದೊಂದಿಗೆ 2 ಕ್ಯಾರಿಕೇಚರ್ಸ್ ಉಚಿತ.
ಈ ಹುಚ್ಚು ಕನಸು ನನಸಾಗಲು ನಿಮ್ಮ ಮತ್ತು ನಿಮ್ಮೂರಿನ ವ್ಯಂಗ್ಯಚಿತ್ರಕಾರರ ಮುತುವರ್ಜಿ
ಅಗತ್ಯ. ಕ್ಲಬ್,ಸಂಘ-ಸಂಸ್ಥೆಗಳ ಕಿವಿಗೆ ಹಾಕಿ. ಉಚಿತವಾಗಿ "ವಾರೆಕೋರೆ ನಗೆಹಬ್ಬ"
ಕಾರ್ಯಕ್ರಮ ನೀಡುವ ಬಗ್ಗೆ ಹೇಳಿ. ಇಂತಹ ಯೋಜನೆಗೆ ರೂಪ ಕೊಡಲು ನಿಮಗೆ ಸಾಧ್ಯವೇ?
"ವಾರೆಕೋರೆ" ಪತ್ರಿಕೆಗೆ ಇತರ ಯೋಜನೆಗಳಿವೆ.ವ್ಯಂಗ್ಯಚಿತ್ರಕಾರರನ್ನು ಆರ್ಥಿಕವಾಗಿ
ಬೆಳೆಸುವಂತಹ ಈ ಯೋಜನೆಗಳ ಬಗ್ಗೆ ಮುಂದೆ ಮಾಹಿತಿ ನೀಡುವೆ. ಒಟ್ಟಿನಲ್ಲಿ ಈ ಹಾಸ್ಯ
ಪತ್ರಿಕೆ ಕನ್ನಡ ಪತ್ರಿಕೋದ್ಯಮಕ್ಕೊಂದು ಸುಂಟರಗಾಳಿಯಾಗಬೇಕು.
ಪ್ರಕಾಶ್ ಶೆಟ್ಟಿ,ಕಾರ್ಟೂನಿಸ್ಟ್
--------------------------------------------------------------------------
ಮಿಂಚಂಚೆ: prakashetty@gmail.com
---------------------------------------------------------------------------

- ASHOKKUMAR ರವರ ಬ್ಲಾಗ್
- Login or register to post comments
- 312 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
http://2.bp.blogspot.com/_K_Lz7PleWKU/SDwxG0FYTTI/AAAAAAAAAJ8/zee1PmBl_I...
*ಅಶೋಕ್
ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಅಶೋಕ್, ನನಗೆ ಸರಿಯಾಗಿ ಅರ್ಥವೇ ಆಗ್ಲಿಲ್ಲ. ಏನಿದು, ಹೊಸ ಕಾರ್ಟೂನ್ ಮ್ಯಾಗಝೀನ್?
ಅರಗಿಸಿಕೊಳ್ಳಲು ಸುಮಾರು ವಿಷಯಗಳು ಎನ್ನುವಂತಿದೆ!
(btw, ಮೇಲಿನ ಪ್ರತಿಕ್ರಿಯೆ ಖಾಲಿ ಇದೆಯಲ್ಲ!)
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಹೌದು ಹೊಸ ವಾರೆಕೋರೆ ಎನ್ನುವ ಪತ್ರಿಕೆ ಆರಂಬಿಸುತ್ತಿದ್ದಾರೆ. ಕನ್ನಡಿಗರ ಬೆಂಬಲ ಕೇಳಿದ್ದಾರೆ.
ಚಂದಾದಾರರ ಮೇಲೆ ಅವಲಂಬಿತವಾದ ಪತ್ರಿಕೆಗೆ ಸದಸ್ಯರನ್ನು ಒಟ್ಟು ಮಾಡಲು ಹೊಸ ಯೋಜನೆ ಅವರದ್ದು.
ಅದನ್ನು ಪತ್ರದ ಮೂಲಕ ಬರೆದಿದ್ದಾರೆ. ನನಗೆ ಬಂದ ಪತ್ರದ ವಿಷಯವನ್ನು ನಿಮಗೆಲ್ಲರಿಗೂ ತಲುಪಿಸೋಣ ಎಂದು ಕೊಂಡೆ.
ಪ್ರತಿಕ್ರಿಯೆಯಲ್ಲಿ ಅವರ ಒಂದು ಚಿತ್ರ ಹಾಕಿದೆ ನನಗೆ ಕಾಣುತ್ತಿದೆ.
*ಅಶೋಕ್
ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಪ್ರತಿಕ್ರಿಯೆಯ source ನೋಡಿದೆ. ನಿಮ್ಮ ಬ್ರೌಸರಿನ cacheನಿಂದ ಲೋಡ್ ಆಗುತ್ತಿರಬಹುದು
ಇ-ಮೇಯ್ಲ್ ನನಗೂ ಫಾರ್ವರ್ಡ್ ಮಾಡ್ತೀರ?
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಹೌದೇ? ದಯವಿಟ್ಟು ತೆಗೆದುಬಿಡಿ.
*ಅಶೋಕ್
ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಒಂದು ರೀತಿಯಲ್ಲಿ ಸರಿಪಡಿಸಿರುವೆ.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಹರಿ,
link ಕ್ಲಿಕ್ಕಿಸಿದರೆ HTTP 404.
ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಅಲ್ಲಿ ಚಿತ್ರವೊಂದನ್ನು ಹಾಕಿದ್ದೆ.
http://tinyurl.com/3r6s8h
*ಅಶೋಕ್
ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಅವರು ನನಗೆ ಪತ್ರ ಬರೆದಿದ್ದಾರೆ-ಮಿಂಚಂಚೆಯಲ್ಲ ನಾಡಿಗ್.
ಸರಿಪಡಿಸಿದ್ದಕ್ಕೆ ನನ್ನಿ.
*ಅಶೋಕ್
ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಅವರ ದುರುದ್ದೇಶ ಚೆನ್ನಾಗಿದೆ.. ಅದು ಆದಷ್ಟು ಬೇಗ ಈಡೇರಲಿ.. ಅವರ ಈ ಪತ್ರಿಕೆ ಪತ್ರಿಕೊಧ್ಯಮದಲ್ಲಿ ಅವರು ಹೇಳಿದ ಹಾಗೆ ಒಂದು ದೋಡ್ಡ "ತುಂಟರ ಗಾಳಿ" ಏಬ್ಬಿಸಲಿ ಅನ್ನೊದು ನನ್ನದೂ ಆಸೆ. ಅವರು ಇದರಲ್ಲಿ ಯಶಸ್ವಿ ಅಗುತ್ತಾರೆ, ಹಾಗು ಆಗಲಿ ಅನ್ನೊದು ನನ್ನ ಆಸೆ..ಇದನ್ನು ಇಲ್ಲಿ ಹಾಕಿದ ಅಶೊಕ್ ಅವರಿಗೂ ಧನ್ಯವಾದಗಳು.
ಅಮೃತ್.ವಿ
ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
>>ತುಂಟರಗಾಳಿ
*ಅಶೋಕ್