ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › anivaasi ರವರ ಬ್ಲಾಗ್

ಅನಿವಾಸಿ

*~*~*~*

ಸಂಜೆ ಬೆಳಕಲ್ಲಿ ಹಳೆಮನೆ, ಓಣಿ, ಒಳದಾರಿಗಳು

September 24, 2007 - 5:38pm — anivaasi
ಸಿಡ್ನಿ ಹಾರ್ಬರಿನ ತಟ.

ಸಂಜೆ ಬೆಳಕಲ್ಲಿ "ಜಗದ್ವಿಖ್ಯಾತ" ಬ್ರಿಡ್ಜು ಭವನಗಳನ್ನು ಕಣ್ಣೆವೆಯಿಕ್ಕದೆ ನೋಡುತ್ತಾರೆ ಮಂದಿ. ಕೊರಳಿಂದ ನೇತಾಡುವ ಕಣ್ಣುಗಳಲ್ಲಿ ಅದನ್ನೆಲ್ಲಾ ಸೆರೆಹಿಡಿಯುವ ಮಂದಿ. ಅವರಿಗೆಲ್ಲ ತೊಂದರೆಯಾಗದ ಹಾಗೆ; ಅವರ "ವೀಕ್ಷಣೆ"ಗೆ ಅಡ್ಡಬಾರದ ಹಾಗೆ; ಅವರನ್ನೆಲ್ಲಾ ಅಲ್ಲೇ ಬಿಟ್ಟು ಮೆಲ್ಲನೆ ಹಿಂದು ಹಿಂದಕ್ಕೆ ಸರಿಯಬೇಕು. ಪಕ್ಕದಲ್ಲೇ ಬಚ್ಚಿಟ್ಟುಕೊಂಡಿರುವ ಹಳೆಮನೆ, ಓಣಿ, ಒಳದಾರಿಗಳ ಮಗ್ಗುಲಿಗೆ.

ಮೊದಮೊದಲು ವಲಸಿಗರು ಬಂದಿಳಿದ ಎಡೆ ಇವು. ಇನ್ನೂ ಹಲವಾರು ಹಳೆಮನೆಗಳು ಕಾಲ ಬದಲಾದರೂ ಮರೆತು ಹಾಗೇ ನಿಂತಿವೆ. ಅಂದಿನ ವಲಸಿಗರು ಹೊಸ ಊರನ್ನು ಹೊಕ್ಕ ಉನ್ಮಾದದಲ್ಲಿ ಅಲೆದ ಓಣಿಗಳ ಪಕ್ಕದಲ್ಲೆ. ಸಣ್ಣ ಬಿಗುಮಾನದಿಂದ ಸಂಜೆ ಬೆಳಕನ್ನ ಬೇಕಾದಷ್ಟೇ ಒಳಬಿಟ್ಟುಕೊಂಡು ನಲಿಯುತ್ತದೆ.

 

ಮುಖ್ಯ ಬೀದಿಗಳ ಕಣ್ಣು ತಪ್ಪಿಸಿ ಒಳಗೊಳಗೆ ಒಳದಾರಿಗಳು ಕದ್ದು ಮುಚ್ಚಿ ಸಂಜೆಯಲ್ಲಿ ಸಣ್ಣಗೆ ಹಾಡುತ್ತವೆ. ಏರು ಪೇರಿನ ಸಂದಿಗಳ ಮೆಟ್ಟಿಲು ಹತ್ತಿ ಇಳಿವಾಗ ಆ ಹಾಡಿನ ಗುನುಗು, ತಾಳ ಕೇಳುತ್ತದೆ.

ಹೇಗಾದರೂ ಮಾಡಿ ಹೊಸ ರೂಪಕ್ಕೊಗಿಸುವ ಹಟ ಕೂಡ ಕಾಣುತ್ತದೆ. ಹಟ ಗೆದ್ದ ಕಡೆ ಕೆಲವು ಹೊಸ ರೂಪಗಳ ಮೇಲೆ ಸಂಜೆ ಬಿಸಿಲಿನ ಮೂರನೇ ಪ್ರತಿಫಲನ ಕಣ್ಣಿಗೆ ಹಿತವಾಗಿ ಮಿನುಗುತ್ತದೆ. ಹಟ ನೋಡಿ ನಗುವಂತೆ.

 

ಮರೆಯಲಾಗದು ಇದು.
ಊರ ಒಡಲಲ್ಲಿ ಬೆಚ್ಚಗೆ ಮಲಗಿರುವ ಎಡೆಗಳು ಇವು.
ಊರಿನ ಒಳರೂಪ ಇವು.
ಹಳೆರೂಪ ಇವು.
ಬೆಳವಣಿಗೆಯ ತಳರೂಪ ಇವು.
~.~
  • anivaasi ರವರ ಬ್ಲಾಗ್
  • Login or register to post comments
  • 436 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 24, 2007 - 11:35pm — ವೈಭವ

ಉ: ಸಂಜೆ ಬೆಳಕಲ್ಲಿ ಹಳೆಮನೆ, ಓಣಿ, ಒಳದಾರಿಗಳು

ವೈಭವ's picture

"ಸಂಜೆ ಬೆಳಕಲ್ಲಿ ಹಳೆಮನೆ, ಓಣಿ, ಒಳದಾರಿಗಳು....
ಊರ ಒಡಲಲ್ಲಿ ಬೆಚ್ಚಗೆ ಮಲಗಿರುವ ಎಡೆಗಳು ಇವು."

ಸಕ್ಕತ್. ಚನ್ನಾಗಿದೆ. ಇಲ್ಲಿ 'ಜಾಗ' ದ ಬದಲು ' ಎಡೆ ' ಬಳಸಿರುವುದು ಹಿಡಿಸಿತು.

ಈ ನಿಮ್ಮ ಬರಹ ಮಿಕ್ಕೆಲ್ಲವಕ್ಕಿಂತ ನನಗೆ ಹೆಚ್ಚು ಹಿಡಿಸಿತು.

----

ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 25, 2007 - 12:17am — hamsanandi

ಉ: ಸಂಜೆ ಬೆಳಕಲ್ಲಿ ಹಳೆಮನೆ, ಓಣಿ, ಒಳದಾರಿಗಳು

hamsanandi's picture

ಅನಿವಾಸಿಗಳೇ, ಬಹಳ ಚೆನ್ನಾಗಿದೆ!

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 25, 2007 - 2:15am — anivaasi

ಉ: ಸಂಜೆ ಬೆಳಕಲ್ಲಿ ಹಳೆಮನೆ, ಓಣಿ, ಒಳದಾರಿಗಳು

anivaasi's picture

ವೈಭವರೆ-
ನನ್ನ ಮಿಕ್ಕೆಲ್ಲವಕ್ಕಿಂತ ಇದು ಹೆಚ್ಚು ಹಿಡಿಸಿದ್ದು ಯಾಕೆಂದು ಯೋಚಿಸುತ್ತಿದ್ದೇನೆ. ನಿಮ್ಮ ಮಾತಿಗೆ ಥ್ಯಾಂಕ್ಸ್. Smiling

ಥ್ಯಾಂಕ್ಸ್‌ ಹಂಸಾನಂದಿಗಳೆ~~

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 25, 2007 - 2:20am — anivaasi

ಉ: ಸಂಜೆ ಬೆಳಕಲ್ಲಿ ಹಳೆಮನೆ, ಓಣಿ, ಒಳದಾರಿಗಳು

anivaasi's picture

ಅಂದಹಾಗೆ ಈ ಚಿತ್ರಗಳ ಹೆಗ್ಗಾತ್ರದ ಪಡಿಗೆ ಇಲ್ಲಿ ನೋಡಿ. ದೊಡ್ಡದಾಗಿ ನೋಡುವುದರಲ್ಲೂ ಒಂದು ರೀತಿಯ ಮಜವಿದೆ.

http://www.flickr.com/photos/12844008@N06/sets/72157602141553673/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 29, 2007 - 9:27pm — mahesha

ಉ: ಸಂಜೆ ಬೆಳಕಲ್ಲಿ ಹಳೆಮನೆ, ಓಣಿ, ಒಳದಾರಿಗಳು

mahesha's picture

ರೀ ಅನಿವಾಸಿಗಳೇ,

ಅದೇನೂ ಅಂತ ಬರೀತೀರಿ.. ಇಸ್ಟೊಂದು ಸಿಕ್ಕಾಪಟ್ಟೆ ಚನ್ನಾಗಿ ಬರೆದ್ರೇ, ನಾವು ಹೊಗಳದೇ ಸುಮ್ನೆ ಓದಿಕೊಂಡು ಹೋಗ ಹಾಗಿಲ್ಲ. Smiling

ಆದ್ರೂ ನಿಮ್ಮ ಒಗಟುಒಗಟುಮಾತುಗಳ, ನನ್ನ ತಲೆಯೊಳಗೆ ತೊಟ್ಟು ತೊಟ್ಟು ಇಳಿಯಲು, ಶಾನೆ ವೊತ್ತು ಬೇಕಾಯ್ತು.. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 30, 2007 - 7:38am — anivaasi

ಉ: ಸಂಜೆ ಬೆಳಕಲ್ಲಿ ಹಳೆಮನೆ, ಓಣಿ, ಒಳದಾರಿಗಳು

anivaasi's picture

ಈ ಒಗಟುಒಗಟು ಮಾತುಗಳು ತಲೆಯೊಳಗೆ ಬೇಗ ಇಳೀಬೇಕಂದರೆ ಒಂದು ಕೆಲಸ ಮಾಡಿ-
ಬೆಂಗಳೂರಿನ ಚಿಕ್ಕಪೇಟೆ, ಬಳೇಪೇಟೆ, ಕಾಟನ್‌ಪೇಟೆ, ನಗರ್ತರಪೇಟೆ ಸುತ್ತಿಕೊಂಡು ಬನ್ನಿ... Smiling ಇದು ಬರೀವಾಗ ಅವುಗಳೂ ತಲೆಯಲ್ಲಿ ಸುತ್ತುತಾ ಇದ್ದುವು.
ನಿಜವಾಗಲೂ, ಮುಂದಿನ ಸಲ ಬೆಂಗಳೂರಿಗೆ ಬಂದಾಗ ಇದೇ ತರದ ಒಂದಷ್ಟು ಫೋಟೋ ತಗೀಬೇಕು ಅಂತ ಆಸೆ. ನೋಡುವ.

ಅಲ್ಲೂನೂ, ಎಷ್ಟು ಬೇಕೋ ಅಷ್ಟೇ ಸಂಜೆ ಬೆಳಕು ಒಳಗೆ ಬಿಟ್ಟುಕೊಂಡು ನಿಂತಿರೋ ಕಟ್ಟಡಗಳು ಇವೆ! ಹಳೇ ಮತ್ತು ಹೊಸ ವಲಸಿಗರ "ಉನ್ಮಾದ"ದ ಬದುಕು ಕಾಣ್ತವೆ...

ಹೊಗಳಿದ್ದಕ್ಕೆ ಥ್ಯಾಂಕ್ಸ್ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 30, 2007 - 9:13am — mahesha

ಉ: ಸಂಜೆ ಬೆಳಕಲ್ಲಿ ಹಳೆಮನೆ, ಓಣಿ, ಒಳದಾರಿಗಳು

mahesha's picture

ನಿಮ್ಮ ಮಾತುಗಳನ್ನು ಓದಿ, ಕೇಳಿ..

ನನ್ನ ವಲಸಿಗತನದ ಬಗ್ಗೆ ಬಲು ತ್ರಿಲ್ ಕಾಣ್ತಯ್ತೆ.... Smiling

ನಮ್ಮ ಬೆಂಗಳೂರ್‍ನಾಗೆ ನಾನೂ ಒಂತರ ವಲಸಿಗನೇ... ಆದ್ರೆ ಯಾವುದಾದ್ರೂ ಸಕ್ಕತ್ ಡಿಪೆರೆಂಟಾದ ಜಾಗದಲ್ಲಿ ಇರೋದರ ಮಜವೇ ಬೇರೆ..... ಅವರ ಮಾತು ನಮಗೆ, ನಮ್ಮ ಮಾತವರಿಗೆ ತಿಳಿಯದೇ, ನಮ್ಮ ಮೈ ಕದಲಾಟ, ಅಲುಗಾಟ, ತೋರಿಕೆಯೇ ನುಡಿಯಾಗ್ತದೆ... ಅಲ್ಲಿ ಯಾವ ಗ್ರಾಮರ್ರು‍, ಕರ್ಟೆಸಿ, ಮುಂತಾದವು ಲೆಕ್ಕಿಲ್ಲ... Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶ್ವೇತ ಸುಂದರಿ
  • ಕೈ ಕೊಟ್ಟ ಸಖಿ
  • ಮುಗಿಲು ಮುಟ್ಟುವ ತವಕ
  • ಪ್ರತಿಬಿಂಬದೊಳಕ್ಕೆ ಪ್ರವೇಶ
  • ಲಿನಕ್ಸಾಯಣ - ೯ - ಸ್ಮೈಲ್ ಪ್ಲೀಸ್
Syndicate content

ಲೇಖಕರು

anivaasi's picture

ಪೂರ್ಣ ಹೆಸರು
ಅನಿವಾಸಿ

ಪರಿಚಯ

ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ. ಇತ್ತೀಚೆಗೆ ನಾನು ನಿರ್ದೇಶಿಸಿದ "ಮುಖಾಮುಖಿ" ಚಿತ್ರದ ವೆಬ್ ಸೈಟ್ ಇಲ್ಲಿದೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
  • ಓದಿದ್ದು ಕೇಳಿದ್ದು ನೋಡಿದ್ದು-10
  • ಮೊದಲ ಚಿತ್ರ
  • ಬಿಗುಮಾನದ ಚಿತ್ರಗಳು
  • ಬರಾಕ್ ಒಬಾಮ ಮತ್ತು ಜಾನ್ ಮೆಕೈನ್: ಯಾರು ಸರಿ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
  • cmariejoseph
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 6, 2008 - 8:54pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 6, 2008 - 8:13pm
  • ASHOKKUMAR
    ಉ: ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
    September 6, 2008 - 7:59pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 7:46pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 32 ಅತಿಥಿಗಳು ಆನ್ಲೈನ್ ಇರುವರು.


ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator