ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ನನ್ನ ಕವನಗಳು
ನನ್ನ ಕವನಗಳು, ಬರೀ ನನ್ನ ಕನಸುಗಳಲ್ಲ, ಅವು ಬರೀ ಜೀವನ ಪಾಠಗಳು ಅಥವಾ ಅನುಭವಗಳೂ ಅಲ್ಲ, ಅವು ಕೇವಲ ನನ್ನ ಕಣ್ಣ ಬಿಂಬಗಳಲ್ಲ.
ಇವುಗಳಾಚೆಗೆ ನನ್ನ ಕವನಗಳು, ನನಗೆ ಬೇರೆಯ ಅನುಭವವನ್ನೇ ನೀಡುತ್ತವೆ, ಹಾಗೆಂದು ನನ್ನ ಕವನಗಳು ನನಗೆ ತುಂಬಾ ಖುಷಿ ನೀಡಿವೆ ಎಂದಲ್ಲ.. ಕೆಲವೊಮ್ಮೆ, ನನ್ನ ಕೆಲವು ಕವನಗಳೊಂದಿಗೆ ನಾನು ಅಸಂತುಷ್ಟನೆ..... ನಾ ಬರೆದ ಆ ಕವನ ಹೇಳುವುದರಾಚೆಗೂ ಇನ್ನೂ ಉಳಿದಿದೆ ಎಂದೆನಿಸಿ ನನ್ನ ಕವನ ನನಗೆಯೇ ಅಪೂರ್ಣ ಎಂದೆನಿಸಿ ಬಿಡುತ್ತದೆ.
ಆ ಅಪೂರ್ಣತೆ ಏನೆಂಬುದನ್ನ ತೋರಿಸುವ ಹೊಣೆ ನಿಮ್ಮದಾಗಿದೆ...
ನನ್ನ ಕವನಗಳನ್ನ ಓದಿ, ನಿಮ್ಮ ಸಲಹೆ ಅಥವಾ ವಿಮರ್ಷೆಗಳನ್ನ ನೀಡಿ......
ಶೂನ್ಯ
ಕುರುಡನ ಮಾಡಿ ಎನ್ನ
ಹಚ್ಚುವಿಯೇಕೆ ದೀಪವ?
ಕಿವುಡನ ಮಾಡಿ ಎನ್ನ
ನುಡಿಸುವಿಯೇಕೆ ನಾದವ?
ಬತ್ತಿದ ನದಿಯಲ್ಲಿ ಕೇಳೀತು ಹೇಗೆ
ಭಾವಕಲರವ?

- arunasirigere ರವರ ಬ್ಲಾಗ್
- Login or register to post comments
- 145 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಶೂನ್ಯ
ಸಕ್ಕತ್..