ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › Aravinda ರವರ ಬ್ಲಾಗ್

ಕೆಂಪು Apache ಬೈಕೂ ... ಕಪ್ಪು ಟೀ ಶರ್ಟೂ... ಒಂದು ಕಹಿ ಅನುಭವ

August 10, 2008 - 11:52pm — Aravinda

ಕಳೆದ  ವಾರ  WiFi  router ತಗೋಳೋಣ ಅಂತ  ಆಫೀಸಿಂದ  KT Street(ಮೈಸೂರು) ಕಡೆ ಹೊರಟೆ.  ಕಾಳಿದಾಸ ರಸ್ತೆ ಯಿಂದ ಬಸ್ ಸ್ಟಾಂಡ್ ಕಡೆ ಹೋಗಲು  ಒಂದು ಶಾರ್ಟ್ ಕಟ್ ದಾರಿ ಇದೆ , ಅಲ್ಲಿ ಹೋಗುತ್ತಾ ಇದ್ದೆ. ಒಬ್ಬ  ಪೋಲೀಸಿನವ  ಅಡ್ಡ ಹಾಕಿ ನಿಲ್ಲಿಸಿದ ಅವರು ಹಾಗೇ ನನ್ನನ್ನು ನೋಡಿ ಮತ್ತೆ  ಹೋಗಪ್ಪಾ ಅಂದರು. ಅರೆ ಇವರು  ಯಾಕೆ ನಿಲ್ಲಿಸೋಕೆ ಹೇಳಿದ್ರು, ಟ್ರಾಫಿಕ್ ಪೋಲೀಸ್ ಕೂಡಾ ಅಲ್ಲ  ಅಂತ ಯೋಚಿಸುತ್ತಾ  ಹಾಗೇ ಹೋದೆ. ಅಲ್ಲಿ ಮಾಂಡೋವಿ  ಮೋಟಾರ್ಸ್ ಹತ್ತಿರ (ರೈಲ್ವೆ  ಸ್ಟೇಷನ್ನಿಗೆ ತಿರುಗುವಲ್ಲಿ) ಮತ್ತೆ  ಕೆಲವು  ಮಂದಿ  ಪೋಲೀಸರು   ನನ್ನ ಬೈಕ್  ನಿಲ್ಲಿಸಿದ್ರು. ಯಾವೂರು  ಏನು ಕಥೆ ಅಂತೆಲ್ಲಾ  ವಿಚಾರಿಸಿದರು. ಒಬ್ಬ ಪೋಲೀಸ್ ಹೋಗು ಅಂದ್ರೂ ಇನ್ನೊಬ್ಬ ಬಿಡಲು ತಯಾರಿರಲಿಲ್ಲ. ಆಮೇಲೆ ನಾನು ಕೆಲಸ ಮಾಡುತ್ತಿರುವುದು ಎಲ್ಲಿ ಎಂದು ಕೇಳಿದ, ನಾನು ನಮ್ಮ ಕಂಪನಿಯ ಹೆಸರು ಹೇಳಿದ ಮೇಲೆ ಸಮಾಧಾನವಾಗಿ ನನ್ನನ್ನು ಹೋಗಲು ಬಿಟ್ಟ. ಅವರು ಹೋಗಲು ಹೇಳಿದ ಮೇಲೆ ನನಗೆ  ಸಲ್ಪ ಧೈರ್ಯ ಬಂದು "ಏನು ವಿಷಯ  ಸಾರ್" ಎಂದು ಕೇಳಿದೆ. ಅದಕ್ಕೆ ಅವನು "ಏನಿಲ್ಲ ಬಿಡಿ" ಅಂದ. ನಾನು ಮತ್ತೆ ಏನೂ ಕೇಳದೆ  ಹೊರಟೆ. WiFi  router ತಗೊಂಡೆ, ಇನ್ನೇನೂ ತೊಂದರೆ ಆಗದಿದ್ರೆ ಸಾಕಪ್ಪಾ ಅಂತ ಅಂದು ಕೊಳ್ಳುತ್ತಾ  ಸೂರ್ಯಬೇಕರಿ ಹತ್ತಿರ ಇರುವ ನನ್ನ ರೂಮಿನ ಕಡೆ ಹೊರಟೆ. ಕಾಳಿದಾಸ ರೋಡಿನಿಂದ ವಿಧ್ಯಾವರ್ಧಕ ಕಾಲೇಜಿನ  ರೋಡಲ್ಲಿ ಹೋಗುತ್ತಿದ್ದಾಗ ಮತ್ತೊಬ್ಬ ಪೋಲೀಸು ಗಾಡಿ ನಿಲ್ಲಿಸಲು ಹೇಳಿದ. ಏನಾಗ್ತಿದೆ ಇವತ್ತು ಅಂತ ಅರ್ಥ ಆಗ್ತಿರಲಿಲ್ಲ. ಗಾಡಿ ಡಾಕುಮೆಂಟ್ಸ್ ಎಲ್ಲಾ ತೋರಿಸು ಅಂದ. ನನ್ನ   ಬೈಕ್ ನ  ಸೀಟ್ ತೆಗೆದು ಅದರ ಕೆಳಗಿದ್ದ ಡಾಕುಮೆಂಟ್ಸ್  ತೆಗೆಯುವಷ್ಟರಲ್ಲಿ, ಅವನಿಗೇನನ್ನಿಸ್ತೋ ಏನೋ  "ಹೋಗಪ್ಪಾ  ನೀನು" ಅಂದ.  ಇವರಾದರೂ ವಿಷಯ  ಹೇಳ್ಬೋದು ಅನ್ನೋ ಆಸೆಯಿಂದ  ಏನು ವಿಷಯ ಅಂತ ಕೇಳಿದೆ, ಅದಕ್ಕೆ ಅವರು ಹೇಳಿದ್ದಿಷ್ಟು.
ಅದ್ಯಾರೋ ಒಬ್ಬ ಕೆಂಪು  Apache ಬೈಕ್ ನಲ್ಲಿ  ಕಪ್ಪು ಟಿ ಶರ್ಟ್ ಹಾಕಿಕೊಂಡು ಚಿನ್ನದ ಸರ ಎಗರಿಸಿಕೊಂಡು  ಹೋದನಂತೆ, ಹಂಗಾಗಿ  ಎಲ್ಲಾ Apache ಬೈಕ್ ನವರನ್ನೂ , ಕಪ್ಪು  ಟೀ ಶರ್ಟ್ ಹಾಕಿದೋರನ್ನೂ ವಿಚಾರಿಸ್ತಾ ಇದ್ದರಂತೆ.

  • Apache ಬೈಕು
  • ಕಪ್ಪು ಟೀ ಶರ್ಟ್
  • ಚಿನ್ನದ ಸರ
  • ಪೋಲೀಸ್
  • ಮೈಸೂರು
~.~
  • Aravinda ರವರ ಬ್ಲಾಗ್
  • Login or register to post comments
  • 349 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 11, 2008 - 12:00am — hpn

ಉ: ಕೆಂಪು Apache ಬೈಕೂ ... ಕಪ್ಪು ಟೀ ಶರ್ಟೂ... ಒಂದು ಕಹಿ ಅನುಭವ

hpn's picture

ಬೆಂಗಳೂರಿನಲ್ಲಿ ಈ ತರ ಬಹಳ ಆಗತ್ತೆ. ಇಲ್ಲಿ ನಿಲ್ಲಿಸಿ ಸುಮಾರು ಹೊತ್ತು ವಿಚಾರಿಸುತ್ತಾರೆ. ಒಂದ್ಸಾರಿ ನನ್ನ ನಿಲ್ಲಿಸಿ ಮುಖವನ್ನು ಅತ್ತಿತ್ತ ಕಡೆಯಿಂದ ನೋಡಿ ನಂತರ ಪೇಪರ್ಸ್ ಪರಿಶೀಲಿಸಿ ಕಳಿಸಿದ ಮಾಮು ಮಾರಾಯ. ಬೆಂಗಳೂರಿನಲ್ಲಿ ಹಿಟ್ ಎಂಡ್ ರನ್ ಕೇಸುಗಳಿದ್ರೆ ಇನ್ನೂ ಖಡಕ್ ಆಗಿ ಎಲ್ಲರನ್ನೂ ನಿಲ್ಲಿಸಿ ವಿಚಾರಿಸ್ತಾರೆ. (ಕದ್ದವ ತಕ್ಷಣ ಬೈಕು ಬದಲಾಯಿಸಿ ಶರ್ಟೂ ಬದಲಾಯಿಸಿ ಹೋಗಿರಲಿಕ್ಕಿಲ್ಲ ಎಂಬುದೇನು ಗ್ಯಾರಂಟಿ?)

ಅದೆಲ್ಲಾ ಹೋಗ್ಲಿ, ನೀನು Apache ಬೈಕ್ ಓಡಿಸ್ತಿದ್ಯೋ ಅಥವ ಬ್ಲಾಕ್ ಟೀ ಶರ್ಟ್ ಹಾಕಿಕೊಂಡಿದ್ಯೋ?
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 12:03am — Aravinda

ಉ: ಕೆಂಪು Apache ಬೈಕೂ ... ಕಪ್ಪು ಟೀ ಶರ್ಟೂ... ಒಂದು ಕಹಿ ಅನುಭವ

Aravinda's picture

ಎರಡೂ... Sad
ಕಪ್ಪು ಟೀ ಶರ್ಟ್ ಹಾಕಿಕೊಂಡು ಅಪಾಚಿ ಬೈಕ್ ಓಡಿಸ್ದಿದ್ದೆ. Smiling

ನಿಮ್ಮವನೇ,
ಅರವಿಂದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 12:05am — Aravinda

ಉ: ಕೆಂಪು Apache ಬೈಕೂ ... ಕಪ್ಪು ಟೀ ಶರ್ಟೂ... ಒಂದು ಕಹಿ ಅನುಭವ

Aravinda's picture

ನನ್ನದು ಕೆಂಪು ಅಪಾಚಿ ಬೈಕು...

ನಿಮ್ಮವನೇ,
ಅರವಿಂದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 9:31am — ASHMYA

ಉ: ಕೆಂಪು Apache ಬೈಕೂ ... ಕಪ್ಪು ಟೀ ಶರ್ಟೂ... ಒಂದು ಕಹಿ ಅನುಭವ

ASHMYA's picture

Apache ಬೈಕ್ ಹೇಗಿದೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 11:07am — Sunil Jayaprakash

ಉ: ಕೆಂಪು Apache ಬೈಕೂ ... ಕಪ್ಪು ಟೀ ಶರ್ಟೂ... ಒಂದು ಕಹಿ ಅನುಭವ

Sunil Jayaprakash's picture

ಅಲ್ವೋ, ಅರವಿಂದ, "ಇದು ಕಹಿ ಅನುಭವವೇಕೆ" ಅಂತ ಅರ್ಥವಾಗುತ್ತಿಲ್ಲ. ಒಮ್ಮೆ ಯೋಚಿಸು, ನಿನ್ನಂತೆಯೇ ಒಬ್ಬ ಕಳ್ಳನನ್ನೂ ಪೋಲೀಸರು ವಿಚಾರಿಸಿರಬಹುದು, ಅಲ್ವಾ. ನಾಗರೀಕರಾಗಿ ಇಂತಹ ಸನ್ನಿವೇಶಗಳಲ್ಲಿ ಪೋಲೀಸರಿಗೆ ಕೈಜೋಡಿಸೋದು ನಮ್ಮ ಕರ್ತವ್ಯ. ಹಾಗೆ ನೋಡಿದರೆ, ಆ ಪೋಲೀಸರು ಮಾಡಿದ್ದು ಸರಿ ಅಂತಲೇ ನನ್ನ ಅನಿಸಿಕೆ. ಮೊದಲೇ ನಮ್ಮ ನಾಡಿಗೆ ಬಾಂಬುಗಳು ಬಂದಿವೆ. ಪರಿಸ್ಥಿತಿ ಇಂತಿರುವಾಗ, ಇಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಹೇಗೆ ? ಆ ಪೋಲೀಸ್ ಹಾಗೆ ಮಾಡಿದ್ದು, ನಿಜಕ್ಕೂ ಅವನನ್ನು ಹೊಗಳಬೇಕು ಅಂತ ಅನ್ನಿಸ್ತಾ ಇದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 8:29pm — Aravinda

ಉ: ಕೆಂಪು Apache ಬೈಕೂ ... ಕಪ್ಪು ಟೀ ಶರ್ಟೂ... ಒಂದು ಕಹಿ ಅನುಭವ

Aravinda's picture

ಸುನಿಲ್ ನೀವು ಹೇಳೋದನ್ನ ಒಪ್ಪುತ್ತೇನೆ, ಆದರೆ...
ಹಾಗೇ ಸುಮ್ಮನೆ ವಿಚಾರಣೆ ಮಾಡಿ ಬಿಟ್ಟಿದ್ರಿಂದ ಅಂತಾ ಕಹಿ ಅನುಭವ ಆಗಿಲ್ಲ, ಈಗಾಗಲೆ ಎರಡು ಸಾಕ್ಷಿಗಳು ನನ್ನ ಕಡೆನೇ ಇದ್ವು (ಕೆಂಪು ಅಪಾಚಿ ಬೈಕು, ಕಪ್ಪು ಟೀ ಶರ್ಟು), ನನ್ನ ಕಡೆಯಿಂದ ಸಮಜಾಯಿಸಿ ಹೇಳಕ್ಕೆ ಏನೂ ಇಲ್ದಿದ್ರೆ ನನ್ನ ಕಥೆ ಏನಾಗ್ತಿತ್ತು ಅಂತ ಯೋಚ್ನೆ ಮಾಡಿ. ನನ್ನ ಮಟ್ಟಿಗಂತೂ ಮರೆಯಲಾಗದ ಕಹಿ ಅನುಭವವೇ ಸರಿ. ನನ್ನ ಕಡೆಯಿಂದ ಏನೂ ತಪ್ಪಿಲ್ಲದಿದ್ದರೂ ಗಾಭರಿ ಆಗಿದ್ದಂತೂ ಸತ್ಯ.

ನಿಮ್ಮವನೇ,
ಅರವಿಂದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 7:41am — Sunil Jayaprakash

ಉ: ಕೆಂಪು Apache ಬೈಕೂ ... ಕಪ್ಪು ಟೀ ಶರ್ಟೂ... ಒಂದು ಕಹಿ ಅನುಭವ

Sunil Jayaprakash's picture

ಹ್ಮ್. ಮನಸ್ಸು ಏಕೆ ಗಾಬರಿಗೊಂಡಿರಬಹುದು ಎಂಬುದು ಅರ್ತವಾಯಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೇಸ್ತು ಬಿದ್ದ ಪ್ರಸಂಗ
  • ಬೈಟೊ ಕಾಫಿ !!! - ೧
  • ಇಂದಿನ ಸುದ್ದಿ...!
  • ಒಂದು ಚಿಕ್ಕ ಪ್ರಶ್ನೆ
  • ಯಾರ ಬುದ್ಧಿ ಹೆಚ್ಚು ನೀವೆ ಹೇಳಿ....>
Syndicate content

ಲೇಖಕರು

Aravinda's picture

ಪೂರ್ಣ ಹೆಸರು
ಅರವಿಂದ

ಪರಿಚಯ

ನನ್ನ ಊರು ಶ್ರಿಂಗೇರಿ ಹತ್ತಿರದಲ್ಲಿರುವ ಉತ್ತಮೇಶ್ವರ ಎಂಬ ಹಳ್ಳಿ.
ನನಗೆ ಕುಂಗ್ ಫು, ಅಂತರ್ಜಾಲ ತಂತ್ರಜ್ಞಾನ ಹಾಗೂ ಮುಕ್ತ ತಂತ್ರಾಂಶಗಳಲ್ಲಿ ಆಸಕ್ತಿ.
ಈಗ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ವೃತ್ತಿಯಲ್ಲಿ ತಂತ್ರಾಂಶ ತಂತ್ರಜ್ಞ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 207 ಅತಿಥಿಗಳು ಆನ್ಲೈನ್ ಇರುವರು.


"ಎಂಥ ನಾಡಿದು ಯೆಂಥ ಕಾಡಾಯಿತೋ"

— ರಂ. ಶ್ರೀ. ಮುಗಳಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator