ಧರ್ಮಯುದ್ಧಕ್ಕೆ ಜಯವೆಂಬ ಮಕ್ಕಳಿಲ್ಲ.
ನಾವು ಉದಾತ್ತ ಎಂದು ಭ್ರಮಿಸುವ ಧರ್ಮಕ್ಕೂ, ಕ್ರೂರ ಎಂದು ಭ್ರಮಿಸುವ ಧರ್ಮಕ್ಕೂ,
ನಿರ್ಲಿಪ್ತ ಎಂದು ಭ್ರಮಿಸುವ ಧರ್ಮಕ್ಕೂ, ಮನುಷ್ಯ ಸೋತು ಶರಣಾಗತನಾಗುವುದೇ ಬೇಕು
ಅದನ್ನವು ಹಿಂದೆ ಕತ್ತಿನ ಪಟ್ಟಿ ಹಿಡಿದು ಕೇಳುತ್ತಿದ್ದವು, ಆಮೇಲೆ ಬೇಡ ಹತ್ತಿದ್ದವು, ಈಗ ಕಾತರದಿಂದ ಎದುರು ನೋಡುತ್ತವೆ…
ಅವುಗಳನ್ನು, ಅವುಗಳ ದರಿದ್ರ ತೋಟಿಗಳನ್ನು ನಿರ್ಲಕ್ಷಿಸಿ ನಡೆಯದಿದ್ದರೆ, ಮನುಷ್ಯನ ಸೋಲು ಕಟ್ಟಿಟ್ಟದ್ದು, ಮತ್ತೆ ಮತ್ತೆ.









RSS:
ಪ್ರತಿಕ್ರಿಯೆಗಳು
ಉ: ಒಂದು ವಾಚ್ಯ ಹಂಬಲ
ಚನ್ನಾಗಿದೆ....
ಧರ್ಮ ಅಂದರೆ ಯಾವಾಗಲೂ ಯುದ್ಧವೇ ತಾನೆ
ಉ: ಒಂದು ವಾಚ್ಯ ಹಂಬಲ
> ನಾವು ಉದಾತ್ತ ಎಂದು ಭ್ರಮಿಸುವ ಧರ್ಮಕ್ಕೂ, ಕ್ರೂರ ಎಂದು ಭ್ರಮಿಸುವ ಧರ್ಮಕ್ಕೂ,
> ನಿರ್ಲಿಪ್ತ ಎಂದು ಭ್ರಮಿಸುವ ಧರ್ಮಕ್ಕೂ, ಮನುಷ್ಯ ಸೋತು ಶರಣಾಗತನಾಗುವುದೇ ಬೇಕು
ಇಡೀ ಜೀವನಾನ ದೇವರಿಲ್ಲ/ಧರ್ಮ ಇಲ್ಲ ಅಂತ ಸಾಧಿಸಿ ಬದುಕಿದವರು ತುಂಬಾನೆ ಕಡಿಮೆ...
'ಸಂಕಟ ಬಂದಾಗ ವೆಂಕಟ ರಮಣ' ಅಂತ ಗಾದೆ ಇಲ್ವಾ..?
ಸೋತಾಗಲೇ ಜನಕ್ಕೆ ದೇವರು, (ದೆವ್ವ, ಮಾಟ-ಮಂತ್ರ), ಧರ್ಮ ಜ್ಞಾಪಕಕ್ಕೆ ಬರೋದು ಜಾಸ್ತಿ...
--ಶ್ರೀ
ಉ: ಒಂದು ವಾಚ್ಯ ಹಂಬಲ
ನಿಮ್ಮ ಬರಹಗಳಲ್ಲಿ ಧರ್ಮಗಳು ಮಾತ್ರವೇ ಕ್ರೂರ ಅನ್ನುವ ಭಾವನೆಗಳು ಕಾಣುತ್ತಿವೆ.
ನಾಸ್ತಿಕತೆಯೂ ಕ್ರೂರತೆ ತೋರಿದ/ತೋರುತ್ತಿರುವ ಉದಾಹರಣೆಗಳು ನಮ್ಮಲ್ಲಿವೆ ಅಲ್ಲವೇ? ಧರ್ಮ ನಿರಾಕರಿಸಿ ನಾಸ್ತಿಕರಾದವರೂ, ಮಾನವತೆ ಕೊಂದಿದ್ದಾರೆ. ಒಂದು ಬದಿಯಿಂದ ನೋಡಿದಾಗ ಮನುಷ್ಯ ಸೋಲುತ್ತಲೇ ಇದ್ದಾನೆ. ಮತ್ತೊಂದು ಆಲೋಚನೆಯಂತೆ ಒಂದು ಗುಂಪಿನ ಹೆಚ್ಚುಗಾರಿಕೆಯ ’ಅಹಂ’ ಗೆ ಮಾನವೀಯತೆ ಸೋತಿದೆ-ಸೋಲುತ್ತಿದೆ-ಸೋಲುತ್ತದೆ(??)
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಒಂದು ವಾಚ್ಯ ಹಂಬಲ
ಧರ್ಮದಲ್ಲಿ ಅಂಧಶ್ರದ್ಢೆ ಎಂದಿನಿಂದ ಇಂದಿಗೂ ಮನುಷ್ಯನನ್ನು ಕೊಲ್ಲುತ್ತಿವೆ. ನಮ್ಮ ಧರ್ಮಗಳೆಲ್ಲ ಹುಟ್ಟಿಕೊಂಡು ಸಾವಿರಾರು ವರ್ಷಗಳಾದರೂ ಇನ್ನೂ ಮಾನವರು ಪರಸ್ಪರ ಹೊಡದಾಡುತ್ತಲೇ ಇದ್ದಾರೆ.
ಆದರೆ ಒಳ್ಳೆಯ ಉದ್ದೇಶಗಳನ್ನಿಟ್ಟುಕೊಂಡು ಹುಟ್ಟಿಕೊಂಡ ಧರ್ಮಪಥಗಳನ್ನೂ ದೂರುವಂತಿಲ್ಲ.
ಮನುಷ್ಯನ ಕ್ಷಣಿಕತೆಯನ್ನು, ಪ್ರಕೃತಿಯ ಔದಾರ್ಯವನ್ನೂ ಅರ್ಥ ಮಾಡಿಕೊಳ್ಳದೇ ಪರಸ್ಪರ ಹೊಡೆದಾಡಿ ನಾಗರೀಕತೆಗಳನ್ನು ಅಂಚಿಗೆ ಒಯ್ಯುತ್ತಿರುವ ಮಾನವನ ಮೂರ್ಖತನವನ್ನು ದೂರಬಹುದಷ್ಟೇ.....
ಉ: ಒಂದು ವಾಚ್ಯ ಹಂಬಲ
> ಧರ್ಮದಲ್ಲಿ ಅಂಧಶ್ರದ್ಢೆ ಎಂದಿನಿಂದ ಇಂದಿಗೂ ಮನುಷ್ಯನನ್ನು ಕೊಲ್ಲುತ್ತಿವೆ
ಹೇಗೆ ಅಂತ ಸ್ವಲ್ಪ ಬಿಡಿಸಿ...
ಉ: ಒಂದು ವಾಚ್ಯ ಹಂಬಲ
ತಾಲಿಬಾನಿಗರ ಜಿಹಾದು
ರೋಮನ್ ಚಕ್ರವರ್ತಿಗಳು ಯಹೂದ್ಯರನ್ನು ಕೊಂದುದು
ಧರ್ಮದಿಂದ ಎಶ್ಟೇಶ್ಟೋ ಸಾವು ನಮ್ ದೇಶದಲ್ಲಿ.
ಹೀಗೆ...........................
ಉ: ಒಂದು ವಾಚ್ಯ ಹಂಬಲ
ಹಾಗಂತ ಚೈನದಲ್ಲಿ ಸಾಯಲ್ವೇನ್ರೀ?
ಕಮ್ಯುನಿಸ್ಟರು ಎಷ್ಟು ಜನರನ್ನ ಸಾಯ್ಸಿದ್ದಾರೆ?
ಧರ್ಮ ಅನ್ನೋದು ಹೆಸರಷ್ಟೇ...
ಯಾವುದೇ ಧರ್ಮದಲ್ಲಿ ಸಾಯ್ಸಿ ಅನ್ನಲ್ಲ...ಕೆಟ್ಟವನೊಬ್ಬ ಅಸ್ಥಿಕಾನು ಇರಬಹುದು ನಾಸ್ತಿಕಾನು ಇರಬಹದು...
ನಾಸ್ತಿಕರೆಲ್ಲ ಒಳ್ಳೇವ್ರು ಅನ್ನಕ್ಕೆ ಆಗತ್ತಾ?
ನನ್ನ ಅನಿಸಿಕೆ ಪ್ರಕಾರ ಧರ್ಮಗಳು, ಮನುಷ್ಯ ಜನಾಂಗ, ಸಮಾಜ ಕಟ್ಟಿದ ಮೇಲೆ ಹುಟ್ಟಿದ್ದು...
ಆದರೆ ಅದಕ್ಕೆ ಮುಂಚೆ ಕೂಡ ಒಳ್ಳೆಯವರು ಕೆಟ್ಟವರು ಅಂಥ ಇದ್ರೂ, ಹೋರಾಡಿ ಸತ್ತಿದ್ರು...
--ಶ್ರೀ
ಉ: ಒಂದು ವಾಚ್ಯ ಹಂಬಲ
ಹು....
ಅದನ್ನೇ ಹೇಳಿದ್ದು.. ಬಲು ಸಂಖ್ಯೆಯ ಜನರು ದರ್ಮಕ್ಕಾಗಿ, ದರ್ಮದಿಂದಲೂ ಸತ್ತಿದ್ದಾರೆ..
ದರ್ಮದಿಂದಲೇ ಎಲ್ರೂ ಸತ್ರು ಅಂತ ಅಲ್ಲ.
ಉ: ಒಂದು ವಾಚ್ಯ ಹಂಬಲ
ಹಾಗೆ, 'ಧರ್ಮದ ಅಂಧ ಶ್ರದ್ದೆ' ಎಂದರೇನು ಅಂತ ನೋಡೋಣ...
ಧರ್ಮ ಗ್ರಂಥಗಳಲ್ಲಿರುವುದನ್ನು ಚಾಚು ತಪ್ಪದೇ ಪಾಲಿಸುವುದು, ಮರು ಪ್ರಶ್ನೆಗಳನ್ನು ಕೇಳದೇ ಅಂಥ...
ಯಾವುದೇ ವ್ಯಕ್ತಿ, ತನ್ನ ಧರ್ಮಕ್ಕಾಗಿ, ಬೇರೆಯವರಿಗೆ ತೊಂದರೆ ಕೊಟ್ಟಿದ್ದೇ ಆದಲ್ಲಿ, (ಉದಾ., ತಾಲಿಬಾನ್, ರೋಮನ್ ಇತ್ಯಾದಿ),
ಈತ ಧರ್ಮಕ್ಕೆ ಕುತ್ತು ತರುವಂಥ ಕೆಲಸ ಮಾಡಿದ ಹಾಗಾಯಿತೇ ಹೊರತು 'ಅಂಧ ಶ್ರದ್ಧೆ' ಆಗಲಿಲ್ಲ...
ಎಲ್ಲ ಧರ್ಮವೂ ನಿನ್ನಂತೆ ಪರರನ್ನು ಪ್ರೀತಿಸು ಎಂದು ಹೇಳುತ್ತದೆ...ಅಲ್ವಾ?
--ಶ್ರೀ
ಉ: ಒಂದು ವಾಚ್ಯ ಹಂಬಲ
ದೇವರು ಅನ್ನೋದೇ ಅಂಧಶ್ರದ್ಧೇ....
ಇನ್ನು ದೇವರ ಸುತ್ತ ಇರುವ ಧರ್ಮ ಅಂಧಶ್ರದ್ಧೆ ಅಲ್ವೇ.....
ಈ ಅಂಧ ಮತ್ತು ಶ್ರದ್ಧೇ ಒರೆಗಳ ಡೆಪೆನಿಶನ್ನು ಏನೆಂದು ತಿಳೀಬೇಕು.
ಉ: ಒಂದು ವಾಚ್ಯ ಹಂಬಲ
> ಈ ಅಂಧ ಮತ್ತು ಶ್ರದ್ಧೇ ಒರೆಗಳ ಡೆಪೆನಿಶನ್ನು ಏನೆಂದು ತಿಳೀಬೇಕು.
ಸ್ವಲ್ಪ ಹೇಳಿ ಹಾಗಾದ್ರೆ ...
ಉ: ಒಂದು ವಾಚ್ಯ ಹಂಬಲ
ಬಾಗಿಲು ಅರ್ಧ ತೆಗೆದಿದ್ದರೆ, ಅರ್ಧ ಮುಚ್ಚಿದೆ ಅನ್ನಬಹುದು...
ಬೆಳಕು ನೋಡು ಅಲ್ಲಿ ಅನ್ನೋದನ್ನ, ಕತ್ತಲೆನೇ ಇಲ್ಲ ಅನ್ನಬಹುದು...
ಎರಡು ನಿಜ ಅಲ್ವ?
ನಾಸ್ತಿಕನಿಗೆ 'ದೇವರು' ಅಂಧ ಶ್ರದ್ಧೆ ಆದ್ರೆ, ಆಸ್ತಿಕನಿಗೆ 'ದೇವರಿಲ್ಲ' ಅನ್ನೋದು ಅಂಧ ಶ್ರದ್ದೆ, ಅಲ್ವೇನ್ರೀ
'ದೇವರು' ಇದಾನೆ ಅಂತ ಅವನು ಪ್ರೂವ್ ಮಾಡಲಿಲ್ಲ ಅಂದ್ರೆ, ನೀವು disprove ಕೂಡ ಮಾಡಕ್ಕೆ ಆಗಲ್ಲ ಅಲ್ವ?
ಉ: ಒಂದು ವಾಚ್ಯ ಹಂಬಲ
ಹು ಕರೆಕ್ಟು....
ಇದೇ ಲಾಜಿಕನ್ನು ಬಳಸಿ........
ಮನುಶ್ಯರೆಲ್ಲರು ಬದುಕ್ತಾನೇ ಇಲ್ಲ.. ಅವರೆಲ್ಲ ಮಲಗಿಕೊಂಡು ಕನಸ ಕಾಣ್ತಾ ಇದ್ದಾರೆ.. ಎಂದು ನಂಬಿ ನಾವೆಲ್ಲ ಮಾಯಾಲೋಕದಲ್ಲಿದ್ದೀವಿ.. ಇಲ್ಲಿ ಇರುವುದೆಲ್ಲ ಸುಳ್ಳು.. ಆದುದರಿಂದ ದೇವರೂ ಸುಳ್ಳೂ ದಿಂಡರೂ ಸುಳ್ಳೂ.. ದಿಟವಾದುದು ಒಂದೇ ಅದೇ ಸುಳ್ಳು ಎಂಬುದು....
ಉ: ಒಂದು ವಾಚ್ಯ ಹಂಬಲ
ಹಾಗಾದ್ರೆ ಅವರವರ ಪಾಲಿಗೆ ಸುಳ್ಳು, ಇಲ್ಲ ನಿಜ ಆಗಿರತ್ತೆ, ಅಲ್ವಾ?
ದೇವರು ಇದ್ದಾನ ಇಲ್ಲವಾ ಇಲ್ಲಿ ಪ್ರಶ್ನೆ ಆಗಿರಲಿಲ್ಲ ಬಿಡಿ...
ಮೇಲಿನದಕ್ಕೆ ಉತ್ತರ ಹೇಳಿ...ಅಂಧ, ಶ್ರದ್ದೆ, ಅಂಧ ಶ್ರದ್ದೆ
ಉ: ಒಂದು ವಾಚ್ಯ ಹಂಬಲ
ಅಯ್ಯೋ.. ಈಗ ಈ ಪ್ರಶ್ನೇ ಬರುವುದಿಲ್ಲ....
ಕಾಣವುದು ಕಾಣದಿರುವುದು ಎರಡೂ ಸುಳ್ಳು..
ಅದೇ ನಂಬಿಕೆ....
ಉ: ಒಂದು ವಾಚ್ಯ ಹಂಬಲ
ಹ್ಮ್...ಅದೇ ಕೇಳಿದ್ದು, ನಿಮ್ಮ ನಂಬಿಕೆ ಏನು ಅಂಥ - 'ಅಂಧ ಶ್ರದ್ದೆ' ಬಗ್ಗೆ...
ಉ: ಒಂದು ವಾಚ್ಯ ಹಂಬಲ
ಮಹೇಶರ ನಂಬಿಕೆ, 'ಅಂಧ ಶ್ರದ್ದೆ' ಬಗ್ಗೆ - ಎರಡೂ ಸಕ್ಕದ ಪದಗಳು!
ಉ: ಒಂದು ವಾಚ್ಯ ಹಂಬಲ
ಸರಿಯಾಗಿ ಹೇಳಿದ್ದೀರಿ....
ಕುರುಡುನಂಬಿಕೆ ಬಗ್ಗೆ ಕೇಳಿದ್ರೆ ಹೇಳಬೋದು.
ಉ: ಒಂದು ವಾಚ್ಯ ಹಂಬಲ
ಅಂಧಶ್ರದ್ಧೆ ಅನ್ನೋದು ಇದೆ ಎಂದು ನಂಬಿದವರಿಗೆ ಇದೆ, ನಂಬದವರಿಗೆ ಇಲ್ಲ...
ಇದು ಹೇಗೆ ಅಂದರೆ ಶ್ರೀನಿವಾಸ ಪಿ.ಎಸ್ ಎಂಬುದು ಇದೆ ಎಂದು ನಂಬುವರಿಗೆ ಇದೆ, ನಂಬದವರಿಗೆ ಇಲ್ಲ.. ಅನ್ನೋ ಹಾಗೆ ಅಲ್ವ?
ಈಗ ನಾನು ಶ್ರೀನಿವಾಸ ಪಿ.ಎಸ್ ಇದ್ದಾರೆ ಎಂದು ತೋರಲು ನಿಮ್ಮ ಜೊತೆಗೆ ಕರೆದುಕೊಂಡು ಹೋಗಬೋದು.. ಆದರೆ ನೋಡುವವ ತನ್ನ ಕಣ್ಣು ಕಾಣ್ಪೇ/ದೃಷ್ಟಿಯೇ ಮಾಯ ಎಂದು ನಂಬಿದ್ರೆ ಏನು ಮಾಡಣ ಹೇಳಿ..
ಹಾಗೆ ನೀವು ಹೇಳೋದು.. ನಾವು ದೇವರಿಲ್ಲ. ತಂದು ತೋರಿಸಿ ಎಂದರೆ ನಿಮ್ಮ ಕಣ್ಣೇ ಕುರುಡು ನಿಮ್ಮ ಕಣ್ಣಿಗೆ ದೇವರನ್ನು ಕಾಣುವ ಶಕ್ತಿಯಿಲ್ಲ ಮಾಯೆಯಲ್ಲಿ ಇದ್ದೀರಿ.. ನಿಮಗೆ ಕುರುಡು ಅದಕ್ಕೆ ದೇವರಿಲ್ಲ ಎಂಬುದೇ ಅಂಧಶ್ರದ್ಧೆ ಎಂಬ ತರ್ಕ....
ಅಲ್ವ!
ಉ: ಒಂದು ವಾಚ್ಯ ಹಂಬಲ
ನನ್ನಿ.. 'ದೇವರು' ಬಗ್ಗೆ ಅಂಧ ಶ್ರದ್ದೆ ಚೆನಾಗಿ ಹೇಳಿದ್ದೀರಿ, ಈಗ ಧರ್ಮದ ಬಗ್ಗೆ ಅಂಧ ಶ್ರದ್ದೆ ಹೇಳಿ...
ಉ: ಒಂದು ವಾಚ್ಯ ಹಂಬಲ
ಅದೇ ದೇವರು ಹೆಂಗೆ ಅಂತ ಹೇಳೋದಕ್ಕೆ ದರ್ಮ ಅನ್ನೋದಿದೆ... ತಾನೆ...
ಈಗ ದೇವರು ಎಂಬೋದೇ ಇಶ್ಟು ಎಡವಟ್ಟು ಇನ್ನು ಅದನ್ನು ಅರುಹಲು ಹೋಗಿ ಎಪ್ರತಪ್ರ ವಾದ ಮಂಡಿಸಿರುವ ದರ್ಮಗಳು ಚಿತ್ರಾನ್ನ ಚಿತ್ರಾನ್ನ ಚಿತ್ರ ಚಿತ್ರ ಚಿತ್ರಾನ್ನ..
ಅಂದಹಾಗೆ ಚಿತ್ರಾನ್ನ ಅನ್ನೋದು ಕೂಡ ಇದೆ ಅಂತ ನಂಬೋರಿಗೆ ಇದೆ, ಇಲ್ಲ ಅಂತ ನಂಬೋರಿಗೆ ಇಲ್ಲ..
ಉ: ಒಂದು ವಾಚ್ಯ ಹಂಬಲ
ಅಲ್ಲರೀ...
ಅಪ್ಪ ಮಗನಿಗೆ ಕಳ್ಳತನ ಮಾಡಬೇಡಪ್ಪ ಅಂತಾನೆ..ಮಗ ಕಳ್ಳತನ ಮಾಡಿದ ಅಂತ ಇಟ್ಟುಕೊಳ್ಳಿ...ಯಾರದು ತಪ್ಪು?
ಈಗ ಅಪ್ಪನ್ನ ಇಸ್ಲಾಂ ಧರ್ಮ, ಮಗನ್ನ ತಾಲಿಬಾನ್ ಅಂತ ಹಾಕ್ಕೊಳ್ಳಿ, ಮತ್ತೆ ಮೇಲಿನ ವಾಕ್ಯ ಓದಿ...
ಈಗ ಅಪ್ಪನದ ತಪ್ಪು?
--ಶ್ರೀ
ಉ: ಒಂದು ವಾಚ್ಯ ಹಂಬಲ
ಇದೆ ಉದಾಹರಣೆನಲ್ಲಿ, ಕಳ್ಳ ಮಗನಿಗೆ, ಅಪ್ಪನ ಮೇಲೆ ಅಂಧ ಶ್ರದ್ದೆ ಅನ್ನಕ್ಕೆ ಆಗಲ್ಲ
ಉ: ಒಂದು ವಾಚ್ಯ ಹಂಬಲ
ಅದನ್ನೇ..
ಅಪ್ಪ ಹೇಗೆ ನಂಬಿದ ಹಾಗೆ ಮಗನೂ ನಂಬಬೇಕಿಲ್ಲ.. ಯಾಕೆ ಅಂದರೆ ಅದು ನಂಬಿಕೆ.......
ಅಪ್ಪ ದೇವರು ಇದ್ದಾನೆ ಎಂದು ನಂಬಿದ
ಮಗ ನಾನು ನಂಬಿದ ದೇವರನ್ನು ನಂಬದವರನ್ನು ನಂಬಿಸಬೇಕು ಎಂದು ನಂಬಿದ
ಮೊಮ್ಮಗ ತಾನು ನಂಬಿದ ದೇವರನ್ನು ನಂಬಿಸಿದರೂ ನಂಬದಿದ್ದಾಗ ಸಾಯಿಸಬೇಕು ಎಂದು ನಂಬಿದ...
ಇವೆಲ್ಲ ನಂಬಿಕೆಯ ಪ್ರಶ್ನೆಯಾದುದರಿಂದ ಅವೆಲ್ಲವೂ ಸರಿ. ಯಾಕೆ ಅಂದ್ರೆ ಮೂಲ ಎಲ್ಲವೂ ನಂಬಿಕೆಯಿಂದಲೇ ಹುಟ್ಟಿಕೊಂಡಿದ್ದು...
ಇನ್ನು ಕಳ್ಳತನವೂ ಒಳ್ಳೇದು, ಜಗತ್ತಲ್ಲಿ ಯಾವುದು ಯಾರ ಸೊತ್ತಲ್ಲ.. ಎಲ್ಲ ದೇವರು ಕೊಟ್ಟಿದ್ದು.. ಅದನ್ನು ತೆಗೆದುಕೊಳ್ಳುವ ಹಕ್ಕು ಎಲ್ಲರಿಗೂ ಇದೆ.. ಎಂದು ನಂಬುದೂ ಸರಿ ತಾನೆ. ಆಸ್ತಿಕರಂತೆ ಎಲ್ಲ ದೇವರಿಗೆ ಸೇರಿದ್ದು.
ಉ: ಒಂದು ವಾಚ್ಯ ಹಂಬಲ
ಮಗನಲ್ಲಿ ಮೊಮ್ಮಗನಲ್ಲಿ ಹೊಸ ಹೊಸ ನಂಬಿಕೆ ಹುಟ್ಟಿದಾಗ, ತಂದೆಯ ಮೇಲಿನ ಕುರುಡು ನಂಬಿಕೆ ಹೇಗಾಯ್ತು?
ಉ: ಒಂದು ವಾಚ್ಯ ಹಂಬಲ
ಅದನ್ನೇ
ತಂದೆಯದೂ ಕುರುಡು ನಂಬಿಕೆಯಲ್ಲ, ಮಗನದೂ ಅಲ್ಲ ಮೊಮ್ಮಗನದೂ ಅಲ್ಲ..
ಕುರುಡಾದರೆ ಅಶ್ಟು ಮಂದಿಯ ನಂಬಿಕೆಗಳೂ ಕುರುಡೇ!
ಉ: ಒಂದು ವಾಚ್ಯ ಹಂಬಲ
ನಿಮ್ಮ ಉದಾಹರಣೇಲಿ ಅವರವರ ನಂಬಿಕೆ ಕುರುಡೇ ಇರಬಹುದು, ಇಲ್ಲದಿರಬಹುದು...ಆದ್ರೆ ಇಲ್ಲಿ ಯಾರು ಇನ್ನೊಬ್ಬರ ನಂಬಿಕೆ ಪಾಲಿಸ್ತಿಲ್ಲ...
ಹಾಗಾಗಿ ತಪ್ಪನ್ನ ಇನ್ನೊಬ್ಬರ ಮೇಲೆ ಹಾಕ ಬಾರದು...
ಹಾಗೆ, ತಾಲಿಬಾನ್ ತಪ್ಪು ಮಾಡಿದರೆ, ಇಸ್ಲಾಂ ತಪ್ಪಲ್ಲ
ಉ: ಒಂದು ವಾಚ್ಯ ಹಂಬಲ
ತಾಲಿಬಾನ್ ಮಾಡಿದ್ದು ತಪ್ಪಲ್ಲ. ಅವರು ಅವರ ಧರ್ಮ ಪಾಲಿಸಿದರು...
ಬೇರೆಯವರು ಬೇರೆ ದರ್ಮದವರಾದುದು ಅವರ ಕರ್ಮ ತಾನೆ..
ಉ: ಒಂದು ವಾಚ್ಯ ಹಂಬಲ
ಸರಿ ಇದೆ ...ತಾಲಿಬಾನ್ ಮಾಡಿದ್ದು ಅವರ ಕರ್ಮ, ಅದಕ್ಕೂ ಧರ್ಮಕ್ಕೂ/ಇಸ್ಲಾಂ ಗೂ ನಂಟಿಲ್ಲ...
ಉ: ಒಂದು ವಾಚ್ಯ ಹಂಬಲ
ಹಾಗೇ..
ಎಲ್ಲರೂ ಏನು ಮಾಡಿ ನಮ್ಮ ದರ್ಮವನ್ನು ಪಾಲಿಸುತ್ತಿದ್ದೀವಿ ಅಂದಾಗ ಏನು ಮಾಡಲು ಬರದು............
ಏಸು ಕ್ರಿಸ್ತನೇ ನನ್ನ ಸಂದೇಶವನ್ನು ಸಾರಿರಿ ಎಂದು ಹೇಳಿದ್ದಾನೆ. ಆದುದರಿಂದಲೇ ಮಂದಿ ಆತ ಸಂದೇಶ ಸಾರುತ್ತಿದ್ದಾರೆ ಹಾಗು ಹೆಚ್ಚೆಚ್ಚು ಮಂದಿ ಸಾರುವ ಹಾಗೆ ಮಾಡುತ್ತಿದ್ದಾರೆ. ಅದು ಅವರ ಧರ್ಮಪಾಲನೆಯೇ.
ಇದನ್ನೇ ಅನಿವಾಸಿಗಳೂ ಹೇಳಿರೋದು..
ಎಲ್ಲರೂ ಅವರವರ ಧರ್ಮ ಪಾಲಿಸಿಕೊಂಡಿದ್ದಾರೆ. ಯಾರು ತಪ್ಪು ಮಾಡುತ್ತಿಲ್ಲ.
ಉ: ಒಂದು ವಾಚ್ಯ ಹಂಬಲ
ನಿಮ್ಮ ವರಸೆ ಪ್ರಕಾರ ಭೂಮಿ ಮೇಲೆ ಇರೋ ೬೫೦ ಕೋಟಿ+ ಜನರದ್ದು ಅವರದೇ ಧರ್ಮ, ಇನ್ನು ಕ್ರಿಸ್ತನ ಹೆಸರೇಕೆ?
ಉ: ಒಂದು ವಾಚ್ಯ ಹಂಬಲ
ಒಬ್ಬೊಬ್ಬನಿಗೊಂದೊಂದು ದರ್ಮವಿದೆ....
ಕ್ರಿಸ್ತನ ಹೆಸರೇಕೇ ರಾಮ ಹೆಸರೇಕೆ ಅಂತ ಆ ಹೆಸರಿನವರನ್ನ ಕೇಳಿ...?
ನನ್ನದು ಮಾಯ್ಸನ ದರ್ಮ ಅಶ್ಟೇ..
ಉ: ಒಂದು ವಾಚ್ಯ ಹಂಬಲ
ಒಂದು ಸಾಲಿಗೆ ಒಂದು ಸದ್ದುಗೆ ಬರುವ ವರೆಗೆ ಟಿಪ್ಪಣಿಸುತ್ತಾ ಇರಿ
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಒಂದು ವಾಚ್ಯ ಹಂಬಲ
ಶ್ರೀನಿಧಿ-
>>ನಿಮ್ಮ ಬರಹಗಳಲ್ಲಿ ಧರ್ಮಗಳು ಮಾತ್ರವೇ ಕ್ರೂರ ಅನ್ನುವ ಭಾವನೆಗಳು ಕಾಣುತ್ತಿವೆ.
ಹೌದೆ? ಸರಿ! ವ್ಯವಸ್ಥೆಯ, ರಾಜಕೀಯದ, ಆಂತರಿಕ ಕ್ರೌರ್ಯಗಳೂ ನನ್ನನ್ನು ಆಗಾಗ ಆವರಿಸುತ್ತವೆ. ಆಗ ಅದನ್ನು ಬರಕೊಂಡಿದ್ದೀನಿ. ನಿಮಗೆ ಹಾಗನಿಸದೆ ಇರಬಹುದು! ಆದರೆ ನನ್ನ ಬರಹಗಳಲ್ಲಿ ಇಂತಹವಕ್ಕೆ ಮಾತ್ರ ನೀವು ಕೊಡುವ ಪ್ರತಿಕ್ರಿಯೆಗಳನ್ನು ನೋಡಿದರೆ - ನೀವು ಒಂದು ಧರ್ಮದ, ಒಂದು ಜಾತಿಯ ರಕ್ಷಣೆಗೆ ನಿಂತವರಂತೆ ನನಗೆ ಕಾಣುತ್ತದೆ!
ಇನ್ನು ನಿಮ್ಮ ಸುತ್ತಮುತ್ತ ಕಾಣುವ ನಾಸ್ತಿಕತೆಯ ಕ್ರೂರತೆಯ ಬಗ್ಗೆ, ನೀವು ಕಂಡಂತೆ ನಾಸ್ತಿಕತೆಯ ಹೆಸರಲ್ಲಿ ಮಾನವತೆ ಕೊಂದವರ ಬಗ್ಗೆ ಸ್ವಲ್ಪ ವಿವರಿಸಿ ಬರೆಯಿರಿ. ನನ್ನಂತವರಿಗೆ ಓದಲು ಇಷ್ಟ.
ನೀವೊಂದು ಸಂಗತಿ ಗಮನಿಸಿರುತ್ತೀರಿ ಅಂದುಕೊಂಡಿದ್ದೇನೆ. ಧರ್ಮದ ಹೆಸರಲ್ಲಿ, ಧರ್ಮದ ಚೌಕಟ್ಟಿನಲ್ಲಿ ನಡೆಯುವುದನ್ನು ಹಲವಾರು ದಿವ್ಯ ವಿಚಾರಗಳ ಆಧಾರದ ಮೇಲೆ ಸಮಜಾಯಿಷಿ ಹೇಳಿಕೊಳ್ಳುವುದು ನಮ್ಮ ಪರಂಪರೆಯಾಗಿಬಿಟ್ಟಿದೆ!
ಉ: ಒಂದು ವಾಚ್ಯ ಹಂಬಲ
"ದಿವ್ಯ ವಿಚಾರಗಳ ಆಧಾರದ ಮೇಲೆ ಸಮಜಾಯಿಷಿ ಹೇಳಿಕೊಳ್ಳುವುದು"
ದಿವ್ಯ ಅನ್ನೋಂತದ್ದೇನಿದೇ?
ಉ: ಒಂದು ವಾಚ್ಯ ಹಂಬಲ
ಹೌದು... ದಿವ್ಯ ವಿಚಾರ ಅನ್ನುವುದನ್ನು ಕೋಟ್ಸಿನಲ್ಲಿ ಹಾಕಬೇಕಿತ್ತು
ಉ: ಒಂದು ವಾಚ್ಯ ಹಂಬಲ
"ಧರ್ಮಯುದ್ಧಕ್ಕೆ ಜಯವಿಲ್ಲ."
ನಿಜ, ಎಲ್ಲವನ್ನೂ ಗೆದ್ದ ಪಾಣ್ಡವರು ಕೊನೆಗೆ ಏನನ್ನೂ ಗೆಲ್ಲಲಿಲ್ಲ. ಭಗವದ್ಗೀತೆಯ ಬೋಧಿಸುತ್ತ ಸ್ಥಾಯಿಯಾಯಿತೇ ಮಹಾಭಾರತ?
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಒಂದು ವಾಚ್ಯ ಹಂಬಲ
ಮಹಾಭಾರತ ಸ್ಥಾಯಿಯಾಗಿಲ್ಲ ಅನಿಸುತ್ತದೆ... ನಮ್ಮಲ್ಲಿ ಹಲವು ಮಹಾಭಾರತಗಳು ಜನರಲ್ಲಿ ಪ್ರಚಲಿತವಿರುವುದೇ ಅದಕ್ಕೆ ಸಾಕ್ಷಿ. ಆದರೆ ಭಗವದ್ಗೀತೆಯನ್ನೇ ಕೇಂದ್ರ ಎಂದು ನೆಚ್ಚಿಕೊಂಡರೆ ಮಾತ್ರ ನೀವು ಹೇಳುವುದು ಸರಿ!